ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಡಿಜೆ ಸೌಂಡ್ ಸಿಸ್ಟಮ್ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ ಬಳ್ಳಾರಿ,ಸೆ.16 : ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,786 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ರಕ್ಷಣೆ ಹಾಗೂ ಹಬ್ಬದ ಸುಗಮ ಆಚರಣೆಗೆ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ. *ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ:* ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ: 4 ಜನ ಡಿಎಸ್‌ಪಿ, 17 ಜನ ಸಿಪಿಐ/ಪಿಐ, 40 ಜನ ಪಿಎಸ್‌ಐ, 78 ಜನ ಎಎಸ್‌ಐ, ಮತ್ತು 470 ಜನ ಹೆಡ್ ಕಾನ್‌ಸ್ಟೇಬಲ್/ಕಾನ್‌ಸ್ಟೇಬಲ್. ಹೆಚ್ಚುವರಿ ಪಡೆ: 500 ಗೃಹರಕ್ಷಕ ಸಿಬ್ಬಂದಿ, 3 ಕೆಎಸ್‌ಆರ್‌ಪಿ ಹಾಗೂ 10 ಡಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. *ಡ್ರೋನ್ ಕಣ್ಣಾವಲು ಮತ್ತು ಸೋಷಿಯಲ್ ಮೀಡಿಯಾ ಮೇಲೆ ನಿಗಾ:* ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಣಾವಲು ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಅಥವಾ ಸಮಾಜದ ಶಾಂತಿ ಕದಡುವ ಸಂದೇಶ, ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. *ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪನೆ/ಮೆರವಣಿಗೆ ನಿಷೇಧ:* ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ 15-ಗೋನಾಳ್, 10-ಮುದ್ದಾಪುರ ಹಾಗೂ ಕುಡಿತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. *ಡಿಜೆ ಸೌಂಡ್ ಸಿಸ್ಟಮ್ ಬ್ಯಾನ್:* ಸೆಪ್ಟೆಂಬರ್ 14 ರಿಂದ ಗೌರಿ-ಗಣೇಶ ಹಬ್ಬ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಡಿಜೆ, ಹೈ-ಬಾಸ್ ಸೌಂಡ್ ಸಿಸ್ಟಮ್, ಡಿಜೆ ಬಾಕ್ಸ್ ಸೇರಿದಂತೆ ಕರ್ಕಶ ಶಬ್ದ ಉಂಟುಮಾಡುವ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. *ಮದ್ಯ ಮಾರಾಟ ಹಾಗೂ ಸಾಗಣೆ ನಿಷೇಧ:* 3ನೇ ಮತ್ತು 5ನೇ ದಿನದಂದು ಜಿಲ್ಲೆಯಾದ್ಯಂತ, 7ನೇ ದಿನದಂದು ಬಳ್ಳಾರಿ ನಗರದಾದ್ಯಂತ, 11ನೇ ದಿನದಂದು ಸಿರುಗುಪ್ಪ ನಗರ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ, 13ನೇ ದಿನದಂದು ಕಂಪ್ಲಿ, ತೆಕ್ಕಲಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಣೆ ಹಾಗೂ ಮದ್ಯದ ಅಂಗಡಿ/ರೆಸ್ಟೋರೆAಟ್‌ಗಳನ್ನು ತೆರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------- ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಡಿಜೆ ಸೌಂಡ್ ಸಿಸ್ಟಮ್ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ ಬಳ್ಳಾರಿ,ಸೆ.16 : ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,786 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ರಕ್ಷಣೆ ಹಾಗೂ ಹಬ್ಬದ ಸುಗಮ ಆಚರಣೆಗೆ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ. *ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ:* ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ: 4 ಜನ ಡಿಎಸ್‌ಪಿ, 17 ಜನ ಸಿಪಿಐ/ಪಿಐ, 40 ಜನ ಪಿಎಸ್‌ಐ, 78 ಜನ ಎಎಸ್‌ಐ, ಮತ್ತು 470 ಜನ ಹೆಡ್ ಕಾನ್‌ಸ್ಟೇಬಲ್/ಕಾನ್‌ಸ್ಟೇಬಲ್. ಹೆಚ್ಚುವರಿ ಪಡೆ: 500 ಗೃಹರಕ್ಷಕ ಸಿಬ್ಬಂದಿ, 3 ಕೆಎಸ್‌ಆರ್‌ಪಿ ಹಾಗೂ 10 ಡಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. *ಡ್ರೋನ್ ಕಣ್ಣಾವಲು ಮತ್ತು ಸೋಷಿಯಲ್ ಮೀಡಿಯಾ ಮೇಲೆ ನಿಗಾ:* ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಣಾವಲು ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಅಥವಾ ಸಮಾಜದ ಶಾಂತಿ ಕದಡುವ ಸಂದೇಶ, ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. *ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪನೆ/ಮೆರವಣಿಗೆ ನಿಷೇಧ:* ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ 15-ಗೋನಾಳ್, 10-ಮುದ್ದಾಪುರ ಹಾಗೂ ಕುಡಿತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. *ಡಿಜೆ ಸೌಂಡ್ ಸಿಸ್ಟಮ್ ಬ್ಯಾನ್:* ಸೆಪ್ಟೆಂಬರ್ 14 ರಿಂದ ಗೌರಿ-ಗಣೇಶ ಹಬ್ಬ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಡಿಜೆ, ಹೈ-ಬಾಸ್ ಸೌಂಡ್ ಸಿಸ್ಟಮ್, ಡಿಜೆ ಬಾಕ್ಸ್ ಸೇರಿದಂತೆ ಕರ್ಕಶ ಶಬ್ದ ಉಂಟುಮಾಡುವ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. *ಮದ್ಯ ಮಾರಾಟ ಹಾಗೂ ಸಾಗಣೆ ನಿಷೇಧ:* 3ನೇ ಮತ್ತು 5ನೇ ದಿನದಂದು ಜಿಲ್ಲೆಯಾದ್ಯಂತ, 7ನೇ ದಿನದಂದು ಬಳ್ಳಾರಿ ನಗರದಾದ್ಯಂತ, 11ನೇ ದಿನದಂದು ಸಿರುಗುಪ್ಪ ನಗರ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ, 13ನೇ ದಿನದಂದು ಕಂಪ್ಲಿ, ತೆಕ್ಕಲಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಣೆ ಹಾಗೂ ಮದ್ಯದ ಅಂಗಡಿ/ರೆಸ್ಟೋರೆAಟ್‌ಗಳನ್ನು ತೆರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

- ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.1
- ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಾಣ ಮಾಡಿದ್ದು ತೆರವುಗೊಳಿಸಲು ಆಗ್ರಹ ಅವೈಜ್ಞಾನಿಕವಾಗಿ ಟೋಲ್ ತುರ್ತಾಗಿ ತೆರವುಗೊಳಿಸಿ ಮುಂದಾಗುವ ಅವಘಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯ. ಅವೈಜ್ಞಾನಿಕವಾಗಿ ಟೋಲ್‌ನಿಂದ ಸಾಕಷ್ಟು ಬಡ ಚಾಲಕರು ಜೀವ ಬಲಿಯಾಗಿದ್ದು ಇನ್ನಷ್ಟು ಜೀವ ಬಲಿಯಾಗಬೇಕು ? ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ. ಯಾದಗಿರಿ : ಬಡ ವಾಹನ ಚಾಲಕರ ನಿರಂತರ ಜೀವ ತೆಗೆಯುತ್ತಿರುವ ಯಾದಗಿರಿ ರಾಯಚೂರು ಹೆದ್ದಾರಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್‌ನ್ನು ತುರ್ತಾಗಿ ತೆರವುಗೊಳ್ಳಿಸಿ ಇಂದೇ ಆದ ಅನಾವುತಗಳನ್ನು ಇನ್ನು ಮುಂದೇ ಅನಾವುತಗಳನ್ನು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ಮತ್ತು ನಾಗಲಾಪುರ ಮಧ್ಯದಲ್ಲಿ ಬರುವ ಯಾದಗಿರಿ ರಾಯಚೂರು ಹೋಗುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಬೇಟಿ ನೀಡಿ ಪರಿಶೀಲಿಸಿದ ನಂತರ ರೈತರ ಮತ್ತು ವಾಹನ ಸವಾರರ ಜೊತೆ ಚರ್ಚಿಸಿ ನಂತರ ದೀಡಿರ್‌ನ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಈ ಟೋಲ್‌ನಲ್ಲಿ ವಿದ್ಯುತ್ ಲೈಟ್, ಸ್ಟೀಕರ್ ಸರಿಯಾಗಿ ಅಳವಡಸದೆ ಅವೈಜ್ಞಾನಿಕವಾಗಿ ನಿರ್ಮಿಸಿ ಈ ಟೋಲ್‌ನಲ್ಲಿ ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷವಹಿಸಿರುವುದು ಇದು ನಾಚೀಗೇಡಿನ ಸಂಗತಿ ಎಂದು ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರೂ ವಾಹನಗಳು ಸಂಚಾರ ಮಾಡುತ್ತಿದ್ದು ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲನ ಕಾರಣ ಬಡವ ಜೀವಗಳು ಬಲಿಯಾಗುತ್ತಿದ್ದು ಸಂಬAಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಇನ್ನೆಷ್ಟು ಬಡಜೀವಿಗಳನ್ನು ಬಲಿಪಶು ಮಾಡುತ್ತಿದ್ದಿರಿ ಎಂದು ಕಾರವಾಗಿ ಪ್ರಶ್ನಿಸಿದರು. ತಕ್ಷಣ ಟೋಲ್‌ನ್ನು ತೆರವುಗೊಳ್ಳಿಸಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಟೋಲ್ ಸ್ಥಳದಲ್ಲೇ ಮುಖ್ಯ ರಸ್ತೆ ತಡೆದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಬದಲ್ಲಿ ಮಲ್ಲೇಶಿ, ಪವನ. ತಿಪ್‌ಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ ಮೋನಪ್ಪ ಮಲ್ಲಪ್ಪ ಚಂದ್ರು ಸಿದ್ದು ತಿಮ್ಮಪ್ಪ ಮಲ್ಲಪ್ಪ ಆನಂದ ಭೀಮಪ್ಪ ಮಲ್ಲಪ್ಪ ಸಾಬು ಮಲ್ಲಪ್ಪ ಸೇರಿದಂತೆ ಅನೇಕು ಇದ್ದರು2
- ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು. ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಅವ್ಯವಸ್ಥೆಯ ಆಗರವಾದ ಸಂತೆ ಆವರಣ ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು. ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು. ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು. ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಒಂದು ವಾರದ ಗಡುವು ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು. ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.4
- ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.1
- ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು1
- ಮಧ್ಯರಾತ್ರಿ ಬಂದು ರೈತರ ಮನವಿ ಪಡೆದ ಕಲಬುರಗಿ ಜಿಲ್ಲಾಧಿಕಾರಿ, ಎಸ್ಪಿ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟಕ್ಕೆ ಮಣಿದು ಕಡೆಗೂ ಕಲಬುರಗಿ ಜಿಲ್ಲಾಧಿಕಾರಿಗಳು ಸೇಡಂಗೆ ಮಧ್ಯರಾತ್ರಿ ಭೇಟಿ ನೀಡಿ ಮನವಿ ಪಡೆದಿದ್ದಾರೆ. ಸೇಡಂ ತಾಲೂಕನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ಚಿಂಚೋಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.1
- ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮೃತಪಟ್ಟಿದ್ದ ಸಿರವಾರ ಪಟ್ಟಣದ ಯುವಕ ಪ್ರೇಮ್ ಸುಂದರ್ ಅವರ ಸ್ಮರಣಾರ್ಥದ ಪ್ರಯುಕ್ತ ಸಿರವಾರ ಪಟ್ಟಣದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು. ಪ್ರೇಮ್ ಸುಂದರ ಅವರ ಸರಳತೆ, ನಡೆ, ನುಡಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು. ಪ್ರೇಮ್ ಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಪಟ್ಟಣದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.1
- ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews ಶಾರ್ಟ್ ಸರ್ಕ್ಯೂಟ್‌ಗೆ 7.5 ಎಕರೆ ಕಬ್ಬು ಬೆಂಕಿಗಾಹುತಿ; ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಅವಘಡ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದ ರೈತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೆಸ್ಕಾಂ ಇಲಾಖೆ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. #Kalaburagi #ಕಲಬುರಗಿ #ಕಾಳಗಿ #Bennur #ಕಬ್ಬುಬೆಳೆ #ರೈತರು #ಶಾರ್ಟ್ಸರ್ಕ್ಯೂಟ್ #ಜೆಸ್ಕಾಂ #ಬೆಂಕಿಅವಘಡ #ರೈತನಷ್ಟ #ಪರಿಹಾರ #YadgirNews1