ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ, ಖಾನಾಪುರ ತಾಲೂಕು ಕಮಿಟಿ ಸಭೆ ಮಾಡಲಾಯಿತು ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ, ಖಾನಾಪುರ ತಾಲೂಕು ಇಂದು (25-07-2026) ಖಾನಾಪುರದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ ಸಂಘಟನೆಯ ತಾಲೂಕು ಮಟ್ಟದ ಸಭೆಯು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೊಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ದಲಿತ ಸಮಾಜದ ನೂರಾರು ಬಂಧು-ಬಾಂಧವರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೊಳೆ ಅವರು, ದಲಿತ ಸಮಾಜವು ಎದುರಿಸುತ್ತಿರುವ ವಿವಿಧ ಕುಂದು-ಕೊರತೆಗಳು, ಸಾಮಾಜಿಕ ಅನ್ಯಾಯಗಳು, ಶೋಷಣೆ, ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯವಾಗಲು ಸಂಘಟನೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ಸಮಾಜದ ಪ್ರತಿಯೊಂದು ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಕಾನೂನಾತ್ಮಕ ಹಾಗೂ ಪ್ರಜಾಪ್ರಭುತ್ವದ ಹೋರಾಟದ ಮೂಲಕ ನ್ಯಾಯ ದೊರಕಿಸುವ ಜವಾಬ್ದಾರಿಯನ್ನು ಸಂಘಟನೆ ಸದಾ ನಿರ್ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅದೇ ಸಂದರ್ಭದಲ್ಲಿ ಖಾನಾಪುರ ತಾಲೂಕಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದು, ಯುವಕರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಹಾಗೂ ಸಮಾಜದ ಏಕತೆ ಮತ್ತು ಹಕ್ಕುಗಳ ರಕ್ಷಣೆಗೆ ನಿರಂತರ ಹೋರಾಟ ನಡೆಸುವ ಕುರಿತು ಪ್ರಮುಖ ಮಾರ್ಗದರ್ಶನ ನೀಡಲಾಯಿತು. ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಸಂಕಲ್ಪ ಮಾಡಿದರು. ಈ ಕಾರ್ಯಕ್ರಮವು ದಲಿತ ಸಮಾಜದ ಏಕತೆ, ಸಂಘಟನೆಯ ಬಲ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಇರುವ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿದ ಐತಿಹಾಸಿಕ ಸಭೆಯಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಜೈ ಭೀಮ್!
ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ, ಖಾನಾಪುರ ತಾಲೂಕು ಕಮಿಟಿ ಸಭೆ ಮಾಡಲಾಯಿತು ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ, ಖಾನಾಪುರ ತಾಲೂಕು ಇಂದು (25-07-2026) ಖಾನಾಪುರದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ – ಭೀಮ ಧ್ವನಿ ಸಂಘಟನೆಯ ತಾಲೂಕು ಮಟ್ಟದ ಸಭೆಯು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ
ಮಿಲಿಂದ್ ಐಹೊಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ದಲಿತ ಸಮಾಜದ ನೂರಾರು ಬಂಧು-ಬಾಂಧವರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೊಳೆ ಅವರು, ದಲಿತ ಸಮಾಜವು ಎದುರಿಸುತ್ತಿರುವ ವಿವಿಧ ಕುಂದು-ಕೊರತೆಗಳು, ಸಾಮಾಜಿಕ ಅನ್ಯಾಯಗಳು, ಶೋಷಣೆ, ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ
ಕುರಿತು ಸವಿಸ್ತಾರವಾಗಿ ಚರ್ಚಿಸಿ, ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯವಾಗಲು ಸಂಘಟನೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ಸಮಾಜದ ಪ್ರತಿಯೊಂದು ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಕಾನೂನಾತ್ಮಕ ಹಾಗೂ ಪ್ರಜಾಪ್ರಭುತ್ವದ ಹೋರಾಟದ ಮೂಲಕ ನ್ಯಾಯ ದೊರಕಿಸುವ ಜವಾಬ್ದಾರಿಯನ್ನು ಸಂಘಟನೆ ಸದಾ ನಿರ್ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅದೇ ಸಂದರ್ಭದಲ್ಲಿ ಖಾನಾಪುರ ತಾಲೂಕಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದು, ಯುವಕರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ಮಹಿಳೆಯರ
ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಹಾಗೂ ಸಮಾಜದ ಏಕತೆ ಮತ್ತು ಹಕ್ಕುಗಳ ರಕ್ಷಣೆಗೆ ನಿರಂತರ ಹೋರಾಟ ನಡೆಸುವ ಕುರಿತು ಪ್ರಮುಖ ಮಾರ್ಗದರ್ಶನ ನೀಡಲಾಯಿತು. ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಸಂಕಲ್ಪ ಮಾಡಿದರು. ಈ ಕಾರ್ಯಕ್ರಮವು ದಲಿತ ಸಮಾಜದ ಏಕತೆ, ಸಂಘಟನೆಯ ಬಲ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಇರುವ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿದ ಐತಿಹಾಸಿಕ ಸಭೆಯಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಜೈ ಭೀಮ್!
- ತ್ಯಾಜ್ಯದಿಂದ ಅತ್ಯುತ್ತಮ ಸ್ಪರ್ಧೆ: ಮಕ್ಕಳ ಕೈಯಲ್ಲಿ ಹಸಿರು ಕ್ರಾಂತಿ ಅಥಣಿ : ಇಂದು ಮಕ್ಕಳು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮೂಲಕ ಪರಿಸರದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಒಂದೊಂದು ಕುಂಡವು ಮಗುವಿನ ಶ್ರಮ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಪರಿಸರ ಪ್ರಜ್ಞೆ ಬೆಳೆಯುತ್ತದೆ" ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಅರಣ್ಯ ಅಧಿಕಾರಿ ಮಲ್ಲಪ್ಪ ತೇಲಿ ಅವರು ಅಭಿಪ್ರಾಯಪಟ್ಟರು. ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ರಂದು "ತ್ಯಾಜ್ಯದಿಂದ ಅತ್ಯುತ್ತಮ - Best Out of Waste"_ಎಂಬ ವಿಶೇಷ ಸೃಜನಶೀಲ ಕುಂಡ ತಯಾರಿಕೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ "ತ್ಯಾಜ್ಯವನ್ನು ಕಡಿಮೆ ಮಾಡೋಣ - ಭೂಮಿಯನ್ನು ಹಸಿರಾಗಿಸೋಣ" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ 1 ರಿಂದ 5 ನೇ ತರಗತಿಯವರೆಗಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷ ಎಂದರು.1
- ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲುವೆಯ ವಿವಿಧ ಭಾಗಗಳಲ್ಲಿ ಹಾನಿಗೊಳಗಾದ ಸ್ಥಳಗಳ ಕಾರಣ ನೀರು ಸಮರ್ಪಕವಾಗಿ ಹರಿಯದೇ, ಕಾಲುವೆ ಅಂಚಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಈ ವೇಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ, ನೀರಿನ ಹರಿವು ಸುಗಮವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಜನರು ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಿದರು1
- ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿನೋದ್ ಕಲಮಡಿ ಪದಗ್ರಹಣ ಲೈನ್ಸ್ ಕ್ಲಬ್ ಆಫ್ ಅಥಣಿ ವತಿಯಿಂದ ಜರುಗಿದ 2ನೇ ಪದಗ್ರಹಣ ಸಮಾರಂಭ ಅಥಣಿ : "ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ನಿಸ್ವಾರ್ಥ ಸೇವೆಗೆ ಹೆಸರಾಗಿದ್ದು, 'ಸೇವೆಯೇ ಪರಮೋಚ್ಚ ಧೇಯ' (We Serve) ಎನ್ನುವ ತತ್ವದಡಿ ಪ್ರತಿಯೊಬ್ಬ ಲಯನ್ಸ್ ಸದಸ್ಯರೂ ಬಡವರು, ನಿರ್ಗತಿಕರು ಮತ್ತು ಅಶಕ್ತರ ಬದುಕಿನಲ್ಲಿ ಬೆಳಕು ಚೆಲ್ಲಲು ಮುಂದಾಗಬೇಕು ಎಂದು ಜಿಲ್ಲಾ ಪ್ರಾಂತಪಾಲ ಲಯನ್ ರಾಜಶೇಖರ ಹಿರೇಮಠ ಅವರು ಕರೆ ನೀಡಿದರು. ಅಥಣಿಯ ಎಸ್.ಎಸ್.ಎಂ.ಎಸ್. ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಲೈನ್ಸ್ ಕ್ಲಬ್ ಆಫ್ ಅಥಣಿ'ಯ 2026-27ನೇ ಸಾಲಿನ 2ನೇ ಪದಗ್ರಹಣ ಸಮಾರಂಭವು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರೇಮಠ ಅವರು ಅಥಣಿ ಘಟಕವು ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಪದಗ್ರಹಣ ಅಧಿಕಾರಿಲಯನ್ ಡಾ. ಆರ್.ಎನ್. ಸೋನಾವಾಲ್ಕರ್ ಅವರು ಮಾತನಾಡಿ, " ಸಮುದಾಯದ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ದೃಷ್ಟಿ ದೋಷ ನಿವಾರಣೆಯಂತಹ ಮಹತ್ವದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವಲ್ಲಿ ಲಯನ್ಸ್ ಕ್ಲಬ್‌ನ ಪಾತ್ರ ಹಿರಿದಾದದ್ದು. ನೂತನ ಪದಾಧಿಕಾರಿಗಳು ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿ" ಎಂದು ಶುಭ ಹಾರೈಸಿದರು. ಜೊತೆಗೆ ನೂತನ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿ ತಿಳಿಸಿಕೊಟ್ಟು ಸಮಾಜಮುಖಿ ಸೇವೆ ಮಾಡುವಂತೆ ಕರೆ ನೀಡಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಲಯನ್ ವಿನೋದ್ ಕಲಮಡಿ ಅವರು, "ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ.ಈ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದ್ದು ನಮ್ಮ ಹಿರಿಯರ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅತ್ಯಂತ ನಿಷ್ಠೆಯಿಂದ ಸಮಾಜಕ್ಕೆ ಮಾದರಿ ಆಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು" ಎಂದು ಹೇಳಿದರು. 2026-27 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಲಯನ್ ವಿನೋದ್ ಕಲಮಡಿ ಅಧ್ಯಕ್ಷರಾಗಿ,ಬಾವುಸಾಹೇಬ ನಾಯಿಕ ಉಪಾಧ್ಯಕ್ಷರಾಗಿ , ಲಯನ್ ಕಿರಣ್ ಶಿರಗುಪ್ಪಿ ಕಾರ್ಯದರ್ಶಿಯಾಗಿ ಲಯನ್ ಅಭಿನಂದನ್ ಪಡ್ನಾಡ ಕೋಶಾಧಿಕಾರಿಯಾಗಿ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧಿಕಾರಿ ಬಾಲಕೃಷ್ಣ ಬಂಡೆ,ವಲಯ ಅಧಿಕಾರಿ ಅಶೋಕ ಮುರಗೋಡ, ನಿಕಟಪೂರ್ವ ಅಧ್ಯಕ್ಷ ಲಯನ್ ರಮೇಶ ಬುಲ್ಬುಲೆ ಹಾಗೂ ಡಾ.ಮಹೇಶ ಕಾಪ್ಸೆ,ಡಾ.ಗುರುಪುತ್ರ ಪಾಟೀಲ,ಮಹಾಂತೇಶ ಕವಲಾಪುರ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್‌ನ ಸದಸ್ಯರು, ಸ್ಥಳೀಯ ಗಣ್ಯರು, ಆಹ್ವಾನಿತರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಕುಟುಂಬ ಸಮೇತ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.1
- ನಾಳೆ ರಾಜ್ಯಾದ್ಯಂತ ಪೊಲೀಸ್ ನೇಮಕಾತಿ ಪರೀಕ್ಷೆ ಜಮಖಂಡಿಯಲ್ಲಿ ಪೊಲೀಸ್ ಪರೀಕ್ಷೆಗೆ ಸಕಲ ಸಿದ್ಧತೆ ಪರೀಕ್ಷಾ ಕೇಂದ್ರಗಳಿಗೆ ಎಸ್‌ಪಿ ಸಿದ್ದಾರ್ಥ ಗೋಯಲ್ ಭೇಟಿ1
- ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು1
- ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಅನುಚಿತವರ್ತನೆ ವಿದ್ಯಾರ್ಥಿಗಳ ಪ್ರತಿಭಟನೆ1
- #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo1
- ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ, ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ,1