logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ* *ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ* *ಯುಕೆಪಿ ಹಂತ 3ರ ಭೂಪರಿಹಾರಕ್ಕಾಗಿ 3 ಸಾವಿರ ಕೋಟಿ ರೂ. ಮೀಸಲು* *ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧ* *ಕಾಂಗ್ರೆಸ್ ಸರ್ಕಾರ ಎಂದಿಗೂ ನುಡಿದಂತೆ ನಡೆಯುವ ಜನರ ಸರ್ಕಾರ- ಮುಖ್ಯಮಂತ್ರಿ ಸಿದ್ದರಾಮಯ್ಯ* ಬಾಗಲಕೋಟೆ, ಮಾರ್ಚ್ 14: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆ ಅಂತ ಮೂರರ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಶಾಸಕರಾಗಿದ್ದ ಹೆಚ್.ವೈ.ಮೇಟಿಯವರು ದಿವಂಗತರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರುವುದಾಗಿ ಸಿಎಂ ತಿಳಿಸಿದರು. ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿನ ಶಂಕುಸ್ಥಾಪನೆಯಾಗಲು ಹೆಚ್.ವೈ.ಮೇಟಿಯವರೇ ಕಾರಣ. ಮೆಡಿಕಲ್ ಕಾಲೇಜ್ ಸ್ಥಾಪಿಸಲು 2025ರ ಬಜೆಟ್ ನ ಘೋಷಣೆಯಾಗಿದ್ದು, ಇಂದು ಶಂಕುಸ್ಥಾಪನೆಗೊಳ್ಳುತ್ತಿದೆಯೇ ಹೊರತು, ಉಪಚುನಾವಣೆಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಹಲವು ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳನ್ನು ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್ ಗಳನ್ನು ಸ್ಥಾಪನೆಯ ಉದ್ದೇಶವಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. *ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ* ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಸರ್ಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದ್ದೇವೆ. ಪ್ರತಿ ವರ್ಷ ಗ್ಯಾರಂಟಿಗಳಿಗೆ ಸುಮಾರು 50 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದುವರೆಗೆ 1.22 ಲಕ್ಷ ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿಲ್ಲ. ಜಾತಿ ಧರ್ಮಗಳ ಮಧ್ಯೆ ವೈಮನಸ್ಯ ತರುವುದು ಅವರ ದುರಾಲೋಚನೆಯಾಗಿದೆ ಎಂದರು. *ಯುಕೆಪಿ ಹಂತ 3 ಭೂಪರಿಹಾರ ಒಂದೇ ಬಾರಿಗೆ ಪಾವತಿ* ಬಿಜೆಪಿಯವರು ತಮ್ಮ ಅವಧಿಯಲ್ಲಿ ಯುಕೆಪಿ ಯೋಜನೆಗೆ ಪರಿಹಾರ ನೀಡಲು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಈಗ ರೈತರಿಗೆ ಭೂ ಪರಿಹಾರವನ್ನು ಒಂದೇ ಬಾರಿಗೆ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಯುಕೆಪಿ ಯೋಜನೆಯ 3 ಹಂತದಲ್ಲಿ ಭೂಪರಿಹಾರಕ್ಕೆ ಹಣ ಮೀಸಲಿಡಲಾಗಿದ್ದು, ನಂತರವೂ ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆಗೊಳಿಸಲಾಗುವುದು. ಸ್ವಯಂಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿಜಮೀನಿಗೆ 40 ಲಕ್ಷ ರೂ, ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ. ನೀಡಲು ಸರ್ಕಾರ ನಿರ್ಣಯಿಸಿದೆ. ಆದರೆ ಈ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. *ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ದೊರಕಿಲ್ಲ* ಯುಕೆಪಿ ಯೋಜನೆಯ ವ್ಯಾಪ್ತಿಗೆ ಬರುವ 8 ಗ್ರಾಮಗಳಲ್ಲಿ 900 ಎಕರೆಗೆ 446 ಕೋಟಿ ರೂ.ಗಳ ಪರಿಹಾರವನ್ನು ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದಿಗೂ ನುಡಿದಂತೆ ನಡೆಯುತ್ತದೆ. ಕೇಂದ್ರಕ್ಕೆ ಹಲವು ಮನವಿಗಳ ನಂತರವೂ, ಯುಕೆಪಿ, ಮಹಾದಾಯಿ ಸೇರಿದಂತೆ ಹಲವು ನೀರಾವರಿ ಯೋಜನೆಗೆ ಬೇಕಾದ ಅಗತ್ಯ ಅನುಮತಿಗಳನ್ನು ಕೇಂದ್ರ ಸರ್ಕಾರ ಇದುವರೆಗೆ ನೀಡಿಲ್ಲ. ಆದರೆ ನಮ್ಮ ಸರ್ಕಾರ ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದರು.

21 hrs ago
user_Bindu vinod
Bindu vinod
ಆನೇಕಲ್, ಬೆಂಗಳೂರು ನಗರ, ಕರ್ನಾಟಕ•

More news from ಕರ್ನಾಟಕ and nearby areas
  • ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    1
    ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    1
    ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಪತ್ರ.
    1
    BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ  ಮನವಿ ಪತ್ರ.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru East, Bengaluru Urban•
    4 hrs ago
  • To The BBMP Officer Bruhat Bengaluru Mahanagara Palike Bengaluru Subject: Thank You for Taking Action on My Complaint Respected Sir/Madam, I would like to thank the BBMP Corporation for taking action on my complaint that I submitted yesterday regarding the issue in New Guddahalli. I appreciate the efforts of the BBMP team for responding and working towards solving the problem. Your quick attention helps keep our area clean and better for the public. Thank you for your support and service to the community. Sincerely, Sayeed Resident of New Guddahalli Bengaluru
    1
    To
The BBMP Officer
Bruhat Bengaluru Mahanagara Palike
Bengaluru
Subject: Thank You for Taking Action on My Complaint
Respected Sir/Madam,
I would like to thank the BBMP Corporation for taking action on my complaint that I submitted yesterday regarding the issue in New Guddahalli.
I appreciate the efforts of the BBMP team for responding and working towards solving the problem. Your quick attention helps keep our area clean and better for the public.
Thank you for your support and service to the community.
Sincerely,
Sayeed
Resident of New Guddahalli
Bengaluru
    user_Spider H.c.k
    Spider H.c.k
    ವಿಜಯನಗರ, ವಿಜಯನಗರ, ಕರ್ನಾಟಕ•
    7 hrs ago
  • ರೋಡ್ ಗೆ ಅಡ್ಡ ಇದೆ ಕೂಡಿ ಡಾರ್ಲಿಂಗ್ c
    1
    ರೋಡ್ ಗೆ ಅಡ್ಡ ಇದೆ ಕೂಡಿ ಡಾರ್ಲಿಂಗ್ c
    user_Srinivas ಶ್ರೀನಿವಾಸ್ ದಾಸಪ್ಪ
    Srinivas ಶ್ರೀನಿವಾಸ್ ದಾಸಪ್ಪ
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಪ್ರಧಾನಿ ಮೋದಿ ರ್‍ಯಾಲಿ ವೇಳೆ ಉದ್ವಿಗ್ನತೆ: ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ! #JB_News_Kannada
    1
    ಪ್ರಧಾನಿ ಮೋದಿ ರ್‍ಯಾಲಿ ವೇಳೆ ಉದ್ವಿಗ್ನತೆ: ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Malur, Kolar•
    9 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    11 hrs ago
  • ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    1
    ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ
ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ
ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ
ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ...
ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ...
ನಾಳೆಯಿಂದ ಎಲ್ಲವೂ ಚಾಲು ಆಗಲಿವೆ....
ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು.....
ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್  ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು...
ವೆರಿಪಿಕೇಷನ್ ಮಾಡಿದ್ದೇವೆ...
ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.