ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಎಡಿಸಿ ಜವರೇಗೌಡರ ಮುಖಾಂತರ ಸಿಎಂ, ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಈ ಸಾರಿ ೧೫ ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಹಳ ವರ್ಷಗಳಿಂದ ಈ ಹಿಂದಿನ ಸರ್ಕಾರಗಳು ಮಾಡಲಾಗದಂತಹ ಶಿಕ್ಷಕರ ನೇಮಕಾತಿಯನ್ನು ತಾವು ಮಾಡಲು ಹೊರಟಿರುವ ನಿಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳು. ಅದರಂತೆಯೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಶಿಕ್ಷಕರ ನೇಮಕಾತಿಗಳ ಅರ್ಜಿಯನ್ನು ತಾವು ಈಗಾಗಲೇ ಕರೆದಿದ್ದು ಇದಕ್ಕೆ ಪೂರಕವಾಗಿ ಪರೀಕ್ಷೆಗಳನ್ನು ತಾವು ನಡೆಸಲು ಉದ್ದೇಶಿಸಿರುತ್ತೀರಿ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಿ.ಇಡಿ. ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ನವೆಂಬರ್‌ನಲ್ಲಿ ಈ ನಾಲ್ಕನೇ ಸೆಮಿಸ್ಟರ್‌ನ ಬಿ.ಇಡಿ. ಪರೀಕ್ಷೆಯೂ ಸಹ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಈ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅವರು ಸಹ ಅರ್ಜಿಗಳನ್ನು ಹಾಕಲು ತಾವು ಅವಕಾಶ ಮಾಡಿಕೊಡಬೇಕು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಹೊಮ್ಮ ಲೋಕೇಶ್, ಜಗದೀಶ್, ಮಂಗಲದ ಹೊಸೂರು ಶಿವಣ್ಣ, ರಾಚಪ್ಪ, ಆಟೋ ಲಿಂಗರಾಜು, ಮುತ್ತು ಇತರರು ಹಾಜರಿದ್ದರು. ------- ಚಿತ್ರ:ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಎಡಿಸಿ ಜವರೇಗೌಡರ ಮುಖಾಂತರ ಸಿಎಂ, ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು
ಈ ಸಾರಿ ೧೫ ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಹಳ ವರ್ಷಗಳಿಂದ ಈ ಹಿಂದಿನ ಸರ್ಕಾರಗಳು ಮಾಡಲಾಗದಂತಹ ಶಿಕ್ಷಕರ ನೇಮಕಾತಿಯನ್ನು ತಾವು ಮಾಡಲು ಹೊರಟಿರುವ ನಿಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳು. ಅದರಂತೆಯೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಶಿಕ್ಷಕರ ನೇಮಕಾತಿಗಳ ಅರ್ಜಿಯನ್ನು ತಾವು ಈಗಾಗಲೇ ಕರೆದಿದ್ದು ಇದಕ್ಕೆ ಪೂರಕವಾಗಿ ಪರೀಕ್ಷೆಗಳನ್ನು ತಾವು ನಡೆಸಲು ಉದ್ದೇಶಿಸಿರುತ್ತೀರಿ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಿ.ಇಡಿ. ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ನವೆಂಬರ್‌ನಲ್ಲಿ ಈ ನಾಲ್ಕನೇ ಸೆಮಿಸ್ಟರ್‌ನ ಬಿ.ಇಡಿ. ಪರೀಕ್ಷೆಯೂ ಸಹ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಈ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅವರು ಸಹ ಅರ್ಜಿಗಳನ್ನು ಹಾಕಲು ತಾವು ಅವಕಾಶ ಮಾಡಿಕೊಡಬೇಕು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಹೊಮ್ಮ ಲೋಕೇಶ್, ಜಗದೀಶ್, ಮಂಗಲದ ಹೊಸೂರು ಶಿವಣ್ಣ, ರಾಚಪ್ಪ, ಆಟೋ ಲಿಂಗರಾಜು, ಮುತ್ತು ಇತರರು ಹಾಜರಿದ್ದರು. ------- ಚಿತ್ರ:ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
- ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ : ಸಚಿವ ಸಿ. ಪುಟ್ಟರಂಗಶೆಟ್ಟಿ ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ : ಸಚಿವ ಸಿ. ಪುಟ್ಟರಂಗಶೆಟ್ಟಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಬಹು ಮುಖ್ಯವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ತಾಲೂಕು ಮಟ್ಟದ ಶಾಲಾ ಶಿಕ್ಷಣ (ಪದವಿ ಪೂರ್ವ) ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಎಷ್ಟೇ ಚಟುವಟಿಕೆಗಳಿದ್ದರು ಕ್ರೀಡಾ ಚಟುವಟಿಕೆ ಅತ್ಯಂತ ಅವಶ್ಯವಾಗಿದೆ. ಆರೋಗ್ಯ ಜೀವನಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ದೈಹಿಕವಾಗಿ ಸಧೃಡರಾಗಲು ಕ್ರೀಡೆ ಆಟೋಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು. ಕ್ರೀಡಾ ಆಸಕ್ತರಿಗೆ ಉತ್ತೇಜನ ನೀಡುವ ಸಲುವಾಗಿ ಇನ್ನಷ್ಟು ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಹಾಗೂ ಈಜುಕೊಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ್ ಅವರ ಅವಧಿಯಲ್ಲಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಯಿತು. ಕ್ರೀಡಾ ಚಟುವಟಿಕೆಗಳಿಗೆ ಈ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು. ಪ್ರಸ್ತುತ ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು. ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವಕಾಶ ಮಾಡಿಕೊಡಲು ಪ್ರೋತ್ಸಾಹ ನೀಡಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸೋಲಿಗೆ ಧೃತಿಗೆಡಬಾರದು ಗೆಲುವು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠಾಧ್ಯಕ್ಷರು ಹಾಗೂ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಿಂದ ಸಾಧ್ಯವಾಗಲಿದೆ. ಧ್ಯಾನ, ಯೋಗದಂತಹ ಆಧ್ಯಾತ್ಮಿಕ ಶಿಕ್ಷಣವು ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹೆಚ್.ಎನ್. ಪುಟ್ಟಗೌರಮ್ಮ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ. ಪ್ರಿಯಾ ಶಂಕರ್, ಖಜಾಂಚಿ ಹೆಚ್.ಎನ್ ಸ್ವಾಮಿ, ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ. ಮಧು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ವಿಶ್ರಾಂತ ಪ್ರಾಂಶುಪಾಲರಾದ ಸೋಮಣ್ಣ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.4
- ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ. ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಪ್ರದೀಪ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.4
- ಅಧಿಕಾರಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಚಪನ್ ಶಾಲಾ ಮಕ್ಕಳು ಮೈಸೂರು: ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬಚಪನ್ ಶಾಲೆಯ ಮಕ್ಕಳು ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಶಾಲೆಯ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು. ಮಕ್ಕಳು ಸರ್ಕಾರಿ ನೌಕರರು, ವೈದ್ಯರು, ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ರಾಖಿ ಕಟ್ಟಿದರು. ಈ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ಸಹೋದರತ್ವ ಹಾಗೂ ಪ್ರೀತಿಯ ಬಾಂಧವ್ಯವನ್ನು ಬೆಳೆಸುವ ಸಂದೇಶ ನೀಡಿದರು. ಪೊಲೀಸ್ ಇಲಾಖೆ ಕಚೇರಿಗೆ ತೆರಳಿದ ಮಕ್ಕಳು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರೊಂದಿಗೆ ಮಕ್ಕಳು ಆತ್ಮೀಯವಾಗಿ ಬೆರೆತು ಸಂಭ್ರಮಿಸಿದರು. ಇದೇ ವೇಳೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೂ ರಾಖಿ ಕಟ್ಟಿ, ಜನರ ಆರೋಗ್ಯ ಕಾಪಾಡುವ ಅವರ ಸೇವೆಯನ್ನು ಸ್ಮರಿಸಿದರು. ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿದ ಮಕ್ಕಳು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿಯೂ ಅಧಿಕಾರಿಗಳು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ರಾಖಿ ಕಟ್ಟಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳ ಈ ವಿಶೇಷ ಆಚರಣೆ ಅಧಿಕಾರಿಗಳಲ್ಲಿಯೂ ಸಂತಸ ಮೂಡಿಸಿತು. ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ನಡುವಿನ ಹಬ್ಬವಲ್ಲ, ಪರಸ್ಪರ ಪ್ರೀತಿ, ಗೌರವ, ಕಾಳಜಿ ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುವ ಹಬ್ಬ ಎಂಬ ಸಂದೇಶವನ್ನು ಮಕ್ಕಳು ಸಾರಿದರು. ಬಚಪನ್ ಶಾಲೆಯ ಶಿಕ್ಷಕರು ಮಕ್ಕಳಿಗೆ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗೌರವಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳ ಈ ವಿಭಿನ್ನ ಆಚರಣೆ ಸಾರ್ವಜನಿಕರ ಗಮನ ಸೆಳೆಯಿತು.1
- ತೆರಕಣಾಂಬಿ:ದಾಸ ಬಣಜಿಗ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ. ಗುಂಡ್ಲುಪೇಟೆ : ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಮಸ್ಯೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಂಪರ್ಕಾಧಿಕಾರಿ ಬಿ. ವಿಜಯಕಾಂತ್ ಸಲಹೆ ನೀಡಿದರು. ತೆರಕಣಾಂಬಿ ಗ್ರಾಮದಲ್ಲಿ ಶ್ರೀ ದಾಸಬಣಜಿಗ ಟ್ರಸ್ಟ್ ಹಾಗೂ ಯುವಕ ಸಂಘದ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಹಾಗೂ ಯುವಕರಲ್ಲಿಯೂ ಕಣ್ಣಿನ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಕ್ಕರೆ ಕಾಯಿಲೆಯಿಂದ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಶಿಬಿರದಲ್ಲಿ 200 ಮಂದಿಯನ್ನು ತಜ್ಞ ವೈದ್ಯರಾದ ಡಾ. ಕೃತಿನ್ ಷಾ ಹಾಗೂ ಡಾ. ಹರಿಕುಮಾರ್ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದರು. ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಹತ್ತಿರ-ದೂರದೃಷ್ಟಿ ದೋಷ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 45 ಮಂದಿಯನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು. ಶ್ರೀ ದಾಸಬಣಜಿಗ ಟ್ರಸ್ಟ್ ಅಧ್ಯಕ್ಷ ಟಿ. ನಾಗೇಂದ್ರ, ಉಪಾಧ್ಯಕ್ಷ ಎ. ಗಣೇಶ್, ಕಾರ್ಯದರ್ಶಿ ಟಿ.ಎಸ್. ವಿನೋದ್ ಕುಮಾರ್, ಯುವಕರ ಸಂಘದ ಅಧ್ಯಕ್ಷ ಜೆ. ಶಿವಕುಮಾರ್, ಉಪಾಧ್ಯಕ್ಷ ಟಿ. ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಟ್ರಸ್ಟ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಈರೋಡ್ ಲಯನ್ಸ್ ಕ್ಲಬ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.4
- ಹನೂರು: ತಾಲೂಕಿನ ಪೊನ್ನಾಚ್ಚಿ ಸಮೀಪದ ಮರೂರು ಗ್ರಾಮದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ವರದಿಯಾಗಿದೆ. ಮರೂರು ಗ್ರಾಮದ ಅಕ್ಕಯ್ಯ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಗ್ರಾಮದ ನಾಗೇಶ್ ಅವರ ಮನೆಯಿಂದ ಬೆಳ್ಳಿಯ ಕೈ ಕಡಗ, ಕಾಲು ಚೈನ್ ಹಾಗೂ ಚಿನ್ನದ ಕಿವಿ ಮತ್ತು ಮೂಗಿನ ಆಭರಣಗಳು, ಜುಮಿಕಿ, ಓಲೆ ಸೇರಿದಂತೆ ಆಭರಣಗಳು ಕಳವಾಗಿವೆ ಎಂದು ತಿಳಿದುಬಂದಿದೆ. ಇನ್ನು ಶಿವಣ್ಣ ಅವರ ಮನೆಯಿಂದ ಸುಮಾರು 2.5 ಲಕ್ಷ ನಗದು ಕಳವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಬ್ಬಾಳಮ್ಮ ಅವರ ಮನೆಯಿಂದ 2,000 ನಗದು ಹಾಗೂ ಸುಮಾರು 3.50 ಲಕ್ಷ ಮೌಲ್ಯದ ಮಾಂಗಲ್ಯ ಸರ, ತಾಳಿ ಮತ್ತು ತಾಳಿ ಗುಂಡು ಕಳವಾಗಿರುವುದಾಗಿ ತಿಳಿದುಬಂದಿದೆ. ಶಿವಮಾದಮ್ಮ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಹದೇಶ್ವರಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನಕ್ಕೊಳಗಾದ ಮನೆಗಳನ್ನು ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಹನೂರು: ತಾಲೂಕಿನ ಪೊನ್ನಾಚ್ಚಿ ಸಮೀಪದ ಮರೂರು ಗ್ರಾಮದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ವರದಿಯಾಗಿದೆ. ಮರೂರು ಗ್ರಾಮದ ಅಕ್ಕಯ್ಯ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಗ್ರಾಮದ ನಾಗೇಶ್ ಅವರ ಮನೆಯಿಂದ ಬೆಳ್ಳಿಯ ಕೈ ಕಡಗ, ಕಾಲು ಚೈನ್ ಹಾಗೂ ಚಿನ್ನದ ಕಿವಿ ಮತ್ತು ಮೂಗಿನ ಆಭರಣಗಳು, ಜುಮಿಕಿ, ಓಲೆ ಸೇರಿದಂತೆ ಆಭರಣಗಳು ಕಳವಾಗಿವೆ ಎಂದು ತಿಳಿದುಬಂದಿದೆ. ಇನ್ನು ಶಿವಣ್ಣ ಅವರ ಮನೆಯಿಂದ ಸುಮಾರು 2.5 ಲಕ್ಷ ನಗದು ಕಳವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಬ್ಬಾಳಮ್ಮ ಅವರ ಮನೆಯಿಂದ 2,000 ನಗದು ಹಾಗೂ ಸುಮಾರು 3.50 ಲಕ್ಷ ಮೌಲ್ಯದ ಮಾಂಗಲ್ಯ ಸರ, ತಾಳಿ ಮತ್ತು ತಾಳಿ ಗುಂಡು ಕಳವಾಗಿರುವುದಾಗಿ ತಿಳಿದುಬಂದಿದೆ. ಶಿವಮಾದಮ್ಮ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಹದೇಶ್ವರಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನಕ್ಕೊಳಗಾದ ಮನೆಗಳನ್ನು ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.2
- ಹನೂರಿನಲ್ಲಿ ತಾಲೂಕು ಆಡಳಿತದಿಂದ ನುಲಿಯ ಚಂದಯ್ಯ ಜಯಂತಿ ಆಚರಣೆ: ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ಹನೂರು: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ನಂತರ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಶರಣರ ತತ್ವಾದರ್ಶಗಳು ಮತ್ತು ಕಾಯಕ ನಿಷ್ಠೆ ಸಮಾಜಕ್ಕೆ ಸದಾ ಪ್ರೇರಣಾದಾಯಕ ಎಂದು ನುಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ, ಸಮುದಾಯದ ರಾಜ್ಯಾಧ್ಯಕ್ಷ ಪಂಚಾಕ್ಷರಿ, ತಾಲೂಕು ಅಧ್ಯಕ್ಷ ಮಾದೇಶ್ ಹಾಗೂ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು. ಅಲ್ಲದೆ, ಅನುಷ್ಠಾನ ಸಮಿತಿ ಸದಸ್ಯೆ ರಾಣಿ, ಉಪಾಧ್ಯಕ್ಷರಾದ ರಾಜು, ಶಾಂತರಾಜು, ರಾಮಚಂದ್ರ, ಶಿವಕುಮಾರ್, ರಾಮು ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.4
- ಒಂಟಿಸಲಗನ ಪುಂಡಾಟ: ಹಸು ಬಲಿ , ರೈತನಿಗೆ ತೀವ್ರಗಾಯ ಆಸ್ಪತ್ರೆಗೆ ದಾಖಲು ಮಳವಳ್ಳಿ: ಒಂಟಿ ಸಲಗದ ಪುಂಡಾಟಕ್ಕೆ ಒಂದು ಹಸು ಬಲಿಯಾಗಿ ರೈತನಿಗೆ ಕಾಲು ಮುರಿತಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಬಳಿ ನಡೆದಿದೆ. ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ರಾಜಶೇಖರರವರಿಗೆ ಸೇರಿದ ಹಸುವೇ ಸಾವನ್ನಪ್ಪಿದ್ದು , ಇದಲ್ಲದೇ ಎಲೆತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಳ್ಳಾಡಿ ಜೋಗಯ್ಯ ಎಂಬುವರ ಮೇಲೆ ದಾಳಿ ಮಾಡಿ ಕಾಲು ಮುರಿತಗೊಂಡಿದೆ. ಗಾಯಗೊಂಡ ವ್ಯಕ್ತಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿಗಳು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಆಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಹಲಗೂರು ಪೊಲೀಸರು ಕಾಡಾನೆಯನ್ನು ಬೀಮನಕಿಂಡಿ ಅರಣ್ಯ ಪ್ರದೇಶಕ್ಕೆ ಓಡಿಸಲು ಹರಸಾಹಸ ಪಟ್ಟರು ಎನ್ನಲಾಗಿದೆ.1
- ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೂ ಅವಕಾಶ ಕೊಡುವಂತೆ ಸಿಎಂ ಮನವಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಎಡಿಸಿ ಜವರೇಗೌಡರ ಮುಖಾಂತರ ಸಿಎಂ, ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಈ ಸಾರಿ ೧೫ ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಹಳ ವರ್ಷಗಳಿಂದ ಈ ಹಿಂದಿನ ಸರ್ಕಾರಗಳು ಮಾಡಲಾಗದಂತಹ ಶಿಕ್ಷಕರ ನೇಮಕಾತಿಯನ್ನು ತಾವು ಮಾಡಲು ಹೊರಟಿರುವ ನಿಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳು. ಅದರಂತೆಯೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಶಿಕ್ಷಕರ ನೇಮಕಾತಿಗಳ ಅರ್ಜಿಯನ್ನು ತಾವು ಈಗಾಗಲೇ ಕರೆದಿದ್ದು ಇದಕ್ಕೆ ಪೂರಕವಾಗಿ ಪರೀಕ್ಷೆಗಳನ್ನು ತಾವು ನಡೆಸಲು ಉದ್ದೇಶಿಸಿರುತ್ತೀರಿ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಿ.ಇಡಿ. ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ನವೆಂಬರ್‌ನಲ್ಲಿ ಈ ನಾಲ್ಕನೇ ಸೆಮಿಸ್ಟರ್‌ನ ಬಿ.ಇಡಿ. ಪರೀಕ್ಷೆಯೂ ಸಹ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಈ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅವರು ಸಹ ಅರ್ಜಿಗಳನ್ನು ಹಾಕಲು ತಾವು ಅವಕಾಶ ಮಾಡಿಕೊಡಬೇಕು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಹೊಮ್ಮ ಲೋಕೇಶ್, ಜಗದೀಶ್, ಮಂಗಲದ ಹೊಸೂರು ಶಿವಣ್ಣ, ರಾಚಪ್ಪ, ಆಟೋ ಲಿಂಗರಾಜು, ಮುತ್ತು ಇತರರು ಹಾಜರಿದ್ದರು. ------- ಚಿತ್ರ:ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.3