ಆ.29ಕ್ಕೆ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ. ಹಿರಿಯ ಪತ್ರಕರ್ತರಿಗೆ ಅಭಿನಂದನೆ. ವಾರ್ಷಿಕ ಪ್ರಶಸ್ತಿ ಪ್ರದಾನ ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ನೂತನ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ಮತ್ತು ಪತ್ರಿಕಾ ದಿನಾಚರಣೆಯನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಗಿದ್ದು ಈ ವರ್ಷದ ಹಿರಿಯ ಪತ್ರಕರ್ತ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನಗರದ ಊಟಿ ರಸ್ತೆಯ (ಜೆಎಸ್ಎಸ್ ಕಾಲೇಜು ಹತ್ತಿರ) ಕೆಎನ್ಎಸ್ ಬಡಾವಣೆಯ ಪತ್ರಕರ್ತ ಸಂಘದ ನಿವೇಶನದಲ್ಲಿ ಜರುಗುವ ಪತ್ರಿಕಾ ದಿನಾಚರಣೆಯಲ್ಲಿ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು ಸಮಾರಂಭವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಶ್ರೀ ಕೆ.ದೀಪಕ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಶಿವಾನಂದ ತಗಡೂರು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡುವರು. ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ, ಶ್ರೀ ತನ್ವೀರ್ ಸೇಠ್, ಶ್ರೀ ಟಿ.ಎಸ್. ಶ್ರೀವತ್ಸ, ಶ್ರೀ ಕೆ.ಹರೀಶ್ ಗೌಡ, ಶ್ರೀ ಅನಿಲ್ ಚಿಕ್ಕಮಾದು, ಶ್ರೀ ಡಿ. ರವಿಶಂಕರ್, ಶ್ರೀ ದರ್ಶನ್ ಧ್ರುವನಾರಾಯಣ್, ಶ್ರೀ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಿಮ್ಮಯ್ಯ ಶ್ರೀ ಸಿ.ಎನ್. ಮಂಜೇಗೌಡ, ಶ್ರೀ ರಘು (ಕೌಟಿಲ್ಯ) ಶ್ರೀ ವಿವೇಕಾನಂದ, ಶ್ರೀ ಮಧು ಮಾದೇಗೌಡ ಹಾಗೂ ಡಾ. ಕೆ.ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಶ್ರೀ ಲಕ್ಷ್ಮೀಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತರಾದ ಶ್ರೀಮತಿ ಸವಿತಾ ಕೆ.ಎಲ್, ಜಿಎಸ್ಎಸ್ ಸಮ್ಮೂಹ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶ್ರೀಹರಿ ದ್ವಾರಕನಾಥ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ಶ್ರೀ ಸಿ.ಕೆ. ಮಹೇಂದ್ರ, ಶ್ರೀ ಎಸ್.ಟಿ. ರವಿಕುಮಾರ್ ಮೊದಲಾದವರು ಭಾಗವಹಿಸುವರು.
ಆ.29ಕ್ಕೆ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ. ಹಿರಿಯ ಪತ್ರಕರ್ತರಿಗೆ ಅಭಿನಂದನೆ. ವಾರ್ಷಿಕ ಪ್ರಶಸ್ತಿ ಪ್ರದಾನ ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ನೂತನ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ಮತ್ತು ಪತ್ರಿಕಾ ದಿನಾಚರಣೆಯನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಗಿದ್ದು ಈ ವರ್ಷದ ಹಿರಿಯ ಪತ್ರಕರ್ತ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನಗರದ ಊಟಿ ರಸ್ತೆಯ (ಜೆಎಸ್ಎಸ್ ಕಾಲೇಜು ಹತ್ತಿರ) ಕೆಎನ್ಎಸ್ ಬಡಾವಣೆಯ ಪತ್ರಕರ್ತ ಸಂಘದ ನಿವೇಶನದಲ್ಲಿ ಜರುಗುವ ಪತ್ರಿಕಾ ದಿನಾಚರಣೆಯಲ್ಲಿ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು ಸಮಾರಂಭವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಶ್ರೀ ಕೆ.ದೀಪಕ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಶಿವಾನಂದ ತಗಡೂರು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡುವರು. ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ, ಶ್ರೀ ತನ್ವೀರ್ ಸೇಠ್, ಶ್ರೀ ಟಿ.ಎಸ್. ಶ್ರೀವತ್ಸ, ಶ್ರೀ ಕೆ.ಹರೀಶ್ ಗೌಡ, ಶ್ರೀ ಅನಿಲ್ ಚಿಕ್ಕಮಾದು, ಶ್ರೀ ಡಿ. ರವಿಶಂಕರ್, ಶ್ರೀ ದರ್ಶನ್ ಧ್ರುವನಾರಾಯಣ್, ಶ್ರೀ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಿಮ್ಮಯ್ಯ ಶ್ರೀ ಸಿ.ಎನ್. ಮಂಜೇಗೌಡ, ಶ್ರೀ ರಘು (ಕೌಟಿಲ್ಯ) ಶ್ರೀ ವಿವೇಕಾನಂದ, ಶ್ರೀ ಮಧು ಮಾದೇಗೌಡ ಹಾಗೂ ಡಾ. ಕೆ.ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಶ್ರೀ ಲಕ್ಷ್ಮೀಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತರಾದ ಶ್ರೀಮತಿ ಸವಿತಾ ಕೆ.ಎಲ್, ಜಿಎಸ್ಎಸ್ ಸಮ್ಮೂಹ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶ್ರೀಹರಿ ದ್ವಾರಕನಾಥ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ಶ್ರೀ ಸಿ.ಕೆ. ಮಹೇಂದ್ರ, ಶ್ರೀ ಎಸ್.ಟಿ. ರವಿಕುಮಾರ್ ಮೊದಲಾದವರು ಭಾಗವಹಿಸುವರು.
- *ನಕಲಿ ಗ್ರಾಮ ಲೆಕ್ಕಿಗರ ಪೋಷಣೆ, ಕಂದಾಯ ಇಲಾಖೆ ವಿರುದ್ಧ ತಮಟೆ ಚಳುವಳಿ ಮಂಡ್ಯ.ಏಳು ಜನ ನಕಲಿ ಗ್ರಾಮ ಲೆಕ್ಕಿಗರು ಡ್ಯೂಪ್ಲಿಕೇಟ್ ಮಾರ್ಕ್ಸ್ ಕಾರ್ಡ್ ಮತ್ತು ಅಂಗವಿಕಲತೆ ಸರ್ಟಿಫಿಕೇಟ್ ನೀಡಿ 2011 ರಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಪಡೆದು ಕಂದಾಯ ಇಲಾಖೆಯಲ್ಲಿ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ತನಿಖೆ ನಡೆದಿದ್ದರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ವಿಳಂಬ ಮಾಡಿರುವುದು ಮತ್ತು ನಕಲಿ ಗ್ರಾಮ ಲೆಕ್ಕಿಗರನ್ನು ಹುದ್ದೆಯಿಂದ ವಜಾಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎನ್ ನರಸಿಂಹಮೂರ್ತಿ ನೇತೃತ್ವದಲ್ಲಿ ಇಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ತಮಟೆ ಚಳುವಳಿಯನ್ನು ನಡೆಸಲಾಯಿತು ಪಟ್ಟಣದ ವೈಭವ ಹೋಟೆಲ್ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ತಮಟೆ ಚಳುವಳಿಯ ಮೂಲಕ ಕಂದಾಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು ಸಂಘಟನೆಯ ಸಂಚಾಲಕ ಮಾತನಾಡಿ ಲೋಕೇಶ್ ಮೌರ್ಯ ಮಾತನಾಡಿ ನಿಜವಾದ ಅಂಗ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ನಕಲಿ ಸರ್ಟಿಫಿಕೇಟ್ ಪಡೆದಿರುವ ಗ್ರಾಮ ಲೆಕ್ಕಿಗರು ವಂಚಿಸಿದ್ದಾರೆ ಈ ಸಂಬಂಧ ಇಲಾಖೆಯಿಂದ ಪೂರ್ಣ ಪ್ರಮಾಣದ ತನಿಖೆ ನಡೆದರೂ ಕೂಡ ಇವರ ವಿರುದ್ಧ ಕ್ರಮವಹಿಸಿಲ್ಲ ಈ ತಕ್ಷಣದಿಂದಲೇ ಇವರನ್ನು ವಜಾ ಗೊಳಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎಂ ನರಸಿಂಹಮೂರ್ತಿ ಮಾತನಾಡಿ ನಕಲಿ ಅಂಗವಿಕಲತೆ ಸರ್ಟಿಫಿಕೇಟ್ ಪಡೆದಿರುವ ಅಪಾದಿತ ಗ್ರಾಮ ಲೆಕ್ಕಿಗರನ್ನು ತಕ್ಷಣದಿಂದಲೇ ವಜಾ ಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಎಸ್ಐಟಿ ತನಿಖೆಗೆ ಒಳಪಡಿಸಬೇಕು ಹಾಗೂ ನಕಲಿ ಗ್ರಾಮಲೆಕ್ಕಿಗರ ಕುಟುಂಬಸ್ಥರ ಆಸ್ತಿಯ ವಿವರವನ್ನು ಸಂಗ್ರಹಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ಇವರು ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನಿರಂತರವಾಗಿ ಹೋರಾಟ ನಡೆಸಲಾಗುವುದೆಂದು ತಿಳಿಸಿದರು ಪ್ರತಿಭಟನೆಯಲ್ಲಿ ಕರ್ನಾಟಕ ಸಂವಿಧಾನ ಸೇನೆಯ ವಕೀಲರಾದ ಪ್ರಭಾಕರ್ ಮತ್ತು ಪದಾಧಿಕಾರಿಗಳಾದ ಕುಮಾರ್ ಪ್ರದೀಪ್ ಸೋಮಶೇಖರ್ ಚೆನ್ನಕೇಶವ ನರಸಿಂಹರಾಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು1
- ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್ ಯಾವಾಗ ಬರುತ್ತೆ ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ, ಆರ್.ಎಂ.ಸಿದ್ದರಾಜು, ಕಿಟ್ಟಿ, ಹೆಗ್ಗೋಠಾರ ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.3
- ಕೊಡಗಿನಲ್ಲಿ ಧಾರಾಕಾರ ಮಳೆ, ತುಂಬಿ ಹರಿಯುತ್ತಿರುವ ಕಾವೇರಿ ನದಿ ಕೊಡಗು ಜಿಲ್ಲೆಯಲ್ಲಿ ಮಾಘ ಮಳೆಯ ರಭಸ ಜೋರಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದಲ್ಲಿ ಕಾವೇರಿ ನದಿ ತುಂಬಿದ್ದು ಪವಿತ್ರ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ.1
- ಮರ್ಯಾದೆ ಪುರುಷ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಿ ಭಕ್ತಿ ಹೆಚ್ಚಲಿ, ಭಕ್ತರು ಭಗವಂತನಿಗೆ ಪ್ರೀತಿ ಪಾತ್ರರಾಗಿ ಭಕ್ತಿ ಹೆಚ್ಚಿಸಿ ಭಗವಂತನೇ ಒಬ್ಬನೇ ಶಾಶ್ವತ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವ ಧೂತ ಸ್ವಾಮಿಜಿ ಮರ್ಯಾದೆ ಪುರುಷ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಿ ಭಕ್ತಿ ಹೆಚ್ಚಲಿ, ಭಕ್ತರು ಭಗವಂತನಿಗೆ ಪ್ರೀತಿ ಪಾತ್ರರಾಗಿ ಭಕ್ತಿ ಹೆಚ್ಚಿಸಿ ಭಗವಂತನೇ ಒಬ್ಬನೇ ಶಾಶ್ವತ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವ ಧೂತ ಸ್ವಾಮಿಜಿ ಹೇಳಿದರು ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಶ್ರೀರಾಮ ನೂತನ ದೇವಸ್ಥಾನದ ವಿಗ್ರಹ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ದೇವಸ್ಥಾನಗಳ ಪರಂಪರೆಯನ್ನು ಕೆಲವು ಸಾವಿರ ವರ್ಷಗಳ ಹಿಂದೆ ನಾವು ಮಾಡಿದ್ದು ನಮ್ಮ ನೋವು ನಲಿವು ದುಃಖಗಳನ್ನು ದೇವರಿಗೆ ಸಮರ್ಪಿಸುವ ಮೂಲಕ ನೆಮ್ಮದಿ ಕಾಣಲು ಭಕ್ತ ಮತ್ತು ಭಗವಂತನ ನಡುವಿನ ಒಪ್ಪಂದವೇ ದೇವಸ್ಥಾನಗಳ ನಿರ್ಮಿಸಿ ನಮಗೂ ಜಗತ್ತಿಗೆ ಒಳ್ಳೆಯದನ್ನು ಬಯಸುತ್ತೇವೆ, ಪ್ರಕೃತಿಯೇ ದೇವರು ಪಂಚಮ ಭೂತಗಳನ್ನು ದೇವರೆಂದು ಪೂಜಿಸಿ ನಂಬಿದವರು, ನಿರಾಕಾರ ಆಕಾರವಿಲ್ಲ ಇಡೀ ಬ್ರಹ್ಮಾಂಡವೇ ಅವನ ಅಸ್ತಿತ್ವವಾಗಿದೆ ಎಂದು ನಂಬಿದವರು ಎಂದರು. ಶ್ರೀ ರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ ಬೊಪ್ಪಣ್ಣ ಮಾತನಾಡಿ 1972ರಲ್ಲಿ ಶ್ರೀ ರಾಮನ ಪುಟ್ಟ ಗುಡಿ ನಿರ್ಮಿಸಿ ಪೂಜೆ, ಪುನಸ್ಕಾರ ನೆರವೇರಿಸುತ್ತಿದ್ದೆವು ಕಳೆದ ಮೂರು ವರ್ಷಗಳಿಂದ ನೂತನ ದೇವಾಲಯ ನಿರ್ಮಾಣದ ಕಾರ್ಯ ಆರಂಭಿಸಿ ಇಂದು ಶ್ರೀರಾಮ ಭಕ್ತರ ದರ್ಶನಕ್ಕೆ ಅನುವು ಮಾಡಲಾಗಿದೆ, ಬರಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಹಾಲಗುಂಡೆಗೌಡ ಮಾತನಾಡಿ ಶಿರಾ ತಾಲೂಕಿನಲ್ಲಿ ಸಾಕಷ್ಟು ಬರದ ಛಾಯೆ ಆವರಿಸುತ್ತಿದ್ದು ಬೋರ್ ಗಳಲ್ಲಿ ನೀರು ಸೇರಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವಂತೆ ಶ್ರೀಗಳು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮದಲೂರು ಕೆರೆಗೆ ನೀರು ಹರಿಸುವಂತೆ ಹೇಳಿದರು. ಬರಗೂರುಗೆ ಆಗಮಿಸಿದ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀರಾಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಗೌರವ ಅಧ್ಯಕ್ಷ ಬಿ.ಕೆ.ಲಕ್ಷ್ಮಣಗೌಡ, ಉಪಾಧ್ಯಕ್ಷ ಬಿ.ಸಿ. ರಮೇಶ್, ಕಾರ್ಯದರ್ಶಿ ಬಿ.ವಿ.ರೇಣುಕಾ ಪ್ರಸಾದ್, ಸಹ ಕಾರ್ಯದರ್ಶಿ, ಮುದ್ದುಕೃಷ್ಣೇಗೌಡ, ಖಜಾಂಚಿ ಹನುಮಂತರಾಯಪ್ಪ, ಸಂಘಟನಾ ಕಾರ್ಯದರ್ಶಿ ಜಯರಾಮಯ್ಯ, ಮುಖಂಡ ಬೀರಲಿಂಗೇಗೌಡ, ಸತೀಶ್, ಓಂಕಾರಪ್ಪ, ಮಂಜುನಾಥ್ ಆರ್, ಶ್ರೀರಾಮ ದೇವಸ್ಥಾನ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ------------- ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 27 ಪಂಚಾಯಿತಿಗಳಲ್ಲೂ ಸಂಘ ರಚನೆ: ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.1
- Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates1
- All About,Irregularities related with #JamiaNizamia a #WaqfCommittee #WaqfBoard #Telangana *ಭಾರತ ನಲ್ಲಿ ವೈರಲ್*1
- ಆರ್ ಎಸ್'ನಿಂದ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಮಂಡ್ಯದಲ್ಲಿ ವಿರೋಧ,ಸಭೆಯಲ್ಲಿ ಗದ್ದಲ ಮಂಡ್ಯ - ಕೆ ಆರ್ ಎಸ್'ನಿಂದ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಮಂಡ್ಯದಲ್ಲಿ ವಿರೋಧವ್ಯಕ್ತವಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಸಂಘಟನೆಗಳು ಯೋಜನೆ ವಿರುದ್ದ ಗರಂ ಆಗಿದ್ದು ಸರ್ಕಾರದ ವಿರುದ್ಧ ಘೋಷಣೆ ಕೂಗಿಆಕ್ರೋಶ ವ್ಯಕ್ತ ಪಡಿಸಿವೆ. ಯೋಜನೆಗೆ ವಿರೋಧ ವ್ಯಕ್ತ ಪಡಿಸಿದ್ದಲ್ಲದೆ ಪ್ರಸ್ತಾಪಿತ ಯೋಜನೆ ಕೈ ಬಿಡಲು ಸರ್ವಾನುಮತ ದನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ರೈತ ಹಿತರಕ್ಷಣಾ ಸಮಿತಿ, ಕನ್ನಡ, ರೈತ ಪರ ಸಂಘಟನೆಗಳು ಬೆವರಿಳಿಸಿದರು. ವಿರೋಧದ ನಡುವೆ ಕೇವಲ ಒಂದು ಗಂಟೆಯಲ್ಲೇ ಸಭೆ ಮುಗಿಸಿ ಅಧಿಕಾರಿಗಳು ಹೊರಟರು,ಬಿಗುವಿನ ಪರಿಸ್ಥಿತಿ ಹಿನ್ನಲೆ ಡಿ ಸಿ ಕಚೇರಿಗೆ ಪೊಲೀಸ್ ಬಿಗಿಭದ್ರತೆ ಒದಗುಸಲಾಗಿತ್ತು.1
- ಮೋಡ ಬಿತ್ತನೆ ಕೊಡಗು ಜಿಲ್ಲೆಯಲ್ಲಿ ಇನ್ನೂ ಆರಂಭಗೊಂಡಿಲ್ಲ: ಚೆಲುವನಾರಾಯಣ ಸ್ವಾಮಿ ಕೊಡಗಿನಲ್ಲಿ ಮೋಡ ಬಿತ್ತನೆ ಕಾರ್ಯ ಇನ್ನೂ ಆರಂಭಿಸಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿಯವರು ಸ್ಪಷ್ಟಪಡಿಸಿದ್ದಾರೆ. ಬಹುಶಃ ಇನ್ನು ನಾಲ್ಕು ದಿನಗಳಲ್ಲಿ ಮೋಡ ಬಿತ್ತನೆ ಆರಂಭಗೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಅವರು ಹೇಳಿದ್ದಾರೆ. ನಿನ್ನೆ ದಿನ ಮಧ್ಯಾಹ್ನ ಬೆಂಗಳೂರಿನ ಸಚಿವರ ನಿವಾಸದಲ್ಲಿ ಕೊಡಗು ಭೂ ಪ್ರದೇಶದ ಮೇಲಿನ ಮೋಡ ಬಿತ್ತನೆ ಕುರಿತು ಗಮನ ಸೆಳೆದಾಗ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಎಲ್ಲೆಡೆ ಮೋಡ ಕವಿದ ವಾತಾವರಣ ಹಾಗೂ ರಭಸದ ಮಳೆ ಆಗುತ್ತಿದೆ. ಕೊಡಗಿನಲ್ಲಿ ಈಗಾಗಲೇ ಮೋಡ ಬಿತ್ತನೆ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಆದರೆ,ಮೋಡ ಬಿತ್ತನೆ ಆರಂಭಗೊಂಡಿಲ್ಲ. ಬಹುಶಃ ಉತ್ತಮ ನೈಸರ್ಗಿಕ ಮಳೆಯಾದಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಮುಂದೂಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.1