ದೊಡ್ಡ ಸಂಪಿಗೆಯಲ್ಲಿ ಮಹಾಶಿವರಾತ್ರಿ ಆಚರಣೆ. ರಾತ್ರಿಯಲ್ಲ ಜಾಗರಣೆ, ಗೋರುಕನ ನೃತ್ಯ. ಹನೂರು :ದೊಡ್ಡ ಸಂಪಿಗೆ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ. ಗಿರಿಜನ ಹಾಡಿಗಳಿಂದ ಗೋರುಕನ ನೃತ್ಯ. ಬಿಳಿಗಿರಿ ಬೆಟ್ಟಕ್ಕೆ ಹೊಂದಿಕೊಂಡು ಇರುವ ಕೆ. ಗುಡಿ ಮಾರ್ಗವಾಗಿ ಎಡಕ್ಕೆ ಸಂಚರಿಸುವ ಗಿರಿಜನರ ಪೋಡು, ದಟ್ಟವಾದ ಅರಣ್ಯ ಪ್ರದೇಶದಲ್ಲಿ ದೊಡ್ಡ ಸಂಪಿಗೆ ಎಂಬಲ್ಲಿ ಸುಮಾರು 2 ಸಾವಿರ ವರ್ಷಗಳ ಸಂಪಿಗೆ ಮರದಲ್ಲಿ (ಶಿವನ ರೂಪದಲ್ಲಿ ಲಿಂಗ )ನೆಲೆಸಿದ್ದಾರೆ ಎಂಬುದು ಹಿರಿಯರು ಹೇಳಿದ ಮಾತು. ಇವನಿಗೆ ವಿಶೇಷ ಪೂಜೆ ವಿವಿಧ ಹೂವಿನ ಅಲಂಕಾರ, ಅಭಿಷೇಕ ನೆರವೇರಿಸಲಾಯಿತು. ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಿಗೆ ರಾತ್ರಿಯಲ್ಲ ಜಾಗರಣೆ ಹಾಗೂ ಗಿರಿಜನರ ಹಾಡಿಗಳಿಂದ ಗೋರುಕನ ನೃತ್ಯ ಮಾಡಲಾಯಿತು. ಮಹಾಶಿವರಾತ್ರಿ ಅಂಗವಾಗಿ ಚಾಮರಾಜನಗರ ಜಿಲ್ಲೆಯ ನಾನಾ ಗ್ರಾಮಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಪುನಸ್ಕಾರ ಮಾಡಿಸಿಕೊಂಡು ಕೆಲ ಜನರು ಅಲ್ಲೆ ಉಳಿದುಕೊಂಡರು. ಗಿರಿಜನ ಸಮುದಾಯದವರಿಂದ ಅನ್ನ ದಾನ ವ್ಯವಸ್ಥೆ ಮಾಡಿ, ಬೇರೆ ಗ್ರಾಮಗಳಿಂದ ಜನರು ಅಕ್ಕಿ ದವಸ ದಾನ್ಯ ಗಳನ್ನ ತಂದು ಕೊಟ್ಟುರು. ಗಿರಿಜನ ಸಮುದಾಯದವರು ಪಾಯಸ,ಅನ್ನ, ಸಾಂಬಾರ್, ಕಳ್ಳೆ ಹುಳಿ, ಕೋಸು ಪಲ್ಯ ತಯಾರು ಮಾಡಿ ಬರುವ ಭಕ್ತಾದಿಗಳಿಗೆ ಅನ್ನದನದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಸಂದರ್ಭದಲ್ಲಿ ಅರ್ಚಕರಾದ ಶ್ರೀನಿವಾಸ್,ಶಿವು, ನಾಗೆ ಗೌಡ, ಶಿವಕುಮಾರ್,ಗಿರಿಜನ ಸಮುದಾಯದ ಅರ್ಚಕರು, ರಾಮಪುರದ ಬೈಯಮ್ಮ ದೇವಿಯ ಟ್ರಸ್ಟ್ ಅಧ್ಯಕ್ಷ ಮುನೇಶ್ , ಪತ್ರಕರ್ತ ವಿಜಯಕುಮಾರ್, ಜಡೇಸ್ವಾಮಿ, ವೆಂಕಟಚಲ, ಕೃಷ್ಣಮೂರ್ತಿ, ಪ್ರವೀಣ್, ನಾರಾಯಣ,ಶಶಿ, ಅಭಿಷೇಕ್, ಗಿರಿಜನ ಸಮುದಾಯದ ಜನರು ಸೇರಿದಂತೆ ಗ್ರಾಮದ ಭಕ್ತಾದಿಗಳು ಇದ್ದರು.
ದೊಡ್ಡ ಸಂಪಿಗೆಯಲ್ಲಿ ಮಹಾಶಿವರಾತ್ರಿ ಆಚರಣೆ. ರಾತ್ರಿಯಲ್ಲ ಜಾಗರಣೆ, ಗೋರುಕನ ನೃತ್ಯ. ಹನೂರು :ದೊಡ್ಡ ಸಂಪಿಗೆ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ. ಗಿರಿಜನ ಹಾಡಿಗಳಿಂದ ಗೋರುಕನ ನೃತ್ಯ. ಬಿಳಿಗಿರಿ ಬೆಟ್ಟಕ್ಕೆ ಹೊಂದಿಕೊಂಡು ಇರುವ ಕೆ. ಗುಡಿ ಮಾರ್ಗವಾಗಿ ಎಡಕ್ಕೆ ಸಂಚರಿಸುವ ಗಿರಿಜನರ ಪೋಡು, ದಟ್ಟವಾದ ಅರಣ್ಯ ಪ್ರದೇಶದಲ್ಲಿ ದೊಡ್ಡ ಸಂಪಿಗೆ ಎಂಬಲ್ಲಿ ಸುಮಾರು 2 ಸಾವಿರ ವರ್ಷಗಳ
ಸಂಪಿಗೆ ಮರದಲ್ಲಿ (ಶಿವನ ರೂಪದಲ್ಲಿ ಲಿಂಗ )ನೆಲೆಸಿದ್ದಾರೆ ಎಂಬುದು ಹಿರಿಯರು ಹೇಳಿದ ಮಾತು. ಇವನಿಗೆ ವಿಶೇಷ ಪೂಜೆ ವಿವಿಧ ಹೂವಿನ ಅಲಂಕಾರ, ಅಭಿಷೇಕ ನೆರವೇರಿಸಲಾಯಿತು. ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಿಗೆ ರಾತ್ರಿಯಲ್ಲ ಜಾಗರಣೆ ಹಾಗೂ ಗಿರಿಜನರ ಹಾಡಿಗಳಿಂದ ಗೋರುಕನ ನೃತ್ಯ ಮಾಡಲಾಯಿತು. ಮಹಾಶಿವರಾತ್ರಿ ಅಂಗವಾಗಿ ಚಾಮರಾಜನಗರ ಜಿಲ್ಲೆಯ ನಾನಾ ಗ್ರಾಮಗಳಿಂದ ಸುಮಾರು
2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಪುನಸ್ಕಾರ ಮಾಡಿಸಿಕೊಂಡು ಕೆಲ ಜನರು ಅಲ್ಲೆ ಉಳಿದುಕೊಂಡರು. ಗಿರಿಜನ ಸಮುದಾಯದವರಿಂದ ಅನ್ನ ದಾನ ವ್ಯವಸ್ಥೆ ಮಾಡಿ, ಬೇರೆ ಗ್ರಾಮಗಳಿಂದ ಜನರು ಅಕ್ಕಿ ದವಸ ದಾನ್ಯ ಗಳನ್ನ ತಂದು ಕೊಟ್ಟುರು. ಗಿರಿಜನ ಸಮುದಾಯದವರು ಪಾಯಸ,ಅನ್ನ, ಸಾಂಬಾರ್, ಕಳ್ಳೆ ಹುಳಿ, ಕೋಸು ಪಲ್ಯ ತಯಾರು
ಮಾಡಿ ಬರುವ ಭಕ್ತಾದಿಗಳಿಗೆ ಅನ್ನದನದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಸಂದರ್ಭದಲ್ಲಿ ಅರ್ಚಕರಾದ ಶ್ರೀನಿವಾಸ್,ಶಿವು, ನಾಗೆ ಗೌಡ, ಶಿವಕುಮಾರ್,ಗಿರಿಜನ ಸಮುದಾಯದ ಅರ್ಚಕರು, ರಾಮಪುರದ ಬೈಯಮ್ಮ ದೇವಿಯ ಟ್ರಸ್ಟ್ ಅಧ್ಯಕ್ಷ ಮುನೇಶ್ , ಪತ್ರಕರ್ತ ವಿಜಯಕುಮಾರ್, ಜಡೇಸ್ವಾಮಿ, ವೆಂಕಟಚಲ, ಕೃಷ್ಣಮೂರ್ತಿ, ಪ್ರವೀಣ್, ನಾರಾಯಣ,ಶಶಿ, ಅಭಿಷೇಕ್, ಗಿರಿಜನ ಸಮುದಾಯದ ಜನರು ಸೇರಿದಂತೆ ಗ್ರಾಮದ ಭಕ್ತಾದಿಗಳು ಇದ್ದರು.
- ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವರ ಪ್ರಸಾದ ಸ್ವೀಕರಿಸುವುದು ವಾಡಿಕೆ ಅದರಂತೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ದಾಸೋಹ ಭವನಕ್ಕೆ ಭೇಟಿ ನೀಡಿ ಭಕ್ತರಿಗೆ ನೀಡಲು ತಯಾರಿಸಿದ ಪ್ರಸಾದವನ್ನು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಮಾದಪ್ಪನ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಜಾತ್ರಾ ಸಂದರ್ಭದಲ್ಲಿ ವಿಶೇಷ ದಾಸೋಹ ತೆರೆದು ತರಕಾರಿ ಬಾತ್, ಮೊಸರುಬಜ್ಜಿ, ಬಿಸಿಬೇಳೆ ಬಾತ್, ಪುಳಿಯೋಗರೆ ಚಟ್ನಿ ವಿತರಣೆ ಮಾಡಲಾಗುತ್ತಿದೆ ದಾಸೋಹಭವನದಲ್ಲಿ ಅನ್ನ ಸಾಂಬಾರ್, ರಸಂ ಮಜ್ಜಿಗೆ ಕೂಟು, ಪೊಂಗಲ್ ಹುಳಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಒಟ್ಟಾರೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಗುಣಮಟ್ಟ ಪ್ರಸಾದ ವಿತರಿಸುವುದೆ ಪ್ರಾಧಿಕಾರದ ಉದ್ದೇಶವಾಗಿದೆ ಎಂದರು. ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಇದುವರೆಗೂ ಸುಮಾರು 4 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪ್ರಸಾದ ಸ್ವೀಕರಿಸಿದ್ದಾರೆ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಬರುವ ಪಾದಯಾತ್ರಿಕರಿಗೆ ದಾನಿಗಳು ಪರ ಮಾಡುವುದರಿಂದ ದಾಸೋಹ ಭವನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯು ಕಡಿಮೆ ಇರುತ್ತದೆ ಎಂದು ತಿಳಿಸಿದರು. ಪರಿಶೀಲನೆ ವೇಳೆ ದಾಸೋಹ ಭವನದ ಮೇಲೂಸ್ತುವಾರಿ ಮಲ್ಲಿಕಾರ್ಜುನ್, ಅಡುಗೆ ಸಿಬ್ಬಂದಿ ವರ್ಗದವರು ಆಪ್ತ ಸಹಾಯಕ ರವೀಂದ್ರ ಹಾಜರಿದ್ದರು.4
- ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ?ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ?1
- ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ್ದು ಪೌರಕಾರ್ಮಿಕರ ಜೊತೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಪೌರಕಾರ್ಮಿಕ ಸಿಬ್ಬಂದಿಗಳ ಜೊತೆಗೆ ಪೊರಕೆ ಇಡಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ . ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ ಎಲ್ಲೆಂದರಲ್ಲಿ ಕಸ ಚೆಲ್ಲಿದ್ದಾರೆ. ಬೇಸಿಗೆ ಕಾಲ ಆಗಿರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಪ್ರತಿನಿತ್ಯ ಪೌರಕಾರ್ಮಿಕರು ದಿನದ 24 ಗಂಟೆಗಳಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಕಾರ್ಯವೈಖರಿಗೆ ಭಕ್ತಾದಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಈ ರಘು ರವರ ಪೊರಕೆ ಹಿಡಿದು ದೇವಸ್ಥಾನದ ಮುಂಭಾಗ, ಲಾಡು ಮಾರಾಟ ಕೇಂದ್ರ, ರಾಜಗೋಪುರ ಮುಂಭಾಗ ಹಾಗೂ ಅಂತರಗಂಗೆ ಹೋಗುವ ರಸ್ತೆಯಲ್ಲಿ ಕಸ ಹೊಡೆಯುವ ಮೂಲಕ ಭಕ್ತಾದಿಗಳ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪ್ರತಿ ಜಾತ್ರಾ ಮಹೋತ್ಸವಗಳಲ್ಲಿ ಪೌರಕಾರ್ಮಿಕರ ಜೊತೆಗೆ ಕಸ ಗುಡಿಸುವ ಮೂಲಕ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ನಂತರ ಮಾಧ್ಯಮದವರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ್ ಕನಸಲು ಮನಸು ಮಾಡಲು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರವರು 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದ್ದಾರೆ. ಇವರ ಕನಸು ಭಾರತವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಗುರಿಯನ್ನು ಹೊಂದಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನವೂ ಪ್ಲಾಸ್ಟಿಕ್ ಮುಕ್ತ ಹಸಿರು ವಲಯ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದ್ದು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ಕವರ್ ಗಳನ್ನು ತಯಾರು ಮಾಡಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಕಂಪನಿಯ ಮುಖಾಂತರ ಪರಿಸರ ಸ್ನೇಹಿ ಕವರ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು ಭಕ್ತಾದಿಗಳು ಪರಿಸರ ಸ್ನೇಹಿ ಕವರ್ ಗಳನ್ನು ಬಳಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟದ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದರು.1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಥೋತ್ಸವ ಅಪಾರಭಕ್ತರಿಂದ ದರ್ಶನ ವಿಶೇಷ ಪೂಜೆ1
- Students Of Govt U.H.P.B.SCHOOL Chamraja Double Road KR Mohalla Mysuru Organised Science & Arts Exhibitions1
- ಜಾತ್ರೆ ವೇಳೆ ನಡೆಯುತ್ತಿದ್ದ ಜಗಳ ಬಿಡಿಸಿದ ತಪ್ಪಿಗೆ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಬೈಕ್ ಗೆ ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ ಶಾಕಿಂಗ್ ಪ್ರಕರಣ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡ್ಯೂಟಿ ಮಾಡುವ ಹೋಂಗಾರ್ಡ್ ರಂಗಸ್ವಾಮಿ ನಾಯಕ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ.ರಂಗಸ್ವಾಮಿ ನಾಯಕರಿಗೆ ಸೇರಿದ ಬೈಕ್ ಗೆ ಬೆಂಕಿ ಹಚ್ಚಿ ಗೂಂಡಾಯಿಸಂ ಪ್ರದರ್ಶಿಸಿದ್ದಾರೆ.ಪುಂಡರಿಂದ ದಾಳಿಗೆ ಸಿಲುಕಿದ ರಂಗಸ್ವಾಮಿನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಠಾಣೆಯಿಂದ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿದ ಹೋಂಗಾರ್ಡ್ ರಂಗಸ್ವಾಮಿ ನಾಯಕನ ಮೇಲೆ ಹಲ್ಲೆ ನಡೆಸಿ ಬೈಕ್ ಸುಟ್ಟುಹಾಕಿದ್ದರೂ ಪೊಲೀಸರು ಪ್ರಕರಣ ದಾಖಲಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಬುಧುವಾರ ಏಚಗುಂಡ್ಲ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು.ಭದ್ರತೆಗಾಗಿ ಹೋಂಗಾರ್ಡ್ ರಂಗಸ್ವಾಮಿಯವರನ್ನ ನಿಯೋಜಿಸಲಾಗಿತ್ತು.ಈ ವೇಳೆ ಕೆಲವು ಯುವಕರು ಕುಡಿದು ಗಲಾಟೆ ಮಾಡಿಕೊಂಡಿದ್ದರು.ಈ ವೇಳೆ ರಂಗಸ್ವಾಮಿ ಗಲಾಟೆ ಬಿಡಿಸಿದ್ರು.ಮರುದಿನ ಮಹದೇವಸ್ವಾಮಿ ಹಾಗೂ ರಮೇಶ್ ರವರು ಐದಾರು ಜನರ ಗುಂಪು ಕಟ್ಟಿಕೊಂಡು ರಂಗಸ್ವಾಮಿ ಮೇಲೆ ಅಟ್ಯಾಕ್ ಮಾಡಿದ್ದಾರೆ.ತೀವ್ರಹಲ್ಲೆ ನಡೆಸಿ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.ತನಗೂ ಬೆಂಕಿ ಹಚ್ಚುವುದು ಗ್ಯಾರೆಂಟಿ ಎಂದು ಅರಿತ ರಂಗಸ್ವಾಮಿ ಅಲ್ಲಿಂದ ತಪ್ಪಿಸಿಕೊಂಡು ಗ್ರಾಮಾಂತರ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.ಹಲ್ಲೆಗೆ ಒಳಗಾದ ರಂಗಸ್ವಾಮಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ನಡೆದು ನಾಲ್ಕು ದಿನಗಳ ಕಳೆದರೂ ಯಾವುದೇ ಪ್ರಕರಣ ದಾಖಲಾಗದಿರುವುದು ಅಚ್ಚರಿಗೆ ಕಾರಣವಾಗಿದೆ.ಹೋಂಗಾರ್ಡ್ ಗೇ ಭದ್ರತೆ ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ಭದ್ರತೆ ಬಗ್ಗೆ ಅನುಮಾನ ಮೂಡುತ್ತಿದೆ. ಕೆಲವೇ ದಿನಗಳ ಹಿಂದೆ ನಂಜನಗೂಡಿನಲ್ಲಿ ಬೈಕ್ ಸಮೇತ ಯುವಕನನ್ನ ಸುಟ್ಟು ಕೊಂದ ಘಟನೆ ಇನ್ನೂ ಮಾಸದಿರುವ ಸಮಯದಲ್ಲಿ ಈ ಪ್ರಕರಣ ಬೆಚ್ಚಿಬೀಳಿಸಿದೆ.ಇನ್ನಾದ್ರೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಗೂಂಡಾ ವರ್ತನೆ ತೋರಿದ ಯುವಕರ ವಿರುದ್ದ ಪ್ರಕರಣ ದಾಖಲಿಸುವರೇ...?1
- ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ್ದು ಪೌರಕಾರ್ಮಿಕರ ಜೊತೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಪೌರಕಾರ್ಮಿಕ ಸಿಬ್ಬಂದಿಗಳ ಜೊತೆಗೆ ಪೊರಕೆ ಇಡಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ . ನಂತರ ಮಾಧ್ಯಮದವರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ್ ಕನಸಲು ಮನಸು ಮಾಡಲು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರವರು 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದ್ದಾರೆ. ಇವರ ಕನಸು ಭಾರತವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಗುರಿಯನ್ನು ಹೊಂದಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನವೂ ಪ್ಲಾಸ್ಟಿಕ್ ಮುಕ್ತ ಹಸಿರು ವಲಯ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದ್ದು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ಕವರ್ ಗಳನ್ನು ತಯಾರು ಮಾಡಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಕಂಪನಿಯ ಮುಖಾಂತರ ಪರಿಸರ ಸ್ನೇಹಿ ಕವರ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು ಭಕ್ತಾದಿಗಳು ಪರಿಸರ ಸ್ನೇಹಿ ಕವರ್ ಗಳನ್ನು ಬಳಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟದ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದರು.3