Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- Post by AAJ KI DASTAK NEWS KARNATAKA1
- ಮಳವಳ್ಳಿ ಹೆಬ್ಬೆಟ್ಟದ ಬಸವೇಶ್ವರನಿಗೆ ಹರಕೆ ಹೊತ್ತರೆ ಸಂತಾನ ಭಾಗ್ಯ. ಮಳವಳ್ಳಿ ಹಲಗೂರುಸಮೀಪದ ಬಸವನಹಳ್ಳಿ ಗ್ರಾಮದ ಬೆಟ್ಟದ ಮೇಲೆ ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿರುವ ಹೆಬ್ಬೆಟ್ಟದ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಮಕ್ಕಳಿಲ್ಲದವರು ಮತ್ತು ಮದುವೆ ತಡವಾಗುತ್ತಿದ್ದರೆ, ಕೋರ್ಟ್ ಕೇಸ್ ಇತ್ಯರ್ಥವಾಗದೆ ತಡವಾಗಿದ್ದರೆದೇವರಿಗೆ ಹರಕೆ ಹೊತ್ತುಕೊಂಡರೆ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ದೈವ ಈ ಹೆಬ್ಬಟ್ಟದ ಬಸಪ್ಪ ಎಂದು ಅರ್ಚಕರಾದ ಬಸಪ್ಪ ತಿಳಿಸಿದರು . ಪೂಜೆ ಪುನಸ್ಕಾರಗಳನ್ನು ನಡೆಸಿ ಭಕ್ತರಿಗೆ ಮಹಾಮಂಗಳಾರತಿ ಪ್ರಸಾದ ನೀಡಿದ ನಂತರ ಅವರು ಮಾತನಾಡುತ್ತಾ, ಧನುರ್ಮಾಸದ ಪ್ರಾರಂಭದಿಂದ ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಇಂದು ಹಲಗೂರಿನ ಭಕ್ತರು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ದಿನ ಧನುರ್ಮಾಸದ ಕಡೆ ಸೋಮವಾರ ದಿನವಾದ್ದರಿಂದ ಬೆಳಗಿನ ಜಾವ ದೇವರ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತಾಭಿಷೇಕ,ರುದ್ರಾಭಿಷೇಕ ನಡೆಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನಡೆದ ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಸುಮಾರು ಸಾವಿರದನಾಲ್ಕುನೂರು ವರ್ಷಗಳ ಇತಿಹಾಸ ಹೊಂದಿರುವ ಚೋಳರ ಕಾಲದ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯವು ಸುತ್ತಮುತ್ತಲಿನ ಗ್ರಾಮಗಳ ಜನರ ಆರಾಧ್ಯ ದೈವ ಇಲ್ಲಿ ಮಕ್ಕಳಾಗದಿದ್ದವರು ಹರಕೆಹೊತ್ತರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಮದುವೆಯಾಗದ ಗಂಡು ಮತ್ತು ಹೆಣ್ಣು ಮಕ್ಕಳು ಹರಕೆ ಹೊತ್ತರೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮದವರು ತಮ್ಮ ಗ್ರಾಮಗಳಲ್ಲಿ ಯಾವುದೇ ಪೂಜಾ ಕಾರ್ಯಗಳನ್ನು ಜಾತ್ರೆಗಳನ್ನು ಹಮ್ಮಿಕೊಳ್ಳಬೇಕಿದ್ದರೆ ಮೊದಲು ಇಲ್ಲಿ ಪೂಜೆ ಸಲ್ಲಿಸಿ ಹೆಬ್ಬೆಟ್ಟದ ಬಸಪ್ಪದೇವರ ಅಪ್ಪಣೆ ಪಡೆದು ಮುಂದುವರೆಯಯುವುದು ಅನಾದಿಕಾಲದಿಂದಲೂ ಪ್ರತೀತಿ ಇದೆ .1
- ಹನೂರು ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ. ಹನೂರು :ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪ ರವರು ಅಧಿಕಾರ ವಹಿಸಿಕೊಂಡು ನಂತರ ಮೊದಲ ಬಾರಿಗೆ ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣಕ್ಕೆ ಆಗಮಿಸಿದ, ತಾಲೂಕಿನಲ್ಲಿರುವ ಕುಡಿಯುವ ನೀರು, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಯನ್ನ ಆಲಿಸಿದರು. ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಲು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿ.ಪಂ.ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾ ರೋತ್, ತಾಲೂಕು ದಂಡಾಧಿಕಾರಿ ಚೈತ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರ ಅಮ್ಜಾದ್ ಖಾನ್, ರಾಜಣ್ಣ, ಕೂಡಲೂರು ವೆಂಕಟೇಶ್, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಮಣಿಗರ್ ಪ್ರಸಾದ್, ಬಸವಣ್ಣ, ಸದಾಶಿವ ಸೇರಿದಂತೆ ಹಲವು ರೈತರು ಇದ್ದರು.4
- ಚಾಮರಾಜನಗರ ನ್ಯೂಸ್ ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಸಿ.ಪಿ ಐ. ಜಿ.ಕೆ.ಸುಬ್ರಹ್ಮಣ್ಯ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದ ಕಾನೂನು ಬಲಿಷ್ಠವಾಗಿದ್ದು ಕಾನೂನು ಮೀರಿ ಅಪರಾಧ ಕೃತ್ಯ ಮಾಡುವ ಯಾವುದೆ ವ್ಯಕ್ತಿ ಸಮಾಜದಲ್ಲಿ ಎಷ್ಟೆ ದೊಡ್ಡವರಾಗಿದ್ದರೂ ಅವರ ವಿರುದ್ಧ ದೂರು ಬಂದರೆ ಅವರನ್ನು ಬಂಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ , ಗ್ರಾಮೀಣ ಪ್ರದೇಶಗಳಲ್ಲಿ ಜಾತಿಗಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮುಖ್ಯವಾಗಿ ಪ್ರಕರಣ ದಾಖಲಾಗಬೇಕು. ಒಬ್ಬ ವ್ಯಕ್ತಿಗೆ ಒಂದು ಸಮುದಾಯದ ಅಥವಾ ಒಂದು ಜಾತಿಯ ವ್ಯಕ್ತಿಗಳಿಂದ ಅಥವಾ ಹಲವರಿಂದ ತೊಂದರೆಯಾಗುತ್ತಿದ್ದರೆ ಅಂತವರು ಧೈರ್ಯದಿಂದ ಮುಂದೆ ಬಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ ಮುಲಾಜಿಲ್ಲದೆ ಅಂಥಾ ಪ್ರಕರಣಕ್ಕೆ ನಮ್ಮ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಮುಖಂಡರುಗಳು ಮತ್ತು ವಾಲ್ಮೀಕಿ ಸಮುದಾಯದ ಮುಖಂಡರುಗಳು ಮಾತನಾಡಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನದ ನಿಲುಗಡೆ, ಪೋಲಿಸ್ ಚೋಕಿಯಲ್ಲಿ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು, ಅಗರ ಗ್ರಾಮದಲ್ಲಿ ಆಟೋಗಳು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಗ್ರಾಮೀಣ ಭಾಗದಲ್ಲಿ ಬಿಟ್ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಗ್ರಾಮೀಣ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಕಡಿವಾಣ ಹಾಕಬೇಕು, ಪಟ್ಟಣದ ಬಳೆಪೇಟೆಯಲ್ಲಿ ಅಕ್ರಮ ಲಾಟರಿ ದಂಧೆ ನಿಯಂತ್ರಿಸಬೇಕು, ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು, ಸೇರಿದಂತೆ ದಲಿತ ಮುಖಂಡರು ಪರಿಶಿಷ್ಟ ಜನಾಂಗದ ಮುಖಂಡರು ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗೋಪು ಆಗಿ ಮಾಹಿತಿ ನೀಡಿ ಗ್ರಾಮೀಣ ಪ್ರದೇಶದಲ್ಲಿಯೂ ಇಂಥಾ ಸಭೆಗಳು ಪೊಲೀಸ್ ಇಲಾಖೆಯಿಂದ ಆಯೋಜನೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಪಿಎಸ್ಐ. ಎಸ್. ಕೆ. ಆಕಾಶ್, ಅಗರ ಪೊಲೀಸ್ ಠಾಣೆಯ ಪಿಎಸ್ಐ. ಎನ್.ಕರಿಬಸಪ್ಪ, ago ಪೊಲೀಸ್ ಸಿಬ್ಬಂದಿಗಳು, ವಿವಿಧ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪರಿಶಿಷ್ಟ ಪಂಗಡಗಳ ಮುಖಂಡರುಗಳು ಹಾಜರಿದ್ದರು ಮುಖಂಡರುಗಳು ಹಾಜರಿದ್ದರು. ವರದಿ. ಎಸ್ ಪುಟ್ಟಸ್ವಾಮಿ ಹೊನ್ನೂರು4
- ಶಿಡ್ಲಘಟ್ಟ: ಕೊಟ್ಟ ಮಾತಿನಂತೆ ರೈತರ ಭೂಮಿಯನ್ನು ಉಳಿಸಿಕೊಟ್ಟಿದ್ದೇನೆ: ಶಾಸಕ ಬಿ ಎನ್ ರವಿಕುಮಾರ್1
- "ದ ದಾಪರ್ ಎಕ್ಸ್ ಪೋ" ಚಿತ್ರ ಕಲಾ ಪ್ರದರ್ಶನ ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ ಪೋ ಎಂಬ ಚಿತ್ರಕಲಾ ಪ್ರದರ್ಶನವು ಜನವರಿ ೧೭ ರಿಂದ ೧೯ ರ ತನಕ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದ ಉದಯ ಕೃಷ್ಣ ಜಿ ತಿಳಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನ ನೀಡಿದ್ರು. ಕಾರ್ಯಕ್ರಮದ ಉದ್ಘಾಟನೆಯು ಜನವರಿ ೧೭ ರಂದು ಅಪರಾಹ್ನ ೩ ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ ಎನ್ ಭಟ್, ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್, ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸಲಿದ್ದಾರೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್ , ಡ್ರಾಯಿಂಗ್ , ಫೋಟೋಗ್ರಾಫಿ , ಮಂಡಳ ಆರ್ಟ್ , ಸ್ಟ್ರಿಂಗ್ ಆರ್ಟ್ ಗಳೆಂಬ ೫ ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ1
- *ಭಾರತ ನಲ್ಲಿ ವೈರಲ್*1