ಪುರುಷರಿಗೆ ಸರಿಸಮವಾಗಿ ಮಹಿಳೆ ಬೆಳೆದು ನಿಂತಿದ್ದಾಳೆ: ಡಾ.ಶಾಂತಾ ಕರಡಿಗುಡ್ಡ ಗುಳೇದಗುಡ್ಡ: ಭಾರತೀಯ ಪರಂಪರೆಯಲ್ಲಿ ನಾರಿ ಸಂಕುಲವನ್ನು ಇಡಿ ಜಗತ್ತು ಗೌರವಿಸುತ್ತದೆ. ಸಮಾಜದ ಪ್ರತಿಯೊಂದು ರಂಗದಲ್ಲಿ ಮಹಿಳೆ ತನ್ನದೇ ಆದ ವಿಶೇಷ ಮತ್ತು ವಿಶಿಷ್ಟ ಸಾಧನೆ ಮಾಡಿದ್ದಾರೆ. ಪುರುಷರಿಗೆ ಸರಿಸಮನವಾಗಿ ಮಹಿಳೆ ಬೆಳೆದು ನಿಂತಿದ್ದಾಳೆ. ಮಹಿಳೆಯನ್ನು ಗೌರವಿಸುವ ಕುಟುಂಬ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ.ಶಾಂತಾ ಕರಡಿಗುಡ್ಡ ಹೇಳಿದರು. ಅವರು ಪಟ್ಟಣದ ಶ್ರೀ ಸಾಲೇಶ್ವರ ಸಮುದಾಯ ಭವನದಲ್ಲಿ ಪಟ್ಟಸಾಲಿ ನೇಕಾರ ಮಹಿಳಾ ಸಂಘ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆ ಸಮಾಜದ ಶಕ್ತಿಯಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾಳೆ ಎಂದರು. ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಭಾರತಿ ತಾಂಡೂರ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಅದಕ್ಕೆ ಮೊದಲು ಮಹಿಳೆಯರು ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಮಹಿಳಾ ದಿನಾಚರಣೆ ಒಂದು ದಿನದ ಆಚರಣೆ ಆಗಬಾರದು. ಮಹಿಳೆಗೆ ಎಲ್ಲರೂ ಗೌರವ, ಸತ್ಕಾರದಿಂದ ಕಾಣಬೇಕು ಎಂದರು. ಪಟ್ಟಸಾಲಿ ನೇಕಾರ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತರಾಷ್ಟ್ರೀಯ ಈ ಮಹಿಳಾ ದಿನಾಚರಣೆಯಲ್ಲಿ ವಿವಿಧ ಮಹಿಳಾ ಮಂಡಳಿ ಅಧ್ಯಕ್ಷರಾದ ಅನುಪಮಾ ಧಾರವಾಡ, ಚಂದ್ರಿಕಾ ಜೋಶಿ, ಸಿದ್ದಮ್ಮ ಆಚನೂರ, ಚನ್ನಮ್ಮ ಜವಳಿ, ದ್ರಾಕ್ಷಯಣಿ ನಾಗೂರ, ಶಕುಂತಲಾ ದೇವಾಂಗಮಠ, ಸೇರಿದಂತೆ ವಿವಿಧ ಮಹಿಳಾ ಸಂಘದ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅನುಷಾ ತಿಪ್ಪಾ ಅವರ ಭರತ ನಾಟ್ಯ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಗಿರಿಜಾ ಕಲ್ಯಾಣಿ, ಭಾಗ್ಯಾ ಉದ್ನೂರ, ತಾರಾಮತಿ ರೋಜಿ, ದೀಪಾ ಉಂಕಿ, ವೇದಾ ಶೀಪ್ರೀ, ನಾಗರತ್ನಾ ಎಣ್ಣೆ, ದ್ರಾಕ್ಷಾಯಿಣಿ ಗೊಬ್ಬಿ, ಮಾಲಾ ರಾಜನಾಳ, ಅನಿತಾ ಶಿರೋಳ, ಅನಸೂಯ ಅಲದಿ, ಮುರಿಗೆವ್ವ ಸಾರಂಗಿ, ಮೀನಾಕ್ಷಿ ಜಿಡಗಿ, ಶಶಿಕಲಾ ಭಾವಿ ಇತರರು ಇದ್ದರು.

- ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕು ಕುಠುನ್ಕೇರಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಜಮೀನಿನ ಬರುತ್ತಿರುವ ರೈತನೊಬ್ಬ ಅಡ್ಡರಾಗಿ ಬಂದು ಬೈಕ್ ಆಕ್ಸಿಡೆಂಟ್ ಆಗಿದೆ ತಳದಲ್ಲಿ ಒಂದು ಸಾವು ಸತ್ತವನು ಬಸವರಾಜ್ ಕಂಬಾರ ಊರು ಕಟಾಪುರ್ ಬಿಡದಗುಡ್ಡ ತಾಲ್ಲೂಕು ಬಸವರಾಜ್ ಬೇರಾಳ ಎಂಬ ವ್ಯಕ್ತಿಗೆ ಗಾಯಗೊಂಡಿದ್ದಾನೆ1
- ತೇರದಾಳ: ಹೋಳಿ ಹಬ್ಬದ ವೇಳೆ ಉಂಟಾದ ಜಗಳವು ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ರಾಹುಲ್ ಬಾಹುಬಲಿ ಹತ್ಯೆಗೀಡಾದ ಯುವಕನಾಗಿದ್ದು, ಹೋಳಿ ಹಬ್ಬದ ದಿನ ರಾಹುಲ್ ಮತ್ತು ಆತನ ಸ್ನೇಹಿತನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವಿಚಾರವಾಗಿ ಮಾತುಕತೆ ನಡೆಸಲು ಸ್ನೇಹಿತರು ದೇವಸ್ಥಾನವೊಂದರ ಬಳಿ ಸೇರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಯು ರಾಹುಲ್ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.1
- ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.1
- Post by @april14news1
- ವಿಜಯಪುರ: ಮಾರ್ಚ್ 14ರಂದು ರಂಭಾಪುರಿ ಮಠದ ಭೂವಿ ಪೂಜೆ ವಿಜಯಪುರ ನಗರದ ಸುರಭಿ ಲೇಔಟ್ ನಲ್ಲಿ ಮಾರ್ಚ್ 14ರಂದು ರಂಭಾಪುರಿ ಪೀಠದ ನೂತನ ಮಠದ ಸ್ಥಾಪನೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಮಮದಾಪುರ ಶ್ರೀಗಳು ತಿಳಿಸಿದ್ದಾರೆ. ಐದು ಪಂಚಪೀಠ ಮಠಾಧೀಶರನ್ನು ನೀಡಿದ ಜಿಲ್ಲೆಗೆ ರಂಭಾಪುರಿ ಮಠ ಇರಲಿಲ್ಲ. ನಿವೇಶನ ನಿಗದಿಯಾಗಿದ್ದು, ನಾಡಿನ ಮಠಾಧೀಶರು ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಮಠದ ನಿರ್ಮಾಣದ ಭೂಮಿ ಪೂಜೆ ಜರುಗಲಿದೆ ಎಂದು ಅವರು ಭಾನುವಾರದಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದರು.1
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- Post by ನಾಗರಾಜ3
- ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.1