Shuru
Apke Nagar Ki App…
80ನೇ ಸ್ವಾತಂತ್ರೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ "ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ-2026: 80 ತ್ಯಾಜ್ಯ ಮುಕ್ತ ತಾಣಗಳು" ಅಭಿಯಾನದ ಮುಂದುವರಿದ ಭಾಗವಾಗಿ, ದಿನಾಂಕ 29-07-2026 ರಂದು ಬೆಳಿಗ್ಗೆ 6:30 ಗಂಟೆಗೆ ಫೈವ್ ಲೈಟ್ ಸರ್ಕಲ್ ಸಮೀಪದ ದಾವೂದ್ ಖಾನ್ ರಸ್ತೆಯಲ್ಲಿರುವ ಗಾರ್ಬೇಜ್ ವಲ್ನರಬಲ್ ಪಾಯಿಂಟ್ ತಾಣವನ್ನು (GVP) ಸ್ವಚ್ಛಗೊಳಿಸಿ, ತ್ಯಾಜ್ಯಮುಕ್ತ ತಾಣವನ್ನಾಗಿ ಪರಿವರ್ತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸ್ವಯಂಸೇವಕರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
Shiva Belagavi
80ನೇ ಸ್ವಾತಂತ್ರೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ "ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ-2026: 80 ತ್ಯಾಜ್ಯ ಮುಕ್ತ ತಾಣಗಳು" ಅಭಿಯಾನದ ಮುಂದುವರಿದ ಭಾಗವಾಗಿ, ದಿನಾಂಕ 29-07-2026 ರಂದು ಬೆಳಿಗ್ಗೆ 6:30 ಗಂಟೆಗೆ ಫೈವ್ ಲೈಟ್ ಸರ್ಕಲ್ ಸಮೀಪದ ದಾವೂದ್ ಖಾನ್ ರಸ್ತೆಯಲ್ಲಿರುವ ಗಾರ್ಬೇಜ್ ವಲ್ನರಬಲ್ ಪಾಯಿಂಟ್ ತಾಣವನ್ನು (GVP) ಸ್ವಚ್ಛಗೊಳಿಸಿ, ತ್ಯಾಜ್ಯಮುಕ್ತ ತಾಣವನ್ನಾಗಿ ಪರಿವರ್ತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸ್ವಯಂಸೇವಕರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
More news from ಕರ್ನಾಟಕ and nearby areas
- ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿನೋದ್ ಕಲಮಡಿ ಪದಗ್ರಹಣ ಲೈನ್ಸ್ ಕ್ಲಬ್ ಆಫ್ ಅಥಣಿ ವತಿಯಿಂದ ಜರುಗಿದ 2ನೇ ಪದಗ್ರಹಣ ಸಮಾರಂಭ ಅಥಣಿ : "ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ನಿಸ್ವಾರ್ಥ ಸೇವೆಗೆ ಹೆಸರಾಗಿದ್ದು, 'ಸೇವೆಯೇ ಪರಮೋಚ್ಚ ಧೇಯ' (We Serve) ಎನ್ನುವ ತತ್ವದಡಿ ಪ್ರತಿಯೊಬ್ಬ ಲಯನ್ಸ್ ಸದಸ್ಯರೂ ಬಡವರು, ನಿರ್ಗತಿಕರು ಮತ್ತು ಅಶಕ್ತರ ಬದುಕಿನಲ್ಲಿ ಬೆಳಕು ಚೆಲ್ಲಲು ಮುಂದಾಗಬೇಕು ಎಂದು ಜಿಲ್ಲಾ ಪ್ರಾಂತಪಾಲ ಲಯನ್ ರಾಜಶೇಖರ ಹಿರೇಮಠ ಅವರು ಕರೆ ನೀಡಿದರು. ಅಥಣಿಯ ಎಸ್.ಎಸ್.ಎಂ.ಎಸ್. ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಲೈನ್ಸ್ ಕ್ಲಬ್ ಆಫ್ ಅಥಣಿ'ಯ 2026-27ನೇ ಸಾಲಿನ 2ನೇ ಪದಗ್ರಹಣ ಸಮಾರಂಭವು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರೇಮಠ ಅವರು ಅಥಣಿ ಘಟಕವು ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಪದಗ್ರಹಣ ಅಧಿಕಾರಿಲಯನ್ ಡಾ. ಆರ್.ಎನ್. ಸೋನಾವಾಲ್ಕರ್ ಅವರು ಮಾತನಾಡಿ, " ಸಮುದಾಯದ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ದೃಷ್ಟಿ ದೋಷ ನಿವಾರಣೆಯಂತಹ ಮಹತ್ವದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವಲ್ಲಿ ಲಯನ್ಸ್ ಕ್ಲಬ್‌ನ ಪಾತ್ರ ಹಿರಿದಾದದ್ದು. ನೂತನ ಪದಾಧಿಕಾರಿಗಳು ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿ" ಎಂದು ಶುಭ ಹಾರೈಸಿದರು. ಜೊತೆಗೆ ನೂತನ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿ ತಿಳಿಸಿಕೊಟ್ಟು ಸಮಾಜಮುಖಿ ಸೇವೆ ಮಾಡುವಂತೆ ಕರೆ ನೀಡಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಲಯನ್ ವಿನೋದ್ ಕಲಮಡಿ ಅವರು, "ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ.ಈ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದ್ದು ನಮ್ಮ ಹಿರಿಯರ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅತ್ಯಂತ ನಿಷ್ಠೆಯಿಂದ ಸಮಾಜಕ್ಕೆ ಮಾದರಿ ಆಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು" ಎಂದು ಹೇಳಿದರು. 2026-27 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಲಯನ್ ವಿನೋದ್ ಕಲಮಡಿ ಅಧ್ಯಕ್ಷರಾಗಿ,ಬಾವುಸಾಹೇಬ ನಾಯಿಕ ಉಪಾಧ್ಯಕ್ಷರಾಗಿ , ಲಯನ್ ಕಿರಣ್ ಶಿರಗುಪ್ಪಿ ಕಾರ್ಯದರ್ಶಿಯಾಗಿ ಲಯನ್ ಅಭಿನಂದನ್ ಪಡ್ನಾಡ ಕೋಶಾಧಿಕಾರಿಯಾಗಿ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧಿಕಾರಿ ಬಾಲಕೃಷ್ಣ ಬಂಡೆ,ವಲಯ ಅಧಿಕಾರಿ ಅಶೋಕ ಮುರಗೋಡ, ನಿಕಟಪೂರ್ವ ಅಧ್ಯಕ್ಷ ಲಯನ್ ರಮೇಶ ಬುಲ್ಬುಲೆ ಹಾಗೂ ಡಾ.ಮಹೇಶ ಕಾಪ್ಸೆ,ಡಾ.ಗುರುಪುತ್ರ ಪಾಟೀಲ,ಮಹಾಂತೇಶ ಕವಲಾಪುರ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್‌ನ ಸದಸ್ಯರು, ಸ್ಥಳೀಯ ಗಣ್ಯರು, ಆಹ್ವಾನಿತರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಕುಟುಂಬ ಸಮೇತ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.1
- ನಾಳೆ ರಾಜ್ಯಾದ್ಯಂತ ಪೊಲೀಸ್ ನೇಮಕಾತಿ ಪರೀಕ್ಷೆ ಜಮಖಂಡಿಯಲ್ಲಿ ಪೊಲೀಸ್ ಪರೀಕ್ಷೆಗೆ ಸಕಲ ಸಿದ್ಧತೆ ಪರೀಕ್ಷಾ ಕೇಂದ್ರಗಳಿಗೆ ಎಸ್‌ಪಿ ಸಿದ್ದಾರ್ಥ ಗೋಯಲ್ ಭೇಟಿ1
- ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು1
- #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo1
- ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಬೀಳಗಿ-ಯಡಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಉಚಿತ ನೋಟ್‌ಬುಕ್ ಹಾಗೂ ಲೇಖನಿ ವಿತರಣೆ : ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಬೀಳಗಿ ತಾಲೂಕಿನ ಯಡಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ್ (ರಿ), ರಾಮನಗರ (ಬೆಂಗಳೂರು) ಹಾಗೂ ಶ್ರೀ ಬಸವೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಅನಗವಾಡಿ (ಬೀಳಗಿ) ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಅಶೋಕ್ ಹನಮರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸದಾಶಿವ ನಂದಗಾವಿ, ದೊಡ್ಡಣ್ಣ ದೇಸಾಯಿ, ಜಿತೇಂದ್ರ ಪಾಟೀಲ್, ಚಾಂದ್ ಸಾಬ್ ವಿರೋಜಿ, ಮೌಲಾಸಾಬ್ ಜೈನಾಪುರ ಹಾಗೂ ತಾಲೂಕು ವಿಕಲಚೇತನರ ಸಂಸ್ಥೆಯ ಮಾರ್ಗದರ್ಶಕರಾದ ಭೀಮಸಿ ದೇವನಾಳ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಸವೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಉಮೇಶ್ ಎಂ. ಚನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ, "ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು. ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯ. ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ನೋಟ್‌ಬುಕ್‌ಗಳ ಮೇಲೆ ಮಹನೀಯರು ಹಾಗೂ ಇತಿಹಾಸಕಾರರ ಭಾವಚಿತ್ರ ಮತ್ತು ಅವರ ಪರಿಚಯವಿರುವುದರಿಂದ ಮಕ್ಕಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವ್ಯಸನಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು," ಎಂದು ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಲಾಯಿತು. ಶಿಕ್ಷಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಹ ಶಿಕ್ಷಕರಾದ ಆನಂದ ಬಿರಾದಾರ್ ಸ್ವಾಗತಿಸಿದರು. ಜಗದೀಶ ಮುಚ್ಛಂಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.4
- ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.1
- ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಅನುಚಿತವರ್ತನೆ ವಿದ್ಯಾರ್ಥಿಗಳ ಪ್ರತಿಭಟನೆ1
- ಗದ್ದನಕೇರಿ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ! ಕೊಡಲಿ ಹಾಗೂ ರಾಡ್ ನಿಂದ ಹಲ್ಲೆ.1