Shuru
Apke Nagar Ki App…
ಮೇ 2:ರಂದು ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನಗರದಲ್ಲಿ ನಡೆಯಲಿದೆ ಶ್ರೀ ವೀರಭದ್ರ ಸ್ವಾಮಿ ದೊಡ್ಡ ರಥೋತ್ಸವ...
Suresh Belagere
ಮೇ 2:ರಂದು ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನಗರದಲ್ಲಿ ನಡೆಯಲಿದೆ ಶ್ರೀ ವೀರಭದ್ರ ಸ್ವಾಮಿ ದೊಡ್ಡ ರಥೋತ್ಸವ...
More news from ಕರ್ನಾಟಕ and nearby areas
- ಶಿವಮೊಗ್ಗ: ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ದ ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಕೊಂಡಿತು. ಕುಲಪತಿಗಳ ಕಚೇರಿ ಆವರಣದಲ್ಲಿದ್ದ ಕುರ್ಚಿ, ಪ್ಲಾಟ್,ನಾಮಫಲಕ ಎಲ್ಲವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿ ಗಳು ಪುಡಿ ಪುಡಿ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯ ಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಖಂಡಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದ ವಿಸಿಗೆ ಧಿಕ್ಕಾರ ಕೂಗಿ, ಕಚೇರಿಯ ಬೋರ್ಡ್‌ಗೆ ಕಪ್ಪು ಮಸಿ ಬಳಿದರು.ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಕುಲಪತಿಗಳ ಕಚೇರಿಯನ್ನು ವಿದ್ಯಾರ್ಥಿಗಳು ಅಕ್ಷರಶಃ ಧ್ವಂಸಗೊಳಿಸಿದರು.ವಿಶ್ವವಿದ್ಯಾಲಯದ ಆಂತರಿಕ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಕಳೆದ ಐದು ತಿಂಗಳ ಹಿಂದೆ ನಡೆದ 1-3 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿಲ್ಲ ಮತ್ತು ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿ ಗಳನ್ನು ವಿತರಿಸದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಅಂಕಪಟ್ಟಿ ಇಲ್ಲದೆ ಪದವೀಧರರು ಉನ್ನತ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಸೇರಲು ಪರದಾಡುವಂತಾ ಗಿದೆ. ಈ ಬಗ್ಗೆ ಹಲವು ಬಾರಿ ಕುಲಪತಿಗಳಿಗೆ ಮನವಿ ಮಾಡಿದರೂ ಸ್ಪಂದಿಸದೆ, ಕೇವಲ ಅಧಿಕಾರಿಗಳ ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂಪಾಯಿಗಳಷ್ಟು ಹೆಚ್ಚಿಸಿರು ವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನ ವಾಗಿದೆ. ಇದರ ಜೊತೆಗೆ ಡಿಜಿಟಲ್ ಮೌಲ್ಯಮಾಪನದಲ್ಲಿನ ತಾಂತ್ರಿಕ ಲೋಪ ಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರು ಫೇಲ್ ಎಂದು ತೋರಿಸುತ್ತಿರುವುದು ವಿದ್ಯಾರ್ಥಿಗಳ ನಿದ್ದೆಗೆಡಿಸಿದೆ. ಈ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಕುಲಪತಿಗಳನ್ನು ಕೂಡಲೇ ವಜಾಗೊಳಿಸ ಬೇಕೆಂದು ಆಗ್ರಹಿಸಿದರು. ಕುಲಪತಿ ಹಾಗೂ ರಿಜಿಸ್ಟ್ರಾರ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಸಮಸ್ಯೆ ಬಗೆಹರಿಸದೇ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ನ ಜಿಲ್ಲಾಧ್ಯಕ್ಷ ವಿಜಯ್ ಕಾರ್ಯಾಧ್ಯಕ್ಷ ರವಿ ಕಟಿಕೆರೆ ನಗರಾಧ್ಯಕ್ಷ ರವಿ, ನಗರ ಉಪಾಧ್ಯಕ್ಷ ಆದಿತ್ಯ, ಸುಭಾನ್, ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್ ಮೊದಲಾದವರಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಸಿಇಓ-ಎಎಸ್ಪಿ: ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಕುವೆಂಪು ವಿವಿಯ ಕುಲಸಚಿವರು ಆಗಿರುವ ಶಿವಮೊಗ್ಗ ಜಿ.ಪಂ ಸಿಇಓ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ಹಾಗೂ ಹೆಚ್ಚುವರಿಗೆ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪನವರು ಭೇಟಿ ನೀಡಿದರು. ಪೀಠೋಪಕರಣ ಧ್ವಂಸಗೊಂಡಿದ್ದನ್ನು ವೀಕ್ಷಿಸಿದ ಎನ್.ಹೇಮಂತ್ ಅವರು, ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಚರ್ಚೆ ನಡೆಸಿದರು.ಘಟನೆ ಸಂಬಂಧ ಕುಲಪತಿ, ರಿಜಿಸ್ಟ್ರಾರ್ ಅವರಿಂದ ಮಾಹಿತಿ ಪಡೆದುಕೊಂಡರು. ಘಟನಾ ಸ್ಥಳಕ್ಕೆ ಶಿವಮೊಗ್ಗ ಎಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಪ್ರತಿಭಟನಾಕಾರರ ಜೊತೆ ಮಾತನಾಡಿದ ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಪ್ರತಿಭಟನಾನಿರತ ವಿದ್ಯಾರ್ಥಿ ಗಳ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ವಿದ್ಯಾರ್ಥಿಗಳ ಬೇಡಿಕೆಗಳೇನು: 1.ಕಳೆದ 5 ತಿಂಗಳ ಹಿಂದೆ ನಡೆದಿದ್ದ 1-3 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು. ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಜೆನ್ಯೂಯೆನ್ ಸರ್ಟಿಫಿಕೇಟ್ ವಿತರಣೆ ಮಾಡಬೇಕು. 2.ಏಕಾ ಏಕಿ ಏರಿಸಿರುವ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ ಹಾಗು ಪ್ರವೇಶ ಶುಲ್ಕವನ್ನು ಇಳಿಸಬೇಕು. 3.ಡಿಜಿಟೆಲ್ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಡಿಜಿಟೆಲ್ ಮೌಲ್ಯಮಾಪನವನ್ನು ಕೈಬಿಡಬೇಕು. 4. ಭ್ರಷ್ಟಾಚಾರದ ಆರೋಪ ಹಾಗು ವಿಶ್ವ ವಿದ್ಯಾಲಯದಲ್ಲಿ ಕಳಂಕ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ ತಕ್ಷಣ ವಜಾ ಮಾಡಬೇಕು 5. ಯು.ಯು.ಸಿ.ಎಮ್.ಎಸ್ ನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. 6. ವಿವಿ ಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸರ್ಕಾರವನ್ನು ದೂರದೆ ಸರಿಪಡಿಸುವ ವ್ಯವಸ್ಥೆ ಮಾಡಬೇಕು. 7.2021-22 ರ ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ ಹಾಗು ಪಲಿತಾಂಶದ ಬಗ್ಗೆ ಕೂಡಲೆ ಗಮನಹರಿಸಬೇಕು. 8.ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ಹಾಗು ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. 9. ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು. 10. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಎಚ್ಚರಿಸಿದರು.1
- “‘Shikhandi - The Warrior’ ಸಿನಿಮಾ ಬಿಡುಗಡೆಯ ಸನ್ನಿಹಿತದಲ್ಲಿ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ! 🎬🔥 🎥 Pola Movies ಬ್ಯಾನರ್ ಅಡಿಯಲ್ಲಿ ನಿರ್ಮಾಣ 🎬 ನಿರ್ದೇಶನ: ಗುರುಮೂರ್ತಿ 🎞️ ಸಹ ನಿರ್ದೇಶನ: ದಯಾಶಂಕರ್ 📷 DOP: ಸ್ವಾಮಿ 🎵 ಸಂಗೀತ: ಕಿನ್ನಲ್ ರಾಜ್ 🌍 5 ಭಾಷೆಗಳಲ್ಲಿ ರಿಲೀಸ್: ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ 🧠 ಮಂಗಳಮುಖಿಯರ ಜೀವನ ಮತ್ತು ಹೋರಾಟದ ಮೇಲೆ ಆಧಾರಿತ ಕಥೆ 💬 ಸಮಾಜಕ್ಕೆ ಬಲವಾದ ಸಂದೇಶ ನೀಡುವ ಪ್ರಯತ್ನ 👥 ತಾರಾಗಣ: Yuvaraj Gowda (ನಾಯಕ) Khyathi (ನಾಯಕಿ) Chandini (ಪ್ರಮುಖ ಪಾತ್ರ) 📅 ಬಿಡುಗಡೆ: ಮೇ 15, 2026 🎞️ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ 👉 ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿರುವ ಈ ಸಿನಿಮಾ ತಪ್ಪದೇ ನೋಡಿರಿ!”1
- ಕಡೂರು (ಬೀರೂರು): ಬೇಸಿಗೆ ರಜೆ ಹಿನ್ನೆಲೆಯಲ್ಲಿ ಊರಿಗೆ ಕಳಿಸಲಿಲ್ಲ ಎಂಬ ಸಣ್ಣದೊಂದು ಗಲಾಟೆಯ ನಡುವೆ ಪೊಲೀಸ್ ಅಧಿಕಾರಿಯ ಪತ್ನಿ ಮನನೊಂದು ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬೀರೂರು ಪಟ್ಟಣದ ಪೊಲೀಸ್ ಠಾಣೆಯ ಪಿಎಸೈ ಡಿ.ವಿ. ತಿಪ್ಪೇಶ್ ಅವರ ಪತ್ನಿ ಪದ್ಮ(35) ಮೃತ ದುರ್ದೈವಿಯಾಗಿದ್ದು. ಬೀರೂರು ಪಟ್ಟಣದ ರಾಜಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತಃ ತುಮಕೂರು ಜಿಲ್ಲೆಯವರಾದ ಪದ್ಮ ಮತ್ತು ದಾವಣಗೆರೆ ಮೂಲದ ತಿಪ್ಪೇಶ್ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಗೆ ಶಾಲೆ ರಜೆಯಿದ್ದು ಊರಿಗೆ ಕಳಿಸುವಂತೆ ಪತಿ ಪಿಎಸ್ಐ ತಿಪ್ಪೇಶ್ ಗೆ ಹೇಳಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಇರೋದ್ರಿಂದ ಊರಿಗೆ ಹೋಗ್ತೀನಿ ಎಂದಿದ್ದರು. ಆದರೆ, ಪತಿ ತಿಪ್ಪೇಶ್ ನೈಟ್ ಡ್ಯೂಟಿ ಇದೆ. ನಾಳೆ ಹೋಗುವಂತೆ ಎಂದು ತಿಳಿ ಹೇಳಿದ್ದರು. ಅಷ್ಟಕ್ಕೆ ಮಾತಿಗೆ ಮಾತು ಬೆಳೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ದಂಪತಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪತಿ ಮಕ್ಕಳನ್ನ ಊರಿಗೆ ಕಳಿಸಲಿಲ್ಲವೆಂದು ಆಕ್ರೋಶಗೊಂಡ ಪದ್ಮ ಕಳೆದ ರಾತ್ರಿ 12 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ರೋಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಕೌಟುಂಬಿಕವಾಗಿ ಸಣ್ಣದೊಂದು ವಿಚಾರದ ಮಾತಿನ ಚಕಮಕಿಯಿಂದಾಗಿ ತನ್ನ ಜೀವವನ್ನೇ ಬಲಿಕೊಟ್ಟಿರುವ ಪದ್ಮಾ ಅವರ ಆತ್ಮಹತ್ಯೆಯ ನಿರ್ಧಾರದ ಧಾರುಣ ಘಟನೆಯ ಬಗ್ಗೆ ಪೊಲೀಸ್ ಸಿಬ್ಬಂದಿಗಳು ಮತ್ತು ನಾಗರೀಕರು ಮಮ್ಮುಲ ಮರುಗಿದರು. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2
- ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ. ಇನ್ನು ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ ತಿಳಿ ಹೇಳಿದರು ಜಗಳ ನಿಲ್ಲಸದ ಮಹಿಳೆಯರು.1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ಶಿಗ್ಗಾವಿ : ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಿಸಿದ ಮೀಸಲಾತಿಯನ್ನು ಪುನಹ ಪರಿಶಿಷ್ಟ ಜಾತಿಗೆ ಜಾರಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ತಾಲೂಕಾ ಪರಿಶಿಷ್ಠ ಜಾತಿಯ ವಿವಿಧ ಮುಖಂಡರಿAದ ಮನವಿ ಅರ್ಪಿಸಿ ಒತ್ತಾಯಿಲಾಯಿತು. ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಇದು ಈ ಹಿಂದೆ ೨೦೨೨ ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ ೧೭ರಷ್ಟು ಮೀಸಲಾತಿಯನ್ನ ಘೋಷಿಸಿ ಅದರಲ್ಲಿ ಒಳ ಮೀಸಲಾತಿಗಾಗಿ ಅನುಕೂಲ ಮಾಡಿಕೊಟ್ಟಿತ್ತು ಆದರೆ ಪ್ರಸ್ತುತ ಸರ್ಕಾರವು ೧೭% ಘೋಷಣೆ ಮಾಡಿದಂತ ಮೀಸಲಾತಿಯನ್ನು ಶೇಕಡ ೧೫% ಗೆ ಇಳಿಸಿ ಅದರಲ್ಲಿಯೇ ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ ಇದರಿಂದಾಗಿ ಶೇಕಡ ಎರಡರನ್ನು ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದ್ದರಿಂದ ಬಹಳಷ್ಟು ಅನ್ಯಾಯವಾಗುತ್ತಿದ್ದು ಪ್ರಸ್ತುತ ಕರ್ನಾಟಕವು ಒಬಿಸಿಗಳಿಗೆ ೩೨%, ಎಸ್‌ಸಿ ಗಳಿಗೆ ೧೫% ಮತ್ತು ಎಸ್‌ಟಿ ಗಳಿಗೆ ೩% ಒಟ್ಟು ೫೦% ಮೀಸಲಾತಿಯನ್ನು ಒದಗಿಸುತ್ತದೆ. ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸಲು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಂವಿಧಾನದ ಶೆಡ್ಯೂಲ್ ೯ ರ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಹೆಚ್ಚಿಸುವುದು. ಶೆಡ್ಯೂಲ್ ೯ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲ್ಪಟ್ಟಿರುವ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ. ಶೆಡ್ಯೂಲ್ ೯ ರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕಾನೂನುಗಳು ಕೃಷಿ ಅಥವಾ ಭೂಮಿಗೆ ಸಂಬAಧಿಸಿದ್ದರೂ ಸಹ, ಮೀಸಲಾತಿಯಂತಹ ಇತರ ವಿಷಯಗಳು ಪಟ್ಟಿಯಲ್ಲಿವೆ. ಆದ್ದರಿಂದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಘೋಷಿಸಿದಂತಹ ಶೇಕಡ ೧೭ರ ಮೀಸಲಾತಿಯನ್ನೇ ಪುನಹ ಜಾರಿಗೊಳಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಈ ಮೂಲಕ ಒತ್ತಾಯಿಸುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಸ್ ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಕರೆಪ್ಪ ಕಟ್ಟಿಮನಿ, ನೀಲವ್ವ ಕಾಲವಾಡ, ಅಶೋಕ ಕಾಳೆ, ರಾಮಚಂದ್ರ ಧಾರವಾಡ, ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ ಬ್ಯಾಹಟ್ಟಿ, ಬಿ ಎಫ್ ಕಟ್ಟಿಮನಿ, ದುರ್ಗಪ್ಪ ಪೂಜಾರ, ಚಂದ್ರಶೇಖರ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಆನಂದ ಬಂಡಿವಡ್ಡರ, ಸಂತೋಷ ಕಟ್ಟಿಮನಿ ಸೇರಿದಂತೆ ಇತರ ಮುಖಂಡರು ಇದ್ದರು.1
- Post by Suresh Belagere1
- ಬಳ್ಳಾರಿಯ ಪ್ರತಿಭಾವಂತ ಮಂಗಳಮುಖಿ ಕಲಾವಿದೆ ಚಾಂದಿನಿ ಅವರು ‘Shikhandi’ ಸಿನಿಮಾದಲ್ಲಿ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ. 🎬🔥 ಈ ಚಿತ್ರವು ಮಹಾಭಾರತದ ಶಿಖಂಡಿ ಪಾತ್ರದಿಂದ ಪ್ರೇರಿತವಾಗಿದ್ದು, ಆಧುನಿಕ ಕಥಾಹಂದರದೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಮತ್ತು ಕಾಮಿಡಿ ಮಿಶ್ರಣವಾಗಿದೆ. 🎭 ಚಾಂದಿನಿ ಅವರು ‘ಎಲ್ಲಮ್ಮ’ ಮತ್ತು ‘ಜೋಗ್ತಿ’ ಪಾತ್ರಗಳಲ್ಲಿ 🧠 ಸಮಾಜದಲ್ಲಿ ಮಂಗಳಮುಖಿಯರ ಜೀವನ ಹೋರಾಟದ ಮೇಲೆ ಬೆಳಕು 🕉️ ‘ಅರ್ಧನಾರೀಶ್ವರ’ ತತ್ವದ ಸ್ಪರ್ಶ 🎬 ನಿರ್ದೇಶನ: ಗುರುಮೂರ್ತಿ ವಿ. 🎥 ನಿರ್ಮಾಣ: ಪೋಲಾ ಪ್ರವೀಣ್ ಕುಮಾರ್ 👥 ತಾರಾಗಣ: ಯುವರಾಜ್ ಗೌಡ, ಖ್ಯಾತಿ, ನೀತು ವನಜಾಕ್ಷಿ, ದೀಪಕ್ ಶೆಟ್ಟಿ, ವಿಜಯ್ ಚೆಂಡೂರ್ 📅 ರಿಲೀಸ್: ಮೇ 15, 2026 👉 ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ವಿಭಿನ್ನ ಸಿನಿಮಾ!”2
- ಮಂಡ್ಯ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದ ಬಸ್ ನಲ್ಲಿ ಸೀಟಿಗಾಗಿ ವಿದ್ಯಾರ್ಥಿನಿ ಮೇಲೆ 3 ಮಹಿಳೆಯರು ಹಲ್ಲೆ ಮಾಡಿದ್ದಾರೆ .1