ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನಲ್ಲಿ ಅವ್ಯವಹಾರದ ಆರೋಪ ಹಾಲಿ ಅಧ್ಯಕ್ಷರಿಂದ ತನಿಖೆಗೆ ಒತ್ತಾಯ..! ಮಂಗಳೂರು:ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್ 15 ವರ್ಷಗಳ ಕಾಲ ನೋಂದಣಿ ನವೀಕರಣವಿಲ್ಲದೆ ಕಾರ್ಯನಿರ್ವಹಿಸಿದ್ದು, ಅಲ್ಯುಮ್ನಿಯೇ ಅಲ್ಲದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದಲೂ ಕಡ್ಡಾಯವಾಗಿ ಸಂಗ್ರಹಿಸಲಾದ ಶುಲ್ಕದ ಹಣದ ಬಳಕೆಯಲ್ಲಿ ಗಂಭೀರ ಅಕ್ರಮಗಳು ನಡೆದಿದೆ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳ ನಿಯೋಗ ರಚಿಸಿ ತನಿಖೆ ನಡೆಸಬೇಕು ಎಂದು ಮಂಗಳಾ ಅಲ್ಯುಮ್ನಿ ಚುನಾಯಿತ ಅಧ್ಯಕ್ಷರಾದ ರಾಮಕೃಷ್ಣ ರಾವ್ ಒತ್ತಾಯಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನ ವಿಶೇಷ ಸಭೆಯನ್ನು ಸೆಪ್ಟೆಂಬರ್ 19, 2026ರಂದು ನಡೆಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಈ ನಡುವೆ ಸಂಘದ ನೋಂದಣಿ 2010ರ ಬಳಿಕ ನವೀಕರಣಗೊಂಡಿಲ್ಲ ಎಂಬ ಆರೋಪ ಸೇರಿದಂತೆ ಹಲವು ಗಂಭೀರ ಆರ್ಥಿಕ ಮತ್ತು ಆಡಳಿತಾತ್ಮಕ ಅಕ್ರಮಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ಸಂಗ್ರಹ, ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಡ್ಡಾಯ ಶುಲ್ಕ ಪುಸ್ತಕದಲ್ಲೇ ಅಲ್ಯುಮ್ನಿ ಅಸೋಸಿಯೇಷನ್ ಶುಲ್ಕವನ್ನು ಸೇರಿಸಿ, ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುವ ಮುನ್ನವೇ ಹಣ ಪಾವತಿಸುವಂತೆ ಮಾಡಲಾಗಿತ್ತು ಅನ್ನುವ ಆರೋಪವೂ ಇದೆ. ಅಲ್ಯುಮ್ನಿಯಾಗುವ ಮುನ್ನವೇ ವಿದ್ಯಾರ್ಥಿಗಳಿಂದ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಿಸಿರುವುದು ಪ್ರಶ್ನೆಗೆ ಕಾರಣವಾಗಿದೆ. ಸಂಘದ ಬೈಲಾ ಪ್ರಕಾರ ಸದಸ್ಯತ್ವ ಶುಲ್ಕ ಗರಿಷ್ಠ ರೂ.200 ಇರಬೇಕೆಂದು ಹೇಳಲಾಗಿದ್ದರೂ, ವಿದ್ಯಾರ್ಥಿಗಳಿಂದ ತಲಾ ರೂ.350 ಸಂಗ್ರಹಿಸಲಾಗಿದೆ . ಈ ಹೆಚ್ಚುವರಿ ಮೊತ್ತದ ಸಂಗ್ರಹ ಮತ್ತು ವರ್ಗಾವಣೆಗೆ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಅಧಿಕಾರಿಗಳ ಜವಾಬ್ದಾರಿಯನ್ನೂ ಪರಿಶೀಲಿಸಬೇಕಿದೆ. ಸತತವಾಗಿ ಕಾರ್ಯನಿರ್ವಹಿಸಿದ ವಿಶ್ವವಿದ್ಯಾಲಯದ ಮುಖ್ಯ ಹಣಕಾಸು ಅಧಿಕಾರಿಗಳ ಅನುಮತಿ ಮತ್ತು ಮೇಲ್ವಿಚಾರಣೆಯಿಲ್ಲದೆ ವಿದ್ಯಾರ್ಥಿಗಳಿಂದ ಈ ರೀತಿಯ ಹಣ ಸಂಗ್ರಹಿಸಲು ಸಾಧ್ಯವಿಲ್ಲ. ನೋಂದಣಿ ನವೀಕರಣವಿಲ್ಲದ ಸಂಘದ ಖಾತೆಗೆ ವಿದ್ಯಾರ್ಥಿಗಳ ಹಣ ವರ್ಗಾವಣೆಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕಿದೆ. ನೋಂದಣಿ ನವೀಕರಣವಿಲ್ಲದೆ ಸಂಘದ ಬ್ಯಾಂಕ್ ಖಾತೆಗಳು 16 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಸಂಬಂಧಪಟ್ಟ ಬ್ಯಾಂಕ್‌ಗಳು ಕಡ್ಡಾಯ ಕೆವೈಸಿ ಹಾಗೂ ಸಂಸ್ಥೆಯ ನೋಂದಣಿ ದಾಖಲೆಗಳ ಪರಿಶೀಲನೆಯನ್ನು ಹೇಗೆ ನಡೆಸಿದೆ. ಈ ಕುರಿತು ತನಿಖೆ ನಡೆಯಬೇಕಿದೆ ಅನ್ನುವ ಆಗ್ರಹವನ್ನು ಮಾಡಿದ್ದಾರೆ. 2006ರಲ್ಲಿ ಸ್ಥಾಪನೆಯಾದ ಸಂಘದ ನೋಂದಣಿ 2010ರ ಬಳಿಕ ನವೀಕರಣಗೊಂಡಿಲ್ಲ. ಬಳಿಕವೂ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಿದೆ . ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಸಂಘದ ಕಾನೂನುಬದ್ಧ ಸ್ಥಿತಿಯನ್ನು ಸದಸ್ಯರಿಗೆ ತಿಳಿಸಲಾಗಿಲ್ಲ. ಸಂಘದಲ್ಲಿ ಕಡ್ಡಾಯವಾಗಿ ಇರಬೇಕಾದ ಸದಸ್ಯರ ನೋಂದಣಿ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಒಟ್ಟು ಹಣ, ಬ್ಯಾಂಕ್ ಖಾತೆಗಳ ಮೂಲಕ ನಡೆದ ವಹಿವಾಟು ಹಾಗೂ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳು ಲಭ್ಯವಿಲ್ಲ. ಈ ಆರೋಪಗಳು ಬೆಳಕಿಗೆ ಬಂದಿರುವ ಸಂದರ್ಭದಲ್ಲಿ ಸೆಪ್ಟೆಂಬರ್ 19ರಂದು ವಿಶೇಷ ಸಭೆ ಕರೆಯಲಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಾಮಾನ್ಯ ಸದಸ್ಯರು ಸಂಘದ ಪದಾಧಿಕಾರಿ ಸ್ಥಾನಗಳಿಗೆ ಸ್ಪರ್ಧಿಸುವುದನ್ನು ನಿರ್ಬಂಧಿಸುವ ರೀತಿಯಲ್ಲಿ ಬೈಲಾ ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ . ಇದರಿಂದ ಹಾಲಿ ಆಡಳಿತ ಮಂಡಳಿಗೆ ಮುಂದುವರಿಯಲು ಅನುಕೂಲವಾಗಲಿದೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಅನ್ನುವ ಆರೋಪ ಮಾಡಿರುವ ಅವರು ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನ ಸುಮಾರು 20 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕೇವಲ ಮೂವರು ಮಾತ್ರ ಅಧ್ಯಕ್ಷರಾಗಿ ಮುಂದುವರಿದಿರುವುದು ಸಂಘದ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಲವರ ಹಿಡಿತದಲ್ಲಿತ್ತು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿತ್ತೇ? ಸಾಮಾನ್ಯ ಸದಸ್ಯರಿಗೆ ನಾಯಕತ್ವದ ಅವಕಾಶ ನೀಡಲಾಗಿತ್ತೇ? ಎಂಬ ಪ್ರಶ್ನೆಗಳೂ ಇದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಿ ಸಂಘಗಳ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸೆ.19ರ ವಿಶೇಷ ಸಭೆಗೆ ತಡೆ ನೀಡಬೇಕು. ವಿಶ್ವವಿದ್ಯಾಲಯದ ಹಣಕಾಸು ವಿಭಾಗ, ಸಂಘದ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಬ್ಯಾಂಕ್‌ಗಳ ಪಾತ್ರದ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರವನ್ನು ಪರಿಶೀಲಿಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹವವನ್ನು ಮಾಡಿದ್ದಾರೆ.

- ಕಡಬದಲ್ಲಿ ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಬಹುದೆಂಬ ಆಮಿಷ: ಕೇಸ್ ದಾಖಲು ಕಡಬ ಠಾಣಾ ವ್ಯಾಪ್ತಿಯ ಕಡಬ ಗ್ರಾಮದ ಅಂಬೇಡ್ಕರ್ ಭವನ ಎಂಬಲ್ಲಿ, ಹಾವೇರಿ ಮೂಲದ KINGS Bazaar ಎಂಬ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಶೀಘ್ರವಾಗಿ ಹಣಗಳಿಸಬಹುದಾಗಿ, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು ಹಾಗೂ ಜನರನ್ನು ಸದ್ರಿ ಯೋಜನೆಗೆ ಜನರನ್ನು ಸೇರಿಸಿದಲ್ಲಿ ಕಮಿಷನ್ ಹಣ ಸಂಪಾದಿಸಬಹುದಾಗಿ ಭರವಸೆ ನೀಡಿ, ಅಕ್ರಮವಾಗಿ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸಿ ಹಣವನ್ನು ಸ್ವೀಕರಿಸುವ ಯೋಜನೆ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ KINGS Bazaar ಸಂಸ್ಥೆ, ಸಂಸ್ಥೆಯ ಮಾಲಿಕರು ಮತ್ತು ಯೋಜನೆಯನ್ನು ಸ್ಥಳೀಯವಾಗಿ ನಡೆಸುತ್ತಿದ್ದ ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50)ಹಾಗೂ ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್ ಎಸ್ (55), ಕಿರಣ ಕುಮಾರ್ (21) ಹಾಗೂ ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ ಹೆಚ್ (42), ಪುತ್ತೂರು ನಿವಾಸಿ ಸಂದೇಶ್ ಎಂಬವರುಗಳ ವಿರುದ್ಧ ಕಡಬ ಪೊಲೀಸ್ ಠಾಣಾ ಅ.ಕ್ರ: 100/2026, ಕಲಂ. 4, 5, 6 PRIZE CHIT & MONEY CIR.SCHEMES (BANNING) ACT, 1978 ರಂತೆ ಸ್ವ ಪಿರ್ಯಾದಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.1
- ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನಲ್ಲಿ ಅವ್ಯವಹಾರದ ಆರೋಪ ಹಾಲಿ ಅಧ್ಯಕ್ಷರಿಂದ ತನಿಖೆಗೆ ಒತ್ತಾಯ..! ಮಂಗಳೂರು:ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್ 15 ವರ್ಷಗಳ ಕಾಲ ನೋಂದಣಿ ನವೀಕರಣವಿಲ್ಲದೆ ಕಾರ್ಯನಿರ್ವಹಿಸಿದ್ದು, ಅಲ್ಯುಮ್ನಿಯೇ ಅಲ್ಲದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದಲೂ ಕಡ್ಡಾಯವಾಗಿ ಸಂಗ್ರಹಿಸಲಾದ ಶುಲ್ಕದ ಹಣದ ಬಳಕೆಯಲ್ಲಿ ಗಂಭೀರ ಅಕ್ರಮಗಳು ನಡೆದಿದೆ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳ ನಿಯೋಗ ರಚಿಸಿ ತನಿಖೆ ನಡೆಸಬೇಕು ಎಂದು ಮಂಗಳಾ ಅಲ್ಯುಮ್ನಿ ಚುನಾಯಿತ ಅಧ್ಯಕ್ಷರಾದ ರಾಮಕೃಷ್ಣ ರಾವ್ ಒತ್ತಾಯಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನ ವಿಶೇಷ ಸಭೆಯನ್ನು ಸೆಪ್ಟೆಂಬರ್ 19, 2026ರಂದು ನಡೆಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಈ ನಡುವೆ ಸಂಘದ ನೋಂದಣಿ 2010ರ ಬಳಿಕ ನವೀಕರಣಗೊಂಡಿಲ್ಲ ಎಂಬ ಆರೋಪ ಸೇರಿದಂತೆ ಹಲವು ಗಂಭೀರ ಆರ್ಥಿಕ ಮತ್ತು ಆಡಳಿತಾತ್ಮಕ ಅಕ್ರಮಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ಸಂಗ್ರಹ, ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಡ್ಡಾಯ ಶುಲ್ಕ ಪುಸ್ತಕದಲ್ಲೇ ಅಲ್ಯುಮ್ನಿ ಅಸೋಸಿಯೇಷನ್ ಶುಲ್ಕವನ್ನು ಸೇರಿಸಿ, ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುವ ಮುನ್ನವೇ ಹಣ ಪಾವತಿಸುವಂತೆ ಮಾಡಲಾಗಿತ್ತು ಅನ್ನುವ ಆರೋಪವೂ ಇದೆ. ಅಲ್ಯುಮ್ನಿಯಾಗುವ ಮುನ್ನವೇ ವಿದ್ಯಾರ್ಥಿಗಳಿಂದ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಿಸಿರುವುದು ಪ್ರಶ್ನೆಗೆ ಕಾರಣವಾಗಿದೆ. ಸಂಘದ ಬೈಲಾ ಪ್ರಕಾರ ಸದಸ್ಯತ್ವ ಶುಲ್ಕ ಗರಿಷ್ಠ ರೂ.200 ಇರಬೇಕೆಂದು ಹೇಳಲಾಗಿದ್ದರೂ, ವಿದ್ಯಾರ್ಥಿಗಳಿಂದ ತಲಾ ರೂ.350 ಸಂಗ್ರಹಿಸಲಾಗಿದೆ . ಈ ಹೆಚ್ಚುವರಿ ಮೊತ್ತದ ಸಂಗ್ರಹ ಮತ್ತು ವರ್ಗಾವಣೆಗೆ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಅಧಿಕಾರಿಗಳ ಜವಾಬ್ದಾರಿಯನ್ನೂ ಪರಿಶೀಲಿಸಬೇಕಿದೆ. ಸತತವಾಗಿ ಕಾರ್ಯನಿರ್ವಹಿಸಿದ ವಿಶ್ವವಿದ್ಯಾಲಯದ ಮುಖ್ಯ ಹಣಕಾಸು ಅಧಿಕಾರಿಗಳ ಅನುಮತಿ ಮತ್ತು ಮೇಲ್ವಿಚಾರಣೆಯಿಲ್ಲದೆ ವಿದ್ಯಾರ್ಥಿಗಳಿಂದ ಈ ರೀತಿಯ ಹಣ ಸಂಗ್ರಹಿಸಲು ಸಾಧ್ಯವಿಲ್ಲ. ನೋಂದಣಿ ನವೀಕರಣವಿಲ್ಲದ ಸಂಘದ ಖಾತೆಗೆ ವಿದ್ಯಾರ್ಥಿಗಳ ಹಣ ವರ್ಗಾವಣೆಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕಿದೆ. ನೋಂದಣಿ ನವೀಕರಣವಿಲ್ಲದೆ ಸಂಘದ ಬ್ಯಾಂಕ್ ಖಾತೆಗಳು 16 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಸಂಬಂಧಪಟ್ಟ ಬ್ಯಾಂಕ್‌ಗಳು ಕಡ್ಡಾಯ ಕೆವೈಸಿ ಹಾಗೂ ಸಂಸ್ಥೆಯ ನೋಂದಣಿ ದಾಖಲೆಗಳ ಪರಿಶೀಲನೆಯನ್ನು ಹೇಗೆ ನಡೆಸಿದೆ. ಈ ಕುರಿತು ತನಿಖೆ ನಡೆಯಬೇಕಿದೆ ಅನ್ನುವ ಆಗ್ರಹವನ್ನು ಮಾಡಿದ್ದಾರೆ. 2006ರಲ್ಲಿ ಸ್ಥಾಪನೆಯಾದ ಸಂಘದ ನೋಂದಣಿ 2010ರ ಬಳಿಕ ನವೀಕರಣಗೊಂಡಿಲ್ಲ. ಬಳಿಕವೂ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಿದೆ . ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಸಂಘದ ಕಾನೂನುಬದ್ಧ ಸ್ಥಿತಿಯನ್ನು ಸದಸ್ಯರಿಗೆ ತಿಳಿಸಲಾಗಿಲ್ಲ. ಸಂಘದಲ್ಲಿ ಕಡ್ಡಾಯವಾಗಿ ಇರಬೇಕಾದ ಸದಸ್ಯರ ನೋಂದಣಿ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಒಟ್ಟು ಹಣ, ಬ್ಯಾಂಕ್ ಖಾತೆಗಳ ಮೂಲಕ ನಡೆದ ವಹಿವಾಟು ಹಾಗೂ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳು ಲಭ್ಯವಿಲ್ಲ. ಈ ಆರೋಪಗಳು ಬೆಳಕಿಗೆ ಬಂದಿರುವ ಸಂದರ್ಭದಲ್ಲಿ ಸೆಪ್ಟೆಂಬರ್ 19ರಂದು ವಿಶೇಷ ಸಭೆ ಕರೆಯಲಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಾಮಾನ್ಯ ಸದಸ್ಯರು ಸಂಘದ ಪದಾಧಿಕಾರಿ ಸ್ಥಾನಗಳಿಗೆ ಸ್ಪರ್ಧಿಸುವುದನ್ನು ನಿರ್ಬಂಧಿಸುವ ರೀತಿಯಲ್ಲಿ ಬೈಲಾ ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ . ಇದರಿಂದ ಹಾಲಿ ಆಡಳಿತ ಮಂಡಳಿಗೆ ಮುಂದುವರಿಯಲು ಅನುಕೂಲವಾಗಲಿದೆ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಅನ್ನುವ ಆರೋಪ ಮಾಡಿರುವ ಅವರು ಮಂಗಳಾ ಅಲ್ಯುಮ್ನಿ ಅಸೋಸಿಯೇಷನ್‌ನ ಸುಮಾರು 20 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕೇವಲ ಮೂವರು ಮಾತ್ರ ಅಧ್ಯಕ್ಷರಾಗಿ ಮುಂದುವರಿದಿರುವುದು ಸಂಘದ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಲವರ ಹಿಡಿತದಲ್ಲಿತ್ತು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿತ್ತೇ? ಸಾಮಾನ್ಯ ಸದಸ್ಯರಿಗೆ ನಾಯಕತ್ವದ ಅವಕಾಶ ನೀಡಲಾಗಿತ್ತೇ? ಎಂಬ ಪ್ರಶ್ನೆಗಳೂ ಇದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಿ ಸಂಘಗಳ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸೆ.19ರ ವಿಶೇಷ ಸಭೆಗೆ ತಡೆ ನೀಡಬೇಕು. ವಿಶ್ವವಿದ್ಯಾಲಯದ ಹಣಕಾಸು ವಿಭಾಗ, ಸಂಘದ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಬ್ಯಾಂಕ್‌ಗಳ ಪಾತ್ರದ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರವನ್ನು ಪರಿಶೀಲಿಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹವವನ್ನು ಮಾಡಿದ್ದಾರೆ.1
- ಕುಂಜತ್‌ಬೈಲ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಂಗಳೂರು: ಸುರತ್ಕಲ್ ಹೋಬಳಿಯ ಕುಂಜತ್ತಬೈಲ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ನಿಯೋಗವು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆ.21ರಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ನಿಯೋಗವು ಸಚಿವರನ್ನು ಭೇಟಿ ಮಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್, ಗೌರವಾಧ್ಯಕ್ಷ ರಘುನಾಥ ಅತ್ತಾವರ, ಉಪಾಧ್ಯಕ್ಷ ಅಣ್ಣು ಕುಂಜತ್ತ್ ಬೈಲ್, ಚೈತನ್ಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸೂಟರ್ ಪೇಟೆ, ಜಿಲ್ಲಾ ವಕ್ತಾರ ರಾಮ್ ಕುಮಾರ್ ಹಾಗೂ ಸದಸ್ಯ ಅಕ್ಷಯ್ ಗೇರುಕಟ್ಟೆ ಉಪಸ್ಥಿತರಿದ್ದರು.1
- ಈದ್ ಮಿಲಾದ್ ಸಂಭ್ರಮದ ಆಚರಣೆ : ರಕ್ತದಾನ, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳು. ಯುವ ಮುಖಂಡ ಬಿ.ಎಸ್ ಗಣೇಶ್ ಬಾಗಿ ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಾವಿರಾರು ಮಂದಿಗೆ ಮಜ್ಜಿಗೆ ವಿತರಿಸಲಾಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾ ಕಾರ್ಯವನ್ನು ಅಭಿನಂದಿಸಿದರು. ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು. ಅನ್ನದಾನ, ತಂಪು ಪಾನೀಯ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು. ಮಧ್ಯಾಹ್ನ ಸುಮಾರು ೩.೩೦ ಸಮಯಕ್ಕೆ ಹೊಳೆಹೊನ್ನೂರು ವೃತ್ತದಿಂದ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್‌ರವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಮಹಮ್ಮದ್ ಫೈಗಂಬರರ ಜನ್ಮಸ್ಥಳ ಮೆಕ್ಕಾ-ಮದೀನಾ ಮಾದರಿಗಳು, ಹಸಿರು ದ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು. ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಮಹಾತ್ಮಗಾಂಧಿ ವೃತ್ತ ಮೂಲಕ ಸಾದತ್ ದರ್ಗಾವರೆಗೂ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆಗಳ ಮಸೀದಿಗಳ ಧರ್ಮಗುರುಗಳು, ಆಡಳಿತ ಮಂಡಳಿಯವರು, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಹಬ್ಬದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಅಲಂಕಾರ ಕೈಗೊಳ್ಳಲಾಗಿತ್ತು. ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು3
- ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ1
- ಶಿಕಾರಿಪುರ. 'ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)' ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್ ಶಿರಾಳಕೊಪ್ಪ. ಶಿಕಾರಿಪುರ. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26-08-2026ರಿಂದ 06-09-20265 ತನಕ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದೆ. ಶಿಕಾರಿಪುರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಹುಸೇನ್ ಅಧ್ಯಕ್ಷ ಶಿರಾಳಕೊಪ್ಪ ಮಾತನಾಡಿ, ಪ್ರವಾದಿಮುಹಮ್ಮದ್(ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಮೇಲೆ ಸ್ಥಾಪಿತವಾಗಿದೆ. ಅವರು ಜನದ ಮನಸ್ಸನ್ನು ಸಂಸ್ಕರಿಸಿ, ಅವರ ನೈತಿಕತೆ ಮತ್ತು ಚಾರಿತ್ಯವನ್ನು ಶುದ್ದೀಕರಿಸುವ ಮೂಲಕ ವ್ಯಕ್ತಿಗಳನ್ನು ಸಮಾಜವನ್ನು ಪರಿವರ್ತಿಸಿದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು ಹಾಗೂ ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳನ್ನು ಬೆಳಗಿಸಿದ ಕ್ರಾಂತಿಯಾಗಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಪ್ರವಾದಿಮುಹಮ್ಮದ್(ಸ)ರವರು ಈ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಅಭಿಯಾನದ ಪ್ರಯುಕ್ತ, ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಶ್ರೀ ಯೋಗೇಶ್ ಮಾಸ್ಟರ್ ಅವರು ಬರೆದ 'ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್(ಸ)' ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ಬರೆದ 'ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)' ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, 'ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)' ಎಂಬ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ. ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ. ಪ್ರವಚನ, ಸೀರತ್ ಎಕ್ಸಿಬಿಶನ್, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಕ್ಯಾಲಿಗಳು ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿರುವುದು ಎಂದರು. ಜಕೀ ಅಹ್ಮದ್ ಆಫ್ರಿದಿ ಕಾರ್ಯದರ್ಶಿ ಶಿರಾಳಕೊಪ್ಪ ಮಾತನಾಡಿ, ರೋಗಿಗಳ ಭೇಟಿ ಮತ್ತು ಹಣ್ಣು ವಿತರಣೆ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಣೆ ಬಡ ಮತ್ತು ಅಗತ್ಯವಿರುವ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮನೆ ನಿರ್ಮಾಣಕ್ಕೆ ಸಹಾಯ - ಇತ್ತೀಚೆಗೆ ಮೇಲ್ಚಾವಣಿಯ ಸ್ಲಾಬ್ ಹಾಕಿಸಿದ ಸೇವಾ ಕಾರ್ಯಹಾಗೂ ಮುಸ್ಲಿಮರು ಮತ್ತು ಮುಸ್ಲಿಮೇತರರಿಗಾಗಿ ರಕ್ತದಾನ ಶಿಬಿರ ಮತ್ತು ರೇಷನ್ ಕಿಟ್ ವಿತರಣೆ, ಪರಿಸರ ಮತ್ತು ಸ್ವಚ್ಛತಾ ಕಾರ್ಯ ಶಾಲೆ ಆಸ್ಪತ್ರೆ ಗ್ರಂಥಾಲಯ ಮುಂತಾದ ಸ್ಥಳಗಳಲ್ಲಿ ಸೀರತ್ ಪುಸ್ತಕಗಳ ವಿತರಣೆ, ಉಲಾಮ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಭೇಟಿ,ಮೊಹ್ಸಿನೇ ಇನ್ಸಾನಿಯತ್ ಪುಸ್ತಕವನ್ನು ಕಾರ್ಯಕರ್ತರು ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸುವುದು, ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ಸ್ಪರ್ಧೆಗಳು ಸಂದೇಶಗಳನ್ನು ಸೇವಾ ಕಾರ್ಯಗಳ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿಸುವುದು ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸಿಬ್ ಗತ್ ಉಲ್ಲಾ ಕಾರ್ಯಕರ್ತರು,ಅಬ್ದುಲ್ ಗಪೂರ್ ಸ್ಥಾನೀಯ ಅಧ್ಯಕ್ಷರು,ಶಿಕಾರಿಪುರ, ಜಾಕಿರ್ ಹುಸೇನ್ ಸ್ಥಾನೀಯ ಅಧ್ಯಕ್ಷರು, ಚಿಕ್ಕ ಜಂಬೂರು ಅಬ್ದುಲ್ ಕಬೀರ್ ಕಾರ್ಯಕರ್ತರು, ಅಬ್ದುಲ್ ರೆಹಮಾನ್ ಸ್ಥಾಯಿ ಕಾರ್ಯದರ್ಶಿ ಎಸ್.ಐ.ಒ. ಸಂಘಟನೆ ಶಿರಾಳಕೊಪ್ಪ ಉಪಸ್ಥಿತರಿದ್ದರು.1
- ಕಡಬದಲ್ಲಿ ಆಸಿಡ್ ದಾಳಿ ಪ್ರಕರಣ ಆರೋಪಿಗೆ ಶಿಕ್ಷೆ ಪ್ರಕಟ: ಕೋರ್ಟ್ ಹೇಳಿದ್ದೇನು? ಕಡಬ ಪೊಲೀಸ್ ಠಾಣಾ ಅ. ಕ್ರ : 06/2020, ಕಲಂ : 354A, 509, 504, 506, 448, 307, 326A IPC ಆಸಿಡ್ ದಾಳಿ ಪ್ರಕರಣದಲ್ಲಿ ತನಿಖೆ ನಡೆಸಿದ, ಪ್ರಕರಣದ ಆಗಿನ ತನಿಖಾಧಿಕಾರಿಗಳು ಹಾಗೂ ಪುತ್ತೂರು ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕರಾಗಿದ್ದ ಕುಸುಮಧರ ರವರು ಪ್ರಕರಣದ ಆರೋಪಿತನಾಗಿದ್ದ ಕಡಬ ಕೊಡಿoಬಳ ನಿವಾಸಿ ಜಯಾನಂದ. ಕೆ (60) ಎಂಬಾತನ ವಿರುದ್ದ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ಮಂಗಳೂರು (ಪೀಠಸಿನ ಪುತ್ತೂರು ) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ್ ರವರು ರವರು ಆರೋಪಿಗೆ * ಕಲಂ 326A IPC ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.3,00,000/- ದಂಡ (ದಂಡ ಪಾವತಿಸಲು ವಿಫಲವಾದಲ್ಲಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ). * ಕಲಂ 504 IPC ಅಡಿಯಲ್ಲಿ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ರೂ.5,000/- ದಂಡ (ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ) ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಕೃಷ್ಣವೇಣಿ, ಹರಿಶ್ಚಂದ್ರ ಉದ್ಯವರ್, ಪ್ರಕಾಶ್ ಚಂದ್ರ ಶೆಟ್ಟಿ, ಶ್ರೀಮತಿ ಜಯಂತಿ. ಕೆ ರವರು ಮಾನ್ಯ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿರುತ್ತಾರೆ.1
- ಅಬ್ಬಿಕೊಲ್ಲಿ ಸಮೀಪ ಪ್ರವಾಸಿ ಟಿಟಿ ವಾಹನ ಮೇಲೆ ಮಗುಚಿದ ಲಾರಿ, ಹಲವರಿಗೆ ಗಾಯ ಅಬ್ಬಿಕೊಲ್ಲಿ ಜಲಪಾತದ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ಗುಜರಾತಿಯ ಅಹಮದಾಬಾದ್ ನಿವಾಸಿಗಳು ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಅಬ್ಬಿಕೊಲ್ಲಿ ಜಲಪಾತ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಅಪಘಾತ ಸಂಭವಿಸಿದೆ.1