logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.

1 hr ago
user_Gopala Reddy R N
Gopala Reddy R N
Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
1 hr ago

ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ:- ಬಾಗೇಪಲ್ಲಿ:ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ನೇರವಾಗಿ ಸವಲತ್ತು ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎಸ್ಸಿ ನಿಗಮದಿಂದ ಕೊಳವೆಬಾವಿ ಕೊರೆಯಿಸಿರುವ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್​, ಮೋಟಾರ್​, ಕೇಬಲ್​, ಪೈಪ್​ ವಿವಿಧ ಸಕಲರಣೆ ವಿತರಿಸಿ ಮಾತನಾಡಿ, ರೈತರಿಗೆ ನೀಡುವ ಯೋಜನೆಗಳಿಗೆ ಅಧಿಕಾರಿಗಳಾಗಲೀ ಅಥವಾ ದಲ್ಲಾಳಿಗಳಿಗಾಗಲೀ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ನೀಡಿದರೆ ಮತ್ತೊಂದು ಕೊಳವೆಬಾವಿ ಉಚಿತವಾಗಿ ಕೊರೆಯಿಸಲು ನಾವು ಸಿದ್ಧರಿದ್ದೇವೆ. ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ರೈತರಿಗೂ ತಿಳಿಯಬೇಕಿದೆ. ಎಸ್ಸಿ ನಿಗಮದಿಂದ 16 ರೈತರಿಗೆ 4.25 ಲಕ್ಷ ರೂ. ವೆಚ್ಚ ಕರ್ಚು ಮಾಡಿ ಕೊಳವೆಬಾವಿ ಕೊರೆದು ಸಲಕರಣೆ ವಿತರಿಸುತ್ತಿದ್ದೇವೆ. ಮುಂದಿನ ಬುಧವಾರ ಎಸ್ಟಿ ಸಮುದಾಯದ 22 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕಗಳಿಸಿದ ಗೂಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಮೌನಿಕಳನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್​ ಮನೀಷಾಪತ್ರಿ, ತಾಪಂ ಇಒ ರಮೇಶ್​, ಮುಖಂಡರಾದ ಎಸ್​.ಎಸ್​.ರಮೇಶ್​ಬಾಬು, ಎಲ್​.ವಿಷ್ಣುವರ್ಧನರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರಮಣ, ಬಾಲೇನಹಳ್ಳಿ ರಮೇಶ್​, ಗುಡಿಬಂಡೆ ನವೀನ್​, ಕೋಟಪ್ಪ, ಶ್ರೀನಿವಾಸನಾಯಕ್​, ಎಸ್​.ಎನ್​.ನರಸಿಂಹಪ್ಪ ಮತ್ತಿತರರು ಇದ್ದರು.

More news from ಕರ್ನಾಟಕ and nearby areas
  • Post by Chintu
    1
    Post by Chintu
    user_Chintu
    Chintu
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಹುಬ್ಬಳ್ಳಿಯಲ್ಲಿ ಬೀದಿ ದನ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಕಳ್ಳರಿಗೆ ಕಠಿಣ ಕ್ರಮಕ್ಕೆ ಸಂಘಟನೆಗಳ ಒತ್ತಾಯ
    1
    ಹುಬ್ಬಳ್ಳಿಯಲ್ಲಿ ಬೀದಿ ದನ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಕಳ್ಳರಿಗೆ ಕಠಿಣ ಕ್ರಮಕ್ಕೆ ಸಂಘಟನೆಗಳ ಒತ್ತಾಯ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ​ಕೋಲಾರ: ನಗರದಲ್ಲಿ ಇಸ್ಕಾನ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಭಕ್ತಿ ಸಂಕೀರ್ತನಾ ಯಾತ್ರೆ' ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ನಗರದ ವೃತ್ತ ವಿವೇಕಾನಂದ ವೃತ್ತ (ಡೂಮ್ ಲೈಟ್) ಸರ್ಕಲ್ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ​ಗಣ್ಯರ ಉಪಸ್ಥಿತಿ ​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿ ಭಕ್ತಿ ಸಮರ್ಪಿಸಿದರು. ​ಮಲ್ಲೇಶ್ ಬಾಬು: ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು. ​ವೈ.ಎ. ಸುಧಾಕರ್: ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು. ​ಓಂ ಶಕ್ತಿ ಚಲಪತಿ: ಬಿಜೆಪಿ ಜಿಲ್ಲಾಧ್ಯಕ್ಷರು ​ಸಿ.ಎಂ.ಆರ್. ಶ್ರೀನಾಥ್: ಪ್ರಮುಖ ಮುಖಂಡರು. ​ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, "ಇಂದಿನ ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಭಜನೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇಸ್ಕಾನ್ ಸಂಸ್ಥೆಯು ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸತ್ಸಂಗ ಮತ್ತು ಭಕ್ತಿಯ ಮಾರ್ಗವನ್ನು ಪಸರಿಸುತ್ತಿರುವುದು ಶ್ಲಾಘನೀಯ," ಎಂದು ಅಭಿಪ್ರಾಯಪಟ್ಟರು. ​ವೈಭವದ ಮೆರವಣಿಗೆ ​ವೇದಿಕೆ ಕಾರ್ಯಕ್ರಮದ ನಂತರ ಭಗವಾನ್ ಶ್ರೀಕೃಷ್ಣನ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಸುಂದರವಾಗಿ ಅಲಂಕೃತಗೊಂಡಿದ್ದ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಹರೇ ಕೃಷ್ಣ ಮಂತ್ರ ಪಠಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ​ಮುಖ್ಯಾಂಶಗಳು: ​ಭಜನಾ ವೈಭವ: ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ತಾಳ-ಮದ್ದಳೆಗಳೊಂದಿಗೆ ಭಜನೆ ಮಾಡುತ್ತಾ ಸಾಗಿದ್ದು ನೋಡುಗರ ಗಮನ ಸೆಳೆಯಿತು. ​ಭಕ್ತರ ಪಾಲ್ಗೊಳ್ಳುವಿಕೆ: ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡು ಕೃಷ್ಣನ ದರ್ಶನ ಪಡೆದರು. ​ಪ್ರಸಾದ ವಿನಿಯೋಗ: ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ​ನಗರದಾದ್ಯಂತ ಭಕ್ತಿ ಭಾವದ ವಾತಾವರಣ ನಿರ್ಮಾಣವಾಗಿದ್ದು, ಇಸ್ಕಾನ್ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
    1
    ​ಕೋಲಾರ: ನಗರದಲ್ಲಿ ಇಸ್ಕಾನ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಭಕ್ತಿ ಸಂಕೀರ್ತನಾ ಯಾತ್ರೆ' ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ನಗರದ  ವೃತ್ತ ವಿವೇಕಾನಂದ ವೃತ್ತ  (ಡೂಮ್ ಲೈಟ್) ಸರ್ಕಲ್ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
​ಗಣ್ಯರ ಉಪಸ್ಥಿತಿ
​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.
​ಮಲ್ಲೇಶ್ ಬಾಬು: ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು.
​ವೈ.ಎ. ಸುಧಾಕರ್: ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು.
​ಓಂ ಶಕ್ತಿ ಚಲಪತಿ: ಬಿಜೆಪಿ ಜಿಲ್ಲಾಧ್ಯಕ್ಷರು 
​ಸಿ.ಎಂ.ಆರ್. ಶ್ರೀನಾಥ್: ಪ್ರಮುಖ ಮುಖಂಡರು.
​ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, "ಇಂದಿನ ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಭಜನೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇಸ್ಕಾನ್ ಸಂಸ್ಥೆಯು ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸತ್ಸಂಗ ಮತ್ತು ಭಕ್ತಿಯ ಮಾರ್ಗವನ್ನು ಪಸರಿಸುತ್ತಿರುವುದು ಶ್ಲಾಘನೀಯ," ಎಂದು ಅಭಿಪ್ರಾಯಪಟ್ಟರು.
​ವೈಭವದ ಮೆರವಣಿಗೆ
​ವೇದಿಕೆ ಕಾರ್ಯಕ್ರಮದ ನಂತರ ಭಗವಾನ್ ಶ್ರೀಕೃಷ್ಣನ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಸುಂದರವಾಗಿ ಅಲಂಕೃತಗೊಂಡಿದ್ದ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಹರೇ ಕೃಷ್ಣ ಮಂತ್ರ ಪಠಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
​ಮುಖ್ಯಾಂಶಗಳು:
​ಭಜನಾ ವೈಭವ: ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ತಾಳ-ಮದ್ದಳೆಗಳೊಂದಿಗೆ ಭಜನೆ ಮಾಡುತ್ತಾ ಸಾಗಿದ್ದು ನೋಡುಗರ ಗಮನ ಸೆಳೆಯಿತು.
​ಭಕ್ತರ ಪಾಲ್ಗೊಳ್ಳುವಿಕೆ: ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡು ಕೃಷ್ಣನ ದರ್ಶನ ಪಡೆದರು.
​ಪ್ರಸಾದ ವಿನಿಯೋಗ: ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
​ನಗರದಾದ್ಯಂತ ಭಕ್ತಿ ಭಾವದ ವಾತಾವರಣ ನಿರ್ಮಾಣವಾಗಿದ್ದು, ಇಸ್ಕಾನ್ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    18 hrs ago
  • ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತು, ತಹಸೀಲ್ದಾರ್ ಎಂ ವಿ ರೂಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿ ಡಿ ಓ ಭೇಟಿ ನೀಡಿ ಪರಿಶೀಲನೆ, ಗ್ರಾಮದಲ್ಲಿ ಯಾವುದೇ ರೀತಿ ಶಾಂತಿ ಸುವ್ಯವಸ್ಥೆ ಅಡ್ಡಿಪಡಿಸಬಾರದು,,, ಬಿ ಎನ್ ಸ್ ಕಾಯ್ದೆ 145 ಆದೇಶ,,
    2
    ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತು, ತಹಸೀಲ್ದಾರ್ ಎಂ ವಿ ರೂಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿ ಡಿ ಓ ಭೇಟಿ ನೀಡಿ ಪರಿಶೀಲನೆ,   ಗ್ರಾಮದಲ್ಲಿ ಯಾವುದೇ ರೀತಿ ಶಾಂತಿ ಸುವ್ಯವಸ್ಥೆ ಅಡ್ಡಿಪಡಿಸಬಾರದು,,, ಬಿ ಎನ್ ಸ್ ಕಾಯ್ದೆ 145 ಆದೇಶ,,
    user_Narayanaswamy Press
    Narayanaswamy Press
    Local News Reporter ಮಾಲೂರು, ಕೋಲಾರ, ಕರ್ನಾಟಕ•
    18 hrs ago
  • #Srinivaspur ಶ್ರೀನಿವಾಸಪುರ ಮಾವು ಬೆಳೆಗಾರರ ಪರವಾಗಿ ಧ್ವನಿ ಎತ್ತಿದ ಸಿಎಂಆ‌ರ್ ಶ್ರೀನಾಥ್#cmr srinath
    1
    #Srinivaspur ಶ್ರೀನಿವಾಸಪುರ ಮಾವು ಬೆಳೆಗಾರರ ಪರವಾಗಿ ಧ್ವನಿ ಎತ್ತಿದ ಸಿಎಂಆ‌ರ್ ಶ್ರೀನಾಥ್#cmr srinath
    user_True news kolar Ayub Pasha
    True news kolar Ayub Pasha
    Local News Reporter Kolar, Karnataka•
    23 hrs ago
  • ಬಾಗೇಪಲ್ಲಿ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (DYFI)ವತಿಯಿಂದ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಿ.ಎಚ್.ಸಿ. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮಂಗಳವಾರ ರಾತ್ರಿ ಮೃತಪಟ್ಟಿದ್ದ ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸುಡು ಬಿಸಿಲಿನಲ್ಲಿ ಶಾಸಕರಿಗೆ ಹಾಗೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ದಿಕ್ಕಾರ ಎಂದು ಘೋಷಣೆಗಳ ಮೂಲಕ DYFI ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು. ಈ ತಾಲ್ಲೂಕಿನಲ್ಲಿ ಬಡಜನರ ಸಂಖ್ಯೆ ಹೆಚ್ಚಾಗಿದ್ದಾರೆ ಬಾಗೇಪಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಲಭೂತ ಸೌಲಭ್ಯಗಳಿಲ್ಲದೆ, ಆಗತ್ಯ ವೈದ್ಯರಿಲ್ಲದೆ, ಅಲ್ಲದೆ, ಸಿಬ್ಬಂದಿ ಇಲ್ಲದೆ ಸರಿಯಾದಂತಹ ನಿರ್ವಹಣೆಯ ಕೊರತೆಯ ಕಾರಣ ಅನಾರೋಗ್ಯದಿಂದ ಬರುವ ಬಡವರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. DYFI ನ ಜಿಲ್ಲಾ ಮುಖಂಡ ಎಸ್ ರಾಜಶೇಖರ್ ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಬಡವರಿಗೆ ಪೂರಕವಾದ ಚಿಕಿತ್ಸೆ ನೀಡಿ ಬಡವರಿಗೆ ಆತ್ಮವಿಶ್ವಾಸವನ್ನು ಮೂಡಿಸುವ ಪರಿಸ್ಥಿತಿ ಇಲ್ಲವಾಗಿದೆ. ಆಸತ್ರೆಗೆ ದಿನಕ್ಕೆ ಸುಮಾರು ಸಾವಿರ ರೋಗಿಗಳು ಆಗಮಿಸುತ್ತಾರೆ. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಮಾಡಬೇಕಾದರೆ ಆಗತ್ಯಕ್ಕೆ ತಕ್ಕಂತೆ ವೈದ್ಯರು ಸಿಬ್ಬಂದಿ ವರ್ಗ ಇರಬೇಕಾಗಿದೆ. ಆದರೆ ಇಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ ಇತರೆ ಟೆಕ್ನಿಷಿಯನ್ಸ್ ಕೊರತೆಯೂ ಇದೆ. ಹಾಗಾಗಿ ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿದು ಚಿಕಿತ್ಸೆ ಪಡೆಯಬೇಕಾಗಿದೆ. ಇದರಿಂದಾಗಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವುಗಳಾಗುತ್ತಿರುವುದು ಇತ್ತೀಚಿನ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆಳುವ ಸರ್ಕಾರ ಮತ್ತು ಶಾಸಕರು ಈ ಬಗ್ಗೆ ಗಮನ ನೀಡುತ್ತಿಲ್ಲ ಬದಲಿಗೆ ಅವರ ನಿರ್ಲಕ್ಷದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ ಕೊಡಲೇ ಎಚ್ಚೆತ್ತಿಕೊಂಡು ಸಿಬ್ಬಂದಿಯನ್ನು ನೇಮಕ ಮಾಡಬೇಕು ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಸ್ ಎಫ್ ಐ ಸೋಮಶೇಖರ್ ಮಾತನಾಡಿ ತಾಲ್ಲೂಕಿನ ಬಡ ಜನರು ನೇರವಾಗಿ ಬಾಗೇಪಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ, ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿಯೂ ಸೌಲಭ್ಯಗಳು ಇಲ್ಲದ ಕಾರಣ ದಿಕ್ಕೆಟ್ಟು ಪ್ರಾಣದ ಉಳಿವಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸಾಲ ಮಾಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು ಎಂದು ತಿಳಿಸಿದರು. ಸ್ಥಳಕ್ಕೆ AMO ವಿನಯ್ ಕುಮಾರ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು . ಈ ವೇಳೆ ಡಿ ಓ ಎಫ್ ಐ ಜಿಲ್ಲಾಧ್ಯಕ್ಷ ಹರೀಶ್,ಡಿ ಓ ಎಫ್ ಐ ತಾಲೂಕು ಸಂಚಾಲಕ ಸುರೇಶ್ ಮದಿಕರೇ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಗಂಗಾಧರ, ಬಾಬು, ಅಜಯ್, ನಂದೀಶ್, ಮತ್ತಿತರರು ಹಾಜರಿದ್ದರು.
    3
    ಬಾಗೇಪಲ್ಲಿ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (DYFI)ವತಿಯಿಂದ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಿ.ಎಚ್.ಸಿ. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮಂಗಳವಾರ ರಾತ್ರಿ ಮೃತಪಟ್ಟಿದ್ದ ಈ ಹಿನ್ನೆಲೆಯಲ್ಲಿ  ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸುಡು ಬಿಸಿಲಿನಲ್ಲಿ  ಶಾಸಕರಿಗೆ ಹಾಗೂ ತಾಲೂಕು ಆಡಳಿತ  ಮತ್ತು ಜಿಲ್ಲಾಡಳಿತಕ್ಕೆ   ದಿಕ್ಕಾರ ಎಂದು ಘೋಷಣೆಗಳ ಮೂಲಕ  DYFI ಸಂಘಟನೆ ವತಿಯಿಂದ  ಪ್ರತಿಭಟನೆ ನಡೆಸಿದರು. 
ಈ ತಾಲ್ಲೂಕಿನಲ್ಲಿ ಬಡಜನರ ಸಂಖ್ಯೆ ಹೆಚ್ಚಾಗಿದ್ದಾರೆ ಬಾಗೇಪಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮೂಲಭೂತ ಸೌಲಭ್ಯಗಳಿಲ್ಲದೆ, ಆಗತ್ಯ ವೈದ್ಯರಿಲ್ಲದೆ, ಅಲ್ಲದೆ, ಸಿಬ್ಬಂದಿ ಇಲ್ಲದೆ ಸರಿಯಾದಂತಹ ನಿರ್ವಹಣೆಯ ಕೊರತೆಯ ಕಾರಣ ಅನಾರೋಗ್ಯದಿಂದ ಬರುವ ಬಡವರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
DYFI ನ ಜಿಲ್ಲಾ ಮುಖಂಡ  ಎಸ್ ರಾಜಶೇಖರ್ ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಬಡವರಿಗೆ ಪೂರಕವಾದ ಚಿಕಿತ್ಸೆ ನೀಡಿ ಬಡವರಿಗೆ ಆತ್ಮವಿಶ್ವಾಸವನ್ನು ಮೂಡಿಸುವ ಪರಿಸ್ಥಿತಿ ಇಲ್ಲವಾಗಿದೆ. ಆಸತ್ರೆಗೆ ದಿನಕ್ಕೆ ಸುಮಾರು ಸಾವಿರ ರೋಗಿಗಳು ಆಗಮಿಸುತ್ತಾರೆ. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಮಾಡಬೇಕಾದರೆ ಆಗತ್ಯಕ್ಕೆ ತಕ್ಕಂತೆ ವೈದ್ಯರು ಸಿಬ್ಬಂದಿ ವರ್ಗ ಇರಬೇಕಾಗಿದೆ. ಆದರೆ ಇಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ ಇತರೆ ಟೆಕ್ನಿಷಿಯನ್ಸ್ ಕೊರತೆಯೂ ಇದೆ. ಹಾಗಾಗಿ ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿದು ಚಿಕಿತ್ಸೆ ಪಡೆಯಬೇಕಾಗಿದೆ. ಇದರಿಂದಾಗಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವುಗಳಾಗುತ್ತಿರುವುದು ಇತ್ತೀಚಿನ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆಳುವ ಸರ್ಕಾರ ಮತ್ತು ಶಾಸಕರು ಈ ಬಗ್ಗೆ ಗಮನ ನೀಡುತ್ತಿಲ್ಲ ಬದಲಿಗೆ ಅವರ ನಿರ್ಲಕ್ಷದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ ಕೊಡಲೇ ಎಚ್ಚೆತ್ತಿಕೊಂಡು   ಸಿಬ್ಬಂದಿಯನ್ನು ನೇಮಕ ಮಾಡಬೇಕು  ಹಾಗೂ   ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸ್ ಎಫ್ ಐ ಸೋಮಶೇಖರ್ ಮಾತನಾಡಿ ತಾಲ್ಲೂಕಿನ ಬಡ ಜನರು ನೇರವಾಗಿ ಬಾಗೇಪಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ, ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿಯೂ ಸೌಲಭ್ಯಗಳು ಇಲ್ಲದ ಕಾರಣ ದಿಕ್ಕೆಟ್ಟು ಪ್ರಾಣದ ಉಳಿವಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸಾಲ ಮಾಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು  ಎಂದು ತಿಳಿಸಿದರು.
ಸ್ಥಳಕ್ಕೆ AMO ವಿನಯ್ ಕುಮಾರ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ   ಮೇಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು .
ಈ ವೇಳೆ ಡಿ ಓ ಎಫ್ ಐ ಜಿಲ್ಲಾಧ್ಯಕ್ಷ ಹರೀಶ್,ಡಿ ಓ ಎಫ್ ಐ ತಾಲೂಕು ಸಂಚಾಲಕ ಸುರೇಶ್ ಮದಿಕರೇ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಗಂಗಾಧರ, ಬಾಬು, ಅಜಯ್, ನಂದೀಶ್, ಮತ್ತಿತರರು ಹಾಜರಿದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    22 hrs ago
  • Post by Chintu
    1
    Post by Chintu
    user_Chintu
    Chintu
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಗೋಹತ್ಯೆ ನಿಷೇಧಕ್ಕೆ ಒತ್ತಾಯ, ಕಠಿಣ ಕ್ರಮ ಬೇಡಿಕೆ ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡುವಂತೆ ಮನವಿ
    1
    ಗೋಹತ್ಯೆ ನಿಷೇಧಕ್ಕೆ ಒತ್ತಾಯ, ಕಠಿಣ ಕ್ರಮ ಬೇಡಿಕೆ
ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡುವಂತೆ ಮನವಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.