ಬಾಗಲಕೋಟೆ ತಾಲೂಕಿನ ಲೋಕೋಪಯೋಗಿ ಬಾಗಲಕೋಟೆ ತಾಲೂಕಿನ ಲೋಕೋಪಯೋಗಿ ಇಲಾಖೆ ಉಪವಿಭಾಗ ಕಚೇರಿಯಲ್ಲಿ ಹದಗೆಟ್ಟ ಮಹಾತ್ಮ ಗಾಂಧಿ ಭಾವಚಿತ್ರ – ಹೊಸದನ್ನು ತರಲು ಅನುದಾನ ಕೊರತೆ ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಲೋಕೋಪಯೋಗಿ ಇಲಾಖೆ ಉಪವಿಭಾಗ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರವು ಹದಗೆಟ್ಟ ಸ್ಥಿತಿಯಲ್ಲಿ ಕಾಣಿಸುತ್ತಿದ್ದು, ಅದನ್ನು ಬದಲಾಯಿಸಲು ಅಗತ್ಯ ಅನುದಾನವಿಲ್ಲದ ಪರಿಸ್ಥಿತಿ ಎದುರಾಗಿದೆ. ಕಚೇರಿಯ ಗೋಡೆಯ ಮೇಲೆ ಅಳವಡಿಸಲಾಗಿರುವ ಮಹಾತ್ಮ ಗಾಂಧಿ ಅವರ ಭಾವಚಿತ್ರವು ಕಾಲಕ್ರಮೇಣ ಹಾಳಾಗಿದ್ದು, ಅದರ ಗಾಜು ಹಾಗೂ ಫ್ರೇಮ್ ಕೂಡ ಹದಗೆಟ್ಟಿವೆ. ರಾಷ್ಟ್ರದ ಮಹಾನ್ ನಾಯಕನ ಭಾವಚಿತ್ರವು ಇಂತಹ ಸ್ಥಿತಿಯಲ್ಲಿ ಇರುವುದನ್ನು ನೋಡಿದ ಸ್ಥಳೀಯರು ಹಾಗೂ ಕಚೇರಿಗೆ ಬರುವ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಹೊಸ ಭಾವಚಿತ್ರವನ್ನು ಖರೀದಿಸಲು ಇಲಾಖೆಗೆ ತಕ್ಕಷ್ಟು ಅನುದಾನವಿಲ್ಲದೆ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಬೇಕಿದೆ. ಸಣ್ಣ ವೆಚ್ಚಕ್ಕೂ ಅನುದಾನ ಕೊರತೆಯಿರುವುದು ಇಲಾಖೆಯ ಆರ್ಥಿಕ ಪರಿಸ್ಥಿತಿಯ ಕುರಿತು ಪ್ರಶ್ನೆಗಳನ್ನು ಹುಟ್ಟಿಸಿದೆ. ಸ್ಥಳೀಯರು ಹಾಗೂ ಸಾರ್ವಜನಿಕರು, ಮಹಾತ್ಮ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಭಾವಚಿತ್ರವನ್ನು ಗೌರವದಿಂದ ಕಾಪಾಡುವ ಜವಾಬ್ದಾರಿ ಸರ್ಕಾರದ ಇಲಾಖೆಗಳಿಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ತಕ್ಷಣವೇ ಹೊಸ ಭಾವಚಿತ್ರವನ್ನು ಅಳವಡಿಸಿ, ಕಚೇರಿಯಲ್ಲಿ ಗೌರವಯುತವಾಗಿ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

- ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ. ಮುಖ್ಯ ಎಚ್ಚರಿಕೆಗಳು: ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ ಹೆಚ್ಚುವರಿ ಎಚ್ಚರಿಕೆ: ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ AC ಅನ್ನು 24–25°C ನಲ್ಲಿ ಇರಿಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ ಈ ಮಾಹಿತಿ ಬಹಳ ಮುಖ್ಯ! ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ1
- ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. ಎಲ್‌ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್‌ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್‌ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. * ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.1
- ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- Post by Sharanugouda Patil1
- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್. ಗದಗ ಸಮಾಜ ಕಲ್ಯಾಣ ಇಲಾಖೆ, ಮುಂಡರಗಿ ಮುಂಡರಗಿ ತಾಲೂಕ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ. ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ನಿಮಿತ್ಯ ಚಿಂತನ ಮಂಥನ ಕಾರ್ಯಕ್ರಮ1
- ಅರ್ಜನಾಳ ಗ್ರಾಮದೇವರು ಪಂಚಮುಖಿ ಬಲಭಿಮನ ಜಾತ್ರಾ ನಿಮಿತ್ಯ ಮೊಸರು ಗಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹನುಮ ಜಯಂತಿಯಂದು ಹನುಮಂತನಿಗೆ ಮೊಸರು ಅಥವಾ ಮೊಸರಿನಿಂದ ಮಾಡಿದ ಬೂಂದಿ/ಪಾಯಸ ಅರ್ಪಿಸುವುದು ಅತ್ಯಂತ ಪವಿತ್ರವೆಂದು ಝಳಕಿ ಗ್ರಾಮದ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಬಲಭಿಮ ದೇವಸ್ಥಾನದ ಪೂಜಾರಿ ಸಾಜಾನಂದ ಪೂಜಾರಿ ಮಾತನಾಡಿ ಮೊಸರು ಹನುಮನ ತಂಪಾದ ಮತ್ತು ಶಾಂತ ಸ್ವಭಾವವನ್ನು ಸಂಕೇತಿಸುತ್ತದೆ ಎಂದರು.1
- ಇಳಕಲ್ಲ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ನಗರಕ್ಕೆ ರಡ್ಡಿ ಸಮಾಜ ಭಾಂದವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಾಲೂಕಿನ ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. ಗ್ರಾಮಸ್ಥರ ಪರವಾಗಿ ಮಾಜಿ ಸಚಿವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಹರಗೌಡ ಗೌಡರ, ಮಲ್ಲನಗೌಡ ಮರಿಗೌಡರ, ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ ಹಾಗೂ ಗ್ರಾಮದ ಗುರುಹಿರಿಯರು ಮತ್ತು ರಡ್ಡಿ ಸಮಾಜದವರು ಇದ್ದರು.1