ಚಿಕ್ಕ ಓತಗೇರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ಇಳಕಲ್ಲ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ನಗರಕ್ಕೆ ರಡ್ಡಿ ಸಮಾಜ ಭಾಂದವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಾಲೂಕಿನ ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. ಗ್ರಾಮಸ್ಥರ ಪರವಾಗಿ ಮಾಜಿ ಸಚಿವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಹರಗೌಡ ಗೌಡರ, ಮಲ್ಲನಗೌಡ ಮರಿಗೌಡರ, ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ ಹಾಗೂ ಗ್ರಾಮದ ಗುರುಹಿರಿಯರು ಮತ್ತು ರಡ್ಡಿ ಸಮಾಜದವರು ಇದ್ದರು.
ಚಿಕ್ಕ ಓತಗೇರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ಇಳಕಲ್ಲ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ನಗರಕ್ಕೆ ರಡ್ಡಿ ಸಮಾಜ ಭಾಂದವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಾಲೂಕಿನ ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. ಗ್ರಾಮಸ್ಥರ ಪರವಾಗಿ ಮಾಜಿ ಸಚಿವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಹರಗೌಡ ಗೌಡರ, ಮಲ್ಲನಗೌಡ ಮರಿಗೌಡರ, ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ ಹಾಗೂ ಗ್ರಾಮದ ಗುರುಹಿರಿಯರು ಮತ್ತು ರಡ್ಡಿ ಸಮಾಜದವರು ಇದ್ದರು.
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿನ ವಿಚಾರವಾಗಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಗಿಲಾಯಿಸಿ ಮುಂಡರಗಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ ಎರಡು ಸಮುದಾಯದ ನಡುವೆ ನಡೆದ ಗಲಾಟೆಯಲ್ಲಿ ಗಾಯ ಗೊಂಡವರು ಗದಗ ಜಿಲ್ಲಾ ಆಸ್ಪತ್ರೆ ಮತ್ತು ಮುಂಡರಗಿ ತಾಲೂಕ ಆಸ್ಪತ್ರೆ ಯಲ್ಲಿ ಚಿಕಿಸ್ತೆ ಪಡೆಯುತ್ತಿದ್ದಾರೆ1
- ನಗರದ ಸಗರನಾಡು ಮೋಟಾರ್ ಡೈವಿಂಗ್ ಸ್ಕೂಲ್ ಸಂಸ್ಥೆಯ 20ನೇ ವರ್ಷಾಚರಣೆ ಅಂಗವಾಗಿ ಆಧುನಿಕ ತಂತ್ರಜ್ಞಾನ ಹೊಂದಿದ ಕಾರ್ ಡೈವಿಂಗ್ ಸಿಮ್ಯುಲೇಟರ್ ಯಂತ್ರದ ಚಾಲನೆ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದ ಸಾನಿಧ್ಯವನ್ನು ಶಹಾಪುರ ಫಕೀರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಪಾದ ಸ್ವಾಮೀಜಿಗಳು ವಹಿಸಿದ್ದರು. ಯಾದಗಿರಿಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಮಿಲಿಂದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮರೇಶಗೌಡ ದರ್ಶನಾಪುರ ಅವರು ನೂತನ ಸಿಮ್ಯುಲೇಟರ್‌ಗೆ ಚಾಲನೆ ನೀಡಿದರು1
- ಅರ್ಜನಾಳ ಗ್ರಾಮದೇವರು ಪಂಚಮುಖಿ ಬಲಭಿಮನ ಜಾತ್ರಾ ನಿಮಿತ್ಯ ಮೊಸರು ಗಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹನುಮ ಜಯಂತಿಯಂದು ಹನುಮಂತನಿಗೆ ಮೊಸರು ಅಥವಾ ಮೊಸರಿನಿಂದ ಮಾಡಿದ ಬೂಂದಿ/ಪಾಯಸ ಅರ್ಪಿಸುವುದು ಅತ್ಯಂತ ಪವಿತ್ರವೆಂದು ಝಳಕಿ ಗ್ರಾಮದ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಬಲಭಿಮ ದೇವಸ್ಥಾನದ ಪೂಜಾರಿ ಸಾಜಾನಂದ ಪೂಜಾರಿ ಮಾತನಾಡಿ ಮೊಸರು ಹನುಮನ ತಂಪಾದ ಮತ್ತು ಶಾಂತ ಸ್ವಭಾವವನ್ನು ಸಂಕೇತಿಸುತ್ತದೆ ಎಂದರು.1
- 👉 AEE ವೀರೇಶ್ ಮೇಲೆ ದಾಳಿ ಆರೋಪ 💥 📍 “ಸಲಾಂ ಬಳ್ಳಾರಿ” ಕಾರ್ಯಕ್ರಮದ ವೇಳೆ 👉 ಮಾತಿನ ಚಕಮಕಿ 🔥 👉 ನಂತರ ಹಲ್ಲೆ ನಡೆದಿದೆಯಂತೆ 😮 🗣️ ಶಾಸಕ ನಾರಾ ಭರತ್ ರೆಡ್ಡಿ: 👉 “ಅಧಿಕಾರಿಗಳ ಮೇಲೆ ಹಲ್ಲೆ ತಪ್ಪು” 👉 “ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡುತ್ತೇವೆ” ⚖️ 🗣️ ನೌಕರರ ಸಂಘ ಅಧ್ಯಕ್ಷ ಗೋವಿಂದ ಬಾಬು: 👉 “ಇದು ದುರ್ಘಟನೆ ಸಂಗತಿ” 👉 “ಅಧಿಕಾರಿಗಳಿಗೆ ಭದ್ರತೆ ಅಗತ್ಯ” ಅಧಿಕಾರಿಗಳ ಸುರಕ್ಷತೆ ಬಗ್ಗೆ ಚರ್ಚೆ ಹೆಚ್ಚಾಗಿದೆ ರಾಜಕೀಯವಾಗಿ ಪ್ರಕರಣಕ್ಕೆ ಮಹತ್ವ ಬಂದಿದೆ1
- ಲೋನ್ ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಲು ಬಂದಿದ್ದರಿಂದ ಭಯಗೊಂಡ ಮನೆ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಸೈದಾಪುರದಲ್ಲಿ ನಡೆದಿದೆ. ಸೈದಾಪುರದ ವಾಸೀಂ ಸೈಯದ್ (39) ಎಂಬ ವ್ಯಕ್ತಿ ಮನೆ ಕಟ್ಟಲೆಂದು ಖಾಸಗಿ ಬ್ಯಾಂಕ್‌ನಿಂದ 71 ಲಕ್ಷ ಸಾಲ ಪಡೆದಿದ್ದ. ಈ ಸಾಲಕ್ಕೆ ಬಡ್ಡಿ ಬೆಳೆದು ಕೇವಲ 14 ತಿಂಗಳಲ್ಲೇ ಅದು 86 ಲಕ್ಷಕ್ಕೆ ಬಂದು ನಿಂತಿದೆ. ಈ ಸಾಲವನ್ನು ಕಟ್ಟುವಂತೆ ಆ ಖಾಸಗಿ ಬ್ಯಾಂಕ್‌ನವರು ಕೋರ್ಟ್ ಆದೇಶ ತಂದು ಮನೆ ಸೀಜ್ ಮಾಡಲು ಬಂದಿದ್ದರು. ಇದರಿಂದ ಭಯಗೊಂಡ ವಾಸೀಂ ಎಂಬಾತ ಅದೇ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವಾಸೀಂ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1
- ಮಹಾತಪಸ್ವಿ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ ವಿಜೃಂಭಣೆಯ ರಥೋತ್ಸವ ಅಥಣಿ: ಇಲ್ಲಿನ ಗಚ್ಚಿನಮಠದ ಮಹಾತಪಶ್ವಿ ಭಕ್ತರ ಜೀವಾಳ ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ 105 ನೇ ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ 7 ಗಂಟೆಗೆ ರಥೋತ್ಸವ ವಿಜೃಂಭಣೆಯಿಂದ ಗಚ್ಚಿನ ಮಠದಿಂದ ಆರಂಭವಾಯಿತು ರಥೋತ್ಸವಕ್ಕೆ ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಚ್ಚಿನ ಮಠದ ಮುರುಘೇಂದ್ರ ಶಿವಯೋಗಿಗಳ ಜಾತ್ರೆ ಭಾವೈಕ್ಯತೆ ಸಾರುವ ಜಾತ್ರೆಯಾಗಿದೆ ಎಲ್ಲಾ ಧರ್ಮದವರು ಒಟ್ಟಾಗಿ ಆಚರಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆಯುತ್ತಾರೆ ಈ ಮೂಲಕವಾಗಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂದು ಹೇಳಿದರು .ನಗರದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಂಚರಿಸುತ್ತ ಆಗಮಿಸಿದಾಗ ಭಕ್ತರು ಮುರುಗೇಂದ್ರ ಶಿವಯೋಗಿಗಳ ಜೈ ಘೋಷದೊಂದಿಗೆ ಬೆಂಡು ಬತ್ತಾಸು ಉತ್ತತ್ತಿಗಳನ್ನು ರಥದ ಮೇಲೆ ಹಾರಿಸುವ ಮೂಲಕ ಮಹಿಳೆಯರು ಮಕ್ಕಳು ಪುರುಷರೆನ್ನದೆ ಎಲ್ಲರೂ ಭಕ್ತಿಭಾವದಿಂದ ದರ್ಶನ ಪಡೆದರು .ನಗರದ ಎಲ್ಲೆಡೆ ಸಂಚರಿಸಿ ರಥೋತ್ಸವ ಕಣ್ಮನ ಸೆಳೆಯಿತು ವಿವಿಧ ವಾದ್ಯ ಮೇಳಗಳೊಂದಿಗೆ ಭಜನೆ ಹಾಡುವವರು ಭಾವುಕರಾಗಿ ಭಜನೆಯಲ್ಲಿ ತೊಡಗಿದರೆ ,ಜಾಂಜ್ ಪತಾಕ್ ಮೇಳದೊಂದಿಗೆ ಯುವಕರು ವಿಶೇಷವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ತಮ್ಮ ಭಕ್ತಿ ಭಾವ ಮೆರೆದರು ಸಂಗೀತದ ಮೇಳದೊಂದಿಗೆ ಹಾಡುಗಾರರ ಹಾಡುಗಳು ನೋಡುಗರ ಕಣ್ಮನ ಸೆಳೆದವು ನಗರದೆಲ್ಲೆಡೆಯಲ್ಲಿ ತಳಿರು ತೋರಣಗಳಿಂದ ರಥೋತ್ಸವ ಸಾಗುವ ಬೀದಿಗಳನ್ನು ಶೃಂಗಾರ ಮಾಡಲಾಗಿತ್ತು ಅಷ್ಟೇ ಅಲ್ಲದೆ ನಗರದಾದ್ಯಂತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುವಂತಿತ್ತು ,ಪುಷ್ಪಮಾಲೆ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲ್ಪಟ್ಟ ರಥ ಸಂಜೆ 7 ಗಂಟೆಗೆ ಶ್ರೀಮಠದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ನಸುಕಿನ ಜಾವ ಶಿವಯೋಗಿಗಳು ಅನುಷ್ಠಾನಗೈದ ಪುರಾತನೇಶ್ವರ ದೇವಸ್ಥಾನ ತಲುಪಿತು. ವ್ಯಾಸನತೋಳ ಮೆರವಣಿಗೆ : ದೇಶದ ಖ್ಯಾತ ಕ್ಷೆತ್ರ ಕಾಶಿಯಲ್ಲಿ ನಡೆಯುವ ವ್ಯಾಸನ ತೋಳ ಮೆರವಣಿಗೆ ಈ ಸಂದರ್ಭದಲ್ಲಿ ಜರುಗಿತು . ಒಂದು ಕಾಶಿಯಲ್ಲಿ ಇನ್ನೊಂದು ಅಥಣಿ ಗಚ್ಚಿನ ಮಠದಲ್ಲಿ ವ್ಯಾಸನ ತೋಳ ಮೆರವಣಿಗೆ ಜರುಗುತ್ತದೆ ಎಂಬುದು ಹೆಮ್ಮೆಯ ಸಂಗತಿ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವಿಯಿಂದ ಭಕ್ತರು ಶಿವಯೋಗಿಗಳ ಬಾಲಮೂರ್ತಿ ಯನ್ನು ಉತ್ಸವದ ಮೂಲಕ ಗಚ್ಚಿನಮಠಕ್ಕೆ ತ೦ದರು. ಶ್ರೀಮಠದಲ್ಲಿ ಲಿಂ.ಚನ್ನಬಸವ ಸ್ವಾಮೀಜಿ 46 ನೇ ಸ್ಮರಣೋತ್ಸವ ಜರುಗಿತು . ನಂತರ ಪಂಚಕಲಶ, ವ್ಯಾಸನತೋಳ, ಸಕಲ ಬಿರುದಾವಳಿ ಸಹಿತ ಅಲಂಕರಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು .ಸುಮಾರು 150 ಕೆಜಿ ಬೆಳ್ಳಿ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯ ಶ್ರೀ ಶಿವಯೋಗಿ ಬೆಳ್ಳಿಯ ಭಾವಚಿತ್ರ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು . ಮಠಾಧೀಶರಾದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಜರುಗುತ್ತಲಿವೆ. ಸಂಪ್ರದಾಯದಂತೆ ಬೆಳಗ್ಗೆ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು . ಮಧ್ಯಾಹ್ನ ಮಹಾಪ್ರಸಾದ ಜರುಗಿತು .ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಶ್ರೀಮಠದ ಅನುಭವ ಮಂಟಪದಲ್ಲಿ ಪುರಾಣ, ಪ್ರವಚನ, ಶಿವಾನುಭವ, ವಚನ ಸಂಗೀತ, ಶಿವಭಜನೆ ಹಾಗೂ ಬಯಲಾಟ ಪ್ರದರ್ಶನ,. ಜಾನುವಾರು ಪ್ರದರ್ಶನ ಜರುಗುತ್ತಿದೆ.ಕಾರ್ಯಕ್ರಮದಲ್ಲಿ ಇಂಗಳಗಾವಿ ಸಿದ್ದಲಿಂಗ ಸ್ವಾಮೀಜಿ, ಹಲ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ,ಮೋಟಗಿ ಮಠದ ಚನ್ನಬಸವ ಮಹಾಸ್ವಾಮಿಗಳು, ಶೆಟ್ಟರ್ ಮಠದ ಮರುಳಸಿದ್ದ ಮಹಾಸ್ವಾಮಿಗಳು, ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ,ಶಿವಾನಂದ ದಿವಾನಮಳ ಪ್ರಕಾಶ ಮಹಾಜನ, ಸೇರಿದಂತೆ ಹಲವಾರು ಮುಖಂಡರು, ಸುತ್ತಮುತ್ತಲ ಹಾಗೂ ಅಥಣಿ ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳಿಂದ ಲಕ್ಷಾಂತರ ಭಕ್ತಾದಿಗಳು ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು .2
- ಇಳಕಲ್ಲ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ನಗರಕ್ಕೆ ರಡ್ಡಿ ಸಮಾಜ ಭಾಂದವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಾಲೂಕಿನ ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. ಗ್ರಾಮಸ್ಥರ ಪರವಾಗಿ ಮಾಜಿ ಸಚಿವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಹರಗೌಡ ಗೌಡರ, ಮಲ್ಲನಗೌಡ ಮರಿಗೌಡರ, ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ ಹಾಗೂ ಗ್ರಾಮದ ಗುರುಹಿರಿಯರು ಮತ್ತು ರಡ್ಡಿ ಸಮಾಜದವರು ಇದ್ದರು.1
- ಕಪ್ಪತ ಗುಡ್ಡ ದಲ್ಲಿ ವನ್ಯ ಜೀವಿಗಳಿಗೆ ನೀರಿನ ತೊಟ್ಟಿಗಳಲ್ಲಿ ಶೇಕರಿಸುವ ಕಾರ್ಯ ವನ್ನ ಕಪ್ಪತ ಹಿಲ್ಸ್ RFO ಮಂಜುನಾಥ ಮೆಗಲಮನಿ ಅವರು ಮಾಡುತಿದ್ದರೆ ಅರಣ್ಯ ಪ್ರದೇಶ ದಲ್ಲಿ ಅಲ್ಲಲ್ಲಿ ನೀರಿನ ಹೊಂಡ ಗಳನ್ನ ಮಾಡಿ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ1
- ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮಸ್ಥರು ಮತ್ತಿಗಟ್ಟಿ ಗ್ರಾಮ ಪಂಚಾಯಿತಿ ಕೀಲಿ ಮುರಿದು ಗುರುವಾರ ಆಕ್ರೋಶ ಹೊರಹಾಕಿದ್ದಾರೆ. ಮತ್ತಿಗಟ್ಟಿ ಗ್ರಾಮ ಪಂಚಾಯತಿಯಿಂದ ಯಾವುದೇ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ, ಪಂಚಾಯತ ವತಿಯಿಂದ ಅನುದಾನ ಇಲ್ಲ, ಇದಕ್ಕೆ ಗ್ರಾಮ ಪಂಚಾಯತಿ ಪಿಡಿಓ ನಿರ್ಲಕ್ಷ್ಯ ಸಹ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ . ಮೂಲ ಭೂತ ಸೌಕರ್ಯಗಳನ್ನ ನೀಡದ ಪಂಚಾಯತ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ತಕ್ಷಣವೇ ಎಲ್ಲಾ ಸೌಕರ್ಯ ನೀಡಬೇಕು ಎಂದು ಒತ್ತಾಯಿಸಿದರು.1