logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶೆಟ್ಟಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಸಭೆ. ಹನೂರು :ಗ್ರಾಮ ಪಂಚಾಯತ್ ವತಿಯಿಂದ ನಡೆದಿರುವ ಕಾಮಗಾರಿಗಳಲ್ಲಿ ಲೋಪ ದೋಷ ವಿದ್ದರೆ ಈ ಸಭೆಯಲ್ಲಿ ತಿಳಿಸಿ, ಬಗೆ ಹರಿಸಿಕೊಳ್ಳುವಂತೆ ಸಾರ್ವಜನಿಕರಿಗೆ ನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು. ಶೆಟ್ಟಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಗ್ರಾಮ ಸಭೆ ಯಲ್ಲಿ ನಾರಾಯಣ್ ಮಾತನಾಡಿದರು. ಶೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ 75 ಕಾಮಗಾರಿ ಹಾಗೂ ಕೃಷಿ ಇಲಾಖೆ ವತಿಯಿಂದ 1 ಕಾಮಗಾರಿ ನಡೆದಿದ್ದು ಒಟ್ಟು ಮೊತ್ತ 28,34,927 ರೂ ಖಾರ್ಚಾಗಿದೆ ಎಂದು ತಿಳಿಸಿದರು. ನಂತರ ಪಿ ಡಿ ಓ ವೈರಮಾಣಿಕ್ಯಂ ಮಾತನಾಡಿ, ಇದೇ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷೆ ರೂಪ, ಪಿ ಡಿ ಓ ವೈರಾಮಾಣಿಕ್ಯಂ, ಕಾರ್ಯದರ್ಶಿ ಎಲ್ ಮಹದೇವ್, ಕಂಪ್ಯೂಟರ್ ಅಪರೇಟರ್ ಆನಂದ್ ಕುಮಾರ್, ಗ್ರಾಮಸ್ಥರಾದ ರುದ್ರ, ಮುನಿಶೆಟ್ಟಿ, ಪರಶಿವಮೂರ್ತಿ, ರಾಜೇಶ್, ನಾಗಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು.

on 16 December
user_Vijay kumar
Vijay kumar
Chamarajanagara, Karnataka•
on 16 December
d82f8317-1408-4b11-b59c-87a49f688dc2
d0594bc0-ca43-4684-b1ae-c9cba6e2b9d5
5cd3d264-9d8a-4898-b218-77e7104e8fad
51736323-1a1e-4ccd-8347-7161a94b3210

ಶೆಟ್ಟಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಸಭೆ. ಹನೂರು :ಗ್ರಾಮ ಪಂಚಾಯತ್ ವತಿಯಿಂದ ನಡೆದಿರುವ ಕಾಮಗಾರಿಗಳಲ್ಲಿ ಲೋಪ ದೋಷ ವಿದ್ದರೆ ಈ ಸಭೆಯಲ್ಲಿ ತಿಳಿಸಿ, ಬಗೆ ಹರಿಸಿಕೊಳ್ಳುವಂತೆ ಸಾರ್ವಜನಿಕರಿಗೆ ನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು. ಶೆಟ್ಟಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಗ್ರಾಮ ಸಭೆ ಯಲ್ಲಿ ನಾರಾಯಣ್ ಮಾತನಾಡಿದರು. ಶೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ 75 ಕಾಮಗಾರಿ ಹಾಗೂ ಕೃಷಿ ಇಲಾಖೆ ವತಿಯಿಂದ 1 ಕಾಮಗಾರಿ ನಡೆದಿದ್ದು ಒಟ್ಟು ಮೊತ್ತ 28,34,927 ರೂ ಖಾರ್ಚಾಗಿದೆ ಎಂದು ತಿಳಿಸಿದರು. ನಂತರ ಪಿ ಡಿ ಓ ವೈರಮಾಣಿಕ್ಯಂ ಮಾತನಾಡಿ, ಇದೇ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷೆ ರೂಪ, ಪಿ ಡಿ ಓ ವೈರಾಮಾಣಿಕ್ಯಂ, ಕಾರ್ಯದರ್ಶಿ ಎಲ್ ಮಹದೇವ್, ಕಂಪ್ಯೂಟರ್ ಅಪರೇಟರ್ ಆನಂದ್ ಕುಮಾರ್, ಗ್ರಾಮಸ್ಥರಾದ ರುದ್ರ, ಮುನಿಶೆಟ್ಟಿ, ಪರಶಿವಮೂರ್ತಿ, ರಾಜೇಶ್, ನಾಗಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು.

  • user_User4895
    User4895
    Bangarapet, Kolar
    😡
    on 17 December
More news from ಕರ್ನಾಟಕ and nearby areas
  • ಪಟ್ಟಣದಲ್ಲಿರುವ ಮಹದೇಶ್ವರ ಕ್ರೀಡಾಂಗಣದಿಂದ ದಲಿತ ಬಲಗೈ ಹೊಲಯ ಸಮುದಾಯದ ಹನೂರು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮದ ಮುಖಂಡರುಗಳು ಮಹಿಳೆಯರು ಯುವಕರು ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿಯ ತನಕ ಪ್ರತಿಭಟನಾ ಚಳುವಳಿ ನಡೆಸಿ ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಹಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ತಹಸೀಲ್ದಾರ್ ಚೈತ್ರ ಅವರಿಗೆ ಮನವಿ ನೀಡಲಾಯಿತು. ಬಾಕ್ಸ್ ನಾವು ಒಳ ಮೀಸಲಾತಿ ವಿರೋಧಿಗಳಲ್ಲ ರೋಸ್ಟರ್ ಬಿಂದುವಿನಲ್ಲಿ ಆಗಿರುವ ಪ್ರಮಾದವನ್ನು ಸರಿ ಪಡಿಸಬೇಕು ಹೊಲಯ ಮತ್ತು ಮಾದಿಗ ಸಮುದಾಯದ ಜನರನ್ನು ಒಡೆದು ಆಳುವ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಸೋದರ ಸಮಾಜದಲ್ಲಿ ಇರುವ ಕಿಡಿಗೇಡಿಗಳಾದ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರು ನಮ್ಮ ಎರಡು ಸಮುದಾಯದ ಒಗ್ಗಟ್ಟನ್ನು ಮುರಿದು ಶೋಷಣೆಗೆ ಒಳಪಡಿಸುತ್ತಿದ್ದಾರೆ. ಭಾಸ್ಕರ್ ಪ್ರಸಾದ್ ಹೊಲಯ ಸಮುದಾಯದ ನಾಯಕರ ವಿರುದ್ಧ ತೊಡೆ ತಟ್ಟಿ ನಾವು ಸೋಲಿಸ್ತೀವಿ ಪಾಠ ಕಲಿಸ್ತೀವಿ ಅಂತಿದ್ದಾನೆ 2028 ರಲ್ಲಿ ನಾವು ಏನು ಅಂತ ತೋರುಸುತ್ತೇವೆ. ನಮಗೆ ಅನ್ಯಾಯವಾಗಿದೆ ನಾವು ಪ್ರತಿಭಟಿಸುತ್ತಿದ್ದೇವೆ ಯಾವುದೇ ಕಾರಣಕ್ಕೂ ನಾಗಮೋಹನ್ ದಾಸ್ ವರದಿ ನೀಡಿರುವ ಒಳ ಮೀಸಲಾತಿ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಪರಿಶಿಷ್ಟ ಸಮುದಾಯದ 101 ಜಾತಿಯ ಜನರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಸಿ ಕೆ ಮಂಜುನಾಥ್ ಹೊಲಯ ಸಮಾಜದ ಮುಖಂಡ ಚಾಮರಾಜನಗರ ಬಾಕ್ಸ್ ಸವರ್ಣಿಯ ಸಮುದಾಯದ ನಾಗಮೋಹನ್ ದಾಸ್ ನೀಡಿರುವ ವರದಿಯಿಂದ ನೊಂದ ಸಮುದಾಯ ನ್ಯಾಯ ಕಾಣಲು ಸಾಧ್ಯವಿಲ್ಲ ಅವೈಜ್ಞಾನಿಕವಾಗಿ ಒಳ ಮೀಸಲಾತಿ ವರದಿಯನ್ನು ನೀಡಿದ್ದು ನಮ್ಮ ಬಲಗೈ ಸಮುದಾಯದ ಜನರಿಗೆ ಬಹಳ ಅನ್ಯಾಯವಾಗುತ್ತಿದೆ.ಈ ವರದಿ ಜಾರಿ ಆದರೆ ನಮ್ಮ ಸಮುದಾಯದ ಮಕ್ಕಳು ಉದ್ಯೋಗ ಶಿಕ್ಷಣದಿಂದ ವಂಚಿತರಾಗುತ್ತಾರೆ. ಬದುಕಿರುವ ನಮ್ಮ ಹೊಲಯ ಸಮುದಾಯದ ಜನರನ್ನು ಜೀವಂತವಾಗಿ ಇರುವ ನಮ್ಮ ಬಾಡಿಯನ್ನು ಬಾಕ್ಸ್ ಒಳಗಡೆ ಮುಚ್ಚಿ ಹೂಳಲು ಹೋಗುತ್ತಿದ್ದಾರೆ. ನಾವು ಸತ್ತಿಲ್ಲ ಬದುಕಿದ್ದೇವೆ ಎಂದು ಬಾಕ್ಸ್ ಅನ್ನು ಒಡೆದು ತೋರಿಸಬೇಕಿದೆ. ಒಳ ಮೀಸಲಾತಿ ಜಾರಿಯಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಸರ್ಕಾರಿ ನೌಕರಿ ಸಿಗುವುದಿಲ್ಲ ಮೊರಾರ್ಜಿ ಶಾಲೆ ಇಂದಿರಾ ಗಾಂಧಿ ಶಾಲೆಗಲ್ಲಿ ನಮ್ಮ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಆಗಾಗಿ ರೋಸ್ಟರ್ ಬಿಂದುವನ್ನು ಸರಿಪಡಿಸಿ. ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿರುವ ನಾಗ ಮೋಹನ್ ದಾಸ್ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು.ಇಲ್ಲ ಅದನ್ನು ಸಮಾನವಾಗಿ ಹಂಚಬೇಕು. ಮಲೈ ಮಹದೇಶ್ವರ ಸ್ವಾಮಿ ಮೈಸೂರು ವಿಶ್ವ ವಿದ್ಯಾಲಯದ ಉಪನ್ಯಾಸಕ ಬಾಕ್ಸ್ ನಾಗಮೋಹನ್ ದಾಸ್ ವರದಿಯಿಂದ ನಮ್ಮ ಬಲಗೈ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ ಏಳು ವರ್ಷಗಳ ಕಾಲ ಸದಾ ಆಯೋಗ ಸಮೀಕ್ಷೆ ಮಾಡುದ್ರು ಅದು ಮುನ್ನೆಲೆಗೆ ಬರಲಿಲ್ಲ,ಮೂರು ತಿಂಗಳಲ್ಲಿ ನಾಗಮೋಹನ್ ದಾಸ್ ಸಮೀಕ್ಷೆ ಮಾಡಿ ನಮ್ಮ ಬಲಗೈ ಸಮುದಾಯದ ಜನರನ್ನು ಕಡಿಮೆ ಮಾಡಿ ಹುನ್ನಾರ ನಡೆಸಿ ನಮ್ಮನ್ನು ದಮನ ಗೊಳಿಸುತ್ತಿದ್ದಾರೆ. ತರತುರಿಯಲ್ಲಿ ಈ ವರದಿಯನ್ನು ನೀಡಿದ್ದಾರೆ ಈ ವರದಿಯು ಅವೈಜ್ಞಾನಿಕವಾಗಿದೆ. ಸಂವಿಧಾನ ಓದು ಎಂಬ ಪುಸ್ತಕ ಬರೆದ ನಾಗಮೋಹನ್ ದಾಸ್ ರವರನ್ನು ನಾವು ಒತ್ತು ಮೆರೆಸಿದೆವು ಅದರಂತೆ ಅವರನ್ನೇ ಈ ಸಮೀಕ್ಷೆಗೆ ಆಯ್ಕೆ ಮಾಡುತ್ತಾರೆ.ಆದರೆ ಈ ರೀತಿಯಾದ ದ್ರೋಹ ಮಾಡುತ್ತಾರೆ ಎಂದು ತಿಳಿದಿರಲಿಲ್ಲ. ಒಳ ಮೀಸಲಾತಿ ಜಾರಿಯಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಸರ್ಕಾರಿ ನೌಕರಿ ಸಿಗುವುದಿಲ್ಲ ಮೊರಾರ್ಜಿ ಶಾಲೆ ಇಂದಿರಾ ಗಾಂಧಿ ಶಾಲೆಗಲ್ಲಿ ನಮ್ಮ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಆಗಾಗಿ ರೋಸ್ಟರ್ ಬಿಂದುವನ್ನು ಸರಿಪಡಿಸಿ. ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿರುವ ನಾಗ ಮೋಹನ್ ದಾಸ್ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು ಇಲ್ಲ ಅದನ್ನು ಸಮಾನವಾಗಿ ಹಂಚಬೇಕು. ಡಾ ಮಲ್ಲಿಕಾರ್ಜುನ ಮೈಸೂರು ವಿಶ್ವ ವಿದ್ಯಾಲಯದ ಉಪನ್ಯಾಸಕ ಪ್ರತಿಭಟನೆಯಲ್ಲಿ ಸುಮಾರು ಮೂರು ಸಾವಿರ ಜನರು ಭಾಗವಹಿಸಿದ್ದು 30 ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಪ್ರತಿಭಟನೆಯಲ್ಲಿ ಹನೂರು ಪಟ್ಟಣದ ಯಜಮಾನರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರುಗಳಾದ ಸಂಪತ್ ಕುಮಾರ್‌,ಸಿದ್ದರಾಜು, ಬಸವರಾಜು, ಮಹೇಶ್‌, ಮುಖಂಡರಾದ ಕಿರಣ್, ರವೀಂದ್ರ, ಪುಟ್ಟರಾಜು, ಕೃಷ್ಣ,ಸೇರಿದಂತೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮತ್ತಿಪುರ, ತೆಳ್ಳನೂರು, ಹನೂರು ತಾಲೂಕಿನ ಮಣಗಳ್ಳಿ, ಬಂಡಳ್ಳಿ, ಅಜ್ಜಿಪುರ, ಮಾರ್ಟಳ್ಳಿ, ಲೊಕ್ಕನಹಳ್ಳಿ,ಚಿಕ್ಕಮಾಲಾಪುರ, ಪಿ. ಜಿ ಪಾಳ್ಯ, ರಾಮಾಪುರ ವ್ಯಾಪ್ತಿಯ ವಿವಿಧ ಗ್ರಾಮಗಳು ತಾಲೂಕಿನ ವಿವಿಧ ಗ್ರಾಮಗಳು ಮುಖಂಡರುಗಳು ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    4
    ಪಟ್ಟಣದಲ್ಲಿರುವ ಮಹದೇಶ್ವರ ಕ್ರೀಡಾಂಗಣದಿಂದ ದಲಿತ ಬಲಗೈ ಹೊಲಯ ಸಮುದಾಯದ ಹನೂರು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮದ ಮುಖಂಡರುಗಳು ಮಹಿಳೆಯರು ಯುವಕರು ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತ  ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿಯ ತನಕ ಪ್ರತಿಭಟನಾ ಚಳುವಳಿ ನಡೆಸಿ ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಹಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ತಹಸೀಲ್ದಾರ್ ಚೈತ್ರ ಅವರಿಗೆ ಮನವಿ ನೀಡಲಾಯಿತು.
ಬಾಕ್ಸ್ 
ನಾವು ಒಳ ಮೀಸಲಾತಿ ವಿರೋಧಿಗಳಲ್ಲ ರೋಸ್ಟರ್ ಬಿಂದುವಿನಲ್ಲಿ ಆಗಿರುವ ಪ್ರಮಾದವನ್ನು ಸರಿ ಪಡಿಸಬೇಕು ಹೊಲಯ ಮತ್ತು ಮಾದಿಗ ಸಮುದಾಯದ ಜನರನ್ನು ಒಡೆದು ಆಳುವ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ.
ಸೋದರ ಸಮಾಜದಲ್ಲಿ ಇರುವ ಕಿಡಿಗೇಡಿಗಳಾದ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರು ನಮ್ಮ ಎರಡು ಸಮುದಾಯದ ಒಗ್ಗಟ್ಟನ್ನು ಮುರಿದು ಶೋಷಣೆಗೆ ಒಳಪಡಿಸುತ್ತಿದ್ದಾರೆ.
ಭಾಸ್ಕರ್ ಪ್ರಸಾದ್ ಹೊಲಯ ಸಮುದಾಯದ ನಾಯಕರ ವಿರುದ್ಧ ತೊಡೆ ತಟ್ಟಿ ನಾವು ಸೋಲಿಸ್ತೀವಿ ಪಾಠ ಕಲಿಸ್ತೀವಿ ಅಂತಿದ್ದಾನೆ 2028 ರಲ್ಲಿ ನಾವು ಏನು ಅಂತ ತೋರುಸುತ್ತೇವೆ.
ನಮಗೆ ಅನ್ಯಾಯವಾಗಿದೆ ನಾವು ಪ್ರತಿಭಟಿಸುತ್ತಿದ್ದೇವೆ ಯಾವುದೇ ಕಾರಣಕ್ಕೂ ನಾಗಮೋಹನ್ ದಾಸ್ ವರದಿ ನೀಡಿರುವ ಒಳ ಮೀಸಲಾತಿ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಪರಿಶಿಷ್ಟ ಸಮುದಾಯದ 101 ಜಾತಿಯ ಜನರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು 
ಸಿ ಕೆ ಮಂಜುನಾಥ್ ಹೊಲಯ ಸಮಾಜದ ಮುಖಂಡ ಚಾಮರಾಜನಗರ 
ಬಾಕ್ಸ್ 
ಸವರ್ಣಿಯ ಸಮುದಾಯದ ನಾಗಮೋಹನ್ ದಾಸ್ ನೀಡಿರುವ ವರದಿಯಿಂದ ನೊಂದ ಸಮುದಾಯ ನ್ಯಾಯ ಕಾಣಲು ಸಾಧ್ಯವಿಲ್ಲ ಅವೈಜ್ಞಾನಿಕವಾಗಿ ಒಳ ಮೀಸಲಾತಿ ವರದಿಯನ್ನು ನೀಡಿದ್ದು ನಮ್ಮ ಬಲಗೈ ಸಮುದಾಯದ ಜನರಿಗೆ ಬಹಳ ಅನ್ಯಾಯವಾಗುತ್ತಿದೆ.ಈ ವರದಿ ಜಾರಿ ಆದರೆ ನಮ್ಮ ಸಮುದಾಯದ ಮಕ್ಕಳು ಉದ್ಯೋಗ ಶಿಕ್ಷಣದಿಂದ ವಂಚಿತರಾಗುತ್ತಾರೆ. ಬದುಕಿರುವ ನಮ್ಮ ಹೊಲಯ ಸಮುದಾಯದ ಜನರನ್ನು ಜೀವಂತವಾಗಿ ಇರುವ ನಮ್ಮ ಬಾಡಿಯನ್ನು ಬಾಕ್ಸ್ ಒಳಗಡೆ ಮುಚ್ಚಿ ಹೂಳಲು ಹೋಗುತ್ತಿದ್ದಾರೆ. ನಾವು ಸತ್ತಿಲ್ಲ ಬದುಕಿದ್ದೇವೆ ಎಂದು ಬಾಕ್ಸ್ ಅನ್ನು ಒಡೆದು ತೋರಿಸಬೇಕಿದೆ. 
ಒಳ ಮೀಸಲಾತಿ ಜಾರಿಯಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಸರ್ಕಾರಿ ನೌಕರಿ ಸಿಗುವುದಿಲ್ಲ ಮೊರಾರ್ಜಿ ಶಾಲೆ ಇಂದಿರಾ ಗಾಂಧಿ ಶಾಲೆಗಲ್ಲಿ ನಮ್ಮ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಆಗಾಗಿ ರೋಸ್ಟರ್ ಬಿಂದುವನ್ನು ಸರಿಪಡಿಸಿ.
ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿರುವ ನಾಗ ಮೋಹನ್ ದಾಸ್ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು.ಇಲ್ಲ ಅದನ್ನು ಸಮಾನವಾಗಿ ಹಂಚಬೇಕು.
ಮಲೈ ಮಹದೇಶ್ವರ ಸ್ವಾಮಿ  ಮೈಸೂರು ವಿಶ್ವ ವಿದ್ಯಾಲಯದ ಉಪನ್ಯಾಸಕ
ಬಾಕ್ಸ್ 
ನಾಗಮೋಹನ್ ದಾಸ್ ವರದಿಯಿಂದ ನಮ್ಮ ಬಲಗೈ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ 
ಏಳು ವರ್ಷಗಳ ಕಾಲ ಸದಾ ಆಯೋಗ ಸಮೀಕ್ಷೆ ಮಾಡುದ್ರು ಅದು ಮುನ್ನೆಲೆಗೆ ಬರಲಿಲ್ಲ,ಮೂರು ತಿಂಗಳಲ್ಲಿ ನಾಗಮೋಹನ್ ದಾಸ್ ಸಮೀಕ್ಷೆ ಮಾಡಿ ನಮ್ಮ ಬಲಗೈ ಸಮುದಾಯದ ಜನರನ್ನು ಕಡಿಮೆ ಮಾಡಿ ಹುನ್ನಾರ ನಡೆಸಿ ನಮ್ಮನ್ನು ದಮನ ಗೊಳಿಸುತ್ತಿದ್ದಾರೆ. ತರತುರಿಯಲ್ಲಿ ಈ ವರದಿಯನ್ನು ನೀಡಿದ್ದಾರೆ ಈ ವರದಿಯು ಅವೈಜ್ಞಾನಿಕವಾಗಿದೆ.
ಸಂವಿಧಾನ ಓದು ಎಂಬ ಪುಸ್ತಕ ಬರೆದ ನಾಗಮೋಹನ್ ದಾಸ್ ರವರನ್ನು ನಾವು ಒತ್ತು ಮೆರೆಸಿದೆವು ಅದರಂತೆ ಅವರನ್ನೇ ಈ ಸಮೀಕ್ಷೆಗೆ ಆಯ್ಕೆ ಮಾಡುತ್ತಾರೆ.ಆದರೆ ಈ ರೀತಿಯಾದ ದ್ರೋಹ ಮಾಡುತ್ತಾರೆ ಎಂದು ತಿಳಿದಿರಲಿಲ್ಲ.
ಒಳ ಮೀಸಲಾತಿ ಜಾರಿಯಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಸರ್ಕಾರಿ ನೌಕರಿ ಸಿಗುವುದಿಲ್ಲ ಮೊರಾರ್ಜಿ ಶಾಲೆ ಇಂದಿರಾ ಗಾಂಧಿ ಶಾಲೆಗಲ್ಲಿ ನಮ್ಮ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಆಗಾಗಿ ರೋಸ್ಟರ್ ಬಿಂದುವನ್ನು ಸರಿಪಡಿಸಿ.
ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿರುವ ನಾಗ ಮೋಹನ್ ದಾಸ್ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು ಇಲ್ಲ ಅದನ್ನು ಸಮಾನವಾಗಿ ಹಂಚಬೇಕು.
ಡಾ ಮಲ್ಲಿಕಾರ್ಜುನ ಮೈಸೂರು ವಿಶ್ವ ವಿದ್ಯಾಲಯದ ಉಪನ್ಯಾಸಕ
ಪ್ರತಿಭಟನೆಯಲ್ಲಿ ಸುಮಾರು ಮೂರು ಸಾವಿರ ಜನರು ಭಾಗವಹಿಸಿದ್ದು 30 ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಪ್ರತಿಭಟನೆಯಲ್ಲಿ ಹನೂರು ಪಟ್ಟಣದ ಯಜಮಾನರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರುಗಳಾದ ಸಂಪತ್ ಕುಮಾರ್‌,ಸಿದ್ದರಾಜು, ಬಸವರಾಜು, ಮಹೇಶ್‌, ಮುಖಂಡರಾದ ಕಿರಣ್, ರವೀಂದ್ರ, ಪುಟ್ಟರಾಜು, ಕೃಷ್ಣ,ಸೇರಿದಂತೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮತ್ತಿಪುರ, ತೆಳ್ಳನೂರು, ಹನೂರು ತಾಲೂಕಿನ ಮಣಗಳ್ಳಿ, ಬಂಡಳ್ಳಿ, ಅಜ್ಜಿಪುರ, ಮಾರ್ಟಳ್ಳಿ, ಲೊಕ್ಕನಹಳ್ಳಿ,ಚಿಕ್ಕಮಾಲಾಪುರ, ಪಿ. ಜಿ ಪಾಳ್ಯ, ರಾಮಾಪುರ ವ್ಯಾಪ್ತಿಯ ವಿವಿಧ ಗ್ರಾಮಗಳು ತಾಲೂಕಿನ ವಿವಿಧ ಗ್ರಾಮಗಳು ಮುಖಂಡರುಗಳು ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    19 hrs ago
  • ಚಾಮರಾಜನಗರ: ತಮಿಳುನಾಡು ಕಡೆಯಿಂದ ಕರ್ನಾಟಕದಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರಿಗಳಿಗೆ ಇದೀಗ ಕಾಡಾನೆಗಳ ಹಾವಳಿ ಅಧಿಕವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ಕುರಟ್ಟಿ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಂಟಳ್ಳಿ ಸಮೀಪ ಪಾದಯಾತ್ರಿಗಳು ಬರುವಾಗ ಕಾಡಾನೆಗಳ ಹಿಂಡೇ ರಸ್ತೆ ದಾಟುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪಾದಯಾತ್ರಿಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ತಿಳಿಸಿ, ಕಾಡಾನೆಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಿ, ಕಾಡಿನತ್ತ ತೆರಳಿದ ಬಳಿಕ ಪಾದಯಾತ್ರಿಗಳು ತೆರಳಲು ಅನುವು ಮಾಡಿಕೊಟ್ಟರು. ಒಂದೆಡೆ ಮಹದೇಶ್ವರನ ಭಕ್ತರಿಗೆ ಚಿರತೆ ಹಾವಳಿ ಎದುರಾದರೆ ಮತ್ತೊಂದೆಡೆ ಕಾಡಾನೆಗಳು ರಸ್ತೆಯಲ್ಲೇ ಸಂಚಾರ ಮಾಡುತ್ತಿರುವುದರಿಂದ ಮಹದೇಶ್ವರ ದರ್ಶನಕ್ಕೆ ಬರುವ ಪಾದಯಾತ್ರಿ ಭಕ್ತರು ಬಹಳ ಎಚ್ಚರಿಕೆಯಿಂದ ಬರಬೇಕಾಗಿದೆ . ಒಂಟಿಯಾಗಿ ಅಥವಾ ಬೈಕ್ ನಲ್ಲಿ ಸವಾರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏನಿದ್ದರೂ ಈಗ ಗುಂಪು ಗುಂಪಾಗಿ ಸಾಗಬೇಕಾಗಿರುವ ಪ್ರಸಂಗ ಬಂದಿದೆ. ಪಾದಯಾತ್ರಿಗಳು ಎಚ್ಚರ ತಪ್ಪಿದರೆ ಅನಾಹುತ ಖಚಿತ ಎಂದು ಹೇಳಲಾಗುತ್ತಿದೆ.
    1
    ಚಾಮರಾಜನಗರ: ತಮಿಳುನಾಡು ಕಡೆಯಿಂದ ಕರ್ನಾಟಕದಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರಿಗಳಿಗೆ ಇದೀಗ ಕಾಡಾನೆಗಳ ಹಾವಳಿ ಅಧಿಕವಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ಕುರಟ್ಟಿ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಂಟಳ್ಳಿ ಸಮೀಪ ಪಾದಯಾತ್ರಿಗಳು ಬರುವಾಗ ಕಾಡಾನೆಗಳ ಹಿಂಡೇ ರಸ್ತೆ ದಾಟುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪಾದಯಾತ್ರಿಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ತಿಳಿಸಿ, ಕಾಡಾನೆಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಿ, ಕಾಡಿನತ್ತ ತೆರಳಿದ ಬಳಿಕ ಪಾದಯಾತ್ರಿಗಳು ತೆರಳಲು ಅನುವು ಮಾಡಿಕೊಟ್ಟರು.
ಒಂದೆಡೆ ಮಹದೇಶ್ವರನ ಭಕ್ತರಿಗೆ ಚಿರತೆ ಹಾವಳಿ ಎದುರಾದರೆ ಮತ್ತೊಂದೆಡೆ ಕಾಡಾನೆಗಳು ರಸ್ತೆಯಲ್ಲೇ ಸಂಚಾರ ಮಾಡುತ್ತಿರುವುದರಿಂದ ಮಹದೇಶ್ವರ ದರ್ಶನಕ್ಕೆ ಬರುವ ಪಾದಯಾತ್ರಿ ಭಕ್ತರು ಬಹಳ ಎಚ್ಚರಿಕೆಯಿಂದ ಬರಬೇಕಾಗಿದೆ . ಒಂಟಿಯಾಗಿ ಅಥವಾ ಬೈಕ್ ನಲ್ಲಿ ಸವಾರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏನಿದ್ದರೂ ಈಗ ಗುಂಪು ಗುಂಪಾಗಿ ಸಾಗಬೇಕಾಗಿರುವ ಪ್ರಸಂಗ ಬಂದಿದೆ. ಪಾದಯಾತ್ರಿಗಳು ಎಚ್ಚರ ತಪ್ಪಿದರೆ ಅನಾಹುತ ಖಚಿತ ಎಂದು ಹೇಳಲಾಗುತ್ತಿದೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    19 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    12 hrs ago
  • ಕೆ.ಆರ್.ಪೇಟೆ,ಮಾ.16: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಸೌಲಭ್ಯವನ್ನು ಒದಗಿಸುವ ಕಟ್ಟಹಳ್ಳಿ ಬಳಿ ನಿರ್ಮಿಸಲಾಗಿರುವ ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಚನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ನೀರು ಪೂರೈಸುವ ಪಂಪ್‌ಹೌಸ್ ಕೇಂದ್ರವನ್ನು ಮೊಸಳೆಕೊಪ್ಪಲು ಬಳಿ ಶಾಸಕ ಹೆಚ್.ಟಿ.ಮಂಜು ವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲ್ಲೂಕಿನ ಮೊಸಳೇಕೊಪ್ಪಲು ಗ್ರಾಮದ ಬಳಿ ನಿರ್ಮಿಸಿರುವ ಎರಡನೇ ಹಂತದ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಕೇಂದ್ರವನ್ನು ವೀಕ್ಷಣೆ ಮಾಡಿ ನಂತರ ಶೀಳನೆರೆ ಹೋಬಳಿಯ ಭೈರಾಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯವನ್ನು ಸಣ್ಣ ನೀರಾವರಿ ಅಧಿಕಾರಿಗಳು ಮತ್ತು ಭೈರಾಪುರ ಗ್ರಾಮಸ್ಥರೊಂದಿಗೆ ವೀಕ್ಷಣೆ ಮಾಡಿ ನೀರನ್ನು ಪೋಲು ಮಾಡದಂತೆ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ಐಚನಹಳ್ಳಿ ಏತನೀರಾವರಿ ಯೋಜನೆಯನ್ನು ನಮ್ಮ ತಾಲ್ಲೂಕಿನ ಬೂಕನಕೆರೆ ಗ್ರಾಮದ ಸುಪುತ್ರರಾದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ತವರೂರಿಗೆ ವಿಶೇಷ ಯೋಜನೆ ರೂಪಿಸಬೇಕೆಂಬ ಮಹದಾಸೆಯಿಂದ 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಹಳ್ಳಿ ಬಳಿ ಏತ ನೀರಾವರಿ ಯೋಜನೆಗೆ ತಮ್ಮ ಅಧಿಕಾರದ ಅವಧಿಯಲ್ಲಿ 2020ರಲ್ಲಿ ಚಾಲನೆ ನೀಡಿದ್ದರು. ಇದರ ಮೊದಲ ಅಂತದ ಕಾಮಗಾರಿಯು ಮುಗಿದು ಬೂಕನಕೆರೆ ಹೋಬಳಿಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಳೆದ ವರ್ಷ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಮತ್ತು ಕ್ಷೇತ್ರದ ಶಾಸಕನಾದ ನಾನು ಸೇರಿ ಉದ್ಘಾಟನೆ ಮಾಡಿದ್ದೆವು. ಈಗ ಎರಡನೇ ಹಂತದ ಏತನೀರಾವರಿ ಯೋಜನೆಯ ಕಾಮಗಾರಿಯು ಮುಕ್ತಾಯಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಮತ್ತು ಸಂಬAಧಪಟ್ಟ ಸಚಿವರು ಉದ್ಘಾಟನೆಗೆ ಹಸಿರು ನಿಶಾನೆ ತೋರಿದ ಕೂಡಲೇ ದಿನಾಂಕ ನಿಗಧಿಪಡಿಸಿದ ಎರಡನೇ ಹಂತದ ಏತನೀರಾವರಿ ಯೋಜನೆಯನ್ನು ಉದ್ಘಾಟಿಸಲಾಗುವುದು. ಇದರ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಅಧಿಕೃತ ಉದ್ಘಾಟನೆಯ ನಂತರ ಶೀಳನೆರೆ ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಮಳೆಯಾಶ್ರಿತ ಪ್ರದೇಶವಾಗಿರುವ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಗಳಿಗೆ ಈ ಏತ ನೀರಾವರಿ ಯೋಜನೆ ವರಧಾನವಾದ ಯೋಜನೆಯಾಗಿದೆ. ಅಂತರ್ಜಲ ಮಟ್ಟ ವೃದ್ದಿಯಾಗಲಿದೆ. ರೈತರ ಕೃಷಿ ಕೊಳವೆ ಬಾವಿಗಳು, ರೈತರ ತೆರೆದ ಬಾವಿಗಳು, ಕುಡಿಯುವ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟದ ಹೆಚ್ಚಲಿದೆ. ಕುಡಿಯುವ ನೀರಿಗೆ ಹಾಗೂ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಈ ಏತ ಯೋಜನೆಗೆ ಕಾರಣಕರ್ತರಾದ ಮಾಜಿ ಸಿ.ಎಂ.ಯಡಿಯೂರಪ್ಪ ಹಾಗೂ ಮಾಜಿ ಸಚಿವ ನಾರಾಯಣಗೌಡ ಅವರಿಗೆ ಎರಡೂ ಹೋಬಳಿಯ ಜನತೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಶಾಸಕ ಹೆಚ್.ಟಿ.ಮಂಜು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್, ತಾಲ್ಲೂಕು ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಮೊಸಳೇಕೊಪ್ಪಲು ಗ್ರಾಮದ ಯಜಮಾನರುಗಳಾದ ಪಟೇಲ್ ನಿಂಗೇಗೌಡ, ಯಜಮಾನ್ ರಾಮಕೃಷ್ಣೇಗೌಡ, ರಮೇಶ್, ಬಸವೇಗೌಡ, ರಂಗೇಗೌಡ, ಕೆಂಪಣ್ಣ ರವಿ, ಡೇರಿ ತಿಮ್ಮೇಗೌಡ, ನಗುವನಹಳ್ಳಿ ರಾಮಕೃಷ್ಣೇಗೌಡ, ನಾಗೇಗೌಡ, ಅರೆ ರಮೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಜಿಲ್ಲಾ ಜೆಡಿಎಸ್ ಕರ‍್ಯಕಾರಣಿ ಸದಸ್ಯ ಕುರುಬಹಳ್ಳಿ ಕೆ.ಬಿ.ನಾಗೇಶ್, ಜೈನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರಣೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಗಂಜಿಗೆರೆಕೊಪ್ಪಲು ರಾಮಕೃಷ್ಣೇಗೌಡ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿತ್ರಶೀರ್ಷಿಕೆ:16.ಕೆ.ಆರ್.ಪಿ-02: ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಸೌಲಭ್ಯವನ್ನು ಒದಗಿಸುವ ಕಟ್ಟಹಳ್ಳಿ ಬಳಿ ನಿರ್ಮಿಸಲಾಗಿರುವ ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಐಚನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ನೀರು ಪೂರೈಸುವ ಪಂಪ್‌ಹೌಸ್ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ==================================
    4
    ಕೆ.ಆರ್.ಪೇಟೆ,ಮಾ.16: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಸೌಲಭ್ಯವನ್ನು ಒದಗಿಸುವ ಕಟ್ಟಹಳ್ಳಿ ಬಳಿ ನಿರ್ಮಿಸಲಾಗಿರುವ ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಚನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ನೀರು ಪೂರೈಸುವ ಪಂಪ್‌ಹೌಸ್ ಕೇಂದ್ರವನ್ನು ಮೊಸಳೆಕೊಪ್ಪಲು ಬಳಿ ಶಾಸಕ ಹೆಚ್.ಟಿ.ಮಂಜು ವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲ್ಲೂಕಿನ ಮೊಸಳೇಕೊಪ್ಪಲು ಗ್ರಾಮದ ಬಳಿ ನಿರ್ಮಿಸಿರುವ ಎರಡನೇ ಹಂತದ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಕೇಂದ್ರವನ್ನು ವೀಕ್ಷಣೆ ಮಾಡಿ ನಂತರ ಶೀಳನೆರೆ ಹೋಬಳಿಯ ಭೈರಾಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯವನ್ನು ಸಣ್ಣ ನೀರಾವರಿ ಅಧಿಕಾರಿಗಳು ಮತ್ತು ಭೈರಾಪುರ ಗ್ರಾಮಸ್ಥರೊಂದಿಗೆ ವೀಕ್ಷಣೆ ಮಾಡಿ ನೀರನ್ನು ಪೋಲು ಮಾಡದಂತೆ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಐಚನಹಳ್ಳಿ ಏತನೀರಾವರಿ ಯೋಜನೆಯನ್ನು ನಮ್ಮ ತಾಲ್ಲೂಕಿನ ಬೂಕನಕೆರೆ ಗ್ರಾಮದ ಸುಪುತ್ರರಾದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ತವರೂರಿಗೆ ವಿಶೇಷ ಯೋಜನೆ ರೂಪಿಸಬೇಕೆಂಬ ಮಹದಾಸೆಯಿಂದ 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಹಳ್ಳಿ ಬಳಿ ಏತ ನೀರಾವರಿ ಯೋಜನೆಗೆ ತಮ್ಮ ಅಧಿಕಾರದ ಅವಧಿಯಲ್ಲಿ 2020ರಲ್ಲಿ ಚಾಲನೆ ನೀಡಿದ್ದರು. ಇದರ ಮೊದಲ ಅಂತದ ಕಾಮಗಾರಿಯು ಮುಗಿದು ಬೂಕನಕೆರೆ ಹೋಬಳಿಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಳೆದ ವರ್ಷ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಮತ್ತು ಕ್ಷೇತ್ರದ ಶಾಸಕನಾದ ನಾನು ಸೇರಿ ಉದ್ಘಾಟನೆ ಮಾಡಿದ್ದೆವು. ಈಗ ಎರಡನೇ ಹಂತದ ಏತನೀರಾವರಿ ಯೋಜನೆಯ ಕಾಮಗಾರಿಯು ಮುಕ್ತಾಯಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಮತ್ತು ಸಂಬAಧಪಟ್ಟ ಸಚಿವರು ಉದ್ಘಾಟನೆಗೆ ಹಸಿರು ನಿಶಾನೆ ತೋರಿದ ಕೂಡಲೇ ದಿನಾಂಕ ನಿಗಧಿಪಡಿಸಿದ ಎರಡನೇ ಹಂತದ ಏತನೀರಾವರಿ ಯೋಜನೆಯನ್ನು ಉದ್ಘಾಟಿಸಲಾಗುವುದು. ಇದರ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಅಧಿಕೃತ ಉದ್ಘಾಟನೆಯ ನಂತರ ಶೀಳನೆರೆ ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಮಳೆಯಾಶ್ರಿತ ಪ್ರದೇಶವಾಗಿರುವ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಗಳಿಗೆ ಈ ಏತ ನೀರಾವರಿ ಯೋಜನೆ ವರಧಾನವಾದ ಯೋಜನೆಯಾಗಿದೆ. ಅಂತರ್ಜಲ ಮಟ್ಟ ವೃದ್ದಿಯಾಗಲಿದೆ. ರೈತರ ಕೃಷಿ ಕೊಳವೆ ಬಾವಿಗಳು, ರೈತರ ತೆರೆದ ಬಾವಿಗಳು, ಕುಡಿಯುವ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟದ ಹೆಚ್ಚಲಿದೆ. ಕುಡಿಯುವ ನೀರಿಗೆ ಹಾಗೂ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಈ ಏತ ಯೋಜನೆಗೆ ಕಾರಣಕರ್ತರಾದ ಮಾಜಿ ಸಿ.ಎಂ.ಯಡಿಯೂರಪ್ಪ ಹಾಗೂ ಮಾಜಿ ಸಚಿವ ನಾರಾಯಣಗೌಡ ಅವರಿಗೆ ಎರಡೂ ಹೋಬಳಿಯ ಜನತೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಶಾಸಕ ಹೆಚ್.ಟಿ.ಮಂಜು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್, ತಾಲ್ಲೂಕು ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಮೊಸಳೇಕೊಪ್ಪಲು ಗ್ರಾಮದ ಯಜಮಾನರುಗಳಾದ ಪಟೇಲ್ ನಿಂಗೇಗೌಡ, ಯಜಮಾನ್ ರಾಮಕೃಷ್ಣೇಗೌಡ, ರಮೇಶ್, ಬಸವೇಗೌಡ, ರಂಗೇಗೌಡ, ಕೆಂಪಣ್ಣ ರವಿ, ಡೇರಿ ತಿಮ್ಮೇಗೌಡ, ನಗುವನಹಳ್ಳಿ ರಾಮಕೃಷ್ಣೇಗೌಡ, ನಾಗೇಗೌಡ, ಅರೆ ರಮೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಜಿಲ್ಲಾ ಜೆಡಿಎಸ್ ಕರ‍್ಯಕಾರಣಿ ಸದಸ್ಯ ಕುರುಬಹಳ್ಳಿ ಕೆ.ಬಿ.ನಾಗೇಶ್, ಜೈನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರಣೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಗಂಜಿಗೆರೆಕೊಪ್ಪಲು ರಾಮಕೃಷ್ಣೇಗೌಡ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:16.ಕೆ.ಆರ್.ಪಿ-02: ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಸೌಲಭ್ಯವನ್ನು ಒದಗಿಸುವ ಕಟ್ಟಹಳ್ಳಿ ಬಳಿ ನಿರ್ಮಿಸಲಾಗಿರುವ ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಐಚನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ನೀರು ಪೂರೈಸುವ ಪಂಪ್‌ಹೌಸ್ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
==================================
    user_Srinivas k.r.pete
    Srinivas k.r.pete
    Citizen Reporter ಕೃಷ್ಣರಾಜಪೇಟೆ, ಮಂಡ್ಯ, ಕರ್ನಾಟಕ•
    15 hrs ago
  • Post by Asme
    4
    Post by Asme
    user_Asme
    Asme
    Nagamangala, Mandya•
    14 hrs ago
  • *ನನಗೆ ಮೊದಲು ಬಿ ಫಾರಂ ಕೊಟ್ಟು, ಅವಕಾಶ ಕಲ್ಪಿಸಿದ್ದು ಕೆ.ಹೆಚ್ ಪಾಟೀಲರು: ಡಿಸಿಎಂ ಡಿ.ಕೆ. ಶಿವಕುಮಾರ್* *ಪಾಟೀಲರ ಜತೆ ವಿದ್ಯಾರ್ಥಿ ನಾಯಕ, ಪಕ್ಷದ ಕಾರ್ಯದರ್ಶಿ, ಶಾಸಕ, ಸಚಿವನಾಗಿ ಕೆಲಸ ಮಾಡಿರುವೆ* *ಬೆಂಗಳೂರು, ಮಾ.:* "ಕೆ.ಹೆಚ್. ಪಾಟೀಲರು, ವೀರಪ್ಪ ಮೊಯ್ಲಿ, ದೆಹಲಿ ನಾಯಕರು, ಚಂದ್ರಶೇಖರ ಮೂರ್ತಿ ಅವರು ನನ್ನನ್ನು ಗುರುತಿಸಿ ಬಿ ಫಾರಂ ನೀಡದ್ದಕ್ಕೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಕೆ.ಹೆಚ್ ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. "ಕೆ.ಹೆಚ್. ಪಾಟೀಲ್ ಅವರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜತೆ ಶಾಸಕರಾಗಿ ಕೆಲಸ ಮಾಡಿದ್ದೆ. ನಾನು ಅವರ ಜತೆ ಪಕ್ಷದ ಕಾರ್ಯದರ್ಶಿಯಾಗಿದ್ದೆ. ನಂತರ ಅವರೊಂದಿಗೆ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ" ಎಂದರು. "ಅವರ ಆಚಾರ, ವಿಚಾರ ಅರ್ಥ ಮಾಡಿಕೊಂಡಿದ್ದೇನೆ. ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು, ನೀನಾರಿಗಾದೆಯೋ ಮಾನವ ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ. ಎಲ್ಲಾ ವಿಚಾರಕ್ಕೂ ಅವರ ಚಿಂತನೆ ಈಗಲೂ ಪ್ರಸ್ತುತ. ಅವರ ದಿಟ್ಟ ನಾಯಕತ್ವ, ಯಾವುದಕ್ಕೂ ಅಂಜುತ್ತಿರಲಿಲ್ಲ. ಅವರು ಅರಣ್ಯ ಸಚಿವರಾಗಿದ್ದರು. ಬಂಗಾರಪ್ಪ ಅವರ ಸಂಪುಟದಲ್ಲಿ ನಾನು, ಮೊಯ್ಲಿ ಸಾಹೇಬರು ಅವರ ಜೊತೆ ಸಹೋದ್ಯೋಗಿಯಾಗಿದ್ದೆವು" ಎಂದು ತಿಳಿಸಿದರು. "ಪಾಟೀಲರು ರೈತರ ಬದುಕು ಹಾಗೂ ಅರಣ್ಯ ರಕ್ಷಣೆಗೆ ಕೈಗೊಂಡ ತೀರ್ಮಾನ, ಸಹಕಾರ ಕ್ಷೇತ್ರದಲ್ಲಿ ಅವರ ದೂರದೃಷ್ಟಿ ಬಹಳ ದೊಡ್ಡದು. ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು ಎಂದು ಸಹಕಾರ ತತ್ವವನ್ನು ಬೆಳೆಸಿದವರು. ಧಾರವಾಡ ಜಿಲ್ಲೆಯಲ್ಲಿ ದೊಡ್ಡ ನಾಯಕತ್ವ ಬೆಳೆಸಿಕೊಂಡಿದ್ದರು" ಎಂದರು. "ನನಗೆ ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು. ದೆಹಲಿಯವರು ತೀರ್ಮಾನ ಮಾಡಿದರು. ಆಗ ಪಾಟೀಲರು ನನ್ನನ್ನು ಕರೆಸಿ, ನೀನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ ಎಂದು ಕೇಳಿದರು. ನಂತರ ನನಗೆ ಬಿ ಫಾರಂಗೆ ಸಹಿ ಹಾಕಿ ಕೊಟ್ಟರು. ಅಲ್ಲಿಂದ ನನ್ನ ಪಯಣ ಶುರುವಾಗಿದೆ ಇಲ್ಲಿಯವರೆಗೆ ಬಂದಿದೆ. ಮನುಷ್ಯ ಸತ್ತ ನಂತರ ದೇಹ ಭೂಮಿಯ ಒಳಗೆ ಇರುತ್ತದೆ, ಮಾಡಿದ ಸಾಧನೆ ಭೂಮಿಯ ಮೇಲೆ ಇರುತ್ತವೆ" ಎಂದರು. "ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅಧಿಕಾರದಲ್ಲಿ ಯಾರು ಹೇಗೆ ಇರುತ್ತಾರೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ, ಯಾವ ರೀತಿ ಸಾಧನೆ ಮಾಡಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ಅದೇರೀತಿ ಇಂದು ಅನೇಕ ನಾಯಕರು ಅವರ ಕಾಲದಲ್ಲಿ ಬೆಳೆದಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ದಿಟ್ಟವಾದ ರಾಜಕೀಯ ಬದುಕು ನಮಗೆ ಸ್ಫೂರ್ತಿಯಾಗಿದೆ. ದೇವರಾಜ ಅರಸು ಅವರು ಕೂಡ ವಿಧಾನಸಭೆಯಲ್ಲಿ ಪಾಟೀಲರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ನಾನು ಬಸವಣ್ಣನ ಅನುಯಾಯಿ ಎಂದು ಹೇಳಿದ್ದರು" ಎಂದು ಸ್ಮರಿಸಿದರು. "ಕೆ.ಹೆಚ್ ಪಾಟೀಲರ ಹೆಸರನ್ನು ಹೆಚ್.ಕೆ. ಪಾಟೀಲ್ ಹಾಗೂ ಅವರ ಶಿಷ್ಯಕೋಟಿಗಳು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿದ್ದ ಧೈರ್ಯ ಒಂದು ಮಾತ್ರ ಹೆಚ್.ಕೆ ಪಾಟೀಲ್ ಅವರಲ್ಲಿ ಇಲ್ಲ, ಉಳಿದ ಎಲ್ಲಾ ಗುಣಗಳಿವೆ. ಕೆಲವು ವಿಚಾರಗಳಲ್ಲಿ ಹೆಚ್.ಕೆ. ಪಾಟೀಲರು ತಂದೆಯಂತೆ ಧೈರ್ಯ ತೀರ್ಮಾನ ಮಾಡಿದ್ದರೆ, ಅವರು ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದರು. ಕೃಷ್ಣ ಅವರ ನಂತರ ಅವರೇ ನಮ್ಮ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ" ಎಂದು ಹೇಳಿದರು. "ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಒಳ್ಳೆಯದನ್ನು ಮಾಡುತ್ತೇವೆ ಎಂಬುದು ಮುಖ್ಯ" ಎಂದು ತಿಳಿಸಿದರು.
    1
    *ನನಗೆ ಮೊದಲು ಬಿ ಫಾರಂ ಕೊಟ್ಟು, ಅವಕಾಶ ಕಲ್ಪಿಸಿದ್ದು ಕೆ.ಹೆಚ್ ಪಾಟೀಲರು: ಡಿಸಿಎಂ ಡಿ.ಕೆ. ಶಿವಕುಮಾರ್*
*ಪಾಟೀಲರ ಜತೆ ವಿದ್ಯಾರ್ಥಿ ನಾಯಕ, ಪಕ್ಷದ ಕಾರ್ಯದರ್ಶಿ, ಶಾಸಕ, ಸಚಿವನಾಗಿ ಕೆಲಸ ಮಾಡಿರುವೆ*
*ಬೆಂಗಳೂರು, ಮಾ.:*
"ಕೆ.ಹೆಚ್. ಪಾಟೀಲರು, ವೀರಪ್ಪ ಮೊಯ್ಲಿ, ದೆಹಲಿ ನಾಯಕರು, ಚಂದ್ರಶೇಖರ ಮೂರ್ತಿ ಅವರು ನನ್ನನ್ನು ಗುರುತಿಸಿ ಬಿ ಫಾರಂ ನೀಡದ್ದಕ್ಕೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಕೆ.ಹೆಚ್ ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
"ಕೆ.ಹೆಚ್. ಪಾಟೀಲ್ ಅವರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜತೆ ಶಾಸಕರಾಗಿ ಕೆಲಸ ಮಾಡಿದ್ದೆ. ನಾನು ಅವರ ಜತೆ ಪಕ್ಷದ ಕಾರ್ಯದರ್ಶಿಯಾಗಿದ್ದೆ. ನಂತರ ಅವರೊಂದಿಗೆ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ" ಎಂದರು.
"ಅವರ ಆಚಾರ, ವಿಚಾರ ಅರ್ಥ ಮಾಡಿಕೊಂಡಿದ್ದೇನೆ. ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು, ನೀನಾರಿಗಾದೆಯೋ ಮಾನವ ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ. ಎಲ್ಲಾ ವಿಚಾರಕ್ಕೂ ಅವರ ಚಿಂತನೆ ಈಗಲೂ ಪ್ರಸ್ತುತ. ಅವರ ದಿಟ್ಟ ನಾಯಕತ್ವ, ಯಾವುದಕ್ಕೂ ಅಂಜುತ್ತಿರಲಿಲ್ಲ. ಅವರು ಅರಣ್ಯ ಸಚಿವರಾಗಿದ್ದರು. ಬಂಗಾರಪ್ಪ ಅವರ ಸಂಪುಟದಲ್ಲಿ ನಾನು, ಮೊಯ್ಲಿ ಸಾಹೇಬರು ಅವರ ಜೊತೆ ಸಹೋದ್ಯೋಗಿಯಾಗಿದ್ದೆವು" ಎಂದು ತಿಳಿಸಿದರು.
"ಪಾಟೀಲರು ರೈತರ ಬದುಕು ಹಾಗೂ ಅರಣ್ಯ ರಕ್ಷಣೆಗೆ ಕೈಗೊಂಡ ತೀರ್ಮಾನ, ಸಹಕಾರ ಕ್ಷೇತ್ರದಲ್ಲಿ ಅವರ ದೂರದೃಷ್ಟಿ ಬಹಳ ದೊಡ್ಡದು. ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು ಎಂದು ಸಹಕಾರ ತತ್ವವನ್ನು ಬೆಳೆಸಿದವರು. ಧಾರವಾಡ ಜಿಲ್ಲೆಯಲ್ಲಿ ದೊಡ್ಡ ನಾಯಕತ್ವ ಬೆಳೆಸಿಕೊಂಡಿದ್ದರು" ಎಂದರು.
"ನನಗೆ ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು. ದೆಹಲಿಯವರು ತೀರ್ಮಾನ ಮಾಡಿದರು. ಆಗ ಪಾಟೀಲರು ನನ್ನನ್ನು ಕರೆಸಿ, ನೀನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ ಎಂದು ಕೇಳಿದರು. ನಂತರ ನನಗೆ ಬಿ ಫಾರಂಗೆ ಸಹಿ ಹಾಕಿ ಕೊಟ್ಟರು. ಅಲ್ಲಿಂದ ನನ್ನ ಪಯಣ ಶುರುವಾಗಿದೆ ಇಲ್ಲಿಯವರೆಗೆ ಬಂದಿದೆ. ಮನುಷ್ಯ ಸತ್ತ ನಂತರ ದೇಹ ಭೂಮಿಯ ಒಳಗೆ ಇರುತ್ತದೆ, ಮಾಡಿದ ಸಾಧನೆ ಭೂಮಿಯ ಮೇಲೆ ಇರುತ್ತವೆ" ಎಂದರು.
"ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅಧಿಕಾರದಲ್ಲಿ ಯಾರು ಹೇಗೆ ಇರುತ್ತಾರೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ, ಯಾವ ರೀತಿ ಸಾಧನೆ ಮಾಡಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ಅದೇರೀತಿ ಇಂದು ಅನೇಕ ನಾಯಕರು ಅವರ ಕಾಲದಲ್ಲಿ ಬೆಳೆದಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ದಿಟ್ಟವಾದ ರಾಜಕೀಯ ಬದುಕು ನಮಗೆ ಸ್ಫೂರ್ತಿಯಾಗಿದೆ. ದೇವರಾಜ ಅರಸು ಅವರು ಕೂಡ ವಿಧಾನಸಭೆಯಲ್ಲಿ ಪಾಟೀಲರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ನಾನು ಬಸವಣ್ಣನ ಅನುಯಾಯಿ ಎಂದು ಹೇಳಿದ್ದರು" ಎಂದು ಸ್ಮರಿಸಿದರು.
"ಕೆ.ಹೆಚ್ ಪಾಟೀಲರ ಹೆಸರನ್ನು ಹೆಚ್.ಕೆ. ಪಾಟೀಲ್ ಹಾಗೂ ಅವರ ಶಿಷ್ಯಕೋಟಿಗಳು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿದ್ದ ಧೈರ್ಯ ಒಂದು ಮಾತ್ರ ಹೆಚ್.ಕೆ ಪಾಟೀಲ್ ಅವರಲ್ಲಿ ಇಲ್ಲ, ಉಳಿದ ಎಲ್ಲಾ ಗುಣಗಳಿವೆ. ಕೆಲವು ವಿಚಾರಗಳಲ್ಲಿ ಹೆಚ್.ಕೆ. ಪಾಟೀಲರು ತಂದೆಯಂತೆ ಧೈರ್ಯ ತೀರ್ಮಾನ ಮಾಡಿದ್ದರೆ, ಅವರು ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದರು. ಕೃಷ್ಣ ಅವರ ನಂತರ ಅವರೇ ನಮ್ಮ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ" ಎಂದು ಹೇಳಿದರು.
"ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಒಳ್ಳೆಯದನ್ನು ಮಾಡುತ್ತೇವೆ ಎಂಬುದು ಮುಖ್ಯ" ಎಂದು ತಿಳಿಸಿದರು.
    user_Vinod
    Vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    16 min ago
  • ಸಚಿವರ ವರ್ತನೆಯಿಂದ ಬೇಸರಗೊಂಡ ಸ್ಪೀಕರ್ U.T. ಖಾದರ್ ಸದನದಿಂದ ಹೊರ ನಡೆದರು......
    1
    ಸಚಿವರ ವರ್ತನೆಯಿಂದ ಬೇಸರಗೊಂಡ ಸ್ಪೀಕರ್ U.T. ಖಾದರ್ ಸದನದಿಂದ ಹೊರ ನಡೆದರು......
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಹನೂರು: ಒಳಮೀಸಲಾತಿ ಕುರಿತಾಗಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಹೊಲಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹನೂರು ಪಟ್ಟಣದಲ್ಲಿ ಬಲಗೈ ಸಮುದಾಯದವರು ಪ್ರತಿಭಟನೆ ನಡೆಸಿದರು. ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘಟನೆಗಳು, ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದರು. ಪ್ರತಿಭಟನಾಕಾರರು ಮಹದೇಶ್ವರ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಕೆಂಪೇಗೌಡ ವೃತ್ತ, ಖಾಸಗಿ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚೈತ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಾಗಮೋಹನ್ ದಾಸ್ ವರದಿಯನ್ನು ತಕ್ಷಣವೇ ರದ್ದುಪಡಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.
    2
    ಹನೂರು:
ಒಳಮೀಸಲಾತಿ ಕುರಿತಾಗಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಹೊಲಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹನೂರು ಪಟ್ಟಣದಲ್ಲಿ ಬಲಗೈ ಸಮುದಾಯದವರು ಪ್ರತಿಭಟನೆ ನಡೆಸಿದರು.
ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘಟನೆಗಳು, ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದರು. ಪ್ರತಿಭಟನಾಕಾರರು ಮಹದೇಶ್ವರ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಕೆಂಪೇಗೌಡ ವೃತ್ತ, ಖಾಸಗಿ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚೈತ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಾಗಮೋಹನ್ ದಾಸ್ ವರದಿಯನ್ನು ತಕ್ಷಣವೇ ರದ್ದುಪಡಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.