Shuru
Apke Nagar Ki App…
ಸಚಿವರ ಇಲಾಖೆಗಳಿಂದಲೇ ಸಮರ್ಪಕ ಉತ್ತರವಿಲ್ಲ..ಸದನ ಯಾಕೆ ಬೇಕು...? ಸಚಿವರ ವರ್ತನೆಯಿಂದ ಬೇಸರಗೊಂಡ ಸ್ಪೀಕರ್ U.T. ಖಾದರ್ ಸದನದಿಂದ ಹೊರ ನಡೆದರು......
ಅರವಿಂದ್ ರಾಜೀವ್
ಸಚಿವರ ಇಲಾಖೆಗಳಿಂದಲೇ ಸಮರ್ಪಕ ಉತ್ತರವಿಲ್ಲ..ಸದನ ಯಾಕೆ ಬೇಕು...? ಸಚಿವರ ವರ್ತನೆಯಿಂದ ಬೇಸರಗೊಂಡ ಸ್ಪೀಕರ್ U.T. ಖಾದರ್ ಸದನದಿಂದ ಹೊರ ನಡೆದರು......
More news from ಕರ್ನಾಟಕ and nearby areas
- Post by SUDHUR CHAULANI NEWS1
- Post by Gulam Muhammad1
- *ಸಿಲಿಂಡರ್ ಅಭಾವ ವಿರೋಧಿಸಿ ಆಪ್ ಪ್ರತಿಭಟನೆ* ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ ಸಿಲಿಂಡರ್ ಅಭಾವಕ್ಕೆ ಇಂದು ದೇಶದ ಜನಸಾಮಾನ್ಯ ಸಂಪೂರ್ಣ ತತ್ತರಿಸುತ್ತಿದ್ದಾನೆ. ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗಿ ಬೀದಿಗೆ ಬೀಳುವ ಪರಿಸ್ಥಿತಿಯನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಆಮ್ ಆದ್ಮಿ ಪಕ್ಷ ಇಂದು ತೀವ್ರ ಪ್ರತಿಭಟನೆಯನ್ನು ನಡೆಸಿತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ " ಪ್ರಧಾನಿ ಮೋದಿ ಅವರ ಅಮೆರಿಕ ಗುಲಾಮಗಿರಿ ವಿದೇಶಾಂಗ ನೀತಿಯಿಂದಾಗಿ ದೇಶದ ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಹಿಂದೆ ಕೊರೋನಾ ಸಂದರ್ಭದಲ್ಲಿಯೂ ಸಹ ಇದೇ ರೀತಿಯ ಅವಾಂತರಕ್ಕೆ ತಳ್ಳಿದ್ದ ಬಿಜೆಪಿ ಕೇಂದ್ರ ಸರ್ಕಾರ ಪ್ರತಿ ದಿವಸ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತಾ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ವಿಶ್ವದಲ್ಲಿ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಭಾರತವು ತನ್ನ ಅಲಿಪ್ತ ಶೃಂಗ ವಿದೇಶಾಂಗ ನೀತಿಯನ್ನು ಮುಂದುವರಿಸಿತ್ತು. ಆದರೆ ಈಗ ಪ್ರಧಾನಿ ಮೋದಿಯವರು ತಮ್ಮ ರಹಸ್ಯಗಳನ್ನು ಮುಚ್ಚಿಕೊಳ್ಳಲು ಅಮೆರಿಕ - ಇಸ್ರೇಲ್ ಪರವಾದಂತಹ ಶರಣಾಗತಿ ನೀತಿಯನ್ನು ಅನುಸರಿಸುತ್ತಿರುವುದು ದೇಶದ ಜನ ಗಮನಿಸಬೇಕಿದೆ. ಕೂಡಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉದ್ಭವಿಸಿರುವ ಅಡುಗೆ ಅನಿಲ ಪೂರೈಕೆಯನ್ನು ಸರಾಗವಾಗಿ ಮಾಡದಿದ್ದಲ್ಲಿ ಪಕ್ಷವು ಮತ್ತಷ್ಟು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ" ಎಂದು ಎಚ್ಚರಿಸಿದರು. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ " ರಾಜ್ಯದಲ್ಲಿ ಎಲ್ಲೆಡೆ ಅವ್ಯಾಹತವಾಗಿ ಕಾಳಸಂತೆಯಲ್ಲಿ ದುಬಾರಿ ವೆಚ್ಚದಲ್ಲಿ ಮಾರಾಟದಂತೆಯನ್ನು ನಿಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಿಧಾನಸಭೆಯಲ್ಲಿ ಆಹಾರ ಪೂರೈಕೆ ಸಚಿವ ಮುನಿಯಪ್ಪ ಅಸಹಾಯಕರಾಗಿ ಮಾತನಾಡುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದನ್ನು ಪಕ್ಷವು ಸಹಿಸುವುದಿಲ್ಲ" ಎಂದು ಗುಡುಗಿದರು. ಪ್ರತಿಭಟನೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ ,ಜಗದೀಶ್ ವಿ. ಸದಂ,ಲೋಹಿತ್ ಕುಮಾರ್ , ಉಷಾ ಮೋಹನ್, ಪುಷ್ಪ ಕೇಶವ್, ರವಿಕುಮಾರ್ ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.1
- ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿಕಾರ್ಯಾಚರಣೆ. ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಹೈಡ್ರೋಪೊನಿಕ್ ಗಾಂಜಾ ಜಪ್ತಿ. 1.125 ಕೆಜೆ ತೂಕದ 39.37 ಲಕ್ಷ ಮೌಲ್ಯದ ಗಾಂಜಾ ಸೀಜ್. ಅಕ್ರಮ ಗಾಂಜಾವನ್ನ ಫೋಟೋ ಫ್ರೇಮಿನ ಒಳಗೆ ಇಟ್ಟು ಸಾಗಾಟ. ಬ್ಯಾಗ್ ಪರಿಶೀಲನೆ ವೇಳೆ ಅಕ್ರಮ ಗಾಂಜಾ ಸಾಗಾಟ ಬೆಳಕಿಗೆ. ಬ್ಯಾಂಕಾಗ್ ನಿಂದ ಬೆಂಗಳೂರಿಗೆ ಬರುವ ವೇಳೆ ಆರೋಪಿ ಲಾಕ್. ಆರೋಪಿ ವಿರುದ್ದ NDPS ಕಾಯ್ದೆ 1985ರಡಿ ಪ್ರಕರಣ ದಾಖಲು. ಆರೋಪಿಯನ್ನ ಬಂದಿಸಿ ತನಿಖೆ ಕೈಗೊಂಡಿರುವ ಕಸ್ಟಮ್ಸ್ ಅಧಿಕಾರಿಗಳು. ದೇವನಹಳ್ಳಿ ಕೆಂಪೇಗೌಡ ಎರ್ ಪೋರ್ಟಿನಲ್ಲಿ ಘಟನೆ.1
- ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟಕ್ಕೆ ಮಾನವ ಹಕ್ಕುಗಳ ಸ್ಥಾಪಕ ಅಧ್ಯಕ್ಷ ಸಿ. ಎನ್ ಬೈರೇಗೌಡ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೋರಾಟದ ಭಾಗವಾಗಿ ಇಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರು ರೈತ ಪರ ಕಾಳಜಿ ಮೆರೆದಿದ್ದಾರೆ.1
- ಶ್ರೀನಿವಾಸಪುರ: ದಲಿತ ಕುಟುಂಬದ ಮೇಲೆ ದೌರ್ಜನ್ಯ; ಮಹಿಳೆಯನ್ನು ಕಾರಿನಿಂದ ಗುದ್ದಿ ರಂಗನಾಥ್, ರಘು ನಾಥ್ ರೆಡ್ಡಿ,ಶಂಕರ ರೆಡ್ಡಿ,ಬಾಬುರೆಡ್ಡಿ,ಬೆಳ್ಳಮ್ ಶ್ರೀನಿವಾಸ್ ರೆಡ್ಡಿ, ಅನಿಲ್ ಕುಮಾರ್, ಕೊಲೆ ಯತ್ನ - ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೋಬಳಿ, ಜೋಡಿ ಕೊತ್ತಪಲ್ಲಿ ಗ್ರಾಮದ ಕಡಪ ರಸ್ತೆಯಲ್ಲಿ ವಾಸವಾಗಿರುವ ದಲಿತ ಕುಟುಂಬವೊಂದರ ಮೇಲೆ ಭೂ ವಿವಾದದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಜೋಡಿ ಕೊತ್ತಪಲ್ಲಿ ಗ್ರಾಮದ ಸರ್ವೆ ನಂ. 58ರ ಜಮೀನು ದಲಿತ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಕದ ಜಮೀನಿನ ಮಾಲೀಕ ರಂಗನಾಥ್ ಎಂಬುವವರು ಅವರ ಕುಟುಂಬದವರು ಈ ಕುಟುಂಬದ ಮೇಲೆ ಇಲ್ಲಸಲ್ಲದ ಕಾರಣಕ್ಕೆ ಗಲಾಟೆ ಮಾಡುತ್ತಾ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ದಿನಾಂಕ 16-03-2026ರ ಸೋಮವಾರದಂದು, ಅಧಿಕಾರಿಗಳು ಹಾಗೂ ರಂಗನಾಥ್ ಎಂಬುವವರು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಏಕಾಏಕಿ ಜೆಸಿಬಿ ಯೊಂದಿಗೆ ನಾರಾಯಣಸ್ವಾಮಿ ಅವರ ಜಮೀನಿಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕುಟುಂಬದ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. "ರಸ್ತೆಯ ವಿಚಾರವಾಗಿ ಉಭಯ ಕಡೆಯವರು ತಲಾ 10 ಅಡಿ ಜಾಗ ಬಿಡೋಣ" ಎಂದು ನಾರಾಯಣಸ್ವಾಮಿ ಮನವಿ ಮಾಡಿದರೂ ಸಹ, ಅದಕ್ಕೆ ಒಪ್ಪದ ರಂಗನಾಥ್ ಕುಟುಂಬ ವು , "ನಾವು ಒಂದು ಅಡಿ ಜಾಗವನ್ನೂ ಬಿಡುವುದಿಲ್ಲ" ಎಂದು ಹಠ ಹಿಡಿದು ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕೂಡ ರಂಗತ್ ಪರವಾಗಿ ನಿಂತು, ದಲಿತ ಕುಟುಂಬಕ್ಕೆ ರಕ್ಷಣೆ ನೀಡುವ ಬದಲು "ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ" ಎಂದು ಬೆದರಿಸಿ, ಅವರ ಜಾಗದಲ್ಲೇ ರಸ್ತೆ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದೇ ದಿನ ಸಂಜೆ, ರಂಗನಾಥ್ ಸಹಜರರು ದಲಿತ ಮಹಿಳೆಯ ಮೇಲೆ ಕಾರನ್ನು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆ ಸದ್ಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ತಹಶೀಲ್ದಾರ್ ಅವರು ಆದೇಶ ಮಾಡಿದ್ದಾರೆ ಎಂಬ ನಕಲಿ ಪತ್ರವನ್ನು ತೋರಿಸಿ, ಅಧಿಕಾರಿಗಳ ಹೆಸರಿನಲ್ಲಿ ದಲಿತ ಕುಟುಂಬವನ್ನು ಬೆದರಿಸಿ ದೌರ್ಜನ್ಯ ಎಸಗಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಆಗ್ರಹ: "ನಮ್ಮ ಸ್ವಂತ ಜಮೀನಿನಲ್ಲಿ ನಮಗೆ ರಕ್ಷಣೆ ಇಲ್ಲವೇ? ದಲಿತರಿಗೆ ಈ ನಾಡಿನಲ್ಲಿ ಸಮಾನತೆ ಮತ್ತು ನ್ಯಾಯ ಸಿಗುವುದಿಲ್ಲವೇ?" ಎಂದು ಸಂತ್ರಸ್ತ ಕುಟುಂಬ ಪ್ರಶ್ನಿಸಿದೆ. ಸಂಬಂಧಪಟ್ಟ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಜಾಂಭವ ಯುವ ಸೇನೆ ಸಂಘಟನೆ ಒತ್ತಾಯಿಸಿದೆ .1
- ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...1
- Facebook mein ek dusre ko support karna good night1
- *ನನಗೆ ಮೊದಲು ಬಿ ಫಾರಂ ಕೊಟ್ಟು, ಅವಕಾಶ ಕಲ್ಪಿಸಿದ್ದು ಕೆ.ಹೆಚ್ ಪಾಟೀಲರು: ಡಿಸಿಎಂ ಡಿ.ಕೆ. ಶಿವಕುಮಾರ್* *ಪಾಟೀಲರ ಜತೆ ವಿದ್ಯಾರ್ಥಿ ನಾಯಕ, ಪಕ್ಷದ ಕಾರ್ಯದರ್ಶಿ, ಶಾಸಕ, ಸಚಿವನಾಗಿ ಕೆಲಸ ಮಾಡಿರುವೆ* *ಬೆಂಗಳೂರು, ಮಾ.:* "ಕೆ.ಹೆಚ್. ಪಾಟೀಲರು, ವೀರಪ್ಪ ಮೊಯ್ಲಿ, ದೆಹಲಿ ನಾಯಕರು, ಚಂದ್ರಶೇಖರ ಮೂರ್ತಿ ಅವರು ನನ್ನನ್ನು ಗುರುತಿಸಿ ಬಿ ಫಾರಂ ನೀಡದ್ದಕ್ಕೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಕೆ.ಹೆಚ್ ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. "ಕೆ.ಹೆಚ್. ಪಾಟೀಲ್ ಅವರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜತೆ ಶಾಸಕರಾಗಿ ಕೆಲಸ ಮಾಡಿದ್ದೆ. ನಾನು ಅವರ ಜತೆ ಪಕ್ಷದ ಕಾರ್ಯದರ್ಶಿಯಾಗಿದ್ದೆ. ನಂತರ ಅವರೊಂದಿಗೆ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ" ಎಂದರು. "ಅವರ ಆಚಾರ, ವಿಚಾರ ಅರ್ಥ ಮಾಡಿಕೊಂಡಿದ್ದೇನೆ. ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು, ನೀನಾರಿಗಾದೆಯೋ ಮಾನವ ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ. ಎಲ್ಲಾ ವಿಚಾರಕ್ಕೂ ಅವರ ಚಿಂತನೆ ಈಗಲೂ ಪ್ರಸ್ತುತ. ಅವರ ದಿಟ್ಟ ನಾಯಕತ್ವ, ಯಾವುದಕ್ಕೂ ಅಂಜುತ್ತಿರಲಿಲ್ಲ. ಅವರು ಅರಣ್ಯ ಸಚಿವರಾಗಿದ್ದರು. ಬಂಗಾರಪ್ಪ ಅವರ ಸಂಪುಟದಲ್ಲಿ ನಾನು, ಮೊಯ್ಲಿ ಸಾಹೇಬರು ಅವರ ಜೊತೆ ಸಹೋದ್ಯೋಗಿಯಾಗಿದ್ದೆವು" ಎಂದು ತಿಳಿಸಿದರು. "ಪಾಟೀಲರು ರೈತರ ಬದುಕು ಹಾಗೂ ಅರಣ್ಯ ರಕ್ಷಣೆಗೆ ಕೈಗೊಂಡ ತೀರ್ಮಾನ, ಸಹಕಾರ ಕ್ಷೇತ್ರದಲ್ಲಿ ಅವರ ದೂರದೃಷ್ಟಿ ಬಹಳ ದೊಡ್ಡದು. ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು ಎಂದು ಸಹಕಾರ ತತ್ವವನ್ನು ಬೆಳೆಸಿದವರು. ಧಾರವಾಡ ಜಿಲ್ಲೆಯಲ್ಲಿ ದೊಡ್ಡ ನಾಯಕತ್ವ ಬೆಳೆಸಿಕೊಂಡಿದ್ದರು" ಎಂದರು. "ನನಗೆ ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು. ದೆಹಲಿಯವರು ತೀರ್ಮಾನ ಮಾಡಿದರು. ಆಗ ಪಾಟೀಲರು ನನ್ನನ್ನು ಕರೆಸಿ, ನೀನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ ಎಂದು ಕೇಳಿದರು. ನಂತರ ನನಗೆ ಬಿ ಫಾರಂಗೆ ಸಹಿ ಹಾಕಿ ಕೊಟ್ಟರು. ಅಲ್ಲಿಂದ ನನ್ನ ಪಯಣ ಶುರುವಾಗಿದೆ ಇಲ್ಲಿಯವರೆಗೆ ಬಂದಿದೆ. ಮನುಷ್ಯ ಸತ್ತ ನಂತರ ದೇಹ ಭೂಮಿಯ ಒಳಗೆ ಇರುತ್ತದೆ, ಮಾಡಿದ ಸಾಧನೆ ಭೂಮಿಯ ಮೇಲೆ ಇರುತ್ತವೆ" ಎಂದರು. "ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅಧಿಕಾರದಲ್ಲಿ ಯಾರು ಹೇಗೆ ಇರುತ್ತಾರೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ, ಯಾವ ರೀತಿ ಸಾಧನೆ ಮಾಡಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತಾರೆ ಎಂಬುದು ಮುಖ್ಯ. ಅದೇರೀತಿ ಇಂದು ಅನೇಕ ನಾಯಕರು ಅವರ ಕಾಲದಲ್ಲಿ ಬೆಳೆದಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ದಿಟ್ಟವಾದ ರಾಜಕೀಯ ಬದುಕು ನಮಗೆ ಸ್ಫೂರ್ತಿಯಾಗಿದೆ. ದೇವರಾಜ ಅರಸು ಅವರು ಕೂಡ ವಿಧಾನಸಭೆಯಲ್ಲಿ ಪಾಟೀಲರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ನಾನು ಬಸವಣ್ಣನ ಅನುಯಾಯಿ ಎಂದು ಹೇಳಿದ್ದರು" ಎಂದು ಸ್ಮರಿಸಿದರು. "ಕೆ.ಹೆಚ್ ಪಾಟೀಲರ ಹೆಸರನ್ನು ಹೆಚ್.ಕೆ. ಪಾಟೀಲ್ ಹಾಗೂ ಅವರ ಶಿಷ್ಯಕೋಟಿಗಳು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿದ್ದ ಧೈರ್ಯ ಒಂದು ಮಾತ್ರ ಹೆಚ್.ಕೆ ಪಾಟೀಲ್ ಅವರಲ್ಲಿ ಇಲ್ಲ, ಉಳಿದ ಎಲ್ಲಾ ಗುಣಗಳಿವೆ. ಕೆಲವು ವಿಚಾರಗಳಲ್ಲಿ ಹೆಚ್.ಕೆ. ಪಾಟೀಲರು ತಂದೆಯಂತೆ ಧೈರ್ಯ ತೀರ್ಮಾನ ಮಾಡಿದ್ದರೆ, ಅವರು ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದರು. ಕೃಷ್ಣ ಅವರ ನಂತರ ಅವರೇ ನಮ್ಮ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ" ಎಂದು ಹೇಳಿದರು. "ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಒಳ್ಳೆಯದನ್ನು ಮಾಡುತ್ತೇವೆ ಎಂಬುದು ಮುಖ್ಯ" ಎಂದು ತಿಳಿಸಿದರು.1