Shuru
Apke Nagar Ki App…
ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ... ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ...
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ... ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ...
More news from ಕರ್ನಾಟಕ and nearby areas
- ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ...1
- ಮಂದ್ದೇಬಿಹಾಳ, ಪಿಲೇಕಮ್ಮಜಾತ್ರಾ ಮೂಹು ಸ್ತವ1
- ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಗುವಿನ ಬದುಕಿನ ಅತ್ಯಂತ ಮಹತ್ವದ ಘಟ್ಟ ತಹಸೀಲ್ದಾರ್ ಸಿದರಾಯ ಭೋಸಗಿ ಅಥಣಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಗುವಿನ ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದ್ದು ಪ್ರತಿಯೊಂದು ಮಗುವು ಭಯರಹಿತವಾಗಿ ಹಾಗೂ ಯಶಸ್ವಿಯಾಗಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ," ಎಂದು ತಹಸೀಲ್ದಾರ್ ಸಿದರಾಯ ಭೋಸಗಿ ಹೇಳಿದರು. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮರುಳ ಶಂಕರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಸಲು ತಾಲೂಕು ಆಡಳಿತವು ಕೈಗೊಂಡಿರುವ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು. ಪರೀಕ್ಷಾ ಸಿದ್ಧತೆಗಳ ಮುಖ್ಯಾಂಶಗಳು: ಸುಸಜ್ಜಿತ ಕೇಂದ್ರಗಳು: ಅಥಣಿ ತಾಲೂಕಿನಾದ್ಯಂತ ಒಟ್ಟು 21 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕುಡಿಯುವ ನೀರು, ಶೌಚಾಲಯ ಹಾಗೂ ಆಸನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಟ್ಟುನಿಟ್ಟಿನ ನಿಗಾ: ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಹಾಗೂ ವೆಬ್ ಕ್ಯಾಮೆರಾ ಅಳವಡಿಸಲಾಗಿದ್ದು, ಆಯುಕ್ತರೇ ನೇರವಾಗಿ ಇದರ ಉಸ್ತುವಾರಿ ವಹಿಸಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲು ಮಾಡಲು ಅವಕಾಶ ನೀಡದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ (144 ಸೆಕ್ಷನ್ ಜಾರಿ). ಅಕ್ಕಪಕ್ಕದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಉಚಿತ ಬಸ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಬಿಇಓ ಎಂ.ಆರ್. ಮುಂಜೆ ಅವರು 2025-26 ರ ಪರೀಕ್ಷಾ ಅಂಕಿ-ಅಂಶಗಳನ್ನು ಪರೀಕ್ಷಾರ್ಥಿಗಳ ವಿವರವನ್ನು ಹಂಚಿಕೊಳ್ಳುತ್ತ 18-03-2026 ರಿಂದ 02-04-2026 ರವರೆಗೆ ಪರೀಕ್ಷೆ ಜರುಗಲಿದ್ದು ಒಟ್ಟು ವಿದ್ಯಾರ್ಥಿಗಳು: 6,590.ಗಂಡು ಮಕ್ಕಳು 3,343, ಹೆಣ್ಣು ಮಕ್ಕಳು: 3,247 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಇಓ ಶಿವಾನಂದ ಕಲ್ಲಾಪುರ ಈ ಸಂದರ್ಭದಲ್ಲಿ ಮಾತನಾಡಿ"ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿವಂತ ಮಕ್ಕಳನ್ನು ನಾಡಿಗೆ ನೀಡುವ ಕಾರ್ಯವನ್ನು ನಾವು ಮಾಡಬೇಕಿದೆ," ಎಂದು ಅಭಿಪ್ರಾಯಪಟ್ಟರು. ಭದ್ರತೆ: ಶಾಂತಿಯುತವಾಗಿ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಸಿಪಿಐ ಸಂತೋಷ ಹಳ್ಳೂರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ಸಂತೋಷ ಹಳ್ಳೂರ್, ವಿವಿಧ ಇಲಾಖೆಯ ಅಧಿಕಾರಿ ಗಳಾದ ನಿಜಗುಣಿ ಕೇರಿ, ಎ.ಬಿ. ಗೂಳಿಧರ್, ಎಂ.ವಿ. ನಾಮದಾರ, ಕೆಇಬಿ ಅಧಿಕಾರಿ ಪ್ರಾರ್ಥನಹಳ್ಳಿ, ಪರೀಕ್ಷಾ ನೋಡಲ್ ಅಧಿಕಾರಿ ಸಾವನ್ ಗಸ್ತಿ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಸಂಜೀವ ತೇಲಿ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಪಾಲಕರು, ಪರೀಕ್ಷಾ ಜಾಗೃತ್ ದಳದ ಸದಸ್ಯರು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.4
- ಬಾಗಲಕೋಟೆ: ತಂದೆಯವರು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ನ್ಯಾಯವಾಗಬೇಕು ಎಂಬ ಕಾರಣದಿಂದಲೇ ನಾನು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದು ದಿವಂಗತ ಎಚ್.ವೈ. ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅನ್ಯಾಯವಾಗಿದ್ದು, ಜನರ ಬೆಂಬಲ ನನಗಿದೆ. ಕಾಂಗ್ರೆಸ್ ಗೆಲುವಿಗೆ ನನಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.1
- ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದಲ್ಲಿ ಕೆಲ ಬೇಕರಿಗಳು ಮತ್ತು ಸ್ವೀಟ್ ಮಾರ್ಟ್ ಅಂಗಡಿಗಳು ಸಾರ್ವಜನಿಕರ ಆರೋಗ್ಯದ ಜೊತೆ ನೇರವಾಗಿ ಚೆಲ್ಲಾಟವಾಡುತ್ತಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಹಣ ಮಾಡುವ ಆಸೆಯಲ್ಲಿ ಕೆಲ ವ್ಯಾಪಾರಿಗಳು ಸ್ವಚ್ಚತೆ, ಶುಚಿತ್ವ ಎಲ್ಲವನ್ನೂ ಕಡೆಗಣಿಸಿ ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಕೆಮಿಕಲ್ ಕಲರ್ ಬಳಸಿ ತಯಾರಿಸಿದ ಕೇಕ್ ಮತ್ತು ಸ್ವೀಟ್ಸ್ ಜನರ ಆರೋಗ್ಯಕ್ಕೆ ದೊಡ್ಡ ಅಪಾಯವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾದಾಮಿ ನಗರದ ಟಾಂಗ್ ಸ್ಟ್ಯಾಂಡ್ ಹತ್ತಿರ ಇರುವ ಬೆಂಗಳೂರು ಬೇಕರಿಯ ದಿಲ್ ಖುಷ್ ಅಂಗಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆಹಾರ ಸುರಕ್ಷತಾ ಅಧಿಕಾರಿ ಪಾರುಕಿ, ಆರೋಗ್ಯ ಅಧಿಕಾರಿ ಎಂ.ಬಿ. ಪಾಟೀಲ್ ಹಾಗೂ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ್ ಕಂಬಳಿ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಯಿತು. ಪರಿಶೀಲನೆ ವೇಳೆ ಕೇಕ್ ಮತ್ತು ಸ್ವೀಟ್ಸ್ ತಯಾರಿಕೆಗೆ ಬಳಸುವ ಕೆಮಿಕಲ್ ಡಬ್ಬಿಗಳು, ಅಪಾಯಕಾರಿ ಕಲರ್ ಬಾಟಲಿಗಳು ಹಾಗೂ ಹಣ್ಣಿನ ಜ್ಯೂಸ್ ತಯಾರಿಸಲು ಇಡಲಾಗಿದ್ದ ಕೊಳೆತ ಹಣ್ಣುಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅನು ಸ್ವೀಟ್ಸ್ ಅಂಗಡಿಯಲ್ಲಿ ಮೈಸೂರು ಪಾಕ್ ಮೇಲೆ ಕಾಲಿಟ್ಟು ಕುಳಿತಿರುವ ದೃಶ್ಯ ಕಂಡುಬಂದಿದ್ದು, ಈ ದೃಶ್ಯ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ಅಂಗಡಿಯೂ ಕೂಡ ಬೆಂಗಳೂರು ಬೇಕರಿಯವರದ್ದೇ ಎಂಬ ಮಾಹಿತಿ ಹೊರಬಿದ್ದಿದೆ. ರಾಮದೇವ್ ಸ್ವೀಟ್ ಮಾರ್ಟ್ ಸೇರಿದಂತೆ ಹಲವಾರು ಅಂಗಡಿಗಳಲ್ಲಿ ಕೋಲ್ಡ್ ಡ್ರಿಂಕ್ಸ್ ಮೇಲೆ ಮುದ್ರಿತ ಬೆಲೆಯಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರವಾಸಿಗರು ಹಾಗೂ ಸ್ಥಳೀಯ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದಾರೆ. ಅಧಿಕಾರಿಗಳ ಜೊತೆ ಆಹಾರ ತಯಾರಿಕಾ ಕೊಠಡಿಗೆ ಪ್ರವೇಶಿಸಿದಾಗ ಕಂಡ ದೃಶ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಅಲ್ಲಿ ಕೊಳೆತ ಕೇಕ್‌ಗಳು ಮೂಲೆ ಸೇರಿರುವ ಡಬ್ಬಿಗಳು ಕಸಪೊರಕೆ ತುಂಬಿದ ಸ್ಥಳ ಹೊಲಸು ತುಂಬಿದ ಕೇಕ್ ರಟ್ಟುಗಳು ಅನೈರ್ಮಲ್ಯದಿಂದ ಕೂಡಿದ ಅಡುಗೆ ಎಣ್ಣೆ ಹೀಗೆ ಸ್ವಚ್ಚತೆ ಕಾಣದ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಆಹಾರ ತಯಾರಿಸುವ ಸಿಬ್ಬಂದಿ ಟೋಪಿ, ಹ್ಯಾಂಡ್ ಗ್ಲೋವ್ಸ್, ಜಾಕೆಟ್ ಧರಿಸದೇ ಆಹಾರ ತಯಾರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ರೀತಿಯ ತಯಾರಿಕೆ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಒಮ್ಮೆ ಈ ತಯಾರಿಕಾ ಕೊಠಡಿಯನ್ನು ನೋಡಿದರೆ ಜೀವನದಲ್ಲಿ ಬೇಕರಿ ತಿನಿಸು ತಿನ್ನಬಾರದು ಎಂಬ ಭಾವನೆ ಹುಟ್ಟುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾದಾಮಿ ನಗರದಲ್ಲಿ ಇಷ್ಟೊಂದು ಬೇಕರಿ ಹಾಗೂ ಸ್ವೀಟ್ ಮಾರ್ಟ್ ಅಂಗಡಿಗಳು ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೂ ಆಹಾರ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಇಂತಹ ಅಂಗಡಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಪರವಾನಿಗೆ ರದ್ದುಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಳಪೆ ಮಟ್ಟದ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಆಹಾರ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ವರದಿ : ರುದ್ರೇಶ್ ಪಿ ಹುಣಸಿಗಿಡದ1
- “ಮಕ್ಕಳ ಸುರಕ್ಷತೆ ಅಪಾಯದಲ್ಲಿ..! ಕ್ಯಾತನಹಳ್ಳಿ ಗ್ರಾಮದ ವಾಸ್ತವ ಸ್ಥಿತಿ” #neravaaninews #kannada neravaani news1
- ಗುಳೇದಗುಡ್ಡ: ಹನ್ನೆರಡನೇ ಶತಮಾನದ ಶಿವಶರಣರಾದ ಜೇಡರ ದಾಸಿಮಯ್ಯ, ಮಾದರ ಚೆನ್ನಯ್ಯನವರ,ಬಸವಣ್ಣನವರ ಸಮಕಾಲಿನ ಶರಣರ ಶರಣೆಯರು ತಮ್ಮ ವಚನ ಸಾಹಿತ್ಯದಲ್ಲಿ ಕಾಯಕದ ಮಹತ್ವ ತಿಳಿಸಿದವರು. ಎಂದು ಮುದ್ದೇಬಿಹಾಳದ ಎಂ ಜಿ ವ್ಹಿ ಸಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿಗಳಾದ ಡಾ. ಪ್ರಕಾಶ ನರಗುಂದ ಹೇಳಿದರು. ಅವರಿ ಸೋಮವಾರ ಪಟ್ಟಣದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಲಕ್ಷಿತ ಶರಣರ ವಚನಗಳಲ್ಲಿ ಆತ್ಮ ವಿಮರ್ಶ, ಕಾಯಕವೇ ಕೈಲಾಸ,ದಾಸೋಹ ತತ್ವ ಜಾತಿ,ಲಿಂಗ ಭೇದ,ನಿರಾಕರಣೆ, ಮುಂತಾದ ವಿಷಯಗಳ ಕುರಿತು ಅನೇಕ ಶರಣರು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಗದ್ಯ ಪದ್ಯ ಮಿಶ್ರಿತ ವಚನ ಸಾಹಿತ್ಯ ಸರಳ ನೇರ ಮತ್ತು ಭಾವಪೂರ್ಣ ಭಾಷೆಯಲ್ಲಿ ಸತ್ಯಶೋಧನೆ ಸಾಮಾಜಿಕ ಸಮಾನತೆ ದೈವಿಕ ಅನುಭವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಅಗಾಧ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ನಿರ್ಲಕ್ಷಿತ ವಚನಕಾರರು ಬೇರೆ ಬೇರೆ ರಾಜ್ಯಗಳಿಂದ ಬಂದು ಬೇರೆ ಬೇರೆ ಕಾಯಕಗಳಲ್ಲಿ ಕೈಲಾಸ ಕಂಡವರು. ಇಂಥವರ ಕುರಿತು ಇನ್ನು ಶ್ರೇಷ್ಠ ಮಟ್ಟದ ಸಂಶೋಧನೆಗಳು ಆಗಬೇಕಾಗಿದೆ. ಎಂದರು ಹೇಳಿದರು. ವೇದಿಕೆ ಮೇಲೆ ಕಾಲೇಜಿನ ಪ್ರಚಾರ್ಯ ಪ್ರೊ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ, ಅರುಣಕುಮಾರ ಗಾಳಿ,ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಸಂಗಮೇಶ ಕಲ್ಯಾಣಿ,ಕಾಲೇಜಿನ ಪ್ರಾಚಾರ್ಯರ ಪ್ರೊ. ರೇವಣಸಿದ್ದಪ್ಪ, ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ, ಪ್ರೊ. ಫಕೀರಪ್ಪ ಚನ್ನಪ್ಪಗೌಡ್ರು ಉಪಸ್ಥಿತರಿದ್ದರು.1
- MB Patil : ರಾಜ್ಯದ 2 ಕ್ಷೇತ್ರಗಳ ಬೈ ಎಲೆಕ್ಷನ್‌ಗೆ ಡೇಟ್ ಫಿಕ್ಸ್.. MB ಪಾಟೀಲ್ ರಿಯಾಕ್ಷನ್1