logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ಪ್ರೊಟೆಸ್ಟ್ ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡ ಲಾಯಿತು. ಒಳ ಮೀಸಲಾತಿ ಜಾರಿಗೊಳಿ ಸದೇ ಸರ್ಕಾರ ಮುಂದುವರಿದರೆ ರಾಜ್ಯಾ ದ್ಯಂತ ಉಗ್ರ ಹೋರಾಟ ನಡೆಸಲಾಗು ವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಪ್ರತಿಭಟನಾಕಾ ರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆ ಗಳ ಮುಖಂಡರು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಯನ್ನು ಜಾರಿಗೆ ತರುವುದು ಸರ್ಕಾರದ ಚುನಾವಣಾ ಪ್ರಣಾಳಿಕೆ ಯಲ್ಲಿ ನೀಡಿದ ಪ್ರಮುಖ ಭರವಸೆ ಯಾಗಿತ್ತು. ಆದರೆ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತಲತಲಾಂತರಗಳಿಂದ ಅನ್ಯಾಯ ಮತ್ತು ಶೋಷಣೆಗೆ ಒಳಗಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣ ವಾಗಿ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಕಳೆದ 35 ವರ್ಷಗಳಿಂದ ಹೋರಾಟದ ಮೂಲಕ ಮುಂದಿಟ್ಟು ಕೊಂಡು ಬಂದಿದೆ. ಈ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಐತಿಹಾಸಿಕ ತೀರ್ಪನ್ನು 2024ರ ಆಗಸ್ಟ್ 1 ರಂದು ನೀಡಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರದೆ ಮೀನಾಮೇಷ ಎಣಿಸುತ್ತಿ ರುವುದು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿರುವ ಸಮುದಾಯಗಳಿಗೆ ದೊಡ್ಡ ನಿರಾಶೆ ಯನ್ನುಂಟು ಮಾಡಿದೆ ಎಂದು ಮುಖಂಡರು ದೂರಿದರು. ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸ್ಪಷ್ಟ ಶಿಫಾರಸುಗಳು ನೀಡಲಾಗಿದೆ. ಶೇ.17ರಷ್ಟು ಮೀಸಲಾತಿ ಸಂಬಂಧಿಸಿದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದನ್ನು ಉಲ್ಲೇಖಿಸಿದರೂ, ಈಗಿರುವ ಶೇ.15ರಷ್ಟು ಮೀಸಲಾತಿ ಯಲ್ಲಿಯೇ ಒಳ ಮೀಸಲಾತಿ ಜಾರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ರಾಜ್ಯದ ಅಡ್ವಕೇಟ್ ಜನರಲ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಇಂತಹ ಪರಿಸ್ಥಿತಿಯಲ್ಲಿಯೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಗೊಳಿಸದೇ ಸುಮಾರು 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮುಂದಾಗಿ ರುವುದು ಪರಿಶಿಷ್ಟ ಜಾತಿಗಳಲ್ಲಿನ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಮರಣ ಶಾಸನದಂತಾಗಿದೆ ಎಂದು ಅವರು ಆರೋಪಿಸಿದರು. ಒಳ ಮೀಸಲಾತಿ ಇಲ್ಲದ ಮೀಸಲಾತಿ ವ್ಯರ್ಥವಾಗುತ್ತದೆ ಮತ್ತು ಅದು ಘೋರ ಸಾಮಾಜಿಕ ಅನ್ಯಾಯ ವಾಗುತ್ತದೆ ಎಂದು ಪ್ರತಿಭಟನಾ ಕಾರರು ಹೇಳಿದರು. ಈ ಹಿನ್ನೆಲೆಯಲ್ಲಿ ಮಾ: 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳ ಬೇಕು. ಯಾವುದೇ ಉಪಸಮಿತಿ ಅಥವಾ ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಎಲ್ಲ ವಿಷಯಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿವೆ ಎಂದು ಮುಖಂಡರು ಒತ್ತಾಯಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತೀರ್ಮಾನ ಕೈಗೊಂಡು, ಒಳ ಮೀಸಲಾತಿಯ ಅನ್ವಯವೇ 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದರೆ ಮಾದಿಗ ಮಹಾಸಭಾ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟಗಳು ರಾಜ್ಯಾದ್ಯಂತ ತೀವ್ರ ಉಗ್ರ ಹೋರಾಟ ನಡೆಸಲು ತಯಾರಾಗಿವೆ ಎಂದು ಅವರು ಎಚ್ಚರಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಕೆಲ ಹೋರಾಟ ಗಾರರು ಜಿಲ್ಲಾಧಿಕಾರಿ ಕಚೇರಿಯ ಒಳಗೆ ನುಗ್ಗಲು ಪ್ರಯತ್ನಿಸಿದರು.ಆದರೆ ಪೊಲೀಸರು ತಕ್ಷಣವೇ ಅವರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿ ಸಿದರು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ನಂತರ ಪರಿಸ್ಥಿತಿ ಶಾಂತಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್. ಶಿವಾಜಿ, ಉಪಾಧ್ಯಕ್ಷ ರಮೇಶ್ ಇ,ಪ್ರಧಾನ ಕಾರ್ಯದರ್ಶಿ ತೇಜಸ್ ಆರ್, ಖಜಾಂಚಿ ಎಂ. ಶಿವಲಿಂಗಪ್ಪ, ಜಿಲ್ಲಾ ಮುಖಂಡ ತಿಮ್ಲಾಪುರ ಲೋಕೇಶಪ್ಪ, ಮಾಜಿ ನಗರಸಭಾ ಸದಸ್ಯ ಆರ್. ಶಿವಣ್ಣ, ಡಿಎಸ್ ಎಸ್ ಸಂಚಾಲಕ ಚಿನ್ನಯ್ಯ, ಸಮಾಜದ ಪ್ರಮುಖರಾದ ಮಂಜುನಾಥ ಎಸ್, ಸೂಲಯ್ಯ, ಅಣ್ಣಪ್ಪ ಪಿ, ಟಿ.ಹೆಚ್. ಹಾಲೇಶಪ್ಪ, ಅಣ್ಣಪ್ಪ ಎ.ಕೆ, ಹೆಚ್.ಎನ್. ಪ್ರಭು, ಮಂಜಪ್ಪ ಬೀರನಕೆರೆ, ನಗರಾಧ್ಯಕ್ಷ ಅಣ್ಣಪ್ಪ ಕೆ, ಶಿಕಾರಿಪುರ ಅಧ್ಯಕ್ಷ ಮುಗಳಗೆರೆ ಬಸವರಾಜ್, ಗ್ರಾಮಾಂತರ ಅಧ್ಯಕ್ಷ ನೀಲಪ್ಪ, ರಘು, ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ನಾಗರಾಜ್, ಭದ್ರಾವತಿ ತಾಲೂಕು ಅಧ್ಯಕ್ಷ ಮೈಲಾರಪ್ಪ, ಸೊರಬ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಯುವ ಘಟಕ ಜಿಲ್ಲಾಧ್ಯಕ್ಷ ನಿಖಿಲ್ ಮೂರ್ತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಕೆಂಪಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

22 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•

More news from ಕರ್ನಾಟಕ and nearby areas
  • ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಬುದ್ಧ ಸರ್ಕಲ್ ನಲ್ಲೊ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು ಚಿಕಿತ್ಸೆ ಪಲಿಸದೆ ವ್ಯಕ್ತಿ ಮೃತಪಟ್ಟಿದ್ದಾನೆ. ಬಾನುವಾರ ರಾತ್ರಿ 8.30 ರ ವೇಳೆ ಘಟನೆ ನಡೆದಿದ್ದು ಗಾಯಾಳು 42 ವರ್ಷದ ತಾಜ್ ಪೀರ್ ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾನೆ
    1
    ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಬುದ್ಧ ಸರ್ಕಲ್ ನಲ್ಲೊ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು ಚಿಕಿತ್ಸೆ ಪಲಿಸದೆ ವ್ಯಕ್ತಿ ಮೃತಪಟ್ಟಿದ್ದಾನೆ. ಬಾನುವಾರ ರಾತ್ರಿ 8.30 ರ ವೇಳೆ ಘಟನೆ ನಡೆದಿದ್ದು ಗಾಯಾಳು 42 ವರ್ಷದ ತಾಜ್ ಪೀರ್ ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾನೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
  • Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    1
    Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    user_Bharat rajpurohit
    Bharat rajpurohit
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    47 min ago
  • ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಅವರು ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಸಂದೇಶ ನೀಡಿದ್ದಾರೆ.
    1
    ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಅವರು ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಸಂದೇಶ ನೀಡಿದ್ದಾರೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    1 hr ago
  • #ವಿರಾಟ್ ಹಿಂದೂ ಸಮಾಜೋತ್ಸವ.
    1
    #ವಿರಾಟ್ ಹಿಂದೂ ಸಮಾಜೋತ್ಸವ.
    user_Narayan P.
    Narayan P.
    Kumta, Uttara Kannada, Karnataka•
    1 hr ago
  • ಗುಡೆಕೋಟೆ ಹಿಂದ ಹೋಗುವ ರಾಮಸಾಗರ ಹಟ್ಟಿ ದಿಬ್ಬದಲಿ ಗುಡೆಕೋಟೆಯಲ್ಲಿ ಚರಂಡಿ ವ್ಯವಸ್ಥೆ ಇದ್ದು ಚರಂಡಿ ತುಂಬಿ ರೋಡ್ ನಲ್ಲಿ ಓಡಾಡುವ ದುರ್ವ್ಯವಸ್ಥೆಯಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಹಿಡಿ ಗುಡೆಕೋಟೆ ಒಂದೇ ಚರಂಡಿಯಲ್ಲಿ ಬರುತ್ತಿದ್ದು ಪೇಪರ್ ಮತ್ತು ಊರಿನ ಎಲ್ಲಾ ಗಲೀಜ್ ತುಂಬಿ ತುಳುಕಾಡುತ್ತಿದ್ದು ಗುಡೆಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ವರದಿ
    2
    ಗುಡೆಕೋಟೆ ಹಿಂದ ಹೋಗುವ ರಾಮಸಾಗರ ಹಟ್ಟಿ ದಿಬ್ಬದಲಿ ಗುಡೆಕೋಟೆಯಲ್ಲಿ ಚರಂಡಿ ವ್ಯವಸ್ಥೆ ಇದ್ದು ಚರಂಡಿ ತುಂಬಿ ರೋಡ್ ನಲ್ಲಿ ಓಡಾಡುವ ದುರ್ವ್ಯವಸ್ಥೆಯಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಹಿಡಿ ಗುಡೆಕೋಟೆ ಒಂದೇ ಚರಂಡಿಯಲ್ಲಿ ಬರುತ್ತಿದ್ದು ಪೇಪರ್ ಮತ್ತು ಊರಿನ ಎಲ್ಲಾ ಗಲೀಜ್ ತುಂಬಿ ತುಳುಕಾಡುತ್ತಿದ್ದು ಗುಡೆಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ವರದಿ
    user_Manju.
    Manju.
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    5 hrs ago
  • ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಜೀಪು ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಜೀಪು ಚಾಲಕ ದೇವಿಪ್ರಸಾದ್ ಗಾಯಗೊಂಡವರಾಗಿದ್ದಾರೆ. ಇವರು ಉಪ್ಪಿನಂಗಡಿಯಿಂದ ಕೊಯಿಲ ಕಡೆಗೆ ಬರುತ್ತಿದ್ದ ವೇಳೆ ಕೆಮ್ಮಾರದಲ್ಲಿ ನಿಯಂತ್ರಣ ತಪ್ಫಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯ ಯುವಕರಾದ ಹನೀಫ್ ಅಳಕೆ, ನವಾಝ್, ಝುಬೈರ್ ಹಾಗೂ ಹಬೀಬ್‌ರವರು ಗಾಯಾಳುವನ್ನು ಮೇಲೆತ್ತಿ, ಹನೀಫ್‌ರವರ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ದೇವಿಪ್ರಸಾದ್‌ರವರು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    1
    ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಜೀಪು ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಜೀಪು ಚಾಲಕ ದೇವಿಪ್ರಸಾದ್ ಗಾಯಗೊಂಡವರಾಗಿದ್ದಾರೆ. ಇವರು ಉಪ್ಪಿನಂಗಡಿಯಿಂದ ಕೊಯಿಲ ಕಡೆಗೆ ಬರುತ್ತಿದ್ದ ವೇಳೆ ಕೆಮ್ಮಾರದಲ್ಲಿ ನಿಯಂತ್ರಣ ತಪ್ಫಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯ ಯುವಕರಾದ ಹನೀಫ್ ಅಳಕೆ, ನವಾಝ್, ಝುಬೈರ್ ಹಾಗೂ ಹಬೀಬ್‌ರವರು ಗಾಯಾಳುವನ್ನು ಮೇಲೆತ್ತಿ, ಹನೀಫ್‌ರವರ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ದೇವಿಪ್ರಸಾದ್‌ರವರು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    19 hrs ago
  • ಚಿತ್ರದುರ್ಗದ ಉಪಾಧ್ಯ ಹೋಟೆಲ್ ಬಳಿ ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ.‌ ಸೋಮವಾರ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗ ಹೊರವಲಯದ ಉಪಾಧ್ಯ ಹೋಟೆಲ್ ಬಳಿ ಘಟನೆ ನಡೆದಿದ್ದು ಶಿವಮೊಗ್ಗ ದಿಂದ ಚಿತ್ರದುರ್ಗ ಮೂಲಕ ತುಮಕೂರು ಕಡೆಗೆ ಹೊರಟಿದ್ದ ಒಂದು ಲಾರಿ ಲೋಡ್ ಸಂಪೂರ್ಣ ಅಕ್ಕಿಯನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ.
    1
    ಚಿತ್ರದುರ್ಗದ ಉಪಾಧ್ಯ ಹೋಟೆಲ್ ಬಳಿ ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ.‌ ಸೋಮವಾರ ಬೆಳಗ್ಗೆ 10 ಗಂಟೆಗೆ 
ಚಿತ್ರದುರ್ಗ ಹೊರವಲಯದ ಉಪಾಧ್ಯ ಹೋಟೆಲ್ ಬಳಿ ಘಟನೆ ನಡೆದಿದ್ದು ಶಿವಮೊಗ್ಗ ದಿಂದ ಚಿತ್ರದುರ್ಗ ಮೂಲಕ ತುಮಕೂರು ಕಡೆಗೆ ಹೊರಟಿದ್ದ ಒಂದು ಲಾರಿ ಲೋಡ್ ಸಂಪೂರ್ಣ ಅಕ್ಕಿಯನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
  • Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity. .
    1
    Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity. .
    user_Bharat rajpurohit
    Bharat rajpurohit
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    54 min ago
  • ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದರಾಮ್ ಮಾರಿಹಾಳ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸ್ಥಳದಲ್ಲಿದ್ದ 12 ಗೃಹಬಳಕೆಯ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಹಾಗೂ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಎರಡು ಯಂತ್ರಗಳು ಮತ್ತು ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ತೊರೆಕೋಲಮ್ಮನಹಳ್ಳಿ ರಸ್ತೆಯ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾರು ಹಾಗೂ ಆಟೋ ರಿಕ್ಷಾಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು ಎಂಬ ಮಾಹಿತಿ ದೊರೆತಿತ್ತು. ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದರೂ ಸಹಾ, ಯಾವುದೇ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಅಧಿಕಾರಿಗಳ ದಾಳಿಯಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ನಿರೀಕ್ಷಕರಾದ ಗಿರಿಧರ್ ಎಸ್.ಆರ್ ಕೂಡ ಭಾಗವಹಿಸಿದ್ದರು. ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದರಾಮ್ ಮಾರಿಹಾಳ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸ್ಥಳದಲ್ಲಿದ್ದ 12 ಗೃಹಬಳಕೆಯ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಹಾಗೂ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಎರಡು ಯಂತ್ರಗಳು ಮತ್ತು ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ತೊರೆಕೋಲಮ್ಮನಹಳ್ಳಿ ರಸ್ತೆಯ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾರು ಹಾಗೂ ಆಟೋ ರಿಕ್ಷಾಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು ಎಂಬ ಮಾಹಿತಿ ದೊರೆತಿತ್ತು.
ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದರೂ ಸಹಾ, ಯಾವುದೇ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಅಧಿಕಾರಿಗಳ ದಾಳಿಯಲ್ಲಿ ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ನಿರೀಕ್ಷಕರಾದ ಗಿರಿಧರ್ ಎಸ್.ಆರ್ ಕೂಡ ಭಾಗವಹಿಸಿದ್ದರು.
ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.