ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.
ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.
- ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.1
- ಕೆಸರಿ ಮಯವಾದ ಮದ್ದೂರು,ಗಣೇಶ ವಿಸರ್ಜನೆಗೆ ಮೈತ್ರಿನಾಯಕರು ಮೊಕ್ಕಾಂ ಮಂಡ್ಯ- ಮದ್ದೂರು ಕೆಸರಿ ಮಯವಾಗಿದ್ದು ಬಾಜಪಾ ಜೆಡಿಎಸ್ ನಾಯಕರ ಮೊಕ್ಕಾಂ ಹೊಡಿದ್ದು,ಸಾಮೂಹಿಕ ಗಣಪತಿ ವಿಸರ್ಜನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬಾಜಪಾ ನಾಯಕರಾದ ವಿರೋಧ ಒಕ್ಷದ ನಾಯಕ ಆರ್.ಅಶೋಕ್, ಸಿ.ಟಿ.ರವಿ. ನಾರಾಯಣಸ್ವಾಮಿ,ಜೆಡಿಎಸ್ ಯುವಕ ಮುಖಂಡ ನಿಖಿಲ್ ಕುಮಾರಸ್ವಾಮಿ ಮದ್ದೂರಿಗೆಆಗಮಿಸಿದ್ದಾರೆ.1
- ಜೆಡಿಎಸ್ ತೆಕ್ಕಗೆ ಬಿಳುಗುಂಬ ಹಾಲು ಉತ್ಪಾದಕರ ಸಂಘ, ಅಧ್ಯಕ್ಷರಾಗಿ ಕಿರಣ್ ಅವಿರೋಧ ಆಯ್ಕೆ : ರಾಮನಗರ -- ಕಳೆದ 18 ತಿಂಗಳುಗಳಿಂದ ಸುಪರ್ ಸೀಡ್ ಗೆ ಒಳಗಾದಿದ್ದ ಬಿಳಿಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಡಳಿತ ಜೆಡಿಎಸ್ ತೆಕ್ಕೆಗೆ ಜಾರಿದೆ. ಸಂಘದ 9 ನಿರ್ದೇಶಕ ಸ್ಥಾನಗಳನ್ನು ಗೆಲ್ಲವು ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಜುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಿರಣ್ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಜುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಚ ಸ್ಥಾನಕ್ಕೆ ಕಿರಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಇಬ್ಬರನ್ನು ವರತು ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಕೆ.ಟಿ.ಉಮೇಶ್ ಅದ್ಯಕ್ಷರಾಗಿ ಕಿರಣ್ ಹಾಗೂ ಉಪಧ್ಯಾಕ್ಷರಾಗಿ ರಾಘವೇಂದ್ರ ಅವರ ಅವಿರೋದ ಆಯ್ಕೆಯನ್ನು ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಕಿರಣ್ ಮಾಧ್ಯಮಗಳೊಂದಿಗೆ ಮಾತನಾಡಿ ಕಳೆದ 18 ತಿಂಗಳಿಂದ ಸುಪರ್ ಸೀಡ್ ಒಳಗಾಗಿದ್ದ ಬಿಳುಗುಂಬ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಎಲ್ಲ 9 ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಹಾಲು ಉತ್ಪಾದಕರಿಗೆ ಧನ್ಯವಾದ ತಿಳಿಸಿದರು, ಹಾಲು ಉತ್ಪಾದಕರಿಗೆ ಯಾವುದೇ ಸಮಸ್ಯೆಯಾಗದಂತೆ ಅವರ ಹಿತಕಾಯುವುದೇ ನಮ್ಮ ತಂಡದ ಮೊದಲ ಅದ್ಯತೆ. ಈಗಾಗಲೇ ದಿನಕ್ಕೆ 800 ರಿಂದ 900 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಮುಂದಿನ ದಿನಗಳಲ್ಲಿ 1500 ರಿಂದ 2000 ಲೀಟರ್ ಹಾಲು ಸಂಗ್ರಹ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಹಾಲು ಉತ್ಪಾದಕರ ಉನ್ನತಿಗಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನೂತನ ನಿರ್ದೇಶಕರಾದ ಸುರೇಶ್, ಆನಂದ್, ಶೈಲಜಾ, ವೆಂಕಟೇಶ್, ಮಂಗಳಮ್ಮ, ಸರೋಜಮ್ಮ, ತಮ್ಮಯ್ಯ ಭಾಗಿಯಾಗಿದ್ದರು. ಕಿರಣ್ ಎನ್. ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಮಾಜಿ ಸದಸ್ಯರಾದ ಶಾಂತಪ್ಪ, ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಲಕ್ಷ್ಮಿನರಸಿಂಹಯ್ಯ, ಶಿವರಾಜು, ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಹೇಮಂತ್, ಹಾಲು ಪರಿವಿಕ್ಷಕ ವಾಸು, ಸಹಾಯಕ ರಾಜಣ್ಣ, ಮುಖಂಡರಾದ ಜಿ.ಟಿ.ಕೃಷ್ಣೇಗೌಡ, ನರೇಂದ್ರ, ಜಯಕುಮಾರ್, ಕೆಂಪರಾಜು, ಕೃಷ್ಣಪ್ಪ, ಧನಂಜಯ್ಯ, ರಮೇಶ್, ಶಿವಮಾದಯ್ಯ, ಅರೇಹಳ್ಳಿ ಶಿವರಾಮಯ್ಯ, ಮೂರ್ತಿ ಸೇರಿದಂತೆ ಬಿಳಗುಂಬ ಗ್ರಾಮಸ್ಥರ ಇದ್ದರು.1
- All About,Statement After What let our then Congress Corporater's activities regarding to vacate their private land *ಭಾರತ ನಲ್ಲಿ ವೈರಲ್*1
- ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.1
- ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಹನೂರು: ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಯಾಗಿ ನೀರು ಹೊರಹರಿಯುತ್ತಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯ 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆಯಿದೆ. ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುವ ಆಶಾಭಾವನೆ ರೈತರಲ್ಲಿದೆ. ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ.2
- ರಾಮನಗುಡ್ಡ ಕೆರೆ ಭರ್ತಿ; ಕೋಡಿ ಬಿದ್ದು ಹರಿದ ನೀರು ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನಕ್ಕೆ ರೈತರ ಮೆಚ್ಚುಗೆ; 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಭರವಸೆ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ನೀರಿನ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೃಷಿಕರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಸತತ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದ ಫಲವಾಗಿ ಕಾವೇರಿ ನದಿ ಮೂಲದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೆರೆಯಿಂದ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಹರ್ಷದ ವಾತಾವರಣ ಮೂಡಿಸಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಮನಗುಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ ಸುಮಾರು 980 ಎಕರೆಗಳಷ್ಟಿದೆ. ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ಇದ್ದು, ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಕೆರೆಯ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳದ ನಿರೀಕ್ಷೆ:ರಾಮನಗುಡ್ಡ ಕೆರೆ ಭರ್ತಿಯಾಗಿರುವುದರಿಂದ ಕೇವಲ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆಯೂ ಹೆಚ್ಚಾಗಿದೆ. ಕೆರೆಯಿಂದ ಹಾಗೂ ಹಳ್ಳದ ಮೂಲಕ ನೀರು ಹರಿದು ಬರುವುದರಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ನೀರಿನ ಮರುಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗುವ ಜಾನುವಾರುಗಳಿಗೂ ಕೆರೆಯ ನೀರು ಆಶ್ರಯವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾಮನಗುಡ್ಡ ಕೆರೆಯ ಎಡದಂಡೆಯ ವಿಸ್ತೀರ್ಣ ಸುಮಾರು 3.95 ಎಕರೆ ಹಾಗೂ ಬಲದಂಡೆಯ ವಿಸ್ತೀರ್ಣ ಸುಮಾರು 4.20 ಎಕರೆ ಇದ್ದು, ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿರುವುದು ಕೆರೆಯ ಜಲಸಂಗ್ರಹ ಸಾಮರ್ಥ್ಯದ ಸದುಪಯೋಗಕ್ಕೆ ಸಾಕ್ಷಿಯಾಗಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದರ ಜೊತೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯದಿಂದ ಕೆರೆಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ರೈತರಲ್ಲಿ ವಿಶ್ವಾಸ ಮೂಡಿಸಿದೆ. ಕೆರೆ ಭರ್ತಿಯಾಗಿರುವುದರಿಂದ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಚಟುವಟಿಕೆಗಳ ಕುರಿತು ಉತ್ಸಾಹ ಹೆಚ್ಚಾಗಿದೆ. ನೀರಿನ ಲಭ್ಯತೆಯಿಂದ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಕೃಷಿ ಆಧಾರಿತ ಕುಟುಂಬಗಳ ಆದಾಯಕ್ಕೂ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ ಬಲ ನೀಡುವ ಮೂಲಕ ರೈತರ ಬದುಕಿನಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಶಾಸಕ ಮಂಜುನಾಥ್ ಅವರ ಪ್ರಯತ್ನಕ್ಕೆ ಮೆಚ್ಚುಗೆ :ರಾಮನಗುಡ್ಡ ಕೆರೆಗೆ ನೀರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕೈಗೊಂಡ ಪ್ರಯತ್ನಗಳು ಇದೀಗ ಫಲ ನೀಡಿವೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರದ ಸಂದರ್ಭದಲ್ಲಿ ನೀರಿನ ಲಭ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಉತ್ತಮ ಮಳೆಯೊಂದಿಗೆ ಕೆರೆ ಸಂಪೂರ್ಣ ಭರ್ತಿಯಾಗಿರುವುದು ಈ ಭಾಗದ ಕೃಷಿಕರಿಗೆ ಅನುಕೂಲವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ, ಹೂಳು ತೆರವು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುವಂತೆ ಮಾಡುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ. ರಾಮನಗುಡ್ಡ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳಲು ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕಾಲುವೆಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ಮರುಪೂರೈಕೆಯಾಗುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಮತ್ತಷ್ಟು ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ. ಕಳೆದ ಕೆಲವು ದಿನಗಳಿಂದ ರಾಮನಗುಡ್ಡ ಕೆರೆಯ ಕೋಡಿ ಮೂಲಕ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆರೆಯ ಬಳಿ ಸೇರುತ್ತಿರುವ ರೈತರು ಹಾಗೂ ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ನೀರಿಗಾಗಿ ಎದುರು ನೋಡುತ್ತಿದ್ದ ಕೃಷಿಕರ ಪಾಲಿಗೆ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಿನಲ್ಲಿ, ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿರುವುದು ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಿನ ಭರವಸೆ ನೀಡುವುದರ ಜೊತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂಪನ್ಮೂಲವನ್ನು ಮುಂದಿನ ವರ್ಷಗಳಲ್ಲಿಯೂ ಕಾಪಾಡಿಕೊಳ್ಳುವುದು ರೈತರ ಆಶಯವಾಗಿದೆ.1
- ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ ಮಳವಳ್ಳಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್ ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ. ಹಲವು ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ. ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.1