ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.
ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.
- ಮೈಸೂರಿನಲ್ಲಿ ಮಲಬಾರಿ ರುಚಿಯ ಸವಿರುಚಿ – ಮಲಬಾರಿ ರೆಸ್ಟೋ ಕೆಫೆ ಸಿಗುತ್ತದೆ ಮೈಸೂರು ನಗರದ ರಾಜೇಂದ್ರನಗರ–ಹಳೇ ಕೇಸರೆ ಭಾಗದಲ್ಲಿರುವ ಮಲಬಾರಿ ರೆಸ್ಟೋ ಕೆಫೆ ಮಲಬಾರ್ ಹಾಗೂ ಕೇರಳ ಶೈಲಿಯ ಆಹಾರ ಪ್ರಿಯರಿಗೆ ಗಮನ ಸೆಳೆಯುವ ಆಹಾರ ತಾಣವಾಗಿದೆ. ಇಲ್ಲಿ ಭಾರತೀಯ, ಅರೇಬಿಕ್ ಮತ್ತು ದಕ್ಷಿಣ ಭಾರತೀಯ ಖಾದ್ಯಗಳ ವೈವಿಧ್ಯಮಯ ಮೆನು ಲಭ್ಯವಿದೆ. ಮಲಬಾರ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವಿವಿಧ ಬಗೆಯ ಮಂಧಿ, ಅಲ್ಫಹಮ್, ಶವಾಯಿ ಗ್ರಿಲ್, ಶವರ್ಮಾ, ಕೇರಳ ಪರೋಟ, ಪುಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ಸವಿಯಬಹುದು. ವಿಶೇಷವಾಗಿ ಪೆಪ್ಪರ್ ಅಲ್ಫಹಮ್, ಪೆರಿ ಪೆರಿ ಅಲ್ಫಹಮ್, ಹನಿ ಚಿಲ್ಲಿ ಅಲ್ಫಹಮ್ ಹಾಗೂ ವಿವಿಧ ಬಗೆಯ ಚಿಕನ್ ಮಂಧಿ ಮೆನುವಿನಲ್ಲಿವೆ. ಆಹಾರದ ಜೊತೆಗೆ ತಾಜಾ ಜ್ಯೂಸ್, ಮಿಲ್ಕ್‌ಶೇಕ್, ಮೊಜಿಟೋ, ಚಹಾ, ಕಾಫಿ ಹಾಗೂ ಸ್ನ್ಯಾಕ್ಸ್‌ಗಳಿಗೂ ಆಯ್ಕೆಗಳಿವೆ. ಸಸ್ಯಾಹಾರಿಗಳಿಗೆ ಕಡಲ ಕರಿ, ಪನೀರ್, ಮಶ್ರೂಮ್ ಸೇರಿದಂತೆ ಹಲವು ಖಾದ್ಯಗಳಿವೆ. ವಿಳಾಸ: 21, 3ನೇ ಹಂತ, ಹಳೇ ಕೇಸರೆ, ಆರ್.ಎಸ್. ನಾಯ್ಡುನಗರ, ಮೈಸೂರು–570007.1
- ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ ವರದಿ: ಹೊಮ್ಮನಂಜುಂಡನಾಯಕ ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಅಬ್ದುಲ್‌ಅಜೀಜ್ ದೀನಾ ರೋಟರಿ ಸಂಸ್ಥೆ ವತಿಯಿಂದ ಇಂಜಿನಿಯರ್ ದಿನಾಚರಣೆ ಚಾಮರಾಜನಗರ: ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ' ಎಂದು ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಹೇಳಿದರು. ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ ವತಿಯಿಂದ ನಡೆದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಮಹಾನ್ ಇಂಜಿನಿಯರ್, ಭಾರತರತ್ನ ಮೊಕ್ಷಗುಂಡಂವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರವು 1986ರಲ್ಲಿ ಸೆ.15 ನ್ನು ರಾಷ್ಟ್ರೀಯ ಇಂಜಿನಿಯರ್ ದಿನವೆಂದು ಘೋಷಿಸಿದೆ ಎಂದರು. ದೇಶದ ಮೂಲಭೂತ ಸೌಲಭ್ಯ, ನೀರಾವರಿ ವ್ಯವಸ್ಥೆ, ಸುಂದರ ಕಟ್ಟಡಗಳ ನಿರ್ಮಾಣ ಕೈಗಾರಿಕಾ ಅಭಿವೃದ್ಧಿಗೆ ಇಂಜಿನಿಯರ್ ಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದರು. ಸನ್ಮಾನ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ತಮ್ಮಗಳನ್ನು ಸನ್ಮಾನಿಸಿ ತಮ್ಮಗಳ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಇದಕ್ಕಾಗಿ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯು ಮತ್ತಷ್ಟು ಸೇವಾ ಕಾರ್ಯಗಳ ಮೂಲಕ ಜನಸೇವೆ ಮಾಡುವಂತಾಗಲಿ ಎಂದು ಆಶಿಸಿದರು. ಸನ್ಮಾನ: ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್, ಹರದನಹಳ್ಳಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಧ್ರುಪದ್, ಕಿರಿಯ ಇಂಜಿನಿಯರ್ ಎಸ್.ಮಂಜುನಾಥ್, ರೋಟರಿ ಸಂಸ್ಥೆಯ ಇಂಜಿನಿಯರ್‌ಗಳಾದ ಮೋಹನ್, ರಾಜುವರ್ಗೀಸ್, ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ,ಕಾರ್ಯದರ್ಶಿ ಅಂಕಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.4
- ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಪುಟ್ಟರಂಗಶೆಟ್ಟಿ ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು2
- ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು. ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.1
- All About,Locals defending Encroachment of #WaqfProperties under #Telangana #WaqfBoard *ಭಾರತ ನಲ್ಲಿ ವೈರಲ್*1
- ಪಟ್ಟಣದಲ್ಲಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಸಚಿವ ನರೇಂದ್ರಸ್ವಾಮಿ ಚಾಲನೆ ಮಳವಳ್ಳಿ ; ಕಳೆದ 45 ವರ್ಷಗ ಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟ ಣದ ಶಾಂತಿ ಕಾಲೇಜು ಮುಂಭಾ ಗದ 33 ಎಕರೆ ನಿವೇಶನ ಹಂಚಿಕೆ ಕಾರ್ಯಕ್ಕೆ ಮುಕ್ತಿ ದೊರಕಿದ್ದು ನಿವೇಶನ ಹಂಚಿಕೆ ಕಾರ್ಯಕ್ಕೆ ಕೃಷಿ ಸಚಿವರೂ ಅದ ಶಾಸಕ ಪಿ ಎಂ ನರೇಂದ್ರಸ್ವಾಮಿ ವಿದ್ಯುಕ್ತ ಚಾಲನೆ ನೀಡಿದರು. ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ನಿವೇಶನ ಆವರಣದಲ್ಲಿ ಮಂಗಳವಾರ ಸಾಯಂಕಾಲ 5.30 ರ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಲಾಟರಿ ಮೂಲಕ ಫಲಾನುಭವಿಗಳ ಸೈಟ್ ಸಂಖ್ಯೆಯನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಸಚಿವ ನರೇಂದ್ರಸ್ವಾಮಿ ನಿವೇಶನ ಹಂಚಿಕೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕಳೆದ 45 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಅವರ ಕಾಲದಲ್ಲಿ ಭೂಸ್ವಾಧೀನ ವಾಗಿದ್ದ ಈ ನಿವೇಶನ ಜಮೀನಿನ ಮಾಲೀಕರು ಹಾಗೂ ಪುರಸಭೆ ನಡುವಿನ ವ್ಯಾಜ್ಯ ಹೈಕೋಟ್೯ ಮೆಟ್ಟಲೇ ರಿದ ಪರಿಣಾಮ ಅಂದಿನಿಂ ದಲೂ ನೆನೆಗುದಿಗೆ ಬಿದ್ದಿತ್ತಾ ದರೂ ತಾವು 2 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ವೇಳೆ ಈ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು. ಅಂದು ಜಮೀನಿನ ಮಾಲೀಕರ ಜೊತೆ ಚೆರ್ಚೆ ನಡೆಸಿ ವಿವಾದ ಬಗೆಹರಿಸಿದ್ದರ ಜೊತೆಗೆ ನ್ಯಾಯಾಲಯದ ತಡೆಯಾಜ್ಞೆ ತೆರೆವು ಗೊಳಿಸಿ ಜನರಿಗೆ ನೀಡಿದ ಭರವಸೆಯಂತೆ ಇದೀಗ ನಿವೇಶ ನಗಳ ಹಂಚಿಕೆಗೆ ಇಂದು ಚಾಲನೆ ನೀಡುತ್ತಿರುವುದಾಗಿ ಹೇಳಿದರು. ಇಂದು ಸೈಟ್ ನಂಬರ್ ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದು ಸಧ್ಯದಲ್ಲಿ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸುವುದಾಗಿ ತಿಳಿಸಿದ ಅವರು ನಿವೇಶ ಹಂಚಿಕೆ ವಿಚಾರದಲ್ಲಿ ಹಿಂದಿನವರಂತೆ ರಾಜಕಾರಣ ಮಾಡದೆ ಬಡ ಪಲಾನುಭವಿಗಳಿಗೆ ಪ್ರಾಮಾಣಿ ಕವಾಗಿ ನಿವೇಶನ ದೊರಕಿಸಿ ಕೊಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ನಿವೇಶನ ಹಂಚಿಕೆ ಯನ್ನು ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಜಿ ಪಂ ಸಿಇಒ ನಂದಿನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ , ನಗರಾಭಿವೃದ್ದಿ ಇಲಾಖೆ ಯೋಜನಾಧಿಕಾರಿ ಚಂದ್ರ ಶೇಖರ್. ಮುಖ್ಯಾಧಿ ಕಾರಿ ನಾಗರತ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿ ದ್ದರು.1
- ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು. ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನದ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ ಛಲ ಬಿಡದೆ ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.1
- ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ವರದಿ: ಹೊಮ್ಮನಂಜುಂಡನಾಯಕ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಿ: ಡಾ.ಪಿ.ಚಂದ್ರಶೇಖರ್ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ಚಾಮರಾಜನಗರ: ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ನಗರದ ಜೆಎಸ್‌ಎಸ್ ಮಹಿಳಾಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' ಧ್ಯೇಯ ವಾಕ್ಯದಡಿ, ನಡೆದ 'ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶುಶ್ರೂಷಕರು ಆತ್ಮಹತ್ಯೆಗೆ ಪ್ರಯತ್ನ ಮಾಡುವವರ ಜತೆ ಸಮಾಲೋಚನೆ ನಡೆಸಿ, ಅವರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಬೇಕು, ಆ ಮೂಲಕ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಬೇಕು ಎಂದರು. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲದಕ್ಕೂ ಸೂಕ್ತ ಪರಿಹಾರ ನೀಡುತ್ತವೆ.ಮಾನಸಿಕ ಖಿನ್ನತೆ ಒಂಟಿತನ, ಕೌಟುಂಬಿಕ ಕಲಹ ಇದರಲ್ಲಿ ಸಿಲುಕುವವರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಲಾಖೆ ಸಂಗ್ರಹಿಸಿರುವ ಅಂಕಿ ಅಂಕಿಆಂಶಗಳ ಪ್ರಕಾರ ಜುಲೈನಲ್ಲಿ ಗಂಡುಮಕ್ಕಳು-61 ಹೆಣ್ಣುಮಕ್ಕಳು-66, ಆಗಸ್ಟ್ ನಲ್ಲಿ ಗಂಡುಮಕ್ಕಳು -66, ಹೆಣ್ಣು ಮಕ್ಕಳು -70 ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಬುಧವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮನೋಚೈತನ್ಯ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆತ್ಮ ಹತ್ಯೆಗೆ ಪ್ರಯತ್ನಪಟ್ಟವರ ಜತೆ ಆಪ್ತಸಮಾಲೋಚನೆ ನಡೆಸುವ ಮೂಲಕ ಅವರ ಸಮಸ್ಯೆಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಮೈಸೂರು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಜೆ.ಮನೋಹರ್, ರಕ್ಷಿತಾಪೂಜಾರಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ ಜಿ.ವಿನಯಕುಮಾರ್ ಮಾತನಾಡಿದರು. ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ನಿಧಿಶ್ರೀ ಪ್ರಾರ್ಥಿಸಿದರು.ದಿವ್ಯ ಸ್ವಾಗತಿಸಿದರು. ಮಾದಲಾಂಬಿಕೆ ವಂದಿಸಿದರು.4