ಬೇತಮಂಗಲದ ಗ್ರಾಮೀಣ ವಿದ್ಯಾ ಸಂಸ್ಥೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ಸಿಸಿಗೆ ಆಯ್ಕೆ ಬೇತಮಂಗಲ ಗ್ರಾಮೀಣ ವಿದ್ಯಾ ಸಂಸ್ಥೆಯ ಪಿಯು ಕಾಲೇಜು ವಿಭಾಗದ ವಿದ್ಯಾರ್ಥಿಗಳು ಕಠಿಣ ಅರ್ಹತಾ ಹಾಗೂ ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ರಾಷ್ಟ್ರೀಯ ಕೆಡೆಟ್ ಪಡೆಗೆ (ಎನ್‌ಸಿಸಿ) ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ. ಕೋಲಾರದ ಎನ್‌ಸಿಸಿ ಅಧಿಕಾರಿಗಳ ತಂಡವು ಗ್ರಾಮೀಣ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ, ಶಾಲೆಯ 50ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳಿಗೆ ವಿವಿಧ ಹಂತದ ಅರ್ಹತಾ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿತು. ಈ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಿಮವಾಗಿ ಎನ್‌ಸಿಸಿಗೆ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ದೇಶಪ್ರೇಮಿ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಶಿಸ್ತು ಮತ್ತು ಉನ್ನತ ಭವಿಷ್ಯಕ್ಕೆ ಎನ್‌ಸಿಸಿ ಪೂರಕ: ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಅ.ಮು. ಲಕ್ಷ್ಮೀನಾರಾಯಣ ಅವರು, "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲು ಎನ್‌ಸಿಸಿ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಇಲ್ಲಿ ಕಠಿಣ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ರಕ್ಷಣೆ, ಆಡಳಿತ ಸೇರಿದಂತೆ ವಿವಿಧ ರಂಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತಮ ಅವಕಾಶಗಳು ಸಿಗಲಿವೆ. ನಮ್ಮ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್‌ಸಿಸಿಯಂತಹ ರಾಷ್ಟ್ರ ನಿರ್ಮಾಣದ ತರಬೇತಿಗಳಿಗೂ ಸದಾ ಉತ್ತೇಜನ ನೀಡಲಾಗುತ್ತದೆ," ಎಂದು ಹೆಮ್ಮೆಯಿಂದ ನುಡಿದರು. ಈ ಸಂದರ್ಭದಲ್ಲಿ ಕೋಲಾರದ ಎನ್‌ಸಿಸಿ ಅಧಿಕಾರಿಗಳಾದ ರಾಜೇಂದ್ರ ರಾವ್, ಕಿರಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ, ಸಂಸ್ಥೆಯ ನಿರ್ದೇಶಕರಾದ ವಿಜಯೇಂದ್ರ ಹಾಗೂ ಎನ್‌ಸಿಸಿ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದರು.
ಬೇತಮಂಗಲದ ಗ್ರಾಮೀಣ ವಿದ್ಯಾ ಸಂಸ್ಥೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ಸಿಸಿಗೆ ಆಯ್ಕೆ ಬೇತಮಂಗಲ ಗ್ರಾಮೀಣ ವಿದ್ಯಾ ಸಂಸ್ಥೆಯ ಪಿಯು ಕಾಲೇಜು ವಿಭಾಗದ ವಿದ್ಯಾರ್ಥಿಗಳು ಕಠಿಣ ಅರ್ಹತಾ ಹಾಗೂ ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ರಾಷ್ಟ್ರೀಯ ಕೆಡೆಟ್ ಪಡೆಗೆ (ಎನ್‌ಸಿಸಿ) ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ. ಕೋಲಾರದ ಎನ್‌ಸಿಸಿ ಅಧಿಕಾರಿಗಳ ತಂಡವು ಗ್ರಾಮೀಣ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ, ಶಾಲೆಯ 50ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳಿಗೆ ವಿವಿಧ ಹಂತದ ಅರ್ಹತಾ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿತು. ಈ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಿಮವಾಗಿ ಎನ್‌ಸಿಸಿಗೆ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ದೇಶಪ್ರೇಮಿ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಶಿಸ್ತು ಮತ್ತು ಉನ್ನತ ಭವಿಷ್ಯಕ್ಕೆ ಎನ್‌ಸಿಸಿ ಪೂರಕ: ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಅ.ಮು. ಲಕ್ಷ್ಮೀನಾರಾಯಣ ಅವರು, "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲು ಎನ್‌ಸಿಸಿ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಇಲ್ಲಿ ಕಠಿಣ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ರಕ್ಷಣೆ, ಆಡಳಿತ ಸೇರಿದಂತೆ ವಿವಿಧ ರಂಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತಮ ಅವಕಾಶಗಳು ಸಿಗಲಿವೆ. ನಮ್ಮ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್‌ಸಿಸಿಯಂತಹ ರಾಷ್ಟ್ರ ನಿರ್ಮಾಣದ ತರಬೇತಿಗಳಿಗೂ ಸದಾ ಉತ್ತೇಜನ ನೀಡಲಾಗುತ್ತದೆ," ಎಂದು ಹೆಮ್ಮೆಯಿಂದ ನುಡಿದರು. ಈ ಸಂದರ್ಭದಲ್ಲಿ ಕೋಲಾರದ ಎನ್‌ಸಿಸಿ ಅಧಿಕಾರಿಗಳಾದ ರಾಜೇಂದ್ರ ರಾವ್, ಕಿರಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ, ಸಂಸ್ಥೆಯ ನಿರ್ದೇಶಕರಾದ ವಿಜಯೇಂದ್ರ ಹಾಗೂ ಎನ್‌ಸಿಸಿ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದರು.
- ಬೇತಮಂಗಲದ ಗ್ರಾಮೀಣ ವಿದ್ಯಾ ಸಂಸ್ಥೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ಸಿಸಿಗೆ ಆಯ್ಕೆ ಬೇತಮಂಗಲ ಗ್ರಾಮೀಣ ವಿದ್ಯಾ ಸಂಸ್ಥೆಯ ಪಿಯು ಕಾಲೇಜು ವಿಭಾಗದ ವಿದ್ಯಾರ್ಥಿಗಳು ಕಠಿಣ ಅರ್ಹತಾ ಹಾಗೂ ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ರಾಷ್ಟ್ರೀಯ ಕೆಡೆಟ್ ಪಡೆಗೆ (ಎನ್‌ಸಿಸಿ) ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ. ಕೋಲಾರದ ಎನ್‌ಸಿಸಿ ಅಧಿಕಾರಿಗಳ ತಂಡವು ಗ್ರಾಮೀಣ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ, ಶಾಲೆಯ 50ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳಿಗೆ ವಿವಿಧ ಹಂತದ ಅರ್ಹತಾ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿತು. ಈ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಿಮವಾಗಿ ಎನ್‌ಸಿಸಿಗೆ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ದೇಶಪ್ರೇಮಿ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಶಿಸ್ತು ಮತ್ತು ಉನ್ನತ ಭವಿಷ್ಯಕ್ಕೆ ಎನ್‌ಸಿಸಿ ಪೂರಕ: ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಅ.ಮು. ಲಕ್ಷ್ಮೀನಾರಾಯಣ ಅವರು, "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲು ಎನ್‌ಸಿಸಿ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಇಲ್ಲಿ ಕಠಿಣ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ರಕ್ಷಣೆ, ಆಡಳಿತ ಸೇರಿದಂತೆ ವಿವಿಧ ರಂಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತಮ ಅವಕಾಶಗಳು ಸಿಗಲಿವೆ. ನಮ್ಮ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಕೇವಲ ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್‌ಸಿಸಿಯಂತಹ ರಾಷ್ಟ್ರ ನಿರ್ಮಾಣದ ತರಬೇತಿಗಳಿಗೂ ಸದಾ ಉತ್ತೇಜನ ನೀಡಲಾಗುತ್ತದೆ," ಎಂದು ಹೆಮ್ಮೆಯಿಂದ ನುಡಿದರು. ಈ ಸಂದರ್ಭದಲ್ಲಿ ಕೋಲಾರದ ಎನ್‌ಸಿಸಿ ಅಧಿಕಾರಿಗಳಾದ ರಾಜೇಂದ್ರ ರಾವ್, ಕಿರಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ, ಸಂಸ್ಥೆಯ ನಿರ್ದೇಶಕರಾದ ವಿಜಯೇಂದ್ರ ಹಾಗೂ ಎನ್‌ಸಿಸಿ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದರು.1
- ಬಂಗಾರಪೇಟೆ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಬಂಗಾರಪೇಟೆ–ಕೆಜಿಎಫ್ ಮುಖ್ಯರಸ್ತೆಯ ಎಸ್.ಜಿ.ಕೋಟೆಯಲ್ಲಿರುವ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಭಕ್ತಿಭಾವದಿಂದ ನೆರವೇರಿತು.ಧರ್ಮದರ್ಶಿ ಮುನಿಮಾರಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ಗುರುಪೂರ್ಣಿಮೆ ಹಾಗೂ ಹೊಸ ವರ್ಷದ ಆರಂಭದ ದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಈ ವರ್ಷವೂ ಮುಂಜಾನೆಯಿಂದಲೇ ಸಾಯಿಬಾಬಾ ಸ್ವಾಮಿಗೆ ವಿವಿಧ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ ಹಾಗೂ ಭಕ್ತರಿಂದ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಜೊತೆಗೆ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ಸಂಜೆ ಭಜನೆ–ಕೀರ್ತನೆ, ಪಲ್ಲಕ್ಕಿ ಉತ್ಸವ ಹಾಗೂ ದಿನವಿಡೀ ಅನ್ನದಾಸೋಹ ಮತ್ತು ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.ಕಾರ್ಯದರ್ಶಿ ಡಾ. ರಾಧಾ ವಿ ಮಾತನಾಡಿ, ಆಷಾಢ ಮಾಸದ ಮೊದಲ ಹುಣ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವತಿಯಿಂದ ವರ್ಷಪೂರ್ತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ, ವಿಜಯದಶಮಿ ವಾರ್ಷಿಕೋತ್ಸವ, ಗ್ರಾಮೀಣ ಪ್ರದೇಶದ ವೃದ್ಧರಿಗೆ ಕಂಬಳಿ ವಿತರಣೆ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ, ವೀರಯೋಧರ ಸನ್ಮಾನ ಹಾಗೂ ಅಂಗವಿಕಲರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ದೇವಾಲಯದ ಅಭಿವೃದ್ಧಿಗೆ ಸಹಕರಿಸುತ್ತಿರುವ ದಾನಿಗಳು ಹಾಗೂ ಭಕ್ತರಿಗೆ ಧರ್ಮದರ್ಶಿ ಮುನಿಮಾರಪ್ಪ ಮತ್ತು ಕಾರ್ಯದರ್ಶಿ ಡಾ. ರಾಧಾ ವಿ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವುದರೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.1
- *ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ,ನಶೆ ಮುಕ್ತ ಕಟ್ಟಿಗೆನಹಳ್ಳಿ ಮಾಡಲು ಶ್ರಮಿಸಿ: ಡಿ.ವೈ.ಎಸ್.ಪಿ. ಮಲ್ಲೇಶ್ ಕರೆ* ಹೊಸಕೋಟೆ :ಮುಸ್ಲಿಂ ಸಮುದಾಯ ಪ್ರವಾದಿ ಮಹಮ್ಮದ್ ಪೈಗಂಬರ್ ಬರೆದಿರುವ ಪವಿತ್ರ ಕುರಾನ್ ಅನುಸರಿಸುತ್ತಿರುವ ನೀವುಗಳು ಯಾವುದೇ ತಪ್ಪುಗಳನ್ನು ಮಾಡಬಾರದು,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ, ನಶೆ ಮುಕ್ತ ಕಟ್ಟಿಗೆನಹಳ್ಳಿ ಮಾಡಲು ಶ್ರಮಿಸಿ ಎಂದು ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಡಿ.ವೈ.ಎಸ್.ಪಿ.ಮಲ್ಲೇಶ್ ಕಿವಿಮಾತು ಹೇಳಿದರು. ಹೊಸಕೋಟೆ ತಾಲ್ಲೂಕು ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೇನಹಳ್ಳಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಾಮೀಯಾ ಮಸೀದಿ ಕಮಿಟಿ ಆಯೋಜಿಸಿದ್ದ ನಶೆ ಮುಕ್ತ ಕಟ್ಟಿಗೇನಹಳ್ಳಿ ಗ್ರಾಮ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ ಮಾದಕ ವಸ್ತುಗಳ ಸೇವನೆಯು ಮನುಷ್ಯನ ದೇಹ, ಮನಸ್ಸು ಮತ್ತು ಸಮಾಜದ ಮೇಲೆ ಅತ್ಯಂತ ಗಂಭೀರವಾದ ಹಾಗೂ ಮಾರಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದರು. ಬಹಳಷ್ಟು ಅಪರಾಧಗಳು ನಶೆ ಬರುವ ಮಾದಕ ವಸ್ತುಗಳ ಸೇವನೆಯಿಂದ ನಡೆಯುತ್ತದೆ.ಇದಕ್ಕೆ ಅವಕಾಶ ನೀಡಬಾರದೆಂದ ಅವರು ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಇರುವ ಕಳಂಕ ದೂರ ಮಾಡಬೇಕು ಹಾಗೂ ಯುವಕರು ಮಾದಕ ವಸ್ತುಗಳಿಂದ ದೂರ ಇರಬೇಕೆಂದ ಅವರು ಗ್ರಾಮದ ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡ ಬೇಕೆಂದು ಸಲಹೆ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಸುಂದರ್ ಮಾತನಾಡಿ ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ಕುಟುಂಬಗಳನ್ನು ಬೀದಿಗೆ ತಳ್ಳುತ್ತದೆ ಮತ್ತು ಅಪರಾಧ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದರು. ಮಾದಕವಸ್ತು ಮಾರಾಟ,ಸೇವನೆ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಪೊಲೀಸಿರಿಗೆ ಮಾಹಿತಿ ಒದಗಿದರೆ ಅಪರಾಧಿಗಳನ್ನು ಹಿಡಿಯಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಕಮಿಟಿಯ ಸಾದರ್ ಅಯಾಸ್ ಉಲ್ಲಾ ಖಾನ್, ಸೈಯದ್ ಶಬೀರ್,ರಿಯಾಜ್ ಖಾನ್,ಅಯಾಜ್ ಖಾನ್,ಮದರಸಾ ಮಖಂಡರಾದ ಎಜಾಜ್ ಶರೀಫ್ ಮುಂತಾದವರು ಇದ್ದರು3
- ಮುಳುಬಾಗಿಲು : ಅಂತರ್ಜಾತಿ ವಿವಾಹಕ್ಕೆ ದ್ವೇಷ.!? ಕುಟುಂಬ ವೈಷಮ್ಯಕ್ಕೆ ಹೊಸದಾಗಿ ಕಟ್ಟುತ್ತಿದ್ದ ಮನೆ ನೆಲಸಮ.!? #kolar #mulbagil #nangali #intercastmarrage #lovemarrage #lovecontroversy #janasuddhitv1
- ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯದ ಕೆ. ಆರ್. ಎಸ್. ಡ್ಯಾಂ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮಂಡ್ಯದ ಕೆ. ಆರ್. ಎಸ್. ಡ್ಯಾಂ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಸಿ. ಟಿ. ರವಿ, ಶ್ರೀ ಕೆ. ಸಿ. ನಾರಾಯಣಗೌಡ, ಶಾಸಕರಾದ ಶ್ರೀ ಟಿ. ಎಸ್. ಶ್ರೀವತ್ಸ, ಶ್ರೀ ರಘು ಕೌಟಿಲ್ಯ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್. ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರೀತಮ್ ಗೌಡ, ರಾಜ್ಯ ಕಾರ್ಯದರ್ಶಿಗಳಾದ ಡಾ. ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್, ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥ ನಾರಾಯಣ, ಮೈಸೂರು ನಗರ ಜಿಲ್ಲಾಧ್ಯಕ್ಷರಾದ ಶ್ರೀ ಎಲ್. ನಾಗೇಂದ್ರ, ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀ ಇಂದ್ರೇಶ್ ಕುಮಾರ್, ಜಿಲ್ಲಾ ಪದಾಧಿಕಾರಿಗಳು, ಪ್ರಮುಖರು, ರೈತರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.1
- KOLAR KI.AWAAZ KOUSAR NEWS1
- ಕೆಜಿಎಫ್ ನಗರ ಸಭೆ ಆವರಣದಲ್ಲಿ ಶಿಥಿಲಗೊಂಡಿದ್ದ ಡಾ. ಅಂಬೇಡ್ಕರ್ ರವರ ಪುತ್ಥಳಿ ತೆರುವು ಕೆಜಿಎಫ್: ಇಲ್ಲಿನ ನಗರಸಭೆ ಆವರಣದಲ್ಲಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಥಿಲಗೊಂಡಿದ್ದ ಪ್ರತಿಮೆಯನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ನಗರಸಭೆ ಆವರಣದಲ್ಲಿ ಸ್ಥಾಪಿಸಲಾಗಿದ್ದ ಅಂಬೇಡ್ಕರ್ ಅವರ ಪುತ್ಥಳಿಯು ಕಾಲಕ್ರಮೇಣ ಶಿಥಿಲಾವಸ್ಥೆಗೆ ತಲುಪಿತ್ತು. ಇದರಿಂದ ಮಹಾನ್ ನಾಯಕನ ಪ್ರತಿಮೆಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಸಾರ್ವಜನಿಕ ಹಾಗೂ ದಲಿತಪರ ಸಂಘಟನೆಗಳ ಆಕ್ರೋಶಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯು ಈ ಕ್ರಮ ಕೈಗೊಂಡಿದೆ. ಸುರಕ್ಷಿತ ತೆರವು: ಸ್ಥಳೀಯ ಮುಖಂಡರು ಹಾಗೂ ಸಂಘಟನೆಗಳ ಗಮನಕ್ಕೆ ತಂದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪ್ರತಿಮೆಯನ್ನು ಗೌರವಪೂರ್ವಕವಾಗಿ ತೆರವುಗೊಳಿಸಲಾಗಿದೆ. ಶೀಘ್ರದಲ್ಲೇ ನೂತನ ಪ್ರತಿಮೆ ಸ್ಥಾಪನೆ: ಶಿಥಿಲಗೊಂಡಿದ್ದ ಪ್ರತಿಮೆಯ ಜಾಗದಲ್ಲಿ ಶೀಘ್ರದಲ್ಲೇ ಹೊಸ ಪ್ರತಿಮೆ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆಯ ಪ್ರಮುಖ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ದಲಿತ ಹಕ್ಕುಗಳ ಹೋರಾಟಗಾರರು ಹಾಜರಿದ್ದರು.1
- ಮುದುವಾಡಿ–ರೋಜರಪಲ್ಲಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಟೊಮೆಟೊ ಸಾಗಿಸುತ್ತಿದ್ದ ಈಚರ್ ವಾಹನದಿಂದ ಡಿಕ್ಕಿ..1