Shuru
Apke Nagar Ki App…
ಸಮುದ್ರದ ಒಳನೀರ ಪ್ರದೇಶದ ಕಾಂಡ್ಲ ವನ ವೀಕ್ಷಣೆ.
Narayan P.
ಸಮುದ್ರದ ಒಳನೀರ ಪ್ರದೇಶದ ಕಾಂಡ್ಲ ವನ ವೀಕ್ಷಣೆ.
More news from Karnataka and nearby areas
- ಸಮುದ್ರದ ಒಳನೀರ ಪ್ರದೇಶದ ಕಾಂಡ್ಲ ವನ ವೀಕ್ಷಣೆ.1
- ಹಾವೇರಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ನೂತನ ಮಹಾರಥದ ಲೋಕಾರ್ಪಣೆ ನಿಮಿತ್ಯ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮ-16 ಸೋಮವಾರ ಜರುಗಿತು.1
- ಸೊರಬ ಪಟ್ಟಣದ ರಂಗಮoದಿರದ ಆಭರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಹಯೋಗದೊಂದಿಗೆ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಮಂಜುಳಾ ಬಿ ಹೆಗಡಾಳ್ ಶುಭ ಸಂದೇಶ ನೀಡಿ ಗಣರಾಜ್ಯೋತ್ಸವ ಎಂದರೆ ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವುದಲ್ಲ, ಅದು ಭವಿಷ್ಯವನ್ನು ರೂಪಿಸುವುದಾಗಿದೆ. ನಮ್ಮ ದೇಶದ ಪ್ರಗತಿಗೆ ನಾವೆಷ್ಟು ಬದ್ಧರಾಗಿದ್ದೇವೆ ಎಂದು ಮರುಚಿಂತನೆ ಮಾಡುವ ದಿನವಾಗಿದೆ. ಗಣರಾಜ್ಯೋತ್ಸವ ಎಂದರೆ ಕೇವಲ ರಜೆ ದಿನವಲ್ಲ. ಇದು ನಾವು ದೇಶಕ್ಕೆ ಏನು ನೀಡಬಹುದು ಎಂದು ಯೋಚಿಸುವ ದಿನ. ದೇಶದ ಗಣರಾಜ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅಂತಹ ಇನ್ನು ಅನೇಕ ಮಹನೀಯರನ್ನು ಮತ್ತು ಇಂದಿಗೂ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಯೋಧರನ್ನು ನಾವು ಈ ಕ್ಷಣದಲ್ಲಿ ನೆನೆಯಲೇಬೇಕು. ಗಣರಾಜ್ಯ ಎಂದರೇ ಪ್ರಜೆಗಳಿಂದಲೇ ಚುನಾಯಿತರಾದ ಪ್ರತಿನಿಧಿಗಳು. ಆಡಳಿತ ನಡೆಸುವ ವ್ಯವಸ್ಥೆಯೇ 'ಗಣರಾಜ್ಯ' ಇಲ್ಲಿ ಪ್ರಜೆಗಳೇ ಪ್ರಭುಗಳು.ಭಾರತದ ಸಂವಿಧಾನದ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ, ಹಾಗೂ ರಾಷ್ಟ್ರದ ಶಾಂತಿ ಮತ್ತು ಏಕತೆಗಾಗಿ ಬದ್ಧರಾಗುವ ಸಂಕಲ್ಪ ಮಾಡುವ ದಿನವಿದು. ದೇಶದ ಪ್ರಗತಿ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಬ್ಬ ನಾಗರಿಕನ ಕೊಡುಗೆ ಇರಲಿ. "ದೇಶದ ಪ್ರಗತಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿ ಪ್ರಜೆಯ ಕರ್ತವ್ಯ. ಕಾನೂನನ್ನು ಗೌರವಿಸೋಣ, ಸಮಾನತೆಯನ್ನು ಪಾಲಿಸೋಣ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ, ಅದರ ಜೊತೆಗೆ ಕೆಲವು ಕರ್ತವ್ಯಗಳನ್ನೂ ನೀಡಿದೆ. ಆ ಕರ್ತವ್ಯಗಳನ್ನು ಪಾಲಿಸುವುದು ನಮ್ಮ ಮೊದಲ ಆದ್ಯತೆಯಾಗಲಿ. ದೇಶದ ಕಾನೂನುಗಳನ್ನು ಗೌರವಿಸುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಜಾತಿ ಧರ್ಮಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಬಾಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ನoತರ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಜಯಶೀಲಗೌಡ, ತಾ.ಪಂ ಮಾಜಿ ಅಧ್ಯಕ್ಷ ಹೆಚ್ ಗಣಪತಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ ಜಿ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಆರ್, ಕೃಷಿ ಅಧಿಕಾರಿ ಕೆ.ಜಿ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ನೌಕರರ ಸಂಘದ ಅಧ್ಯಕ್ಷ ಎಸ್ ಮಂಜುನಾಥ್, ಅಧಿಕಾರಿಗಳಾದ ನಾಗರಾಜ್ ಅನ್ವೇಕರ್, ಪ್ರದೀಪ್ ಕುಮಾರ್, ಮೀನಾಕ್ಷಿ, ದಯಾನಂದ ಕಲ್ಲೇರ, ಸೋಮಶೇಖರ್, ಪ್ರಮುಖರಾದ ಹೆಚ್ ಗಣಪತಿ, ಡಿ ಬಿ ಅಣ್ಣಪ್ಪ, ಜಯಶೀಲಗೌಡ, ಪ್ರಶಾಂತ್ ಮೇಸ್ತ್ರಿ, ಸುಜಾಯತ್, ಅತಿಕುರ್ ರೆಹಮಾನ್, ರತ್ನಮ್ಮ ಮೊದಲಾದವರು ಇದ್ದರು.4
- ಬೆಳಗಾವಿ ಬ್ರೇಕಿಂಗ್ ಬೆಳಗಾವಿಯಲ್ಲಿ 2026ರ ಶ್ವಾನ, ಬೆಕ್ಕುಗಳ ಪ್ರದರ್ಶನ ಬೆಳಗಾವಿ ನಗರದ ಸರ್ದಾರ್ ಮೈದಾನದಲ್ಲಿ ನಡೆಯುತ್ತಿರುವ ಪ್ರದರ್ಶನ ಬೆಳಗಾವಿ ಜಿಲ್ಲಾ ಪಂಚಾಯತ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಶ್ವಾನ, ಬೆಕ್ಕುಗಳ ಪಾಲನೆ,ಪೋಷಣೆ ರೇಬೀಸ್ ರೋಗದ ನಿಯಂತ್ರಣ, ನಾಯಿ ಕಚ್ಚಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಪ್ರದರ್ಶನದಲ್ಲಿ ವಿವಿಧ ಥಳಿಯ ಶ್ವಾನಗಳ ಅದ್ಬುತ ಪ್ರದರ್ಶನ ಇದೇ ವೇಳೆ ರೇಬೀಸ್ ಕುರಿತಾಗಿ ಕಿರುನಾಟ ಪ್ರದರ್ಶನ ನಡೆಸಲಾಯಿತು2
- ಭದ್ರಾವತಿ: ಭಾರತದ ಸಂವಿಧಾನ ಭಾರತೀಯರಾದ ನಮ್ಮೆಲ್ಲರಿಗೂ ಪವಿತ್ರ ವಾದ ಗ್ರಂಥವಾಗಿದ್ದು, ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನವು ಸಮಾನ ಅವಕಾಶ,ಹಕ್ಕುಗಳನ್ನುನೀಡಿದೆ. ಗಣರಾಜ್ಯೋತ್ಸವವೆನ್ನುವುದು ಭಾರತೀಯ ರಾದ ನಮಗೆ ಪವಿತ್ರವಾದ ರಾಷ್ಟ್ರೀಯ ಹಬ್ಬವಾಗಿದೆ ಎಂದು ತಹಶೀಲ್ದಾರ್ ಪರಸಪ್ಪ ಕುರುಬರ ಹೇಳಿದರು. ಅವರು ಸೋಮವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧ ರಾಜ್ಯಗಳನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸಿ ರಚಿಸಲಾದ ಭಾರತ ದೇಶದಲ್ಲಿ ಗಣರಾಜ್ಯೋತ್ಸವವನ್ನು ಎಲ್ಲರೂ ಶಾಂತಿ,ಸೌಹಾರ್ಧತೆ,ಪ್ರೀತಿಯೀಂದ ಬಾಳುತ್ತಿದ್ದು ಇದು ವಿಶ್ವಕ್ಕೇ ಮಾದರಿ ಯಾಗಿದೆ ಎಂದರು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೆಶ್ವರ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂದೀಜಿ ಹೆಸರನ್ನೇ ಕೇಂದ್ರಸರ್ಕಾರದವರು ನರೇಗಾದಿಂದ ಗಾಂಧೀ ಹೆಸರನ್ನು ಕೈಬಿಟ್ಟು ಗಾಂಧೀ ಹೆಸರನ್ನು ಇಲ್ಲವಾಗಿಸುವ ಪ್ರಯತ್ನಮಾಡಿದ್ದಾರೆ. ಇತಂಹವರು ಅಧಿಕಾರದಲ್ಲಿ ಮುಂದುವರೆದರೆ ಇವರು ಮುಂದೆ ಸಂವಿಧಾನವನ್ನೇ ಬದಲಾಯಿಸ ಬಹುದು ಆದ್ದರಿಂದ ಎಲ್ಲರೂ ಎಚ್ಚರಿಕೆ ಯಿಂದ ಸಂವಿಧಾನದ ರಕ್ಷಣೆಗೆ ಆಧ್ಯತೆ ನೀಡಬೇಕು ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಪ್ರಾಸ್ಥಾವಿಕನುಡಿಗಳನ್ನಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್ ಸಂಗಡಿಗರು ನಾಡಗೀತೆ,ರೈತಗೀತೆ ಹಾಡಿದರು. ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಭೋಧಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಗರದಲ್ಲಿ ನಡೆದ ದಂಪತಿಗಳ ಜೋಡಿ ಕೊಲೆಯನ್ನು 24ಗಂಟೆಯಲ್ಲಿ ಬೇಧಿಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಡಿವೈಎಸ್ಪಿ ಪ್ರಕಾಶ್ ರಾಠೋಡ್, ನಗರ ವೃತ್ತನಿರೀಕ್ಷಕಿ ನಾಗಮ್ಮ ಹಾಗೂ ಹಳೇನಗರ ಪೋಲಿಸ್ ಠಾಣೆಯ ಪಿಎಸ್ ಐ ಸುನೀಲ್ ಬಸವರಾಜ್ ತೇಲಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನಗರಸಭಾಧ್ಯಕ್ಷೆ ಗೀತಾರಾಜಕುಮಾರ್,ಉಪಾಧ್ಯಕ್ಷ ಬಷೀರ್, ಸ್ಥಾಯಿಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಅಹಮದ್, ನಗರಸಬಾ ಸದಸ್ಯರುಗಳು, ಪೌರಾಯುಕ್ತ ಹೇಮಂತ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಆಶಾ, ಗ್ರಾಮಾಂತರ ವೃತ್ತನಿರೀಕ್ಷಕ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು. ತ ತಹಶೀಲ್ದಾರ್ ಹಾಗೂ ಶಾಸಕರು ಪೋಲಿಸ್ ತಂಡ,ಗೃಹರಕ್ಷಕದಳ, ಶಾಲಾಮಕ್ಕಳ ವಾದ್ಯತಂಡದ ಧ್ವಜವಂದನೆ ಸ್ವೀಕರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನರ್ತಿಸಿ ರಂಜಿಸಿದರು.1
- ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡ ಸೋಮವಾರ, ಭಾರತ ಹುಣ್ಣಿಮೆ ಪ್ರಯುಕ್ತ ಇಂದು ಸಂಚಾರ ಸಮಸ್ಯೆ ಈ ವರ್ಷವೂ ಭಕ್ತರನ್ನು ಬಿಟ್ಟುಬಿಡದೆ ಕಾಡಿತು.ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಕಣ್ಣು ಹಾಯಿಸಿದಷ್ಟು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ರಸ್ತೆಯಲ್ಲೇ ಹೆಚ್ಚಿನ ಸಮಯ ಕಳೆದ ಭಕ್ತರು, ದೇವಸ್ಥಾನ ತಲುಪುವಷ್ಟರಲ್ಲಿ ಬಸವಳಿದು ಹೋದರು.ಚಕ್ಕಡಿ, ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಬದಿ ವಾಹನ ನಿಲುಗಡೆಯಾಗಿದ್ದವು.1
- 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ : ಶಾಸಕ ಎನ್.ಎಚ್.ಕೋನರಡ್ಡಿ ನವಲಗುಂದ : ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರ ಪಾಲನೆ ಮಾಡಬೇಕು ಡಾ. ಬಿ.ಆರ್.ಅಂಬೇಡ್ಕರ ನೀಡಿರುವಂತಹ ಸಂವಿಧಾನ ಅಮೂಲ್ಯವಾದದ್ದು ಪ್ರತಿಯೊಬ್ಬ ಭಾರತಿಯ ಪ್ರಜೆ ಸಂವಿಧಾನವನ್ನು ಪಾಲನೆ ಮಾಡಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಾ ಆಡಳಿತದಿಂದ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಜಲ್ವಂತ ಸಮಸ್ಯೆಯಾದ ಬೆಣ್ಣೆಹಳ್ಳದ ಅಭಿವೃದ್ದಿಗಾಗಿ ಸುಮಾರು 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸಿ ಚಾಲನೆ ನೀಡಲಿದ್ದಾರೆ. ರೂ. 350 ಕೋಟಿ ಅಭಿವೃದ್ದಿಗೆ ನಿನ್ನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂಬ ಭರವಸೆ ನೀಡಿದ್ದಾರೆ ನವಲಗುಂದ ಪಟ್ಟಣಕ್ಕೆ ರೂ. 30 ಕೋಟಿ ಒಳಚರಂಡಿ ಯೋಜನೆ, ಅಣ್ಣಿಗೇರಿ ಮಿನಿ ವಿಧಾನಸೌಧಕ್ಕೆ ರೂ. 15 ಕೋಟಿ ನೂತನ ತಾಲೂಕ ಕಛೇರಿ, ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳ ಅಡಿಗಲ್ಲು ಪೂಜೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸುವರು. ಇದೇ ಸಂದರ್ಬದಲ್ಲಿ ಪ್ರಗತಿ ಪರ ರೈತ ಶೌಕತ ಲಂಬೂನವರ ಅವರನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ. 50 ಸಾವಿರ ಚಕ್ ವಿತರಿಸಲಾಯಿತು. ದ್ವಜಾರೋಹಣವನ್ನು ತಹಶೀಲ್ದಾರ ಸುಧೀರ ಸಾವಕಾರ ಅವರು ನೇರವೇರಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ರವಿ ಕಪ್ಪತ್ತನವರ, ಹಾಗೂ ತಾಲೂಕಾ ಅಡಳಿತಾಧಿಕಾರಿಗಳು ಉಪಸ್ಥಿತರಿದ್ದರು.4
- ಬೆಳಗಾವಿ ಬ್ರೇಕಿಂಗ್ ಬೆಳಗಾವಿಯಲ್ಲಿ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಯಿಂದ ಧ್ವಜಾರೋಹಣ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 77 ನೇ ಗಣರಾಜ್ಯೋತ್ಸವ ಸಮಾರಂಭ ಧ್ವಜಾರೋಹಣ ಬಳಿಕ ಪರೇಡ್ ಪರಿವೀಕ್ಷಣೆ, ಪೊಲೀಸ್ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತ ಧ್ವಜಾರೋಹಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ್ ಕೋರೆ, ಶಾಸಕ ಆಶೀಫ್ ಸೇಠ್, ಡಿಸಿ ಮೊಹಮ್ಮದ್ ರೋಷನ್ ಭಾಗಿ ಮೇಯರ್, ಪಾಲಿಕೆ ಸದಸ್ಯರು, ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ2