*ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ* ಹನೂರು: ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಹನೂರು: ತಾಲ್ಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ವತಿಯಿಂದ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ಮುಖಂಡರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಬಾಬಾಸಾಹೇಬರ ಹೋರಾಟ ಮತ್ತು ಅವರು ದೇಶಕ್ಕೆ ನೀಡಿದ ಸಂವಿಧಾನದ ಮಹತ್ವವನ್ನು ಸ್ಮರಿಸಿದರು. ಹೋರಾಟದ ಹಾದಿಯೇ ನಮಗೆ ಸ್ಫೂರ್ತಿ ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ದೊಡ್ಡಿಂದವಾಡಿ ಸಿದ್ದರಾಜು , "ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ರಾಷ್ಟ್ರದ ಆಸ್ತಿ. ಶೋಷಿತರ ಧ್ವನಿಯಾಗಿ, ಸಮಾನತೆಯ ಹರಿಕಾರರಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು," ಎಂದು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯಾಂಶಗಳು: ಪುತ್ಥಳಿಗೆ ಮಾಲಾರ್ಪಣೆ: ಹನೂರಿನ ಮುಖ್ಯ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಗೌರವ ಸಲ್ಲಿಸಲಾಯಿತು. ಜೈಕಾರದ ಘೋಷಣೆ: "ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ", "ಸಂವಿಧಾನ ಉಳಿಸಿ" ಎಂಬ ಘೋಷಣೆಗಳು ಮೊಳಗಿದವು. ಈ ಸಂಧರ್ಭದಲ್ಲಿ ದೊಡ್ಡಿಂದುವಾಡಿ ಸಿದ್ಧರಾಜು: ರಾಜ್ಯ ಸಂಘಟನಾ ಸಂಚಾಲಕರು. ವೀರ: ವಿಭಾಗೀಯ ಸಂಚಾಲಕರು. ಭಾಗ್ಯಮ್ಮ: ಜಿಲ್ಲಾ ಸಂಘಟನಾ ಸಂಚಾಲಕರು. ತಾಲ್ಲೂಕು ಮಟ್ಟದ ಪದಾಧಿಕಾರಿಗಳು: ಮಾದೇಶ್ ಬೈರನಾಥ: ಹನೂರು ತಾಲ್ಲೂಕು ಸಂಚಾಲಕರು. ಮುರುಗೇಶ್ ಎಂ.ಜಿ. ದೊಡ್ಡಿ: ಹನೂರು ತಾಲ್ಲೂಕು ಸಂಘಟನಾ ಸಂಚಾಲಕರು. ದೇವರಾಜ್: ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕರು. ಸುಂದರಮ್ಮ: ತಾಲ್ಲೂಕು ಮಹಿಳಾ ಸಂಚಾಲಕರು. ಟ್ರಸ್ಟ್ ಮತ್ತು ಇತರ ಪ್ರಮುಖರು: ಪ್ರೇಮ್: ಬುದ್ಧ ಟ್ರಸ್ಟ್ ಕಾರ್ಯದರ್ಶಿ ಕುಮಾರ್: ಪ್ರಮುಖ ಸದಸ್ಯರು. ನಿಂಗಪ್ಪ ಬೈರನಾಥ: ಪ್ರಮುಖ ಸದಸ್ಯರು. ಕುಮಾರ್: ಪ್ರಮುಖ ಸದಸ್ಯರು.
*ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ* ಹನೂರು: ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಹನೂರು: ತಾಲ್ಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ
(ಅಂಬೇಡ್ಕರ್ ವಾದ) ಸಂಘಟನೆಯ ವತಿಯಿಂದ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ಮುಖಂಡರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಬಾಬಾಸಾಹೇಬರ ಹೋರಾಟ ಮತ್ತು ಅವರು ದೇಶಕ್ಕೆ ನೀಡಿದ ಸಂವಿಧಾನದ ಮಹತ್ವವನ್ನು ಸ್ಮರಿಸಿದರು. ಹೋರಾಟದ ಹಾದಿಯೇ ನಮಗೆ ಸ್ಫೂರ್ತಿ ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ದೊಡ್ಡಿಂದವಾಡಿ ಸಿದ್ದರಾಜು , "ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ರಾಷ್ಟ್ರದ ಆಸ್ತಿ. ಶೋಷಿತರ
ಧ್ವನಿಯಾಗಿ, ಸಮಾನತೆಯ ಹರಿಕಾರರಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು," ಎಂದು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯಾಂಶಗಳು: ಪುತ್ಥಳಿಗೆ ಮಾಲಾರ್ಪಣೆ: ಹನೂರಿನ ಮುಖ್ಯ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಗೌರವ ಸಲ್ಲಿಸಲಾಯಿತು. ಜೈಕಾರದ ಘೋಷಣೆ: "ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ", "ಸಂವಿಧಾನ ಉಳಿಸಿ" ಎಂಬ ಘೋಷಣೆಗಳು ಮೊಳಗಿದವು. ಈ ಸಂಧರ್ಭದಲ್ಲಿ
ದೊಡ್ಡಿಂದುವಾಡಿ ಸಿದ್ಧರಾಜು: ರಾಜ್ಯ ಸಂಘಟನಾ ಸಂಚಾಲಕರು. ವೀರ: ವಿಭಾಗೀಯ ಸಂಚಾಲಕರು. ಭಾಗ್ಯಮ್ಮ: ಜಿಲ್ಲಾ ಸಂಘಟನಾ ಸಂಚಾಲಕರು. ತಾಲ್ಲೂಕು ಮಟ್ಟದ ಪದಾಧಿಕಾರಿಗಳು: ಮಾದೇಶ್ ಬೈರನಾಥ: ಹನೂರು ತಾಲ್ಲೂಕು ಸಂಚಾಲಕರು. ಮುರುಗೇಶ್ ಎಂ.ಜಿ. ದೊಡ್ಡಿ: ಹನೂರು ತಾಲ್ಲೂಕು ಸಂಘಟನಾ ಸಂಚಾಲಕರು. ದೇವರಾಜ್: ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕರು. ಸುಂದರಮ್ಮ: ತಾಲ್ಲೂಕು ಮಹಿಳಾ ಸಂಚಾಲಕರು. ಟ್ರಸ್ಟ್ ಮತ್ತು ಇತರ ಪ್ರಮುಖರು: ಪ್ರೇಮ್: ಬುದ್ಧ ಟ್ರಸ್ಟ್ ಕಾರ್ಯದರ್ಶಿ ಕುಮಾರ್: ಪ್ರಮುಖ ಸದಸ್ಯರು. ನಿಂಗಪ್ಪ ಬೈರನಾಥ: ಪ್ರಮುಖ ಸದಸ್ಯರು. ಕುಮಾರ್: ಪ್ರಮುಖ ಸದಸ್ಯರು.
- ಕೊಳ್ಳೇಗಾಲ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅದ್ದೂರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರಾಧ್ಯಕ್ಷರಾದ ಪುಟ್ಟಸ್ವಾಮಿ ಅಣ್ಣ ಅವರು ಭಾಗವಹಿಸಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಈ ಮೆರವಣಿಗೆಯಲ್ಲಿ ನೂರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪುಟ್ಟಸ್ವಾಮಿ ಅಣ್ಣ ಅವರು, ನಂತರ ಮಾತನಾಡಿ, "ಬಾಬಾ ಸಾಹೇಬರು ನೀಡಿದ ಸಂವಿಧಾನವು ಈ ದೇಶದ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಘನತೆಯನ್ನು ನೀಡಿದೆ. ಅವರ 135ನೇ ಜನ್ಮದಿನದ ಈ ಸಂದರ್ಭದಲ್ಲಿ ಅವರ ತತ್ವಗಳನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ," ಎಂದು ತಿಳಿಸಿದರು.1
- . ಹನೂರು :ತಾಲೂಕಿನ ಸುಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಆದಿ ಜಾಂಬವರ ಬೀದಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಹಾಗೂ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿಯನ್ನು ಆಚರಿಸಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ಕೇಕ್ ಅನ್ನು ಕತ್ತರಿಸಿ ಸಿಹಿ ಹಂಚಿದರು. ನಂತರ ಸಮುದಾಯದ ಮುಖಂಡರಾದ ಮಹದೇವ ಮಾತನಾಡಿ ಜಗಜೀವನ್ ರಾಮ್ ಅವರು ಭಾರತದ ಪ್ರಮುಖ ರಾಜಕೀಯ ನಾಯಕರು ಮತ್ತು ಸಾಮಾಜಿಕ ನ್ಯಾಯದ ಹರಿಕಾರರು. ಅವರನ್ನು ಪ್ರೀತಿಯಿಂದ "ಬಾಬೂಜಿ" ಎಂದು ಕರೆಯಲಾಗುತ್ತಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ವಿದ್ಯಾಭ್ಯಾಸದ ಸಮಯದಲ್ಲಿ ಅವರು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಿದರು, ಇದು ಅವರ ಮುಂದಿನ ಹೋರಾಟಕ್ಕೆ ಪ್ರೇರಣೆಯಾಯಿತು. ಕೇಂದ್ರ ಸಚಿವರು ಕೂಡ ಆಗಿದ್ದರು. ಹಸಿರು ಕ್ರಾಂತಿ ಕ್ರಾಂತಿಯ ಹರಿಕಾರ.ಅವರು ದಲಿತರ ಮತ್ತು ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಮಹಾತ್ಮರು ಎಂದು ತಿಳಿಸಿದರು. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು (ಏಪ್ರಿಲ್ 14) ನಾವು ಅರ್ಥಪೂರ್ಣವಾಗಿ ಆಚರಿಸುತ್ತೇವೆ ಅಂಬೇಡ್ಕರ್ ಅವರ ಪ್ರಮುಖ ಘೋಷಣೆಗಳು "ಕಲಿಯಿರಿ, ಸಂಘಟಿತರಾಗಿ, ಹೋರಾಡಿ." "ನಾನು ಆರಾಧಿಸುವ ಮೂರು ದೈವಗಳೆಂದರೆ - ಜ್ಞಾನ, ಸ್ವಾಭಿಮಾನ ಮತ್ತು ಚಾರಿತ್ರ್ಯ." "ಮನಸ್ಸಿನ ಕೃಷಿಯೇ ಮಾನವನ ಅಂತಿಮ ಗುರಿಯಾಗಿರಬೇಕು ಎಂದು ತಿಳಿಸಿದರು. ಸಮುದಾಯದ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಯಜಮಾನರ ತಿಮ್ಮಯ್ಯ, ಜಡೆ ಸ್ವಾಮಿ, ಯುವಕರಾದ ಶ್ರೀನಿವಾಸ್, ಮಾದೇಶ್, ನಂಜುಂಡ, ರವಿ,ನಾಗ, ಪ್ರವೀಣ್, ಪ್ರಜ್ವಲ್, ಸೇರಿದಂತೆ ಇನ್ನಿತರ ಯುವಕರು ಮಹಿಳೆಯರು ಹಾರಾಜರಿದ್ದರು.4
- ನಮ್ಮ ಮೈಸೂರು ನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ ಶ್ರೀ ತನ್ವೀರ್ ಸೇಠ್1
- *ಭಾರತ ನಲ್ಲಿ ವೈರಲ್*1
- ಮಾಗಡಿ : ಡಿಕೆ.ಶಿವಕುಮಾರು ಯಾಗಾಗ ಮುಖ್ಯಮಂತ್ರಿ ಆಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಅದನ್ನೆ ಕೇಳಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಈಗಾಗಲೇ ತೆರಳಿದ್ದಾರೆ ಅವರ ಜೊತೆಗೆ ನಾನು ತೆರಳಬೇಕಿತ್ತು ಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿ ಇರುವುದರಿಂದ ಮುಗಿಸಿದ ನಂತರ ಬರುವುದಾಗಿ ತಿರ್ಮಾನಿಸಲಾಗುವುದು ಎಂದು ಹೇಳಿದ್ದೆ ಅದೇ ರೀತಿ ಏಪ್ರಿಲ್ 15 ರಂದು ದೆಹಲಿಗೆ ತೆರಳುವ ಸಂದರ್ಭ ಬರಲಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ, ಹಿರಿಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟು ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಗೊಂದಲಕ್ಕೆ ಇತಿಶ್ರೀ ಹಾಡುವಂತೆ ಪಕ್ಷದ ಹೈಕಮಾಂಡ್‍ನಲ್ಲಿ ಕೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಆಹಮದ್ ಬೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ, ಈ ವಿಚಾರವಾಗಿ ತಿಳಿದು ಮಾತನಾಡುವುದಾಗಿ ಸ್ವಷ್ಟಪಡಿಸಿದರು. ಸಿಎಂ ಅಪ್ತ ಸಲಹೆಗಾರರ ತಲೆದಂಡ : ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ಪಕ್ಷ ವಿರೋಧಿ ಕೆಲಸಮಾಡಿದರೆ ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು ಆಗಲಿ ನಾನಾಗಲಿ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ತಲೆದಂಡವಾಗಲಿದೆ ಎಂದರು. ಎರಡು ಕ್ಷೇತ್ರದ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ, ಮುಸ್ಲಿಂನ ಎಲ್ಲಾ ನಾಯಕರು ಚುನಾವಣೆ ಮಾಡಿದ್ದಾರೆ 10 ಪರ್ಸೆಟ್ ಏರುಪೇರಾಗಲಿದೆ ಈ ಬಗ್ಗೆ ಮತ ಪೆಟ್ಟಿ ತೆರೆದಮೇಲೆ ಗೊತ್ತಾಗಲಿದೆ ಎಂದರು. ಕೇರಳ ಮತ್ತು ಕರ್ನಾಟಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಕೇರಳದಲ್ಲಿ ಬಡವರು, ನರ್ಸ್‍ಗಳು, ಪೌರಕಾರ್ಮಿಕರು ಚುನಾವಣೆಗೆ ಸ್ಪಂದಿಸುತ್ತಾರೆ ಆ ರೀತಿ ಕರ್ನಾಟಕದಲ್ಲಿ ಸಾಧ್ಯವೆ. ನಾನು ಪ್ರಚಾರಕ್ಕೆ ಹೋದ ವ್ಯಕ್ತಿಯನ್ನು 2 ಭಾರಿ ಗೆಲ್ಲಿಸಿದ್ದಾರೆ ಅವರು ಇಂದಿಗೂ ಚಿಕ್ಕಮನೆಯಲ್ಲಿ ಇದ್ದಾರೆ ಅಲ್ಲಿಯ ಚುನಾವಣೆ ವೆಚ್ಚ 2 ಕೋಟಿ ಇಲ್ಲಿನ ವೆಚ್ಚ ಹತ್ತು ಪಟ್ಟು ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ ಸಹಾಯ ಪಡೆದ ಜೆಡಿಎಸ್ ಮುಖಂಡರೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಅವರ ಬಗ್ಗೆ ಏಕೆ ಮಾತನಾಡುತ್ತಾರ ಎಂದು ತಿಳಿಸಿದ್ದೇನೆ ಆದರೂ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ ಈ ವೇಳೆ ನನ್ನ ವಯಕ್ತಿಕವಾಗಿ ಮಾತನಾಡಿರುವ ಬಗ್ಗೆ ಚರ್ಚೆಮಾಡುತ್ತೇನೆ ದಾಖಲೆ ಪ್ರದರ್ಶಿಸಲಿ ಇಲ್ದಿದ್ದರೆ ತಪ್ಪನ್ನು ಒಪ್ಪಿಕೊಂಡು ಈ ರೀತಿ ಆರೋಪಿಸುವುದನ್ನು ಬಿಡಲಿ ಈ ವೇಳೆ ಗಲಭೆಯಾದರೆ ಚರ್ಚೆಗೆ ಮೂಲಭೂತವಾಗಿ ಕಾರಣವಾದವರ ವಿರುದ್ದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಬಿಎಂಆರ್‍ಡಿಎ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೆಶಕ ದೀಪು, ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್,ದೊಡ್ಡಿ ಲೋಕೇಶ್, ಚಿಕ್ಕರಾಜು, ಬೆಂಕಿ ಮಹದೇವ್, ಚಿಕ್ಕಮುದಿಗೆರೆ ಸುರೇಶ್, ರಾಜು, ಬೆಳ್ಳಿಯಪ್ಪ , ಕುದೂರು ಲೋಕೇಶ್, ಚಿಲಿಪಿಲಿ ರಾಜಣ್ಣ ಇತರರು ಇದ್ದರು.1
- ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಮಂಗಳವಾರ ದೆಹಲಿ ನೋಂದಣಿ ಸಂಖ್ಯೆಯ ಬೈಕ್‌ನ್ನು ರಸ್ತೆಯ ಮಧ್ಯೆ ನಿಲ್ಲಿಸಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ವೈರಲ್ ಆಗಿದೆ. ಉತ್ತರ ಭಾರತದ ವ್ಯಕ್ತಿಯೊಬ್ಬರು ಬೈಕ್‌ನ್ನು ಸಂಚಾರದ ಮಧ್ಯೆ ನಿಲ್ಲಿಸಿ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬೈಕ್ ತೆರವುಗೊಳಿಸುವಂತೆ ಕೇಳಿದಾಗ, ಆತ ಸ್ಥಳೀಯರೊಂದಿಗೆ ಉದ್ಧಟವಾಗಿ ವರ್ತಿಸಿ ವಾಗ್ವಾದಕ್ಕಿಳಿದಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.1
- ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ ಎಲ್ಲರಿಗೂ ಜೈ ಭೀಮ್ ಜೈ ಭೀಮ್ 💐💐❤️❤️💐💐👍1
- ಹನೂರು: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ನಂತರ ಮಾತನಾಡಿದರು. "ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ತತ್ವಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ. ಅವರ ಹೋರಾಟ ಮತ್ತು ಜ್ಞಾನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ," ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾದ ಬಿ. ಕೇಶವಮೂರ್ತಿ ಅವರು ಅಂಬೇಡ್ಕರ್ ಅವರ ಜೀವನದ ಹಾದಿ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರೇಖಾ, ಶಿಕ್ಷಣಾಧಿಕಾರಿ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್, ಆರಕ್ಷಕ ನಿರೀಕ್ಷಕ ಆನಂದ್ ಮೂರ್ತಿ ಉಪಸ್ಥಿತರಿದ್ದರು. ಹಾಗೆಯೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಸಿದ್ದರಾಜು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಪ್ಪ, ಮುಖಂಡರುಗಳಾದ ಮಹೇಶ್, ಲಿಂಗರಾಜು, ಗುರುಸ್ವಾಮಿ, ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ, ಅಂಕರಾಜು, ನಾಗಣ್ಣ, ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ವರದಿ ಉಸ್ಮಾನ್ ಖಾನ್4