logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಮಯ ಪ್ರಜ್ಞೆಯಿಂದಲೇ ಗುರಿ ಸಾಧನೆ – ರಾಯಚೂರಿನಲ್ಲಿ ಡಾ. ಜಿ. ಎಸ್. ಬಿರಾದಾರ ಹೇಳಿಕೆ ರಾಯಚೂರು : ಎಲ್‌ವಿಡಿ ಮಹಾವಿದ್ಯಾಲಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ 11 ಗಂಟೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಜಿ. ಎಸ್. ಬಿರಾದಾರ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಚಿತ. ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ," ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ (ವಕೀಲರು) ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಕರೆ ನೀಡಿದರು. ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರಹನುಮಾನ ಮಾತನಾಡಿ, ಕಾಲೇಜಿನ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಸಂಸ್ಥೆಯ ಹೆಮ್ಮೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸಮಯಪಾಲನೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶರಣಗೌಡ ಬಿ. ಎಚ್. ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದ, ಸುಸಜ್ಜಿತ ಗ್ರಂಥಾಲಯ, ವಿಶಾಲ ಕ್ರೀಡಾಂಗಣ, ಜಿಮ್ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು. ಉಪಪ್ರಾಚಾರ್ಯ ಡಾ. ಆಂಜನೇಯ ಅವರು ಹೊಸ ಕಾಲೇಜು ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರೋಪದಲ್ಲಿ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿ ಅಭಿವಿನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಹರ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಹುಸೇನಪ್ಪ ಉದ್ಘಾಟಕರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಹೇಮಲತಾ ಹಾಗೂ ಮಾಲತೇಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೆಂಕಟೇಶ ಮತ್ತು ಡಾ. ಮಂಜುನಾಥ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ದೀಕ್ಷಿತ್ ಹಾಗೂ ಡಾ. ಹನುಮಂತ ನಾಯಕ ವಂದಿಸಿದರು.

19 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
19 hrs ago

ಸಮಯ ಪ್ರಜ್ಞೆಯಿಂದಲೇ ಗುರಿ ಸಾಧನೆ – ರಾಯಚೂರಿನಲ್ಲಿ ಡಾ. ಜಿ. ಎಸ್. ಬಿರಾದಾರ ಹೇಳಿಕೆ ರಾಯಚೂರು : ಎಲ್‌ವಿಡಿ ಮಹಾವಿದ್ಯಾಲಯದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ 11 ಗಂಟೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಡಾ. ಜಿ. ಎಸ್. ಬಿರಾದಾರ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಚಿತ. ನಿಮ್ಮ ಸಾಧನೆಯೇ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ," ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ (ವಕೀಲರು) ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಕರೆ ನೀಡಿದರು. ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವೀರಹನುಮಾನ ಮಾತನಾಡಿ, ಕಾಲೇಜಿನ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಸಂಸ್ಥೆಯ ಹೆಮ್ಮೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಸಮಯಪಾಲನೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶರಣಗೌಡ ಬಿ. ಎಚ್. ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದ, ಸುಸಜ್ಜಿತ ಗ್ರಂಥಾಲಯ, ವಿಶಾಲ ಕ್ರೀಡಾಂಗಣ, ಜಿಮ್ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು. ಉಪಪ್ರಾಚಾರ್ಯ ಡಾ. ಆಂಜನೇಯ ಅವರು ಹೊಸ ಕಾಲೇಜು ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಡಾ. ಅರುಣಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾರೋಪದಲ್ಲಿ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎ, ಬಿಎಸ್‌ಸಿ ಹಾಗೂ ಬಿಸಿಎ ಪ್ರಥಮ ವರ್ಷದ ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿ ಅಭಿವಿನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಹರ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಹುಸೇನಪ್ಪ ಉದ್ಘಾಟಕರ ಪರಿಚಯ ಮಾಡಿಕೊಟ್ಟರೆ, ಶ್ರೀಮತಿ ಹೇಮಲತಾ ಹಾಗೂ ಮಾಲತೇಶ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೆಂಕಟೇಶ ಮತ್ತು ಡಾ. ಮಂಜುನಾಥ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ದೀಕ್ಷಿತ್ ಹಾಗೂ ಡಾ. ಹನುಮಂತ ನಾಯಕ ವಂದಿಸಿದರು.

More news from Vijayapura and nearby areas
  • ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ
    1
    ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ  ಶಿವಕುಮಾರ್ ಖಡಕ್ ಎಚ್ಚರಿಕೆ
    user_Sharanugouda Patil
    Sharanugouda Patil
    Muddebihal, Vijayapura•
    23 hrs ago
  • ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.! ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.!
    1
    ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.!
ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    10 hrs ago
  • ಆಗಸ್ಟ್ 9 ಕ್ಕೆ 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ. ಅಫಜಲಪುರ: ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಇದೆ ಆಗಸ್ಟ್ 9 ರಂದು 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಮಹಾಂತೇಶ್ವರ ವಿದ್ಯಾ ವರ್ದಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
    1
    ಆಗಸ್ಟ್ 9 ಕ್ಕೆ 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ.
ಅಫಜಲಪುರ: ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಇದೆ ಆಗಸ್ಟ್ 9 ರಂದು 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಮಹಾಂತೇಶ್ವರ ವಿದ್ಯಾ ವರ್ದಕ ಶಾಲೆಯ ಹಳೆಯ  ವಿದ್ಯಾರ್ಥಿಗಳು ತಿಳಿಸಿದ್ದಾರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
    1
    ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ *ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿನ 100ಹಾಸಿಗೆ ಆಸ್ಪತ್ರೆಯನ್ನು , 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿ. ತಾಯಿ ಮಕ್ಕಳ ಆಸ್ಪತ್ರೆಯನ್ನು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿ. ಆಸ್ಪತ್ರೆಯನ್ನು ವಿಭಾಗಿಯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಅಭಿವೃದ್ಧಿಯ ದಿಟ್ಟ ಹೆಜ್ಜೆಗೆ. ಸಾರ್ವಜನಿಕ ವಲಯದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರಕಿದೆ , ಸಾರ್ವಜನಿಕರು ಕೂಡ ಶಾಸಕರಿಗೆ ನಡೆಗೆ ಪೂರಕ ಅಭಿಮತ ನೀಡೊ ಮೂಲಕ ಸಾಥ್ ನೀಡಿದ್ದಾರೆ. ಸಂಬಂಧಿಸಿದಂತೆ ಸಾರ್ವಜನಿಕ ವಲಯದ ಅಭಿಪ್ರಾಯ ಸಂಗ್ರಹಿಸಿದಾಗ , ಬಹುತೇಕ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ತುರ್ತುಸೇ‍ವಾ ಸಿಬ್ಬಂದಿಯವರು , ಮುಖಂಡರು , ಸಾರ್ವಜನಿಕರು ಶಾಸಕರ ಈ ನಡೆಯನ್ನು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳ ಮರಣ ಪ್ರಮ‍ಾಣ ತಗ್ಗಿಸಲು , ತಾಯಿ ಮಕ್ಕಳಿಗೆ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲು. ತಾಯಿ ಮಕ್ಕಳ ಆಸ್ಪತ್ರೆಯು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿರುವುದು. ಎಲ್ಲಾ ರೀತಿಯಿಂದ ತುಂಬಾ ಅನುಕೂಲವಾಗಲಿದ್ದು , ಅದು ಅತ್ಯಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ವೈದ್ಯರಾದ ನಾಗರಾಜರವರು ತಿಳಿಸಿದ್ದಾರೆ. ಸಂಘಟನೆಗಳ ಮುಖಂಡರು ಮಾತನಾಡಿ , ತಾಯಿ ಮಕ್ಕಳ ಆಸ್ಪತ್ರೆ ಕೂಡ್ಲಿಗಿ ಗೆ ಮಾತ್ರ ಸೀಮಿತವಾಗಲ್ಲ. ನೆರೆ ಹೊರೆ ತಾಲೂಕುಗಳಿಗೂ ಸಹಕಾರಿಯಾಗಲಿದೆ , ಸಹೃದಯವಂತ ಶಾಸಕರನ್ನು ಜನಾನುರಾಗಿ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದಿದ್ದಾರೆ. ಆಶಕಾರ್ಯಕರ್ತರು ಮಾತನಾಡಿ , ಕೆಲ ಅನಿವಾರ್ಯ ಕಾರಣಗಳಿಗೆ ಹೆರಿಗೆ ಪ್ರಕಣಗಳನ್ನು. ಕೂಡ್ಲಗಿಯಿಂದ ಹೊಸಪೇಟೆ , ಬಳ್ಳಾರಿ , ಕೊಪ್ಪಳ , ದ‍‍ಾವಣಗೆರೆ ಆಸ್ಪತ್ರೆಗೆ ಶಿಪಾರಸ್ಸು ಮಾಡೋದು ಸಹಜವಾಗಿದೆ. ಅದರಿಂದಾಗಿ ಎಲ್ಲಾ ರೀತಿಯ ನಷ್ಟಗಳನ್ನು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು , ಅದೆಲ್ಲಾ ತಪ್ಪಲಿದೆ ಹಾಗೂ ತಾಯಿ ಮಕ್ಕಳು ಸುರಕ್ಷಿತವಾಗಿರಲು ಆಸ್ಪತ್ರೆ ಹತ್ತಿರದಲ್ಲಿಯೇ ಆಗಬೇಕಿದೆ ಎಂದಿದ್ದಾರೆ. ದಲಿತ ಮುಖಂಡರು ಹೋರಾಟಗಾರರು ಮಾತನಾಡಿ , ಮಾಜಿ ಶಾಸಕರಾದ ದಿವಂತ ಎನ್ ಟಿ ಬೊಮ್ಮಣ್ಣರವರು. ಅಂದರೆ ಶಾಸಕರ ತಂದೆಯವರು ಶಾಸಕರಾದಾಗ , 100ಹಾಸಿಗೆ ಆಸ್ಪತ್ರೆ ನಿರ್ಮಿಸಿ ದಾಖಲು ಮಾಡಿದ್ದಾರೆ. ಅಂತೆಯೆ ಅವರ ಪುತ್ರರಾದ ಶಾಸಕರಾದ , ಡಾ ॥ ಎನ್ ಟಿ ಶ್ರೀನಿವಾಸ್ ರವರು 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿದ್ದಾರೆ. ಅದು ವಿಭಾಗ ಮಟ್ಟದ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಯಾಗಿ , ಉನ್ನತೀಕರಿಸಿ ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು. ಈ ಮೂಲಕ ಅಸಂಖ್ಯಾತ ತಾಯಿ ಮಕ್ಕಳ , ಆರೈಕೆಗೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ವಾತಾವರಣ ನಿರ್ಮಿಸುತ್ತಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಪಟ್ಟಣ ತಾಲೂಕು ಮಾತ್ರವಲ್ಲ , ವಿಜಯನಗರ ಜಿಲ್ಲೆಗೆ ಮಾದರಿ ಆಸ್ಪತ್ರೆಯಾಗಲಿದೆ. ಅದು ವಿಜಯನಗರ ಜಿಲ್ಲೆಯ ನವಜಾತ ಶಿಶು ಹಾಗೂ ತಾಯಿಯರಿಗೆ ಸಂಜೀವಿನಯಾಗಲಿದೆಎಂದು ಹಿರಿಯ ನಾಗರೀಕರು ಬಣ್ಣಿಸಿದ್ದಾರೆ. ಅದುದರಿಂದಾಗಿ ಈ ಆಸ್ಪತ್ರೆಯು , ಹಾಲಿ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡ ಜಾಗದಲ್ಲಿಯೇ ನಿರ್ಮ‍ಾಣವಾಗಬೇಕಿದೆ ಎಂದು ಅಭಿಮತ ವ್ಯೆಕ್ತಪಡಿಸಿದ್ದಾರೆ. ಪಟ್ಟಣ ತಾಲೂಕು ನೆರೆ ಹೊರೆ ತಾಲೂಕುಗಳಿಂದ ತಿಂಗಳೊಂದಕ್ಕೆ 50 - 75 ಹೆರಿಗೆ ಪ್ರಕರಣಗಳು , ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರಲಿದ್ದು. ಇದು ಎಲ್ಲರಿಗೂ ತುಂಬಾ ಅನುಕೂಲವಾಗಲಿದೆ , ಶಾಸಕರ ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಶಾಸಕರ ಜನಪರ ಕಾಳಜಿ ಮಕ್ಕಳ ಮಹಿಳೆಯರ ಪರ ಇರುವ ನಿಲುವಿಗೆ ನಿದರ್ಶನವಾಗಿದ್ದು , ಈ ಮೂಲಕ ಅವರು ತಾಯಿಯ ಮಮತೆಯ ಸಹೃದಯವಂತಿಕೆ ತೋರಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿದ್ದಲ್ಲಿ , ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಸಾಕಷ್ಟು ಅನುಕೂಕವಾಗಲಿದೆ. ಶಾಸಕರ ಕಾಳಜಿ ಹಾಗೂ ಅಂತಃಕರಣ ಪೂರ್ವಕ ಹೃದಯ ಶ್ರೀಮಂತಿಕೆಗೆ , ತಾಯಿ ಮಕ್ಕಳ ಆಸ್ಪತ್ರೆಯೇ ಸಾಕ್ಷಿಯಾಗಿದೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಈ ಮಹಾ ಕಾರ್ಯಕ್ಕೆ ಅವರೊಂದಿಗೆ ತಾವು ಸದಾ ಇರುತ್ತೇವೆಂದು. ಕೂಡ್ಲಿಗಿ ಪಟ್ಟಣದ ನಾಗರೀಕರು , ಸಾರ್ವಜನಿಕರು , ಹೋರಾಟಗಾರರು , ವಿವಿದ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘ ,ರೈತ ಸಂಘ , ಕಾರ್ಮಿಕರ ಸಂಘ , ಕನ್ನಡ ಪರ ಸಂಘಟನೆಗಳು , ದಲಿತಪರ ಸಂಘಟನೆಗಳು , ತಾಲೂಕಿನ ಬಹುತೇಕ ಸಂಘಟನೆಗಳ ಪದಾಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _  ಸಾರ್ವಜನಿಕರ ಹೋರಾಟಗಾರರ ಅಭಿಮತ
*ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _  ಸಾರ್ವಜನಿಕರ ಹೋರಾಟಗಾರರ ಅಭಿಮತ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿನ 100ಹಾಸಿಗೆ ಆಸ್ಪತ್ರೆಯನ್ನು , 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿ. ತಾಯಿ ಮಕ್ಕಳ ಆಸ್ಪತ್ರೆಯನ್ನು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿ. ಆಸ್ಪತ್ರೆಯನ್ನು ವಿಭಾಗಿಯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಅಭಿವೃದ್ಧಿಯ ದಿಟ್ಟ ಹೆಜ್ಜೆಗೆ.  ಸಾರ್ವಜನಿಕ ವಲಯದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರಕಿದೆ , ಸಾರ್ವಜನಿಕರು ಕೂಡ ಶಾಸಕರಿಗೆ ನಡೆಗೆ ಪೂರಕ ಅಭಿಮತ ನೀಡೊ ಮೂಲಕ ಸಾಥ್ ನೀಡಿದ್ದಾರೆ. ಸಂಬಂಧಿಸಿದಂತೆ  ಸಾರ್ವಜನಿಕ ವಲಯದ ಅಭಿಪ್ರಾಯ ಸಂಗ್ರಹಿಸಿದಾಗ , ಬಹುತೇಕ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ತುರ್ತುಸೇ‍ವಾ ಸಿಬ್ಬಂದಿಯವರು , ಮುಖಂಡರು , ಸಾರ್ವಜನಿಕರು ಶಾಸಕರ ಈ ನಡೆಯನ್ನು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳ ಮರಣ ಪ್ರಮ‍ಾಣ ತಗ್ಗಿಸಲು , ತಾಯಿ ಮಕ್ಕಳಿಗೆ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲು. ತಾಯಿ ಮಕ್ಕಳ ಆಸ್ಪತ್ರೆಯು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿರುವುದು. ಎಲ್ಲಾ ರೀತಿಯಿಂದ ತುಂಬಾ ಅನುಕೂಲವಾಗಲಿದ್ದು , ಅದು ಅತ್ಯಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ವೈದ್ಯರಾದ ನಾಗರಾಜರವರು ತಿಳಿಸಿದ್ದಾರೆ. ಸಂಘಟನೆಗಳ ಮುಖಂಡರು ಮಾತನಾಡಿ , ತಾಯಿ ಮಕ್ಕಳ ಆಸ್ಪತ್ರೆ ಕೂಡ್ಲಿಗಿ ಗೆ ಮಾತ್ರ ಸೀಮಿತವಾಗಲ್ಲ. ನೆರೆ ಹೊರೆ ತಾಲೂಕುಗಳಿಗೂ ಸಹಕಾರಿಯಾಗಲಿದೆ , ಸಹೃದಯವಂತ ಶಾಸಕರನ್ನು ಜನಾನುರಾಗಿ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದಿದ್ದಾರೆ. ಆಶಕಾರ್ಯಕರ್ತರು ಮಾತನಾಡಿ , ಕೆಲ ಅನಿವಾರ್ಯ ಕಾರಣಗಳಿಗೆ ಹೆರಿಗೆ ಪ್ರಕಣಗಳನ್ನು. ಕೂಡ್ಲಗಿಯಿಂದ ಹೊಸಪೇಟೆ , ಬಳ್ಳಾರಿ , ಕೊಪ್ಪಳ , ದ‍‍ಾವಣಗೆರೆ ಆಸ್ಪತ್ರೆಗೆ ಶಿಪಾರಸ್ಸು ಮಾಡೋದು ಸಹಜವಾಗಿದೆ. ಅದರಿಂದಾಗಿ ಎಲ್ಲಾ ರೀತಿಯ ನಷ್ಟಗಳನ್ನು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು , ಅದೆಲ್ಲಾ ತಪ್ಪಲಿದೆ ಹಾಗೂ ತಾಯಿ ಮಕ್ಕಳು ಸುರಕ್ಷಿತವಾಗಿರಲು ಆಸ್ಪತ್ರೆ ಹತ್ತಿರದಲ್ಲಿಯೇ ಆಗಬೇಕಿದೆ ಎಂದಿದ್ದಾರೆ. ದಲಿತ ಮುಖಂಡರು ಹೋರಾಟಗಾರರು ಮಾತನಾಡಿ , ಮಾಜಿ ಶಾಸಕರಾದ ದಿವಂತ ಎನ್ ಟಿ ಬೊಮ್ಮಣ್ಣರವರು. ಅಂದರೆ ಶಾಸಕರ ತಂದೆಯವರು ಶಾಸಕರಾದಾಗ , 100ಹಾಸಿಗೆ ಆಸ್ಪತ್ರೆ ನಿರ್ಮಿಸಿ ದಾಖಲು ಮಾಡಿದ್ದಾರೆ. ಅಂತೆಯೆ ಅವರ ಪುತ್ರರಾದ ಶಾಸಕರಾದ , ಡಾ ॥ ಎನ್ ಟಿ ಶ್ರೀನಿವಾಸ್ ರವರು 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿದ್ದಾರೆ. ಅದು ವಿಭಾಗ ಮಟ್ಟದ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಯಾಗಿ , ಉನ್ನತೀಕರಿಸಿ ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು. ಈ ಮೂಲಕ ಅಸಂಖ್ಯಾತ ತಾಯಿ ಮಕ್ಕಳ , ಆರೈಕೆಗೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ವಾತಾವರಣ ನಿರ್ಮಿಸುತ್ತಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಪಟ್ಟಣ ತಾಲೂಕು ಮಾತ್ರವಲ್ಲ , ವಿಜಯನಗರ ಜಿಲ್ಲೆಗೆ ಮಾದರಿ ಆಸ್ಪತ್ರೆಯಾಗಲಿದೆ. ಅದು ವಿಜಯನಗರ ಜಿಲ್ಲೆಯ ನವಜಾತ ಶಿಶು ಹಾಗೂ ತಾಯಿಯರಿಗೆ ಸಂಜೀವಿನಯಾಗಲಿದೆಎಂದು ಹಿರಿಯ ನಾಗರೀಕರು ಬಣ್ಣಿಸಿದ್ದಾರೆ.  ಅದುದರಿಂದಾಗಿ ಈ ಆಸ್ಪತ್ರೆಯು , ಹಾಲಿ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡ ಜಾಗದಲ್ಲಿಯೇ ನಿರ್ಮ‍ಾಣವಾಗಬೇಕಿದೆ ಎಂದು ಅಭಿಮತ ವ್ಯೆಕ್ತಪಡಿಸಿದ್ದಾರೆ. ಪಟ್ಟಣ ತಾಲೂಕು ನೆರೆ ಹೊರೆ ತಾಲೂಕುಗಳಿಂದ ತಿಂಗಳೊಂದಕ್ಕೆ 50 - 75 ಹೆರಿಗೆ ಪ್ರಕರಣಗಳು , ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರಲಿದ್ದು. ಇದು ಎಲ್ಲರಿಗೂ ತುಂಬಾ ಅನುಕೂಲವಾಗಲಿದೆ , ಶಾಸಕರ ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಶಾಸಕರ ಜನಪರ ಕಾಳಜಿ ಮಕ್ಕಳ ಮಹಿಳೆಯರ ಪರ ಇರುವ ನಿಲುವಿಗೆ ನಿದರ್ಶನವಾಗಿದ್ದು , ಈ ಮೂಲಕ ಅವರು ತಾಯಿಯ ಮಮತೆಯ ಸಹೃದಯವಂತಿಕೆ ತೋರಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿದ್ದಲ್ಲಿ , ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಸಾಕಷ್ಟು ಅನುಕೂಕವಾಗಲಿದೆ. ಶಾಸಕರ ಕಾಳಜಿ ಹಾಗೂ ಅಂತಃಕರಣ ಪೂರ್ವಕ ಹೃದಯ ಶ್ರೀಮಂತಿಕೆಗೆ , ತಾಯಿ ಮಕ್ಕಳ ಆಸ್ಪತ್ರೆಯೇ ಸಾಕ್ಷಿಯಾಗಿದೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಈ ಮಹಾ ಕಾರ್ಯಕ್ಕೆ ಅವರೊಂದಿಗೆ ತಾವು ಸದಾ ಇರುತ್ತೇವೆಂದು. ಕೂಡ್ಲಿಗಿ ಪಟ್ಟಣದ ನಾಗರೀಕರು , ಸಾರ್ವಜನಿಕರು , ಹೋರಾಟಗಾರರು , ವಿವಿದ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘ ,ರೈತ ಸಂಘ , ಕಾರ್ಮಿಕರ ಸಂಘ , ಕನ್ನಡ ಪರ ಸಂಘಟನೆಗಳು ,  ದಲಿತಪರ ಸಂಘಟನೆಗಳು , ತಾಲೂಕಿನ ಬಹುತೇಕ ಸಂಘಟನೆಗಳ ಪದಾಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    3 hrs ago
  • ತುಂಗಭದ್ರಾ ಎಡದಂಡೆ ಕಾಲುವೆಗೆ ತಕ್ಷಣ ನೀರು ಹರಿಸಲು ಸಿರವಾರ ಭಾಗದ ರೈತರು ರಾಯಚೂರಿನಲ್ಲಿ ಆಗ್ರಹ ರಾಯಚೂರು : 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ತಕ್ಷಣ ನೀರು ಹರಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆಯ ರಾಜ್ಯಾಧ್ಯಕ್ಷ ಶಂಕರಗೌಡ ಹರವಿ ರಾಜ್ಯ ಸರ್ಕಾರವನ್ನು ಮಂಗಳವಾರ 10.30 ನಿಮಿಷಕ್ಕೆ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ ಸುಮಾರು 50 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯೊಂದಿಗೆ ಒಳಹರಿವು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಕೂಡಲೇ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು. ಕಾಲುವೆಯ ಗೇಜ್‌ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿ, ನೀರಿನ ಪ್ರಮಾಣವನ್ನು ನಿಖರವಾಗಿ ಅಳೆಯುವ ವ್ಯವಸ್ಥೆ ಕಲ್ಪಿಸಬೇಕು. ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಜಿಲ್ಲಾಧಿಕಾರಿಗಳು ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. 1970-80ರ ದಶಕಗಳಲ್ಲಿ ಜಲಾಶಯದಲ್ಲಿ 25ರಿಂದ 30 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಾದ ಕೂಡಲೇ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ನಂತರ ಬಂದ ಒಳಹರಿವಿನಿಂದ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಈಗ ಅಧಿಕಾರಿಗಳು ಅತಿಯಾದ ಮುನ್ನೆಚ್ಚರಿಕೆ ಹಾಗೂ ರಕ್ಷಣಾತ್ಮಕ ನಿಲುವಿನಿಂದ ಕಾಲುವೆಗೆ ನೀರು ಹರಿಸಲು ವಿಳಂಬ ಮಾಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು. ಈಗಾಗಲೇ ಹತ್ತಿ, ಭತ್ತ ಸೇರಿದಂತೆ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಪೂರ್ಣಗೊಂಡಿದ್ದು, ಬೆಳೆಗಳು 25ರಿಂದ 45 ದಿನಗಳ ಬೆಳವಣಿಗೆಯ ಹಂತದಲ್ಲಿವೆ. ಈ ಸಂದರ್ಭದಲ್ಲಿ ನೀರು ಹರಿಸದಿದ್ದರೆ ಬೆಳೆಗಳು ಒಣಗಿ ರೈತರಿಗೆ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಕಾಲುವೆಗೆ ನೀರು ಹರಿಸುವುದರಲ್ಲಿ ಮತ್ತಷ್ಟು ವಿಳಂಬವಾದರೆ ಕೃಷಿ ಉತ್ಪಾದನೆ ಕುಸಿತ, ಆಹಾರ ಧಾನ್ಯಗಳ ಕೊರತೆ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹಾಗೂ ಕೃಷಿ ಕೂಲಿಕಾರರಿಗೆ ಉದ್ಯೋಗದ ಅಭಾವ, ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ಅವರು ಹೇಳಿದರು. ಆದ್ದರಿಂದ ನಕಾರಾತ್ಮಕ ಮನೋಭಾವ ತೊರೆದು, ಪ್ರಕೃತಿಯ ಮೇಲೆ ವಿಶ್ವಾಸವಿಟ್ಟು ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಶಂಕರಗೌಡ ಹರವಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೈ. ಬಸನಗೌಡ, ರಮೇಶ್ ನಾಡಗೌಡ, ನಾಗನಗೌಡ, ಶರಣಪ್ಪಗೌಡ, ಅಮರೇಶ್ ಹೊಸಮನಿ, ವೀರೇಂದ್ರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ತುಂಗಭದ್ರಾ ಎಡದಂಡೆ ಕಾಲುವೆಗೆ ತಕ್ಷಣ ನೀರು ಹರಿಸಲು ಸಿರವಾರ ಭಾಗದ ರೈತರು ರಾಯಚೂರಿನಲ್ಲಿ ಆಗ್ರಹ
ರಾಯಚೂರು : 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ತಕ್ಷಣ ನೀರು ಹರಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆಯ ರಾಜ್ಯಾಧ್ಯಕ್ಷ ಶಂಕರಗೌಡ ಹರವಿ ರಾಜ್ಯ ಸರ್ಕಾರವನ್ನು ಮಂಗಳವಾರ 10.30 ನಿಮಿಷಕ್ಕೆ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ ಸುಮಾರು 50 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯೊಂದಿಗೆ ಒಳಹರಿವು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಕೂಡಲೇ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಕಾಲುವೆಯ ಗೇಜ್‌ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿ, ನೀರಿನ ಪ್ರಮಾಣವನ್ನು ನಿಖರವಾಗಿ ಅಳೆಯುವ ವ್ಯವಸ್ಥೆ ಕಲ್ಪಿಸಬೇಕು. ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಜಿಲ್ಲಾಧಿಕಾರಿಗಳು ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
1970-80ರ ದಶಕಗಳಲ್ಲಿ ಜಲಾಶಯದಲ್ಲಿ 25ರಿಂದ 30 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಾದ ಕೂಡಲೇ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ನಂತರ ಬಂದ ಒಳಹರಿವಿನಿಂದ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಈಗ ಅಧಿಕಾರಿಗಳು ಅತಿಯಾದ ಮುನ್ನೆಚ್ಚರಿಕೆ ಹಾಗೂ ರಕ್ಷಣಾತ್ಮಕ ನಿಲುವಿನಿಂದ ಕಾಲುವೆಗೆ ನೀರು ಹರಿಸಲು ವಿಳಂಬ ಮಾಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಈಗಾಗಲೇ ಹತ್ತಿ, ಭತ್ತ ಸೇರಿದಂತೆ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಪೂರ್ಣಗೊಂಡಿದ್ದು, ಬೆಳೆಗಳು 25ರಿಂದ 45 ದಿನಗಳ ಬೆಳವಣಿಗೆಯ ಹಂತದಲ್ಲಿವೆ. ಈ ಸಂದರ್ಭದಲ್ಲಿ ನೀರು ಹರಿಸದಿದ್ದರೆ ಬೆಳೆಗಳು ಒಣಗಿ ರೈತರಿಗೆ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕಾಲುವೆಗೆ ನೀರು ಹರಿಸುವುದರಲ್ಲಿ ಮತ್ತಷ್ಟು ವಿಳಂಬವಾದರೆ ಕೃಷಿ ಉತ್ಪಾದನೆ ಕುಸಿತ, ಆಹಾರ ಧಾನ್ಯಗಳ ಕೊರತೆ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹಾಗೂ ಕೃಷಿ ಕೂಲಿಕಾರರಿಗೆ ಉದ್ಯೋಗದ ಅಭಾವ, ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ಅವರು ಹೇಳಿದರು.
ಆದ್ದರಿಂದ ನಕಾರಾತ್ಮಕ ಮನೋಭಾವ ತೊರೆದು, ಪ್ರಕೃತಿಯ ಮೇಲೆ ವಿಶ್ವಾಸವಿಟ್ಟು ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಶಂಕರಗೌಡ ಹರವಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೈ. ಬಸನಗೌಡ, ರಮೇಶ್ ನಾಡಗೌಡ, ನಾಗನಗೌಡ, ಶರಣಪ್ಪಗೌಡ, ಅಮರೇಶ್ ಹೊಸಮನಿ, ವೀರೇಂದ್ರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    19 hrs ago
  • ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
    1
    ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ
ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ  ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ.  ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    8 hrs ago
  • ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ
*ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    20 hrs ago
  • ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ
    1
    ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ
ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ


ಯಾದಗಿರಿ || ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ
ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.