logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುಳಬಾಗಿಲು ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದ ವಿಷ ಸೇವಿಸಿ ಆತ್ಮಹತ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪುಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇನಹಳ್ಳಿ ಗ್ರಾಮದ 74 ವರ್ಷದ ವೆಂಕಟರಾಮಪ್ಪ ಮೂರು ದಿನದ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 day ago
user_Vishnu Press
Vishnu Press
Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
1 day ago

ಮುಳಬಾಗಿಲು ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದ ವಿಷ ಸೇವಿಸಿ ಆತ್ಮಹತ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪುಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇನಹಳ್ಳಿ ಗ್ರಾಮದ 74 ವರ್ಷದ ವೆಂಕಟರಾಮಪ್ಪ ಮೂರು ದಿನದ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More news from ಕರ್ನಾಟಕ and nearby areas
  • ಕೋಲಾರ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಅಭಿಪ್ರಾಯಪಟ್ಟರು.ಇಂದು ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸAದ್ರ, ಸುವರ್ಣಗಂಗೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕೋಲಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ವ್ಯಸನಮುಕ್ತ ದಿನಾಚರಣೆ'ಯಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು. ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು,. "ಭಾರತದಲ್ಲಿ ಶೇ. 65ರಷ್ಟು ಯುವ ಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಯಾವುದೇ ಒಂದು ವ್ಯಸನವು ಕೇವಲ ವ್ಯಕ್ತಿಯನ್ನು ಮಾತ್ರ ಬಲಿಪಡೆಯುವುದಿಲ್ಲ, ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶ ಮಾಡುತ್ತದೆ. ಆದ್ದರಿಂದ ಇಂದಿನ ಯುವಕರು ಮಾದಕ ವಸ್ತುಗಳ ದಾಸರಾಗದೆ, ಸಮಾಜವನ್ನು ಮುನ್ನಡೆಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು," ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ಎನ್. ಬಡಿಗೇರ್ ಅವರು ವಿವಿಧ ಕಾನೂನುಗಳ ಅರಿವನ್ನು ಮೂಡಿಸಿದರು. "ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಾಯಿಯ ಗರ್ಭದಲ್ಲಿರುವ ಮಗುವಿನ ರಕ್ಷಣೆಯಿಂದ ಹಿಡಿದು (ಭ್ರೂಣಹತ್ಯೆ ನಿಷೇಧ), ಮನುಷ್ಯ ಸತ್ತ ನಂತರದ ಆಸ್ತಿ ಹಂಚಿಕೆಯವರೆಗೂ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ. ಅದರಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪೋಕ್ಸೊ (POCSO) ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಯುವಜನತೆ ಇಂತಹ ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು," ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಅವರು ಮಾತನಾಡಿ 'ವ್ಯಸನ' ಎಂದರೆ ಚಟ ಅಥವಾ ಗೀಳು ಎಂದರ್ಥ. ಇಂದಿನ ಯುವಜನತೆ ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದರ ದುರದುಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ಗಮನಿಸಿದರೆ, ನಾವು ಪರೀಕ್ಷೆಯಲ್ಲಿ ಗೆದ್ದಾಗ ಅಥವಾ ಒಳ್ಳೆಯ ಸಿನಿಮಾ ನೋಡಿದಾಗ ನಮ್ಮ ಮೆದುಳಿನ 'ರಿವಾರ್ಡ್ ಸೆಂಟರ್' ಡೋಪಮೈನ್ (Dopamine) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಿ ನಮಗೆ ಸಹಜವಾದ ಖುಷಿ ನೀಡುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವಿಸಿದಾಗ ಕೃತಕವಾಗಿ ಇದೇ ಡೋಪಮೈನ್ ಬಿಡುಗಡೆಯಾಗುತ್ತದೆ. ಈ ಕೃತಕ ಖುಷಿಗಾಗಿ ಯುವಜನರು ವ್ಯಸನಕ್ಕೆ ದಾಸರಾಗುತ್ತಾರೆ. ಆರಂಭದಲ್ಲಿ ಒಂದು ಸಿಗರೇಟ್‌ನಿಂದ ಸಿಗುವ ತೃಪ್ತಿ, ಕ್ರಮೇಣ ಮೆದುಳು ಆ ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದರಿಂದ (ಅಡಾಪ್ಟೇಶನ್) ನಾಲ್ಕು ಸಿಗರೇಟ್ ಸೇದಿದರೂ ಸಿಗುವುದಿಲ್ಲ. ಈ ಹಂತದಲ್ಲಿ ಚಟವನ್ನು ನಿಲ್ಲಿಸಿದರೆ ವಿಪರೀತ ಕೋಪ ಮತ್ತು ಹತಾಶೆಯಂತಹ 'ವಿತ್‌ಡ್ರಾವಲ್' ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕೇವಲ ಕುತೂಹಲಕ್ಕಾಗಿ ದುಶ್ಚಟಗಳನ್ನು ಪ್ರಾರಂಭಿಸಬಾರದು; ಮೊದಲ ಹೆಜ್ಜೆಯಲ್ಲೇ ಇದನ್ನು ಕಡ್ಡಾಯವಾಗಿ ತಿರಸ್ಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಂದು ವೇಳೆ ಈಗಾಗಲೇ ವ್ಯಸನಕ್ಕೆ ತುತ್ತಾಗಿದ್ದರೆ, ದೃಢವಾದ ಇಚ್ಛಾಶಕ್ತಿ ಹಾಗೂ ವೈದ್ಯಕೀಯ ನೆರವಿನಿಂದ ಅದರಿಂದ ಸಂಪೂರ್ಣವಾಗಿ ಹೊರಬರಬಹುದು. ಇದಕ್ಕಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೌನ್ಸಿಲಿಂಗ್ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿದ್ದು, ಯುವಜನರು ಮುಜುಗರವಿಲ್ಲದೆ ಸಹಾಯ ಪಡೆಯಬೇಕು ಎಂದು ಅವರು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ಭೀಕರ ಪರಿಣಾಮಗಳ ಕುರಿತು ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಚಾರಿಣಿ, "ಮಾದಕ ವಸ್ತುಗಳು ನೇರವಾಗಿ ಮನುಷ್ಯನ ಮೆದುಳಿನ ರಿವಾರ್ಡ್ ಸೆಂಟರ್ ಮೇಲೆ ಪ್ರಭಾವ ಬೀರಿ, ಡೋಪಮೈನ್ ಬಿಡುಗಡೆ ಮಾಡುವ ಮೂಲಕ ವ್ಯಕ್ತಿಯನ್ನು ಸಂಪೂರ್ಣ ವ್ಯಸನಿಯನ್ನಾಗಿಸುತ್ತವೆ. ಇದರ ನಿರಂತರ ಸೇವನೆಯಿಂದ ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯ, ಬಂಜೆತನ ಮತ್ತು ರೋಗ ನಿರೋಧಕ ಶಕ್ತಿ ಕುಂದುವAತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಮಾದಕ ವ್ಯಸನಿಗಳು ಒಂದೇ ಇಂಜೆಕ್ಷನ್ ಹಂಚಿಕೊಳ್ಳುವುದರಿAದ ಎಚ್.ಐ.ವಿ (HIV) ನಂತಹ ಮಾರಕ ರೋಗಗಳು ವೇಗವಾಗಿ ಹರಡುತ್ತವೆ," ಎಂದು ಎಚ್ಚರಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಪ್ರಸ್ತುತ ವಿದ್ಯಾವಂತರ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಅಕ್ಷರಸ್ಥರಾದ ಮಾತ್ರಕ್ಕೆ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಇಂದು ವಿದ್ಯಾವಂತ ಯುವಜನತೆಯೇ ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೊಡ್ಡ ವಿಪರ್ಯಾಸ. ರಾಜ್ಯದಲ್ಲಿನ ಇತ್ತೀಚಿನ ವರದಿಗಳ ಬಹಳಷ್ಟು ಜನರು ಎಚ್.ಐ.ವಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕರ ಪ್ರಮಾಣವೇ ಹೆಚ್ಚಾಗಿರುವುದು ಸಮಾಜಕ್ಕೆ ಅತ್ಯಂತ ಮಾರಕವಾದ ಸಂಗತಿಯಾಗಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ನಿರ್ದೇಶಕಿ ಸುವರ್ಣಗಂಗೆ ಕ್ಯಾಂಪಸ್ ಹಾಗೂ ಪ್ರೊ ಕುಮುದ, ವಿತ್ತಾಧಿಕಾರಿ ಬಾಹುಬಲಿ, ಸಿಬ್ಬಂದಿಗಳು, ಎಲ್ಲಾ ಪ್ರಾಧ್ಯಪಕರು ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.
    1
    ಕೋಲಾರ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ
ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಅಭಿಪ್ರಾಯಪಟ್ಟರು.ಇಂದು ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸAದ್ರ, ಸುವರ್ಣಗಂಗೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕೋಲಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ವ್ಯಸನಮುಕ್ತ ದಿನಾಚರಣೆ'ಯಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು.
ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು,. "ಭಾರತದಲ್ಲಿ ಶೇ. 65ರಷ್ಟು ಯುವ ಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಯಾವುದೇ ಒಂದು ವ್ಯಸನವು ಕೇವಲ ವ್ಯಕ್ತಿಯನ್ನು ಮಾತ್ರ ಬಲಿಪಡೆಯುವುದಿಲ್ಲ, ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶ ಮಾಡುತ್ತದೆ. ಆದ್ದರಿಂದ ಇಂದಿನ ಯುವಕರು ಮಾದಕ ವಸ್ತುಗಳ ದಾಸರಾಗದೆ, ಸಮಾಜವನ್ನು ಮುನ್ನಡೆಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು," ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ಎನ್. ಬಡಿಗೇರ್ ಅವರು ವಿವಿಧ ಕಾನೂನುಗಳ ಅರಿವನ್ನು ಮೂಡಿಸಿದರು. "ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಾಯಿಯ ಗರ್ಭದಲ್ಲಿರುವ ಮಗುವಿನ ರಕ್ಷಣೆಯಿಂದ ಹಿಡಿದು (ಭ್ರೂಣಹತ್ಯೆ ನಿಷೇಧ), ಮನುಷ್ಯ ಸತ್ತ ನಂತರದ ಆಸ್ತಿ ಹಂಚಿಕೆಯವರೆಗೂ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ. ಅದರಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪೋಕ್ಸೊ (POCSO)  ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಯುವಜನತೆ ಇಂತಹ ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು," ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಅವರು ಮಾತನಾಡಿ 'ವ್ಯಸನ' ಎಂದರೆ ಚಟ ಅಥವಾ ಗೀಳು ಎಂದರ್ಥ. ಇಂದಿನ ಯುವಜನತೆ ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದರ ದುರದುಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.
ವೈಜ್ಞಾನಿಕವಾಗಿ ಗಮನಿಸಿದರೆ, ನಾವು ಪರೀಕ್ಷೆಯಲ್ಲಿ ಗೆದ್ದಾಗ ಅಥವಾ ಒಳ್ಳೆಯ ಸಿನಿಮಾ ನೋಡಿದಾಗ ನಮ್ಮ ಮೆದುಳಿನ 'ರಿವಾರ್ಡ್ ಸೆಂಟರ್' ಡೋಪಮೈನ್ (Dopamine)  ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಿ ನಮಗೆ ಸಹಜವಾದ ಖುಷಿ ನೀಡುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವಿಸಿದಾಗ ಕೃತಕವಾಗಿ ಇದೇ ಡೋಪಮೈನ್ ಬಿಡುಗಡೆಯಾಗುತ್ತದೆ. ಈ ಕೃತಕ ಖುಷಿಗಾಗಿ ಯುವಜನರು ವ್ಯಸನಕ್ಕೆ ದಾಸರಾಗುತ್ತಾರೆ. ಆರಂಭದಲ್ಲಿ ಒಂದು ಸಿಗರೇಟ್‌ನಿಂದ ಸಿಗುವ ತೃಪ್ತಿ, ಕ್ರಮೇಣ ಮೆದುಳು ಆ ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದರಿಂದ (ಅಡಾಪ್ಟೇಶನ್) ನಾಲ್ಕು ಸಿಗರೇಟ್ ಸೇದಿದರೂ ಸಿಗುವುದಿಲ್ಲ. ಈ ಹಂತದಲ್ಲಿ ಚಟವನ್ನು ನಿಲ್ಲಿಸಿದರೆ ವಿಪರೀತ ಕೋಪ ಮತ್ತು ಹತಾಶೆಯಂತಹ 'ವಿತ್‌ಡ್ರಾವಲ್' ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಯಾವುದೇ ಕಾರಣಕ್ಕೂ ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕೇವಲ ಕುತೂಹಲಕ್ಕಾಗಿ ದುಶ್ಚಟಗಳನ್ನು ಪ್ರಾರಂಭಿಸಬಾರದು; ಮೊದಲ ಹೆಜ್ಜೆಯಲ್ಲೇ ಇದನ್ನು ಕಡ್ಡಾಯವಾಗಿ ತಿರಸ್ಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಂದು ವೇಳೆ ಈಗಾಗಲೇ ವ್ಯಸನಕ್ಕೆ ತುತ್ತಾಗಿದ್ದರೆ, ದೃಢವಾದ ಇಚ್ಛಾಶಕ್ತಿ ಹಾಗೂ ವೈದ್ಯಕೀಯ ನೆರವಿನಿಂದ ಅದರಿಂದ ಸಂಪೂರ್ಣವಾಗಿ ಹೊರಬರಬಹುದು. ಇದಕ್ಕಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೌನ್ಸಿಲಿಂಗ್ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿದ್ದು, ಯುವಜನರು ಮುಜುಗರವಿಲ್ಲದೆ ಸಹಾಯ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಮಾದಕ ವಸ್ತುಗಳ ಸೇವನೆಯಿಂದ ಆಗುವ ಭೀಕರ ಪರಿಣಾಮಗಳ ಕುರಿತು ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಚಾರಿಣಿ, "ಮಾದಕ ವಸ್ತುಗಳು ನೇರವಾಗಿ ಮನುಷ್ಯನ ಮೆದುಳಿನ ರಿವಾರ್ಡ್ ಸೆಂಟರ್ ಮೇಲೆ ಪ್ರಭಾವ ಬೀರಿ, ಡೋಪಮೈನ್ ಬಿಡುಗಡೆ ಮಾಡುವ ಮೂಲಕ ವ್ಯಕ್ತಿಯನ್ನು ಸಂಪೂರ್ಣ ವ್ಯಸನಿಯನ್ನಾಗಿಸುತ್ತವೆ. ಇದರ ನಿರಂತರ ಸೇವನೆಯಿಂದ ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯ, ಬಂಜೆತನ ಮತ್ತು ರೋಗ ನಿರೋಧಕ ಶಕ್ತಿ ಕುಂದುವAತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಮಾದಕ ವ್ಯಸನಿಗಳು ಒಂದೇ ಇಂಜೆಕ್ಷನ್ ಹಂಚಿಕೊಳ್ಳುವುದರಿAದ ಎಚ್.ಐ.ವಿ (HIV)  ನಂತಹ ಮಾರಕ ರೋಗಗಳು ವೇಗವಾಗಿ ಹರಡುತ್ತವೆ," ಎಂದು ಎಚ್ಚರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಪ್ರಸ್ತುತ ವಿದ್ಯಾವಂತರ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಅಕ್ಷರಸ್ಥರಾದ ಮಾತ್ರಕ್ಕೆ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಇಂದು ವಿದ್ಯಾವಂತ ಯುವಜನತೆಯೇ ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೊಡ್ಡ ವಿಪರ್ಯಾಸ. ರಾಜ್ಯದಲ್ಲಿನ ಇತ್ತೀಚಿನ ವರದಿಗಳ ಬಹಳಷ್ಟು ಜನರು ಎಚ್.ಐ.ವಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕರ ಪ್ರಮಾಣವೇ ಹೆಚ್ಚಾಗಿರುವುದು ಸಮಾಜಕ್ಕೆ ಅತ್ಯಂತ ಮಾರಕವಾದ ಸಂಗತಿಯಾಗಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ನಿರ್ದೇಶಕಿ ಸುವರ್ಣಗಂಗೆ ಕ್ಯಾಂಪಸ್ ಹಾಗೂ ಪ್ರೊ ಕುಮುದ, ವಿತ್ತಾಧಿಕಾರಿ ಬಾಹುಬಲಿ, ಸಿಬ್ಬಂದಿಗಳು, ಎಲ್ಲಾ ಪ್ರಾಧ್ಯಪಕರು ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    3 hrs ago
  • ಕೆಜಿಎಫ್‌ನಗರಸಭೆ ಮುಂಭಾಗ ಆ. 5 ರಂದು ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಕ್ಕೆ ನಿರ್ಧಾರ ಕೆಜಿಎಫ್: ಇಲ್ಲಿನ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಕಂಚಿನ ಪ್ರತಿಮೆಯನ್ನು ಆಗಸ್ಟ್ 5 ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ದಲಿತ ಸಂಘಟನೆಗಳಿಂದ ಪಕ್ಷಾತೀತವಾಗಿ ಒಮ್ಮತದ ಬೆಂಬಲ ವ್ಯಕ್ತವಾಗಿದೆ. ಇಂದು ನಗರಸಭೆಯ ಸಭಾಂಗಣದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕಿನ ದಲಿತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ: ಶಾಸಕಿ ರೂಪಕಲಾ ಶಶಿಧರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, "ಆಗಸ್ಟ್ 5 ರಂದು ಅತ್ಯಂತ ಶುಭ ದಿನವಾಗಿದ್ದು, ಎಲ್ಲರ ಸಮ್ಮುಖದಲ್ಲಿ ಹಬ್ಬದ ವಾತಾವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಕೆಜಿಎಫ್ ತಾಲೂಕಿನ ಮುಖಂಡರು ಹಾಗೂ ನಾಗರಿಕರು ಅಂಬೇಡ್ಕರ್ ಅವರ ಮೇಲಿರುವ ಅಭಿಮಾನದೊಂದಿಗೆ ಪಕ್ಷಾತೀತವಾಗಿ ಭಾಗವಹಿಸಬೇಕು. ನನ್ನ ಕ್ಷೇತ್ರದಲ್ಲಿ ಇಂತಹ ಮಹನೀಯರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ," ಎಂದರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಆಹ್ವಾನಿಸಲು ಒತ್ತಾಯ: ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ದಲಿತ ಮುಖಂಡ ರಂಗನಾಥ್ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಮುಖಂಡ ಸಂದ ಮುನಿಸ್ವಾಮಿ, ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಸಮುದಾಯವನ್ನು ಹೊಂದಿರುವ ಕೆಜಿಎಫ್ ಕ್ಷೇತ್ರದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುತ್ತಿರುವುದು ಶ್ಲಾಘನೀಯ. ದಲಿತ ಪರ ಹೋರಾಟ ಮಾಡಿದವರು ಹಾಗೂ ಕ್ರಾಂತಿಕಾರಿ ಗೀತೆಗಳನ್ನು ಹಾಡಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗದಲ್ಲೂ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ: ಕಂಚಿನ ಪ್ರತಿಮೆ ಸ್ಥಾಪನೆ ಕೇವಲ ಕೆಜಿಎಫ್ ನಗರಕ್ಕೆ ಸೀಮಿತವಾಗಬಾರದು. ಕ್ಯಾಸಂಬಳ್ಳಿ ಹಾಗೂ ಗ್ರಾಮಾಂತರ ಭಾಗದ ಕೇಂದ್ರ ಸ್ಥಾನವಾದ ಬೇತಮಂಗಲದಲ್ಲಿರುವ ಹಳೇ ಪ್ರತಿಮೆಯನ್ನು ತೆರವುಗೊಳಿಸಿ, ಅಲ್ಲೂ ಸಹ ನೂತನ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಶ್ರೀನಾಥ್ ನಾಸ್ತಿಕ ಒತ್ತಾಯಿಸಿದರು. ಸಭೆಯಲ್ಲಿ ಕೆಲಕಾಲ ಗದ್ದಲ: ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣ ವಿಳಂಬವಾಗಲು ಕಾರಣಗಳನ್ನು ವಿವರಿಸಲು ಮುಂದಾದ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರ ವಿರುದ್ಧ 'ಸೇವ್ ಕೆಜಿಎಫ್ ಕಮಿಟಿ' ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿ, ಮುನಿಸ್ವಾಮಿ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ದಿಕ್ಕು ಬದಲಿಸಬೇಕಾಯಿತು. ಈ ಸಭೆಯಲ್ಲಿ ತಹಸೀಲ್ದಾರ್ ಗಾಯಿತ್ರಿ, ನಗರಸಭೆ ಪೌರಾಯುಕ್ತ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ಧರ್ಮೇಂದ್ರ, ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮುಖಂಡರಾದ ದಯಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಎಇಇ ಕಿರಣ್, ಪಿಎಸ್ಐ ಮಹೇಶ್ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
    1
    ಕೆಜಿಎಫ್‌ನಗರಸಭೆ ಮುಂಭಾಗ ಆ. 5 ರಂದು ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಕ್ಕೆ ನಿರ್ಧಾರ
ಕೆಜಿಎಫ್: ಇಲ್ಲಿನ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಕಂಚಿನ ಪ್ರತಿಮೆಯನ್ನು ಆಗಸ್ಟ್ 5 ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ದಲಿತ ಸಂಘಟನೆಗಳಿಂದ ಪಕ್ಷಾತೀತವಾಗಿ ಒಮ್ಮತದ ಬೆಂಬಲ ವ್ಯಕ್ತವಾಗಿದೆ.
ಇಂದು ನಗರಸಭೆಯ ಸಭಾಂಗಣದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕಿನ ದಲಿತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ: ಶಾಸಕಿ ರೂಪಕಲಾ ಶಶಿಧರ್
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, "ಆಗಸ್ಟ್ 5 ರಂದು ಅತ್ಯಂತ ಶುಭ ದಿನವಾಗಿದ್ದು, ಎಲ್ಲರ ಸಮ್ಮುಖದಲ್ಲಿ ಹಬ್ಬದ ವಾತಾವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಕೆಜಿಎಫ್ ತಾಲೂಕಿನ ಮುಖಂಡರು ಹಾಗೂ ನಾಗರಿಕರು ಅಂಬೇಡ್ಕರ್ ಅವರ ಮೇಲಿರುವ ಅಭಿಮಾನದೊಂದಿಗೆ ಪಕ್ಷಾತೀತವಾಗಿ ಭಾಗವಹಿಸಬೇಕು. ನನ್ನ ಕ್ಷೇತ್ರದಲ್ಲಿ ಇಂತಹ ಮಹನೀಯರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ," ಎಂದರು.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಆಹ್ವಾನಿಸಲು ಒತ್ತಾಯ:
ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ದಲಿತ ಮುಖಂಡ ರಂಗನಾಥ್ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಮುಖಂಡ ಸಂದ ಮುನಿಸ್ವಾಮಿ, ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಸಮುದಾಯವನ್ನು ಹೊಂದಿರುವ ಕೆಜಿಎಫ್ ಕ್ಷೇತ್ರದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುತ್ತಿರುವುದು ಶ್ಲಾಘನೀಯ. ದಲಿತ ಪರ ಹೋರಾಟ ಮಾಡಿದವರು ಹಾಗೂ ಕ್ರಾಂತಿಕಾರಿ ಗೀತೆಗಳನ್ನು ಹಾಡಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದಲ್ಲೂ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ:
ಕಂಚಿನ ಪ್ರತಿಮೆ ಸ್ಥಾಪನೆ ಕೇವಲ ಕೆಜಿಎಫ್ ನಗರಕ್ಕೆ ಸೀಮಿತವಾಗಬಾರದು. ಕ್ಯಾಸಂಬಳ್ಳಿ ಹಾಗೂ ಗ್ರಾಮಾಂತರ ಭಾಗದ ಕೇಂದ್ರ ಸ್ಥಾನವಾದ ಬೇತಮಂಗಲದಲ್ಲಿರುವ ಹಳೇ ಪ್ರತಿಮೆಯನ್ನು ತೆರವುಗೊಳಿಸಿ, ಅಲ್ಲೂ ಸಹ ನೂತನ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಶ್ರೀನಾಥ್ ನಾಸ್ತಿಕ ಒತ್ತಾಯಿಸಿದರು.
ಸಭೆಯಲ್ಲಿ ಕೆಲಕಾಲ ಗದ್ದಲ:
ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣ ವಿಳಂಬವಾಗಲು ಕಾರಣಗಳನ್ನು ವಿವರಿಸಲು ಮುಂದಾದ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರ ವಿರುದ್ಧ 'ಸೇವ್ ಕೆಜಿಎಫ್ ಕಮಿಟಿ' ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿ, ಮುನಿಸ್ವಾಮಿ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ದಿಕ್ಕು ಬದಲಿಸಬೇಕಾಯಿತು.
ಈ ಸಭೆಯಲ್ಲಿ ತಹಸೀಲ್ದಾರ್ ಗಾಯಿತ್ರಿ, ನಗರಸಭೆ ಪೌರಾಯುಕ್ತ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ಧರ್ಮೇಂದ್ರ, ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮುಖಂಡರಾದ ದಯಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಎಇಇ ಕಿರಣ್, ಪಿಎಸ್ಐ ಮಹೇಶ್ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    46 min ago
  • *ಕೋಲಾರದ ಜೆ.ಡಿ.ಎಸ್ ಮುಖಂಡರು ಹಾಗೂ ಕಾರ್ಯಕರ್ತರು ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯದಲ್ಲಿ ಭಾಗಿ* ಕೋಲಾರ: ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್.ಮುಖಂಡ ಸಿ.ಎಂ.ಆರ್ .ಶ್ರೀನಾಥ್ ರವರ ನೇತೃತ್ವದಲ್ಲಿಸುಮಾರು 150 ಕ್ಕೂ ಹೆಚ್ಚಿನ ವಾಹನಗಳಲ್ಲಿನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ವಕ್ಕಲೇರಿ ರಾಮು, ಬಾಬು ಮೌನಿ, ದೊಡ್ಡವಲ್ಲಬಿ ಲಕ್ಷ್ಮಣಗೌಡರು, ಬಣಕನಹಳ್ಳಿ ನಟರಾಜ್, ಶ್ರೀಮತಿ ಚೌಡೇಶ್ವರಿ ರಾಮು, ವಡಗೂರು ರಾಮು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
    4
    *ಕೋಲಾರದ ಜೆ.ಡಿ.ಎಸ್ ಮುಖಂಡರು ಹಾಗೂ ಕಾರ್ಯಕರ್ತರು ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯದಲ್ಲಿ ಭಾಗಿ*
ಕೋಲಾರ: ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್.ಮುಖಂಡ
ಸಿ.ಎಂ.ಆರ್ .ಶ್ರೀನಾಥ್ ರವರ ನೇತೃತ್ವದಲ್ಲಿಸುಮಾರು 150 ಕ್ಕೂ ಹೆಚ್ಚಿನ ವಾಹನಗಳಲ್ಲಿನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ವಕ್ಕಲೇರಿ ರಾಮು, ಬಾಬು ಮೌನಿ, ದೊಡ್ಡವಲ್ಲಬಿ ಲಕ್ಷ್ಮಣಗೌಡರು, ಬಣಕನಹಳ್ಳಿ ನಟರಾಜ್, ಶ್ರೀಮತಿ ಚೌಡೇಶ್ವರಿ ರಾಮು, ವಡಗೂರು ರಾಮು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ತಾಲ್ಲೂಕು ಆಡಳಿತದ ವತಿಯಿಂದ"ವ್ಯಸನಮುಕ್ತ ದಿನಾಚರಣೆ"ಯನ್ನು ಸಲುವಾಗಿ ಆಚೆರಿಸಿದರು
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್
ಚಿಂತಾಮಣಿ 
ತಾಲ್ಲೂಕು ಆಡಳಿತದ ವತಿಯಿಂದ"ವ್ಯಸನಮುಕ್ತ ದಿನಾಚರಣೆ"ಯನ್ನು ಸಲುವಾಗಿ ಆಚೆರಿಸಿದರು
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ಕೆಸರಲ್ಲೇ ಶಾಲೆಗೆ ನಡೆಯುವ ವಿದ್ಯಾರ್ಥಿಗಳು! ರಸ್ತೆ ಇಲ್ಲದೆ ವಸ್ತಾರಿ ಗ್ರಾಮಕ್ಕೆ ಸಂಕಷ್ಟ! ಕಲಬುರಗಿ ಜಿಲ್ಲೆಯ ವಸ್ತಾರಿ ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದರೂ ಸಂಪರ್ಕ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಕೆಸರಿನಲ್ಲಿ ನಡೆದು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
    1
    ಕೆಸರಲ್ಲೇ ಶಾಲೆಗೆ ನಡೆಯುವ ವಿದ್ಯಾರ್ಥಿಗಳು!
ರಸ್ತೆ ಇಲ್ಲದೆ ವಸ್ತಾರಿ ಗ್ರಾಮಕ್ಕೆ ಸಂಕಷ್ಟ!
ಕಲಬುರಗಿ ಜಿಲ್ಲೆಯ ವಸ್ತಾರಿ ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದರೂ ಸಂಪರ್ಕ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಕೆಸರಿನಲ್ಲಿ ನಡೆದು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    33 min ago
  • ಕೆಆರ್ ಪುರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಬೆಂ,ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ‌ಡಿ ,ಎಸ್ ರಮೇಶ್ ಚಾಲನೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ‌ಡಿ ,ಎಸ್ ರಮೇಶ್ ರಿಂದ ಚಾಲನೆ .ಆಯುಕ್ತ ರಮೇಶ್ ಅವರಿಗೆ ಕೆಆರ್ ಪುರ ಜಂಟಿ ಆಯುಕ್ತೆ ಡಾ . ಸುಧಾ ಸ್ವಪ್ನ ಸಾಥ್ .ಕೆಆರ್ ಪುರದ ಐಟಿಐ ಗೇಟ್ ನಿಂದ ಆರಂಭವಾಗಿರುವ ಅಭಿಯಾನ .ಕೆಆರ್ ಪುರ ಹಾಗೂ ಮಹದೇವಪುರ ವಲಯಗಳಲ್ಲಿ ಏಕಕಾಲ ಚಾಲನೆ ನೀಡಿರುವ ಆಯುಕ್ತ ರಮೇಶ್ .ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನ .ಖಾಸಗೀ ಸ್ವತ್ತುಗಳಲ್ಲಿ ತ್ಯಾಜ್ಯ ತೆರವಿಗೆ ಮಾಲೀಕರಿಗೆ ೧೫ದಿನಗಳ ಗಡುವು.೧೫ ದಿನಗಳ‌ ಬಳಿಕವೂ ತೆರವುವಾಗಿಲ್ಲ ಅಂದ್ರೆ ಮಾಲೀಕರೇ ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ವೆಚ್ಚ ಭರಿಸಬೇಕು
    1
    ಕೆಆರ್ ಪುರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಬೆಂ,ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ‌ಡಿ ,ಎಸ್ ರಮೇಶ್ ಚಾಲನೆ
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ‌ಡಿ ,ಎಸ್ ರಮೇಶ್ ರಿಂದ  ಚಾಲನೆ .ಆಯುಕ್ತ ರಮೇಶ್ ಅವರಿಗೆ  ಕೆಆರ್ ಪುರ ಜಂಟಿ ಆಯುಕ್ತೆ ಡಾ . ಸುಧಾ ಸ್ವಪ್ನ ಸಾಥ್ .ಕೆಆರ್ ಪುರದ ಐಟಿಐ ಗೇಟ್ ನಿಂದ ಆರಂಭವಾಗಿರುವ ಅಭಿಯಾನ  .ಕೆಆರ್ ಪುರ ಹಾಗೂ ಮಹದೇವಪುರ ವಲಯಗಳಲ್ಲಿ ಏಕಕಾಲ ಚಾಲನೆ ನೀಡಿರುವ ಆಯುಕ್ತ ರಮೇಶ್ .ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನ .ಖಾಸಗೀ ಸ್ವತ್ತುಗಳಲ್ಲಿ ತ್ಯಾಜ್ಯ ತೆರವಿಗೆ ಮಾಲೀಕರಿಗೆ ೧೫ದಿನಗಳ ಗಡುವು.೧೫ ದಿನಗಳ‌ ಬಳಿಕವೂ ತೆರವುವಾಗಿಲ್ಲ ಅಂದ್ರೆ ಮಾಲೀಕರೇ 
ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ವೆಚ್ಚ ಭರಿಸಬೇಕು
    user_Darshan
    Darshan
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ರಾಹುಲ್‌ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ‌ ಸುವರ್ಣ ವಿರುದ್ಧ ಪ್ರತಿಭಟನೆ ಬೆಂಗಳೂರು:ರಾಹುಲ್‌ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ‌ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ‌ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ‌ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
    1
    ರಾಹುಲ್‌ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ‌ ಸುವರ್ಣ ವಿರುದ್ಧ ಪ್ರತಿಭಟನೆ
ಬೆಂಗಳೂರು:ರಾಹುಲ್‌ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ‌ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ‌ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ  ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ‌ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
    user_ಶಿವನಿ
    ಶಿವನಿ
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಬಂಗಾರಪೇಟೆ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಬಂಗಾರಪೇಟೆ–ಕೆಜಿಎಫ್ ಮುಖ್ಯರಸ್ತೆಯ ಎಸ್.ಜಿ.ಕೋಟೆಯಲ್ಲಿರುವ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಭಕ್ತಿಭಾವದಿಂದ ನೆರವೇರಿತು.ಧರ್ಮದರ್ಶಿ ಮುನಿಮಾರಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ಗುರುಪೂರ್ಣಿಮೆ ಹಾಗೂ ಹೊಸ ವರ್ಷದ ಆರಂಭದ ದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಈ ವರ್ಷವೂ ಮುಂಜಾನೆಯಿಂದಲೇ ಸಾಯಿಬಾಬಾ ಸ್ವಾಮಿಗೆ ವಿವಿಧ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ ಹಾಗೂ ಭಕ್ತರಿಂದ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಜೊತೆಗೆ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ಸಂಜೆ ಭಜನೆ–ಕೀರ್ತನೆ, ಪಲ್ಲಕ್ಕಿ ಉತ್ಸವ ಹಾಗೂ ದಿನವಿಡೀ ಅನ್ನದಾಸೋಹ ಮತ್ತು ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.ಕಾರ್ಯದರ್ಶಿ ಡಾ. ರಾಧಾ ವಿ ಮಾತನಾಡಿ, ಆಷಾಢ ಮಾಸದ ಮೊದಲ ಹುಣ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವತಿಯಿಂದ ವರ್ಷಪೂರ್ತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ, ವಿಜಯದಶಮಿ ವಾರ್ಷಿಕೋತ್ಸವ, ಗ್ರಾಮೀಣ ಪ್ರದೇಶದ ವೃದ್ಧರಿಗೆ ಕಂಬಳಿ ವಿತರಣೆ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ, ವೀರಯೋಧರ ಸನ್ಮಾನ ಹಾಗೂ ಅಂಗವಿಕಲರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ದೇವಾಲಯದ ಅಭಿವೃದ್ಧಿಗೆ ಸಹಕರಿಸುತ್ತಿರುವ ದಾನಿಗಳು ಹಾಗೂ ಭಕ್ತರಿಗೆ ಧರ್ಮದರ್ಶಿ ಮುನಿಮಾರಪ್ಪ ಮತ್ತು ಕಾರ್ಯದರ್ಶಿ ಡಾ. ರಾಧಾ ವಿ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವುದರೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
    1
    ಬಂಗಾರಪೇಟೆ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ
ಬಂಗಾರಪೇಟೆ–ಕೆಜಿಎಫ್ ಮುಖ್ಯರಸ್ತೆಯ ಎಸ್.ಜಿ.ಕೋಟೆಯಲ್ಲಿರುವ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಭಕ್ತಿಭಾವದಿಂದ ನೆರವೇರಿತು.ಧರ್ಮದರ್ಶಿ ಮುನಿಮಾರಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ಗುರುಪೂರ್ಣಿಮೆ ಹಾಗೂ ಹೊಸ ವರ್ಷದ ಆರಂಭದ ದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಈ ವರ್ಷವೂ ಮುಂಜಾನೆಯಿಂದಲೇ ಸಾಯಿಬಾಬಾ ಸ್ವಾಮಿಗೆ ವಿವಿಧ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ ಹಾಗೂ ಭಕ್ತರಿಂದ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಜೊತೆಗೆ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ಸಂಜೆ ಭಜನೆ–ಕೀರ್ತನೆ, ಪಲ್ಲಕ್ಕಿ ಉತ್ಸವ ಹಾಗೂ ದಿನವಿಡೀ ಅನ್ನದಾಸೋಹ ಮತ್ತು ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.ಕಾರ್ಯದರ್ಶಿ ಡಾ. ರಾಧಾ ವಿ ಮಾತನಾಡಿ, ಆಷಾಢ ಮಾಸದ ಮೊದಲ ಹುಣ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವತಿಯಿಂದ ವರ್ಷಪೂರ್ತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ, ವಿಜಯದಶಮಿ ವಾರ್ಷಿಕೋತ್ಸವ, ಗ್ರಾಮೀಣ ಪ್ರದೇಶದ ವೃದ್ಧರಿಗೆ ಕಂಬಳಿ ವಿತರಣೆ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ, ವೀರಯೋಧರ ಸನ್ಮಾನ ಹಾಗೂ ಅಂಗವಿಕಲರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ದೇವಾಲಯದ ಅಭಿವೃದ್ಧಿಗೆ ಸಹಕರಿಸುತ್ತಿರುವ ದಾನಿಗಳು ಹಾಗೂ ಭಕ್ತರಿಗೆ ಧರ್ಮದರ್ಶಿ ಮುನಿಮಾರಪ್ಪ ಮತ್ತು ಕಾರ್ಯದರ್ಶಿ ಡಾ. ರಾಧಾ ವಿ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವುದರೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    1 day ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.