Shuru
Apke Nagar Ki App…
ಭಾಗಮಂಡಲ್ಲಿ ಮಳೆಗೆ ಹೆಚ್ಚಿದ ಕಾವೇರಿ ನೀರಿನ ಹರಿವು, ಕಟ್ಟೆಚ್ಚರ ಕೊಡಗು ಜಿಲ್ಲೆಯಲ್ಲಿ ಮಳೆಯ ರಭಸ ತೀವ್ರವಾಗಿದ್ದು ಕಾವೇರಿ ನದಿಯ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಏರಿದ್ದು ಭಗಂಡೇಶ್ವರ ದೇವಾಲಯದ ಆವರಣವರೆಗೆ ನೀರು ಬಂದಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
Kodagu Updates
ಭಾಗಮಂಡಲ್ಲಿ ಮಳೆಗೆ ಹೆಚ್ಚಿದ ಕಾವೇರಿ ನೀರಿನ ಹರಿವು, ಕಟ್ಟೆಚ್ಚರ ಕೊಡಗು ಜಿಲ್ಲೆಯಲ್ಲಿ ಮಳೆಯ ರಭಸ ತೀವ್ರವಾಗಿದ್ದು ಕಾವೇರಿ ನದಿಯ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಏರಿದ್ದು ಭಗಂಡೇಶ್ವರ ದೇವಾಲಯದ ಆವರಣವರೆಗೆ ನೀರು ಬಂದಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
More news from ಕರ್ನಾಟಕ and nearby areas
- ಭೇತ್ರಿ ಸಮೀಪ ಉಕ್ಕಿ ಹರಿಯುತ್ತಿರುವ ಕಾವೇರಿ ನದಿ, ನದಿ ಪಾತ್ರದ ಜನತೆಗೆ ಎಚ್ಚರಿಕೆ ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು ಮೂರ್ನಾಡು ಸಮೀಪ ಭೇತ್ರಿಯಲ್ಲಿ ಕಾವೇರಿ ನೀರಿನ ಹರಿವು ಹೆಚ್ಚಿದೆ. ಸುಮಾರು ಮುಕ್ಕಾಲು ಭಾಗಕ್ಕೆ ನೀರು ಬಂದಿದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ.1
- "ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ. "ಬೆಂಗಳೂರು-ಮೈಸೂರು ರಸ್ತೆ ಬಂದ್: ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ!" "ಬೆಂಗಳೂರು-ಮೈಸೂರು ರಸ್ತೆ ಬಂದ್: ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ!"1
- All About,Who will be held Accountable for Irregularities related with #Telangana #WaqfBoard *ಭಾರತ ನಲ್ಲಿ ವೈರಲ್*1
- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದಪ್ರಯುಕ್ತಉಚಿತ ಸಮವಸ್ತ್ರಹಾಗೂಸಿಹಿ ವಿತರಣೆ ಮಂಡ್ಯ- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದ ಮುನ್ನ ದಿನವಾದ ಇಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಅವರಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸಿಹಿ ವಿತರಣೆ,ಮತ್ತು ಸಾರ್ವಜನಿಕ ರಿಗೆಉಚಿತವಾಗಿ ನೀಡುವ ಚಾಮುಂಡೇಶ್ವರಿಯ ಭಾವಚಿತ್ರವುಳ್ಳ ಗ್ರೀಟಿಂಗ್ಸ್ ಅನ್ನು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಮಂಡ್ಯ ರಕ್ಷಣಾವೇದಿಕೆ ಜಗದ ಮಾತೆ ಚಾಮುಂಡಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಜೀವನದಲ್ಲಿ ಉತ್ತಮವಾಗಿರಲಿ ಬೇಡಿತು. ಈ ಸಂದರ್ಭದಲ್ಲಿ . ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ,ಶಂಕರ ಬಾಬು ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ,ಎಚ್ ಜಗದೀಶ್ ಗೌಡ ರೈತರ ಶಾಲೆಯ ಸಂಸ್ಥಾಪಕರಾದ ಗಂಜಾಂಸತ್ಯಮೂರ್ತಿ ಜಗದೀಶ್ ಚಂದನ್ ಇತರಿದ್ದರು1
- ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ: "ನನ್ನ ಮತದಾನ ನನ್ನ ಹಕ್ಕು" ಅಭಿಯಾನದಡಿ ಜಾಗೃತಿ ಮೂಡಿಸಿದ ಮುರುಳೀಧರ್ ಹಾಲಪ್ಪ. ಎಸ್‌ಐಆರ್ ಸಮಸ್ಯೆ ಪರಿಹಾರಕ್ಕೆ ಕೆಪಿಸಿಸಿ ತಾಂತ್ರಿಕ ತಂಡ ಸಜ್ಜು - ಮತದಾರರಿಗೆ ಸಹಕಾರದ ಭರವಸೆ. ತುರುವೇಕೆರೆ: ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ "ನನ್ನ ಮತದಾನ ನನ್ನ ಹಕ್ಕು" ಎಂಬ ಶೀರ್ಷಿಕೆಯಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಅತ್ಯಮೂಲ್ಯವಾದುದು ಎಂದು ಪ್ರತಿಪಾದಿಸಿದರು. ಚುನಾವಣಾ ಆಯೋಗ ಪ್ರಸ್ತುತ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಮತದಾರರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನಿರ್ಲಕ್ಷ್ಯ ಬೇಡ ಎಂದ ಮುರುಳೀಧರ್ ಹಾಲಪ್ಪ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ ಅವರು, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಫಾರಂಗಳನ್ನು ಸಕಾಲದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತದಾರರು, ಹಿರಿಯ ನಾಗರಿಕರು ಹಾಗೂ ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರು ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಸಮಸ್ಯೆಗಳಿಗೆ ಕೆಪಿಸಿಸಿ ತಂಡದ ನೆರವು ಎಸ್‌ಐಆರ್ ಫಾರಂ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲು ಕೆಪಿಸಿಸಿಯಿಂದ ಪ್ರತ್ಯೇಕ ತಾಂತ್ರಿಕ ತಂಡವನ್ನು ರಚಿಸಲಾಗಿದೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು. ಫಾರಂ ಭರ್ತಿ ಮಾಡಲು ಸಾಧ್ಯವಾಗದವರು, ದಾಖಲೆಗಳ ಅಪ್‌ಲೋಡ್ ಸಂಬಂಧ ಗೊಂದಲಕ್ಕೊಳಗಾದವರು ಈ ತಂಡವನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರಿಗೂ ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಹಲವು ಮಂದಿ ಮತದಾರರು ಪಾಲ್ಗೊಂಡು, ತಮ್ಮ ಎಸ್‌ಐಆರ್ ಸಂಬಂಧಿತ ಸಂದೇಹಗಳನ್ನು ಪರಿಹರಿಸಿಕೊಂಡರು. ಮತದಾನದ ಹಕ್ಕಿನ ಮಹತ್ವದ ಕುರಿತು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ತಾಲ್ಲೂಕಿನಾದ್ಯಂತ ಮುಂದುವರಿಯಲಿವೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ಯಾರಂಟಿ ಸಮೇತ ಅಧ್ಯಕ್ಷ ಗುಡ್ಡೆನಹಳ್ಳಿ ಪ್ರಸನ್ನ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಟಿಎನ್ ಶಿವರಾಜ್, ತಾಲೂಕು ಸೇವಾ ದಳದ ಅಧ್ಯಕ್ಷ ಕುಮಾರ್ ಕೊಂಡಜ್ಜಿ, ನಂಜುಂಡಪ್ಪ ಗುಡ್ಡೇನಹಳ್ಳಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ ಮಹೇಶ್, ಉದಯ್ ಕುಮಾರ್ ಅರಳಿಕೆರೆ,ಮುಖಂಡ ಜೋಗಿ ಪಾಳ್ಯ ಶಿವರಾಜ್, ಮೇಲನಹಳ್ಳಿ ಮಂಜಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಕೀರ್ತಿರಾಜ್, ಕಾಂತರಾಜ್ ಅರಸ್, ಸ್ವರ್ಣ ಕುಮಾರ್, ಪುಟ್ಟರಾಜ್, ಸತೀಶ್ ಸೇರಿದಂತೆ ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಇದ್ದರು.4
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದಲ್ಲಿ ತಾಲೂಕಿಗೆ ಹೇಮೆ ತಂದವರಾರು ಎಂಬ ಬಗ್ಗೆ ಚರ್ಚೆ ಕಾವೇರಿದೆ1
- ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಮಠ ಎಂಬಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಮಠ ಎಂಬಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಗಂಡಸಿನ ಮೃತದೇಹವೊಂದು ನದಿ ಬದಿಯ ಪೊದೆಯಲ್ಲಿ ಪತ್ತೆಯಾಗಿದೆ. ಇದನ ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 30ರಿಂದ 40ರ ವಯೋಮಾನದ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಕೆ.ಮುಹಮ್ಮದ್ ನಾಸಿರ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಗುರುತು ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ (9480805362) ಯನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.1