logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭೇತ್ರಿ ಸಮೀಪ ಉಕ್ಕಿ ಹರಿಯುತ್ತಿರುವ ಕಾವೇರಿ ನದಿ, ನದಿ ಪಾತ್ರದ ಜನತೆಗೆ ಎಚ್ಚರಿಕೆ ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು ಮೂರ್ನಾಡು ಸಮೀಪ ಭೇತ್ರಿಯಲ್ಲಿ ಕಾವೇರಿ ನೀರಿನ ಹರಿವು ಹೆಚ್ಚಿದೆ.‌ ಸುಮಾರು ಮುಕ್ಕಾಲು ಭಾಗಕ್ಕೆ ನೀರು ಬಂದಿದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ.

3 hrs ago
user_Kodagu Updates
Kodagu Updates
ಮಡಿಕೇರಿ, ಕೊಡಗು, ಕರ್ನಾಟಕ•
3 hrs ago

ಭೇತ್ರಿ ಸಮೀಪ ಉಕ್ಕಿ ಹರಿಯುತ್ತಿರುವ ಕಾವೇರಿ ನದಿ, ನದಿ ಪಾತ್ರದ ಜನತೆಗೆ ಎಚ್ಚರಿಕೆ ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು ಮೂರ್ನಾಡು ಸಮೀಪ ಭೇತ್ರಿಯಲ್ಲಿ ಕಾವೇರಿ ನೀರಿನ ಹರಿವು ಹೆಚ್ಚಿದೆ.‌ ಸುಮಾರು ಮುಕ್ಕಾಲು ಭಾಗಕ್ಕೆ ನೀರು ಬಂದಿದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ.

More news from ಕರ್ನಾಟಕ and nearby areas
  • All About,Without Questioning any public Representatives they won't be able to perform accordingly *ಭಾರತ ನಲ್ಲಿ ವೈರಲ್*
    1
    All About,Without Questioning any public Representatives they won't be able to perform accordingly 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ತನ್ವೀರ್ ಸೇಠ್ ಅಭಿಮಾನಿಗಳು ಅಜ್ಜೆಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು ಸೈಯದ್ ಇಕ್ಬಾಲ್, ಶಾಹಿನ್ಶಾ ಅಹ್ಮದ್, ಅಫ್ರೋಜ್, ಬಾಬು ಕೇಸ್ರೆ,
    1
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ
ತನ್ವೀರ್ ಸೇಠ್  ಅಭಿಮಾನಿಗಳು
ಅಜ್ಜೆಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು ಸೈಯದ್ ಇಕ್ಬಾಲ್, ಶಾಹಿನ್ಶಾ ಅಹ್ಮದ್, ಅಫ್ರೋಜ್, ಬಾಬು ಕೇಸ್ರೆ,
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ಶ್ರೀಮಂತಿಕೆ ಶಾಶ್ವತವಲ್ಲ, ದಾನಧರ್ಮ ಮಾತ್ರ ಶಾಶ್ವತ: ಚಂದ್ರಶೇಖರ ಮಹಾಸ್ವಾಮೀಜಿ. ವೀರಶೈವ ಲಿಂಗಾಯತ ನೌಕರರ ತಾಲೂಕು ಸಮಾವೇಶ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ನಿವೃತ್ತ ನೌಕರರಿಗೆ ಸನ್ಮಾನ.  ತುರುವೇಕೆರೆ: ಮನುಷ್ಯನಿಗೆ ಶ್ರೀಮಂತಿಕೆ ಎಂಬುದು ಎಂದೂ ಶಾಶ್ವತವಲ್ಲ. ಇಂದು ಕೈತುಂಬ ಸಂಪತ್ತಿದ್ದವರು ನಾಳೆ ಬರಿಗೈಯಾಗಬಹುದು. ಆದರೆ ಶ್ರೀಮಂತಿಕೆ ಇದ್ದ ಸಂದರ್ಭದಲ್ಲಿ ಮಾಡಿದ ದಾನಧರ್ಮಗಳು ಮಾತ್ರ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ ಏರ್ಪಡಿಸಲಾಗಿತ್ತು. ಇದೇ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀಮಂತಿಕೆ ಯಾವ ಕಾಲಕ್ಕೂ ಒಳ್ಳೆಯದಲ್ಲ; ಅದು ಮನುಷ್ಯನನ್ನು ದೇವರಿಂದಲೂ ದೂರ ಮಾಡುತ್ತದೆ ಎಂದು ಎಚ್ಚರಿಸಿ. ಈ ಹಿಂದೆ ಅಪಾರ ಶ್ರೀಮಂತಿಕೆ ಹೊಂದಿದ್ದವರು ಇಂದು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಹಲವು ನಿದರ್ಶನಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಸ್ವಾಮೀಜಿ ನೆನಪಿಸಿದರು. ಶ್ರೀಮಂತಿಕೆಯ ಸೊಕ್ಕಿನಲ್ಲಿ ದೇವಸ್ಥಾನಗಳಿಗೆ ತಮ್ಮ ಹೆಸರು ಹಾಕಿ ಕಿರೀಟ, ಆಭರಣ ನೀಡಿದವರು ಮುಂದೆ ಯಾವ ಸ್ಥಿತಿಗೆ ತಲುಪಿದರು ಎಂಬುದನ್ನೂ ಸಮಾಜ ನೋಡಿದೆ ಎಂದು ಉದಾಹರಿಸಿದ ಅವರು, ಆದ್ದರಿಂದ ಕೈಯಲ್ಲಿ ಸಂಪತ್ತಿರುವಾಗ ಅಹಂಕಾರಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ, ವಿನಮ್ರತೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು. ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಮಾಜ ಸೇವೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಸ್ವಾಮೀಜಿ, ಲಿಂಗಾಯತ ಧರ್ಮವು ಎಲ್ಲಾ ಸಮಾಜದ ಜನರೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ ಎಂದರು. ಕೆಳವರ್ಗದ ಜನರನ್ನೂ ಆತ್ಮೀಯತೆಯಿಂದ ಕಾಣುವ ಸಮುದಾಯ ಲಿಂಗಾಯತವಾಗಿದ್ದು, ನಾವುಗಳು ಕೇವಲ ಜಾತಿ, ಮತ, ಧರ್ಮ ಎಂಬ ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದೇವೆ ಅಷ್ಟೆ; ವಾಸ್ತವದಲ್ಲಿ ಜಗತ್ತಿನಲ್ಲಿ ಎಲ್ಲವೂ ಶಿವಮಯ, ಲಿಂಗಮಯ ಎಂದು ಬಣ್ಣಿಸಿದರು. ಯಾವುದೇ ಜಾತಿಯವರಾಗಿದ್ದರೂ ಉತ್ತಮ ನಡತೆಯಿಂದ, ಶ್ರದ್ಧೆಯಿಂದ ದೇವರ ಆಚರಣೆ ಪಾಲಿಸುವವರೆಲ್ಲರೂ ನಿಜ ಅರ್ಥದಲ್ಲಿ ಲಿಂಗವಂತರೇ ಆಗಿದ್ದಾರೆ ಎಂದು ಪ್ರತಿಪಾದಿಸಿ ವೀರಶೈವ ಲಿಂಗಾಯತದ ಒಳಪಂಗಡಗಳ ಬಗ್ಗೆಯೂ ಮಾತನಾಡಿದ ಅವರು, ಈಗ ಒಳಪಂಗಡಗಳ ನಡುವಿನ ಗೆರೆಗಳು ಕ್ರಮೇಣ ಅಳಿದುಹೋಗುತ್ತಿವೆ ಎಂದರು. ಎಲ್ಲರೂ ಒಂದೇ ಲಿಂಗಾಯತ ಸಮುದಾಯದವರಾಗಿ ಒಳಪಂಗಡಗಳ ನಡುವೆಯೇ ಹೆಣ್ಣು-ಗಂಡು ಕೊಟ್ಟು ತಂದು ಮಾವ, ಬಾಮೈದ, ಅಣ್ಣ-ತಮ್ಮಂದಿರಂತಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಸಾಧಕಿ, ಅಮ್ಮಸಂದ್ರದ ಕು.ಚಿನ್ಮಯಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ಮಯಿ, ಪೋಷಕರು ತಮ್ಮ ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸ ಮತ್ತು ಅಂಕಗಳಿಕೆಗಾಗಿಯೇ ಒತ್ತಡ ಹೇರುವುದನ್ನು ಬಿಟ್ಟು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು. ತಾವು ವಿದ್ಯಾಭ್ಯಾಸದ ಸಂದರ್ಭದಲ್ಲಿ ತರಗತಿಗೇ ಟಾಪರ್ ಆಗಿದ್ದುದನ್ನು ನೆನಪಿಸಿಕೊಂಡ ಅವರು, ವಿದ್ಯೆಯ ಜೊತೆಜೊತೆಗೇ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದುದಾಗಿ ತಿಳಿಸಿದರು. ವೈದ್ಯ ವೃತ್ತಿಯಲ್ಲಿದ್ದರೂ ಕ್ರೀಡೆಯನ್ನು ಎಂದಿಗೂ ಕೈಬಿಡದೆ, ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮೆರೆದುದಾಗಿ ವಿವರಿಸಿದ ಚಿನ್ಮಯಿ, ಇಂದಿನ ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದು ಸ್ಫೂರ್ತಿದಾಯಕ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರಯ್ಯ, ಎ.ಎಂ.ಶಿವಶಂಕರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಹರ್ಷ ಮನೆ ಮಾಡಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಸೇರಿದಂತೆ ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್, ವೆಂಕಟಾಪುರ ಯೋಗೀಶ್, ದೇವರಾಜು, ತೀರ್ಥ ಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾ ಸುರೇಶ್, ಮಂಜುಳಾ ಉಮಾಮಹೇಶ್, ದೀಪು ಶಾಲೆಯ ಮುಖ್ಯ ಶಿಕ್ಷಕ ನಟೇಶ್ ಹಾಗೂ ಶಿಕ್ಷಕ ಲೋಕೇಶ್ ಕುಮಾರ್ ಇದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರು, ಪೋಷಕರು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
    4
    ಶ್ರೀಮಂತಿಕೆ ಶಾಶ್ವತವಲ್ಲ, ದಾನಧರ್ಮ ಮಾತ್ರ ಶಾಶ್ವತ: ಚಂದ್ರಶೇಖರ ಮಹಾಸ್ವಾಮೀಜಿ.
ವೀರಶೈವ ಲಿಂಗಾಯತ ನೌಕರರ ತಾಲೂಕು ಸಮಾವೇಶ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ನಿವೃತ್ತ ನೌಕರರಿಗೆ ಸನ್ಮಾನ. 
ತುರುವೇಕೆರೆ: ಮನುಷ್ಯನಿಗೆ ಶ್ರೀಮಂತಿಕೆ ಎಂಬುದು ಎಂದೂ ಶಾಶ್ವತವಲ್ಲ. ಇಂದು ಕೈತುಂಬ ಸಂಪತ್ತಿದ್ದವರು ನಾಳೆ ಬರಿಗೈಯಾಗಬಹುದು. ಆದರೆ ಶ್ರೀಮಂತಿಕೆ ಇದ್ದ ಸಂದರ್ಭದಲ್ಲಿ ಮಾಡಿದ ದಾನಧರ್ಮಗಳು ಮಾತ್ರ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ ಏರ್ಪಡಿಸಲಾಗಿತ್ತು. ಇದೇ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀಮಂತಿಕೆ ಯಾವ ಕಾಲಕ್ಕೂ ಒಳ್ಳೆಯದಲ್ಲ; ಅದು ಮನುಷ್ಯನನ್ನು ದೇವರಿಂದಲೂ ದೂರ ಮಾಡುತ್ತದೆ ಎಂದು ಎಚ್ಚರಿಸಿ.
ಈ ಹಿಂದೆ ಅಪಾರ ಶ್ರೀಮಂತಿಕೆ ಹೊಂದಿದ್ದವರು ಇಂದು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಹಲವು ನಿದರ್ಶನಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಸ್ವಾಮೀಜಿ ನೆನಪಿಸಿದರು. ಶ್ರೀಮಂತಿಕೆಯ ಸೊಕ್ಕಿನಲ್ಲಿ ದೇವಸ್ಥಾನಗಳಿಗೆ ತಮ್ಮ ಹೆಸರು ಹಾಕಿ ಕಿರೀಟ, ಆಭರಣ ನೀಡಿದವರು ಮುಂದೆ ಯಾವ ಸ್ಥಿತಿಗೆ ತಲುಪಿದರು ಎಂಬುದನ್ನೂ ಸಮಾಜ ನೋಡಿದೆ ಎಂದು ಉದಾಹರಿಸಿದ ಅವರು, ಆದ್ದರಿಂದ ಕೈಯಲ್ಲಿ ಸಂಪತ್ತಿರುವಾಗ ಅಹಂಕಾರಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ, ವಿನಮ್ರತೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು. ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಮಾಜ ಸೇವೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡಿದ ಸ್ವಾಮೀಜಿ, ಲಿಂಗಾಯತ ಧರ್ಮವು ಎಲ್ಲಾ ಸಮಾಜದ ಜನರೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ ಎಂದರು. ಕೆಳವರ್ಗದ ಜನರನ್ನೂ ಆತ್ಮೀಯತೆಯಿಂದ ಕಾಣುವ ಸಮುದಾಯ ಲಿಂಗಾಯತವಾಗಿದ್ದು, ನಾವುಗಳು ಕೇವಲ ಜಾತಿ, ಮತ, ಧರ್ಮ ಎಂಬ ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದೇವೆ ಅಷ್ಟೆ; ವಾಸ್ತವದಲ್ಲಿ ಜಗತ್ತಿನಲ್ಲಿ ಎಲ್ಲವೂ ಶಿವಮಯ, ಲಿಂಗಮಯ ಎಂದು ಬಣ್ಣಿಸಿದರು. ಯಾವುದೇ ಜಾತಿಯವರಾಗಿದ್ದರೂ ಉತ್ತಮ ನಡತೆಯಿಂದ, ಶ್ರದ್ಧೆಯಿಂದ ದೇವರ ಆಚರಣೆ ಪಾಲಿಸುವವರೆಲ್ಲರೂ ನಿಜ ಅರ್ಥದಲ್ಲಿ ಲಿಂಗವಂತರೇ ಆಗಿದ್ದಾರೆ ಎಂದು ಪ್ರತಿಪಾದಿಸಿ ವೀರಶೈವ ಲಿಂಗಾಯತದ ಒಳಪಂಗಡಗಳ ಬಗ್ಗೆಯೂ ಮಾತನಾಡಿದ ಅವರು, ಈಗ ಒಳಪಂಗಡಗಳ ನಡುವಿನ ಗೆರೆಗಳು ಕ್ರಮೇಣ ಅಳಿದುಹೋಗುತ್ತಿವೆ ಎಂದರು. ಎಲ್ಲರೂ ಒಂದೇ ಲಿಂಗಾಯತ ಸಮುದಾಯದವರಾಗಿ ಒಳಪಂಗಡಗಳ ನಡುವೆಯೇ ಹೆಣ್ಣು-ಗಂಡು ಕೊಟ್ಟು ತಂದು ಮಾವ, ಬಾಮೈದ, ಅಣ್ಣ-ತಮ್ಮಂದಿರಂತಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಸಾಧಕಿ, ಅಮ್ಮಸಂದ್ರದ ಕು.ಚಿನ್ಮಯಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ಮಯಿ, ಪೋಷಕರು ತಮ್ಮ ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸ ಮತ್ತು ಅಂಕಗಳಿಕೆಗಾಗಿಯೇ ಒತ್ತಡ ಹೇರುವುದನ್ನು ಬಿಟ್ಟು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು. ತಾವು ವಿದ್ಯಾಭ್ಯಾಸದ ಸಂದರ್ಭದಲ್ಲಿ ತರಗತಿಗೇ ಟಾಪರ್ ಆಗಿದ್ದುದನ್ನು ನೆನಪಿಸಿಕೊಂಡ ಅವರು, ವಿದ್ಯೆಯ ಜೊತೆಜೊತೆಗೇ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದುದಾಗಿ ತಿಳಿಸಿದರು. ವೈದ್ಯ ವೃತ್ತಿಯಲ್ಲಿದ್ದರೂ ಕ್ರೀಡೆಯನ್ನು ಎಂದಿಗೂ ಕೈಬಿಡದೆ, ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮೆರೆದುದಾಗಿ ವಿವರಿಸಿದ ಚಿನ್ಮಯಿ, ಇಂದಿನ ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದು ಸ್ಫೂರ್ತಿದಾಯಕ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರಯ್ಯ, ಎ.ಎಂ.ಶಿವಶಂಕರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಹರ್ಷ ಮನೆ ಮಾಡಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಸೇರಿದಂತೆ ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್, ವೆಂಕಟಾಪುರ ಯೋಗೀಶ್, ದೇವರಾಜು, ತೀರ್ಥ ಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾ ಸುರೇಶ್, ಮಂಜುಳಾ ಉಮಾಮಹೇಶ್, ದೀಪು ಶಾಲೆಯ ಮುಖ್ಯ ಶಿಕ್ಷಕ ನಟೇಶ್ ಹಾಗೂ ಶಿಕ್ಷಕ ಲೋಕೇಶ್ ಕುಮಾರ್ ಇದ್ದರು.
ಸಮಾರಂಭದಲ್ಲಿ ಸಂಘದ ಸದಸ್ಯರು, ಪೋಷಕರು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    23 hrs ago
  • ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ ​ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ​------------------- ​ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ. ​ ​ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ​ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    1
    ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ
​ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!?
​-------------------
​ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ.
​         ​ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. 
​ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ.
ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    3 hrs ago
  • ಪಿ ಎಂ ನರೇಂದ್ರಸ್ವಾಮಿ ಅವರು ಸಚಿವ ಸಂಪುಟ ಸೇರ್ಪಡೆ ಹಿನ್ನಲೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ ಆಚರಣೆ ಮಳವಳ್ಳಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ನೂತನ ಮಂತ್ರಿಮಂಡಲದ ಪಟ್ಟಿಯಲ್ಲಿ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರ ಹೆಸರನ್ನು ಎಐಸಿಸಿ ಘೋಷಣೆ ಮಾಡು ತ್ತಿದ್ದಂತೆ ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜಯಘೋಷಗಳನ್ನು‌ ಕೂಗುವುದರೊಂದಿಗೆ ವಿಜ ಯೋತ್ಸವ ಆಚರಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಇಲ್ಲಿನ ಪೇಟೆ ವೃತ್ತದಲ್ಲಿ ನೆರೆದ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶಾಸಕ ಪಿ ಎಂ ನರೇಂದ್ರಸ್ವಾಮಿ ಹಾಗೂ ಪಕ್ಷದ ನಾಯಕರ ಪರ ಜಯಘೋಷಗ ಳನ್ನು ಮೊಳಗಿಸಿದರು, ಜೊತೆಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿ ಸಿದರಲ್ಲದೆ ಹಷೋದ್ಗಾರಗಳೊಂ ದಿಂಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪಿ ರಾಜು ಮಾಜಿ ಅಧ್ಯಕ್ಷ ಕೆ ಜೆ ದೇವ ರಾಜು, ಮನ್ ಮುಲ್ ನಿರ್ಧೇ ಶಕ ಆರ್ ಎನ್ ವಿಶ್ವಾಸ್ ಅವರುಗಳು ಹಲವಾರು ದಶಕ ಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆ ಗಾಗಿ ಅವಿರತ ಶ್ರಮಿಸಿದ ಶಾಸಕ ರಾದ ಪಿ ಎಂ ನರೇಂದ್ರ ಸ್ವಾಮಿ ಅವರ ದುಡಿಮೆ, ದಕ್ಷತೆ, ಸಂಘ ಟನಾ ಶಕ್ತಿಗೆ ಈಗ ಫಲ ಸಿಕ್ಕಿದ್ದು ಇದು ಇಡೀ ಕ್ಷೇತ್ರದ ಜನತೆಗೆ ಸಂದ ಗೌರವವಾಗಿದೆ ಎಂದರು. ಶಾಸಕರಾಗಿ ಸಚಿವರಾಗಿ ಸಾಕಷ್ಟು ಅನುಭವ ಹೊಂದಿ ರುವ ನರೇಂದ್ರಸ್ವಾಮಿ ಅವರಿಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದರು. ಇಂದಿನ ವಿಜಯೋತ್ಸವದ ಪ್ರಮುಖ ಆಯೋಜಕರು‌ ಕಾಂಗ್ರೆಸ್ ಮುಖಂಡರೂ ಆದ ಎಂ ಪಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಯುವ ಕಾಂಗ್ರೆಸ್ ಅದ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ಅಧ್ಯಕ್ಷರಾದ ಲಿಂಗರಾಜು, ಮುಖಂಡರಾದ ಬಂಕ್ ಮಹದೇವು, ಅಂಬರೀಶ್, ಸಿ ಎಂ ವೇದಮೂರ್ತಿ, ಮಾಜಿ ಪುರಸಭಾಧ್ಯಕ್ಷ ಗಂಗರಾಜು ಅರಸ್, ಅಯ್ಯೂಬ್ ಪಾಷಾ, ಸಂತೋಷ್, ಆನಂದ್ ಕುಮಾರ್, ವಿಶ್ವ, ಹೆಚ್ ಎಂ ಮಹೇಶ್, ಮಂಚನಹಳ್ಳಿ ಸಿದ್ದರಾಜು, ದುನಿಯಾ ಮಂಜು ಮತ್ತಿತರರು ಈ ವೇಳೆ ಹಾಜರಿದ್ದರು.
    1
    ಪಿ ಎಂ ನರೇಂದ್ರಸ್ವಾಮಿ ಅವರು  ಸಚಿವ ಸಂಪುಟ ಸೇರ್ಪಡೆ ಹಿನ್ನಲೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ ಆಚರಣೆ
ಮಳವಳ್ಳಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ನೂತನ ಮಂತ್ರಿಮಂಡಲದ ಪಟ್ಟಿಯಲ್ಲಿ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರ ಹೆಸರನ್ನು ಎಐಸಿಸಿ ಘೋಷಣೆ ಮಾಡು ತ್ತಿದ್ದಂತೆ ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜಯಘೋಷಗಳನ್ನು‌ ಕೂಗುವುದರೊಂದಿಗೆ ವಿಜ ಯೋತ್ಸವ ಆಚರಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಇಲ್ಲಿನ ಪೇಟೆ ವೃತ್ತದಲ್ಲಿ ನೆರೆದ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶಾಸಕ ಪಿ ಎಂ ನರೇಂದ್ರಸ್ವಾಮಿ ಹಾಗೂ ಪಕ್ಷದ ನಾಯಕರ ಪರ ಜಯಘೋಷಗ ಳನ್ನು ಮೊಳಗಿಸಿದರು, ಜೊತೆಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿ ಸಿದರಲ್ಲದೆ ಹಷೋದ್ಗಾರಗಳೊಂ ದಿಂಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪಿ ರಾಜು ಮಾಜಿ ಅಧ್ಯಕ್ಷ ಕೆ ಜೆ  ದೇವ ರಾಜು, ಮನ್ ಮುಲ್ ನಿರ್ಧೇ ಶಕ ಆರ್ ಎನ್ ವಿಶ್ವಾಸ್ ಅವರುಗಳು ಹಲವಾರು ದಶಕ ಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆ ಗಾಗಿ ಅವಿರತ ಶ್ರಮಿಸಿದ ಶಾಸಕ ರಾದ ಪಿ ಎಂ ನರೇಂದ್ರ ಸ್ವಾಮಿ ಅವರ ದುಡಿಮೆ, ದಕ್ಷತೆ, ಸಂಘ ಟನಾ ಶಕ್ತಿಗೆ ಈಗ ಫಲ ಸಿಕ್ಕಿದ್ದು ಇದು ಇಡೀ ಕ್ಷೇತ್ರದ ಜನತೆಗೆ ಸಂದ ಗೌರವವಾಗಿದೆ ಎಂದರು. ಶಾಸಕರಾಗಿ ಸಚಿವರಾಗಿ ಸಾಕಷ್ಟು ಅನುಭವ ಹೊಂದಿ ರುವ ನರೇಂದ್ರಸ್ವಾಮಿ ಅವರಿಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದರು. ಇಂದಿನ ವಿಜಯೋತ್ಸವದ ಪ್ರಮುಖ ಆಯೋಜಕರು‌ ಕಾಂಗ್ರೆಸ್ ಮುಖಂಡರೂ ಆದ ಎಂ ಪಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಯುವ ಕಾಂಗ್ರೆಸ್ ಅದ್ಯಕ್ಷ ಶ್ರೀಕಾಂತ್,  ಟಿಎಪಿಸಿಎಂಎಸ್ ಅಧ್ಯಕ್ಷರಾದ ಲಿಂಗರಾಜು, ಮುಖಂಡರಾದ ಬಂಕ್ ಮಹದೇವು, ಅಂಬರೀಶ್, ಸಿ ಎಂ ವೇದಮೂರ್ತಿ, ಮಾಜಿ ಪುರಸಭಾಧ್ಯಕ್ಷ ಗಂಗರಾಜು ಅರಸ್, ಅಯ್ಯೂಬ್ ಪಾಷಾ, ಸಂತೋಷ್, ಆನಂದ್ ಕುಮಾರ್, ವಿಶ್ವ, ಹೆಚ್ ಎಂ ಮಹೇಶ್, ಮಂಚನಹಳ್ಳಿ ಸಿದ್ದರಾಜು, ದುನಿಯಾ ಮಂಜು ಮತ್ತಿತರರು ಈ ವೇಳೆ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
  • ಯಳಂದೂರು ನ್ಯೂಸ್ ಯಳಂದೂರು ಪಟ್ಟಣದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣದಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಟ್ಟಣ ಪಂಚಾಯತಿ ಮುಂದಾಗಿದೆ. ಈಗಾಗಲೇ ಸಿದ್ದತೆ ಶುರುಮಾಡಿಕೊಂಡಿದ್ದಾರೆ.ಆಗಸ್ಟ್ 10 ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಗೊಳ್ಳಲಿದ್ದು, ಈ ಸಂಬಂಧಿಸಿದಂತೆ ಈ ದಿನ ರಸ್ತೆ ಬದಿ ವ್ಯಾಪಾರಿಗಳ ಸಭೆ ಹಮ್ಮಿಕೊಳ್ಳಲಾಗಿದ್ದು ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದರು. ನಗರದ ಹಲವು ರಸ್ತೆಗಳಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ಸಣ್ಣ ಪುಟ್ಟ ಅಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಫುಟ್ ಪಾತ್ ಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ನಡೆದುಕೊಂಡು ಹೋಗಲು ಪಾದಾಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲೇ ಜನರು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ. ಇನ್ನು ಕೆಲವು ರಸ್ತೆಗಳಲ್ಲಿ ಫುಡ್ ಸ್ಟ್ರೀಟ್‌ಗಳೇ ಸೃಷ್ಟಿಯಾಗಿದ್ದು, ಇದರಿಂದ ವಾಹನ ಓಡಾಟಗಳಿಗೂ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಇದಕ್ಕೆ ಸಹಕಾರ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳ ಜೊತೆ ಸಮಾಲೋಚನೆ ನೆಡೆಸಿ ಇನ್ನೂ ಒಂದು ವಾರದೊಳಗೆ ತಾವೇ ತೆರವು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಸೋಮವಾರ ಪಟ್ಟಣ ಪಂಚಾಯತಿ ವತಿಯಿಂದ ಜೆ ಸಿ ಬಿ ಮೂಲಕ ತೆರವು ಕಾರ್ಯಚರಣೆ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್, ಅರೋಗ್ಯ ನಿರೀಕ್ಷಕ ರಾಘವೇಂದ್ರ, ಕಂದಾಯ ಅಧಿಕಾರಿ ಮಹದೇವ್, ಪರಶಿವಮೂರ್ತಿ ಹಾಗೂ ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಸಿಬ್ಬಂದಿಗಳು ಹಾಜರಿದ್ದರು.
    2
    ಯಳಂದೂರು ನ್ಯೂಸ್ 
ಯಳಂದೂರು ಪಟ್ಟಣದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣದಲ್ಲಿ  ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಟ್ಟಣ ಪಂಚಾಯತಿ ಮುಂದಾಗಿದೆ.  ಈಗಾಗಲೇ ಸಿದ್ದತೆ ಶುರುಮಾಡಿಕೊಂಡಿದ್ದಾರೆ.ಆಗಸ್ಟ್   10 ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಗೊಳ್ಳಲಿದ್ದು,
ಈ ಸಂಬಂಧಿಸಿದಂತೆ ಈ ದಿನ ರಸ್ತೆ ಬದಿ ವ್ಯಾಪಾರಿಗಳ ಸಭೆ ಹಮ್ಮಿಕೊಳ್ಳಲಾಗಿದ್ದು ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದರು. ನಗರದ ಹಲವು ರಸ್ತೆಗಳಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ಸಣ್ಣ ಪುಟ್ಟ ಅಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.
ಆದರೆ ಫುಟ್ ಪಾತ್ ಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ನಡೆದುಕೊಂಡು ಹೋಗಲು ಪಾದಾಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲೇ ಜನರು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ. ಇನ್ನು ಕೆಲವು ರಸ್ತೆಗಳಲ್ಲಿ ಫುಡ್ ಸ್ಟ್ರೀಟ್‌ಗಳೇ ಸೃಷ್ಟಿಯಾಗಿದ್ದು, ಇದರಿಂದ ವಾಹನ ಓಡಾಟಗಳಿಗೂ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಇದಕ್ಕೆ ಸಹಕಾರ ನೀಡುವಂತೆ  ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್  ಪಟ್ಟಣದ   ರಸ್ತೆ ಬದಿ ವ್ಯಾಪಾರಿಗಳ ಜೊತೆ ಸಮಾಲೋಚನೆ ನೆಡೆಸಿ ಇನ್ನೂ ಒಂದು ವಾರದೊಳಗೆ ತಾವೇ ತೆರವು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಸೋಮವಾರ ಪಟ್ಟಣ ಪಂಚಾಯತಿ ವತಿಯಿಂದ ಜೆ ಸಿ ಬಿ ಮೂಲಕ ತೆರವು ಕಾರ್ಯಚರಣೆ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್, ಅರೋಗ್ಯ ನಿರೀಕ್ಷಕ ರಾಘವೇಂದ್ರ, ಕಂದಾಯ ಅಧಿಕಾರಿ ಮಹದೇವ್, ಪರಶಿವಮೂರ್ತಿ ಹಾಗೂ ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಸಿಬ್ಬಂದಿಗಳು ಹಾಜರಿದ್ದರು.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    7 hrs ago
  • All About,Why the reasons,Then the Caretakers of our community didn't registered #FIR against the #IMAPonziScheme defaulters *ಭಾರತ ನಲ್ಲಿ ವೈರಲ್*
    1
    All About,Why the reasons,Then the Caretakers of our community didn't registered #FIR against the #IMAPonziScheme defaulters 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು ಶಹಿಂಷಾ ಅಹ್ಮದ್ ಅಜೀಜ್ ಸೇಠ್ ಬ್ಲಾಕ್ ಉಪಾಧ್ಯಕ್ಷ ಕೆಪಿಸಿಸಿ ವಾರ್ಡ್ ಸಂಖ್ಯೆ 14 ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು
    1
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು
ಶಹಿಂಷಾ ಅಹ್ಮದ್ 
ಅಜೀಜ್ ಸೇಠ್ ಬ್ಲಾಕ್ ಉಪಾಧ್ಯಕ್ಷ ಕೆಪಿಸಿಸಿ
ವಾರ್ಡ್ ಸಂಖ್ಯೆ 14 
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ ---------------------- ಚಿಕ್ಕನಾಯಕನಹಳ್ಳಿ: ತಾಲ್ಲೂಕಿಗೆ ಹೇಮಾವತಿ ನೀರು ಹರಿಸಬೇಕು ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಶಾಸಕ ಬಿ.ಲಕ್ಕಪ್ಪ ಅವರು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಸೂಕ್ತ ಆಶ್ವಾಸನೆ ನೀಡದಿದ್ದರೆ 'ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಂದ್' ನಡೆಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತ ರೈತರೊಂದಿಗೆ ನೆಲದ ಮೇಲೆ ಕುಳಿತು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗಮನ ಸೆಳೆಯಲು ತೀವ್ರ ಹೋರಾಟ: "ಸುಮ್ಮನೆ ಬಂದು ಕುಳಿತು, ಎದ್ದು ಹೋಗುವಂತಹ ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಅದರ ಗಮನ ಸೆಳೆಯಬೇಕಾದರೆ ಅತ್ಯಂತ ಪರಿಣಾಮಕಾರಿಯಾದ ನಿಲುವು ತಳೆಯಬೇಕಾಗಿದೆ. ನೀರಾವರಿ ಸೌಲಭ್ಯ ಸಿಗುವವರೆಗೂ ಹಾಗೂ ಸರ್ಕಾರದ ಸ್ಪಷ್ಟ ಆಶ್ವಾಸನೆ ಸಿಗುವವರೆಗೂ ಈ ಹೋರಾಟವನ್ನು ಅರ್ಧಕ್ಕೆ ಕೈಬಿಡಬಾರದು" ಎಂದು ಹೇಳಿದರು. ರಾಜಕೀಯ ರಹಿತ ಬೆಂಬಲ, ತಾಲ್ಲೂಕು ಬಂದ್‌ಗೆ ಕರೆ: "ಈ ಹೋರಾಟದಲ್ಲಿ ಯಾವುದೇ ಪಕ್ಷ ಅಥವಾ ರಾಜಕೀಯವಿಲ್ಲ. ಇದು ಇಡೀ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರ ಬದುಕಿನ ಪ್ರಶ್ನೆ. ರೈತರು ಒಗ್ಗಟ್ಟಾಗಿ ನಿಲ್ಲಬೇಕು. ಅಗತ್ಯಬಿದ್ದರೆ ಇಡೀ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬಂದ್ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕಾಗಿದೆ" ಎಂದು ಕರೆ ನೀಡಿದರು. ರೈತರ ಜೊತೆ ಕೊನೆಯವರೆಗೂ ನಿಲ್ಲುವ ಅಭಯ: "ನಾನು ಮೊದಲಿನಿಂದಲೂ ನೀರಾವರಿ ಯೋಜನೆಗಳ ಬಗ್ಗೆ ಹಾಗೂ ರೈತರ ಪರವಾಗಿ ಆಸಕ್ತಿ ಹೊಂದಿರುವವನು. ಹಿಂದೆ ಹಲವು ಬಾರಿ ಹೋರಾಟ ನಡೆಸಿದರೂ ಸೂಕ್ತ ಫಲಿತಾಂಶ ಸಿಕ್ಕಿಲ್ಲ. ಆದರೆ ಈಗ ರೈತ ಸಂಘಟನೆಗಳು ಆರಂಭಿಸಿರುವ ಈ ಹೋರಾಟ ತಾರ್ಕಿಕ ಅಂತ್ಯ ಕಾಣಲೇಬೇಕು. ರೈತರ ಈ ನ್ಯಾಯಯುತ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದು, ಸಂಪೂರ್ಣ ಬೆಂಬಲ ನೀಡುತ್ತೇನೆ" ಎಂದು ರೈತರಿಗೆ ಧೈರ್ಯ ತುಂಬಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ನೂರಾರು ರೈತರು ಹಾಗೂ ಸ್ಥಳೀಯ ಸಾರ್ವಜನಿಕರು ಹಸಿರು ಶಾಲು ಧರಿಸಿ ಭಾಗವಹಿಸಿದ್ದು, ಸ್ಥಳದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
    1
    ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ 
ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ 
----------------------
ಚಿಕ್ಕನಾಯಕನಹಳ್ಳಿ: ತಾಲ್ಲೂಕಿಗೆ ಹೇಮಾವತಿ ನೀರು ಹರಿಸಬೇಕು ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಶಾಸಕ ಬಿ.ಲಕ್ಕಪ್ಪ ಅವರು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಸೂಕ್ತ ಆಶ್ವಾಸನೆ ನೀಡದಿದ್ದರೆ 'ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಂದ್' ನಡೆಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತ ರೈತರೊಂದಿಗೆ ನೆಲದ ಮೇಲೆ ಕುಳಿತು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸರ್ಕಾರದ ಗಮನ ಸೆಳೆಯಲು ತೀವ್ರ ಹೋರಾಟ:
"ಸುಮ್ಮನೆ ಬಂದು ಕುಳಿತು, ಎದ್ದು ಹೋಗುವಂತಹ ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಅದರ ಗಮನ ಸೆಳೆಯಬೇಕಾದರೆ ಅತ್ಯಂತ ಪರಿಣಾಮಕಾರಿಯಾದ ನಿಲುವು ತಳೆಯಬೇಕಾಗಿದೆ. ನೀರಾವರಿ ಸೌಲಭ್ಯ ಸಿಗುವವರೆಗೂ ಹಾಗೂ ಸರ್ಕಾರದ ಸ್ಪಷ್ಟ ಆಶ್ವಾಸನೆ ಸಿಗುವವರೆಗೂ ಈ ಹೋರಾಟವನ್ನು ಅರ್ಧಕ್ಕೆ ಕೈಬಿಡಬಾರದು" ಎಂದು ಹೇಳಿದರು.
ರಾಜಕೀಯ ರಹಿತ ಬೆಂಬಲ, ತಾಲ್ಲೂಕು ಬಂದ್‌ಗೆ ಕರೆ:
"ಈ ಹೋರಾಟದಲ್ಲಿ ಯಾವುದೇ ಪಕ್ಷ ಅಥವಾ ರಾಜಕೀಯವಿಲ್ಲ. ಇದು ಇಡೀ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರ ಬದುಕಿನ ಪ್ರಶ್ನೆ. ರೈತರು ಒಗ್ಗಟ್ಟಾಗಿ ನಿಲ್ಲಬೇಕು. ಅಗತ್ಯಬಿದ್ದರೆ ಇಡೀ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬಂದ್ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕಾಗಿದೆ" ಎಂದು ಕರೆ ನೀಡಿದರು.
ರೈತರ ಜೊತೆ ಕೊನೆಯವರೆಗೂ ನಿಲ್ಲುವ ಅಭಯ:
"ನಾನು ಮೊದಲಿನಿಂದಲೂ ನೀರಾವರಿ ಯೋಜನೆಗಳ ಬಗ್ಗೆ ಹಾಗೂ ರೈತರ ಪರವಾಗಿ ಆಸಕ್ತಿ ಹೊಂದಿರುವವನು. ಹಿಂದೆ ಹಲವು ಬಾರಿ ಹೋರಾಟ ನಡೆಸಿದರೂ ಸೂಕ್ತ ಫಲಿತಾಂಶ ಸಿಕ್ಕಿಲ್ಲ. ಆದರೆ ಈಗ ರೈತ ಸಂಘಟನೆಗಳು ಆರಂಭಿಸಿರುವ ಈ ಹೋರಾಟ ತಾರ್ಕಿಕ ಅಂತ್ಯ ಕಾಣಲೇಬೇಕು. ರೈತರ ಈ ನ್ಯಾಯಯುತ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದು, ಸಂಪೂರ್ಣ ಬೆಂಬಲ ನೀಡುತ್ತೇನೆ" ಎಂದು ರೈತರಿಗೆ ಧೈರ್ಯ ತುಂಬಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ನೂರಾರು ರೈತರು ಹಾಗೂ ಸ್ಥಳೀಯ ಸಾರ್ವಜನಿಕರು ಹಸಿರು ಶಾಲು ಧರಿಸಿ ಭಾಗವಹಿಸಿದ್ದು, ಸ್ಥಳದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.