Shuru
Apke Nagar Ki App…
ಬಾಗಲಕೋಟ:ಹೋಳಿ ಹಬ್ಬದ ಕ್ಷುಲ್ಲಕ ಜಗಳ:ತೇರದಾಳ ಕೊಲೆ ಅಂತ್ಯ: ಸಿಸಿಟಿವಿ ದೃಶ್ಯಾವಳಿ ವೈರಲ್ ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
PKBagalkot
ಬಾಗಲಕೋಟ:ಹೋಳಿ ಹಬ್ಬದ ಕ್ಷುಲ್ಲಕ ಜಗಳ:ತೇರದಾಳ ಕೊಲೆ ಅಂತ್ಯ: ಸಿಸಿಟಿವಿ ದೃಶ್ಯಾವಳಿ ವೈರಲ್ ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
More news from ಕರ್ನಾಟಕ and nearby areas
- "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.1
- Post by Sharanugouda Patil1
- Post by @april14news1
- ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.1
- ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.1
- 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು1
- ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು. ಮಂಗಳವಾರದಂದು ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು1
- ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.1