Shuru
Apke Nagar Ki App…
Manjuanatha k
More news from ಕರ್ನಾಟಕ and nearby areas
- Post by Manjuanatha k2
- Post by Masood khan1
- Post by Suresh Belagere1
- ಬನ್ನಿ ನಮ್ಮನ್ನು ಸಂಪರ್ಕಿಸಿ3
- ಮದಕರಿಪುರ ಗ್ರಾಮದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಖುದ್ದು ಗ್ರಾಮಸ್ತರೆ ಸ್ವಚ್ಚತೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದ್ದು ಖುದ್ದು ಗ್ರಾಮಸ್ತರೆ ಚರಂಡಿಗಿಳಿದು ಸ್ವಚ್ಚತೆ ಮಾಡಿದ್ದಾರೆ. ಇನ್ನೂ ಮದಕರಿಪುರ ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ರೋಗ ರುಜುನೆಗಳ ಬೀತಿ ಹೆಚ್ಚಾಗಿದೆ.1
- ಪವನ್ ಕಲ್ಯಾಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:- ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ತದನಂತರ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಎಂದು ಹೇಳಿದರು. ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್, ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.1
- ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ ! ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ... ಇಂತಾ ಬಿಸಿಲಿನ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು.... ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.2
- Post by Suresh Belagere1