Shuru
Apke Nagar Ki App…
ಗಂಗಾವತಿಯ ಮಲ್ಲಾಪುರ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ, ಗ್ರಾಮಸ್ಥರಲ್ಲಿ ಆತಂಕ..!
Rahuldev singh
ಗಂಗಾವತಿಯ ಮಲ್ಲಾಪುರ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ, ಗ್ರಾಮಸ್ಥರಲ್ಲಿ ಆತಂಕ..!
More news from ಕರ್ನಾಟಕ and nearby areas
- ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.1
- ಗುಳೇದಗುಡ್ಡ: ಪಟ್ಟಣದ ಬಸವ ಕೇಂದ್ರದ ವತಿಯಿಂದ ಏ.20ರಂದು ಸ್ಥಳೀಯ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು ಎಂದು ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು. ಅವರು ಮಂಗಳವಾರ ಸ್ಥಳೀಯ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಪಟ್ಟಣದ ಸಮಸ್ತರು ಸೇರಿಕೊಂಡು ಸಂಭ್ರಮದಿಂದ ಆಚರಿಸಲಾಗುವುದು. ಏ.20 ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಶಿವಯೋಗ, ನಂತರ ಶರಣ ಧ್ವಜಾರೋಹಣ ಬಳಿಕ ಸಾಹಿತಿ ರವಿ ಕಂಗಳ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅಕ್ಕಮಹಾದೇವಿ ಮಂದಿರದ ಶರಣಮ್ಮತಾಯಿ ಅವರು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಚಣ್ಣ ಕೆರೂರ, ಕಾಶಿನಾಥ ಶೆಟ್ಟರ, ದಾನಪ್ಪ ಬಂಡಿ, ಪುತ್ರಪ್ಪ ಬೀಳಗಿ, ಶ್ರೀಕಾಂತ ಗಡೇದ, ಬಸಲಿಂಗಯ್ಯ ಕಂಬಾಳಿಮಠ, ವಿಶ್ವನಾಥ ಅಂಗಡಿ, ರವಿ ಅಂಗಡಿ, ಸುರೇಶ ರಾಜನಾಳ, ಮುರುಗೇಶ ಶೇಖಾ, ಬಸವರಾಜ ಚವಡಿ, ಮಹಾದೇವಯ್ಯ ನೀಲಕಂಠಮಠ, ಚಂದ್ರಶೇಖರ ತೆಗ್ಗಿ, ಶರಣಪ್ಪ ಚಿಕ್ಕನರಗುಂದ, ಶಿವಾನಂದ ಸಿಂದಗಿ, ಸಂಗಮೇಶ ಹುಳಪಲ್ಲೇದ, ಸಂಗಣ್ಣ ಪಟ್ಟಶೆಟ್ಟಿ, ಹುಚ್ಚೇಶ ಸಿಂದಗಿ, ಬಸವರಾಜ ಬರಗುಂಡಿ, ರಾಚಪ್ಪ ಯಂಡಿಗೇರಿ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ದ್ರಾಕ್ಷಾಯಣಿ ತೆಗ್ಗಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ ಮತ್ತಿತರರು ಇದ್ದರು.1
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- Post by Mouli Varma1
- Post by Sharanugouda Patil1
- "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.1
- 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ದಲಿತ ಹಿತ ರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಯುವಕರು ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು.2