Shuru
Apke Nagar Ki App…
ಮದರಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿದ ಪಿಎಸ್‌ಐ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದರಕಲ್ ಗ್ರಾಮದಲ್ಲಿ ಜಾಲಹಳ್ಳಿ ಪಿಎಸ್‌ಐ ಅವರು “ಆಸರೆ ಯೋಜನೆ” ಅಡಿಯಲ್ಲಿ ಒಂಟಿ ಮನೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರನ್ನು ಭೇಟಿ ಮಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿದರು. ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದರು. ಒಂಟಿಯಾಗಿ ವಾಸಿಸುವ ಹಿರಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಈ ವೇಳೆ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡರು.
K2 kannada News
ಮದರಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿದ ಪಿಎಸ್‌ಐ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದರಕಲ್ ಗ್ರಾಮದಲ್ಲಿ ಜಾಲಹಳ್ಳಿ ಪಿಎಸ್‌ಐ ಅವರು “ಆಸರೆ ಯೋಜನೆ” ಅಡಿಯಲ್ಲಿ ಒಂಟಿ ಮನೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರನ್ನು ಭೇಟಿ ಮಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿದರು. ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದರು. ಒಂಟಿಯಾಗಿ ವಾಸಿಸುವ ಹಿರಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಈ ವೇಳೆ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡರು.
More news from ಕರ್ನಾಟಕ and nearby areas
- ಮದರಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿದ ಪಿಎಸ್‌ಐ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದರಕಲ್ ಗ್ರಾಮದಲ್ಲಿ ಜಾಲಹಳ್ಳಿ ಪಿಎಸ್‌ಐ ಅವರು “ಆಸರೆ ಯೋಜನೆ” ಅಡಿಯಲ್ಲಿ ಒಂಟಿ ಮನೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರನ್ನು ಭೇಟಿ ಮಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿದರು. ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದರು. ಒಂಟಿಯಾಗಿ ವಾಸಿಸುವ ಹಿರಿಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಈ ವೇಳೆ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡರು.1
- ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ. ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.1
- ಅಕ್ರಮ ಜೆಲ್ಲಿ ಸಾಗಣೆ: ಸುಚಿತ್ ಮಿಲೇನಿಯಂ ಕಂಪನಿಯಿಂದ ₹1.06 ಕೋಟಿ ದಂಡ ವಸೂಲಿ ಅಕ್ರಮ ಜೆಲ್ಲಿ ಸಾಗಣೆ: ಸುಚಿತ್ ಮಿಲೇನಿಯಂ ಕಂಪನಿಯಿಂದ ₹1.06 ಕೋಟಿ ದಂಡ ವಸೂಲಿ2
- ದೇವದುರ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮ ಆಚರಣೆ ಮಾಡಲಾಯಿತು1
- ಈದ್ ಮಿಲಾದ್ ಸಂಭ್ರಮದ ಆಚರಣೆ ದೇವದುರ್ಗದ ಮುಖ್ಯ ರಸ್ತೆ ಮೂಲಕ ಮೆಕ್ಕಾ ಮದೀನಾ ಸ್ಥಬ್ದ ಚಿತ್ರಗಳ ಮೆರವಣಿಗೆ1
- ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಿ: ಉಮೇಶ್ ಮುದ್ನಾಳ ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಹೋರಾಟದ ಎಚ್ಚರಿಕೆಗೆ 7 ತಿಂಗಳ ನಂತರ ಜಿ.ಪಂ. ಪಿ.ಡಿ. ಸಿ.ಬಿ. ದೇವರಮನಿ ತಳಕ ಗ್ರಾಮಕ್ಕೆ ಬೇಟಿ ನೀಡಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ದೂರಿಗೆ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿದಸಿದ ಜಿ.ಪಂ. ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ ಸಂಪೂರ್ಣ ವರದಿ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಸಲ್ಲಿಸುವ ಭರವಸೆ. ಯಾದಗಿರಿ : ತಾಲೂಕಿನ ತಳಕ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಬಸವನ ಗುಡಿಯಿಂದ ಹಳ್ಳದ ವರೆಗೆ ಸಿ.ಸಿ. ಚರಂಡಿ ನಿಮಾರ್ಣ ಬಿಲ್ ನಂ. 309 ಹಣ 42560/- ಮತ್ತು ಬಿಲ್ 35155 ನಂ. 41440/- 2021-22ನೇ ಸಾಲಿನಲ್ಲಿ ಬಸವನ ಕಟ್ಟಿ ಹತ್ತಿರ ದನಕರಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಬಿಲ್ ನಂ. 310 ಹಣ 24610/- ಮತ್ತು ಬಿಲ್, 3516 ಹಣ 7817/- ಈ ಎರಡು ಕಾಮಗಾರಿಗಳನ್ನು ಮಾಡದೇ ಸಂಪೂರ್ಣ ಹಣ ಲೂಟಿ ಮಾಡಿದ ಹಿಂದಿನ ಪಿ.ಡಿ.ಸಿ ಬೂಪ ನೀಲಕಂಠ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಸರ್ಕಾರಕ್ಕೆ ಭೊಕ್ಕಸಕ್ಕೆ ಹಣ ತುಂಬಿಸಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರ ಹೋರಾಟದ ಎಚ್ಚರಿಕೆ ನೀಡಿದರು. ಅದರ ಬೆನ್ನಲ್ಲೇ ಜಿಲ್ಲಾ ಪಂಚಾಯತ ಪಿಡಿ ಸಿ.ಬಿ. ದೇವರಮನಿ ಅವರು ಮಂಗಳವಾರ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶಿಲಿಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ನಂತರ ಸ್ಥಳದಲ್ಲಿದ ಕೆÀಳಮಟ್ಟದ ಅಧಿಕಾರಿಗಳಿಗೆ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿ ಬ್ಲಿಚಿಂಗ್ ಪೌಡರ್ ಫಾಗಿಂಗ್ ಮಾಡಿ ಸಾರ್ವಜನಿರಕಿಗೆ ರೋಗ ರೂಜನೆ ಬರದಂತೆ ನೋಡಿಕೊಳ್ಳಿಎಂದು ಸೂಚಿದರು. ಸಿಸಿ ಚರಂಡಿ ಇಲ್ಲದ ಸ್ಥಳದಲ್ಲಿ ಸಿಸಿ ಚರಂಡಿ ಇಲ್ಲದ ಸ್ಥಳಗಳನ್ನು ಗುರುತಿಸಿ ಅಂದಾಜು ಪಟ್ಟಿ ಜಿಲ್ಲಾಪಂಚಾಯತಿಗೆ ಸಲ್ಲಿಸುವಂತೆ ತಿಳಿಸಿದರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಅಕ್ರಮ ವೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ 7 ತಿಂಗಳ ನಂತರ ನಾಮಕೆ ವಾಸ್ತೆ ಗ್ರಾಮಕ್ಕೆ ಬೇಟಿ ನೀಡುತ್ತಿರುವುದು ದೂರದುಷ್ಟಕರ ಸಂಗತಿ ಎಂದರು. ಇದಲ್ಲದೇ ಮುದ್ನಾಳ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಅನುವು ಮಾಡಿ ಕೊಡದಲ್ಲದೇ ಗ್ರಂಥಾಲಯದ ಶೆಡ್ಡ ನಿರ್ಮಾಣ ಅವ್ಯವಾಹರ ನಡೆದಿದ್ದರು ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥೆ ಮಾಡದೆ ಹಣ ಲಪ್ಟಾಯಿಸಿದ್ದು ರೈತರ ಗೋದಾಮು ನಿರ್ಮಾಣ ಮಾಡದೇ ಒಂದೇ ದಿನ ಹಣ ಡ್ರಾ ಮಾಡಿದರು. ಇಂತ ವ್ಯಕ್ತಿಗೆ ಅಮಾನತ್ತು ಗೊಳಿಸಿ ಮನೆಗೆ ಕಳಿಸಬೇಕಾಗಿತ್ತು ಆದರೆ ನಿಮ್ಮ ಜಿಲ್ಲಾ ಪಂಚಾಯತಿಯಲ್ಲಿ ಇಂತವರಿಗೆ ರಾಜಾ ಮರಾದಿ ನೀಡುತ್ತಿರುವುದು ನಾಚಿಗೇಡಿನ ಸಂಗತಿ ಈ ಅಕ್ರಮ ಎಸಗಿದವರ ಜೊತೆ ಅವರ ಕೊಡತಕ್ಕಂತ ಲಂಚಕ್ಕೆ ಕೈವಡ್ಡಿ ತಾ.ಪಂ. ಜಿ.ಪಂ.ಯಲ್ಲಿ ಕೆಲವು ಅಧಿಕಾರಿಗಳು ಇವರ ಜೊತೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಇದರ ಸಂಪೂರ್ಣ ಪಿಕ್ಚರ್ ರೆಡಿಯಾಗಿದೆ ಮುಂದಿನ ದಿನಗಳಲ್ಲಿ ಇಡಿ ರಾಜ್ಯದ ಜನ ನೋಡಿ ಕ್ಯಾಕರ್ಸಿ ಉಗುಳುವ ಕಾಲ ಅತ್ರ ಬಂದಿದೆ ಆಮೇಲೆ ಸತ್ಯಾ ಅಸತ್ಯತೆ ಯಾರು ಸಾಚಾ ಯಾರು ಸರ್ಕಾರಿ ಹಣ ದುರಬಳಕೆ ಮಾಡಿದ್ದಾರೆಂಬುವುದು ಸದ್ಯದಲ್ಲೇ ತಿಳಿಯಲಿದೆ ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ದಾಳ ಅವರು ಆರೋಪಿಸಿದ್ದಾರೆ ಗ್ರಾಮಕ್ಕೆ ಭೇಟಿ ಸುತ್ತಾಡಿದ ನಂತರ ಮಾತನಾಡಿದ ಅವರು ಗ್ರಾಮದ ಎರಡು ಕಡೆ ಕಾಮಗಾರಿ ಆಗದೆ 1) ಗ್ರಾಮದಲ್ಲಿ ಪರಿಸ್ಥಿತಿ ಹದಗೆಡಲು ಪಿಡಿಒ ಬೇಜವಾಬ್ದಾರಿಯೇ ಕಾರಣ ಕ್ರಮಕೈಗೊಳ್ಳದಿದ್ದರೆ ಉಮೇಶ ಕೆ. ಮುದ್ದಾಳ ಅವರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು ಚರಂಡಿ ನೀರು ದುರ್ವಾಸನೆ ಬೀರುತ್ತಿರುವ ಪರಿಣಾಮ: ಸೊಳ್ಳೆಗಳ ಕಾಟ ಅಧಿಕವಾಗಿದೆ. ಮಲೇರಿಯಾ ಸೇರಿದಂತೆ ಆನೇಕ ಸಾಂಕ್ರಾಮಿಕ ರೋಗಗಳು ಹರಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಹಳ್ಳಿಗೆ ಭೇಟಿ ನೀಡಿ, ಅಗತ್ಯ ಕ್ರಮಕೈಗೊಳ್ಳಬೇಕಿದೆ ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಗ್ರಾಮಸ್ಥರೊಂದಿಗೆ ಉಮೇಶ ಕೆ ಮುನ್ನಾಳ ಎಚ್ಚರಿಕೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಠಾಣಗುಂದಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಜೆಇ ಗಂಗಣ್ಣ, ಚಂದಪ್ಪ, ದೇವಪ್ಪ, ಆನಂದ, ಮರೆಪ್ಪ ಪವನ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ತಳಕ ಪ್ರಮುಖ ಬಿದಿಗಳಲ್ಲಿ ಒಳ ಚರಂಡಿ ನೀರು ರಸ್ತೆ ಮೇಲೆ ನೀರು ಹರಿದು ಸಮರ್ಪಕವಾಗಿ ರಸ್ತೆ ಮತ್ತು ಒಳಚರಂಡಿ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರ ಗೋಳು ಕೇಳೋರು ಯಾರು ಎಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ ನಾಳೆಯಿಂದ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಪ್ರಾರಂಭವಾಗಲಿದೆ. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.2
- "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*1
- ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಸಿರವಾರದಲ್ಲಿ ಪ್ರತಿಭಟನೆ. ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ಆಡಳಿತ ಯಂತ್ರ ಕುಸಿತ ಆರೋಪ. ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ರೈತರು ಬುಧವಾರ ಸಿರವಾರ ಪಟ್ಟಣದಲ್ಲಿ ರಸ್ತೆ ತಡೆದು ಎರಡನೇ ದಿನದ ಬೃಹತ್ ಪ್ರತಿಭಟನೆ ನಡೆಸಿದರು. ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ತಡೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ನೀರು ಕಬಳಿಕೆ ಮಾಡುವವರ ಮೇಲೆ ಕಾನೂನು ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಅನಧಿಕೃತ ದಂಧೆ ತಡೆಗಟ್ಟಬೇಕು ಎಂದು ರೈತರು ಕಿಡಿಕಾರಿದರು. ಬೆಳಿಗ್ಗೆಯಿಂದ ನೀರಾವರಿ ಇಲಾಖೆಯ ಮುಂಭಾಗದಲ್ಲಿ ರೈತರು ಪ್ರತಿಭಟಿಸಿದರು. ನೀರಾವರಿ ಇಲಾಖೆಯ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಬಂದು ರೈತರ ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿದರು. ಆದರೆ ರೈತರ ಹೋರಾಟ ಕಡೆಗಣಿಸಿದ್ದರಿಂದ ರೈತರು ರೊಚ್ಚಿಗೆದ್ದು ಮುಖ್ಯ ರಸ್ತೆ ತಡೆದು ಹೋರಾಟಕ್ಕೆ ಮುಂದಾದರು. ಈ ಹೋರಾಟದಲ್ಲಿ ರಾಜಕೀಯ ಮುಖಂಡರು, ರೈತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.4