ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಇಂದು ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣರವರ ಪುಣ್ಯಸ್ಮರಣೆಯನ್ನು ನಗರದ ಬಿಜಿಎಸ್ ವೃತ್ತದ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಯ ಮುಂದೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಭಾರತ ಇಂದು ಗಣರಾಜ್ಯ ಎಂದು ಕರೆಸಿಕೊಂಡಿದ್ದರೂ ಸಹ ಸಂಪೂರ್ಣವಾಗಿ ಗಣರಾಜ್ಯವಾಗಿಲ್ಲ, ಏಕೆಂದರೆ ಸಂವಿಧಾನ ಜಾರಿಗೆ ಬಂದು ಏಳು ದಶಕಗಳಾದರೂ, ಸಮಾಜದೊಳಗಿನ ಮನಸ್ಸುಗಳು ಇನ್ನೂ ಜಾತಿ, ಧರ್ಮ ಮತ್ತು ಅಂಧಶ್ರದ್ಧೆಗಳ ಬಂಧನದಲ್ಲೇ ಉಳಿದಿವೆ ಎಂದರು, ಭಾರತದ ಇತಿಹಾಸವನ್ನು ಆಳವಾಗಿ ನೋಡಿದರೆ, ಇಲ್ಲಿ ಎರಡು ಸ್ಪಷ್ಟ ದಾರಿಗಳು ಕಂಡುಬರುತ್ತವೆ. ಒಂದು ಮಾನವನನ್ನು ಜಾತಿ, ವರ್ಣ, ಲಿಂಗ ಮತ್ತು ಧರ್ಮದ ಆಧಾರದ ಮೇಲೆ ಬಂಧಿಸುವ ದಮನಕಾರಿ ದಾರಿ. ಇನ್ನೊಂದು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವ, ಪ್ರಶ್ನಿಸುವ ಹಕ್ಕನ್ನು ನೀಡುವ, ಸ್ವಾತಂತ್ರ್ಯವನ್ನು ಕೇಂದ್ರವಾಗಿಟ್ಟುಕೊಂಡ ವಿಮೋಚನಾ ದಾರಿ. ಈ ವಿಮೋಚನಾ ದಾರಿಯಲ್ಲಿ ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಮೂಲವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇದೇ ದಿನದಂದು ನಮ್ಮ ಕನ್ನಡ ನಾಡಿನ ವೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರು ಸಹ ನಮ್ಮ ನಾಡಿಗಾಗಿ ಬಲಿದಾನವಾದ ದಿನವಾಗಿದೆ, ಸಂಗೊಳ್ಳಿ ರಾಯಣ್ಣರವರು ಮಹಾನ್ ಕ್ರಾಂತಿಕಾರಿ ಯೋಧರಾಗಿದ್ದಂತಹ ವ್ಯಕ್ತಿ ಬ್ರಿಟೀಷರು ನಮ್ಮ ನಾಡಿನ ಜನರನ್ನು ಒತ್ತೆಯಾಳನ್ನಾಗಿಸಿಕೊಳ್ಳಲು ಮುಂದಾದಂತಹ ಸಂದರ್ಭದಲ್ಲಿ ಅವರ ವಿರುದ್ಧ ಹೋರಾಟ ಮಾಡಿ ತಮ್ಮ ಪ್ರಾಣವನ್ನು ಈ ಮಣ್ಣಿಗೆ ಅರ್ಪಿಸಿದಂತಹ ಯೋಧರಾಗಿದ್ದವರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿ ನೆನೆದರು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ಎನ್ ಮಾತನಾಡುತ್ತಾ ಸಂಪೂರ್ಣ ಗಣರಾಜ್ಯ ಎಂದರೆ ಕೇವಲ ಚುನಾವಣೆಗಳಲ್ಲ ಅಥವಾ ಸರ್ಕಾರಗಳ ಬದಲಾವಣೆಯೂ ಅಲ್ಲ. ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ಸಮಾನತೆಯ ಅರಿವು ಬೆಳೆದಾಗ ಮಾತ್ರ ಸಂಪೂರ್ಣ ಗಣರಾಜ್ಯವಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ, ಸಂವಿಧಾನವನ್ನು ಉಳಿಸಬೇಕಾದರೆ ಮೊದಲು ಅದನ್ನು ಒಪ್ಪುವ ಮನಸ್ಸುಗಳನ್ನು ರೂಪಿಸಬೇಕು. ಅಂದಿನ ಸಂಸತ್ತಿನಲ್ಲಿ ಬಾಬಾ ಸಾಹೇಬರು ರಚಿಸಿರುವ ಸಂವಿಧಾನವನ್ನು ಒಪ್ಪಿ ಅದನ್ನು ಅಳವಡಿಸಿಕೊಂಡರೇ ವಿನಃ ತದನಂತರ ನಮ್ಮ ಜನಪ್ರತಿನಿಧಿಗಳು ಕಾಲಕಾಲಕ್ಕೆ ಅದರಲ್ಲಿ ಬಹಳಷ್ಟು ತಿದ್ದುಪಡಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ, ಇಂತಹ ಕಾರ್ಯಗಳು ಮುಂದೆ ಆಗದಂತೆ ಸಂವಿಧಾನಿಕ ಬದ್ಧವಾದ ಗಣತಂತ್ರವು ನಮಗೆ ಸಿಗಬೇಕಿದೆ, ಆದರೂ ನಮ್ಮ ಭಾರತದ ಸಂವಿಧಾನ ಮತ್ತು ಅದಕ್ಕಿರುವ ಶಕ್ತಿಯನ್ನು ಈಡೀ ವಿಶ್ವವವೇ ಕೊಂಡಾಡುತ್ತಿದೆ ಎಂದರು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ರವರು ಮಾತನಾಡುತ್ತಾ ಇಂದು ಯುವಜನತೆ ವಿವಿಧ ಸಿದ್ಧಾಂತಗಳ ಬಲೆಗೆ ಬೀಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಭಾವನಾತ್ಮಕ ಘೋಷಣೆಗಳು, ಧರ್ಮದ ಹೆಸರಿನಲ್ಲಿ ದ್ವೇಷ ಕಾರುವುದು, ಸುಳ್ಳು ರಾಷ್ಟ್ರಭಕ್ತಿ ಇವೆಲ್ಲವೂ ಯುವ ಮನಸ್ಸನ್ನು ಸಂವಿಧಾನದಿಂದ ದೂರ ಕರೆದೊಯ್ಯುತ್ತಿವೆ. ಹೀಗಿರುವಾಗ ಈ ದೇಶವನ್ನು ಸಂಪೂರ್ಣ ಗಣರಾಜ್ಯವನ್ನಾಗಿಸಲು ನಾವು ಯಾವ ಸಿದ್ಧಾಂತವನ್ನು ರೂಢಿಸಿಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಆದ್ದರಿಂದ ನಮ್ಮ ಉದ್ದೇಶ ಸ್ಪಷ್ಟವಾಗಿರಬೇಕು ಜೊತೆಗೆ ನಮ್ಮ ಉದ್ದೇಶಕ್ಕೆ ಬದ್ಧರಾಗಿರಬೇಕು ಆಗಷ್ಟೇ ನಿಜವಾದ ಗಣತಂತ್ರ್ಯವನ್ನು ನಾವು ನೋಡಬಹುದಾಗಿದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ಎನ್, ಗೌರವಧ್ಯಕ್ಷರಾದ ಗೂಳೂರು ರಾಜಣ್ಣ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್, ಮುಖಂಡರುಗಳಾದ ತ್ಯಾಗರಾಜು ಕೆ, ಮೋಯಿನ್ ಅಹಮ್ಮದ್, ನಿರಂಜನ್, ನಟರಾಜು, ಟಿ.ಎನ್.ನರಸಿಂಹಮೂರ್ತಿ, ಮಂಜುನಾಥ್, ಬಕಾಶ್ ಮಹಮ್ಮದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- kolar clock tower. Karnataka1
- Post by ಮಾಗನೂರು ಎಂ ಶಿವಕುಮಾರ್1
- ಮಳವಳ್ಳಿ : ಫಾರಾಜ್ ಖಾದ್ರಿ ಯಂಬ ಓರ್ವ ಇನ್ಸ್ಟಾಗ್ರಾಮ್ ರೀಲ್ ಮುಖ್ಯನ ಬಹಳ ಅದ್ಭುತ ಸಂದೇಶ ನೀಡಿದರೆ, ನಾವು ಭಾರತೀಯರು ಸರಿ ಅಷ್ಟೇ1
- ಕೋಲಾರದಲ್ಲಿ ಹಿಂದೂ ಸಮಾಜೋತ್ಸವದ ಭರ್ಜರಿ ಸಿದ್ಧತೆ: ಮಾಗೇರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ ಕೋಲಾರ: ಇದೇ ಜನವರಿ 31ರಂದು ಕೋಲಾರ ನಗರದಲ್ಲಿ ನಡೆಯಲಿರುವ ಬೃಹತ್ 'ಹಿಂದೂ ಸಮಾಜೋತ್ಸವ' ಹಾಗೂ ಜಿಲ್ಲೆಯಾದ್ಯಂತ ಒಟ್ಟು 28 ಸ್ಥಳಗಳಲ್ಲಿ ಆಯೋಜಿಸಲಾಗಿರುವ ಸಮಾಜೋತ್ಸವ ಕಾರ್ಯಕ್ರಮಗಳನ್ನು ಅಭೂತಪೂರ್ವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಾಗೇರಿ ನಾರಾಯಣಸ್ವಾಮಿ ಅವರು ಇಂದು ವಿನೂತನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ನಗರದ ಟೇಕಲ್ ರಸ್ತೆಯಲ್ಲಿರುವ ತಮ್ಮ ಕಚೇರಿಯ ಮುಂದೆ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಪ್ರಚಾರ ಆರಂಭಿಸಿದ ಅವರು, ಸಮಾಜೋತ್ಸವದ ಜಾಗೃತಿ ಮೂಡಿಸುವ ಸ್ಟಿಕ್ಕರ್‌ಗಳನ್ನು ಮನೆ ಮನೆಗೆ ಹಾಗೂ ಎಲ್ಲಾ ರೀತಿಯ ವಾಹನಗಳಿಗೆ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಗೇರಿ ನಾರಾಯಣಸ್ವಾಮಿ ಅವರು, "ಹಿಂದೂ ಸಮಾಜವನ್ನು ಸಂಘಟಿಸುವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಸಮಾಜೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 28 ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಬ್ಬ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ಕರೆ ನೀಡಿದರು. ಮನೆ-ಮನೆಗೆ ಪ್ರಚಾರ: ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜಿಲ್ಲೆಯ ಮೂಲೆ ಮೂಲೆಗೂ ಸಮಾಜೋತ್ಸವದ ಸಂದೇಶ ತಲುಪಿಸಲು ಪಣ ತೊಟ್ಟಿದ್ದಾರೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಈ ಅಭಿಯಾನದಲ್ಲಿ ಸಹಕರಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. 2
- *ಭಾರತ ನಲ್ಲಿ ವೈರಲ್*1
- ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನೂತನವಾಗಿ ಎಡ್ ಲ್ಯಾಬ್ ಹಾಗೂ ಡಿಜಿಟಲ್ ಕೊಠಡಿಯನ್ನ ನಿರ್ಮಾಣ ಮಾಡಿದ್ದು ಸಚಿವ ಡಿ ಸುಧಾಕರ್ ಅವರು ಆಗಮಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ1
- 77ನೇ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ...ಚಳ್ಳಕೆರೆ ತಾಲ್ಲೂಕ್ ಆಡಳಿತದಿಂದ ಸಂಭ್ರಮದ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.... ನಗರದ ಎಲ್ಲಾ ಸರ್ಕಾರಿ ಕಚೇರಿಗಳು, ತಳಿರು-ತೋರಣ ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ . 77 ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ತಾಲೂಕು ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ನಂತರ ಶಾಸಕಾ ಟಿ .ರಘು ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಬಯಲು ರಂಗ ಮಂದಿರದಲ್ಲಿ ಸಭೆ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಧ್ವಜಾರೋಹಣವನ್ನ ತಾಸಿಲ್ದಾರ್ ರಹಂ ಪಾಷಾ ಅವರು ನೆರವೇರಿಸಲಿದ್ದು. ವಿದ್ಯಾರ್ಥಿಗಳಿಂದ ಪಥಸಂಚಲನ.ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಹಾಗೂ ದೇಶದ ಜನತೆಗೆ ತಾಲೂಕು ಆಡಳಿತ ಗಣರಾಜ್ಯೋತ್ಸವದ ಶುಭಾಶಯಗಳು ತಿಳಿಸಿದೆ......1
- Post by ಮಾಗನೂರು ಎಂ ಶಿವಕುಮಾರ್1