Shuru
Apke Nagar Ki App…
ಮಳವಳ್ಳಿ : ಫಾರಾಜ್ ಖಾದ್ರಿ ಯಂಬ ಓರ್ವ ಇನ್ಸ್ಟಾಗ್ರಾಮ್ ರೀಲ್ ಮುಖ್ಯನ ಬಹಳ ಅದ್ಭುತ ಸಂದೇಶ ನೀಡಿದರೆ, ನಾವು ಭಾರತೀಯರು ಸರಿ ಅಷ್ಟೇ
ಎ.ಏನ್.ಎಸ್ ನ್ಯೂಸ್
ಮಳವಳ್ಳಿ : ಫಾರಾಜ್ ಖಾದ್ರಿ ಯಂಬ ಓರ್ವ ಇನ್ಸ್ಟಾಗ್ರಾಮ್ ರೀಲ್ ಮುಖ್ಯನ ಬಹಳ ಅದ್ಭುತ ಸಂದೇಶ ನೀಡಿದರೆ, ನಾವು ಭಾರತೀಯರು ಸರಿ ಅಷ್ಟೇ
More news from ಕರ್ನಾಟಕ and nearby areas
- ಮಳವಳ್ಳಿ :- ಗಜನೂರ್ ಗ್ರಾಮದ ರಸ್ತೆ ಕಾಮಗಾರಿ ಪ್ರಾರಂಭ ಮಾಡಿ ರೈತರಿಗೆ, ವಿದ್ಯಾರ್ಥಿ ಗಳಿಗೆ ವಾಹನ ಸಂಚಾಲಕರಿಗೆ ಮತ್ತು ದರ್ಗ ಕೆ ಹೋಗುವ ಭಕ್ತರಿಗೆ ಅನುಕೂಲ ವಾಗುತ್ತದೆ ಎಂದು ಮಂಡ್ಯ ಜಿಲ್ಲಾ ಆಪ್ ಯುವ ಘಟಕ ಅಧ್ಯಕ್ಷರು ವಾಸೀಮ್ ರವರು ಸಂಬಂಧ ಪಟ ಅಧಿಕಾರಿಗಳಿಗೆ ಮನವಿ ಮಾಡುತಿದ್ದರೆ1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆಯ ದಾಳಿಯಿಂದ ಹಸುವಿಗೆ ತೀರ್ವವಾಗಿ ಗಾಯವಾಗಿದೆ . ರೈತ ಮಹದೇವಸ್ವಾಮಿಯ ಜಮೀನಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇತ್ತಿಚೆಗೆ, ತಾಳುಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನೊಬ್ಬ ಚಿರತೆಯ ದಾಳಿಯಿಂದ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ, ಸ್ಥಳೀಯರು ಭೀತಿಯಲ್ಲಿ ಇದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಈ ಮಧ್ಯೆ, ಪೊನ್ನಾಚ್ಚಿ ಗ್ರಾಮದಲ್ಲಿ ಮತ್ತೊಂದು ಚಿರತೆಯಿಂದ ಹಸುವಿಗೆ ದಾಳಿ ನಡೆದಿದ್ದು, ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳ ಒತ್ತಾಯ ಮಾಡಿದ್ದಾರೆ.1
- *ಭಾರತ ನಲ್ಲಿ ವೈರಲ್*1
- ಕೋಲಾರದಲ್ಲಿ ಹಿಂದೂ ಸಮಾಜೋತ್ಸವದ ಭರ್ಜರಿ ಸಿದ್ಧತೆ: ಮಾಗೇರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸ್ಟಿಕ್ಕರ್ ಅಭಿಯಾನಕ್ಕೆ ಚಾಲನೆ ಕೋಲಾರ: ಇದೇ ಜನವರಿ 31ರಂದು ಕೋಲಾರ ನಗರದಲ್ಲಿ ನಡೆಯಲಿರುವ ಬೃಹತ್ 'ಹಿಂದೂ ಸಮಾಜೋತ್ಸವ' ಹಾಗೂ ಜಿಲ್ಲೆಯಾದ್ಯಂತ ಒಟ್ಟು 28 ಸ್ಥಳಗಳಲ್ಲಿ ಆಯೋಜಿಸಲಾಗಿರುವ ಸಮಾಜೋತ್ಸವ ಕಾರ್ಯಕ್ರಮಗಳನ್ನು ಅಭೂತಪೂರ್ವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಾಗೇರಿ ನಾರಾಯಣಸ್ವಾಮಿ ಅವರು ಇಂದು ವಿನೂತನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ನಗರದ ಟೇಕಲ್ ರಸ್ತೆಯಲ್ಲಿರುವ ತಮ್ಮ ಕಚೇರಿಯ ಮುಂದೆ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಪ್ರಚಾರ ಆರಂಭಿಸಿದ ಅವರು, ಸಮಾಜೋತ್ಸವದ ಜಾಗೃತಿ ಮೂಡಿಸುವ ಸ್ಟಿಕ್ಕರ್‌ಗಳನ್ನು ಮನೆ ಮನೆಗೆ ಹಾಗೂ ಎಲ್ಲಾ ರೀತಿಯ ವಾಹನಗಳಿಗೆ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಗೇರಿ ನಾರಾಯಣಸ್ವಾಮಿ ಅವರು, "ಹಿಂದೂ ಸಮಾಜವನ್ನು ಸಂಘಟಿಸುವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಸಮಾಜೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 28 ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಬ್ಬ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ಕರೆ ನೀಡಿದರು. ಮನೆ-ಮನೆಗೆ ಪ್ರಚಾರ: ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜಿಲ್ಲೆಯ ಮೂಲೆ ಮೂಲೆಗೂ ಸಮಾಜೋತ್ಸವದ ಸಂದೇಶ ತಲುಪಿಸಲು ಪಣ ತೊಟ್ಟಿದ್ದಾರೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಈ ಅಭಿಯಾನದಲ್ಲಿ ಸಹಕರಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. 2
- ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನೂತನವಾಗಿ ಎಡ್ ಲ್ಯಾಬ್ ಹಾಗೂ ಡಿಜಿಟಲ್ ಕೊಠಡಿಯನ್ನ ನಿರ್ಮಾಣ ಮಾಡಿದ್ದು ಸಚಿವ ಡಿ ಸುಧಾಕರ್ ಅವರು ಆಗಮಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ1
- ಭದ್ರಾವತಿ: ಭಾರತದ ಸಂವಿಧಾನ ಭಾರತೀಯರಾದ ನಮ್ಮೆಲ್ಲರಿಗೂ ಪವಿತ್ರ ವಾದ ಗ್ರಂಥವಾಗಿದ್ದು, ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನವು ಸಮಾನ ಅವಕಾಶ,ಹಕ್ಕುಗಳನ್ನುನೀಡಿದೆ. ಗಣರಾಜ್ಯೋತ್ಸವವೆನ್ನುವುದು ಭಾರತೀಯ ರಾದ ನಮಗೆ ಪವಿತ್ರವಾದ ರಾಷ್ಟ್ರೀಯ ಹಬ್ಬವಾಗಿದೆ ಎಂದು ತಹಶೀಲ್ದಾರ್ ಪರಸಪ್ಪ ಕುರುಬರ ಹೇಳಿದರು. ಅವರು ಸೋಮವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧ ರಾಜ್ಯಗಳನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸಿ ರಚಿಸಲಾದ ಭಾರತ ದೇಶದಲ್ಲಿ ಗಣರಾಜ್ಯೋತ್ಸವವನ್ನು ಎಲ್ಲರೂ ಶಾಂತಿ,ಸೌಹಾರ್ಧತೆ,ಪ್ರೀತಿಯೀಂದ ಬಾಳುತ್ತಿದ್ದು ಇದು ವಿಶ್ವಕ್ಕೇ ಮಾದರಿ ಯಾಗಿದೆ ಎಂದರು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೆಶ್ವರ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂದೀಜಿ ಹೆಸರನ್ನೇ ಕೇಂದ್ರಸರ್ಕಾರದವರು ನರೇಗಾದಿಂದ ಗಾಂಧೀ ಹೆಸರನ್ನು ಕೈಬಿಟ್ಟು ಗಾಂಧೀ ಹೆಸರನ್ನು ಇಲ್ಲವಾಗಿಸುವ ಪ್ರಯತ್ನಮಾಡಿದ್ದಾರೆ. ಇತಂಹವರು ಅಧಿಕಾರದಲ್ಲಿ ಮುಂದುವರೆದರೆ ಇವರು ಮುಂದೆ ಸಂವಿಧಾನವನ್ನೇ ಬದಲಾಯಿಸ ಬಹುದು ಆದ್ದರಿಂದ ಎಲ್ಲರೂ ಎಚ್ಚರಿಕೆ ಯಿಂದ ಸಂವಿಧಾನದ ರಕ್ಷಣೆಗೆ ಆಧ್ಯತೆ ನೀಡಬೇಕು ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಪ್ರಾಸ್ಥಾವಿಕನುಡಿಗಳನ್ನಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್ ಸಂಗಡಿಗರು ನಾಡಗೀತೆ,ರೈತಗೀತೆ ಹಾಡಿದರು. ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಭೋಧಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಗರದಲ್ಲಿ ನಡೆದ ದಂಪತಿಗಳ ಜೋಡಿ ಕೊಲೆಯನ್ನು 24ಗಂಟೆಯಲ್ಲಿ ಬೇಧಿಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಡಿವೈಎಸ್ಪಿ ಪ್ರಕಾಶ್ ರಾಠೋಡ್, ನಗರ ವೃತ್ತನಿರೀಕ್ಷಕಿ ನಾಗಮ್ಮ ಹಾಗೂ ಹಳೇನಗರ ಪೋಲಿಸ್ ಠಾಣೆಯ ಪಿಎಸ್ ಐ ಸುನೀಲ್ ಬಸವರಾಜ್ ತೇಲಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನಗರಸಭಾಧ್ಯಕ್ಷೆ ಗೀತಾರಾಜಕುಮಾರ್,ಉಪಾಧ್ಯಕ್ಷ ಬಷೀರ್, ಸ್ಥಾಯಿಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಅಹಮದ್, ನಗರಸಬಾ ಸದಸ್ಯರುಗಳು, ಪೌರಾಯುಕ್ತ ಹೇಮಂತ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಆಶಾ, ಗ್ರಾಮಾಂತರ ವೃತ್ತನಿರೀಕ್ಷಕ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು. ತ ತಹಶೀಲ್ದಾರ್ ಹಾಗೂ ಶಾಸಕರು ಪೋಲಿಸ್ ತಂಡ,ಗೃಹರಕ್ಷಕದಳ, ಶಾಲಾಮಕ್ಕಳ ವಾದ್ಯತಂಡದ ಧ್ವಜವಂದನೆ ಸ್ವೀಕರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನರ್ತಿಸಿ ರಂಜಿಸಿದರು.1
- Post by ಮಾಗನೂರು ಎಂ ಶಿವಕುಮಾರ್1
- ಹನೂರು ಪಟ್ಟಣದಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟಾರೆ 13 ಮಂದಿ ಪಶುಪಾಲಕರು ಭಾಗವಹಿಸಿದ್ದರು. ಈ ವೇಳೆ ಬಹುಪಾಲು ಮಂದಿ ಯುವ ರೈತರು ಭಾಗವಹಿಸಿ ಗಮನಸೆಳೆದರು ಈ ಸ್ಪರ್ಧೆಯಲ್ಲಿ ತೋಮಿಯರ್ ಪಾಳ್ಯ ಪತ್ತಿನಾಥನ್ ಅವರು 33.65 ಲೀಟರ್ ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ನಂಜೇಗೌಡನದೊಡ್ಡಿ ಗ್ರಾಮದ ಶಿವಮೂರ್ತಿ ಅವರು 32.58 ಲೀಟರ್ ಹಾಲು ಕರೆಯುವ ಮೂಲಕ ದ್ವೀತಿಯ ಬಹಾನ ಪಡೆದರು ತೃತೀಯ ಬಹುಮಾನವನ್ನು ಬಿ. ಗುಂಡಾಪುರದ ಆನಂದ್ ಕುಮಾರ್ ಅವರು 29.28 ಲೀಟರ್ ಹಾಲು ಕರೆಯುವ ಮೂಲಕ ಪಡೆದರು. ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಉಪಸ್ಥಿತರಿದ್ದರು. ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಸೇರಿದಂತೆ ನಿರ್ದೇಶಕರಾದ ಉದ್ದನೂರು ಪ್ರಸಾದ್, ಶಾಹುಲ್ ಅಹಮದ್ ಭಾಗವಹಿಸಿದ್ದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹಾಗೂ ಪಶುವೈದ್ಯಾಧಿಕಾರಿ ಡಾ. ಸಿದ್ದರಾಜು ಉಪಸ್ಥಿತರಿದ್ದು ಸ್ಪರ್ಧಾರ್ಥಿಗಳಿಗೆ ಶುಭಾಶಯ ಕೋರಿದರು.1
- *ಭಾರತ ನಲ್ಲಿ ವೈರಲ್*1