Shuru
Apke Nagar Ki App…
ಪೊನ್ನಾಚ್ಚಿ ಗ್ರಾಮದಲ್ಲಿ ಚಿರತೆ ಹಸುವಿಗೆ ತೀರ್ವ ಪೆಟ್ಟು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆಯ ದಾಳಿಯಿಂದ ಹಸುವಿಗೆ ತೀರ್ವವಾಗಿ ಗಾಯವಾಗಿದೆ . ರೈತ ಮಹದೇವಸ್ವಾಮಿಯ ಜಮೀನಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇತ್ತಿಚೆಗೆ, ತಾಳುಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನೊಬ್ಬ ಚಿರತೆಯ ದಾಳಿಯಿಂದ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ, ಸ್ಥಳೀಯರು ಭೀತಿಯಲ್ಲಿ ಇದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಈ ಮಧ್ಯೆ, ಪೊನ್ನಾಚ್ಚಿ ಗ್ರಾಮದಲ್ಲಿ ಮತ್ತೊಂದು ಚಿರತೆಯಿಂದ ಹಸುವಿಗೆ ದಾಳಿ ನಡೆದಿದ್ದು, ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳ ಒತ್ತಾಯ ಮಾಡಿದ್ದಾರೆ.
ಹನೂರು ನ್ಯೂಸ್ ಅಡ್ಡ
ಪೊನ್ನಾಚ್ಚಿ ಗ್ರಾಮದಲ್ಲಿ ಚಿರತೆ ಹಸುವಿಗೆ ತೀರ್ವ ಪೆಟ್ಟು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆಯ ದಾಳಿಯಿಂದ ಹಸುವಿಗೆ ತೀರ್ವವಾಗಿ ಗಾಯವಾಗಿದೆ . ರೈತ ಮಹದೇವಸ್ವಾಮಿಯ ಜಮೀನಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇತ್ತಿಚೆಗೆ, ತಾಳುಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನೊಬ್ಬ ಚಿರತೆಯ ದಾಳಿಯಿಂದ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ, ಸ್ಥಳೀಯರು ಭೀತಿಯಲ್ಲಿ ಇದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಈ ಮಧ್ಯೆ, ಪೊನ್ನಾಚ್ಚಿ ಗ್ರಾಮದಲ್ಲಿ ಮತ್ತೊಂದು ಚಿರತೆಯಿಂದ ಹಸುವಿಗೆ ದಾಳಿ ನಡೆದಿದ್ದು, ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳ ಒತ್ತಾಯ ಮಾಡಿದ್ದಾರೆ.
More news from Chamarajanagara and nearby areas
- ತುರ್ತು ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದ ಶಾಸಕ ಎಂ. ಆರ್ ಮಂಜುನಾಥ್ ರವರು.. ಹನೂರು ಜ 26 :- ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ನಮ್ಮ ಹನೂರು ಕ್ಷೇತ್ರಕ್ಕೆ ಆಂಬುಲೆನ್ಸ್ ಗಳ ಸೇವೆ ಅವಶ್ಯಕತೆ ಇದ್ದು ಇದೀಗ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉತ್ತಮ ವಾಹನ ಕೊಡುತ್ತಿದ್ದೂ ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು. ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನೂತನ ಆಂಬುಲೆನ್ಸ್ ವಾಹನವನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಿ ನಂತರ ಮಾತನಾಡಿ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಗಳ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಹಾಗಾಗಿಯೇ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್ ಗಳ ಜೊತೆಗೆ ಯಾವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಗಳ ಅನಿವಾರ್ಯತೆ ಇದೆ ಎಂಬುದನ್ನು ಅರಿತು ಇದೀಗ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನ ಆಂಬುಲೆನ್ಸ್ ಅನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಒಳ್ಳೆಯ ಸೇವೆ ಇದರಿಂದ ಸಿಗಲಿ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ಇದರ ಸದುಪಯೋಗವಾಗಲಿ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಎಲ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೂ ಸಹ ಸ್ವಂತ ಆಂಬುಲೆನ್ಸ್ ನೀಡುವ ಕುರಿತು ಈಗಾಗಲೇ ಚಿಂತನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಸಹ ಸ್ವಂತ ಆಂಬುಲೆನ್ಸ್ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಆರೋಗ್ಯದ ಹಿತಾ ದೃಷ್ಟಿಯಿಂದ ಅಪಘಾತದ ಸಂದರ್ಭದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಅವರಿಗೆ ಅನುಕೂಲವಾಗುವಂತಹ ವಾಹನ ವ್ಯವಸ್ಥೆ ಕಲ್ಪಿಸಲು ಸದಾ ಸಿದ್ಧನಿದ್ದೇನೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಮಾತನಾಡಿ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ರಾಮಾಪುರ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ನೀಡಿರುವುದು ತುಂಬಾ ಉಪಯೋಗವಾಗಲಿದೆ. ಆಂಬುಲೆನ್ಸ್ ಕೊರತೆ ಬಗ್ಗೆ ನಾವು ಈಗಾಗಲೇ ಹಿರಿಯ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ಸಹಾ ತಂದಿದ್ದೆವು. ಹಂತ ಹಂತವಾಗಿ ಆಂಬುಲೆನ್ಸ್ ಕೊರತೆ ನೀಗಿಸಲು ಶಾಸಕರು ಮತ್ತೆ ಹಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು. ಇದೆ ಸಂದರ್ಭದಲ್ಲಿ ತಹಶಿಲ್ದಾರ್ ಚೈತ್ರ, ತಾಲೂಕು ಪಂಚಾಯಿತಿ ಇ.ಓ ಉಮೇಶ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ , ಡಾII ಪ್ರಕಾಶ್ , ರಾಮಾಪುರ ವೈದ್ಯಧಿಕಾರಿ ಡಾII ಮನು , ಆಶಾ ಕಾರ್ಯಕರ್ತೆಯರು, ಹಾಗೂ ಇತರರು ಇದ್ದರು.2
- ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಎಂ. ಆರ್ ಮಂಜುನಾಥ್ ರವರು ಭಾಗವಹಿಸಿ ಮಾತನಾಡಿದರು. 2024/25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಸನ್ಮಾನಿಸಿ ಗೌರವಿಸಿ ಸರ್ಕಾರದ ವತಿಯಿಂದ ಐವತ್ತು ಸಾವಿರದ ನಗದು ಬಹುಮಾನದ ಚೆಕ್ ನ್ನು ವಿತರಣೆ ಮಾಡಿದರು.. ತಾಲೂಕು ದಂಡಧಿಕಾರಿ ಚೈತ್ರಾ,ಇಓ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್,ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ರೇಖಾ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಚಪ್ಪ,ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಮೂರ್ತಿ,ಮುಖ್ಯ ಭಾಷಣಕರರಾದ ಸತೀಶ್,ಹಾಗೂ ಇನ್ನಿತರ ಇದ್ದರು..3
- Post by ಮಾಗನೂರು ಎಂ ಶಿವಕುಮಾರ್1
- ಮಳವಳ್ಳಿ : ಫಾರಾಜ್ ಖಾದ್ರಿ ಯಂಬ ಓರ್ವ ಇನ್ಸ್ಟಾಗ್ರಾಮ್ ರೀಲ್ ಮುಖ್ಯನ ಬಹಳ ಅದ್ಭುತ ಸಂದೇಶ ನೀಡಿದರೆ, ನಾವು ಭಾರತೀಯರು ಸರಿ ಅಷ್ಟೇ1
- ಹನೂರು :ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77 ನೇ ಗಣರೋಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿದರು. ನಂತರ ತಾಲೂಕಿನ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರ ಅನುದಾನದಿಂದ ನೂತನ ಆಂಬುಲೆನ್ಸ್ ನೀಡಿ, ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ, ನಂತರ ವಾಹನ ಚಾಲನೆ ಮಾಡಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ವೈದ್ಯಧಿಕಾರಿ ಡಾ. ಪ್ರಕಾಶ್, ತಹಸೀಲ್ದಾರ್ ಚೈತ್ರ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ರಾಚಾಯ್ಯ, ಇನ್ಸ್ಪೆಕ್ಟರ್ ಆನಂದ್ ಮೂರ್ತಿ,ಡಾ. ಮನು, ಮಂಜುನಾಥ್, ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಇದ್ದರು.4
- *ಭಾರತ ನಲ್ಲಿ ವೈರಲ್*1
- kolar clock tower. Karnataka1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆಯ ದಾಳಿಯಿಂದ ಹಸುವಿಗೆ ತೀರ್ವವಾಗಿ ಗಾಯವಾಗಿದೆ . ರೈತ ಮಹದೇವಸ್ವಾಮಿಯ ಜಮೀನಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇತ್ತಿಚೆಗೆ, ತಾಳುಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನೊಬ್ಬ ಚಿರತೆಯ ದಾಳಿಯಿಂದ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ, ಸ್ಥಳೀಯರು ಭೀತಿಯಲ್ಲಿ ಇದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಈ ಮಧ್ಯೆ, ಪೊನ್ನಾಚ್ಚಿ ಗ್ರಾಮದಲ್ಲಿ ಮತ್ತೊಂದು ಚಿರತೆಯಿಂದ ಹಸುವಿಗೆ ದಾಳಿ ನಡೆದಿದ್ದು, ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳ ಒತ್ತಾಯ ಮಾಡಿದ್ದಾರೆ.1