Shuru
Apke Nagar Ki App…
ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.
JB NEWS ಕನ್ನಡ
ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.
More news from Karnataka and nearby areas
- ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.1
- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಮೆಂಡಾ ಮಲ್ಲಿಕ್ ನನ್ನು ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳ ಪೈಕಿ ಪ್ರಜ್ವಲ್ ನೆಟ್ಟೂರು ಎಂಬಾತ ಪೊಲೀಸ್ ವಿಚಾರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ. ಆತನನ್ನು ಪತ್ತೆ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಇನ್‌ಸ್ಪೆಕ್ಟರ್ ಎಸ್ ಆರ್ ನಾಯಕ್ ಸಕ್ಸಸ್ ಆಗಿದ್ದಾರೆ. 2025ರ ಡಿಸೆಂಬರ್ 13 ರಂದು ಮಂಟೂರು ರಸ್ತೆಯಲ್ಲಿ ಮೆಡಿಕಲ್ ಮುಂದೆ ನಿಂತಿದ್ದ ಮೆಂಡಾ ಮಲ್ಲಿಕ್ ಮೇಲೆ ಮೇಲೆ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಕೂಡ ಇದೇ ಪ್ರಜ್ವಲ್ ಆಗಿದ್ದ. ಮಲ್ಲಿಕ್ ಕೊಲೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಜನ ಜೈಲು ಪಾಲಾದ್ರು ಕೂಡ ಜೈಲಿನಲ್ಲಿ ಪ್ರಜ್ವಲ್ ಮತ್ತು ಬಂಗಾರ ಬಾಲ್ಯಾ ಕಿರಿಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್ ಹಾಗೂ ಬಂಗಾರ ಬಾಲ್ಯಾನನ್ನು ವಿಜಯಪುರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ಮಾಡುವ ಸಲುವಾಗಿ ವಿಜಯಪುರ ಜೈಲಿಂದ ಇಬ್ಬರನ್ನು ತಂದು ವಿಚಾರಣೆ ನಡೆಸೋ ವೇಳೆ ಪ್ರಜ್ವಲ್ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೆಪ್ ಆಗಿದ್ದ. ಹೀಗಾಗಿ ಈತನನ್ನು ಬಂಧನ ಮಾಡುವ ಸಲುವಾಗಿ ವಿಶೇಷ ತಂಡ ರಚನೆ ಕೂಡ ಮಾಡಲಾಗಿತ್ತು. ಆದರೆ ಆರೋಪಿ ಮೊಬೈಲ್ ಬಳಸದೆ ಇರೋದ್ರಿಂದ ಈತನನ್ನು ಪತ್ತೆ ಮಾಡೋದು ಪೊಲೀಸರಿಗೆ ತುಂಬಾ ಕಷ್ಟವಾಗಿತ್ತು. ಆದರೂ ಕೂಡ ಹಗಲು ರಾತ್ರಿ ಎನ್ನದೇ ಬೆಂಡಿಗೇರಿ ಠಾಣೆಯ ಪೊಲೀಸರು ಮಂಟೂರು ಹೊರವಲಯದ ಬಳಿ ಆರೋಪಿ ಬಂದಿರೋ ಮಾಹಿತಿ ಗೊತ್ತಾಗಿ ಇನ್‌ಸ್ಪೆಕ್ಟರ್ ನಾಯಕ್ ನೇತೃತ್ವದ ಟೀಮ್ ಪ್ರಜ್ವಲ್ ನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.1
- Post by Tippanna f laxmeshwar2
- ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 2472
- ಶಿಗ್ಗಾಂವಿ, ಮೂಡನಂಬಿಕೆ, ಲಿಂಗತಾರತಮ್ಯ, ಮೌಢ್ಯಗಳನ್ನು ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರು ಪ್ರಮುಖರಾದವರು ಎಂದು ಶಿವಮೊಗ್ಗ ಎಸ್.ಆರ್.ಎನ್.ಎಮ್.ಎನ್ ಕಾಲೇಜ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮಣ ಕೆ. ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಜಗದ್ಗುರು ಶ್ರೀ ವಿಶ್ವಬಂದು ಮರುಳಸಿದ್ದರ ಜಯಂತಿ ಆಚರಣೆಯಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರರ ಜೀವನದ ಕುರಿತು ಉಪನ್ಯಾಸ ನೀಡಿದರು. ರೇವಣಸಿದ್ಧರ ಶಿಷ್ಯರಾದ ಮರುಳಸಿದ್ಧರು, ಹಿಂಸಾತ್ಮಕ ಆಚರಣೆಗಳನ್ನು ಬಲವಾಗಿ ವಿರೋಧಿಸಿ, ಲೋಕದಲ್ಲಿರುವವರೆಲ್ಲರ ಬಾಳು ತರಳಾಗಲು ನಾಡಿನಾದ್ಯಂತ ಸಂಚರಿಸಿ, ತರಳಬಾಳು ಸಂಸ್ಥಾನದ ಸಂಸ್ಥಾಪಕರಾಗಿದ್ದಾರೆ ಎಂದರು. ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಾತಿ ಜಾತಿಗಳ ಮಧ್ಯೆ ಇರುವ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ವರೆಗೂ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. ಮರುಳಸಿದ್ಧರು ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿ ಮಾರ್ಗವನ್ನು ಪ್ರಚುರಪಡಿಸಿ, ಮೇಲು-ಕೀಳು, ಜಾತಿ ಭೇದಗಳನ್ನು ವಿರೋಧಿಸಿ, ಮಾನವತಾವಾದದ ತತ್ವವನ್ನು ಎತ್ತಿ ಹಿಡಿದವರಲ್ಲಿ ಮರುಳಸಿದ್ಧರು ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಾದಿ ಶರಣರಂತೆ ಮರುಳಸಿದ್ಧರು ಪ್ರಮುಖರಾಗಿದ್ದಾರೆ ಆದರೆ ಎಲೆಮರೆ ಕಾಯಿಯಂತೆ ಕಣ್ಮರೆಯಾಗಿರುವುದು ಬೇಸರಿಸದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮರುಳಸಿದ್ದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರಾದ ಕೆ.ಡಿ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎಂ.ಮುಳಗುಂದ, ಪ್ರಭುಗೌಡ ತೆಂಬದಮನಿ, ಹಿರೇಗೌಡ ಪಾಟೀಲ, ಶಶಿಕಾಂತ ರಾಠೋಡ, ಸಿ.ಡಿ.ಯತ್ನಳ್ಳಿ, ಮಾನಪ್ಪ ಕಮ್ಮಾರ, ಬಸವರಾಜ ಬಸರಿಕಟ್ಟಿ, ಉಷಾ ಪಾಟೀಲ ಸೇರಿದಂತೆ ಇತರರಿದ್ದರು.4
- Post by Mayur TV Hangal YouTube c1
- ಯೋಗೀಶಗೌಡ ಗೌಡರ ಕೊಲೆ ಆರೋಪದಡಿ ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ A5 ಅಪರಾಧಿ ವಿನಾಯಕ ಕಟಗಿಯನ್ನು ನೆನೆದು ಅವರ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ವಿನಾಯಕ A5 ಆರೋಪಿಯಾಗಿದ್ದ. ಈ ಪ್ರಕರಣ ಸಿಬಿಐಗೆ ವರ್ಗಾವಣೆಯಾಗುತ್ತಿದ್ದಂತೆ ವಿನಾಯಕ ಒಳಗೊಂಡಂತೆ ಒಟ್ಟು 21 ಜನರ ಮೇಲೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್ ಆಧರಿಸಿ ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿದೆ ಒಟ್ಟು 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ ವಿನಾಯಕ ಕಟಗಿ ಕೂಡ ಇದ್ದಾನೆ. ಇದೀಗ ತಮ್ಮ ಮಗ ಶಿಕ್ಷೆಗೆ ಗುರಿಯಾಗಿರುವುದಕ್ಕೆ ಅವರ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದಾರೆ. ರಾಜಕೀಯ ಷಡ್ಯಂತ್ರದಿಂದ ವಿನಯ ಕುಲಕರ್ಣಿ ಅವರನ್ನೂ ಇದರಲ್ಲಿ ಸಿಕ್ಕಿ ಹಾಕಿಸಲಾಗಿದೆ ಎಂದು ಪಾಲಕರು ತಮ್ಮ ಅಳಲು ತೋಡಿಕೊಂಡರು.1