logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪ್ರಾಮಾಣಿಕ ಅಧಿಕಾರಿಗಳಿಗೆ ಲೋಕಾಯುಕ್ತದ ಬೆಂಬಲವಿದೆ ಯಾವುದೇ ಚಿಂತೆ‌ಬೇಡ ಮಂಡ್ಯ-ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆಯಾಗಿದ್ದು, ಯಾರ ಒತ್ತಡಕ್ಕೂ ಒಳಗಾಗದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಕರ್ತವ್ಯಲೋಪ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಮಂಡ್ಯ ಜಿಲ್ಲೆಯ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ ಎಂಬುದಕ್ಕಿಂತಲೂ ಇಲ್ಲಿನ ಜನರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ಗೌರವವಿದೆ. ಆದರೆ ಜನರಿಗೆ ಅನ್ಯಾಯ ಮಾಡುವ, ಮೋಸ ಮಾಡುವ ಅಥವಾ ಭ್ರಷ್ಟಾಚಾರದಲ್ಲಿ ತೊಡಗುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಲೋಕಾಯುಕ್ತರು ಹೇಳಿದರು. ಸರ್ಕಾರಿ ಭೂಮಿ ಮತ್ತು ಸಾರ್ವಜನಿಕ ಆಸ್ತಿಗಳ ಅಕ್ರಮ ಬಳಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಅಕ್ರಮ ಮಂಜೂರಾತಿ, ಸುಳ್ಳು ದಾಖಲೆಗಳು, ಕಾನೂನುಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ಪಡೆಯುವ ಪ್ರಯತ್ನಗಳು ಕಂಡುಬಂದರೆ ಅವುಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಅಧಿಕಾರ ಶಾಶ್ವತವಲ್ಲ. ಇಂದು ಅಧಿಕಾರದಲ್ಲಿರುವವರು ನಾಳೆ ಸಾಮಾನ್ಯ ನಾಗರಿಕರಾಗಬಹುದು. ಹೀಗಾಗಿ ಅಧಿಕಾರಿಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕು. ಅಧಿಕಾರಕ್ಕಿಂತ ಜನರ ವಿಶ್ವಾಸ ದೊಡ್ಡದು ಎಂದು ಅವರು ಹೇಳಿದರು. ಜನರು ದೂರು ನೀಡಿದಾಗ ಅದನ್ನು ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸಬೇಕು. ಲೋಕಾಯುಕ್ತ ಸಂಸ್ಥೆಗೆ ದೂರು ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಕರ್ತವ್ಯಲೋಪ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಕೇವಲ ಲೋಕಾಯುಕ್ತ ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತರು ಹೇಳಿದರು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಬೆಂಬಲಕ್ಕೆ ಲೋಕಾಯುಕ್ತ ಸಂಸ್ಥೆ ಸದಾ ನಿಲ್ಲಲಿದೆ ಎಂದು ಲೋಕಾಯುಕ್ತರು ಹೇಳಿದರು. ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೇ ಭಯಪಡುವ ಅಗತ್ಯವಿಲ್ಲ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಎದುರಿಸಲು ಲೋಕಾಯುಕ್ತ ಸಂಸ್ಥೆ ನೆರವಾಗಲಿದೆ. ಆದರೆ ಕರ್ತವ್ಯಲೋಪ, ಭ್ರಷ್ಟಾಚಾರ ಅಥವಾ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು. *ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ* ನಿಮ್ಮ ಬೆನ್ನಿಗೆ ಲೋಕಾಯುಕ್ತ ಸಂಸ್ಥೆ ಇರುತ್ತದೆ. ಆದರೆ ತಪ್ಪು ಮಾಡಿದರೆ ಯಾರನ್ನೂ ಬಿಡುವುದಿಲ್ಲ” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದರು. ತಾಲೂಕು ಮಟ್ಟದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ಜನಸೇವೆಯನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದರು. *ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ* ಕೆರೆ-ಕಟ್ಟೆಗಳ ಒತ್ತುವರಿ ಹಾಗೂ ಅಕ್ರಮ ನಿರ್ಮಾಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ಇಂದು ಕೆರೆಗಳನ್ನು ಒತ್ತುವರಿ ಮಾಡಿ ಮುಚ್ಚಿದರೆ ನಾಳೆ ನಮ್ಮ ಮಕ್ಕಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ” ಎಂದು ಎಚ್ಚರಿಸಿದರು. ಕೆರೆಗಳು ಮತ್ತು ಜಲಮೂಲಗಳನ್ನು ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು. ನಗರೀಕರಣದ ಹೆಸರಿನಲ್ಲಿ ಕೆರೆಗಳನ್ನು ನಾಶಪಡಿಸಿದರೆ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಸಮಾಜವೇ ಎದುರಿಸಬೇಕಾಗುತ್ತದೆ ಎಂದರು. ಕೆಂಪೇಗೌಡರ ಕಾಲದಲ್ಲಿ ಬೆಂಗಳೂರಿನಲ್ಲಿ ಇದ್ದ ಕೆರೆಗಳ ಸಂಖ್ಯೆ ಹಾಗೂ ಇಂದಿನ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳನ್ನು ನಾಶಪಡಿಸುವ ಪ್ರವೃತ್ತಿ ಆತಂಕಕಾರಿ. ಕಾಂಕ್ರೀಟ್ ಕಾಡಿನ ನಡುವೆ ಜಲಮೂಲಗಳನ್ನು ಉಳಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ವರ್ಗಾವಣೆ ಸೇರಿದಂತೆ ಯಾವುದೇ ಒತ್ತಡಕ್ಕೆ ಹೆದರಬೇಕಿಲ್ಲ. ಜನರ ಹಿತದೃಷ್ಟಿಯಿಂದ ನಿಯಮಾನುಸಾರ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯ ಬೆಂಬಲವಿದೆ ಎಂದರು. ಅದೇ ವೇಳೆ ಭ್ರಷ್ಟಾಚಾರ, ಕರ್ತವ್ಯಲೋಪ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. “ನಾನು ಯಾರನ್ನೂ ಬಿಡುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ರಕ್ಷಣೆ, ತಪ್ಪು ಮಾಡುವವರಿಗೆ ಕಾನೂನು ಕ್ರಮ” ಎಂಬ ನಿಲುವು ಲೋಕಾಯುಕ್ತ ಸಂಸ್ಥೆಯದ್ದಾಗಿದೆ ಎಂದು ತಿಳಿಸಿದರು. *ಸೈನಿಕರ ತ್ಯಾಗ ಮರೆಯಬಾರದು* ದೇಶದ ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಅವರ ತ್ಯಾಗದಿಂದಲೇ ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸೈನಿಕರ ತ್ಯಾಗವನ್ನು ಪ್ರತಿಯೊಬ್ಬ ನಾಗರಿಕರೂ ಸ್ಮರಿಸಬೇಕು ಎಂದರು. ದೇಶದ ಭದ್ರತೆಗೆ ಬಾಹ್ಯ ಶತ್ರುಗಳಷ್ಟೇ ಅಲ್ಲ, ಸಮಾಜದೊಳಗಿನ ಭ್ರಷ್ಟಾಚಾರವೂ ದೊಡ್ಡ ಅಪಾಯವಾಗಿದೆ. ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಬೆಳೆಸಿದರೆ ದೇಶದ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. *ಪ್ರಾಮಾಣಿಕತೆಯ ಅನ್ನವೇ ನೆಮ್ಮದಿ ಕೊಡುತ್ತದೆ* ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತು ಮತ್ತು ಆದಾಯದಿಂದ ಬದುಕುವ ಜೀವನವೇ ನೆಮ್ಮದಿಯ ಜೀವನ. ಅನ್ಯಾಯದ ಮೂಲಕ ಗಳಿಸಿದ ಹಣದಿಂದ ಕುಟುಂಬವನ್ನು ಪೋಷಿಸಿದರೆ ಆ ಹಣ ನೆಮ್ಮದಿಯನ್ನು ನೀಡುವುದಿಲ್ಲ ಎಂದು ಲೋಕಾಯುಕ್ತರು ಹೇಳಿದರು. ಸರ್ಕಾರಿ ನೌಕರರು ತಮ್ಮ ಆದಾಯಕ್ಕೆ ಹೋಲಿಕೆಯಾಗದ ರೀತಿಯಲ್ಲಿ ಆಸ್ತಿ ಸಂಪಾದಿಸಿದರೆ ಅದರ ಮೂಲದ ಬಗ್ಗೆ ಪರಿಶೀಲನೆ ನಡೆಯಬೇಕು. ಕುಟುಂಬದ ಸದಸ್ಯರೂ ಅಕ್ರಮ ಸಂಪತ್ತಿನ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. “ಪ್ರಾಮಾಣಿಕವಾಗಿ ಗಳಿಸಿದ ಅನ್ನವೇ ನೆಮ್ಮದಿ ಕೊಡುತ್ತದೆ; ಅನ್ಯಾಯದ ಹಣದಿಂದ ಬಂದ ಸಂಪತ್ತು ನೆಮ್ಮದಿ ನೀಡುವುದಿಲ್ಲ” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳು ಹಾಗೂ ಉಪ ನಿಬಂಧಕರಾದ ಅರವಿಂದ್ ಎನ್. ವಿ. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎಂ. ಆನಂದ್, ಜಿಲ್ಲಾಧಿಕಾರಿಗಳಾದ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ. ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ. ವಿ. ಜೆ. ಶೋಭರಾಣಿ, ಅಪರ ಜಿಲ್ಲಾಧಿಕಾರಿಗಳಾದ ಬಿ. ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸತ್ಯಾನಂದ್ ರವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

1 hr ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•

More news from ಕರ್ನಾಟಕ and nearby areas
  • ಮಂಡ್ಯ ಹುಡುಗಿ ಬಿಗ್ ಬಾಸ್ ಗೆದ್ದು ಬರಲಿ ಒಟ್ ಮಾಡಿ ಪೂರ್ಣಿಮಾ ಪರ‌ ಪ್ರಚಾರ ಮಂಡ್ಯ- ಬಿಗ್ ಬಾಸ್ ಸ್ಪರ್ಧೆಯಲ್ಲಿ ಸದ್ದು ಮಾಡುತ್ತಿರುವ ಮಂಡ್ಯದ ಗೌಡಗೆರೆ ಗ್ರಾಮದ ಪೂರ್ಣಿಮಾ ಮದ್ದೂರು ಕೆಎಸ್ ಆರ್‌ಟಿಸಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ಜಿಯೋ ಹಾಟ್ ಸ್ಟಾರ್‌ನಲ್ಲಿ ಪೂರ್ಣಿಮಾಗೆ ಒಟುಹಾಕಿ ಅಭಿಯಾನ ಶುರುವಾಗಿದ್ದು ಕನ್ನಡಪರ ಹೋರಾಟಗಾರ ನಾಗಣ್ಣ ಮನವಿ ಮಾಡಿದ್ರು.
    1
    ಮಂಡ್ಯ ಹುಡುಗಿ ಬಿಗ್ ಬಾಸ್ ಗೆದ್ದು ಬರಲಿ ಒಟ್ ಮಾಡಿ ಪೂರ್ಣಿಮಾ ಪರ‌ ಪ್ರಚಾರ
ಮಂಡ್ಯ- ಬಿಗ್ ಬಾಸ್ ಸ್ಪರ್ಧೆಯಲ್ಲಿ ಸದ್ದು ಮಾಡುತ್ತಿರುವ ಮಂಡ್ಯದ ಗೌಡಗೆರೆ ಗ್ರಾಮದ ಪೂರ್ಣಿಮಾ ಮದ್ದೂರು ಕೆಎಸ್ ಆರ್‌ಟಿಸಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ಜಿಯೋ ಹಾಟ್ ಸ್ಟಾರ್‌ನಲ್ಲಿ ಪೂರ್ಣಿಮಾಗೆ ಒಟುಹಾಕಿ ಅಭಿಯಾನ ಶುರುವಾಗಿದ್ದು ಕನ್ನಡಪರ ಹೋರಾಟಗಾರ ನಾಗಣ್ಣ ಮನವಿ ಮಾಡಿದ್ರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    8 min ago
  • ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    1
    ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ
ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    17 min ago
  • ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು. ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ. ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
    1
    ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ
ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ  ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು.
ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು.
ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ 
ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.
ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ.
ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    6 hrs ago
  • All About,Could you please Sir ji, Clear about your statement for "Concrete Road Aane ke Inkamath Hai" *ಭಾರತ ನಲ್ಲಿ ವೈರಲ್*
    1
    All About,Could you please Sir ji, Clear about your statement for "Concrete Road Aane ke Inkamath Hai"
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಕೊಳ್ಳೇಗಾಲ. ಪಾಳ್ಯ ಕೆರೆಗಳಿಗೆ ನೀರು ಹರಿಸುವಂತೆ ಗ್ರಾಮದ ಕೆರೆ ಅಚ್ಚುಕಟ್ಟುದಾರರು ಮತ್ತು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ನೀರಾವರಿ ಕಚೇರಿ ಮುಂದೆ ಪಾಳ್ಯ ಗ್ರಾಮದ ರೈತರು ಕುಳಿತು ಘೋಷಣೆಯ ಮೂಲಕ ಪ್ರತಿಭಟಿಸಿ, ನಂತರ ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ಪುಣ್ಯಶ್ರೀ ರವರಿಗೆ ಮನವಿಪತ್ರ ಸಲ್ಲಿಸಿದರು. ನಂತರ ಯುವ ರೈತ ಹರೀಶ್ ಮಾತನಾಡಿ, ನಮ್ಮ ಪಾಳ್ಯ ಗ್ರಾಮದ ಕೆರೆಗಳಿಗೆ ನೀರು ಬೀಡದೇ ಕಬಿನಿ ಜಲಾಶಯದ ನೀರು ಕಳೆದ 15 ದಿನಗಳಿಂದ ಚಾನಲ್ ಮೂಲಕ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದ್ದರಿಂದ ಪಾಳ್ಯ ಗ್ರಾಮದ ಸಾವಿರಾರು ಎಕರೆ ಜಮೀನುಗಳು ಸರಿಯಾದ ಸಮಯಕ್ಕೆ ಮಳೆಯಾಗದೇ ಹಾಗೂ ಜಲಾಶಯದಿಂದ ನೀರು ಬೀಡದೇ ಒಣಗುತ್ತಿದೆ ಎಂದು ಆರೋಪಿಸಿದರು. ರೈತರು ಐದಾರು ಬಾರಿ ಬಂದು ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಪಾಳ್ಯ ಗ್ರಾಮದ ಚಿಕ್ಕ ಕೆರೆ ಹಾಗೂ ದೊಡ್ಡ ಕೆರೆಗೆ ನೀರು ತುಂಬಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯ ಮಾಡಿದರು. ಪ್ರತಿಭಟನೆಯಲ್ಲಿ ಪಾಳ್ಯ ಗ್ರಾಮದ ಸಿದ್ದಪ್ಪನಾಯಕ, ಸೀಗನಾಯಕ, ದೊಡ್ಡರಾಜನಾಯಕ, ತಂಬಡಿ ಬಸವರಾಜಪ್ಪ, ನಂಜುಂಡಸ್ವಾಮಿ, ಪಕಾಲಿನಾಯಕ, ದೊಡ್ಡಸೀಗನಾಯಕ, ರಾಜಪ್ಪ, ಪಾರ್ಥ, ರೈತ ಮುಖಂಡರು ಇದ್ದರು.
    4
    ಕೊಳ್ಳೇಗಾಲ. ಪಾಳ್ಯ ಕೆರೆಗಳಿಗೆ ನೀರು ಹರಿಸುವಂತೆ ಗ್ರಾಮದ ಕೆರೆ ಅಚ್ಚುಕಟ್ಟುದಾರರು ಮತ್ತು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ನೀರಾವರಿ ಕಚೇರಿ ಮುಂದೆ ಪಾಳ್ಯ ಗ್ರಾಮದ ರೈತರು ಕುಳಿತು ಘೋಷಣೆಯ ಮೂಲಕ ಪ್ರತಿಭಟಿಸಿ, ನಂತರ ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ಪುಣ್ಯಶ್ರೀ ರವರಿಗೆ ಮನವಿಪತ್ರ ಸಲ್ಲಿಸಿದರು.
ನಂತರ ಯುವ ರೈತ ಹರೀಶ್ ಮಾತನಾಡಿ, ನಮ್ಮ ಪಾಳ್ಯ ಗ್ರಾಮದ ಕೆರೆಗಳಿಗೆ ನೀರು ಬೀಡದೇ ಕಬಿನಿ ಜಲಾಶಯದ ನೀರು ಕಳೆದ 15 ದಿನಗಳಿಂದ ಚಾನಲ್ ಮೂಲಕ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದ್ದರಿಂದ ಪಾಳ್ಯ ಗ್ರಾಮದ ಸಾವಿರಾರು ಎಕರೆ ಜಮೀನುಗಳು ಸರಿಯಾದ ಸಮಯಕ್ಕೆ ಮಳೆಯಾಗದೇ ಹಾಗೂ ಜಲಾಶಯದಿಂದ ನೀರು ಬೀಡದೇ ಒಣಗುತ್ತಿದೆ ಎಂದು ಆರೋಪಿಸಿದರು.
ರೈತರು ಐದಾರು ಬಾರಿ ಬಂದು ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಪಾಳ್ಯ ಗ್ರಾಮದ ಚಿಕ್ಕ ಕೆರೆ ಹಾಗೂ ದೊಡ್ಡ ಕೆರೆಗೆ ನೀರು ತುಂಬಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯ ಮಾಡಿದರು. 
ಪ್ರತಿಭಟನೆಯಲ್ಲಿ ಪಾಳ್ಯ ಗ್ರಾಮದ ಸಿದ್ದಪ್ಪನಾಯಕ, ಸೀಗನಾಯಕ, ದೊಡ್ಡರಾಜನಾಯಕ, ತಂಬಡಿ ಬಸವರಾಜಪ್ಪ, ನಂಜುಂಡಸ್ವಾಮಿ, ಪಕಾಲಿನಾಯಕ, ದೊಡ್ಡಸೀಗನಾಯಕ,  ರಾಜಪ್ಪ, ಪಾರ್ಥ, ರೈತ ಮುಖಂಡರು ಇದ್ದರು.
    user_ಎನ್. ನಟರಾಜ್
    ಎನ್. ನಟರಾಜ್
    Kollegal, Chamarajanagara•
    5 hrs ago
  • ಮೈಸೂರು ಅರಣ್ಯ ಭವನದಲ್ಲಿ ಆನೆಗಳ ವೀಕ್ಷಣೆಗೆ ನಿರ್ಬಂಧಗಳ ಬಿಗಿ – ದೂರದಿಂದಲೇ ದರ್ಶನ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ನಗರದಲ್ಲಿ ಗಜಪಡೆಯ ಸಂಚಾರ ಆರಂಭವಾಗಿದ್ದು, ಅರಣ್ಯ ಭವನದಲ್ಲಿ ತಂಗಿರುವ ಆನೆಗಳನ್ನು ನೋಡಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ವೀಕ್ಷಣೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಅರಣ್ಯ ಭವನದ ಆವರಣದಲ್ಲಿ ಇರುವ ಆನೆಗಳ ಬಳಿ ತೆರಳಿ ಸೆಲ್ಫಿ, ಫೋಟೋ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆನೆಗಳೊಂದಿಗೆ ಅತೀ ಸಮೀಪದಲ್ಲಿ ನಿಂತು ಚಿತ್ರ ತೆಗೆಯುವುದು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರು ನಿಗದಿತ ಅಂತರದಿಂದಲೇ ಆನೆಗಳನ್ನು ವೀಕ್ಷಿಸುವಂತೆ ಸೂಚಿಸಲಾಗಿದೆ. ಇದರಿಂದ ಆನೆಗಳಿಗೆ ಯಾವುದೇ ರೀತಿಯ ತೊಂದರೆ, ಆತಂಕ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದಿದ್ದರೂ, ಅರಣ್ಯ ಭವನದ ಸುತ್ತಮುತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ದೂರದಿಂದಲೇ ಗಜಪಡೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅರಣ್ಯ ಭವನದ ಮುಖ್ಯ ಗೇಟ್ ಬಳಿಯಲ್ಲಿ ಜನರು ನಿಂತು ಆನೆಗಳ ಚಲನವಲನವನ್ನು ವೀಕ್ಷಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ದಸರಾ ಗಜಪಡೆ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಆನೆಗಳನ್ನು ನೋಡಲು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಉತ್ಸಾಹ ಹೆಚ್ಚಾಗಿದೆ. ಆನೆಗಳೊಂದಿಗೆ ಫೋಟೋ ಅಥವಾ ಸೆಲ್ಫಿ ಪಡೆಯುವ ಆಸೆ ಸಹಜವಾದರೂ, ಅವು ಕಾಡುಪ್ರಾಣಿಗಳಾಗಿರುವುದರಿಂದ ಕ್ಷಣಮಾತ್ರದ ಅಜಾಗರೂಕತೆಯೂ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿಧಿಸಿರುವ ನಿಯಮಗಳನ್ನು ಪಾಲಿಸಿ, ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಬೇಕಾಗಿದೆ. ಆನೆಗಳಿಗೂ ಯಾವುದೇ ತೊಂದರೆಯಾಗದಂತೆ ಸಹಕರಿಸುವುದು ದಸರಾ ಸಂಭ್ರಮವನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಅಗತ್ಯವಾಗಿದೆ. ಅರಣ್ಯ ಭವನದ ಗೇಟ್ ಸುತ್ತಲೂ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯೂ ಜನರ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
    3
    ಮೈಸೂರು ಅರಣ್ಯ ಭವನದಲ್ಲಿ ಆನೆಗಳ ವೀಕ್ಷಣೆಗೆ ನಿರ್ಬಂಧಗಳ ಬಿಗಿ – ದೂರದಿಂದಲೇ ದರ್ಶನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ನಗರದಲ್ಲಿ ಗಜಪಡೆಯ ಸಂಚಾರ ಆರಂಭವಾಗಿದ್ದು, ಅರಣ್ಯ ಭವನದಲ್ಲಿ ತಂಗಿರುವ ಆನೆಗಳನ್ನು ನೋಡಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ವೀಕ್ಷಣೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿದೆ.
ಅರಣ್ಯ ಭವನದ ಆವರಣದಲ್ಲಿ ಇರುವ ಆನೆಗಳ ಬಳಿ ತೆರಳಿ ಸೆಲ್ಫಿ, ಫೋಟೋ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆನೆಗಳೊಂದಿಗೆ ಅತೀ ಸಮೀಪದಲ್ಲಿ ನಿಂತು ಚಿತ್ರ ತೆಗೆಯುವುದು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರು ನಿಗದಿತ ಅಂತರದಿಂದಲೇ ಆನೆಗಳನ್ನು ವೀಕ್ಷಿಸುವಂತೆ ಸೂಚಿಸಲಾಗಿದೆ. ಇದರಿಂದ ಆನೆಗಳಿಗೆ ಯಾವುದೇ ರೀತಿಯ ತೊಂದರೆ, ಆತಂಕ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಆನೆಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದಿದ್ದರೂ, ಅರಣ್ಯ ಭವನದ ಸುತ್ತಮುತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ದೂರದಿಂದಲೇ ಗಜಪಡೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅರಣ್ಯ ಭವನದ ಮುಖ್ಯ ಗೇಟ್ ಬಳಿಯಲ್ಲಿ ಜನರು ನಿಂತು ಆನೆಗಳ ಚಲನವಲನವನ್ನು ವೀಕ್ಷಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ದಸರಾ ಗಜಪಡೆ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಆನೆಗಳನ್ನು ನೋಡಲು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಉತ್ಸಾಹ ಹೆಚ್ಚಾಗಿದೆ. ಆನೆಗಳೊಂದಿಗೆ ಫೋಟೋ ಅಥವಾ ಸೆಲ್ಫಿ ಪಡೆಯುವ ಆಸೆ ಸಹಜವಾದರೂ, ಅವು ಕಾಡುಪ್ರಾಣಿಗಳಾಗಿರುವುದರಿಂದ ಕ್ಷಣಮಾತ್ರದ ಅಜಾಗರೂಕತೆಯೂ ಅಪಾಯಕ್ಕೆ ಕಾರಣವಾಗಬಹುದು.
ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿಧಿಸಿರುವ ನಿಯಮಗಳನ್ನು ಪಾಲಿಸಿ, ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಬೇಕಾಗಿದೆ. ಆನೆಗಳಿಗೂ ಯಾವುದೇ ತೊಂದರೆಯಾಗದಂತೆ ಸಹಕರಿಸುವುದು ದಸರಾ ಸಂಭ್ರಮವನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಅಗತ್ಯವಾಗಿದೆ. ಅರಣ್ಯ ಭವನದ ಗೇಟ್ ಸುತ್ತಲೂ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯೂ ಜನರ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    3 hrs ago
  • ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು. ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.
    1
    ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್
ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. 
ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. 
ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು.  
ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. 
ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. 
ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.
    user_ಶಿವು.ಎಸ್ ದೊಡ್ಡಆಲಹಳ್ಳಿ
    ಶಿವು.ಎಸ್ ದೊಡ್ಡಆಲಹಳ್ಳಿ
    Local News Reporter ಕನಕಪುರ, ರಾಮನಗರ, ಕರ್ನಾಟಕ•
    13 hrs ago
  • *ವಿಬಿ-ಜಿ ರಾಮ್ ಜಿ ಯೋಜನೆಯಡಿ ದುಡಿಯುವ ಕಾರ್ಮಿಕರಿಗೆಸಮಯಕ್ಕೆ ಸರಿಯಾಗಿ ಕೂಲಿ ಪಾವತಿಸಿ- ಜಿಲ್ಲಾಪಂಚಾಯಿತಿ ನಿಗದಿತ ಅವಧಿಯೊಳಗೆ ಕೂಲಿ ಪಾವತಿಯಾಗುವುದು ಅತ್ಯಂತ ಮುಖ್ಯ. ಹಾಜರಾತಿ, ದಾಖಲೆ ನಿರ್ವಹಣೆ ಹಾಗೂ ವೇತನ ಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಈಓ ಸೂಚಿಸಿದರು. ಕಾರ್ಮಿಕರು ನಿರಂತರವಾಗಿ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮಸ್ಟರ್ ರೋಲ್ ಹಾಗೂ ಎನ್‌ಎಂಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗದ ನಿರಂತರತೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. *ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ* : ಯೋಜನೆಯಡಿ ನಿರ್ಮಾಣವಾಗುವ ಪ್ರತಿಯೊಂದು ಆಸ್ತಿಯೂ ಗ್ರಾಮದ ಜನರಿಗೆ ದೀರ್ಘಕಾಲದವರೆಗೆ ಪ್ರಯೋಜನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ಉತ್ತಮ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ​“ಗುಣಮಟ್ಟದ ಕಾಮಗಾರಿ – ಶಾಶ್ವತ ಆಸ್ತಿ – ಸಮಗ್ರ ಗ್ರಾಮೀಣ ಅಭಿವೃದ್ಧಿ” ಎಂಬ ಪ್ರಮುಖ ಆಶಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. *NMMS ಹಾಜರಾತಿ ದಾಖಲಾತಿ ಕಡ್ಡಾಯ* : ​ವಿ-ಬಿ-ಜಿ ರಾಮ್‌ ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಕಾರ್ಮಿಕರ ಹಾಜರಾತಿಯನ್ನು NMMS ಆ್ಯಪ್ ಮೂಲಕ ನಿಯಮಾನುಸಾರ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಕಾರ್ಮಿಕರು ಕೆಲಸಕ್ಕೆ ಹಾಜರಾದ ಸಮಯದಲ್ಲಿಯೇ ನೈಜ ಸಮಯದ ಹಾಜರಾತಿಯನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಜರಾತಿಯಲ್ಲಿ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು ತಾಲ್ಲೂಕು ಪಂಚಾಯತ ಮುಖೇನಾ ಜಿಲ್ಲಾ ಪಂಚಾಯತ್ ತಂಡಕ್ಕೆ ಮಾಹಿತಿ‌ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಆ ದಿನವೇ ಕಡ್ಡಾಯವಾಗಿ ಕ್ರಮವಹಿಸಬೇಕು. ಯಾವುದೇ ಸಂದರ್ಭದಲ್ಲಿಯೂ‌ ಸಹ ತಾಂತ್ರಿಕ ಸಮಸ್ಯೆಯಿಂದಾಗಿ ಹಾಜರಾತಿ ತೆಗೆದುಕೊಳ್ಳದೇ ಹೋದಲ್ಲಿ‌ ಸಂಬಂಧಪಟ್ಟ ಅಧಿಕಾರಿ /ಸಿಬ್ಬಂದಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. *ಕಾಮಗಾರಿಗಳ ನಿರಂತರ ಮೇಲ್ವಿಚಾರಣೆಗೆ ಸೂಚನೆ* ಯೋಜನೆಯಡಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳು ನಿರ್ವಹಣೆಯ ಕೊರತೆ ಅಥವಾ ಆಡಳಿತಾತ್ಮಕ ವಿಳಂಬದಿಂದ ಕುಂಠಿತಗೊಳ್ಳಬಾರದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಅನುಷ್ಠಾನಾಧಿಕಾರಿಗಳು ತಳಮಟ್ಟದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕೇವಲ ಕಾಮಗಾರಿಗಳಿಗೆ ಅನುಮೋದನೆ ನೀಡುವುದಕ್ಕೆ ಸೀಮಿತವಾಗದೆ, ಕಾಮಗಾರಿ ಆರಂಭವಾದ ದಿನದಿಂದ ಪೂರ್ಣಗೊಳ್ಳುವವರೆಗೂ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಗುಣಮಟ್ಟ, ಸಮಯಪಾಲನೆ ಹಾಗೂ ಸಾರ್ವಜನಿಕರಿಗೆ ಆಗುವ ಪ್ರಯೋಜನ—ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಜಲಸಂರಕ್ಷಣೆ, ಕೃಷಿ ಭೂಮಿಗೆ ನೀರು ಹರಿಸುವ ವ್ಯವಸ್ಥೆ, ಕೆರೆ-ಕಾಲುವೆಗಳ ಪುನಶ್ಚೇತನ ಸೇರಿದಂತೆ ಸಾರ್ವಜನಿಕರಿಗೆ ದೀರ್ಘಕಾಲಿಕ ಪ್ರಯೋಜನ ನೀಡುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇಂತಹ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಮದಲ್ಲಿ ಶಾಶ್ವತ ಸಾರ್ವಜನಿಕ ಆಸ್ತಿಗಳ ನಿರ್ಮಾಣವಾಗಬೇಕು ಎಂದು ಸಿಇಒ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಐಇಸಿ ಸಂಯೋಜಕರು, ಜಿಎಫ್‌ಟಿ, ಕಾಯಕ ಬಂಧುಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಹಾಜರಿದ್ದರು.
    1
    *ವಿಬಿ-ಜಿ ರಾಮ್ ಜಿ ಯೋಜನೆಯಡಿ ದುಡಿಯುವ ಕಾರ್ಮಿಕರಿಗೆಸಮಯಕ್ಕೆ ಸರಿಯಾಗಿ ಕೂಲಿ ಪಾವತಿಸಿ- ಜಿಲ್ಲಾಪಂಚಾಯಿತಿ
ನಿಗದಿತ ಅವಧಿಯೊಳಗೆ ಕೂಲಿ ಪಾವತಿಯಾಗುವುದು ಅತ್ಯಂತ ಮುಖ್ಯ. ಹಾಜರಾತಿ, ದಾಖಲೆ ನಿರ್ವಹಣೆ ಹಾಗೂ ವೇತನ ಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಈಓ ಸೂಚಿಸಿದರು.
ಕಾರ್ಮಿಕರು ನಿರಂತರವಾಗಿ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮಸ್ಟರ್ ರೋಲ್ ಹಾಗೂ ಎನ್‌ಎಂಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗದ ನಿರಂತರತೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
*ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ* :     ಯೋಜನೆಯಡಿ ನಿರ್ಮಾಣವಾಗುವ ಪ್ರತಿಯೊಂದು ಆಸ್ತಿಯೂ ಗ್ರಾಮದ ಜನರಿಗೆ ದೀರ್ಘಕಾಲದವರೆಗೆ ಪ್ರಯೋಜನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ಉತ್ತಮ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
​“ಗುಣಮಟ್ಟದ ಕಾಮಗಾರಿ – ಶಾಶ್ವತ ಆಸ್ತಿ – ಸಮಗ್ರ ಗ್ರಾಮೀಣ ಅಭಿವೃದ್ಧಿ” ಎಂಬ ಪ್ರಮುಖ ಆಶಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ  ತಿಳಿಸಿದರು.
*NMMS ಹಾಜರಾತಿ ದಾಖಲಾತಿ ಕಡ್ಡಾಯ* :
​ವಿ-ಬಿ-ಜಿ ರಾಮ್‌ ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಕಾರ್ಮಿಕರ ಹಾಜರಾತಿಯನ್ನು NMMS ಆ್ಯಪ್ ಮೂಲಕ ನಿಯಮಾನುಸಾರ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಕಾರ್ಮಿಕರು ಕೆಲಸಕ್ಕೆ ಹಾಜರಾದ ಸಮಯದಲ್ಲಿಯೇ ನೈಜ ಸಮಯದ  ಹಾಜರಾತಿಯನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಹಾಜರಾತಿಯಲ್ಲಿ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ  ಸಿಬ್ಬಂದಿಗಳು  ತಾಲ್ಲೂಕು ಪಂಚಾಯತ ಮುಖೇನಾ ಜಿಲ್ಲಾ ಪಂಚಾಯತ್ ತಂಡಕ್ಕೆ ಮಾಹಿತಿ‌ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಆ ದಿನವೇ ಕಡ್ಡಾಯವಾಗಿ ಕ್ರಮವಹಿಸಬೇಕು. ಯಾವುದೇ ಸಂದರ್ಭದಲ್ಲಿಯೂ‌ ಸಹ ತಾಂತ್ರಿಕ ಸಮಸ್ಯೆಯಿಂದಾಗಿ ಹಾಜರಾತಿ ತೆಗೆದುಕೊಳ್ಳದೇ ಹೋದಲ್ಲಿ‌  ಸಂಬಂಧಪಟ್ಟ ಅಧಿಕಾರಿ /ಸಿಬ್ಬಂದಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
*ಕಾಮಗಾರಿಗಳ ನಿರಂತರ ಮೇಲ್ವಿಚಾರಣೆಗೆ ಸೂಚನೆ*
ಯೋಜನೆಯಡಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳು ನಿರ್ವಹಣೆಯ ಕೊರತೆ ಅಥವಾ ಆಡಳಿತಾತ್ಮಕ ವಿಳಂಬದಿಂದ ಕುಂಠಿತಗೊಳ್ಳಬಾರದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಅನುಷ್ಠಾನಾಧಿಕಾರಿಗಳು ತಳಮಟ್ಟದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕೇವಲ ಕಾಮಗಾರಿಗಳಿಗೆ ಅನುಮೋದನೆ ನೀಡುವುದಕ್ಕೆ ಸೀಮಿತವಾಗದೆ, ಕಾಮಗಾರಿ ಆರಂಭವಾದ ದಿನದಿಂದ ಪೂರ್ಣಗೊಳ್ಳುವವರೆಗೂ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಗುಣಮಟ್ಟ, ಸಮಯಪಾಲನೆ ಹಾಗೂ ಸಾರ್ವಜನಿಕರಿಗೆ ಆಗುವ ಪ್ರಯೋಜನ—ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಲಸಂರಕ್ಷಣೆ, ಕೃಷಿ ಭೂಮಿಗೆ ನೀರು ಹರಿಸುವ ವ್ಯವಸ್ಥೆ, ಕೆರೆ-ಕಾಲುವೆಗಳ ಪುನಶ್ಚೇತನ ಸೇರಿದಂತೆ ಸಾರ್ವಜನಿಕರಿಗೆ ದೀರ್ಘಕಾಲಿಕ ಪ್ರಯೋಜನ ನೀಡುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇಂತಹ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಮದಲ್ಲಿ ಶಾಶ್ವತ ಸಾರ್ವಜನಿಕ ಆಸ್ತಿಗಳ ನಿರ್ಮಾಣವಾಗಬೇಕು ಎಂದು ಸಿಇಒ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಐಇಸಿ ಸಂಯೋಜಕರು, ಜಿಎಫ್‌ಟಿ, ಕಾಯಕ ಬಂಧುಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಹಾಜರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    40 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.