ಆನೇಕಲ್‌ನಲ್ಲಿ ಮಕ್ಕಳಿಗಾಗಿ 3 ದಿನಗಳ ಬಾಲ್ಯ ಬೇಸಿಗೆ ಶಿಬಿರ ಆಯೋಜನೆ ಆನೇಕಲ್ ; ಪಟ್ಟಣದಲ್ಲಿರುವ ಸರ್ಕಾರಿ ಹಳೆ ಮಾಧ್ಯಮಿಕ ಪಾಠಶಾಲೆಯ ಆವರಣದಲ್ಲಿ ಸಂಕ್ರಮಣ ಬಳಗ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಕ್ಕಳಿಗಾಗಿ ಮೂರು ದಿನಗಳ “ಬಾಲ್ಯ ಬೇಸಿಗೆ ಶಿಬಿರ”ವನ್ನು ಆಯೋಜಿಸಲಾಗಿತ್ತು. ಈ ಬೇಸಿಗೆ ಶಿಬಿರದಲ್ಲಿ ವ್ಯಕ್ತಿತ್ವ ವಿಕಾಸ, ಚಿತ್ರಕಲೆ, ಚಲನಚಿತ್ರ, ನಾಟಕ ಅಭಿವ್ಯಕ್ತಿ, ಕಥೆ, ಹಾಡು, ಸಾಮಾಜಿಕ ಅರಿವು, ಹಳ್ಳಿ ಆಟಗಳು ಹಾಗೂ ಊಟ ಶಿಬಿರ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ವಿದ್ಯಾರ್ಥಿಗಳು ಆಟ-ಪಾಠಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದ ದೃಶ್ಯಗಳು ಗಮನ ಸೆಳೆದವು. ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತೆಗೆದಲು ಬೇಸಿಗೆ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ಸಮಾಜದ ಪ್ರಗತಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್‌ಗಳಿಗೆ ಹೆಚ್ಚು ಒಲವು ತೋರುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದರು. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳ ಅರಿವು ಮೂಡಿಸಿದರೆ ಅವರು ಮುಂದಿನ ದಿನಗಳಲ್ಲಿ ದೇಶಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನೂ ಸಹ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಕೀಲ ಪುರುಷೋತ್ತಮ್, ಸಂಕ್ರಮಣ ಬಳಗದ ದೇವರಾಜ್ ನಾಯಕ್, ಶಾಮ್ ರಾಜ್ ಅರಸು, ವಿಜಯರಾಮ, ಅಂಬರೀಶ್, ಅನುರಾಧ ಪುರುಷೋತ್ತಮ್, ಮುರಳಿ ಕಾಟಿ ಸೇರಿದಂತೆ ಹಲವರು ಹಾಗೂ ಮಕ್ಕಳು ಭಾಗವಹಿಸಿದ್ದರು.

- ತಮಿಳುನಾಡಿನ ಟಿವಿಕೆ ನಾಯಕ, ನಟ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.1
- ಟ್ರಾನ್ಸ್ ಪಾರ್ಮರ್ ಬಳಿ ಗಾಡಿ ಪಾರ್ಕ್ ಮಾಡುವವರಿಗೆ ಎಚ್ಚರಿಕೆ ಯ ಕರೆಗಂಟೆ.. ದಯವಿಟ್ಟು ಜಾಗರೂಕರಾಗಿರಿ! ಟ್ರಾನ್ಸ್ ಪಾರ್ಮರ್ ಬಳಿ ಗಾಡಿ ಪಾರ್ಕ್ ಮಾಡುವವರಿಗೆ ಎಚ್ಚರಿಕೆ ಯ ಕರೆಗಂಟೆ.. ದಯವಿಟ್ಟು ಜಾಗರೂಕರಾಗಿರಿ!1
- ಕರ್ನಾಟಕದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದರೆ, ಲಂಚ ಕೇಳಿದರೆ ಅಥವಾ FIR ದಾಖಲಿಸಲು ನಿರಾಕರಿಸಿದರೆ ನೇರವಾಗಿ ದೂರು ನೀಡಬಹುದು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸುಲಭ ವಿಧಾನದ ಮೂಲಕ ದೂರು ಸಲ್ಲಿಸಿ ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಿ.1
- ರಾಜ್ಯದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಕೊಲೆ ಆರೋಪಿಗಳಾದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದಿಂದ ಪ್ರಕರಣದ ಹಲವು ರಹಸ್ಯಗಳು ಬಯಲಾಗುವ ಸಾಧ್ಯತೆ ಇದೆ.2
- Post by Gulam Muhammad1
- ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಸ್ಥಳದ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಹೊಡೆದಾಟ ನಡೆದಿದೆ. ಸ್ಮಶಾನದಲ್ಲಿ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡ ಮುನಿರಾಜು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.3
- ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.1
- ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್- Veega News Kannada ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್1