Shuru
Apke Nagar Ki App…
ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
Ramesh Biradi
ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
More news from ಕರ್ನಾಟಕ and nearby areas
- ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ ರಸ್ತೆ ತಡೆ ಅಭಿಯಾನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊1
- ತಾಯ್ನಾಡು ನ್ಯೂಸ್ ಕನ್ನಡ ವರದಿಗೆ ಬಿಗ್ ಇಂಪ್ಯಾಕ್ಟ್- ಇದೀಗ ಅಧಿಕಾರಿಗಳ ಮುಂದಿನ ಕ್ರಮದತ್ತ1
- ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ4
- ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.1
- ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..! ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ1
- ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ1
- ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಟ ರಾಯಬಾಗ ತಾಲೂಕಿನಲ್ಲಿ ನಡೆದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲುಕಿನ ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಡುತ್ತಿರುವ ದೃಶ್ಯವಳಿಗಳು ಸಾಮಾಜಿಕ್ ಜಾಲತಾಣದಲ್ಲಿ virle ಆಗಿದೆ1
- ಕೊಣ್ಣೂರಲ್ಲಿ ಮಕ್ಕಳಿಂದ ಸಂಭ್ರಮದ ಈದ್ ಮಿಲಾದ್ ಆಚರಣೆ. ಶಾಂತಿ ಸಂದೇಶ ಸಾರಿದ ಮಕ್ಕಳು ಮಕ್ಕಳಿಂದ ಸಂಭ್ರಮದ ಈದ್ ಮಿಲಾದ್ ಆಚರಣೆ ಗೋಕಾಕ : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಮಿಲಾದುನ್ನಬಿಯನ್ನು ಸಮೀಪದ ಕೊಣ್ಣೂರಲ್ಲಿ ಸಡಗರದಿಂದ ಆಚರಿಸಲಾಯಿತು.ಕೊಣ್ಣೂರ ಮುಖ್ಯ ಬಜಾರದ ಮಸೀದಿಯಿಂದ ಮಕ್ಕಳು ಕೈಯಲ್ಲಿ ದ್ವಜ ಹಿಡಿದು ಮಕ್ಕಳು ಪೈಗಂಬರ್ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಸಾರಿದರು.1
- ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.1