ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಮಳವಳ್ಳಿ: ತಾಲೂಕಿನ ಕಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9, 10 ಮತ್ತು 11ರಂದು ಮೂರು ದಿನಗಳ ಕಾಲ ಕುಂದುೂರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಲಿವೆ ಕಂದೂರು ಬೆಟ್ಟದ ಅಧಿದೇವತೆಯಾದ ಕುಂದೂರಮ್ಮ ಸಪ್ತ ಮಾತೃಕಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಮಠದ ತಪೋನಿಧಿಗಳಾದ ಮಹಾಶಿವಯೋಗಿಗಳ ಪರಂಪರೆಯ ಶ್ರೀ ರುದ್ರಮುನಿಸ್ವಾಮಿಗಳವರ 91ನೇ ಪಾದಪೂಜಾ ಸಂಭ್ರಮೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಮಠದ ವತಿಯಿಂದ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ ಸುಕ್ಷೇತ್ರ ರಸಿದ್ದೇಶ್ವರ ಮಠದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು: ಮಠಾಧ್ಯಕ್ಷರಾದ ಶ್ರೀ ನಂಜುಂಡಸ್ವಾಮಿಗಳ ಹೇಳಿಕೆ ನವೆಂಬರ್ 9ರ ಸೋಮವಾರದಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನವೆಂಬರ್ 10ರ ಮಂಗಳವಾರದಂದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂದುರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 6 ಗಂಟೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 11ರ ಬುಧವಾರದಂದು ಶ್ರೀಕ್ಷೇತ್ರದಲ್ಲಿ ಮಠದ ಸದ್ಗುರು ಪರಂಪರೆಯ ಪಾದಪೂಜಾ ಸಂಭ್ರಮೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮೂರು ದಿನಗಳ ಈ ಧಾರ್ಮಿಕ ಮಹೋತ್ಸವಕ್ಕೆ ಹಾಗೂ ಕುಂದೂರಮ್ಮನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಸದ್ಭಕ್ತರಿಗೂ ಮಂಗಳವಾರ ಮತ್ತು ಬುಧವಾರ ಶ್ರೀಮಠದಲ್ಲಿ ನಿರಂತರ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು ಶ್ರೀಮಠದ ಧಾರ್ಮಿಕ ಪರಂಪರೆ, ಗುರುಗಳ ಸ್ಮರಣೆ ಹಾಗೂ ಆಧ್ಯಾತ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಮಾವಿನ ವಿವಿಧ ಜಿಲ್ಲೆಗಳ ತಾಲೂಕುಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವರು ಈ ಧಾರ್ಮಿಕ ಮಹೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಹಾಗೂ ಶ್ರೀ ಮಹಾಂತೇಶ್ವರ ಜ್ಞಾನ ವಿಕಾಸ ಸಮಿತಿಯ ಭಕ್ತವೃಂದ ಮನವಿ ಮಾಡಿದೆ.
ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಮಳವಳ್ಳಿ: ತಾಲೂಕಿನ ಕಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9, 10 ಮತ್ತು 11ರಂದು ಮೂರು ದಿನಗಳ ಕಾಲ ಕುಂದುೂರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಲಿವೆ ಕಂದೂರು ಬೆಟ್ಟದ ಅಧಿದೇವತೆಯಾದ ಕುಂದೂರಮ್ಮ ಸಪ್ತ ಮಾತೃಕಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಮಠದ ತಪೋನಿಧಿಗಳಾದ ಮಹಾಶಿವಯೋಗಿಗಳ ಪರಂಪರೆಯ ಶ್ರೀ ರುದ್ರಮುನಿಸ್ವಾಮಿಗಳವರ 91ನೇ ಪಾದಪೂಜಾ ಸಂಭ್ರಮೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಮಠದ ವತಿಯಿಂದ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ ಸುಕ್ಷೇತ್ರ ರಸಿದ್ದೇಶ್ವರ ಮಠದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು: ಮಠಾಧ್ಯಕ್ಷರಾದ ಶ್ರೀ ನಂಜುಂಡಸ್ವಾಮಿಗಳ ಹೇಳಿಕೆ ನವೆಂಬರ್ 9ರ ಸೋಮವಾರದಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನವೆಂಬರ್ 10ರ ಮಂಗಳವಾರದಂದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂದುರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 6 ಗಂಟೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 11ರ ಬುಧವಾರದಂದು ಶ್ರೀಕ್ಷೇತ್ರದಲ್ಲಿ ಮಠದ ಸದ್ಗುರು ಪರಂಪರೆಯ ಪಾದಪೂಜಾ ಸಂಭ್ರಮೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮೂರು ದಿನಗಳ ಈ ಧಾರ್ಮಿಕ ಮಹೋತ್ಸವಕ್ಕೆ ಹಾಗೂ ಕುಂದೂರಮ್ಮನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಸದ್ಭಕ್ತರಿಗೂ ಮಂಗಳವಾರ ಮತ್ತು ಬುಧವಾರ ಶ್ರೀಮಠದಲ್ಲಿ ನಿರಂತರ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು ಶ್ರೀಮಠದ ಧಾರ್ಮಿಕ ಪರಂಪರೆ, ಗುರುಗಳ ಸ್ಮರಣೆ ಹಾಗೂ ಆಧ್ಯಾತ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಮಾವಿನ ವಿವಿಧ ಜಿಲ್ಲೆಗಳ ತಾಲೂಕುಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವರು ಈ ಧಾರ್ಮಿಕ ಮಹೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಹಾಗೂ ಶ್ರೀ ಮಹಾಂತೇಶ್ವರ ಜ್ಞಾನ ವಿಕಾಸ ಸಮಿತಿಯ ಭಕ್ತವೃಂದ ಮನವಿ ಮಾಡಿದೆ.
- ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಮಳವಳ್ಳಿ: ತಾಲೂಕಿನ ಕಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9, 10 ಮತ್ತು 11ರಂದು ಮೂರು ದಿನಗಳ ಕಾಲ ಕುಂದುೂರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಲಿವೆ ಕಂದೂರು ಬೆಟ್ಟದ ಅಧಿದೇವತೆಯಾದ ಕುಂದೂರಮ್ಮ ಸಪ್ತ ಮಾತೃಕಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಮಠದ ತಪೋನಿಧಿಗಳಾದ ಮಹಾಶಿವಯೋಗಿಗಳ ಪರಂಪರೆಯ ಶ್ರೀ ರುದ್ರಮುನಿಸ್ವಾಮಿಗಳವರ 91ನೇ ಪಾದಪೂಜಾ ಸಂಭ್ರಮೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಮಠದ ವತಿಯಿಂದ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ ಸುಕ್ಷೇತ್ರ ರಸಿದ್ದೇಶ್ವರ ಮಠದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು: ಮಠಾಧ್ಯಕ್ಷರಾದ ಶ್ರೀ ನಂಜುಂಡಸ್ವಾಮಿಗಳ ಹೇಳಿಕೆ ನವೆಂಬರ್ 9ರ ಸೋಮವಾರದಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನವೆಂಬರ್ 10ರ ಮಂಗಳವಾರದಂದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂದುರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 6 ಗಂಟೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 11ರ ಬುಧವಾರದಂದು ಶ್ರೀಕ್ಷೇತ್ರದಲ್ಲಿ ಮಠದ ಸದ್ಗುರು ಪರಂಪರೆಯ ಪಾದಪೂಜಾ ಸಂಭ್ರಮೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮೂರು ದಿನಗಳ ಈ ಧಾರ್ಮಿಕ ಮಹೋತ್ಸವಕ್ಕೆ ಹಾಗೂ ಕುಂದೂರಮ್ಮನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಸದ್ಭಕ್ತರಿಗೂ ಮಂಗಳವಾರ ಮತ್ತು ಬುಧವಾರ ಶ್ರೀಮಠದಲ್ಲಿ ನಿರಂತರ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು ಶ್ರೀಮಠದ ಧಾರ್ಮಿಕ ಪರಂಪರೆ, ಗುರುಗಳ ಸ್ಮರಣೆ ಹಾಗೂ ಆಧ್ಯಾತ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಮಾವಿನ ವಿವಿಧ ಜಿಲ್ಲೆಗಳ ತಾಲೂಕುಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವರು ಈ ಧಾರ್ಮಿಕ ಮಹೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಹಾಗೂ ಶ್ರೀ ಮಹಾಂತೇಶ್ವರ ಜ್ಞಾನ ವಿಕಾಸ ಸಮಿತಿಯ ಭಕ್ತವೃಂದ ಮನವಿ ಮಾಡಿದೆ.1
- ಇತಿಹಾಸ ಪ್ರಸಿದ್ದ ತಾಲ್ಲೂಕಿನ ಬಿ ಜಿ ಪುರದ ಶ್ರೀ ಮಂಟೇಸ್ವಾಮಿ ಮಠದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಂದ ಗದ್ದುಗೆ ದರ್ಶನ ಮಳವಳ್ಳಿ : ಐತಿಹಾಸಿಕವಾಗಿ ಪ್ರಸಿದ್ದಿಯಾದ ಧರೆಗೆ ದೊಡ್ಡ ವರು ಶ್ರೀ ಮಂಟೇಸ್ವಾಮಿ ನೆಲೆ ಗೊಂಡಿರುವ ತಾಲ್ಲೂಕಿನ ಬೊಪ್ಪೇಗೌಡನಪುರದ ಶ್ರೀ ಮಂಟೇಸ್ವಾಮಿ ಮಠದಲ್ಲಿ ದೀಪಾವಳಿ ಅಮವಾಸ್ಯೆ ಅಂಗವಾಗಿ ಅಪಾರ ಸಂಖ್ಯೆ ಯಲ್ಲಿ ನೆರೆದಿದ್ದ ಭಕ್ತರು ನೀಲ ಗಾರರು ಪೂಜೆ ಸಲ್ಲಿಸಿದರು. ಸೋಮವಾರ ಬೆಳಿಗ್ಗೆ ಯಿಂದಲೇ ಸಹಸ್ರಾರು ಸಂಖ್ಯೆ ಯಲ್ಲಿ ನೆರೆದಿದ್ದ ಭಕ್ತರು ದೂಪ ದೀಪಗಳೊಂದಿಗೆ ಪೂಜೆ ಸಲ್ಲಿಸಿ ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆದರು. ಅಮವಾಸ್ಯೆ ಪ್ರಯುಕ್ತ ತಡೆ ಹೊಡೆಸುವವರ ದುಡ್ಡ ಸರತಿ ಸಾಲು ನೆರೆದಿತ್ತು, ಮಠದ ಆವರಣದಲ್ಲಿರುವ ಉರಿ ಗದ್ದುಗೆ ದರ್ಶನ ಬಸಪ್ಪ ನಿಗೆ ಪೂಜೆ ಸಲ್ಲಿಸಲು ಜನ ಮುಗಿಬಿದ್ದಿದ್ದರು ಒಟ್ಟಾರೆ ಶ್ರೀ ಮಂಟೇಸ್ವಾಮಿ ಮಠದ ಆವರಣ ಜನ ಜಂಗುಳಿಯಿಂದ ತುಂಬಿತ್ತು.1
- ಪುಟಾಣಿ ಮಕ್ಜಳು ಕಳಸ ಹೊತ್ತು ವೀರಗಾಸೆಯೊಂದಿಗೆ ದೇವರ ಉತ್ಸವಮೂರ್ತಿ ಮೆರವಣಿಗೆ ಮಳವಳ್ಳಿ: ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ರುದ್ರಾಕ್ಷಿ ಮಾಲೆ ಹಾಕಿ ವಿಶೇಷ ಪೂಜಾ ಪುನಸ್ಕಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಪೂರಕವಾಗಿ ನಡೆಸಲಾಯಿತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಹೋಮ ಹವನ ನಡೆಸಿದ ಬಳಿಕ ದೇವರಕರಗ ಹೂವಿನ ಅಲಂಕಾರ ಮಾಡಿ , ನಗಾರಿ ಪುಟಾಣಿ ಮಕ್ಕಳು ಕಳಸ ಹೊತ್ತು ವೀರಗಾಸೆಯೊಂದಿಗೆ ದೇವರ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಹದೇಶ್ವರ ದೇವಸ್ಥಾನದ ಅರ್ಚಕ ಮಹದೇವ ಮಾತನಾಡಿ, ಇಂದು ಬೆಳಗಿನ ಜಾವ ಬೀಮಾ ನದಿಯಲ್ಲಿ ಹೊಸ ನೀರು ಕಳಸದಿಂದ ತಂದು ದೇವರ ವಿಗ್ರಹಕ್ಕೆ ಅಭಿಷೇಕ ಮಾಡಿ ಹಾಲರವಿ ನಡೆಸಲಾಯಿತು. ಈ ವೇಳೆ ಗ್ರಾಮದ ನಾಡಗೌಡರು.ಯಜಮಾನರು, ಮುಖಂಡರು ಸೇರಿದಂತೆ ಹಲವರು ಇದ್ದರು.1
- ದೀಪಾವಳಿ ಸಂಭ್ರಮದೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಿ: ನಟ ಅನಿರುದ್ಧ ಜತ್ಕರ್ ಮನವಿ ಪಟಾಕಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸಂಗ್ರಹಿಸಿ ಪೌರಕಾರ್ಮಿಕರಿಗೆ ಸಹಕರಿಸಲು ಕರೆ ಬೆಂಗಳೂರು: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ಪರಿಸರ ಮತ್ತು ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆಯೂ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ನಟ ಅನಿರುದ್ಧ ಜತ್ಕರ್ ಮನವಿ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಬಳಿಕ ಉಂಟಾಗುವ ಕಸ ಹಾಗೂ ತ್ಯಾಜ್ಯವನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಎಸೆಯದೆ, ಒಂದು ಪೆಟ್ಟಿಗೆ ಅಥವಾ ಬುಟ್ಟಿಯಲ್ಲಿ ಸಂಗ್ರಹಿಸಿ ಮನೆ ಮುಂದೆ ಇಡುವ ಮೂಲಕ ಪೌರಕಾರ್ಮಿಕರ ಕಾರ್ಯಕ್ಕೆ ಸಹಕರಿಸಬೇಕು. ಹಬ್ಬದ ದಿನಗಳಲ್ಲಿಯೂ ಪೌರಕಾರ್ಮಿಕರು ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವುದನ್ನು ಸಾರ್ವಜನಿಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಜೆ.ಪಿ. ನಗರದ ವಾವು (VAVO) ತಂಡವು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಜಾಗೃತಿ ಕಾರ್ಯಗಳನ್ನು ನಡೆಸುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ನಮ್ಮ ಬೀದಿ, ನಮ್ಮ ಊರು, ನಮ್ಮ ನಾಡು ಹಾಗೂ ದೇಶವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡೋಣ. ಸ್ವಚ್ಛತೆಯಲ್ಲಿ ಇತರ ದೇಶಗಳಿಗೂ ಮಾದರಿಯಾಗೋಣ ಎಂದು ನಟ ಅನಿರುದ್ಧ ಜತ್ಕರ್ ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.1
- ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಅರಣ್ಯ ಶ್ವಾನ ದಳದ ಅಣುಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಕೊಳ್ಳೇಗಾಲ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಚಾಮರಾಜನಗರದ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ತಾಲೂಕಿನ ಕರಾಳ ಕಟ್ಟೆ, ಜಕ್ಕಳ್ಳಿ, ಅರೇಪಾಳ್ಯ ಮತ್ತು ಎರೆಕಟ್ಟೆ ಗ್ರಾಮಗಳಲ್ಲಿ, ಅರಣ್ಯ ಶ್ವಾನ ದಳದ ವಿಶೇಷ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತರಬೇತಿ ಪಡೆದಿರುವ ‘ಭೂಮಿ’ ಹೆಸರಿನ ಶ್ವಾನವು ಈ ಪ್ರದರ್ಶನದಲ್ಲಿ ತನ್ನ ಅದ್ಭುತ ಚಾಕಚಕ್ಯತೆಯನ್ನು ಪ್ರದರ್ಶಿಸಿತು. ಕಳ್ಳ ಬೇಟೆಗಾರರನ್ನು ಬೆನ್ನಟ್ಟುವುದು, ಕಾಡಿನಲ್ಲಿ ಇಡಲಾದ ಉರುಳು ಮತ್ತು ಬಲೆಗಳನ್ನು ಪತ್ತೆ ಮಾಡುವುದು, ವನ್ಯಜೀವಿಗಳ ಉತ್ಪನ್ನಗಳ ಅಕ್ರಮ ಸಂಗ್ರಹ ಹಾಗೂ ಸಾಗಾಣಿಕೆಯನ್ನು ತಡೆಯುವುದರ ಜೊತೆಗೆ, ಕಾಡಿಗೆ ಬೆಂಕಿ ಹಚ್ಚುವ ಅಪರಾಧಿಗಳ ಹೆಜ್ಜೆ ಗುರುತು ಮತ್ತು ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶ್ವಾನದ ವಿವಿಧ ತಾಲಿಮುಗಳು ಸಾರ್ವಜನಿಕರ ಗಮನ ಸೆಳೆದವು. ಕಾಡಂಚಿನ ಗ್ರಾಮಗಳ ಸಾರ್ವಜನಿಕರಿಗೆ ಶ್ವಾನದಳದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಶ್ವಾನದಳದ ಸಿಬ್ಬಂದಿಗಳಾದ ಬಸವರಾಜು, ಮಾದೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೋಯಬ್ ಪಾಷಾ ಹಾಗೂ ಸ್ಥಳೀಯ ಪ್ರಮುಖರಾದ ಕೇತಮ್ಮ, ರಂಗಮ್ಮ, ಸಿದ್ದು, ಪಾಲರಾಜ್, ಅಬ್ರಹಾಮ್, ಡ್ಯಾನಿಯಲ್, ಚಾರ್ಲಿ, ಸೇಟು, ಚಿನ್ನಪ್ಪ, ನಂದೀಶ್, ಚೆನ್ನಂಜೇಗೌಡ, ಬಂಗಾರು, ಈರಣ್ಣ, ರಾಜೇಶ್, ಶಿವಣ್ಣ, ಮಹೇಶ ಸೇರಿದಂತೆ ಉಪ ವಲಯ ಅರಣ್ಯ ಅಧಿಕಾರಿ ಅನಂತ ರಾಮು, ಗಸ್ತು ಅರಣ್ಯ ಪಾಲಕರುಗಳಾದ, ಸುನೀಲ್ ಬಸಪ್ಪ ಬೆಳವಿ, ರಾಜು ಎಸ್ ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ, ಮರಿಸ್ವಾಮಿ,ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕೊಳ್ಳೇಗಾಲ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಚಾಮರಾಜನಗರದ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ತಾಲೂಕಿನ ಕರಾಳ ಕಟ್ಟೆ, ಜಕ್ಕಳ್ಳಿ, ಅರೇಪಾಳ್ಯ ಮತ್ತು ಎರೆಕಟ್ಟೆ ಗ್ರಾಮಗಳಲ್ಲಿ, ಅರಣ್ಯ ಶ್ವಾನ ದಳದ ವಿಶೇಷ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತರಬೇತಿ ಪಡೆದಿರುವ ‘ಭೂಮಿ’ ಹೆಸರಿನ ಶ್ವಾನವು ಈ ಪ್ರದರ್ಶನದಲ್ಲಿ ತನ್ನ ಅದ್ಭುತ ಚಾಕಚಕ್ಯತೆಯನ್ನು ಪ್ರದರ್ಶಿಸಿತು. ಕಳ್ಳ ಬೇಟೆಗಾರರನ್ನು ಬೆನ್ನಟ್ಟುವುದು, ಕಾಡಿನಲ್ಲಿ ಇಡಲಾದ ಉರುಳು ಮತ್ತು ಬಲೆಗಳನ್ನು ಪತ್ತೆ ಮಾಡುವುದು, ವನ್ಯಜೀವಿಗಳ ಉತ್ಪನ್ನಗಳ ಅಕ್ರಮ ಸಂಗ್ರಹ ಹಾಗೂ ಸಾಗಾಣಿಕೆಯನ್ನು ತಡೆಯುವುದರ ಜೊತೆಗೆ, ಕಾಡಿಗೆ ಬೆಂಕಿ ಹಚ್ಚುವ ಅಪರಾಧಿಗಳ ಹೆಜ್ಜೆ ಗುರುತು ಮತ್ತು ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶ್ವಾನದ ವಿವಿಧ ತಾಲಿಮುಗಳು ಸಾರ್ವಜನಿಕರ ಗಮನ ಸೆಳೆದವು. ಕಾಡಂಚಿನ ಗ್ರಾಮಗಳ ಸಾರ್ವಜನಿಕರಿಗೆ ಶ್ವಾನದಳದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಶ್ವಾನದಳದ ಸಿಬ್ಬಂದಿಗಳಾದ ಬಸವರಾಜು, ಮಾದೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೋಯಬ್ ಪಾಷಾ ಹಾಗೂ ಸ್ಥಳೀಯ ಪ್ರಮುಖರಾದ ಕೇತಮ್ಮ, ರಂಗಮ್ಮ, ಸಿದ್ದು, ಪಾಲರಾಜ್, ಅಬ್ರಹಾಮ್, ಡ್ಯಾನಿಯಲ್, ಚಾರ್ಲಿ, ಸೇಟು, ಚಿನ್ನಪ್ಪ, ನಂದೀಶ್, ಚೆನ್ನಂಜೇಗೌಡ, ಬಂಗಾರು, ಈರಣ್ಣ, ರಾಜೇಶ್, ಶಿವಣ್ಣ, ಮಹೇಶ ಸೇರಿದಂತೆ ಉಪ ವಲಯ ಅರಣ್ಯ ಅಧಿಕಾರಿ ಅನಂತ ರಾಮು, ಗಸ್ತು ಅರಣ್ಯ ಪಾಲಕರುಗಳಾದ, ಸುನೀಲ್ ಬಸಪ್ಪ ಬೆಳವಿ, ರಾಜು ಎಸ್ ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ, ಮರಿಸ್ವಾಮಿ,ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.1
- All About,Developmental Works Left Desserted in #NRConstituency #Mysuru *ಭಾರತ ನಲ್ಲಿ ವೈರಲ್*1
- ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ನಡೆದ ದೀಪಾವಳಿ ಮಹಾರಥೋತ್ಸವ - ಲಕ್ಷಾಂತರ ಭಕ್ತರ ಭಾಗಿ. ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ 7.30ಕ್ಕೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ, ವೈದಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾಲೂರು ಬೃಹನ್ಮಠದ ಶ್ರೀ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು. ರಥಕ್ಕೆ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರ "ಉಘೇ ಉಘೇ ಮಹದೇಶ್ವರ, ಉಘೇ ಮಾದಪ್ಪ" ಎಂಬ ಜಯಘೋಷ ಬೆಟ್ಟದ ತುಂಬಾ ಮೊಳಗಿತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥದ ಹಗ್ಗ ಎಳೆದು ಪುಣ್ಯ ಸಂಪಾದಿಸಿದರು. ರಥೋತ್ಸವದ ನಂತರ ಗುರು ಬ್ರಹ್ಮೋತ್ಸವ, ಅನ್ನ ಬ್ರಹ್ಮೋತ್ಸವ ನೆರವೇರಿತು. ರಾತ್ರಿ ಮಹಾ ನೈವೇದ್ಯದ ನಂತರ ತೆಪ್ಪೋತ್ಸವ ನಡೆದು ಜಾತ್ರೆಗೆ ತೆರೆ ಬಿದ್ದಿತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪ್ರಾಧಿಕಾರದಿಂದ ಕುಡಿಯುವ ನೀರು, ಅನ್ನದಾಸೋಹ, ಆರೋಗ್ಯ ಸೇವೆ ಸೇರಿದಂತೆ ಸಕಲ ಸೌಕರ್ಯ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಒಟ್ಟಾರೆ, 5 ದಿನಗಳ ದೀಪಾವಳಿ ಜಾತ್ರಾ ಮಹೋತ್ಸವ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.4
- ದೀಪಾವಳಿ ಎಳ್ಳು ಅಮವಾಸ್ಯೆ ಅಂಗವಾಗಿ ತಾಲ್ಲೂಕಿನಲ್ಲಿ ಬಹುತೇಕ ದೇವಾಲಗಳಲ್ಲಿ ವಿಶೇಷ ಪೂಜೆ ಉತ್ಸವ, ಮಳವಳ್ಳಿ : ದೀಪಾವಳಿಯ ಎಳ್ಳು ಅಮವಾಸ್ಯ ಅಂಗವಾಗಿ ತಾಲ್ಲೂಕಿನ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆ ಉತ್ಸವ ಕಾರ್ಯಗಳು ಬಹು ವಿಜೃಂಭಣೆಯಿಂದ ಜರುಗಿದವು. ಬೆಳಕವಾಡಿ ಗ್ರಾಮದ ಶ್ರೀ ಕಾಳಿಕಾಂಭ ಕಮಟೇಶ್ವರಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಹೋಮ ಹವನ ಧಾರ್ಮಿಕ ವಿಧಿ ವಿಧಾಮಗಳು ಜರುಗಿದವು, ನಂತರ ಶ್ರೀ ಕಾಳಿಕಾಂಭ ದೇವಿಗೆ ಹೂವಿನ ಅಲಂಕಾರದ ನಂತರ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಿಯ ದರ್ಶನ ಪಡೆದರು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಜರುಗಿತು. ಇನ್ನೂ ಸರಗೂರಿನ ಶ್ರೀ ಮಹದೇಶ್ವರ ಸ್ವಾಮಿ ದೇವಾ ಲಯದಲ್ಲಿ ಸಹ ದೀಪಾವಳಿ ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ ಹುಲಿವಾಹನೋತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಇಂದು ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಿ ದರು ಜೊತೆಗೆ ವಾದ್ಯ ಮೇಳ ದೊಂದಿಗೆ ನಡೆದ ಹುಲಿವಾಹ ನೋತ್ಸವವನ್ನು ಕಣ್ತುಂಬಿ ಕೊಂಡರು. ತಾಲ್ಲೂಕಿನ ಬಹು ತೇಕ ದೇವಾಲಯಗಳು ಭಕ್ತ ರಿಂದ ತುಂಬಿಹೋಗಿತ್ತು.1