Shuru
Apke Nagar Ki App…
ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮ ಪಂಚಾಯತಯಲ್ಲಿ ಭ್ರಷ್ಟಾಚಾರ. ಸಾಮಾಜಿ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರ ಅವರಿಂದ ಆರೋಪ
ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮ ಪಂಚಾಯತಯಲ್ಲಿ ಭ್ರಷ್ಟಾಚಾರ. ಸಾಮಾಜಿ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರ ಅವರಿಂದ ಆರೋಪ
More news from ಕರ್ನಾಟಕ and nearby areas
- ದೇವನಹಳ್ಳಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ. ಚಾಲಕನ ಸೀಟ್ ಬೆಂಡ್ ಮಾಡಿ ಮಲಗಿರುವ ಸ್ಥಿತಿಯಲ್ಲಿ ಶವಪತ್ತೆ. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ಬಳಿ ಘಟನೆ. ಬೆಳಗ್ಗೆಯಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಲಗಿದ್ದ ವ್ಯಕ್ತಿ. ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಮೇಲೆಳದ ಕಾರಣ ಎಬ್ಬಿಸಲು ಮುಂದಾಗಿದ್ದ ಸ್ಥಳೀಯರು. ಡೋರ್ ಹೊಡೆದರು ಎಚ್ಚರವಾಗದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸ್ಥಳೀಯರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನಲ್ಲೆ ಸಾವನ್ನಪ್ಪಿರುವುದು ಬೆಳಕಿಗೆ. ಮೆಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪಿರುವ ಶಂಕೆ. ವ್ಯಕ್ತಿಯ ಜೇಬಿನಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ತಾಳಹಳ್ಳಿ ದಾಖಲೆಗಳು ಪತ್ತೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ.1
- ಶಿಡ್ಲಘಟ್ಟದ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪತ್ರಕರ್ತರಿಗೆ ಹೆಲ್ಮೆಟ್ ವಿತರಣೆ! ಬೈಕ್ ರ್ಯಾಲಿ ಮೂಲಕ ರಸ್ತೆ ಸುರಕ್ಷತಾ ಜಾಗೃತಿ..!1
- ಕೋಲಾರ: ನಗರದ 15ನೇ ವಾರ್ಡಿನ ಹಾರೋಹಳ್ಳಿಯ ನೆಲಗಂಗಮ್ಮ ದೇವಸ್ಥಾನದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಂದ ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಗುರಸ್ವಾಮಿಗಳು:ಮುನಿಯಪ್ಪ, ನಾರಾಯಣಸ್ವಾಮಿ, ಮಂಜುನಾಥ್,ಸುರೇಶ್, ಪೂಜಾರಿ, ಹಾಗೂ ಊರಿನ ಹಲವು ಸ್ವಾಮಿಗಳು ನೇತೃತ್ವದಲ್ಲಿ ಜರುಗಿತು. ಮಂಡಲ ಪೂಜೆಯ ಅಂಗವಾಗಿ ಏರ್ಪಡಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿರುವ ಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದ ಮುಖ್ಯಾಂಶಗಳು: ಹೊಂಬಾಳೆ ಪೂಜೆ: ಈ ಬಾರಿ ಮಾಲೆ ಧರಿಸಿರುವ ಕನ್ನೆ ಸ್ವಾಮಿಗಳಿಗಾಗಿ ವಿಶೇಷವಾಗಿ ಹೊಂಬಾಳೆ ಪೂಜೆಯನ್ನು ನೆರವೇರಿಸಲಾಯಿತು. ಭಜನಾ ಸುಧೆ: ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳ ಭಜನೆಯು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಮೂಡಿಸಿತು. ಪ್ರಸಾದ ವಿನಿಯೋಗ: ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ನಂಬರ್ ನಾರಾಯಣಪ್ಪ, ಮುನಿ ವೆಂಕಟಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಅಯ್ಯಪ್ಪ ಮಾಲೆ ಧರಿಸಿದ ಮಣಿಕಂಠ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ, ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿಕೊಟ್ಟರು1
- ಮಳವಳ್ಳಿ ತಾಲೂಕಿನ ಹಲಗೂರು ಸಮೀಪ ನಂಜಾಪುರ ಗ್ರಾಮದಲ್ಲಿ 8 ಅಡಿ, 30 ಕೆಜಿ ತೂಕದ ಹೆಬ್ಬಾವು ಪತ್ತೆ. ಹಲಗೂರು:- ಗೊಲ್ಲರಹಳ್ಳಿ ಗ್ರಾಮದ ಸಮೀಪ ಇರುವ ನಂಜಾಪುರ ಗ್ರಾಮದ ಮಹದೇವು ಎಂಬುವರ ಜಮೀನಿನಲ್ಲಿ ಬುಧವಾರ ರಾತ್ರಿ ಸುಮಾರು ಎಂಟು ಅಡಿ ಉದ್ದದ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದ್ದು ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞರಾದ ಜಗದೀಶ ಮತ್ತು ಕೃಷ್ಣ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತಾರೆ. ನಂಜಾಪುರ ಗ್ರಾಮದ ಮಹಾದೇವ ಎಂಬುವರ ಜಮೀನಿನಲ್ಲಿ ಬುಧವಾರ ರಾತ್ರಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡ ತಕ್ಷಣ ಅವರು ಅರಣ್ಯ ಇಲಾಖೆಯವರಿಗೂ ಮತ್ತು ಉರಗ ತಜ್ಞರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ತಕ್ಷಣ ಬಂದ ಉರಗ ತಜ್ಞರಾದ ಜಗದೀಶ ಮತ್ತು ಕೃಷ್ಣ ಸುರಕ್ಷಿತವಾಗಿ ಅದನ್ನು ಹಿಡಿದು ಮುತ್ತತ್ತಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಹೆಬ್ಬಾವನ್ನು ಬಿಟ್ಟು, ನಂತರ ಜಗದೀಶ್ ಮಾತನಾಡುತ್ತಾ ನಮ್ಮ ಹಲಗೂರು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳು ರೈತರು ಸಾಕಿದ ಆಡು ,ಕುರಿ, ಮೇಕೆ ಮತ್ತು ಇತರೆ ಪ್ರಾಣಿಗಳನ್ನು ಮೊದಲು ಕಾಲನ್ನು ಹಿಡಿದು ನಂತರ ಅದನ್ನು ಸುತ್ತಿಕೊಂಡು ಅದರ ಪ್ರಾಣ ಹೋದ ನಂತರ ನುಂಗುತ್ತದೆ ,ಆಹಾರದ ಕೊರತೆಯಿಂದ ಅವುಗಳು ಜಮೀನಿನ ಹತ್ತಿರ ಹೆಚ್ಚು ಓಡಾಡುತ್ತಿವೆ ಇದುವರೆಗೂ 12 ರಿಂದ 13 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತೇನೆ ಮತ್ತು ನಾಗರಹಾವು, ಕೇರೆ ಹಾವು ಅಥವಾ ಇನ್ಯಾವುದೇ ತರದ ಹಾವುಗಳು ಇದ್ದರೂ ಸಹ ಅವುಗಳನ್ನು ಸಾಯಿಸಲು ಹೋಗಬೇಡಿ ,ನಮಗೆ ವಿಷಯ ತಿಳಿಸಿದ ತಕ್ಷಣ ನಾವು ಬಂದು ಯಾವುದೇ ಸಂಭಾವನೆ ಪಡೆಯದೆ ಸುರಕ್ಷಿತವಾಗಿ ನಾನಾಗಲೇ ಅಥವಾ ನನ್ನ ಸಹಪಾಠಿ ಕೃಷ್ಣನಾಗಲಿ ಬಂದು ಅವನ್ನು ಹಿಡಿದು ಕಾಡಿಗೆ ಬಿಡುತ್ತೇವೆ .ನಮಗೆ ದೂರವಾಣಿ ಕರೆ ಮಾಡಿದರೆ ಸಾಕು ನಾವೇ ಬರುತ್ತೇವೆ ನಮ್ಮ ದೂರವಾಣಿ ಸಂಖ್ಯೆ 8431500189 ಜಗದೀಶ.9686955795 ಕೃಷ್ಣ ಆಗಿರುತ್ತದೆ ಕರೆ ಮಾಡುವಂತೆ ಮನವಿ ಮಾಡಿದರು. ಜಮೀನಿನ ಮಾಲೀಕರಾದ ಮಹಾದೇವ ಮಾತನಾಡಿ, ನಾವು ರಾತ್ರಿ ಹಗಲುಎನ್ನದೆ ಜಮೀನಿನಲ್ಲಿ ನೀರು ಹಾಯಿಸಿಕೊಂಡು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತಿದ್ದೇವೆ .ಎಂದಿನಂತೆ ಬುಧವಾರ ರಾತ್ರಿ ಜಮೀನಿಗೆ ನೀರು ಹಾಯಿಸಲು ಬಂದಾಗ ಹೆಬ್ಬಾವುಕಂಡು ತುಂಬಾ ಭಯಪಟ್ಟಿದ್ದೇನೆ, ಮತ್ತು ಇತ್ತೀಚೆಗೆ ಚಿರತೆ ಹಾವಳಿಯು ಸಹ ಇದೆ ಎಂದರು . ಹಲಗೂರು ಸಮೀಪ ಹೆಬ್ಬಾವು ಪತ್ತೆ ,ಉರಗ ತಜ್ಞರು ಹೆಬ್ಬಾವನ್ನು ಹಿಡಿದಿರುವ ಚಿತ್ರ.1
- ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಜ.12 ರಂದು ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಬಾಗೇಪಲ್ಲಿ:- ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಜ.12 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ಟ್ರ್ಯಾಕ್ಟರ್ ಮೂಲಕ ಮುಂಜಾನೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕನ ಪಿ.ಮಂಜುನಾಥ ರೆಡ್ಡಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ರೈತರು ಹಾಗೂ ಪಧಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅಕ್ಟೋಬರ್ 15ಕ್ಕೆ ಕೇಂದ್ರ ಸರಕಾರ ಎಂಎಸ್‍ಪಿ ಘೋಷಿಸಿದೆ. ಕೇಂದ್ರ ಸರ್ಕಾರ ಕ್ವಿಂಟಾಲ್ ಗೆ ರೂ. 2,400 ಘೋಷಣೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ ರೂ. 1,500 ರಿಂದ 1,700 ಇದೆ. ಇವತ್ತಿನ ಮಾರುಕಟ್ಟೆ ಬೆಲೆ ಮತ್ತು ಎಂಎಸ್‍ಪಿಗೆ ಹೋಲಿಸಿದರೆ ರೈತರು ಪ್ರತಿ ಕ್ವಿಂಟಾಲ್ ಗೆ ಸುಮಾರು 700 ರೂ. ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯ ಸರಕಾರವೇ ಮೆಕ್ಕೆಜೋಳ ಖರೀದಿಸಬೇಕು. ಇಲ್ಲದಿದ್ದರೆ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆ. ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರವಿಚಂದ್ರರೆಡ್ಡಿ, ಎಚ್.ಪಿ. ಲಕ್ಷ್ಮೀನಾರಾಯಣ, ರಮೇಶ್ ರೆಡ್ಡಿ, ಗೋಪಾಲ್ (ಗೋಪಿ) ಎಸ್.ಎನ್. ರಾಮರೆಡ್ಡಿ, ಹೇಮಚಂದ್ರ, ಕೃಷ್ಣಮೂರ್ತಿ, ಆಂಜನೇಯರೆಡ್ಡಿ, ಅಶ್ವತ್ಥಪ್ಪ ಶ್ರೀರಾಮನಾಯ್ಕ್, ಜಿ.ಎಸ್, ಶ್ರೀನಿವಾಸ್, ಸುರೇಶ್,ಆದಿನಾರಾಯಣರೆಡ್ಡಿ, ಆನಂದ್, ಶ್ರೀರಾಮಪ್ಪ, ಸೇರಿದಂತೆ ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಪಧಾಧಿಕಾರಿಗಳು, ಹಲವಾರು ರೖತ ಮುಖಂಡರು ಹಾಜರಿದ್ದರು.1
- ಹನೂರು: ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಆಕ್ರಮ ಮದ್ಯೆ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಏರ್ಪಟ್ಟು ಪೊಲೀಸ್ ಪೇದೆಯೊರ್ವನ ಪುತ್ರನ್ನೆ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡನಿಗೆ ಹಲ್ಲೆ ಮಾಡಿರುವ ಘಟನೆ ಜರುಗಿದೆ ಲೋಕನಹಳ್ಳಿ ಹೋಬಳಿಯ ಬೂದಿಪಡಗ ಗ್ರಾಮದಲ್ಲಿ ಕಳೆದ ಎರಡು–ಮೂರು ವರ್ಷಗಳಿಂದ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಗ್ರಾಮಸ್ಥರು ಹಾಗೂ ವಿವಿಧ ಸಮುದಾಯದ ಯಜಮಾನರು ಸಭೆ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತೀಟೆ ಜಗಳದ ವೇಳೆ, ಬೂದಿಪಡಗ ಗ್ರಾಮದ ಪೊಲೀಸ್ ಪೇದೆಯೋರ್ವನ ಮಗ ಕಿಶೋರ್ ಎಂಬಾತನು, ಗ್ರಾಮದ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಅವರ ಮನೆಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ರಂಗೇಗೌಡ ಅವರು ಹನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ ಹಲ್ಲೆಯಿಂದ ಗಾಯಗೊಂಡ ಅವರು ಪ್ರಸ್ತುತ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ: ಸರ್ವರ ಸಹಕಾರದಿಂದ ಜಯಂತಿ ಮಹೋತ್ಸವವು ಯಶಸ್ವಿಯಾಗಿದೆ_ ಸುತ್ತೂರು ಶ್ರೀಗಳ ನುಡಿ • ೧೦೬೬ನೇ ಜಯಂತಿ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಸರ್ವರಿಗೂ ಪೂಜ್ಯರಿಂದ ಅರ್ಶೀವಾದ ಮಳವಳ್ಳಿ: ಸರ್ವರ ಸಹಕಾರದಿಂದ ಮಳವಳ್ಳಿಯಲ್ಲಿ ನಡೆದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ೧೦೬೬ನೆಯ ಜಯಂತಿ ಮಹೋತ್ಸವವು ಯಶಸ್ವಿಯಾಗಿದೆ ಎಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ನುಡಿದರು. ೧೦೬೬ನೇ ಜಯಂತಿ ಮಹೋತ್ಸವದ ಸಮಿತಿ ಹಾಗೂ ಕಾರ್ಯಕರ್ತರಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, ಈ ಜಯಂತಿ ಮಹೋತ್ಸವವು ಇತಿಹಾಸದ ಪುಟಗಳಲ್ಲಿ ಸೇರಿದೆ. ಎಂದೂ ಮಾತನಾಡಿಸದಂತಹ ರಾಜಕೀಯ ವ್ಯಕ್ತಿಗಳು ಜಯಂತಿಯ ಕಾರ್ಯಕ್ರಮದಲ್ಲಿ ಪರಸ್ಪರ ಮುಖಾಮುಖಿಯಾಗಿ ಮಾತನಾಡಿಸಿದ್ದಾರೆ. ಪ್ರತಿದಿನ ಬೆಳಗಿನ ಜಾವದಲ್ಲಿ ನಡೆಯುತ್ತಿದ್ದ ಪ್ರಭಾತ್‌ಪೇರಿ ಕಾರ್ಯಕ್ರಮದಲ್ಲಿ ಬಡಾವಣೆಗಳ ಜನರು ತಮ್ಮ ಮನೆಯ ಕಾರ್ಯಕ್ರಮದಂತೆ ಶ್ರದ್ಧಾ ಭಕ್ತಿ, ಶಿಸ್ತು ಮತ್ತು ಆಸಕ್ತಿಯಿಂದ ಭಾಗವಹಿಸಿ ಸಂಭ್ರಮಿಸಿ, ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ ಎಂದು ತಿಳಿಸಿದರು. ಕನಕಪುರ ಶ್ರೀ ದೇಗುಲಮಠದ ಕಿರಿಯ ಶ್ರೀಗಳಾದ ನಿ.ಪ್ರ.ಸ್ವ ಪೂಜ್ಯ ಡಾ. ಶ್ರೀ ಚನ್ನಬಸವಸ್ವಾಮಿಗಳವರು ಶುಭಸಂದೇಶ ನೀಡಿ, ಪ್ರತಿಯೊಬ್ಬರ ಶ್ರಮದಿಂದ ಈ ಜಯಂತಿ ಮಹೋತ್ಸವವು ಅತ್ಯಂತ ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಎಲ್ಲರ ಪರಿಶ್ರಮದಿಂದ ನಡೆದಿರುವುದರ ಹಿಂದೆ ಪ್ರತಿಯೊಬ್ಬ ಸಹಕಾರ ಅತ್ಯಮೂಲ್ಯವಾಗಿದೆ ಎಂದರು. ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮಿಗಳು ಶುಭಸಂದೇಶ ನೀಡಿ, ಭಾರತ ದೇಶವು ಪವಿತ್ರ ದೇಶವಾಗಿದೆ. ಮನುಕುಲದಲ್ಲಿ ಸಾರ್ಥಕ ಪಡೆಯಬೇಕಾದರೆ ಮಠಮಾನ್ಯಗಳ ಸೇವೆ ಅನನ್ಯ. ಜಾತ್ಯಾತೀತವಾಗಿ ಮಠಗಳು ಸೇವೆಯನ್ನು ನೀಡುತ್ತಿವೆ. ಸಂಸ್ಕೃತಿ, ಧಾರ್ಮಿಕತೆ ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಅತ್ಯಮೂಲ್ಯವಾಗಿವೆ. ಆದರೆ ಯುವಕರು ಇಂದಿನ ದಿನಗಳಲ್ಲಿ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಈ ಜಯಂತಿಯ ಮೂಲಕ ಸುತ್ತೂರು ಶ್ರೀಮಠವು ಮಾನವ ಜನಾಂಗಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದೆ. ಅಧಿಕಾರ, ಹಣ, ಐಶ್ವರ್ಯ ಇವು ಯಾವುವು ಕೂಡ ಶಾಶÀ್ವತವಲ್ಲ. ಸಮಾಜಕ್ಕೆ ನೀಡಿದಂತಹ ನಿಸ್ವಾರ್ಥ ಸೇವೆಯು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಉತ್ತಮ ಕೆಲಸಗಳನ್ನು ಮಾಡಿದರೆ, ದೇವರೆ ನಮ್ಮನ್ನು ಹುಡಿಕಿಕೊಂಡು ಬರುತ್ತಾರೆ. ಸುತ್ತೂರು ಶ್ರೀಮಠವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದೆ ಎಂದರು. ಮಾಜಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು, ಶಾಸಕರಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿರವರು ಮಾತನಾಡಿ, ತಮಗೆ ಹಂಚಿದAತಹ ಕಾರ್ಯಗಳನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಮಳವಳ್ಳಿ ತಾಲ್ಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಮುಂದೆ ನಡೆಯುತ್ತದೆಯೊ ಗೊತ್ತಿಲ್ಲ ಎಂಬAತೆ ಬಹಳ ಅಚ್ಚುಕಟ್ಟಾಗಿ ಪರಮಪೂಜ್ಯರ ಆಶೀರ್ವಾದದಿಂದ ಅರ್ಥಪೂರ್ಣವಾಗಿ ಜರುಗಿದೆ. ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ, ಜನರಲ್ಲಿ ಹೊಂದಾಣಿಕೆ, ಸಮಾನತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಬೆಳೆಯುವಲ್ಲಿ ಸಹಕಾರಿಯಾಗಿವೆ. ಪರಮ ಪೂಜ್ಯರ ಆಶೀರ್ವಾದವಿದ್ದರೆ, ಒಣಹುಲ್ಲು ಕೂಡ ಚಿಗುರುತ್ತದೆ ಎಂಬುದಕ್ಕೆ ಈ ಜಯಂತಿ ಮಹೋತ್ಸವವು ಸಾಕ್ಷಿಯಾಗಿದೆ. ಶ್ರೀಗಳವರ ದೂರದೃಷ್ಟಿ ಮತ್ತು ದಣಿವರಿಯದ ಕಾಯಕದಿಂದ ಶ್ರೀಮಠವು ವಿಶ್ವವಿಖ್ಯಾತಿ ಪಡೆದಿದೆ. ಜಯಂತಿ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ, ಸೇವೆ ಮಾಡಿರುವುದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ನುಡಿದರು. ಮಾಜಿ ಉಪಸಭಪಾತಿ ಮರಿತಿಬ್ಬೆಗೌಡರು ಹಾಗೂ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜುರವರು ಮಾತನಾಡಿ, ಸುತ್ತೂರು ಮಠಕ್ಕೂ ನನಗೂ ಅವಿನಾಭಾವ ಸಂಬAಧವಿದೆ. ತನ್ನ ಕ್ಷೇತ್ರದಲ್ಲಿ ಮಾತ್ರ ಜಯಂತಿ ಮಹೋತ್ಸವವನ್ನು ಆಚರಿಕೊಂಡರು ಎಂದು ಜನರು ಹೇಳುತ್ತಿದ್ದರು. ಆದರೆ ಜಯಂತಿ ಮಹೋತ್ಸವವು ಮಳವಳ್ಳಿಯಲ್ಲಿ ಅದ್ದೂರಿಯಾಗಿ ನಡೆದಿರುವುದು ನನಗೆ ತುಂಬಾ ಸಂತೋಷವನ್ನುAಟು ಮಾಡಿದೆ ಎಂದು ಮನದಾಳದಿಂದ ಮಾತನ್ನಾಡಿದರು. ಮಾಜಿ ಶಾಸಕರಾದ ಡಾ.ಕೆ ಅನ್ನದಾನಿರವರು ಮಾತನಾಡಿ, ಮಳವಳ್ಳಿಗೆ ರಾಷ್ಟçಪತಿಗಳು ಆಗಮಿಸಿದ್ದುದು ಇತಿಹಾಸವನ್ನು ಸೃಷ್ಟಿಸಿದೆ. ಈ ಜಯಂತಿ ಮಹೋತ್ಸವವು ಯಶಸ್ವಿಯಾಗಿ ನಡೆದಿರುವುದಕ್ಕೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಿರುವುದು ಪರಮಪೂಜ್ಯರಲ್ಲಿರುವ ಹೃದಯ ಶ್ರೀಮಂತಿಕೆಯನ್ನು ತಿಳಿಸುತ್ತದೆ. ಇಂತಹ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಬೇಕೆಂಬುದು ನನ್ನ ಆಶಯ ಎಂದರು. ಮAಡ್ಯ ಜಿಲ್ಲಾಧಿಕಾರಿಗಳಾದ ಶ್ರೀ ಕುಮಾರ್‌ರವರು ಮಾತನಾಡಿ, ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬ ನುಡಿಯಂತೆ ಇಂದಿಗೂ ತಾಲ್ಲೂಕಿನಾದ್ಯಂತ ಜನರು ಜಯಂತಿ ಕಾರ್ಯಕ್ರಮದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಬಹಳಷ್ಟು ಜನರ ಪರಿಶ್ರಮವಿದೆ. ಪೂಜ್ಯ ಶ್ರೀಗಳವರ ಸಲಹೆ ಮತ್ತು ಮಾರ್ಗದರ್ಶನದಂತೆ ಅಚ್ಚುಕಟ್ಟಾಗಿ ನಡೆದಿದೆ. ಮಂಡ್ಯ ಜಿಲ್ಲೆಯ ಜನರು ನೀರು ಕೇಳಿದರೆ, ಪಾನಕ ಕೊಡುವಂತವರು ಎನ್ನುವಂತೆ ಮಳವಳ್ಳಿಯಲ್ಲಿ ಜಯಂತಿ ಮಹೋತ್ಸವವನ್ನು ಆಚರಿಸಿ ಸೈ ಎನಿಸಿಕೊಂಡಿದ್ದಾರೆ. ಸಮಾಜಕ್ಕೆ ಜ್ಞಾನದ ಬೆಳಕು, ಶಾಂತಿಯನ್ನು ಭೋದಿಸಿದಂತಹ ಮಹಾನ್ ಸಂತರು ಶಿವರಾತ್ರೀಶ್ವರರು ಎಂದು ನುಡಿದರು. ಕಾರ್ಯಕ್ರಮದಲ್ಲಿ ಮಳವಳ್ಳಿ ತಾಲ್ಲೂಕಿನ ಹರಗುರು ಚರಮೂರ್ತಿಗಳು, ಮಾಜಿ ಉಪಸಭಾಪತಿಗಳಾದ ಶ್ರೀ ಮರಿತಿಬ್ಬೇಗೌಡ, ಮಾಜಿ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ಮರಿಗೌಡ, ಉದ್ಯಮಿಗಳಾದ ಎಂ.ಆರ್. ಉಮಾಪತಿ ಎಸ್. ನಿಶಾಂತ್, ಬಿಜೆಪಿ ಮುಖಂಡರಾದ ಎಸ್. ಸಚ್ಚಿದಾನಂದ, ಎಡಿಜಿಪಿ ನಂಜುAಡಸ್ವಾಮಿ, ಎ.ಡಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ಲೋಕೇಶ್, ಪುರಸಭೆಯ ನಾಗರತ್ನ ಮತ್ತು ಅಧಿಕಾರಿಗಳು, ಚೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ಮಳವಳ್ಳಿ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು, ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಅಭಿನಂದನಾ ನುಡಿಗಳನ್ನಾಡಿದರು. ಶಾಲಾ ಮಕ್ಕಳು ಹಾಗೂ ಸಂಗೀತ ಶಿಕ್ಷಕರು ಪಾರ್ಥನೆ ಸಲ್ಲಿಸಿದÀರು. ಶ್ರೀ ಪಿ.ಎಂ. ಮಹದೇವಸ್ವಾಮಿ ಸ್ವಾಗತಿಸಿದರು. ಶ್ರೀ ಬಿ. ನಿರಂಜನಮೂರ್ತಿ ವಂದಿಸಿದರು. ಡಾ. ರೇಚಣ್ಣ ನಿರೂಪಿಸಿದರು.1