ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಶ್ರೀ ಮುರಸಿದೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಶ್ರೀ ಮುರಸಿದೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹೌದು ರವಿವಾರ : 19/04/2026 ರಿಂದ ಮಂಗಳವಾರ ದಿನಾಂಕ : 21/04/2026 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗುವುದು ರವಿವಾರ ರಂದು ಸುತ್ತ ಮುತಲಿನ ಗ್ರಾಮಗಳಿಂದ ಡೊಳಿನ ವಾಲಗಳ ಆಗಮನ. ಸಾಯಂಕಾಲ 5 ಗಂಟ್ಟೆ ನಂತರ ಮೊದಲು ವಾಲಗ ತಂದವರಿಗೆ ಶ್ರೀ ಮೂರಸಿದೆಶ್ವರ ಪಂಚ ಕಮಿಟಿ ವತಿಯಿಂದ ಡಾಲ್, ಮತ್ತು ರಾತ್ರಿ ಡೋಳಿನ ಪದಗಳು. ಸೋಮವಾರ ದಿನಾಂಕ 20/04/2026 ರಂದು ಮುಂಜಾನೆ ಶ್ರೀ ಮುರಸಿದೇಶ್ವರ ಪಲ್ಲಕಿ ಉತ್ಸವದ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಗುಡಿಯಿಂದ ಪ್ರಾರಂಭವಾಗಿ ಕುರುಬರಗಲಿ, ಸೋಮವಾರ ಪೆಟ,ಬುರುಡಗಲಿ ರವಿವಾರ ಪೆಟ್ ಮುಕಾಂತರ ಗುರುವಾರ ಪೇಟೆ ಮಾರ್ಗವಾಗಿ ಗುಡಿಗೆ ತಲುಪುವುದು. ನಂತರ ಗುಡಿಯ ಮುಂದೆ ತೆಂಗಿನಕಾಯಿ ಹಾರಿಸುವುದು, ಗುಡಿಯ ಒಳಗೆ ಆಲಗ ಹಾಯುವುದು, ಡೋಳು ಬಾರಿಸುವುದು, ದತ್ತಿ ಕುಣಿತ, ಡೊಳ್ಳಿನ ಹಾಡುಗಳು ಹೀಗೆ ಕಾರ್ಯಕ್ರಮ ಜರಗುವು ಮದ್ಯಾಹ್ನ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದ ಇರುತ್ತದೆ. ಕೊನೆಯ ಮಂಗಳವಾರ 21/04/2026 ರಂದು ಗುಡಿಯ ಸುತ್ ಪಲ್ಲಕಿ ಪ್ರದಕ್ಷಿಣೆ,ವಿವಿಧ ಕಾರ್ಯಕ್ರಮ ಮತ್ತೆ ಜರಗವು ದು ಸಾಯಂಕಾಲ ರಂದು ಕರಿ ಹಾಯುವ ಕಾರ್ಯಕ್ರಮ ನಡೆಯುವುದು. ವಿಶೇಷವಾಗಿ ಈ ಜಾತ್ರೆಯಲ್ಲಿ ಪರಟಿ ನಾಗಲಿಂಗೇಶ್ವರ ದೇವಸ್ಥಾನ ಅವರಣದಲ್ಲಿ ಸೋಮವಾರ 20 ರಂದು ಸಂಜೆ ನಾಲ್ಕು ಗಂಟೆಗೆ ಟಗರಿನ ಕಾಳಗ, ಇರುತ್ತದೆ ವಿಜೇತರಿಗೆ ಬಹುಮಾನ ಹಾಗೂ ಡಾಲ್ ನೀಡಲಾಗುವುದು. ಈ ಜಾತ್ರೇಯಲಿ ಮುಖ್ಯ ಪ್ರತಾಪ ಪಾಟೀಲ ಜನತಾದಳ ಪಕ್ಷದ ರಷ್ಟಿಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಪಿ. ಎಲ್. ಡಿ. ಬ್ಯಾಂಕ್ ರಾಯಬಾಗ. ಯುವ ಕೇಸರಿ ಶಿವರಾಜ ಪಾಟೀಲ್ ಗೌರವನ್ವಿತ ಅಧ್ಯಕ್ಷರು ಶ್ರೀ ಮೂರಸಿದೇಶ್ವರ ದೇವಸ್ಥಾನ ಚಿಕ್ಕೋಡಿ. ಹಾಗೂ ಅಂಬಾಪ್ರಸಾದ ನರೂಟೆ ನಿರ್ದೇಶಕರು ವಸಂತರಾವ ಪಾಟೀಲ್ ಸಹಕಾರ ಸಕ್ಕರೆ ಕಾರ್ಖಾನೆ ನಿ. ರಾಯಬಾಗ ರಾಜಕೀಯ ಮುಖಂಡರು ಬಂಡಾರ ವಡೆಯ ಸದಲಗಾ ಶ್ರೀ ದರಿಖಾನ ಅಜ್ಜ ಅವರ ಆಗಮನ ಆಗಲಿದೆ. ಹೀಗೆ ಈ ಜಾತ್ರೆ ಅಧುರಿಯಾಗಿ ನಡೆಯುವುದು ಎಂದು ಮುರಾರಿ ಸಿಂಗಾಡಿ ಅವರು ತಿಳ್ಸಿದರು. ಈ ಸಂದರ್ಭದಲ್ಲಿ ಸಿದ್ದಪ ಡೇಂಗರ,ಆನಂದ್ ದತವಾಡೆ, ಕುಮಾರ್ ಡೇಂಗರ, ಕಲ್ಲಪಾ ಸಿಂಗಾಡಿ, ಸಿದರಾಮ ಸಿಂಗಾಡೆ, ರೇವಪ ಡಂಗೆರ, ಮೇಘನಾತ ಪೂಜೇರಿ, ರಾಜು ಕರೆಗಾರ, ಎಲ್ಲಪ ಸಿಂಗಾಡಿ, ಅಣ್ಣಪಾ ಸನಮೂರೆ,
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಶ್ರೀ ಮುರಸಿದೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಶ್ರೀ ಮುರಸಿದೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹೌದು ರವಿವಾರ : 19/04/2026 ರಿಂದ ಮಂಗಳವಾರ ದಿನಾಂಕ : 21/04/2026 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗುವುದು ರವಿವಾರ ರಂದು ಸುತ್ತ ಮುತಲಿನ ಗ್ರಾಮಗಳಿಂದ ಡೊಳಿನ ವಾಲಗಳ ಆಗಮನ. ಸಾಯಂಕಾಲ 5 ಗಂಟ್ಟೆ ನಂತರ ಮೊದಲು ವಾಲಗ ತಂದವರಿಗೆ ಶ್ರೀ ಮೂರಸಿದೆಶ್ವರ ಪಂಚ ಕಮಿಟಿ ವತಿಯಿಂದ ಡಾಲ್,
ಮತ್ತು ರಾತ್ರಿ ಡೋಳಿನ ಪದಗಳು. ಸೋಮವಾರ ದಿನಾಂಕ 20/04/2026 ರಂದು ಮುಂಜಾನೆ ಶ್ರೀ ಮುರಸಿದೇಶ್ವರ ಪಲ್ಲಕಿ ಉತ್ಸವದ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಗುಡಿಯಿಂದ ಪ್ರಾರಂಭವಾಗಿ ಕುರುಬರಗಲಿ, ಸೋಮವಾರ ಪೆಟ,ಬುರುಡಗಲಿ ರವಿವಾರ ಪೆಟ್ ಮುಕಾಂತರ ಗುರುವಾರ ಪೇಟೆ ಮಾರ್ಗವಾಗಿ ಗುಡಿಗೆ ತಲುಪುವುದು. ನಂತರ ಗುಡಿಯ ಮುಂದೆ ತೆಂಗಿನಕಾಯಿ ಹಾರಿಸುವುದು, ಗುಡಿಯ ಒಳಗೆ ಆಲಗ ಹಾಯುವುದು, ಡೋಳು ಬಾರಿಸುವುದು, ದತ್ತಿ ಕುಣಿತ, ಡೊಳ್ಳಿನ ಹಾಡುಗಳು ಹೀಗೆ ಕಾರ್ಯಕ್ರಮ ಜರಗುವು ಮದ್ಯಾಹ್ನ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದ ಇರುತ್ತದೆ. ಕೊನೆಯ ಮಂಗಳವಾರ 21/04/2026 ರಂದು
ಗುಡಿಯ ಸುತ್ ಪಲ್ಲಕಿ ಪ್ರದಕ್ಷಿಣೆ,ವಿವಿಧ ಕಾರ್ಯಕ್ರಮ ಮತ್ತೆ ಜರಗವು ದು ಸಾಯಂಕಾಲ ರಂದು ಕರಿ ಹಾಯುವ ಕಾರ್ಯಕ್ರಮ ನಡೆಯುವುದು. ವಿಶೇಷವಾಗಿ ಈ ಜಾತ್ರೆಯಲ್ಲಿ ಪರಟಿ ನಾಗಲಿಂಗೇಶ್ವರ ದೇವಸ್ಥಾನ ಅವರಣದಲ್ಲಿ ಸೋಮವಾರ 20 ರಂದು ಸಂಜೆ ನಾಲ್ಕು ಗಂಟೆಗೆ ಟಗರಿನ ಕಾಳಗ, ಇರುತ್ತದೆ ವಿಜೇತರಿಗೆ ಬಹುಮಾನ ಹಾಗೂ ಡಾಲ್ ನೀಡಲಾಗುವುದು. ಈ ಜಾತ್ರೇಯಲಿ ಮುಖ್ಯ ಪ್ರತಾಪ ಪಾಟೀಲ ಜನತಾದಳ ಪಕ್ಷದ ರಷ್ಟಿಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಪಿ. ಎಲ್. ಡಿ. ಬ್ಯಾಂಕ್ ರಾಯಬಾಗ. ಯುವ ಕೇಸರಿ ಶಿವರಾಜ ಪಾಟೀಲ್ ಗೌರವನ್ವಿತ ಅಧ್ಯಕ್ಷರು ಶ್ರೀ
ಮೂರಸಿದೇಶ್ವರ ದೇವಸ್ಥಾನ ಚಿಕ್ಕೋಡಿ. ಹಾಗೂ ಅಂಬಾಪ್ರಸಾದ ನರೂಟೆ ನಿರ್ದೇಶಕರು ವಸಂತರಾವ ಪಾಟೀಲ್ ಸಹಕಾರ ಸಕ್ಕರೆ ಕಾರ್ಖಾನೆ ನಿ. ರಾಯಬಾಗ ರಾಜಕೀಯ ಮುಖಂಡರು ಬಂಡಾರ ವಡೆಯ ಸದಲಗಾ ಶ್ರೀ ದರಿಖಾನ ಅಜ್ಜ ಅವರ ಆಗಮನ ಆಗಲಿದೆ. ಹೀಗೆ ಈ ಜಾತ್ರೆ ಅಧುರಿಯಾಗಿ ನಡೆಯುವುದು ಎಂದು ಮುರಾರಿ ಸಿಂಗಾಡಿ ಅವರು ತಿಳ್ಸಿದರು. ಈ ಸಂದರ್ಭದಲ್ಲಿ ಸಿದ್ದಪ ಡೇಂಗರ,ಆನಂದ್ ದತವಾಡೆ, ಕುಮಾರ್ ಡೇಂಗರ, ಕಲ್ಲಪಾ ಸಿಂಗಾಡಿ, ಸಿದರಾಮ ಸಿಂಗಾಡೆ, ರೇವಪ ಡಂಗೆರ, ಮೇಘನಾತ ಪೂಜೇರಿ, ರಾಜು ಕರೆಗಾರ, ಎಲ್ಲಪ ಸಿಂಗಾಡಿ, ಅಣ್ಣಪಾ ಸನಮೂರೆ,
- 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಅಥಣಿ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ. ಅಥಣಿ : ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಅಥಣಿ ತಾಲ್ಲೂಕಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಮಾಜಿ ಉಪಮುಖ್ಯ ಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಭೂಮಿ ಪೂಜೆ ನೆರವೇರಿಸಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಅಥಣಿಯ ಚಿಕ್ಕಟ್ಟಿ ಗ್ರಾಮದ ಸತ್ತಿ ರಸ್ತೆ ಬಳಿ ನಿರ್ಮಿಸಲಾಗುತ್ತಿರುವ 'ಶ್ರಮಿಕ ವಸತಿ ಶಾಲೆ'ಗೆ ಭೂಮಿಪೂಜೆ ನೆರವೇರಿಸಿದರು. ನಮ್ಮ ತಾಲೂಕಿನಲ್ಲಿ ಇರುವ ಏಳು ಸಾವಿರ ಕಾರ್ಮಿಕರ ಕಾರ್ಮಿಕ ವರ್ಗದ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರಮಿಕ ವಸತಿ ಶಾಲೆಯನ್ನು ಅಥಣಿಯಲ್ಲಿ ಸ್ಥಾಪಿಸಲಾಗುತ್ತಿದೆ. ಅಥಣಿ ತಾಲ್ಲೂಕಿನಲ್ಲಿ 36.25 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶಾಲೆ 6ರಿಂದ 12 ನೇ ತರಗತಿ ಓದುವ ಈ ಭಾಗದ ನೂರಾರು ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಿದೆ.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಈ ಶಾಲೆಯ ಫಲಾನುಭವಿಗಳಾಗಿದ್ದು ಬಡ ದುರ್ಬಲ ವರ್ಗದ ಮಕ್ಕಳ ಪಾಲಿಗೆ ಶೈಕ್ಷಣಿಕವಾಗಿ ಕಾರ್ಮಿಕರು ಇದರ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸವದಿ ಹೇಳಿದರು. ಈ ಸಂದರ್ಭದಲ್ಲಿ ಶೆಟ್ಟರ್ ಮಠದ ಪರಮಪೂಜ್ಯ ಮರುಳಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ,ಪುರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಡಿ ಜಿ ನಾಗೇಶ ಉಪನಿರ್ದೇಶಕರು,ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಜೋಗುರ , ಅಥಣಿ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೇ,ಪ್ರಕಾಶ ಮಹಾಜನ, ಪುರಸಭೆ ಚುನಾಯಿತ ಹಾಗೂ ನಾಮನಿರ್ದೆಶೀತ ಸದಸ್ಯರು ,ಮುಖಂಡರು ಉಪಸ್ಥಿತರಿದ್ದರು.3
- Post by @april14news1
- ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.1
- ಕುಂದಗೋಳ: ತಾಲ್ಲೂಕಿನ ಗ್ರಾಮೀಣ ಹಾಗೂ ಬಡ ಬಾಣಂತಿಯರಿಗೆ ಹೆರಿಗೆಯ ನಂತರ ಸುಲಭವಾಗಿ ಮನೆಗೆ ತಲುಪಲು ಅನುಕೂಲವಾಗುವಂತೆ ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸತೀಶ ಕೊಬ್ಬಯ್ಯನವರ ತಾಯಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು ರಿಬ್ಬನ್ ಕತ್ತರಿಸುವ ಮೂಲಕ ಈ ನೂತನ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ ಪಂ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು, ತಮ್ಮ ಮಗನ ಹುಟ್ಟುಹಬ್ಬದ ಸವಿನೆನಪಿಗಾಗಿ ಆಡಂಬರದ ಆಚರಣೆಗಳಿಗೆ ಮೊರೆ ಹೋಗದೆ, ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ವಾಹನವನ್ನು ಉಡುಗೊರೆಯಾಗಿ ನೀಡಲಾಗಿದೆ. ಹೆರಿಗೆಯ ನಂತರ ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆ ಸೇರಲು ಈ ಸೌಲಭ್ಯ ಆಸರೆಯಾಗಲಿದ್ದು, ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಮಾತನಾಡಿ, ತಾಲ್ಲೂಕಿನಲ್ಲಿ ಸಾರಿಗೆ ಬಸ್ಸುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹೆರಿಗೆಯಾದ ಮಹಿಳೆಯರಿಗೆ ಪ್ರಯಾಣಿಸಲು ತೀವ್ರ ತೊಂದರೆಯಾಗುತ್ತಿತ್ತು. ಬಾಣಂತಿಯರ ಈ ಕಷ್ಟವನ್ನು ಅರಿತು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಈ ವಾಹನವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಹನ ಬುಕ್ಕಿಂಗ್‌ಗಾಗಿ 7022430691 ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ವೈದ್ಯರಾದ ವಿಜಯ ಮಾತನಾಡಿ. ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಮಹಿಳೆಯರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ಇಂತಹ ಸೇವೆ ನೀಡಿದ ಮಾತೃಶ್ರೀ ಪೌಂಡೇಶನ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕಾರ್ಯಕ್ರಮದಲ್ಲಿ ಪೌಂಡೇಶನ ಅಧ್ಯಕ್ಷರಾದ ರಾಘವೇಂದ್ರ ಕಡೆಮನಿ, ಗಾಂಧಿ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಸ್ವಾಮಿ ಬಾಳಿಹಳ್ಳಿಮಠ, ವೀರುಪಾಕ್ಷೀ ಹಂಚನಾಳ, ವೀರಯ್ಯ ಶಿರೂರ, ಚನ್ನಬಸಪ್ಪ ಕಾಳೆ, ಮಂಜುನಾಥ ಕಟಗಿ, ಗುರು ಚಲವಾದಿ, ಮುತ್ತಪ್ಪ ಕಟಗಿ, ದೇವಪ್ಪ ಕಾಳಿ, ಮಂಜು ಪೂಜಾರ, ನಾಗರಾಜ ತಾಬ್ರಗುಂಡಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.1
- ಬಸವ ಜಯಂತಿ ನಿಮಿತ್ತ ಈ ದಿನ ವಿಜಯಪುರ ನಗರದಲ್ಲಿನ ಬಸವಣ್ಣನವರ ಪುತ್ಥಳಿಗೆ ವಿವಿಧ ಗಣ್ಯರು ಭಕ್ತಿಯಿಂದ ಮಾಲಾರ್ಪಣೆ ಮಾಡಿದರು. ಆ ಮೇರು ಪುರುಷನ ಆದರ್ಶಗಳು ಹಾಗೂ ವಚನ ಸಂದೇಶಗಳನ್ನು ಸ್ಮರಿಸುತ್ತಾ ನಮಸ್ಕರಿಸಿದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು. ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬಸವ ಜ್ಯೋತಿಯನ್ನು ಹಿಡಿದು, ವಿಜಯಪುರ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಕೈಗೊಂಡಿದ್ದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರನ್ನು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಹಾಗೂ ನೂರಾರು ಬಸವಭಕ್ತರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು. ಭಕ್ತಿಪೂರ್ವಕ ಪಾದಯಾತ್ರೆಯು ನಮ್ಮ ನಾಡಿನಲ್ಲಿ ಬಸವ ತತ್ವದ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂಬ ಆಶಯ ವ್ಯಕ್ತವಾಯಿತು.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ. ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು. 2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.1
- ವಿಜಯಪುರ: ಭೂ ಸಂತ್ರಸ್ತರಿಗಾಗಿ ವಿಶೇಷ ಲೋಕ್ ಅದಾಲತ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ವಿಜಯಪುರ ಜಿಲ್ಲೆಯ ರೈತರಿಗೆ, ಭೂಸ್ವಾಧೀನದ ನ್ಯಾಯಯುತ ಪರಿಹಾರಕ್ಕಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 2026ರ ಏಪ್ರಿಲ್‌ನಿಂದ ಜುಲೈವರೆಗೆ ಈ ಲೋಕ ಅದಾಲತ್ ಆಯೋಜಿಸಿದ್ದು, ಸಂತ್ರಸ್ತ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದು ನ್ಯಾಯಕ್ಕಾಗಿ ವರ್ಷಗಟ್ಟಲೆ ಅಲೆಯುತ್ತಿರುವ ರೈತರಿಗೆ ಸುವರ್ಣಾವಕಾಶವಾಗಿದೆ.1
- ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವಂತ ಎಲ್ಲಾ ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಬೇಸಿಗೆ ಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ಆಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರು ಮೇವುನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೇಸಿಗೆ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಅದರಲ್ಲೂ ಡಿಬಿ ಓಟಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಬೇಸಿಗೆ ಮುಗಿಯುವವರೆಗೆ ನೀರಿನ ಅಭಾವ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು,ಬಾಸಲಾಪುರ, ಮುಗಳಿ, ಗುಳಗುಳಿ ಪಂಚಾಯತಿ ಅಮರಗಟ್ಟಿ,ರುದ್ರಾಪುರ,ರಾಂಪುರ, ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು,ಬಾಸಲಾಪುರಲ್ಲಿ ಡಿಬಿಒಟಿ ನೀರು ಪೂರೈಕೆ ಸರಿಯಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು, ಚಿಕ್ಕಮನ್ನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಡಿಬಿಒಟಿ ನೀರು ಪೂರೈಕೆ ಸರಿ ಇಲ್ಲ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದರು,ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು ,ವಿದ್ಯುತ್ ವ್ಯತ್ಯಯಗಳಿಂದ ಸಹ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಶ್ಮಿ ನಡುವಿನಮನಿ ಹೇಳಿದರು,ಸವಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರು ದಿನಕ್ಕೊಂದು ಸರಿ ನೀರನ್ನು ಬಿಡಲಾಗುತ್ತದೆ, ಐದು ಲಕ್ಷ ಲೀಟರ ಬದಲು ಕೇವಲ ಎರಡು ಲಕ್ಷ ಲೀಟರ್ ನೀರು ಬರುತ್ತಿದೆ ಎಂದು ಪಿಡಿಒ ಮೆಣಸಗಿ ತಿಳಿಸಿದರು,ಹಿರೇಹಾಳ ಪಂಚಾಯತಿ ವ್ಯಾಪ್ತಿಯ ಯರೇಕುರುಬಾನಾಳ ನೀರಿನ ಸಮಸ್ಯೆ ಇದೆ,ನೈನಾಪುರ ,ಬಸರಕೋಡ ನವಗ್ರಾಮ,ಚಿಕ್ಕಳಗುಂಡಿ ಹಿರೇಅಳಗುಂಡಿ,ಹಾಲಕೆರೆ,ಮಾಟರಂಗಿ, ಗೊಗೇರಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಬೇಕು, ನೀರನ್ನು ಪರೀಕ್ಷೆ ಮಾಡದೇ ಸರಬರಾಜು ಮಾಡಬಾರದು ಶುದ್ಧ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತಿ ಆಡಳಿತ ಅಧಿಕಾರಿಗಳು ಸಹ ಹೆಚ್ಚಿನ ಜವಾಬ್ದಾರರಾಗಿದ್ದಿರಿ ನೀರಿನ ಸಮಸ್ಯೆ ಬಾರದ ಹಾಗೆ ನೀವು ಜಾಗೃತ ವಹಿಸಬೇಕು,ಜಾನುವಾರುಗಳಿಗೆ ಮೇವು ನೀರು ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು, ಸಭೆಯಲ್ಲಿ ರೋಣ ತಾಲೂಕು ಗಜೇಂದ್ರಗಡ ತಾಲೂಕು ಮುಂಡರಗಿ ತಾಲೂಕು ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1