Shuru
Apke Nagar Ki App…
ಚಿಂತಾಮಣಿ ಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಕಾರ್ತಿಕೇಯ ಡೆಂಟಲ್ ಕ್ಲಿನಿಕ್’ ಅನ್ನು ಉದ್ಘಾಟಿಸಲಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಪಾಲ್ಗೊಂಡಿದ್ದರು.
Md mansoor
ಚಿಂತಾಮಣಿ ಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಕಾರ್ತಿಕೇಯ ಡೆಂಟಲ್ ಕ್ಲಿನಿಕ್’ ಅನ್ನು ಉದ್ಘಾಟಿಸಲಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಪಾಲ್ಗೊಂಡಿದ್ದರು.
More news from ಕರ್ನಾಟಕ and nearby areas
- ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬರ ವರ್ತನೆಯಿಂದ ರಸ್ತೆಯಲ್ಲೇ ಹೈಡ್ರಾಮಾ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.1
- ತುಮಕೂರಿನಲ್ಲಿ ಎಲ್‌ಐಸಿ ವಿಮಾ ಹಣಕ್ಕಾಗಿ ಅಣ್ಣನೇ ತನ್ನ ಸ್ವಂತ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ತಮ್ಮನ ಹೆಸರಿಗೆ ಎಲ್‌ಐಸಿ ಪಾಲಿಸಿ ಮಾಡಿಸಿ, ನಂತರ ಆತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ನಿದ್ರಗಟ್ಟ ಗ್ರಾಮದ ರಮೇಶ್ (35) ಹತ್ಯೆಯಾದ ದುರ್ದೈವಿ ತಮ್ಮನಾಗಿದ್ದು, ಹನುಮಂತರಾಜು ಎಂಬಾತ ಈ ಪಾಪಿ ಕೃತ್ಯವೆಸಗಿದ ಅಣ್ಣ. ಹನುಮಂತರಾಜು ತಮ್ಮನ ಹತ್ಯೆ ಮಾಡಿ ಅದನ್ನು ಬೈಕ್ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದನು. ತಮ್ಮನ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಪಾಲಿಸಿ ಮಾಡಿಸಿದ್ದ ಹನುಮಂತರಾಜು, ಅಪಘಾತವಾದರೆ ಡಬಲ್ ಹಣ ಪಡೆಯುವ 'ಮಾಸ್ಟರ್ ಪ್ಲಾನ್' ಹೊಂದಿದ್ದನು. ಈ ಕೃತ್ಯಕ್ಕೆ ಎರಡು ವರ್ಷದ ಹಿಂದೆಯೇ 85 ಸಾವಿರ ರೂಪಾಯಿ ಪ್ರೀಮಿಯಂ ಕಟ್ಟಿ, ಕೊಲೆಗೆ ಸ್ಕೆಚ್ ಹಾಕಿಕೊಂಡಿದ್ದ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಮೃತ ರಮೇಶ್ ಬ್ಲಾಕ್ ಮ್ಯಾಜಿಕ್ ತಂತ್ರ ವಿದ್ಯೆಗಳಲ್ಲಿ ತೊಡಗಿದ್ದನು ಮತ್ತು ಆತನ ಮಾಟ ಮಂತ್ರಗಳಿಂದ ಹನುಮಂತರಾಜು ಬೇಸತ್ತಿದ್ದ ಎನ್ನಲಾಗಿದೆ. ಕಳೆದ 19ರಂದು ಹನುಮಂತರಾಜು, ಶಿರಾ ಬಳಿ ನಿಧಿ ಇದೆ, ಪೂಜೆ ಮಾಡೋಕೆ ಬಾ ಎಂದು ರಮೇಶನನ್ನು ಕರೆಸಿಕೊಂಡಿದ್ದನು. ಶಿರಾ ಮತ್ತು ಅಮರಾಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಈ ಭೀಕರ ಕೊಲೆ ನಡೆದಿದೆ. ಆರೋಪಿಗಳು ಮೊದಲು ದೊಣ್ಣೆಯಿಂದ ರಮೇಶನ ಮರ್ಮಾಂಗಕ್ಕೆ ಹೊಡೆದು, ನಂತರ ನಾಲ್ಕೈದು ಬಾರಿ ಕಾರು ಹತ್ತಿಸಿ ಮೃತಪಡಿಸಲು ಯತ್ನಿಸಿದ್ದಾರೆ. ಈ ಭೀಕರ ಹಲ್ಲೆಯ ನಂತರವೂ ರಮೇಶ್ ಜೀವಂತವಾಗಿದ್ದಾಗ, ಆರೋಪಿಗಳು ಬ್ಯಾಟರಿ ಜಂಪ್ ವೈಯರ್‌ನಿಂದ ಆತನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ, ಕೊಲೆ ನಡೆದ ಸ್ಥಳದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿ ಮೃತದೇಹವನ್ನು ಎಸೆದು, ರಸ್ತೆ ಬದಿಯಲ್ಲಿ ಬೈಕ್ ಬೀಳಿಸಿ, ಇದು ಅಪಘಾತ ಎಂದು ನಂಬಿಸಲು ಯತ್ನಿಸಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಿರಾ ಡಿವೈಎಸ್ಪಿ ಶೇಖರ್ ಅವರಿಗೆ ಯಾವುದೇ ಬೈಕ್ ಅಪಘಾತಕ್ಕೆ ಸಾಕ್ಷ್ಯಗಳಿಲ್ಲದ ಕಾರಣ ಸಂಶಯ ಮೂಡಿತ್ತು. ಕೃತ್ಯ ನಡೆದ ಕೇವಲ 12 ಗಂಟೆಯೊಳಗೆ ಪಟ್ಟನಾಯಕನಹಳ್ಳಿ ಪೊಲೀಸರು ಈ ಪ್ರಕರಣವನ್ನು ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷ್ಮೀಕಾಂತ, ನವೀನ್ ಕುಮಾರ್, ಮತ್ತು ಎಂ.ಡಿ. ಜಿಲಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.1
- ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಬುಧವಾರ ಸಂಜೆ ದಾರುಣ ಘಟನೆ ನಡೆದಿದೆ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಕಾರಿನ ಚಾಲಕ ಸೇರಿ ಒಟ್ಟು ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರು ಪಾರಾಗಿರುವುದಾಗಿ ವರದಿಯಾಗಿದೆ. ಮೃತರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (೫೨), ಅವರ ಮಗಳು ಪ್ರಿಯಾಂಕ, ಶ್ವೇತಾ (೩೮), ಅವರ ಮಗಳು ಚೈತ್ರಾ (೨೦) ಹಾಗೂ ಬೆಂಗಳೂರಿನ ಕಾರಿನ ಚಾಲಕ ಮಹೇಶ್ (೩೦) ಎಂದು ಗುರುತಿಸಲಾಗಿದೆ. ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣ ಕೂಟದ ನಿಮಿತ್ತ ಆಗಮಿಸಿದ್ದ ಇವರು, ಪೂಜೆ ಸಲ್ಲಿಸಿದ ನಂತರ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಕಸ್ಮಿಕವಾಗಿ ಕಾಲು ಜಾರಿ ನಾಲ್ವರು ಮಹಿಳೆಯರು ನದಿಗೆ ಬಿದ್ದಿದ್ದಾರೆ. ನದಿಯ ವೇಗದ ಹರಿವಿಗೆ ಸಿಲುಕಿದ ಅವರನ್ನು ರಕ್ಷಿಸಲು ಮುಂದಾದ ಕಾರಿನ ಚಾಲಕ ಮಹೇಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ನುರಿತ ಈಜುಗಾರರ ಸಹಾಯದಿಂದ ರಾತ್ರಿ ಸುಮಾರು ೭ ಗಂಟೆಗೆ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪರೀಕ್ಷೆ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು. ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿಹೆಚ್‌ಸಿ ಗೋವರ್ಧನ್, ಮೋಹನ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಗೀತಾ ಅಂಚಿನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.1
- ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಒಂದೇ ಕುಟುಂಬದ ಐವರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬುಧವಾರ ನಡೆದಿದ್ದು, ಮೃತರ ಹೆಸರು ಮತ್ತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಇವರೆಲ್ಲರೂ ಚೆನ್ನಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ. ಚಾಲಕ ಸೇರಿದಂತೆ ಒಂದೇ ಕುಟುಂಬದ ಒಟ್ಟು ಏಳು ಜನರ ತಂಡ ಬುಧವಾರ ಬೆಳಗ್ಗೆ ಸಾತನೂರು ಬಳಿಯ ಕಬ್ಬಾಳಮ್ಮ ದೇವಾಲಯಕ್ಕೆ ಕಾರಿನಲ್ಲಿ ತೆರಳಿತ್ತು. ಕಬ್ಬಾಳಮ್ಮನ ಪೂಜೆ ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಮುತ್ತತ್ತಿಗೆ ಬಂದಿದ್ದ ಈ ಕುಟುಂಬ, ಆಂಜನೇಯಸ್ವಾಮಿ ದರ್ಶನಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಐವರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಈಗಾಗಲೇ ಮೂವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಉಳಿದ ಇಬ್ಬರ ಶವಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಲಗೂರು ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಎಸ್ಪಿ ಡಾ. ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಸಿಪಿಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1
- ತುಮಕೂರು ಜಿಲ್ಲೆಯ ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಪೋಲಿಸ್ ಇಲಾಖೆ ಮತ್ತು ಎಬಿವಿಪಿ ವತಿಯಿಂದ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಅವರು ಭಾಗವಹಿಸಿ, ಪೋಕ್ಸೋ ಕಾಯ್ದೆಯ ಗಂಭೀರತೆ ಹಾಗೂ ಹದಿಹರೆಯದ ವಿದ್ಯಾರ್ಥಿನಿಯರ ಸುರಕ್ಷತೆಯ ಕುರಿತು ವಿಸ್ತೃತವಾಗಿ ಮಾತನಾಡಿದರು. ಪವಿತ್ರ ಅವರು ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗಿ ದಾರಿ ತಪ್ಪುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದಾಖಲಾಗುತ್ತಿರುವ ಪ್ರಕರಣಗಳನ್ನು ಉಲ್ಲೇಖಿಸಿ, ಅಪ್ರಾಪ್ತ ಹೆಣ್ಣುಮಕ್ಕಳು ಹೆಚ್ಚಾಗಿ ಜೆಸಿಬಿ ಹಾಗೂ ಇತರೆ ವಾಹನಗಳ ಚಾಲಕರು, ಫೋಟೋಗ್ರಾಫರ್‌ಗಳು, ಪಾನಿಪುರಿ ಹಾಗೂ ಚಾಟ್ಸ್ ಅಂಗಡಿಯವರ ಕಡೆಗೆ ಬೇಗನೆ ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದರು. 'ಇತ್ತೀಚಿನ ಹುಡುಗಿಯರು ಅಂಕಲ್ ಗಳನ್ನು ಇಷ್ಟಪಡುತ್ತಿದ್ದಾರೆ' ಎಂಬ ಗಮನಾರ್ಹ ಅಂಶವನ್ನೂ ಅವರು ಹಂಚಿಕೊಂಡರು. ಪೋಕ್ಸೋ ಕಾಯ್ದೆಯ ಕಾನೂನು ಗಂಭೀರತೆಯನ್ನು ವಿವರಿಸಿದ ಅವರು, ಒಮ್ಮೆ ಈ ಕಾಯ್ದೆಯಡಿ ದೂರು ದಾಖಲಾಗಿ ಆರೋಪಿಯ ವಿರುದ್ಧ ಡಿಎನ್‌ಎ ಪರೀಕ್ಷೆಯ ವರದಿ ಸಾಬೀತಾದರೆ, ನಂತರದ ದಿನಗಳಲ್ಲಿ ಸಂತ್ರಸ್ತೆ ಅಥವಾ ಆಕೆಯ ಪೋಷಕರು ದೂರು ವಾಪಸ್ ಪಡೆಯಲು ಬಯಸಿದರೂ ಸಹ ಆರೋಪಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಅನುಭವಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಡಿಎನ್‌ಎ ವರದಿ ಸಕಾರಾತ್ಮಕವಾಗಿ ಬಂದಲ್ಲಿ ಆರೋಪಿಗೆ ಕಾನೂನಿನ ಪ್ರಕಾರ 20 ರಿಂದ 25 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಆಗುವುದು ಖಚಿತವಾಗುತ್ತದೆ ಎಂದು ಪವಿತ್ರ ಅವರು ತಿಳಿಸಿದರು.1
- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ಸಂತಾನ ಭಾಗ್ಯಕ್ಕಾಗಿ ಪ್ರಸಿದ್ಧವಾದ ತೊಟ್ಟಿಲು ಪೂಜೆ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಬೆಟ್ಟದ ಶಂಕರಪ್ಪ ಅವರು ನೀಡುವ ಗಿಡಮೂಲಿಕೆ ಔಷಧಿ ಹಾಗೂ 'ನ್ಯಾಣ ಪೂಜೆ'ಯಿಂದ ಮಕ್ಕಳಾದವರು ಎಂಬ ದೃಢ ನಂಬಿಕೆಯಿಂದ ರಾಜ್ಯದ ವಿವಿಧ ಭಾಗಗಳಿಂದ ನೂರಾರು ದಂಪತಿಗಳು ತಮ್ಮ ಮಕ್ಕಳೊಂದಿಗೆ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಕನ್ನಡ ಚಿತ್ರರಂಗದ ಖ್ಯಾತ ನಟರಾದ ತಾರಾ ಮತ್ತು ಶಶಿಕುಮಾರ್ ಕೂಡ ಈ ವಿಶೇಷ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಭಕ್ತಿಪೂರ್ವಕವಾಗಿ ನಡೆಯುತ್ತಿದ್ದ ತೊಟ್ಟಿಲು ಪೂಜೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.3
- ಹುಳಿಯಾರಿನ ವಾಸವಿ ಶಾಲೆಯಲ್ಲಿ ಪೋಲಿಸ್ ಇಲಾಖೆ ಮತ್ತು ಎಬಿವಿಪಿಯಿಂದ ಆಯೋಜಿಸಲಾಗಿದ್ದ ಮಾದಕ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ, ಚಿಕ್ಕನಾಯಕನಹಳ್ಳಿ ಸಿಪಿಐ ಜನಾರ್ಧನ್ ಅವರು ಕ್ರೀಡೆ ಮತ್ತು ದೈಹಿಕ ಕಸರತ್ತಿನ ಮಹತ್ವವನ್ನು ಪ್ರಾಯೋಗಿಕವಾಗಿ ತೋರಿಸಲು ವಿದ್ಯಾರ್ಥಿಗಳಿಗೆ ಮುಕ್ತ ಸವಾಲು ನೀಡಿದರು. ಈ ಸವಾಲನ್ನು ಸ್ವೀಕರಿಸಿ ವೇದಿಕೆಗೆ ಬಂದ ವಾಸವಿ ಶಾಲೆಯ ವಿದ್ಯಾರ್ಥಿ ಪ್ರಶಾಂತ್ ಸತತವಾಗಿ 15 ಡಿಪ್ಸ್ ಹೊಡೆದು ಎಲ್ಲರ ಗಮನ ಸೆಳೆದರು. ಇದೇ ವೇಳೆ, ದಿವ್ಯ ಎಂಬ ವಿದ್ಯಾರ್ಥಿನಿ 35 ಸ್ಕಿಪ್ಪಿಂಗ್ ಮಾಡಿದರೆ, ಭೂಸಿರಿ ಎಂಬ ಮತ್ತೊಬ್ಬ ವಿದ್ಯಾರ್ಥಿನಿ ಸತತವಾಗಿ 100 ಸ್ಕಿಪ್ಪಿಂಗ್ ಮಾಡುವ ಮೂಲಕ ವೇದಿಕೆಯಲ್ಲಿದ್ದ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡರು. ಸಿಪಿಐ ಜನಾರ್ಧನ್ ಅವರು ಕೇವಲ 100 ರೂಪಾಯಿಗೆ ಸಿಗುವ ಸ್ಕಿಪ್ಪಿಂಗ್ ರೋಪ್ ಬಳಸಿ ಮನೆಯ ಮುಂದೆಯೇ ಸುಲಭವಾಗಿ ವ್ಯಾಯಾಮ ಮಾಡಬಹುದೆಂದು ವಿವರಿಸಿದರು. ಇದು ಕಾಲಿನ ಸ್ನಾಯುಗಳನ್ನು ಬಲಪಡಿಸಿ, ದೇಹದ ಕ್ಯಾಲೊರಿಯನ್ನು ಕರಗಿಸಲು ನೆರವಾಗುತ್ತದೆ ಎಂದು ಹೇಳಿದರು. ಕ್ರೀಡೆಗಳ ಜೊತೆಗೆ ಯೋಗ, ಧ್ಯಾನ ಹಾಗೂ 'ಪುಸ್ತಕ ಓದುವ ಹವ್ಯಾಸ'ವನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಶಾಲಾ ಪಠ್ಯಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸುವ ಮತ್ತು ಮಹನೀಯರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಲು ಅವರು ಸಲಹೆ ನೀಡಿದರು. ಇಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆ ಎಂದು ಸಿಪಿಐ ಜನಾರ್ಧನ್ ತಿಳಿಸಿದರು.1
- ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ, ಪುಟ್ಟ ಪುಟ್ಟ ಮಕ್ಕಳು ಭೂ ಸ ಪೋಷಣ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.1
- ಅಂಚಟಗೇರಿ ಪೆಟ್ರೋಲ್ ಬಂಕ್ ಬಳಿ ಗಲಾಟೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಹಲ್ಲೆಗೊಳಗಾಗಿ ಗಾಯಗೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಇಬ್ಬರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.1