logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಖದೀಮರ ಕೈಚಳಕ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ತಾಜಾ ಘಟನೆಯೊಂದರಲ್ಲಿ, ನಗರದ ಗಾಂಧಿನಗರದ ರಾಗಿ ಮಿಷನ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ. ಸೋಮವಾರ ಮುಂಜಾನೆ ಈ ಕಳ್ಳತನ ನಡೆದಿದೆ. ಹರೀಶ್ ಎಂಬುವವರು ತಮ್ಮ ಮನೆಯ ಮುಂದೆ ನೀಲಿ ಬಣ್ಣದ ಹೋಂಡಾ ಡಿಯೋ ಗಾಡಿಯನ್ನು ನಿಲ್ಲಿಸಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಮೂವರು ಅಪರಿಚಿತರು, ಕ್ಷಣಾರ್ಧದಲ್ಲಿ ಲಾಕ್ ಮುರಿದು ಗಾಡಿಯನ್ನು ಕಳ್ಳತನ ಮಾಡಿದ್ದಾರೆ. ​ಕಳ್ಳರು ಗಾಡಿಯನ್ನು ಕದ್ದೊಯ್ಯುವ ಸಂಪೂರ್ಣ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

15 hrs ago
user_Anil
Anil
ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
15 hrs ago

ಖದೀಮರ ಕೈಚಳಕ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ತಾಜಾ ಘಟನೆಯೊಂದರಲ್ಲಿ, ನಗರದ ಗಾಂಧಿನಗರದ ರಾಗಿ ಮಿಷನ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ. ಸೋಮವಾರ ಮುಂಜಾನೆ ಈ ಕಳ್ಳತನ ನಡೆದಿದೆ. ಹರೀಶ್ ಎಂಬುವವರು ತಮ್ಮ ಮನೆಯ ಮುಂದೆ ನೀಲಿ ಬಣ್ಣದ ಹೋಂಡಾ ಡಿಯೋ ಗಾಡಿಯನ್ನು ನಿಲ್ಲಿಸಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಮೂವರು ಅಪರಿಚಿತರು, ಕ್ಷಣಾರ್ಧದಲ್ಲಿ ಲಾಕ್ ಮುರಿದು ಗಾಡಿಯನ್ನು ಕಳ್ಳತನ ಮಾಡಿದ್ದಾರೆ. ​ಕಳ್ಳರು ಗಾಡಿಯನ್ನು ಕದ್ದೊಯ್ಯುವ ಸಂಪೂರ್ಣ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

More news from ಕರ್ನಾಟಕ and nearby areas
  • ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ತಾಜಾ ಘಟನೆಯೊಂದರಲ್ಲಿ, ನಗರದ ಗಾಂಧಿನಗರದ ರಾಗಿ ಮಿಷನ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ. ಸೋಮವಾರ ಮುಂಜಾನೆ ಈ ಕಳ್ಳತನ ನಡೆದಿದೆ. ಹರೀಶ್ ಎಂಬುವವರು ತಮ್ಮ ಮನೆಯ ಮುಂದೆ ನೀಲಿ ಬಣ್ಣದ ಹೋಂಡಾ ಡಿಯೋ ಗಾಡಿಯನ್ನು ನಿಲ್ಲಿಸಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಮೂವರು ಅಪರಿಚಿತರು, ಕ್ಷಣಾರ್ಧದಲ್ಲಿ ಲಾಕ್ ಮುರಿದು ಗಾಡಿಯನ್ನು ಕಳ್ಳತನ ಮಾಡಿದ್ದಾರೆ. ​ಕಳ್ಳರು ಗಾಡಿಯನ್ನು ಕದ್ದೊಯ್ಯುವ ಸಂಪೂರ್ಣ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
    1
    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ತಾಜಾ ಘಟನೆಯೊಂದರಲ್ಲಿ, ನಗರದ ಗಾಂಧಿನಗರದ ರಾಗಿ ಮಿಷನ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ.
ಸೋಮವಾರ ಮುಂಜಾನೆ ಈ ಕಳ್ಳತನ ನಡೆದಿದೆ. ಹರೀಶ್ ಎಂಬುವವರು ತಮ್ಮ ಮನೆಯ ಮುಂದೆ ನೀಲಿ ಬಣ್ಣದ ಹೋಂಡಾ ಡಿಯೋ ಗಾಡಿಯನ್ನು ನಿಲ್ಲಿಸಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಮೂವರು ಅಪರಿಚಿತರು, ಕ್ಷಣಾರ್ಧದಲ್ಲಿ ಲಾಕ್ ಮುರಿದು ಗಾಡಿಯನ್ನು ಕಳ್ಳತನ ಮಾಡಿದ್ದಾರೆ.
​ಕಳ್ಳರು ಗಾಡಿಯನ್ನು ಕದ್ದೊಯ್ಯುವ ಸಂಪೂರ್ಣ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    15 hrs ago
  • ಪ್ರಧಾನಿ ಮೋದಿ ಶಿಸ್ತಿನ ಸಿಪಾಯಿ, ನಾವೂ ಅವರ ಹಾದಿಯಲ್ಲೇ ಸಾಗೋಣ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ. ​ಶಿಡ್ಲಘಟ್ಟ: "ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯಲ್ಲಿ ಶಿಸ್ತು ಮತ್ತು ಕಾರ್ಯಕರ್ತನಿಗೆ ಮೊದಲ ಆದ್ಯತೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ, ಇಂದಿಗೂ ತಮ್ಮನ್ನು ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಕರೆದುಕೊಳ್ಳುತ್ತಾರೆ. ಅವರ ಇದೇ ಸರಳತೆ ಮತ್ತು ಕರ್ತವ್ಯನಿಷ್ಠೆ ನಮಗೆಲ್ಲರಿಗೂ ದಾರಿದೀಪ" ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು. ಶಿಡ್ಲಘಟ್ಟ ​ನಗರದ ಸೇವಾ ಸೌದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಂಘಟನಾ ಪರ್ವ ಮತ್ತು ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯಲ್ಲಿ ಯುವ ನಾಯಕತ್ವದ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. "ರಾಷ್ಟ್ರ ಮಟ್ಟದಲ್ಲಿ ನಿತಿನ್ ನವೀನ್ ಅವರಂತಹ ಯುವ ನಾಯಕರಿಗೆ ಜವಾಬ್ದಾರಿ ನೀಡಿರುವುದು ಪಕ್ಷಕ್ಕೆ ಹೊಸ ಕಳೆ ತಂದಿದೆ. ಅದೇ ಮಾದರಿಯಲ್ಲಿ ನಮ್ಮ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಯುವಕರನ್ನು ಪಕ್ಷದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ" ಎಂದರು. "ಸಂಘಟನಾ ಪರ್ವವು ಕೇವಲ ಮೇಲ್ಮಟ್ಟದ ಸಭೆಗಳಿಗೆ ಸೀಮಿತವಾಗಬಾರದು. ನಾವು ಪ್ರತಿ ಮಂಡಲ ಮತ್ತು ಬೂತ್ ಮಟ್ಟಕ್ಕೆ ಹೋಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಜನರಂತೆ ಒಟ್ಟು ಒಂಬತ್ತು ತಂಡಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಈ ತಂಡಗಳು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಸಿದ್ಧಾಂತ ಮತ್ತು ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲಿವೆ" ಎಂದು ಸೀಕಲ್ ರಾಮಚಂದ್ರ ಗೌಡ ವಿವರಿಸಿದರು. ಸಭೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು, "ಬಿಜೆಪಿ ಎಂದರೆ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಇದು ದೇಶ ಕಟ್ಟುವ ಸಂಘಟನೆ. ಬೂತ್ ಮಟ್ಟದಲ್ಲಿ ನಾವು ಎಷ್ಟು ಗಟ್ಟಿಯಾಗುತ್ತೇವೆಯೋ ಅಷ್ಟು ಸುಲಭವಾಗಿ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು. ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಿ, ಬಿಜೆಪಿಯನ್ನು ಅಜೇಯ ಶಕ್ತಿಯನ್ನಾಗಿ ರೂಪಿಸೋಣ" ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್, ಜಿಲ್ಲಾ ಕಾರ್ಯದರ್ಶಿ ಅಶೋಕ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ಜಿಲ್ಲಾ ಎಲ್ಲಾ ಮಂಡಲ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳು ಇನ್ನು ಮುಂತಾದವರು ಹಾಜರಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ
    1
    ಪ್ರಧಾನಿ ಮೋದಿ ಶಿಸ್ತಿನ ಸಿಪಾಯಿ, ನಾವೂ ಅವರ ಹಾದಿಯಲ್ಲೇ ಸಾಗೋಣ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ.
​ಶಿಡ್ಲಘಟ್ಟ: "ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯಲ್ಲಿ ಶಿಸ್ತು ಮತ್ತು ಕಾರ್ಯಕರ್ತನಿಗೆ ಮೊದಲ ಆದ್ಯತೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ, ಇಂದಿಗೂ ತಮ್ಮನ್ನು ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಕರೆದುಕೊಳ್ಳುತ್ತಾರೆ. ಅವರ ಇದೇ ಸರಳತೆ ಮತ್ತು ಕರ್ತವ್ಯನಿಷ್ಠೆ ನಮಗೆಲ್ಲರಿಗೂ ದಾರಿದೀಪ" ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು.
ಶಿಡ್ಲಘಟ್ಟ ​ನಗರದ ಸೇವಾ ಸೌದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಂಘಟನಾ ಪರ್ವ ಮತ್ತು ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯಲ್ಲಿ ಯುವ ನಾಯಕತ್ವದ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. "ರಾಷ್ಟ್ರ ಮಟ್ಟದಲ್ಲಿ ನಿತಿನ್ ನವೀನ್ ಅವರಂತಹ ಯುವ ನಾಯಕರಿಗೆ ಜವಾಬ್ದಾರಿ ನೀಡಿರುವುದು ಪಕ್ಷಕ್ಕೆ ಹೊಸ ಕಳೆ ತಂದಿದೆ. ಅದೇ ಮಾದರಿಯಲ್ಲಿ ನಮ್ಮ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಯುವಕರನ್ನು ಪಕ್ಷದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ" ಎಂದರು.
"ಸಂಘಟನಾ ಪರ್ವವು ಕೇವಲ ಮೇಲ್ಮಟ್ಟದ ಸಭೆಗಳಿಗೆ ಸೀಮಿತವಾಗಬಾರದು. ನಾವು ಪ್ರತಿ ಮಂಡಲ ಮತ್ತು ಬೂತ್ ಮಟ್ಟಕ್ಕೆ ಹೋಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಜನರಂತೆ ಒಟ್ಟು ಒಂಬತ್ತು ತಂಡಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಈ ತಂಡಗಳು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಸಿದ್ಧಾಂತ ಮತ್ತು ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲಿವೆ" ಎಂದು ಸೀಕಲ್ ರಾಮಚಂದ್ರ ಗೌಡ ವಿವರಿಸಿದರು.
ಸಭೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು, "ಬಿಜೆಪಿ ಎಂದರೆ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಇದು ದೇಶ ಕಟ್ಟುವ ಸಂಘಟನೆ. ಬೂತ್ ಮಟ್ಟದಲ್ಲಿ ನಾವು ಎಷ್ಟು ಗಟ್ಟಿಯಾಗುತ್ತೇವೆಯೋ ಅಷ್ಟು ಸುಲಭವಾಗಿ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು. ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಿ, ಬಿಜೆಪಿಯನ್ನು ಅಜೇಯ ಶಕ್ತಿಯನ್ನಾಗಿ ರೂಪಿಸೋಣ" ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್, ಜಿಲ್ಲಾ ಕಾರ್ಯದರ್ಶಿ ಅಶೋಕ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ಜಿಲ್ಲಾ ಎಲ್ಲಾ ಮಂಡಲ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳು ಇನ್ನು ಮುಂತಾದವರು ಹಾಜರಿದ್ದರು.
ವರದಿ ನಂದಿ ರಾಜೇಶ್ ಶಿಡ್ಲಘಟ್ಟ
    user_Nandi Rajesh Press reporter
    Nandi Rajesh Press reporter
    ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    6 hrs ago
  • ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸಿದ್ದು ಪಾಟೀಲ್ ಕಿಡಿ #JB_NEWS_KANNADA #bidar #humnabad
    1
    ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸಿದ್ದು ಪಾಟೀಲ್ ಕಿಡಿ #JB_NEWS_KANNADA #bidar #humnabad
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Kolar, Karnataka•
    6 hrs ago
  • ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ
    1
    ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ
    user_Venu Gopal
    Venu Gopal
    ಪತ್ರಕರ್ತ Sidlaghatta, Chikkaballapura•
    14 hrs ago
  • Post by ಗಿರೀಶ್ B
    2
    Post by ಗಿರೀಶ್ B
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    4 hrs ago
  • *ಚಿಂತಾಮಣಿ:-ಗುಡಿಸಲು ಮುಕ್ತ ವನ್ನಾಗಿ ಮಾಡುವುದು ನನ್ನ ಗುರಿ ಸಿಎಂ ಬೈರೇಗೌಡ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷರು* ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾನವ ಹಕ್ಕುಗಳು ಕಮಿಟಿ ಹಾಗೂ ಕರ್ನಾಟಕ ರಾಜ್ಯ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಹಾಗೂ ಇತರೆ ಕಾರ್ಮಿಕ ಸಂಘ , ಸಹಯೋಗದಲ್ಲಿ ಇಂದು ಚಿಂತಾಮಣಿ ತಾಲೂಕಿನಲ್ಲಿ ಪತ್ರಿಕಾ ಭವನದಲ್ಲಿ ಮನೆ ಸಾಮಗ್ರಿಗಳು ವಿತರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಸಿ ಎಂ ಬೈರೇಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡೋದಾ ಗೆ ಹೇಳಿದ್ದಾರೆ ಅಂತಂತವಾಗಿ ಸಾಮರ್ಥ್ಯವನ್ನು ವಿತರಣೆ ಮಾಡಲಾಗುವುದು 15ಕ್ಕೆ 21 ಅಳತಗೆ ತಕ್ಕಂತೆ ಸಾಮಗ್ರಿಗಳನ್ನು ನೀಡಲಾಗುವುದು ಈ ಜಿಲ್ಲೆಯಲ್ಲಿರುವ ಕಡು ಬಡವರಿಗೆ ಈ ಅವಕಾಶವನ್ನು ಕಲ್ಪಿಸಿದ್ದಾರೆ ಇನ್ನೂ ಇದೇ ಸಂದರ್ಭದಲ್ಲಿ:-ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಉಪಾಧ್ಯಕ್ಷ ಶಿವಾರೆಡ್ಡಿ ಖಜಾಂಚಿ ರಾಜಣ್ಣ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು ವರದಿ:-ಸೀನ.ಟಿ ಚಿಂತಾಮಣಿ
    2
    *ಚಿಂತಾಮಣಿ:-ಗುಡಿಸಲು ಮುಕ್ತ ವನ್ನಾಗಿ ಮಾಡುವುದು ನನ್ನ ಗುರಿ ಸಿಎಂ ಬೈರೇಗೌಡ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಅಧ್ಯಕ್ಷರು*
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾನವ ಹಕ್ಕುಗಳು ಕಮಿಟಿ ಹಾಗೂ ಕರ್ನಾಟಕ ರಾಜ್ಯ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಹಾಗೂ ಇತರೆ ಕಾರ್ಮಿಕ ಸಂಘ , ಸಹಯೋಗದಲ್ಲಿ ಇಂದು ಚಿಂತಾಮಣಿ ತಾಲೂಕಿನಲ್ಲಿ ಪತ್ರಿಕಾ ಭವನದಲ್ಲಿ ಮನೆ  ಸಾಮಗ್ರಿಗಳು ವಿತರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು 
ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಕಮಿಟಿ ಸಂಸ್ಥಾಪಕ ಸಿ ಎಂ ಬೈರೇಗೌಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡೋದಾ ಗೆ ಹೇಳಿದ್ದಾರೆ ಅಂತಂತವಾಗಿ ಸಾಮರ್ಥ್ಯವನ್ನು ವಿತರಣೆ ಮಾಡಲಾಗುವುದು 15ಕ್ಕೆ 21 ಅಳತಗೆ ತಕ್ಕಂತೆ ಸಾಮಗ್ರಿಗಳನ್ನು ನೀಡಲಾಗುವುದು
ಈ ಜಿಲ್ಲೆಯಲ್ಲಿರುವ ಕಡು ಬಡವರಿಗೆ ಈ  ಅವಕಾಶವನ್ನು  
ಕಲ್ಪಿಸಿದ್ದಾರೆ
ಇನ್ನೂ ಇದೇ ಸಂದರ್ಭದಲ್ಲಿ:-ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ಉಪಾಧ್ಯಕ್ಷ ಶಿವಾರೆಡ್ಡಿ ಖಜಾಂಚಿ ರಾಜಣ್ಣ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು
ವರದಿ:-ಸೀನ.ಟಿ
ಚಿಂತಾಮಣಿ
    user_KRUTHI NEWS KANNADA
    KRUTHI NEWS KANNADA
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    15 hrs ago
  • ಮಲ್ಲಿಕಾರ್ಜುನ ಮುತ್ಯಾ ಎಂಬ ಸ್ವಯಂ ಘೋಷಿತ ...ಮಾನವ ಭಕ್ತರನ್ನು ಆಶೀರ್ವದಿಸುವ ನೆಪದಲ್ಲಿ ಅಸಹ್ಯವಾಗಿ ತುಟಿಗಳಿಗೆ ಚುಂಬಿಸುವ ಮೂಲಕ ಶೋಷಣೆ ಮಾಡಿದ್ದಾನೆ, ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ತಲೆಮರೆಸಿಕೊಂಡಿದ್ದಾನೆ.
    1
    ಮಲ್ಲಿಕಾರ್ಜುನ ಮುತ್ಯಾ ಎಂಬ ಸ್ವಯಂ ಘೋಷಿತ ...ಮಾನವ ಭಕ್ತರನ್ನು ಆಶೀರ್ವದಿಸುವ ನೆಪದಲ್ಲಿ ಅಸಹ್ಯವಾಗಿ ತುಟಿಗಳಿಗೆ ಚುಂಬಿಸುವ ಮೂಲಕ ಶೋಷಣೆ ಮಾಡಿದ್ದಾನೆ, ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕೂಡಲೇ ತಲೆಮರೆಸಿಕೊಂಡಿದ್ದಾನೆ.
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ವಿಜ್ಞಾನ ಮೇಳದಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕುತೂಹಲ ಮತ್ತು ಕಲಿಕೆ: ಸಾಂದೀಪನಿ ಶಾಲೆಯಲ್ಲಿ ವಿಜ್ಞಾನ ಹಬ್ಬ. ​ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮೇಲೆಕೋಟೆ ಗ್ರಾಮದ ಸಾಂದೀಪನಿ ಶಾಲೆಯಲ್ಲಿ ಇಂದು ವಿಜ್ಞಾನ ಮೇಳವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಮೇಳದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಾವೇ ಸ್ವತಃ ಸಿದ್ಧಪಡಿಸಿದ ವಿವಿಧ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಮೊದಲಿಗೆ ಟೇಪ್ ಕತ್ತರಿಸುವ ಮೂಲಕ ಶಾಲೆಯ ಕಾರ್ಯದರ್ಶಿ ಶಂಕರ್  ಹಾಗೂ ಪೋಷಕರು ಉದ್ಘಾಟಿಸಿದರು. ​ಕಾರ್ಯಕ್ರಮದ ಕುರಿತು ಮಾತನಾಡಿದ ಶಿಕ್ಷಕಿ ನಾಗಶ್ರೀ ಅವರು, "ಇಂದಿನ ವಿಜ್ಞಾನ ಮೇಳದಿಂದ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಪ್ರಾಯೋಗಿಕವಾಗಿ ಅನೇಕ ವಿಷಯಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಮಾದರಿಯನ್ನು ಹೇಗೆ ಸಿದ್ಧಪಡಿಸಬೇಕು, ಅದಕ್ಕೆ ಬೇಕಾದ ಸಂಪರ್ಕಗಳನ್ನು  ಹೇಗೆ ನೀಡಬೇಕು ಮತ್ತು ಐ-ಫಾರ್ವರ್ಡ್ ತಂತ್ರಜ್ಞಾನದ ಬಳಕೆಯ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಂಡಿದ್ದಾರೆ," ಎಂದು ಹಂಚಿಕೊಂಡರು. ​"ಮಾದರಿಗಳ ಮೂಲಕ ಶಿಕ್ಷಣ ನೀಡಿದಾಗ ಅದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ವಿಷಯಗಳನ್ನು ಪೋಷಕರಿಗೆ ಪದೇ ಪದೇ ವಿವರಿಸುವುದರಿಂದ, ಆ ಪರಿಕಲ್ಪನೆಗಳು ಅವರ ಮೆದುಳಿನಲ್ಲಿ ಅಚ್ಚೊತ್ತಿದಂತಾಗುತ್ತವೆ. ಇದು ಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗಲಿದೆ," ಎಂದು ಅವರು ಅಭಿಪ್ರಾಯಪಟ್ಟರು. ​ಈ ಬಾರಿಯ ಮೇಳದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಅವುಗಳನ್ನು ಎಚ್ಚರಿಕೆಯಿಂದ ಹೇಗೆ ನಿರ್ವಹಿಸಬೇಕು ಎಂಬುದನ್ನು ಮಕ್ಕಳು ಕಲಿತುಕೊಂಡಿದ್ದಾರೆ. ವಿಜ್ಞಾನ ಮೇಳಕ್ಕೆ ಭೇಟಿ ನೀಡಿದ್ದ ಪೋಷಕರು ಮಕ್ಕಳ ಸೃಜನಶೀಲತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ಚಂದ್ರಶೇಖರ್ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಅಂಕಗಳಿಗಿಂತ ಕೌಶಲ ಮುಖ್ಯವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ 1ನೇ ತರಗತಿಯಿಂದಲೇ ಕೋಡಿಂಗ್, ರೋಬೋಟಿಕ್ಸ್, ಕೃತಕ ಬುದ್ಧಿ  (AI) ಮತ್ತು ಸುಧಾರಿತ ಇಂಗ್ಲಿಷ್ ಸಂವಹನ ಕಲೆಗಳನ್ನು ಕಲಿಸಲಾಗುತ್ತಿದೆ. ಈ ವರ್ಷ ಪೂರ್ತಿ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ಜ್ಞಾನವನ್ನು ಪ್ರಾಯೋಗಿಕ ಮಾದರಿಗಳ ಮೂಲಕ ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ಕೆಮಿಕಲ್ ಪ್ರಯೋಗಗಳು ಮತ್ತು ರೋಬೋಟಿಕ್ಸ್ ಮಾದರಿಗಳನ್ನು ಪ್ರದರ್ಶಿಸಿ ಬೆರಗುಗೊಳಿಸಿದರು. ವಿಶೇಷವಾಗಿ ಹಿರಿಯ ವಿದ್ಯಾರ್ಥಿಗಳು ಇಂದಿನ ಐಟಿ ಲೋಕದಲ್ಲಿ ಬಳಕೆಯಾಗುವ HTML, Java ಮತ್ತು Python ನಂತಹ ಪ್ರೋಗ್ರಾಮಿಂಗ್ ಭಾಷೆಗಳ ಕುರಿತು ಮಾಹಿತಿ ನೀಡುವ ಮೂಲಕ ತಮ್ಮ ತಾಂತ್ರಿಕ ಜ್ಞಾನವನ್ನು ಸಾಬೀತುಪಡಿಸಿದರು. ಶಾಲಾ ಹಂತದಲ್ಲೇ ಮಕ್ಕಳಿಗೆ ಇಂತಹ ಭಾಷೆಗಳ ಬೇಸಿಕ್ಸ್ ಕಲಿಸುವುದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಬುನಾದಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಶಾಲೆಯಿಂದ ಹೋಗುವಾಗ ಕಿಡ್ನಾಪರ್ಸ್ ನಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಡೆಮೋ ಮುಖಾಂತರ ತೋರಿಸಿದರು. ನಂತರ ಮಾತಾಡಿದ ಪೋಷಕರೊಬ್ಬರು ಕಳೆದ ಎರಡು ವರ್ಷಗಳಿಂದ ತಮ್ಮ ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಶಾಲೆಯ ಉತ್ತಮ ಪರಿಸರ ಮತ್ತು ಕಲಿಕಾ ಪದ್ಧತಿಯಿಂದಾಗಿ ಸುಮಾರು 10 ಕಿಲೋಮೀಟರ್ ದೂರದಿಂದಲೂ ಮಕ್ಕಳನ್ನು ಈ ಶಾಲೆಗೆ ಕಳುಹಿಸಿಕೊಡುತ್ತಿದ್ದೇವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಾಂದೀಪನಿ ಶಾಲೆಯ ಪ್ರಧಾನ ಕಾರ್ಯದರ್ಶಿ ಶಂಕರ್, ಹಾಗೂ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.
    1
    ವಿಜ್ಞಾನ ಮೇಳದಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕುತೂಹಲ ಮತ್ತು ಕಲಿಕೆ: ಸಾಂದೀಪನಿ ಶಾಲೆಯಲ್ಲಿ ವಿಜ್ಞಾನ ಹಬ್ಬ.
​ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮೇಲೆಕೋಟೆ ಗ್ರಾಮದ ಸಾಂದೀಪನಿ ಶಾಲೆಯಲ್ಲಿ ಇಂದು ವಿಜ್ಞಾನ ಮೇಳವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಮೇಳದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಾವೇ ಸ್ವತಃ ಸಿದ್ಧಪಡಿಸಿದ ವಿವಿಧ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಮೊದಲಿಗೆ ಟೇಪ್ ಕತ್ತರಿಸುವ ಮೂಲಕ ಶಾಲೆಯ ಕಾರ್ಯದರ್ಶಿ ಶಂಕರ್  ಹಾಗೂ ಪೋಷಕರು ಉದ್ಘಾಟಿಸಿದರು.
​ಕಾರ್ಯಕ್ರಮದ ಕುರಿತು ಮಾತನಾಡಿದ ಶಿಕ್ಷಕಿ ನಾಗಶ್ರೀ ಅವರು, "ಇಂದಿನ ವಿಜ್ಞಾನ ಮೇಳದಿಂದ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಪ್ರಾಯೋಗಿಕವಾಗಿ ಅನೇಕ ವಿಷಯಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಮಾದರಿಯನ್ನು ಹೇಗೆ ಸಿದ್ಧಪಡಿಸಬೇಕು, ಅದಕ್ಕೆ ಬೇಕಾದ ಸಂಪರ್ಕಗಳನ್ನು  ಹೇಗೆ ನೀಡಬೇಕು ಮತ್ತು ಐ-ಫಾರ್ವರ್ಡ್ ತಂತ್ರಜ್ಞಾನದ ಬಳಕೆಯ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಂಡಿದ್ದಾರೆ," ಎಂದು ಹಂಚಿಕೊಂಡರು.
​"ಮಾದರಿಗಳ ಮೂಲಕ ಶಿಕ್ಷಣ ನೀಡಿದಾಗ ಅದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ವಿಷಯಗಳನ್ನು ಪೋಷಕರಿಗೆ ಪದೇ ಪದೇ ವಿವರಿಸುವುದರಿಂದ, ಆ ಪರಿಕಲ್ಪನೆಗಳು ಅವರ ಮೆದುಳಿನಲ್ಲಿ ಅಚ್ಚೊತ್ತಿದಂತಾಗುತ್ತವೆ. ಇದು ಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗಲಿದೆ," ಎಂದು ಅವರು ಅಭಿಪ್ರಾಯಪಟ್ಟರು.
​ಈ ಬಾರಿಯ ಮೇಳದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಅವುಗಳನ್ನು ಎಚ್ಚರಿಕೆಯಿಂದ ಹೇಗೆ ನಿರ್ವಹಿಸಬೇಕು ಎಂಬುದನ್ನು ಮಕ್ಕಳು ಕಲಿತುಕೊಂಡಿದ್ದಾರೆ. ವಿಜ್ಞಾನ ಮೇಳಕ್ಕೆ ಭೇಟಿ ನೀಡಿದ್ದ ಪೋಷಕರು ಮಕ್ಕಳ ಸೃಜನಶೀಲತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ಚಂದ್ರಶೇಖರ್ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಅಂಕಗಳಿಗಿಂತ ಕೌಶಲ ಮುಖ್ಯವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ 1ನೇ ತರಗತಿಯಿಂದಲೇ ಕೋಡಿಂಗ್, ರೋಬೋಟಿಕ್ಸ್, ಕೃತಕ ಬುದ್ಧಿ  (AI) ಮತ್ತು ಸುಧಾರಿತ ಇಂಗ್ಲಿಷ್ ಸಂವಹನ ಕಲೆಗಳನ್ನು ಕಲಿಸಲಾಗುತ್ತಿದೆ. ಈ ವರ್ಷ ಪೂರ್ತಿ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ಜ್ಞಾನವನ್ನು ಪ್ರಾಯೋಗಿಕ ಮಾದರಿಗಳ ಮೂಲಕ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ಕೆಮಿಕಲ್ ಪ್ರಯೋಗಗಳು ಮತ್ತು ರೋಬೋಟಿಕ್ಸ್ ಮಾದರಿಗಳನ್ನು ಪ್ರದರ್ಶಿಸಿ ಬೆರಗುಗೊಳಿಸಿದರು. ವಿಶೇಷವಾಗಿ ಹಿರಿಯ ವಿದ್ಯಾರ್ಥಿಗಳು ಇಂದಿನ ಐಟಿ ಲೋಕದಲ್ಲಿ ಬಳಕೆಯಾಗುವ HTML, Java ಮತ್ತು Python ನಂತಹ ಪ್ರೋಗ್ರಾಮಿಂಗ್ ಭಾಷೆಗಳ ಕುರಿತು ಮಾಹಿತಿ ನೀಡುವ ಮೂಲಕ ತಮ್ಮ ತಾಂತ್ರಿಕ ಜ್ಞಾನವನ್ನು ಸಾಬೀತುಪಡಿಸಿದರು. ಶಾಲಾ ಹಂತದಲ್ಲೇ ಮಕ್ಕಳಿಗೆ ಇಂತಹ ಭಾಷೆಗಳ ಬೇಸಿಕ್ಸ್ ಕಲಿಸುವುದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಬುನಾದಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಶಾಲೆಯಿಂದ ಹೋಗುವಾಗ ಕಿಡ್ನಾಪರ್ಸ್ ನಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಡೆಮೋ ಮುಖಾಂತರ ತೋರಿಸಿದರು.
ನಂತರ ಮಾತಾಡಿದ ಪೋಷಕರೊಬ್ಬರು ಕಳೆದ ಎರಡು ವರ್ಷಗಳಿಂದ ತಮ್ಮ ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಶಾಲೆಯ ಉತ್ತಮ ಪರಿಸರ ಮತ್ತು ಕಲಿಕಾ ಪದ್ಧತಿಯಿಂದಾಗಿ ಸುಮಾರು 10 ಕಿಲೋಮೀಟರ್ ದೂರದಿಂದಲೂ ಮಕ್ಕಳನ್ನು ಈ ಶಾಲೆಗೆ ಕಳುಹಿಸಿಕೊಡುತ್ತಿದ್ದೇವೆ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ಸಾಂದೀಪನಿ ಶಾಲೆಯ ಪ್ರಧಾನ ಕಾರ್ಯದರ್ಶಿ ಶಂಕರ್, ಹಾಗೂ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.
    user_Nandi Rajesh Press reporter
    Nandi Rajesh Press reporter
    ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    13 hrs ago
  • ಕುವೈತ್‌ನಲ್ಲಿ ಅಮೆರಿಕದ ಎಫ್-15 ಯುದ್ಧ ವಿಮಾನ ಪತನ: ಇರಾನ್ ದಾಳಿಯ ಶಂಕೆ!#JB_News_Kannada
    1
    ಕುವೈತ್‌ನಲ್ಲಿ ಅಮೆರಿಕದ ಎಫ್-15 ಯುದ್ಧ ವಿಮಾನ ಪತನ: ಇರಾನ್ ದಾಳಿಯ ಶಂಕೆ!#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Kolar, Karnataka•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.