Shuru
Apke Nagar Ki App…
ಹರಿಹರ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ;ಪೂಜೆ ವೇಳೆ ಸುರಿದ ಧಾರಾಕಾರ ಮಳೆ ಕನಕಪುರ : ಮಳೆಗಾಗಿ ಪ್ರಾರ್ಥಿಸಿ ಸಾತನೂರು ಹೋಬಳಿಯ ಹರಿಹರ ಗ್ರಾಮದಲ್ಲಿ ಗ್ರಾಮಸ್ಥರು ವಿಶೇಷವಾಗಿ ‘ಹುಯ್ಯೋ ಹುಯ್ಯೋ ಮಳೆರಾಯ’ ಪೂಜೆ ನೆರವೇರಿಸಿದರು. ನೇಗಿಲು ಹಿಡಿದು ಉಮೇಶ್, ಸ್ತ್ರೀ ಪಾತ್ರದಲ್ಲಿ ಗುಳೂರಿ ನಿಂಗಪ್ಪ, ಬಸವನ ಹೊತ್ತು ಗಾಡಿ ಚನ್ನಪ್ಪ, ದ್ಯಾವಪ್ಪ, ರವಿ.ಜೆ., ಲೋಕೇಶ್, ರವೀಶ್, ಪುಟ್ಟೇಗೌಡ, ಸಂಜಯ್, ಸಚ್ಚಿನ್ ಸೇರಿದಂತೆ ಗ್ರಾಮದ ಯುವಕರು ಹಾಗೂ ಸಣ್ಣಮ್ಮ, ಸೌಮ್ಯ, ಭಾಗ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಮಳೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಳೆರಾಯನನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಕಾಕತಾಳೀಯವೆಂಬಂತೆ ಪೂಜೆ ನಡೆಯುತ್ತಿದ್ದ ಸಮಯದಲ್ಲೇ ಜೋರಾಗಿ ಮಳೆ ಸುರಿದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತು. ಮಳೆ ಸುರಿದ ಹಿನ್ನೆಲೆಯಲ್ಲಿ ಪೂಜೆ ಯಶಸ್ವಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಶಿವು.ಎಸ್ ದೊಡ್ಡಆಲಹಳ್ಳಿ
ಹರಿಹರ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ;ಪೂಜೆ ವೇಳೆ ಸುರಿದ ಧಾರಾಕಾರ ಮಳೆ ಕನಕಪುರ : ಮಳೆಗಾಗಿ ಪ್ರಾರ್ಥಿಸಿ ಸಾತನೂರು ಹೋಬಳಿಯ ಹರಿಹರ ಗ್ರಾಮದಲ್ಲಿ ಗ್ರಾಮಸ್ಥರು ವಿಶೇಷವಾಗಿ ‘ಹುಯ್ಯೋ ಹುಯ್ಯೋ ಮಳೆರಾಯ’ ಪೂಜೆ ನೆರವೇರಿಸಿದರು. ನೇಗಿಲು ಹಿಡಿದು ಉಮೇಶ್, ಸ್ತ್ರೀ ಪಾತ್ರದಲ್ಲಿ ಗುಳೂರಿ ನಿಂಗಪ್ಪ, ಬಸವನ ಹೊತ್ತು ಗಾಡಿ ಚನ್ನಪ್ಪ, ದ್ಯಾವಪ್ಪ, ರವಿ.ಜೆ., ಲೋಕೇಶ್, ರವೀಶ್, ಪುಟ್ಟೇಗೌಡ, ಸಂಜಯ್, ಸಚ್ಚಿನ್ ಸೇರಿದಂತೆ ಗ್ರಾಮದ ಯುವಕರು ಹಾಗೂ ಸಣ್ಣಮ್ಮ, ಸೌಮ್ಯ, ಭಾಗ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಮಳೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಳೆರಾಯನನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಕಾಕತಾಳೀಯವೆಂಬಂತೆ ಪೂಜೆ ನಡೆಯುತ್ತಿದ್ದ ಸಮಯದಲ್ಲೇ ಜೋರಾಗಿ ಮಳೆ ಸುರಿದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತು. ಮಳೆ ಸುರಿದ ಹಿನ್ನೆಲೆಯಲ್ಲಿ ಪೂಜೆ ಯಶಸ್ವಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
More news from ಕರ್ನಾಟಕ and nearby areas
- ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ ಮಳವಳ್ಳಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್ ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ. ಹಲವು ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ. ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.1
- ಬೆಂಗಳೂರಿನಲ್ಲಿ 21% ಅರಣ್ಯ ಭೂಮಿ ಇದೆ 33% ಆಗಬೇಕು ,ಕಾಡು ಬೆಳೆಸುವ ಕೆಲಸ ರಾಜ್ಯದಲ್ಲೂ, ದೇಶದಲ್ಲೂ ನಡೆಯಬೇಕು ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಪರಿಸರ ವೃದ್ಧಿಯ ಜೊತೆಗೆ ವನ್ಯಜೀವಿಗಳ ರಕ್ಷಣೆ , ವನ್ಯಜೀವಿಗಳಿಂದ ಮಾನವರ ರಕ್ಷಣೆಯು ಆಗಬೇಕು ಆನೆಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಾದ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರು , ಕೆಲವೊಮ್ಮೆ ಅನಾಹುತಗಳು ನಡೀತಿದೆ ಈಗ ಪಣತ್ತೂರಿನಲ್ಲಿ ನಗರ ಉದ್ಯಾನವನ ಉದ್ಘಾಟನೆ ಆಗಿದೆ ಹಾಗೆ ರಸ್ತೆ ಹಾಗೂ ಸೇತುವೆ ಬೇಡಿಕೆ ಇದೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತವೆ ಎಂದಿದ್ದಾರೆ1
- ಮಸೀದಿ ಮುಂದೆ ಏನಕ್ಕೆ ಪಟಾಕಿ ಹೊಡಿಬೇಕು? ಇನ್ಸ್ಪೆಕ್ಟರ್ ಪರ ಯತೀಂದ್ರ ಬ್ಯಾಟಿಂಗ್ ಮಸೀದಿ ಮುಂದೆ ಏನಕ್ಕೆ ಪಟಾಕಿ ಹೊಡಿಬೇಕು? ಇನ್ಸ್ಪೆಕ್ಟರ್ ಪರ ಯತೀಂದ್ರ ಬ್ಯಾಟಿಂಗ್1
- ನೂತನ ಜಿಲ್ಲಾ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಕೇಂದ್ರದ ನಾಯಕರಿಂದ ಸಭೆ: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ನೂತನವಾಗಿ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಸುರ್ಜೇವಾಲ ಅವರು ಆಗಮಿಸಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ನಾಳೆಯಿಂದ (ಗುರುವಾರ) 3 ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸದ ಬಗ್ಗೆ ಕೇಳಿದಾಗ, "ಇಂದಿನಿಂದ (ಬುಧವಾರ) ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ ಮಾಡಲಿದ್ದೇನೆ. ವಿಧಾನ ಮಂಡಲ ಅಧಿವೇಶನದಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ" ಎಂದರು.1
- ರಾಜ್ಯದಲ್ಲಿ ಪೊಲೀಸರು ಗಣಪತಿಯ ಹೊಸ ಪರಂಪರೆ ಮಾಡ್ತಾ ಇದ್ದಾರೆ-ಆರ್.ಅಶೋಕ್ ಮಂಡ್ಯ- ರಾಜ್ಯದಲ್ಲಿ ಪೊಲೀಸರು ಗಣಪತಿಯ ಹೊಸ ಪರಂಪರೆ ಮಾಡ್ತಾ ಇದ್ದಾರೆ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ರು, ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಪ್ರಯುಕ್ತ ಪುರ ಪಗರವೇಶ ಮಾಡಿ ಮಾತನಾಎಇದ ಅವರು ಪೊಲೀಸರು ಎಲ್ಲಿ ಮೈಕ್ ಹಾಕಬೇಕು, ಡಿಜೆ ಬೇಡಾ ಎಂದು ಅವರೆ ತೀರ್ಮಾನ ಮಾಡ್ತಾರೆ.ಮಸೀದಿ ಬಳಿ ಹೋಗಬಾರದು, ಡ್ಯಾನ್ಸ್ ಮಾಡಬಾರದು, ಪಟಾಕಿ ಹೊಡೆಯಬಾರದು ಅಂತಾರೆ.ಇವರಿಗಿಂತ ಬ್ರಿಟಿಷರೇ ಮೇಲು. ಹಿಂದೂಗಳಿಗೆ ಗ್ರಹಚಾರ ಬಿಡಿಸುತ್ತೇನೆ ಅಂತಾರೆ. ಅದೇ ರೀತಿ ಮುಸ್ಲಿಂರಿಗೆ ಹೇಳಲಿ ನೋಡೊಣ! ಯಾವತ್ತಾದ್ರು ಮುಸಲ್ಮಾನರ ಹಬ್ಬದ ಬಗ್ಗೆ ಹೇಳಿದ್ದೀರಾ? ಅವರು ರಸ್ತೆಯಲ್ಲಿ ನಮಾಜ್ ಮಾಡ್ತಾರೆ.ಯಾರ ಅಪ್ಪಂದು ರಸ್ತೆ ತ ನಮಾಜ್ ಮಾಡ್ತಾರೆ? ಗಣಪತಿಯನ್ನು ಬಿಜೆಪಿ ಕೊಂಡು ಕೊಂಡಿದ್ದೀರಾ ಅಂತಾರೆ.ನಮ್ಮ ದೇಹದಲ್ಲಿ ಹರಿಯುವುದು ಹಿಂದೀರಕ್ತ.ಕಾಂಗ್ರೆಸ್ ಅವರಿಗೆ ಎಲೆಕ್ಷನ್ ಬಂದಾಗ ಮಾತ್ರ ಹಿಂದೂ, ಹಿದುತ್ವ ನೆನಪಿಗೆ ಬರುತ್ತೆ,ಇನ್ನುಳಿದಂತೆ ಮುಸ್ಲಿಂ ಒಲೈಕೆಯಲ್ಲಿ ತೊಡಗುತ್ತಾರೆ,ಆದರೆ ನಾವು ಯಾವಾಗಲೂ ಹಿಂದೂ.ಗ್ರಾಮಪಂಚಾಯಿಗೆ ಒಬ್ಬ ವಿರೋಧ ಪಕ್ಷದ ನಾಯಕ ಹೋಗ್ತಾನೆ ಎಂದು ಡಿಕೆಶಿ ಹೇಳಿದ್ದಾರೆ.ಗಣಪತಿಗೆ ನಿರ್ಬಂಧ ಹೇರಿದ್ರೆ ಒಂದು ಬೀದಿಗೆ ಸಹ ಹೋಗ್ತೀನಿ.ಹಬ್ಬ ಮಾಡುವ ನಮಗೆ ತಾಕತ್ ಇದೆ.ನಮ್ಮ ಹೋರಾಟ ಗಣಪತಿ ಹಬ್ಬವನ್ನಯ ಸಾರ್ವಜನಿಕವಾಗಿ ಆಚರಿಸಬೇಕು. ಪೊಲೀಸರ ಹಬ್ಬ ಆಗಬಾರಾದು.ಇದು ಗಣೇಶ ಮೆರವಣಿಗೆ ಮಾತ್ರವಲ್ಲ ಕಾಂಗ್ರೆಸ್ ವಿರುದ್ಧದ ಧ್ವನಿ.ಈ ಸರ್ಕಾರ ಮುಂದಿನ ವರ್ಷ ಇದ್ದರೆ ಗಣೇಶ ಹಬ್ಬಕ್ಕೆ ನಿರ್ಬಂಧ ಇರಬಾರದು ಅಂತ ಹೇಳಿದ್ರು1
- ರಾಮನಗುಡ್ಡ ಕೆರೆ ಭರ್ತಿ; ಕೋಡಿ ಬಿದ್ದು ಹರಿದ ನೀರು ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನಕ್ಕೆ ರೈತರ ಮೆಚ್ಚುಗೆ; 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಭರವಸೆ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹಲವು ವರ್ಷಗಳಿಂದ ನೀರಿನ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೃಷಿಕರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಸತತ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದ ಫಲವಾಗಿ ಕಾವೇರಿ ನದಿ ಮೂಲದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಕೆರೆಯಿಂದ ನೀರು ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಹರ್ಷದ ವಾತಾವರಣ ಮೂಡಿಸಿದೆ. ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಮನಗುಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ ಸುಮಾರು 980 ಎಕರೆಗಳಷ್ಟಿದೆ. ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ಇದ್ದು, ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಕೆರೆಯ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳದ ನಿರೀಕ್ಷೆ:ರಾಮನಗುಡ್ಡ ಕೆರೆ ಭರ್ತಿಯಾಗಿರುವುದರಿಂದ ಕೇವಲ ಅಚ್ಚುಕಟ್ಟು ಪ್ರದೇಶದ ಕೃಷಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆಯೂ ಹೆಚ್ಚಾಗಿದೆ. ಕೆರೆಯಿಂದ ಹಾಗೂ ಹಳ್ಳದ ಮೂಲಕ ನೀರು ಹರಿದು ಬರುವುದರಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ನೀರಿನ ಮರುಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ತೆರೆದ ಬಾವಿಗಳು ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗುವ ಜಾನುವಾರುಗಳಿಗೂ ಕೆರೆಯ ನೀರು ಆಶ್ರಯವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾಮನಗುಡ್ಡ ಕೆರೆಯ ಎಡದಂಡೆಯ ವಿಸ್ತೀರ್ಣ ಸುಮಾರು 3.95 ಎಕರೆ ಹಾಗೂ ಬಲದಂಡೆಯ ವಿಸ್ತೀರ್ಣ ಸುಮಾರು 4.20 ಎಕರೆ ಇದ್ದು, ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿರುವುದು ಕೆರೆಯ ಜಲಸಂಗ್ರಹ ಸಾಮರ್ಥ್ಯದ ಸದುಪಯೋಗಕ್ಕೆ ಸಾಕ್ಷಿಯಾಗಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದರ ಜೊತೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯದಿಂದ ಕೆರೆಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ರೈತರಲ್ಲಿ ವಿಶ್ವಾಸ ಮೂಡಿಸಿದೆ. ಕೆರೆ ಭರ್ತಿಯಾಗಿರುವುದರಿಂದ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಕೃಷಿ ಚಟುವಟಿಕೆಗಳ ಕುರಿತು ಉತ್ಸಾಹ ಹೆಚ್ಚಾಗಿದೆ. ನೀರಿನ ಲಭ್ಯತೆಯಿಂದ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಕೃಷಿ ಆಧಾರಿತ ಕುಟುಂಬಗಳ ಆದಾಯಕ್ಕೂ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ ಬಲ ನೀಡುವ ಮೂಲಕ ರೈತರ ಬದುಕಿನಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಶಾಸಕ ಮಂಜುನಾಥ್ ಅವರ ಪ್ರಯತ್ನಕ್ಕೆ ಮೆಚ್ಚುಗೆ :ರಾಮನಗುಡ್ಡ ಕೆರೆಗೆ ನೀರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕೈಗೊಂಡ ಪ್ರಯತ್ನಗಳು ಇದೀಗ ಫಲ ನೀಡಿವೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರದ ಸಂದರ್ಭದಲ್ಲಿ ನೀರಿನ ಲಭ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದು, ಇದೀಗ ಉತ್ತಮ ಮಳೆಯೊಂದಿಗೆ ಕೆರೆ ಸಂಪೂರ್ಣ ಭರ್ತಿಯಾಗಿರುವುದು ಈ ಭಾಗದ ಕೃಷಿಕರಿಗೆ ಅನುಕೂಲವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ, ಹೂಳು ತೆರವು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಕೆರೆಗೆ ಹರಿಯುವಂತೆ ಮಾಡುವ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆಯಾಗಿದೆ. ರಾಮನಗುಡ್ಡ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳಲು ಕೆರೆ ಹಾಗೂ ಕಾಲುವೆಗಳ ನಿರಂತರ ನಿರ್ವಹಣೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕಾಲುವೆಗಳ ನಿರ್ವಹಣೆ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ನೀರು ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳಿಗೆ ಮರುಪೂರೈಕೆಯಾಗುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಮತ್ತಷ್ಟು ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ. ಕಳೆದ ಕೆಲವು ದಿನಗಳಿಂದ ರಾಮನಗುಡ್ಡ ಕೆರೆಯ ಕೋಡಿ ಮೂಲಕ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆರೆಯ ಬಳಿ ಸೇರುತ್ತಿರುವ ರೈತರು ಹಾಗೂ ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ನೀರಿಗಾಗಿ ಎದುರು ನೋಡುತ್ತಿದ್ದ ಕೃಷಿಕರ ಪಾಲಿಗೆ ಕೆರೆ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಿನಲ್ಲಿ, ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿರುವುದು ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಿನ ಭರವಸೆ ನೀಡುವುದರ ಜೊತೆಗೆ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ತೋಡುಬಾವಿ ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂಪನ್ಮೂಲವನ್ನು ಮುಂದಿನ ವರ್ಷಗಳಲ್ಲಿಯೂ ಕಾಪಾಡಿಕೊಳ್ಳುವುದು ರೈತರ ಆಶಯವಾಗಿದೆ.1
- 45 ಎಕರೆ ಅರಣ್ಯ ಭೂಮಿ ಈಗ ಸಾರ್ವಜನಿಕರ ಉದ್ಯಾನವನ! ಅರಣ್ಯ ಭೂಮಿಯಲ್ಲಿ ನಿರ್ಮಾಣವಾದ ವೃಕ್ಷ ಉದ್ಯಾನವನಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಪಣತೂರಿನಲ್ಲಿ ನೂತನ ವೃಕ್ಷ ಉದ್ಯಾನವನ ಲೋಕಾರ್ಪಣೆ! 45 ಎಕರೆ ಅರಣ್ಯ ಭೂಮಿ ಈಗ ಸಾರ್ವಜನಿಕರ ಉದ್ಯಾನವನ! ಅರಣ್ಯ ಭೂಮಿಯಲ್ಲಿ ನಿರ್ಮಾಣವಾದ ವೃಕ್ಷ ಉದ್ಯಾನವನಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್ ಸೇರಿದಂತೆ ಹಲವು ಸೌಲಭ್ಯಗಳ ವ್ಯವಸ್ಥೆ ಪರಿಸರ ಸಂರಕ್ಷಣೆಯ ಜೊತೆಗೆ ಸ್ವಚ್ಛತೆಗೆ ವಿಶೇಷ ಆದ್ಯತೆ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಉದ್ಯಾನವನ ಮಹದೇವಪುರ ಕ್ಷೇತ್ರದಲ್ಲಿ ಉದ್ಯಾನವನಗಳ ಕೊರತೆಗೆ ಸಿಕ್ಕ ಪರಿಹಾರ? ಪಣತೂರಿನ ಸಿಡಿಪಿ ರಸ್ತೆಯಲ್ಲಿದ್ದ ಅರಣ್ಯ ಭೂಮಿ ಇದೀಗ ಹಸಿರು ಉದ್ಯಾನವನ ಸಾರ್ವಜನಿಕರ ಬಳಕೆಗೆ ಮೀಸಲಾದ ನೂತನ ವೃಕ್ಷ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕಿ ಮಂಜುಳಾ ಲಿಂಬಾವಳಿ ಸಾಥ್1
- ವಿಚ್ಛೇದನ ಬಯಸುವ ಮಹಿಳೆಯರಿಗೆ ಆಶ್ರಯ ನೀಡುವ ಜಪಾನ್ ದೇವಾಲಯ 700 ವರ್ಷಗಳ ಇತಿಹಾಸದ ‘ಡಿವೋರ್ಸ್ ಟೆಂಪಲ್’ ಕಥೆ! ವಿಚ್ಛೇದನ ಬಯಸುವ ಮಹಿಳೆಯರಿಗೆ ಆಶ್ರಯ ನೀಡುವ ಜಪಾನ್ ದೇವಾಲಯ 700 ವರ್ಷಗಳ ಇತಿಹಾಸದ ‘ಡಿವೋರ್ಸ್ ಟೆಂಪಲ್’ ಕಥೆ!1
- ಡಿಜೆ ಮಾಲೀಕರ ಮೇಲೆ ಕೇಸ್ ಹಾಕೋರು, ಮಸೀದಿಗಳಲ್ಲಿ ಅಜಾನ್ ಕೂಗುವವರ ಮೇಲೆ ಕೇಸ್ ಹಾಕಲ್ಲ ಯಾಕೆ?- ಆರ್ .ಅಶೋಖ ಪ್ರಶ್ನೆ ಮಂಡ್ಯ-ಹುಬ್ಬಳ್ಳಿಯಲ್ಲಿ ಡಿಜೆ ಮಾಲೀಕರ ವಿರುದ್ಧ ಕೇಸ್ ವಿಚಾರಮದ್ದೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆ. ಕಾಂಗ್ರೆಸ್ ನವರು ಡಿಜೆ ಮಾಲೀಕರ ಮೇಲೆ ಕೇಸ್ ಹಾಕ್ತಾರೆ.ಇವರು ಮಸೀದಿಗಳಿಗೆ ಅಜಾನ್ ಕೂಗುವವರ ಮೇಲೆ ಕೇಸ್ ಹಾಕಲ್ಲ. ಯಾವತ್ತಾದರು ಮಸೀದಿಗಳಿಗೆ ನೋಟೀಸ್ ಕೊಟ್ಟಿದ್ದಾರ.ಈ ರೀತಿ ಮಾಡಿಕೊಂಡು ಎಲ್ಲ ಕಡೆ ಕಾಂಗ್ರೆಸ್ ಖಾಲಿಯಾಗಿದೆ.ಮುಂದೆ ಕರ್ನಾಟಕದಲ್ಲೂ ಖಾಲಿಯಾಗುತ್ತೆ. ನಮಗೆ ಮಸೀದಿ ಮುಂದೆ ಹೋಗಬೇಡಿ ಅಂತಾರೆ.ಅದೇ ಮುಸ್ಲಿಂ ಮೆರವಣಿಗೆ ಹಿಂದೂ ದೇವಸ್ಥಾನ ಮುಂದೆ ಹೋಗಬೇಡಿ ಎಂದು ಹೇಳಿದ್ದಾರಾ.ಈ ಬುದ್ಧಿಯಿಂದ ಕಾಂಗ್ರೆಸ್ ಹಿಂದೂ ವಿರೋಧಿ ಎನ್ನೋದು. ಇಟಲಿಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಕ್ತದಲ್ಲಿ ಹರಿಯುತ್ತಿರೋದು ಹಿಂದೂ ವಿರೋಧಿ.ರಾಹುಲ್ ಗಾಂಧಿ ಹೇಳಿದ ಹಾಗೆ ಡಿಕೆ ಶಿವಕುಮಾರ್ ಕೇಳ್ತಾ ಇದಾರೆ.1