Shuru
Apke Nagar Ki App…
Sharanugouda Patil
More news from ಕರ್ನಾಟಕ and nearby areas
- ಹುನಗುಂದ ಸಮೀಪದ ಟೋಲ್ ಬಳಿ ಧಗ ಧಗ ಹೊತ್ತಿ ಉರಿದ ಭತ್ತ ಹೊತ್ತ ಲಾರಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಮಧ್ಯದ ಟೋಲ್ ನಾಕಾ ಬಳಿ ಭತ್ತ ಹೊತ್ತ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದ ಘಟನೆ ಮೇ ೧೦ ರಾತ್ರಿ ಸಮಯದಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ಲಾರಿ ಭತ್ತವನ್ನು ಹೊತ್ತುಕೊಂಡ ಹುನಗುಂದ ಮಾರ್ಗವಾಗಿ ತೆರಳಬೇಕಾಗಿದ್ದ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಲಾರಿ ಬಾಲಕಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ ಹತ್ತಿದ ಬೆಂಕಿ ಮುಂಜಾನೆಯವರೆಗೂ ಉರಿಯುತ್ತಿದ್ದರೂ,ಅಗ್ನಿಶಾಮಕ ದಳದ ಸಿಬ್ಬಂದಿಯಾಗಲಿ ಅಥವಾ ಟೋಲ್ ನಾಕಾ ಸಿಬ್ಬಂದಿಯಾಗಲಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಈಜಲು ಹೋಗಿ ನೀರಲ್ಲಿ ಮುಳುಗಿ ಕೆ.ಬೋದೂರು ಗ್ರಾಮದ ಬಾಲಕ ಸಾವು ಕುಷ್ಟಗಿ:- ತಾಲೂಕಿನ ವಣಗೇರಿ ಸೀಮಾದಲ್ಲಿ ಸರ್ವೇ ನಂಬರ-25/1ಹಿಸ್ಸಾ 2 ಬಿ ಸೇತುಕುಮಾರ ತಂದೆ ಬಿ ಜಯರಾಮಿ ರಡ್ಡಿ ಬಿನ್ ಜಯರಾಮಿ ರಡ್ಡಿ ಎಂಬುವವರಿಗೆ ಸೇರಿದ 7 ಎಕರೆ 25 ಗುಂಟೆ ಹೊಲದಲ್ಲಿ ಇರುವ ಮರಮ್ ತೆಗೆದ ಬೃಹತ್ ಆಕಾರದ ಗುಂಡಿಯ ನಿಂತ ನೀರಿನಲ್ಲಿ ಈಜಲು ಹೋದಾಗ ಮೇಲಿಂದ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ನೆಡೆದಿದೆ. ಮೃತಪಟ್ಟ ಬಾಲಕ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ನಿವಾಸಿ ಹನಮಂತಪ್ಪ ತಂದೆ ಬಸವರಾಜ ಗೋರೆಬಾಳ ವಯಸ್ಸು (17) ಎಂದು ತಿಳಿಸಲಾಗಿದೆ. ಮೃತ ಬಾಲಕನು ತನ್ನ ಸ್ನೇಹಿತರೊಂದಿಗೆ ತನ್ನ ಗ್ರಾಮಕ್ಕೆ ಬಹಳ ಹತ್ತಿರಕ್ಕೆ ಇರುವುದರಿಂದ ಈಜಲು ತೆರಳಿದ್ದಾರೆ. ಈ ಮರಮ್ ತೆಗೆದ ಹೊಲದಲ್ಲಿ ಜೆಸಿಬಿ ಮತ್ತು ಹಿಟಾಚಿ ಮೂಲಕ ಮಣ್ಣನ್ನು ಗದಗವಾಡಿ ರೈಲ್ವೆ ಕಾಮಗಾರಿಗೆ ಬಳಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮರಮ್ ತೆಗೆದಿದ್ದರಿಂದ ಸುಮಾರು 40 ರಿಂದ 50 ಫೀಟ್ ಆಳಕ್ಕೆ ಅಗಲಾಗಿದೆ. ಬಹಳ ಆಳಕ್ಕೆ ಆಗಿದೆದ್ದರಿಂದ ಅಂತರ್ಜಲ ಹೆಚ್ಚಾಗಿ ನೀರು ಸಾಕಷ್ಟ ಪ್ರಮಾಣದಲ್ಲಿ ಸಂಗ್ರಹವಾಗಿದೆ ಬೇಸಿಗೆ ಕಾಲ ಆಗಿರೋದ್ರಿಂದ ಅತಿಯಾದ ಬಿಸಿಲು ಇರುವ ಕಾರಣ ಬಾಲಕ ಮತ್ತು ಬಾಲಕನ ಸ್ನೇಹಿತರು ಈಜಲು ಹೋಗಿದ್ದಾರೆ. ಈಸಲು ಹೋದ ಸಮಯದಲ್ಲಿ ಹನುಮಂತಪ್ಪನ ಸ್ನೇಹಿತರು ಈಜಿ ದಡ ಸೇರಿದರೆ ಬಾಲಕ ಹನಮಂತಪ್ಪನು ಮಾತ್ರ ಮಣ್ಣಿನೊಳಗೆ ಸಿಲುಕಿ ನೀರಿನಲ್ಲಿ ಹೆಸರುಗಟ್ಟಿ ಮೃತಪಟ್ಟಿದ್ದಾನೆ. ಈ ಘಟನೆ ನಿನ್ನೆ ರವಿವಾರ ಬೆಳಿಗ್ಗೆ 12 ಗಂಟೆಗೆ ನೆಡೆದಿದ್ದು ತಕ್ಷಣಾ ಮೃತಪಟ್ಟ ಬಾಲಕನ ಸ್ನೇಹಿತರು ಕೆ.ಬೋದುರು ಗ್ರಾಮದಲ್ಲಿ ತಿಳಿಸಿದ್ದಾರೆ. ತಕ್ಷಣಾ ಕುಷ್ಟಗಿ ಪೋಲಿಸ್ ಠಾಣೆಯ ಪಿ.ಎಸ್.ಐ ಹನಮಂತಪ್ಪ ತಳವಾರ್ ಹಾಗೂ ಅಗ್ನಿಶಾಮಕ ದಳದವರು ಸೇರಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ರವಿವಾರ ಬೆಳಿಗ್ಗೆಯಿಂದ ತಡ ರಾತ್ರಿ ಆಗೋವರೆಗೂ ಶೋಧ ನಡೆಸಿದರು ಸಹ ಮೃತಪಟ್ಟ ಬಾಲಕನ ಶವ ಪತ್ತೆ ಆಗಲಿಲ್ಲ. ನಂತರ ಸೋಮವಾರ ಬೆಳಗ್ಗೆ ಮೃತಪಟ್ಟ ಬಾಲಕ ಶಾವ ಪತ್ತೆಯಾಗಿದೆ ಎಂದು ಪೊಲೀಸರ ಖಚಿತ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಹನಮಂತಪ್ಪ ತಳವಾರ, ಎ.ಎಸ್.ಐ ತಾಯಪ್ಪ ಮತ್ತು ಅಗ್ನಿ ಶಾಮಕದಳ ಸಿಬ್ಬಂದಿಗಳು ಕಾರ್ಯಶೋದವನ್ನು ನಡೆಸಿ ಮೃತಪಟ್ಟ ಬಾಲಕನ ಶವವನ್ನು ಪತ್ತೆ ಹಚ್ಚಿ ಹೊರ ತೆಗೆಯಲು ತ ಯಶಸ್ವಿಯಾದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2
- ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ದಾರಿಗೆ ಅಡ್ಡಲಾಗಿ ಅಕ್ರಮ ಶೆಡ್ ನಿರ್ಮಿಸಲಾಗಿದೆ. ಇದರಿಂದ ಮಹಿಳೆಯರಿಗೆ ಶೌಚಾಲಯಕ್ಕೆ ತೆರಳಲು ಮತ್ತು ನೀರು ಸರಬರಾಜು ಪೈಪ್‌ಲೈನ್‌ಗಳಿಗೆ ತೊಂದರೆಯಾಗಿದೆ ಎಂದು ಕರವೇ ಆರೋಪಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ಅಕ್ರಮ ಶೆಡ್ ತೆರವುಗೊಳಿಸಲು ಆಗ್ರಹಿಸಿ, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.1
- ಬಾಗಲಕೋಟೆ ಜಿಲ್ಲೆಯ ಜೈಲಿನೊಳಗೆ ಜೈಲರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಯಗೊಂಡ ಜೈಲರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಇಡೀ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.1
- ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರು ಅಪಘಾತದಲ್ಲಿ ಗಾಯಗೊಂಡ ಅಪರಿಚಿತರನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಅವರ ಈ ತಕ್ಷಣದ ನೆರವಿಗೆ ಕರ್ನಾಟಕದ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ರಾಜಕೀಯದಲ್ಲಿ ಮಾನವೀಯತೆಯು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ.1
- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ಧರಾಮಯ್ಯ ಅವರನ್ನು ಇಳಕಲ್ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಯುವ ಮುಖಂಡ ಶರಣಬಸವ ಇದ್ದಲಗಿ ಸತ್ಕರಿಸಿದರು. ಮುದಗಲ್‌ನಿಂದ ಕೌವಲಗುಡ್ಡ ಗ್ರಾಮಕ್ಕೆ ತೆರಳುವಾಗ ತುಂಬ ಕ್ರಾಸ್‌ನಲ್ಲಿ ಈ ಗೌರವ ಸಲ್ಲಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ಯತೀಂದ್ರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.2
- ಜಮಖಂಡಿಯ ಕುಂಚನೂರ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.1
- ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.1