Shuru
Apke Nagar Ki App…
ಕಬಿನಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ನದಿ ದಂಡೆಯ ಜನರಿಗೆ ಎಚ್ಚರಿಕೆ ಮೈಸೂರು, ಆ.1: ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕಬಿನಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ದಂಡೆಯ ನಿವಾಸಿಗಳು ಎಚ್ಚರಿಕೆಯಿಂದ ಇರಲು ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ತಗ್ಗು ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ನದಿಗೆ ಇಳಿಯುವುದು, ಮೀನುಗಾರಿಕೆ ಹಾಗೂ ಅನಗತ್ಯವಾಗಿ ನದಿ ದಾಟುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದು, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಹೊಂಗಿರಣ ನ್ಯೂಸ್
ಕಬಿನಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ನದಿ ದಂಡೆಯ ಜನರಿಗೆ ಎಚ್ಚರಿಕೆ ಮೈಸೂರು, ಆ.1: ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕಬಿನಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ದಂಡೆಯ ನಿವಾಸಿಗಳು ಎಚ್ಚರಿಕೆಯಿಂದ ಇರಲು ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ತಗ್ಗು ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ನದಿಗೆ ಇಳಿಯುವುದು, ಮೀನುಗಾರಿಕೆ ಹಾಗೂ ಅನಗತ್ಯವಾಗಿ ನದಿ ದಾಟುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದು, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
More news from ಕರ್ನಾಟಕ and nearby areas
- ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ : ಅತಿ ಹೆಚ್ಚು ಕಲಾವಿದರನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯು ಶ್ರೇಷ್ಠ ಜಾನಪದ ಕಲೆಗಳ ತವರೂರಾಗಿದೆ' ಎಂದು ಉದ್ಯಮಿ, ಯೂತ್ ಐಕಾನ್ ಶ್ರೀನಿಧಿ ಕುದರ್ ಹೇಳಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎನ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಫ್ರೆಂಡ್ಸ್ ಮ್ಯೂಸಿಕ್ ಮೆಲೋಡಿನ್ ತಂಡದಿಂದ ಆಷಾಢಮಾಸದ ಶುಕ್ರವಾರದ ಪ್ರಯುಕ್ತ ನಡೆದ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಮರಾಜನಗರದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವ ರಾಜ್ಯದಲ್ಲೇ. ನಡೆಯುವ ಏಕೈಕ ರಥೋತ್ಸವ ಎಂಬ ವಿಶೇಷಕೆ ಪಡೆದಿದೆ.ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200 ವರ್ಷಗಳಾಗಿದೆ. ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ನೆಪಿಗಾಗಿ ನಿರ್ಮಿಸಿದರು. ಜನರಿಗಾಗಿ ಇದ್ದಂತ ರಾಜಮನೆತನ ಎಂದರೆ ಅದು ಮೈಸೂರು ರಾಜಮನೆತನವಾಗಿದೆ. ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ಮಾಡಿದ ಕೀರ್ತಿ ಮೈಸೂರು ರಾಜಮನೆತನಕ್ಕೆ ಸಲ್ಲುತ್ತದೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್ ಮಾತನಾಡಿ, ಅಷಾಢ ಮಾಸದ ಶುಕ್ರವಾರದ ಪ್ರಯುಕ್ತ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯುತ್ತಿರುವುದು ಸಂತಸಕರ ಸಂಗತಿ. ಇಂತಹ ಕಾರ್ಯಕ್ರಮಗಳು ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ಸರ್ಕಾರವು ಅವಕಾಶ ಕಲ್ಪಿಸಿಕೊಡಬೇಕು ಎಂದರು. ಸನ್ಮಾನ: ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಿ.ಅಂಕಶೆಟ್ಟಿ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಆರ್ಚಕರು, ರಥ ಕಟ್ಟುವರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಮುಖಂಡ ಕೃಷ್ಣನಾಯಕ, ಕೂಸಣ್ಣ, ಪಣ್ಯದಹುಂಡಿ ರಾಜು, ಸಂಘದ ಅಧ್ಯಕ್ಷ ಮಂಗಲ ಹೊಸೂರು ಶಿವಣ್ಣ, ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷ ಬಂಗಾರು, ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ದೊರೆಸ್ವಾಮಿ ಆಲೂರು, ಕಾರ್ಯದರ್ಶಿ ನಾಗಮಹದೇವ, ಗೌರವ ಅಧ್ಯಕ್ಷನಾಗೇಂದ್ರ ಯಳಂದೂರು, ಮಹೇಶ್, ಮನು ಇತರರು ಹಾಜರಿದ್ದರು.4
- ಚಾಮರಾಜನಗರದಲ್ಲಿ ಇಂದು ಕಾವೇರಿ ನೀರು ಬಿಡುವ CWRC ಆದೇಶವನ್ನು ಖಂಡಿಸಿ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು4
- ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ ಚಾಮರಾಜನಗರ: ಕಾವೇರಿ ನೀರು ಬಿಡುಗಡೆ ಮಾಡುವ ಆದೇಶವನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಳಿಕ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದವರೆಗೆ ತೆರಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ವಿಜಯ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ನೀರು ಬಿಡುಗಡೆ ಆದೇಶದಿಂದ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಸರ್ಕಾರವು ರೈತರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.1
- ಮಂಡ್ಯದ ಚಿರುಮರಿಗೆ ಫಿದಾ ಆದ ನಟಿ ಅಭಿಮಾನಿ ಗಳಿಗೆ ಸೆಲ್ಫಿ ನೀಡುವಾಗಲು ಚಿರುಮುರಿ ಬಿಡದೆ ತಿಂದ ರಾಗಿಣಿ ಮಂಡ್ಯ- ತಮ್ಮ ಚಲನಚಿತ್ರದ ಪ್ರಮೋಷನ್ ಗಾಗಿ ಮಂಡ್ಯ ಸಂಜೆ ಥಿಯೇಟರ್ ಗೆ ಭೇಟಿ ನೀಡಿದ್ದ ನಟಿ ರಾಗಿಣಿ ಅತ್ಯಂತ ಪ್ರಿಯ ಮಂಡ್ಯದ ಚುರುಮುರಿ ಸವಿದ ಅಪರೂಪದ ಘಟನೆ ಮಂಡ್ಯ ಸಂಜೆಯ ಸರ್ಕಲ್ ನಲ್ಲಿ ಜರುಗಿತು. ಮಂಡ್ಯ ಸಂಜೆ ಥಿಯೇಟರ್ ನಲ್ಲಿ ನಡೆಯುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ದಲ್ಲಿ ನಾಯಕಿ ನಟಿಯಾಗಿ ನಟಿಸಿರುವ ರಾಗಿಣಿ ಯವರು ಮಂಡ್ಯಕ್ಕೆ ಬಂದಾಗ ಅಲ್ಲೇ ಥಿಯೇಟರ್ನಲ್ಲಿ ಮಾರಾಟ ಮಾಡುತ್ತಿದ್ದ ಚುರುಮುರಿಯನ್ನು ಪ್ರೀತಿಯಿಂದ ಸವಿದರು. ಅಭಿಮಾನಿಗಳು ಸೆಲ್ಫಿಗಾಗಿ ಹೋಗಿದ್ದರು ಕೈಯಲ್ಲಿ ಇದ್ದ ಚುರುಮುರಿಯನ್ನು ಬಿಡದೆ ಸೆಲ್ಫಿ ನೀಡಿದರು1
- ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ ಸ್ವಾಗತ ಮಹಾ ದ್ವಾರವನ್ನು ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು. ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.1
- ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ನಗರದಲ್ಲಿ ಬಿಗಿ ಭದ್ರತೆ, ಸಂಚಾರಕ್ಕೆ ನಿರ್ಬಂಧ ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಹಾಗೂ ಮೋದಿ ಸಂಚರಿಸುವ ಮಾರ್ಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಶ್ವಾನದಳದ ಸಿಬ್ಬಂದಿಯಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಪ್ರದೇಶದ ಅಕ್ಕಪಕ್ಕದ ಅಂಗಡಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಿಸಲಾಗಿದೆ. ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕೆಲವೆಡೆ ಸಾರ್ವಜನಿಕರ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರಿಗಾಗಿ ಬದಲಿ ಮಾರ್ಗಗಳನ್ನು ಪೊಲೀಸರು ಸಿದ್ಧಪಡಿಸಿದ್ದು, ಸಾರ್ವಜನಿಕರು ನಿಗದಿತ ಮಾರ್ಗಗಳಲ್ಲಿ ಸಂಚರಿಸಿ ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.1
- ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹಿಂಪಡೆಯುವಂತೆ ಮಲ್ಲುಯರಗಂಬಳ್ಳಿ, ಆಗ್ರಹ ಚಾಮರಾಜನಗರ : ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ತಮಿಳುನಾಡು ಸರ್ಕಾರ, ಕಾವೇರಿ ನೀರು ವಿಯಂತ್ರಣ ಸಮಿತಿ, ತಮಿಳುನಾಡು ಮುಖ್ಯಮಂತ್ರಿ ವಿಜಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿಯು ಕಾವೇರಿಯಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3.500 ಕ್ಯೂಸೆಕ್ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿರುವುದು ಖಂಡನೀಯ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕುಡಿಯುವುದಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಬೆಳೆ ಬೆಳೆಯುವುದಕ್ಕೆ ನೀರು ಹರಿಸುವುದು ಎಷ್ಟು ಸರಿ ? ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಒಪ್ಪಿಕೊಳ್ಳಬಾದರು, ಒಂದು ಹನಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಒತ್ತಾಯಿಸಿದರು. ಕರ್ನಾಟಕ ಬಂದ್ ಸಂಪೂರ್ಣ ಬೆಂಬಲ್ಲ: ಜಿಲ್ಲಾ ಗೌರವಾಧ್ಯಕ್ಷ ಪಿ.ಲಿಂಗರಾಜು ಮಾತನಾಡಿ, ರಾಜ್ಯ ಸರ್ಕಾರ ಕಳೆದ ನಾಲೈದು ದಿನಗಳಿಂದ ಕದ್ದು ಮುಚ್ಚಿ, ರಾತ್ರೋರಾತ್ರಿಗೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು, ರಾಜ್ಯದಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ರಾಜ್ಯದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಇದು. ರಾಜ್ಯದ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನು ಖಂಡಿಸಿ ಕನ್ನಡ ಚಳವಳಿ ಕರೆ ನೀಡಿರುವ ಕರ್ನಾಟಕ ಬಂದ್ ಸಂಪೂರ್ಣ ಬೆಂಬಲವನ್ನು ನಮ್ಮ ಸಂಘಟನೆ ನೀಡಲಿದೆ. ಮುಖ್ಯಮಂತ್ರಿಗಳು ತಮಿಳುನಾಡಿಗೆ ನೀರು ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಶಬಾಜ್ ಷರೀಫ್, ಗೌರವ ಸಲಹೆಗಾರ ಸೈಯದ್ ಮುಜಾಮಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮೋಹನ್‌ಕುಮಾರ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಲಿಕ್, ಶಿವಮೂರ್ತಿ, ಸೋಯಿಬ್, ಪ್ರಧಾನ ಕಾರ್ಯದರ್ಶಿ ಶಿವಮ್ಮ, ತಾಲೂಕು ಅಧ್ಯಕ್ಷ ಮಹದೇವಪ್ರಸಾದ್, ಪ್ರಧಾನಕಾರ್ಯದರ್ಶಿ ಸೋಮು, ಸಹ ಕಾರ್ಯದರ್ಶಿ ಅಜಯ್, ಮೊಹಮ್ಮದ್, ಸೈಯದ್ ರಿಯಾಜ್ ಅಹಮದ್, ನಾಸೀರ್‌ಉಲ್ಲಾ, ಅಬ್ದುಲ್ ಸುಭಾನ್, ಚಿಕ್ಕಅಂಕಶೆಟ್ಟಿ ಇತರರು ಭಾಗವಹಿಸಿದ್ದರು.4
- *ಅರ್ಹ ಮತದಾರರು ಹೊರಗುಳಿಯದಂತೆ, ಅನರ್ಹರು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ- ಡಾ. ಕುಮಾರ ಮಂಡ್ಯ, ಜುಲೈ 31: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಮನೆ ಮನೆಗೆ ಭೇಟಿ ನೀಡಿ ವಿತರಿಸಲಾದ ಗಣತಿ ನಮೂನೆಗಳನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 8, 2026 ನಮೂನೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಹಿಂದಿರುಗಿಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್‌ಗಳನ್ನು ಅಳವಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 15,75,849 ಮತದಾರರ ಪೈಕಿ ಇದುವರೆಗೆ 13,94,203 (88.47%) ಮತದಾರರ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜೊತೆಗೆ 1,49,347 (9.48%) ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗದಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಗುರುತಿಸಲಾದವರ ಪೈಕಿ 41,589 ಮಂದಿ ಮೃತ ಮತದಾರರು, 17,240 ಮಂದಿ ಗೈರು ಮತದಾರರು, 76,720 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 13,377 ಮಂದಿ ಪುನರಾವರ್ತಿತ ಮತದಾರರು ಹಾಗೂ 421 ಮಂದಿ ಗಣತಿ ನಮೂನೆಯನ್ನು ಹಿಂದಿರುಗಿಸಲು ನಿರಾಕರಿಸಿರುವ ಮತದಾರರಾಗಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು. ಮನೆ ಮನೆ ಸಮೀಕ್ಷೆಯಲ್ಲಿ ಈಗಾಗಲೇ ವಿತರಿಸಲಾದ ನಮೂನೆಗಳ ಪೈಕಿ 32,299 (2.05%) ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣ ಬಾಕಿಯಿದ್ದು, ಮುಂದಿನ ಮೂರುರಿಂದ ನಾಲ್ಕು ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರತಿ ದಿನದ ಪ್ರಗತಿ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ನಿಯಮಿತವಾಗಿ ನೀಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ASDDO ವಿಭಾಗದಡಿ ಗುರುತಿಸಲಾದ ಮತದಾರರ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಿ ಮರುಪರಿಶೀಲನೆ ನಡೆಸುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ತಪ್ಪದೇ ಉಳಿಯುವಂತೆ ಹಾಗೂ ಅನರ್ಹರ ಸೇರ್ಪಡೆಯಾಗದಂತೆ ನಿಖರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಆಗಸ್ಟ್ 17, 2026ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 17ರಿಂದ ಸೆಪ್ಟೆಂಬರ್ 16, 2026ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ರಾದ ರವಿಶಂಕರ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.1
- ಕೊಳ್ಳೇಗಾಲ. ಪಟ್ಟಣದ ಪುಟ್ ಬಾತ್ ತೆರವುಗೊಳಿಸುವ ವೇಳೆ ವ್ಯಾಪಾರಿಗಳಿಂದ ಹೈಡ್ರಾಮಾ ನಡೆದಿದ್ದು, ಟಿ.ವಿ ವರದಿಗಾರನ ಮೇಲೆ ಪೆಟ್ರೋಲ್ ಸುರಿದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಜರುಗಿದೆ. ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ರಸ್ತೆ, ಎಸ್.ಟಿ ರಸ್ತೆ, ರಾಜ್ ಕುಮಾರ್ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಪುಟ್ಬಾತ್ ತೆರವುಗೊಳಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪುಟ್ಬಾತ್ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ತೆರವು ಮಾಡಲು ಅಧಿಕಾರಿಗಳ ಬಂದ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವು ಮಾಡಿಕೊಂಡರು. ಡಾ.ರಾಜಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ತೆರಳುವ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಟ್ಬಾತ್ ಅಂಗಡಿಗಳನ್ನು ತೆರವು ಮಾಡಲು ಅಧಿಕಾರಿಗಳು ಬಂದಾಗ ಅಲ್ಲಿನ್ ನ್ಯೂ ಮದೀನ ಚಿಕನ್ ಸೆಂಟರ್ ಮಾಲೀಕ ಸೈಯದ್ ಆಸೀಫ್ ಎಂಬಾತ ನನ್ನ ಅಂಗಡಿ ತೆರವು ಮಾಡಿದ್ದದೇ ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಬೆದರಿಕೆ ಹೊಡುತ್ತಿದ್ದನು. ಈ ವೇಳೆ ನ್ಯೂಸ್ ಗಾಗಿ ಬಂದಿದ್ದ ವರದಿಗಾರ ಬಸಂತ್ ಕುಮಾರ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಬಂದ ಚಿಕನ್ ಅಂಗಡಿಯ ಸೈಯದ್ ಆಸೀಫ್ ಎನುವನ್ನು ಪಕ್ಕದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಹಿಡಿದುಕೊಂಡಾಗ ಬಸಂತ್ ಕುಮಾರ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತರು ನಟರಾಜು ಹಾಗೂ ಇನ್ನೀತರ ಮೇಲೆ ಪೆಟ್ರೋಲ್ ಸುರಿದಿತ್ತು. ನಂತರ ಪೊಲೀಸರು ಆಸೀಫ್ ನನ್ನು ವಶಕ್ಕೆ ಪಡೆದು, ಪೆಟ್ರೋಲ್ ಬಾಟಲ್ ನನ್ನು ಜಪ್ತಿ ಮಾಡಿದರು. ಮುಂದುವರಿದು, ಕಾರ್ಯಾಚರಣೆ ಮಾಡಲು ಜೆಸಿಬಿ ಮಿಷನ್ ರಭಸವಾಗಿ ಬಂದಾಗ ಚಿಕನ್ ಅಂಗಡಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಕಂಬ ಅಲುಗಾಡಿ ನೆರೆದಿದ್ದ ಜನರು ಭಯ ಬೀಳುವಂತಾಯಿತು. ಸದ್ಯಕ್ಕೆ ಯಾವುದೇ ಹಾನಿಯಾಗದೇ ವಿದ್ಯುತ್ ಕಂಬ ಸಡಿಲಗೊಂಡಿತ್ತು. ನಂತರ ಹಳೇ ಕುರುಬರ ಬೀದಿಗೆ ತೆರಳು ಮಾರ್ಗದ ಅಂಗಡಿಗಳ ಮುಂದಿನ ಒತ್ತುವರಿ ತೆರವು ಮಾಡಿ, ಕಾರ್ಯಾಚರಣೆಯನ್ನು ಮುಂದುವರೆಸಿದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪತ್ರಕರ್ತರ ಜೊತೆ ಆಗಮಿಸಿದ್ದ ಬಸಂತ್ ಕುಮಾರ್ ರನ್ನು ದೂರು ನೀಡದಂತೆ ಮುಸ್ಲಿಂ ಮುಖಂಡರು ಮನವೋಲಿಸಿ ಆಸೀಫ್ ರನ್ನು ವಾಪಸ್ಸು ಕರೆದ್ಯೋದರು. ಈ ಕಾರ್ಯಾಚರಣೆಯಲ್ಲಿ ನಗರಸಭೆ ಪೌರಯುಕ್ತರು ನಟರಾಜು, ಎಇಇ ಪ್ರಸನ್ನ, ಲಕ್ಷ್ಮೀ, ಮ್ಯಾನೇಜರ್ ಲಿಂಗರಾಜು, ಆಹಾರ ನಿರೀಕ್ಷಕ ಚೇತನ್, ವಿಭೂತಿ ಸೇರಿದಂತೆ ಇತರರು ಇದ್ದರು.2