ಕೊಳ್ಳೇಗಾಲ. ಪಟ್ಟಣದ ಪುಟ್ ಬಾತ್ ತೆರವುಗೊಳಿಸುವ ವೇಳೆ ವ್ಯಾಪಾರಿಗಳಿಂದ ಹೈಡ್ರಾಮಾ ನಡೆದಿದ್ದು, ಟಿ.ವಿ ವರದಿಗಾರನ ಮೇಲೆ ಪೆಟ್ರೋಲ್ ಸುರಿದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಜರುಗಿದೆ. ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ರಸ್ತೆ, ಎಸ್.ಟಿ ರಸ್ತೆ, ರಾಜ್ ಕುಮಾರ್ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಪುಟ್ಬಾತ್ ತೆರವುಗೊಳಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪುಟ್ಬಾತ್ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ತೆರವು ಮಾಡಲು ಅಧಿಕಾರಿಗಳ ಬಂದ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವು ಮಾಡಿಕೊಂಡರು. ಡಾ.ರಾಜಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ತೆರಳುವ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಟ್ಬಾತ್ ಅಂಗಡಿಗಳನ್ನು ತೆರವು ಮಾಡಲು ಅಧಿಕಾರಿಗಳು ಬಂದಾಗ ಅಲ್ಲಿನ್ ನ್ಯೂ ಮದೀನ ಚಿಕನ್ ಸೆಂಟರ್ ಮಾಲೀಕ ಸೈಯದ್ ಆಸೀಫ್ ಎಂಬಾತ ನನ್ನ ಅಂಗಡಿ ತೆರವು ಮಾಡಿದ್ದದೇ ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಬೆದರಿಕೆ ಹೊಡುತ್ತಿದ್ದನು. ಈ ವೇಳೆ ನ್ಯೂಸ್ ಗಾಗಿ ಬಂದಿದ್ದ ವರದಿಗಾರ ಬಸಂತ್ ಕುಮಾರ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಬಂದ ಚಿಕನ್ ಅಂಗಡಿಯ ಸೈಯದ್ ಆಸೀಫ್ ಎನುವನ್ನು ಪಕ್ಕದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಹಿಡಿದುಕೊಂಡಾಗ ಬಸಂತ್ ಕುಮಾರ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತರು ನಟರಾಜು ಹಾಗೂ ಇನ್ನೀತರ ಮೇಲೆ ಪೆಟ್ರೋಲ್ ಸುರಿದಿತ್ತು. ನಂತರ ಪೊಲೀಸರು ಆಸೀಫ್ ನನ್ನು ವಶಕ್ಕೆ ಪಡೆದು, ಪೆಟ್ರೋಲ್ ಬಾಟಲ್ ನನ್ನು ಜಪ್ತಿ ಮಾಡಿದರು. ಮುಂದುವರಿದು, ಕಾರ್ಯಾಚರಣೆ ಮಾಡಲು ಜೆಸಿಬಿ ಮಿಷನ್ ರಭಸವಾಗಿ ಬಂದಾಗ ಚಿಕನ್ ಅಂಗಡಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಕಂಬ ಅಲುಗಾಡಿ ನೆರೆದಿದ್ದ ಜನರು ಭಯ ಬೀಳುವಂತಾಯಿತು. ಸದ್ಯಕ್ಕೆ ಯಾವುದೇ ಹಾನಿಯಾಗದೇ ವಿದ್ಯುತ್ ಕಂಬ ಸಡಿಲಗೊಂಡಿತ್ತು. ನಂತರ ಹಳೇ ಕುರುಬರ ಬೀದಿಗೆ ತೆರಳು ಮಾರ್ಗದ ಅಂಗಡಿಗಳ ಮುಂದಿನ ಒತ್ತುವರಿ ತೆರವು ಮಾಡಿ, ಕಾರ್ಯಾಚರಣೆಯನ್ನು ಮುಂದುವರೆಸಿದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪತ್ರಕರ್ತರ ಜೊತೆ ಆಗಮಿಸಿದ್ದ ಬಸಂತ್ ಕುಮಾರ್ ರನ್ನು ದೂರು ನೀಡದಂತೆ ಮುಸ್ಲಿಂ ಮುಖಂಡರು ಮನವೋಲಿಸಿ ಆಸೀಫ್ ರನ್ನು ವಾಪಸ್ಸು ಕರೆದ್ಯೋದರು. ಈ ಕಾರ್ಯಾಚರಣೆಯಲ್ಲಿ ನಗರಸಭೆ ಪೌರಯುಕ್ತರು ನಟರಾಜು, ಎಇಇ ಪ್ರಸನ್ನ, ಲಕ್ಷ್ಮೀ, ಮ್ಯಾನೇಜರ್ ಲಿಂಗರಾಜು, ಆಹಾರ ನಿರೀಕ್ಷಕ ಚೇತನ್, ವಿಭೂತಿ ಸೇರಿದಂತೆ ಇತರರು ಇದ್ದರು.
ಕೊಳ್ಳೇಗಾಲ. ಪಟ್ಟಣದ ಪುಟ್ ಬಾತ್ ತೆರವುಗೊಳಿಸುವ ವೇಳೆ ವ್ಯಾಪಾರಿಗಳಿಂದ ಹೈಡ್ರಾಮಾ ನಡೆದಿದ್ದು, ಟಿ.ವಿ ವರದಿಗಾರನ ಮೇಲೆ ಪೆಟ್ರೋಲ್ ಸುರಿದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಜರುಗಿದೆ. ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ರಸ್ತೆ, ಎಸ್.ಟಿ ರಸ್ತೆ, ರಾಜ್ ಕುಮಾರ್ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಪುಟ್ಬಾತ್ ತೆರವುಗೊಳಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪುಟ್ಬಾತ್ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ತೆರವು ಮಾಡಲು ಅಧಿಕಾರಿಗಳ ಬಂದ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವು ಮಾಡಿಕೊಂಡರು. ಡಾ.ರಾಜಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ತೆರಳುವ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಟ್ಬಾತ್ ಅಂಗಡಿಗಳನ್ನು ತೆರವು ಮಾಡಲು ಅಧಿಕಾರಿಗಳು ಬಂದಾಗ ಅಲ್ಲಿನ್ ನ್ಯೂ ಮದೀನ ಚಿಕನ್ ಸೆಂಟರ್ ಮಾಲೀಕ ಸೈಯದ್ ಆಸೀಫ್ ಎಂಬಾತ ನನ್ನ ಅಂಗಡಿ ತೆರವು ಮಾಡಿದ್ದದೇ ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಬೆದರಿಕೆ ಹೊಡುತ್ತಿದ್ದನು. ಈ ವೇಳೆ ನ್ಯೂಸ್ ಗಾಗಿ ಬಂದಿದ್ದ ವರದಿಗಾರ ಬಸಂತ್ ಕುಮಾರ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ
ಹಚ್ಚಲು ಬಂದ ಚಿಕನ್ ಅಂಗಡಿಯ ಸೈಯದ್ ಆಸೀಫ್ ಎನುವನ್ನು ಪಕ್ಕದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಹಿಡಿದುಕೊಂಡಾಗ ಬಸಂತ್ ಕುಮಾರ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತರು ನಟರಾಜು ಹಾಗೂ ಇನ್ನೀತರ ಮೇಲೆ ಪೆಟ್ರೋಲ್ ಸುರಿದಿತ್ತು. ನಂತರ ಪೊಲೀಸರು ಆಸೀಫ್ ನನ್ನು ವಶಕ್ಕೆ ಪಡೆದು, ಪೆಟ್ರೋಲ್ ಬಾಟಲ್ ನನ್ನು ಜಪ್ತಿ ಮಾಡಿದರು. ಮುಂದುವರಿದು, ಕಾರ್ಯಾಚರಣೆ ಮಾಡಲು ಜೆಸಿಬಿ ಮಿಷನ್ ರಭಸವಾಗಿ ಬಂದಾಗ ಚಿಕನ್ ಅಂಗಡಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಕಂಬ ಅಲುಗಾಡಿ ನೆರೆದಿದ್ದ ಜನರು ಭಯ ಬೀಳುವಂತಾಯಿತು. ಸದ್ಯಕ್ಕೆ ಯಾವುದೇ ಹಾನಿಯಾಗದೇ ವಿದ್ಯುತ್ ಕಂಬ ಸಡಿಲಗೊಂಡಿತ್ತು. ನಂತರ ಹಳೇ ಕುರುಬರ ಬೀದಿಗೆ ತೆರಳು ಮಾರ್ಗದ ಅಂಗಡಿಗಳ ಮುಂದಿನ ಒತ್ತುವರಿ ತೆರವು ಮಾಡಿ, ಕಾರ್ಯಾಚರಣೆಯನ್ನು ಮುಂದುವರೆಸಿದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪತ್ರಕರ್ತರ ಜೊತೆ ಆಗಮಿಸಿದ್ದ ಬಸಂತ್ ಕುಮಾರ್ ರನ್ನು ದೂರು ನೀಡದಂತೆ ಮುಸ್ಲಿಂ ಮುಖಂಡರು ಮನವೋಲಿಸಿ ಆಸೀಫ್ ರನ್ನು ವಾಪಸ್ಸು ಕರೆದ್ಯೋದರು. ಈ ಕಾರ್ಯಾಚರಣೆಯಲ್ಲಿ ನಗರಸಭೆ ಪೌರಯುಕ್ತರು ನಟರಾಜು, ಎಇಇ ಪ್ರಸನ್ನ, ಲಕ್ಷ್ಮೀ, ಮ್ಯಾನೇಜರ್ ಲಿಂಗರಾಜು, ಆಹಾರ ನಿರೀಕ್ಷಕ ಚೇತನ್, ವಿಭೂತಿ ಸೇರಿದಂತೆ ಇತರರು ಇದ್ದರು.
- ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ ಸ್ವಾಗತ ಮಹಾ ದ್ವಾರವನ್ನು ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು. ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.1
- ತಮಿಳುನಾಡಿ ಗೆ ನೀರು ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ ಕಾವೇರಿನೀರು ಬಿಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಒಂದು ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ ಆ ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ ನೀರು ಬಿಡಬೇಕಂತೆ ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.1
- ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ : ಅತಿ ಹೆಚ್ಚು ಕಲಾವಿದರನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯು ಶ್ರೇಷ್ಠ ಜಾನಪದ ಕಲೆಗಳ ತವರೂರಾಗಿದೆ' ಎಂದು ಉದ್ಯಮಿ, ಯೂತ್ ಐಕಾನ್ ಶ್ರೀನಿಧಿ ಕುದರ್ ಹೇಳಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎನ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಫ್ರೆಂಡ್ಸ್ ಮ್ಯೂಸಿಕ್ ಮೆಲೋಡಿನ್ ತಂಡದಿಂದ ಆಷಾಢಮಾಸದ ಶುಕ್ರವಾರದ ಪ್ರಯುಕ್ತ ನಡೆದ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಮರಾಜನಗರದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವ ರಾಜ್ಯದಲ್ಲೇ. ನಡೆಯುವ ಏಕೈಕ ರಥೋತ್ಸವ ಎಂಬ ವಿಶೇಷಕೆ ಪಡೆದಿದೆ.ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200 ವರ್ಷಗಳಾಗಿದೆ. ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ನೆಪಿಗಾಗಿ ನಿರ್ಮಿಸಿದರು. ಜನರಿಗಾಗಿ ಇದ್ದಂತ ರಾಜಮನೆತನ ಎಂದರೆ ಅದು ಮೈಸೂರು ರಾಜಮನೆತನವಾಗಿದೆ. ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ಮಾಡಿದ ಕೀರ್ತಿ ಮೈಸೂರು ರಾಜಮನೆತನಕ್ಕೆ ಸಲ್ಲುತ್ತದೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್ ಮಾತನಾಡಿ, ಅಷಾಢ ಮಾಸದ ಶುಕ್ರವಾರದ ಪ್ರಯುಕ್ತ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯುತ್ತಿರುವುದು ಸಂತಸಕರ ಸಂಗತಿ. ಇಂತಹ ಕಾರ್ಯಕ್ರಮಗಳು ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ಸರ್ಕಾರವು ಅವಕಾಶ ಕಲ್ಪಿಸಿಕೊಡಬೇಕು ಎಂದರು. ಸನ್ಮಾನ: ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಿ.ಅಂಕಶೆಟ್ಟಿ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಆರ್ಚಕರು, ರಥ ಕಟ್ಟುವರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಮುಖಂಡ ಕೃಷ್ಣನಾಯಕ, ಕೂಸಣ್ಣ, ಪಣ್ಯದಹುಂಡಿ ರಾಜು, ಸಂಘದ ಅಧ್ಯಕ್ಷ ಮಂಗಲ ಹೊಸೂರು ಶಿವಣ್ಣ, ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷ ಬಂಗಾರು, ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ದೊರೆಸ್ವಾಮಿ ಆಲೂರು, ಕಾರ್ಯದರ್ಶಿ ನಾಗಮಹದೇವ, ಗೌರವ ಅಧ್ಯಕ್ಷನಾಗೇಂದ್ರ ಯಳಂದೂರು, ಮಹೇಶ್, ಮನು ಇತರರು ಹಾಜರಿದ್ದರು.4
- ಚಾಮರಾಜನಗರದಲ್ಲಿ ಇಂದು ಯುವ ಕರ್ನಾಟಕ ವೇದಿಕೆಯ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು4
- ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ಚಾಮರಾಜನಗರ, ಆ.1: ಕಾವೇರಿ ನೀರು ಬಿಡುಗಡೆ ಆದೇಶವನ್ನು ಖಂಡಿಸಿ ಯುವ ಕರ್ನಾಟಕ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಳಿಕ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದವರೆಗೆ ತೆರಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಖಾಲಿ ಬಿಂದಿಗೆಗಳನ್ನು ರಸ್ತೆಯ ಮಧ್ಯೆ ಇಟ್ಟು ನೀರಿನ ಅಭಾವದ ಸಂಕಷ್ಟವನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದರು. ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿದರು.1
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಳವಳ್ಳಿ : ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ 2026 - 27 ನೇ ಸಾಲಿನ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭ ಶುಕ್ರವಾರ ಜರುಗಿತು. ಮಧ್ಯಾಹ್ನ 1.30 ರ ಸಮಯದಲ್ಲಿ ಪಟ್ಟಣದ ಹೊರ ವಲಯದ ಮೂಗನ ಕೊಪ್ಪಲು ಗ್ರಾಮದ ಬಳಿ ನಡೆದ ಆಕರ್ಷಕ ಸಮಾ ರಂಭದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲ. ಟಿ ಎಸ್ ಚಂದ್ರು, ಕಾರ್ಯದರ್ಶಿಯಾಗಿ ಈರೇಶ್, ಖಜಾಂಚಿಯಾಗಿ ಎನ್ ರವಿ, ಉಪಾಧ್ಯಕ್ಷರಾಗಿ ಗಿರೀಶ್, ರಾಜೇಶ್ ಗೌಡ, ಕ್ಲಬ್ ನ ಕೋ ಆರ್ಡಿನೇಟರ್ ಆಗಿ ಅಣ್ಣೇಗೌಡರು, ಮೆಂಬರ್ ಶಿಫ್ ಛೇರ್ಮೆನ್ ಆಗಿ ಆರ್ ಎನ್ ಮಹೇಶ್, ಸರ್ವೀಸ್ ಛೇರ್ಮೆನ್ ಆಗಿ ಶಾಬುಲಿಂಗ ಸ್ವಾಮಿ, ಮಾರುಕಟ್ಟೆ ಹಾಗೂ ಕಮ್ಯೂನಿಕೇಷನ್ ಮುಖ್ಯಸ್ಥ ರಾಗಿ ರಘು, ನಿರ್ಧೇಶಕರಾಗಿ ಮಲ್ಲಿಕಾರ್ಜುಯ್ಯ, ಅಣ್ಣೇ ಗೌಡ್ರು, ಕೆ ಚಂದ್ರು ಎನ್ ನಂದೀಶ್ ಅಧಿಕಾರ ವಹಿಸಿ ಕೊಂಡರು. ಕ್ಲಬ್ ನ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ. ಜಿ ಎ ರಮೇಶ್ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಭೋದಿಸಿದರು. ಈ ವೇಳೆ ಮಾತನಾಡಿದ ಅವರು ಲಯನ್ಸ್ ಕ್ಲಬ್ ನ್ನು ಪ್ರತ್ಯೇಕ ವಿಭಾಗಗ ಳಾಗಿ ಮಾಡಿಕೊಂಡು ಸದಸ್ಯರ ಸಂಖ್ಯೆಗಳನ್ನು ಕಡಿಮೆ ಮಾಡಿ ಕೊಳ್ಳುವ ಬದಲಾಗಿ ಎಲ್ಲಾ ಕ್ಲಬ್ ಗಳು ಒಟ್ಟಾಗಿ ಸೇರಿದರೆ ಸದಸ್ಯ ರ ಬಲ ಹೆಚ್ಚಳದ ಜೊತೆಗೆ ದೊಡ್ಡ ಮಟ್ಟದಲ್ಲಿ ಕ್ಲಬ್ ನ ಸೇವಾ ಕಾರ್ಯಗಳನ್ನು ಸಹಕಾರಿಯಾಗುವುದರಿಂದ ಈ ನಿಟ್ಟಿನ ಎಲ್ಲಾ ಕ್ಲಬ್ ನ ಮುಖಂ ಡರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಲ್ಟಿಪಲ್ ಕೌನ್ಸಿಲ್ ಛೇರ್ಮೆನ್ ಡಾ. ಎನ್ ಕೃಷ್ಣೇ ಗೌಡ ಅವರು ಕ್ಲಬ್ ನ ಸೇವಾ ಕಾರ್ಯಗಳು ಸದಸ್ಯರು ಹಾಗೂ ದಾನಿಗಳ ಧನಸಹಾಯದಿಂದ ನಡೆಯಬೇಕೆ ಹೊರತು ಯಾವುದೇ ಸರ್ಕಾರಿ ಹಾಗೂ ಸಂಸ್ಥೆಗಳ ನೆರವು ದೊರಕುವು ದಿಲ್ಲ ಹೀಗಾಗಿ ಸದಸ್ಯರು ತಮ್ಮ ದುಡಿಮೆಯ ಅಲ್ಪ ಭಾಗವನ್ನು ಸಂಸ್ಥೆಯ ಸೇವಾ ಚಟುವಟಿಕೆ ಗಳಿಗೆ ಮೀಸಲಿಡಬೇಕು ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಟಿ ಎಸ್ ಚಂದ್ರು ಅವರು ಮಾತನಾಡಿ ತಮ್ಮ ಅಧಿಕಾರವ ಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸಮಾಜ ಸೇವಾ ಕಾರ್ಯಗ ಳನ್ನು ನಡೆಸುವ ಗುರಿ ಹೊಂದಿದ್ದು ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನೂತನ ಸದಸ್ಯರಿಗೆ ಜಿಲ್ಲಾ ಉಪ ರಾಜ್ಯಪಾಲರಾದ ಎಂ ಸಿದ್ದೇಗೌಡ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿದರು. ಇದೇ ವೇಳೆ ಸಮಾಜ ಸೇವಕ ಚಿಕ್ಕ ಮರಿಗೌಡ ಅವರನ್ನು ಸನ್ಮಾನಿಸ ಲಾಯಿತು. ಆರ್ಗೆನಿಕ್ ಫಾರಂ ನ ಜಿಲ್ಲಾ ಛೇರ್ಮೆನ್ ಲ. ಅಣ್ಣೇಗೌಡ, ನಿರ್ಗಮಿತ ಅಧ್ಯಕ್ಷರಾದ ಮಂಚಯ್ಯ, ಜಿಲ್ಲಾ ಕೋ ಆರ್ಡಿನೇಟರ್ ಎಂ ವಿ ನಂದೀಶ್, ಜಯಕುಮಾರ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.1
- ಕೊಳ್ಳೇಗಾಲ. ಪಟ್ಟಣದ ಪುಟ್ ಬಾತ್ ತೆರವುಗೊಳಿಸುವ ವೇಳೆ ವ್ಯಾಪಾರಿಗಳಿಂದ ಹೈಡ್ರಾಮಾ ನಡೆದಿದ್ದು, ಟಿ.ವಿ ವರದಿಗಾರನ ಮೇಲೆ ಪೆಟ್ರೋಲ್ ಸುರಿದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಜರುಗಿದೆ. ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ರಸ್ತೆ, ಎಸ್.ಟಿ ರಸ್ತೆ, ರಾಜ್ ಕುಮಾರ್ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಪುಟ್ಬಾತ್ ತೆರವುಗೊಳಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪುಟ್ಬಾತ್ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ತೆರವು ಮಾಡಲು ಅಧಿಕಾರಿಗಳ ಬಂದ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವು ಮಾಡಿಕೊಂಡರು. ಡಾ.ರಾಜಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ತೆರಳುವ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಟ್ಬಾತ್ ಅಂಗಡಿಗಳನ್ನು ತೆರವು ಮಾಡಲು ಅಧಿಕಾರಿಗಳು ಬಂದಾಗ ಅಲ್ಲಿನ್ ನ್ಯೂ ಮದೀನ ಚಿಕನ್ ಸೆಂಟರ್ ಮಾಲೀಕ ಸೈಯದ್ ಆಸೀಫ್ ಎಂಬಾತ ನನ್ನ ಅಂಗಡಿ ತೆರವು ಮಾಡಿದ್ದದೇ ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಬೆದರಿಕೆ ಹೊಡುತ್ತಿದ್ದನು. ಈ ವೇಳೆ ನ್ಯೂಸ್ ಗಾಗಿ ಬಂದಿದ್ದ ವರದಿಗಾರ ಬಸಂತ್ ಕುಮಾರ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಬಂದ ಚಿಕನ್ ಅಂಗಡಿಯ ಸೈಯದ್ ಆಸೀಫ್ ಎನುವನ್ನು ಪಕ್ಕದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಹಿಡಿದುಕೊಂಡಾಗ ಬಸಂತ್ ಕುಮಾರ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತರು ನಟರಾಜು ಹಾಗೂ ಇನ್ನೀತರ ಮೇಲೆ ಪೆಟ್ರೋಲ್ ಸುರಿದಿತ್ತು. ನಂತರ ಪೊಲೀಸರು ಆಸೀಫ್ ನನ್ನು ವಶಕ್ಕೆ ಪಡೆದು, ಪೆಟ್ರೋಲ್ ಬಾಟಲ್ ನನ್ನು ಜಪ್ತಿ ಮಾಡಿದರು. ಮುಂದುವರಿದು, ಕಾರ್ಯಾಚರಣೆ ಮಾಡಲು ಜೆಸಿಬಿ ಮಿಷನ್ ರಭಸವಾಗಿ ಬಂದಾಗ ಚಿಕನ್ ಅಂಗಡಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಕಂಬ ಅಲುಗಾಡಿ ನೆರೆದಿದ್ದ ಜನರು ಭಯ ಬೀಳುವಂತಾಯಿತು. ಸದ್ಯಕ್ಕೆ ಯಾವುದೇ ಹಾನಿಯಾಗದೇ ವಿದ್ಯುತ್ ಕಂಬ ಸಡಿಲಗೊಂಡಿತ್ತು. ನಂತರ ಹಳೇ ಕುರುಬರ ಬೀದಿಗೆ ತೆರಳು ಮಾರ್ಗದ ಅಂಗಡಿಗಳ ಮುಂದಿನ ಒತ್ತುವರಿ ತೆರವು ಮಾಡಿ, ಕಾರ್ಯಾಚರಣೆಯನ್ನು ಮುಂದುವರೆಸಿದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪತ್ರಕರ್ತರ ಜೊತೆ ಆಗಮಿಸಿದ್ದ ಬಸಂತ್ ಕುಮಾರ್ ರನ್ನು ದೂರು ನೀಡದಂತೆ ಮುಸ್ಲಿಂ ಮುಖಂಡರು ಮನವೋಲಿಸಿ ಆಸೀಫ್ ರನ್ನು ವಾಪಸ್ಸು ಕರೆದ್ಯೋದರು. ಈ ಕಾರ್ಯಾಚರಣೆಯಲ್ಲಿ ನಗರಸಭೆ ಪೌರಯುಕ್ತರು ನಟರಾಜು, ಎಇಇ ಪ್ರಸನ್ನ, ಲಕ್ಷ್ಮೀ, ಮ್ಯಾನೇಜರ್ ಲಿಂಗರಾಜು, ಆಹಾರ ನಿರೀಕ್ಷಕ ಚೇತನ್, ವಿಭೂತಿ ಸೇರಿದಂತೆ ಇತರರು ಇದ್ದರು.2