Shuru
Apke Nagar Ki App…
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸರ್ಕಾರಿ ಬಸ್ಸು ನಿಲ್ದಾಣ ಹತ್ತಿರ ಮಹಿಳೆಗೆ ಬಸ್ಸು ಡಿಕ್ಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸು ನಿಲ್ದಾಣ ಹತ್ತಿರ ಮಹಿಳೆಗೆ ಬಸ್ಸು ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ ಮಹಿಳೆ ಸಿಂಧನೂರು ಬಸ್ಸು ಡ್ರೈವರ್ ಗಳು ಹಾಗೂ ವಾಹನ ಚಾಲಕರು ಹುಷಾರಾಗಿ ಚಲಾಯಿಸಿ
ಮೌನೇಶ ವೈ ಉಮಲೂಟಿ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸರ್ಕಾರಿ ಬಸ್ಸು ನಿಲ್ದಾಣ ಹತ್ತಿರ ಮಹಿಳೆಗೆ ಬಸ್ಸು ಡಿಕ್ಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸು ನಿಲ್ದಾಣ ಹತ್ತಿರ ಮಹಿಳೆಗೆ ಬಸ್ಸು ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ ಮಹಿಳೆ ಸಿಂಧನೂರು ಬಸ್ಸು ಡ್ರೈವರ್ ಗಳು ಹಾಗೂ ವಾಹನ ಚಾಲಕರು ಹುಷಾರಾಗಿ ಚಲಾಯಿಸಿ
More news from ಕರ್ನಾಟಕ and nearby areas
- ರಾಯಚೂರು ಜಿಲ್ಲೆ all Indian institute to medical hospital ಸ್ಥಾಪಿಸಬೇಕೆಂದು ನಮ್ಮ ಕೇಂದ್ರ ಸರ್ಕಾರದ ಹಣಕಾಸು ಸಚಿವರು ಮಾತನಾಡಿ ರಾಯಚೂರು ಜಿಲ್ಲೆಗೆ AIlms ಈ ಸ್ಥಾಪನೆಗಾಗಿ ರಾಯಚೂರಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿರುತ್ತೇವೆ ಇದನ್ನು ಅರಿತುಕೊಂಡ ಕೇಂದ್ರ ಸರ್ಕಾರವು ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಗೆ ಮುಂದಾಗಿಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಏನೇ ಮಾಡಿ ಒಳ್ಳೆದನ್ನೇ ಮಾಡಿ ಮಾಡುತ್ತಲೇ ಇರಿ ಜೈ ಕೆ ಆರ್ ಎಸ್ ದ್ಯಾವಣ್ಣ ನಾಯಕ ಪುಲದಿನ್ನಿ ರಾಜ್ಯ ಯುವ ಸಮಿತಿ ಕಾರ್ಯದರ್ಶಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ1
- ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸು ನಿಲ್ದಾಣ ಹತ್ತಿರ ಮಹಿಳೆಗೆ ಬಸ್ಸು ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ ಮಹಿಳೆ ಸಿಂಧನೂರು ಬಸ್ಸು ಡ್ರೈವರ್ ಗಳು ಹಾಗೂ ವಾಹನ ಚಾಲಕರು ಹುಷಾರಾಗಿ ಚಲಾಯಿಸಿ2
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದ ಶಿವಾಜಿ ಜಯಂತಿಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಶರಣಮ್ಮ ಶೇಖರಪ್ಪ ತಳವಾರ ಬಿಜೆಪಿ ಸೇರ್ಪಡೆಯಾದರು. ಈ ಹಿಂದೆ ಬಿಎಸ್ಆರ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು ಬಿಜೆಪಿ ಮತ್ತು ದೊಡ್ಡನಗೌಡ ಪಾಟೀಲ್ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾದರು. ಈ ಸಮಯದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು, ಗ್ರಾಮೀಣ ಮಂಡಳದ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ ಸೇರಿದಂತೆ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.2
- ಮಂದ್ದೇಬಿಹಾಳ, ಪಿಲೇಕಮ್ಮಜಾತ್ರಾ ಮೂಹು ಸ್ತವ1
- ಗುಡೆಕೋಟೆ ಹಿಂದ ಹೋಗುವ ರಾಮಸಾಗರ ಹಟ್ಟಿ ದಿಬ್ಬದಲಿ ಗುಡೆಕೋಟೆಯಲ್ಲಿ ಚರಂಡಿ ವ್ಯವಸ್ಥೆ ಇದ್ದು ಚರಂಡಿ ತುಂಬಿ ರೋಡ್ ನಲ್ಲಿ ಓಡಾಡುವ ದುರ್ವ್ಯವಸ್ಥೆಯಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಹಿಡಿ ಗುಡೆಕೋಟೆ ಒಂದೇ ಚರಂಡಿಯಲ್ಲಿ ಬರುತ್ತಿದ್ದು ಪೇಪರ್ ಮತ್ತು ಊರಿನ ಎಲ್ಲಾ ಗಲೀಜ್ ತುಂಬಿ ತುಳುಕಾಡುತ್ತಿದ್ದು ಗುಡೆಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ವರದಿ2
- ಗುಳೇದಗುಡ್ಡ: ಹನ್ನೆರಡನೇ ಶತಮಾನದ ಶಿವಶರಣರಾದ ಜೇಡರ ದಾಸಿಮಯ್ಯ, ಮಾದರ ಚೆನ್ನಯ್ಯನವರ,ಬಸವಣ್ಣನವರ ಸಮಕಾಲಿನ ಶರಣರ ಶರಣೆಯರು ತಮ್ಮ ವಚನ ಸಾಹಿತ್ಯದಲ್ಲಿ ಕಾಯಕದ ಮಹತ್ವ ತಿಳಿಸಿದವರು. ಎಂದು ಮುದ್ದೇಬಿಹಾಳದ ಎಂ ಜಿ ವ್ಹಿ ಸಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿಗಳಾದ ಡಾ. ಪ್ರಕಾಶ ನರಗುಂದ ಹೇಳಿದರು. ಅವರಿ ಸೋಮವಾರ ಪಟ್ಟಣದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಲಕ್ಷಿತ ಶರಣರ ವಚನಗಳಲ್ಲಿ ಆತ್ಮ ವಿಮರ್ಶ, ಕಾಯಕವೇ ಕೈಲಾಸ,ದಾಸೋಹ ತತ್ವ ಜಾತಿ,ಲಿಂಗ ಭೇದ,ನಿರಾಕರಣೆ, ಮುಂತಾದ ವಿಷಯಗಳ ಕುರಿತು ಅನೇಕ ಶರಣರು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಗದ್ಯ ಪದ್ಯ ಮಿಶ್ರಿತ ವಚನ ಸಾಹಿತ್ಯ ಸರಳ ನೇರ ಮತ್ತು ಭಾವಪೂರ್ಣ ಭಾಷೆಯಲ್ಲಿ ಸತ್ಯಶೋಧನೆ ಸಾಮಾಜಿಕ ಸಮಾನತೆ ದೈವಿಕ ಅನುಭವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಅಗಾಧ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ನಿರ್ಲಕ್ಷಿತ ವಚನಕಾರರು ಬೇರೆ ಬೇರೆ ರಾಜ್ಯಗಳಿಂದ ಬಂದು ಬೇರೆ ಬೇರೆ ಕಾಯಕಗಳಲ್ಲಿ ಕೈಲಾಸ ಕಂಡವರು. ಇಂಥವರ ಕುರಿತು ಇನ್ನು ಶ್ರೇಷ್ಠ ಮಟ್ಟದ ಸಂಶೋಧನೆಗಳು ಆಗಬೇಕಾಗಿದೆ. ಎಂದರು ಹೇಳಿದರು. ವೇದಿಕೆ ಮೇಲೆ ಕಾಲೇಜಿನ ಪ್ರಚಾರ್ಯ ಪ್ರೊ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ, ಅರುಣಕುಮಾರ ಗಾಳಿ,ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಸಂಗಮೇಶ ಕಲ್ಯಾಣಿ,ಕಾಲೇಜಿನ ಪ್ರಾಚಾರ್ಯರ ಪ್ರೊ. ರೇವಣಸಿದ್ದಪ್ಪ, ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ, ಪ್ರೊ. ಫಕೀರಪ್ಪ ಚನ್ನಪ್ಪಗೌಡ್ರು ಉಪಸ್ಥಿತರಿದ್ದರು.1
- ಕನ್ನಡಿಗರ ಸ್ವಾಭಿಮಾನದ ಅಸ್ಮಿತೆಯ ಪ್ರತಿಷ್ಠಿತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯಲ್ಲಿ ಡಾ. ಸಿ ಸೋಮಶೇಖರ ರವರನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಕನ್ನಡ ನಾಡು, ನುಡಿಯ ಸೇವೆಯನ್ನು ಮಾಡಲು ಅವಕಾಶ ನೀಡಿ ಎಂದು ನಬಿಸಾಬ ಕುಷ್ಟಗಿ ಹೇಳಿದರು, ಅವರು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ಹಿನ್ನೆಲೆ ಡಾ. ಸಿ ಸೋಮಶೇಖರ್ ಐಎಎಸ್, ಮಾಜಿ ಅಧ್ಯಕ್ಷರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ಪರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಬಾಲ್ಯದಿಂದಲೂ ಅಪ್ಪಟ ಕನ್ನಡ ಅಭಿಮಾನಿಯಾಗಿರುವ ಸಿ ಸೋಮಶೇಖರ್ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದಾರೆ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಪಡೆದು ಆನಂತರ ವಾಣಿಜ್ಯ ಸ್ನಾತಕೋತ್ತರ ಪದವಿಗಳಿಸಿ ಬೆಂಗಳೂರಿನ ಕೆ.ಎಲ್.ಇ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿ ನಂತರ ಕರ್ನಾಟಕ ಆಡಳಿತ ಪ್ರಥಮ ದರ್ಜೆ ಸೇವೆಯನ್ನು ಸೇರುವ ಅವಕಾಶ ದೊರಕಿತು,ಅಖಿಲ ಭಾರತ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿಯೇ ಉತ್ತರಿಸಿ ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾಗಿ ಕನ್ನಡ ನಾಡು, ನುಡಿಯ ಮೇಲಿನ ಅಭಿಮಾನದಿಂದ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ಕರ್ನಾಟಕ ಅಡಳಿತ ಸೇವೆಯನ್ನೇ ಆಯ್ಕೆ ಮಾಡಿಕೊಂಡರು ,ಭಾರತ ಆಡಳಿತ ಸೇವೆಗೆ (ಐ.ಎ.ಎಸ್) ಪದೋನ್ನತಿ ಪಡೆದು ರಾಜ್ಯದ ಅನೇಕ ಇಲಾಖೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು,ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವಿಶೇಷವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ , ನಿವೃತ್ತಿ ನಂತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುತ್ತಾರೆ, ಅವರ ಆಡಳಿತ ಅವಧಿಯಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಆಡಳಿದ ಎಲ್ಲಾ ಹಂತಗಳಲ್ಲಿಯೂ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಿ ಇರುವಂತೆ ಅಭಿಮಾನ ಪೂರಕವಾಗಿ ಪ್ರಯತ್ನಿಸಿದ್ದಾರೆ,ಸಂಸ್ಕೃತಿ- ಪ್ರಗತಿ ಆಡಳಿತ ನಾಣ್ಯದ ಎರಡು ಮುಖಗಳೆಂದೇ ಭಾವಿಸಿರುವ ಅವರು ಆಡಳಿತಕ್ಕೆ ಮಾನವೀಯ ಸ್ಪರ್ಶವನ್ನು ನೀಡಲು ಶ್ರಮಿಸಿರುತ್ತಾರೆ, ಮೂಲತಃ ಸಾಹಿತ್ಯ ಪ್ರೇಮಿಯಾದ ಅವರು ಹಲವಾರು ಮೌಲಿಕ ಕನ್ನಡದ ಕೃತಿಗಳನ್ನು ರಚಿಸಿರುತ್ತಾರೆ,“ವಚನಗಳಲ್ಲಿ ಸಾಮಾಜಿಕ ಚಿಂತನೆ” ಎಂಬ ಮಹಾ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ಪ ಡೆದುಕೊಂಡಿದ್ದಾರೆ,ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳ ಆರಾಧಕನಾಗಿರುವ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಅವರ ಆತ್ಮೀಯ ಕನ್ನಡ ಅಭಿಮಾನಿಗಳ ಒತ್ತಾಸೆಯಿಂದ ಅವರು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಸ್ಪರ್ಧಿಸಲು ಬಯಸಿದ್ದಾರೆ,ನಾಡಿನ, ಹೊರನಾಡಿನ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳು ತಮ್ಮ ಆಶೀರ್ವಾದ ಮತ್ತು ಸಹಕಾರದ ಮೂಲಕ ಕನ್ನಡಿಗರ ಸ್ವಾಭಿಮಾನದ ಅಸ್ಮಿತೆಯ ಪ್ರತಿಷ್ಠಿತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯಲ್ಲಿ ಸಿ ಸೋಮಶೇಖರ್ ರವರನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಕನ್ನಡ ನಾಡು, ನುಡಿಯ ಸೇವೆಯನ್ನು ಮಾಡಲು ಅವರಿಗೆ ಒಂದು ಅಪೂರ್ವ ಅವಕಾಶವನ್ನು ನೀಡಬೇಕೆಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಮೋಹನಲಾಲ್ ಜೈನ್ ಮತ್ತು ಇತರರು ಪಾಲ್ಗೊಂಡಿದ್ದರು.1
- ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮಾಚ೯ 18 ರಿಂದ ಏಪ್ರಿಲ್ 02 ರ ವರೆಗೆ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ 7 ಸರ್ಕಾರಿ , 08 ಅನುದಾನಿತ ಹಾಗೂ ಒಂದು ಅನುದಾನ ರಹಿತ ಶಾಲೆ ಸೇರಿದಂತೆ ಒಟ್ಟು 16 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲೇದಾರ ತಿಳಿಸಿದ್ದಾರೆ.1