logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರು; ₹3.83 ಲಕ್ಷ ವಂಚಕರ ಪಾಲು ದಾವಣಗೆರೆ: ಗ್ರಾಹಕರ ಗಮನಕ್ಕೆ ಬಾರದಂತೆ ಖಾಸಗಿ ಬ್ಯಾಂಕ್‌ನಲ್ಲಿ ₹17.55 ಲಕ್ಷ ಸಾಲ ಮಂಜೂರು ಮಾಡಿಸಿ, ಅದರಲ್ಲಿ ₹3.83 ಲಕ್ಷ ಹಣವನ್ನು ಸೈಬರ್ ವಂಚಕರು ಎಗರಿಸಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಚನ್ನಗಿರಿ ಪಟ್ಟಣದ ಎಸ್.ವಿ. ರಸ್ತೆ ನಿವಾಸಿಯೊಬ್ಬರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರಾಗಿದೆ. ಬ್ಯಾಂಕ್ ಶುಲ್ಕ ಕಡಿತಗೊಂಡು ₹16.98 ಲಕ್ಷ ಹಣ ಅವರ ಖಾತೆಗೆ ಜಮೆಯಾಗಿದೆ. ಅಕ್ಟೋಬರ್ 1ರಂದು ಸೈಬರ್ ವಂಚಕರು ಹಂತ ಹಂತವಾಗಿ ₹52,108, ₹1.17 ಲಕ್ಷ ಹಾಗೂ ₹30 ಸಾವಿರ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ಸಾಲದ ಕುರಿತು ಮಾಹಿತಿ ನೀಡಿದ ಬಳಿಕವಷ್ಟೇ ಗ್ರಾಹಕರಿಗೆ ವಂಚನೆಯ ವಿಚಾರ ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಗ್ರಾಹಕರು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಗ್ರಾಹಕರ ಗಮನಕ್ಕೆ ಬಾರದಂತೆ ಸಾಲ ಮಂಜೂರಾಗಿರುವುದು ಹಾಗೂ ಹಣ ವರ್ಗಾವಣೆಯಾಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1 day ago
user_Prahalad bs
Prahalad bs
Local News Reporter ದಾವಣಗೆರೆ, ದಾವಣಗೆರೆ, ಕರ್ನಾಟಕ•
1 day ago

ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರು; ₹3.83 ಲಕ್ಷ ವಂಚಕರ ಪಾಲು ದಾವಣಗೆರೆ: ಗ್ರಾಹಕರ ಗಮನಕ್ಕೆ ಬಾರದಂತೆ ಖಾಸಗಿ ಬ್ಯಾಂಕ್‌ನಲ್ಲಿ ₹17.55 ಲಕ್ಷ ಸಾಲ ಮಂಜೂರು ಮಾಡಿಸಿ, ಅದರಲ್ಲಿ ₹3.83 ಲಕ್ಷ ಹಣವನ್ನು ಸೈಬರ್ ವಂಚಕರು ಎಗರಿಸಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಚನ್ನಗಿರಿ ಪಟ್ಟಣದ ಎಸ್.ವಿ. ರಸ್ತೆ ನಿವಾಸಿಯೊಬ್ಬರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ₹17.55 ಲಕ್ಷ ಸಾಲ ಮಂಜೂರಾಗಿದೆ. ಬ್ಯಾಂಕ್ ಶುಲ್ಕ ಕಡಿತಗೊಂಡು ₹16.98 ಲಕ್ಷ ಹಣ ಅವರ ಖಾತೆಗೆ ಜಮೆಯಾಗಿದೆ. ಅಕ್ಟೋಬರ್ 1ರಂದು ಸೈಬರ್ ವಂಚಕರು ಹಂತ ಹಂತವಾಗಿ ₹52,108, ₹1.17 ಲಕ್ಷ ಹಾಗೂ ₹30 ಸಾವಿರ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ಸಾಲದ ಕುರಿತು ಮಾಹಿತಿ ನೀಡಿದ ಬಳಿಕವಷ್ಟೇ ಗ್ರಾಹಕರಿಗೆ ವಂಚನೆಯ ವಿಚಾರ ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಗ್ರಾಹಕರು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಗ್ರಾಹಕರ ಗಮನಕ್ಕೆ ಬಾರದಂತೆ ಸಾಲ ಮಂಜೂರಾಗಿರುವುದು ಹಾಗೂ ಹಣ ವರ್ಗಾವಣೆಯಾಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

More news from ಕರ್ನಾಟಕ and nearby areas
  • ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited
    1
    ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ!
ವಿಶೇಷ ವರದಿ: ಕೃಷ್ಣ ಎಂ
1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ.
14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ?
😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ?
ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ!
🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ.
✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ!
📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ.
MIRROR OF HARIHAR | ಹರಿಹರ ಕನ್ನಡಿ
#ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps 
#TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar
@highlight Davanagere Updates  Namma Nakshatra Harihar Davanagere Smart City Limited
    user_Krishna M
    Krishna M
    Local News Reporter ಹರಿಹರ, ದಾವಣಗೆರೆ, ಕರ್ನಾಟಕ•
    20 hrs ago
  • ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದು: ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮಸ್ಥರ ಆಕ್ರೋಶ ಸಚಿವರ ಕಾರ್ಯಕ್ರಮಕ್ಕಾಗಿ ಅದ್ದೂರಿ ಸಿದ್ಧತೆ, ವೇದಿಕೆ–ಶಾಮಿಯಾನ ನಿರ್ಮಾಣ; ಮುಂಚಿತ ಮಾಹಿತಿ ಇಲ್ಲದೆ ರದ್ದುಗೊಳಿಸಿದ್ದಕ್ಕೆ ಅಸಮಾಧಾನ ಚನ್ನಗಿರಿ, ನ.27: ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಗೆ ಒಳಪಡುವ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನವೆಂಬರ್ 28ರಂದು ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಏಕಾಏಕಿ ರದ್ದಾಗಿದೆ ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಕೆ.ಎಸ್. ಬಸವಂತಪ್ಪ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಹಲವು ದಿನಗಳಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಿಸಿ, ಶಾಮಿಯಾನ ಹಾಕಲಾಗಿತ್ತು. ಹೂವಿನ ಅಲಂಕಾರ, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸ್ವಾಗತಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಕೊನೆಯ ಕ್ಷಣದಲ್ಲಿ ತಿಳಿದುಬಂದಿರುವುದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನಡೆಸಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ರದ್ದತಿಯ ಮಾಹಿತಿ ಬಂದಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆಗಳಿಗೆ ವೇದಿಕೆಯಾಗಬೇಕಿದ್ದ ಕಾರ್ಯಕ್ರಮ ಪ್ರಜಾ ಸೇವಾ ಆಂದೋಲನವು ಕೇವಲ ರಾಜಕೀಯ ಕಾರ್ಯಕ್ರಮವಾಗಿರದೆ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರುವ ವೇದಿಕೆಯಾಗಬೇಕಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗುಡ್ಡದ ಕೊಮ್ಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಸಮಸ್ಯೆಗಳು, ಕುಡಿಯುವ ನೀರಿನ ಕೊರತೆ, ರಸ್ತೆ ಅಭಿವೃದ್ಧಿ, ಯುವಕರಿಗೆ ಉದ್ಯೋಗಾವಕಾಶ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಬೇಡಿಕೆಗಳನ್ನು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ನಿರೀಕ್ಷಿಸಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ಆಶಯದಿಂದ ಕಾರ್ಯಕ್ರಮದ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಅವಕಾಶ ಕೈತಪ್ಪಿದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ದುಂದು ವೆಚ್ಚದ ಬಗ್ಗೆಯೂ ಪ್ರಶ್ನೆ ಕಾರ್ಯಕ್ರಮಕ್ಕಾಗಿ ವೇದಿಕೆ, ಶಾಮಿಯಾನ, ಹೂವಿನ ಅಲಂಕಾರ, ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಸಿದ್ಧತೆಗಳಿಗೆ ಮಾಡಿರುವ ವೆಚ್ಚದ ಬಗ್ಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ಸಾರ್ವಜನಿಕರ ನಿರೀಕ್ಷೆ ಮತ್ತು ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸೂಕ್ತ ಮಾಹಿತಿ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಕಾರ್ಯಕ್ರಮ ರದ್ದತಿಗೆ ನಿಖರವಾದ ಕಾರಣವೇನು ಎಂಬುದರ ಕುರಿತು ಅಧಿಕೃತ ಸ್ಪಷ್ಟನೆ ದೊರೆತಿದೆಯೇ ಎಂಬುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಕುರಿತು ಸಂಬಂಧಪಟ್ಟವರು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮತ್ತೊಂದು ದಿನಾಂಕ ನಿಗದಿಪಡಿಸಲು ಆಗ್ರಹ “ಸಚಿವರ ಮೇಲೆ ನಮಗೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ. ನಮ್ಮ ಭಾಗದ ಜನರು ಬಹಳ ನಿರೀಕ್ಷೆಯಿಂದ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಗ್ರಾಮಸ್ಥರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಸಿದ್ಧತೆ ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾದ ಮಾಹಿತಿ ಬಂದಿರುವುದು ನಿರಾಸೆ ಮೂಡಿಸಿದೆ. ಆದ್ದರಿಂದ ಸಚಿವರು ಮತ್ತೊಂದು ದಿನಾಂಕ ನಿಗದಿಪಡಿಸಿ, ಇದೇ ಗ್ರಾಮದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಸಿಕೊಡಬೇಕು” ಎಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಸಚಿವರು ಕೆ.ಎಸ್. ಬಸವಂತಪ್ಪ ಅವರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳೂ ಗ್ರಾಮಕ್ಕೆ ಆಗಮಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕಾರ್ಯಕ್ರಮವನ್ನು ಕೇವಲ ಔಪಚಾರಿಕವಾಗಿ ನಡೆಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್, ಕಾಂಗ್ರೆಸ್ ಮುಖಂಡ ರಮೇಶಣ್ಣ ಮಲ್ಗೆನಳ್ಳಿ, ಹಾಲೇಶ್, ತಿಪ್ಪೇಶ್, ಪ್ರಭಾಕರ್, ಪ್ರಕಾಶ್ ಬಿ., ಮಂಜಪ್ಪ ಗಿಡ್ಡಜ್ಜಿ, ಹಾಲೇಶಪುರ ವಿಶ್ವನಾಥ್, ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಒಟ್ಟಾರೆ, ಗುಡ್ಡದ ಕೊಮ್ಮಾರನಹಳ್ಳಿಯಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದಾಗಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಭಾಗದ ಜನರ ನಿರೀಕ್ಷೆಗಳಿಗೆ ಸ್ಪಂದಿಸಿ, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಬೇಕೆಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.
    4
    ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದು: ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮಸ್ಥರ ಆಕ್ರೋಶ

ಸಚಿವರ ಕಾರ್ಯಕ್ರಮಕ್ಕಾಗಿ ಅದ್ದೂರಿ ಸಿದ್ಧತೆ, ವೇದಿಕೆ–ಶಾಮಿಯಾನ ನಿರ್ಮಾಣ; ಮುಂಚಿತ ಮಾಹಿತಿ ಇಲ್ಲದೆ ರದ್ದುಗೊಳಿಸಿದ್ದಕ್ಕೆ ಅಸಮಾಧಾನ
ಚನ್ನಗಿರಿ, ನ.27: ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಗೆ ಒಳಪಡುವ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನವೆಂಬರ್ 28ರಂದು ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಏಕಾಏಕಿ ರದ್ದಾಗಿದೆ ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಕೆ.ಎಸ್. ಬಸವಂತಪ್ಪ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಹಲವು ದಿನಗಳಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಿಸಿ, ಶಾಮಿಯಾನ ಹಾಕಲಾಗಿತ್ತು. ಹೂವಿನ ಅಲಂಕಾರ, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸ್ವಾಗತಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.
ಆದರೆ, ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಕೊನೆಯ ಕ್ಷಣದಲ್ಲಿ ತಿಳಿದುಬಂದಿರುವುದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನಡೆಸಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ರದ್ದತಿಯ ಮಾಹಿತಿ ಬಂದಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜನರ ಸಮಸ್ಯೆಗಳಿಗೆ ವೇದಿಕೆಯಾಗಬೇಕಿದ್ದ ಕಾರ್ಯಕ್ರಮ
ಪ್ರಜಾ ಸೇವಾ ಆಂದೋಲನವು ಕೇವಲ ರಾಜಕೀಯ ಕಾರ್ಯಕ್ರಮವಾಗಿರದೆ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರುವ ವೇದಿಕೆಯಾಗಬೇಕಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗುಡ್ಡದ ಕೊಮ್ಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಸಮಸ್ಯೆಗಳು, ಕುಡಿಯುವ ನೀರಿನ ಕೊರತೆ, ರಸ್ತೆ ಅಭಿವೃದ್ಧಿ, ಯುವಕರಿಗೆ ಉದ್ಯೋಗಾವಕಾಶ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಬೇಡಿಕೆಗಳನ್ನು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ನಿರೀಕ್ಷಿಸಿದ್ದರು.
ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ಆಶಯದಿಂದ ಕಾರ್ಯಕ್ರಮದ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಅವಕಾಶ ಕೈತಪ್ಪಿದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ದುಂದು ವೆಚ್ಚದ ಬಗ್ಗೆಯೂ ಪ್ರಶ್ನೆ
ಕಾರ್ಯಕ್ರಮಕ್ಕಾಗಿ ವೇದಿಕೆ, ಶಾಮಿಯಾನ, ಹೂವಿನ ಅಲಂಕಾರ, ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಸಿದ್ಧತೆಗಳಿಗೆ ಮಾಡಿರುವ ವೆಚ್ಚದ ಬಗ್ಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ಸಾರ್ವಜನಿಕರ ನಿರೀಕ್ಷೆ ಮತ್ತು ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸೂಕ್ತ ಮಾಹಿತಿ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಕಾರ್ಯಕ್ರಮ ರದ್ದತಿಗೆ ನಿಖರವಾದ ಕಾರಣವೇನು ಎಂಬುದರ ಕುರಿತು ಅಧಿಕೃತ ಸ್ಪಷ್ಟನೆ ದೊರೆತಿದೆಯೇ ಎಂಬುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಕುರಿತು ಸಂಬಂಧಪಟ್ಟವರು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತೊಂದು ದಿನಾಂಕ ನಿಗದಿಪಡಿಸಲು ಆಗ್ರಹ
“ಸಚಿವರ ಮೇಲೆ ನಮಗೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ. ನಮ್ಮ ಭಾಗದ ಜನರು ಬಹಳ ನಿರೀಕ್ಷೆಯಿಂದ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಗ್ರಾಮಸ್ಥರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಸಿದ್ಧತೆ ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾದ ಮಾಹಿತಿ ಬಂದಿರುವುದು ನಿರಾಸೆ ಮೂಡಿಸಿದೆ. ಆದ್ದರಿಂದ ಸಚಿವರು ಮತ್ತೊಂದು ದಿನಾಂಕ ನಿಗದಿಪಡಿಸಿ, ಇದೇ ಗ್ರಾಮದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಸಿಕೊಡಬೇಕು” ಎಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಸಚಿವರು ಕೆ.ಎಸ್. ಬಸವಂತಪ್ಪ ಅವರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳೂ ಗ್ರಾಮಕ್ಕೆ ಆಗಮಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕಾರ್ಯಕ್ರಮವನ್ನು ಕೇವಲ ಔಪಚಾರಿಕವಾಗಿ ನಡೆಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್, ಕಾಂಗ್ರೆಸ್ ಮುಖಂಡ ರಮೇಶಣ್ಣ ಮಲ್ಗೆನಳ್ಳಿ, ಹಾಲೇಶ್, ತಿಪ್ಪೇಶ್, ಪ್ರಭಾಕರ್, ಪ್ರಕಾಶ್ ಬಿ., ಮಂಜಪ್ಪ ಗಿಡ್ಡಜ್ಜಿ, ಹಾಲೇಶಪುರ ವಿಶ್ವನಾಥ್, ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಒಟ್ಟಾರೆ, ಗುಡ್ಡದ ಕೊಮ್ಮಾರನಹಳ್ಳಿಯಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದಾಗಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಭಾಗದ ಜನರ ನಿರೀಕ್ಷೆಗಳಿಗೆ ಸ್ಪಂದಿಸಿ, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಬೇಕೆಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.
    user_ದೇವರಾಜ್ ಕೆ ನೆಲ್ಲಿಹಂಕಲು
    ದೇವರಾಜ್ ಕೆ ನೆಲ್ಲಿಹಂಕಲು
    Local News Reporter ಚನ್ನಗಿರಿ, ದಾವಣಗೆರೆ, ಕರ್ನಾಟಕ•
    10 hrs ago
  • ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು‌ಕುರಿಗಾಯಿ ಮಂಜುನಾಥಗೆ ಅರ್ಥಿಕ ಸಂಕಷ್ಟ ಚಳ್ಳಕೆರೆ ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು... ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆರೆಹಿಂದಹಟ್ಟಿ ಗ್ರಾಮದಲ್ಲಿ ಕುರಿಗಾಹಿ ‌ಮಂಜುನಾಥಗೆ ದೊಡ್ಡ ಆಘಾತ ಎದುರಾಗಿದೆ. ಬುಡ್ನಹಟ್ಟಿ ಗ್ರಾಮದ ಸಮೀಪದ ಕೆರೆಯಿಂದಲಹಟ್ಟಿಯ ಗ್ರಾಮದ ಕುರಿಗಾಯಿ ಮಂಜುನಾಥ್ 110 ಕುರಿ 36 ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕುರಿಗಳು ಮೇವಿಗೆಂದ ಹೋದಾಗ ಬಿಳಿ ಜೋಳದ ಚಿಗುರು ತಿಂದ ಪರಿಣಾಮ 41 ಕುರಿಗಳು ಸಾವನ್ನಪ್ಪಿವೆ. ಒಟ್ಟು 155 ಕುರಿಗಳನ್ನು ಹೊಂದಿದ್ದ ಮಂಜುನಾಥ್ ಅವರಿಗೆ ಈ ಘಟನೆಯಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಪಶುಸಂಗೋಪನಾ ಇಲಾಖೆಯ ಗಮನಕ್ಕೆ ಬಂದಿದ್ದು, ತಕ್ಷಣವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡಿದ್ದ 30 ಕುರಿಗಳಿಗೆ ಚಿಕಿತ್ಸೆ ನೀಡಿ ಅವುಗಳ ಜೀವ ಉಳಿಸಲಾಗಿದೆ. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ತಿಳಿಸಿದ್ದಾರೆ. ಇನ್ನು ಈ ಘಟನೆ ಕುರಿಗಾಹಿಗಳಿಗೆ ಮತ್ತು ರೈತರಿಗೆ ಎಚ್ಚರಿಕೆಯ ಪಾಠವಾಗಿದೆ. ಬಿಳಿ ಜೋಳದ ಚಿಗುರು ಮೇಯಿಸುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಅಪಾಯ, ಇಂತಹ ಸಂದರ್ಭದಲ್ಲಿ ರೈತರು ಹಾಗೂ ಕುರಿಗಾಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
    1
    ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು‌ಕುರಿಗಾಯಿ ಮಂಜುನಾಥಗೆ ಅರ್ಥಿಕ ಸಂಕಷ್ಟ
ಚಳ್ಳಕೆರೆ
ಬಿಳಿ ಜೋಳದ ಚಿಗುರು ಸೆಪ್ಪೆ ತಿಂದು 41 ಕುರಿಗಳು ಸಾವು...  
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆರೆಹಿಂದಹಟ್ಟಿ ಗ್ರಾಮದಲ್ಲಿ ಕುರಿಗಾಹಿ ‌ಮಂಜುನಾಥಗೆ  ದೊಡ್ಡ ಆಘಾತ ಎದುರಾಗಿದೆ.
ಬುಡ್ನಹಟ್ಟಿ ಗ್ರಾಮದ ಸಮೀಪದ ಕೆರೆಯಿಂದಲಹಟ್ಟಿಯ ಗ್ರಾಮದ ಕುರಿಗಾಯಿ ಮಂಜುನಾಥ್    110 ಕುರಿ 36 ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ಕುರಿಗಳು ಮೇವಿಗೆಂದ ಹೋದಾಗ ಬಿಳಿ ಜೋಳದ ಚಿಗುರು ತಿಂದ ಪರಿಣಾಮ 41 ಕುರಿಗಳು ಸಾವನ್ನಪ್ಪಿವೆ.
ಒಟ್ಟು 155 ಕುರಿಗಳನ್ನು ಹೊಂದಿದ್ದ ಮಂಜುನಾಥ್ ಅವರಿಗೆ ಈ ಘಟನೆಯಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಪಶುಸಂಗೋಪನಾ ಇಲಾಖೆಯ ಗಮನಕ್ಕೆ ಬಂದಿದ್ದು, ತಕ್ಷಣವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡಿದ್ದ 30 ಕುರಿಗಳಿಗೆ ಚಿಕಿತ್ಸೆ ನೀಡಿ ಅವುಗಳ ಜೀವ ಉಳಿಸಲಾಗಿದೆ.
ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ತಿಳಿಸಿದ್ದಾರೆ.
ಇನ್ನು ಈ ಘಟನೆ ಕುರಿಗಾಹಿಗಳಿಗೆ ಮತ್ತು ರೈತರಿಗೆ ಎಚ್ಚರಿಕೆಯ ಪಾಠವಾಗಿದೆ.
ಬಿಳಿ ಜೋಳದ ಚಿಗುರು ಮೇಯಿಸುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಅಪಾಯ, ಇಂತಹ ಸಂದರ್ಭದಲ್ಲಿ ರೈತರು ಹಾಗೂ ಕುರಿಗಾಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶ್ರೀನಿವಾಸ್ ಬಾಬು ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಹೊಳಲ್ಕೆರೆ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜನೆ ಎಲ್ಲರೂ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಹೊಳಲ್ಕೆರೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರ್ಶದ್ ಎ ಅನ್ಸಾರಿ ಸಲಹೆ ನೀಡಿದರು. ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ನೇಹ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಬದ್ದರಾಗಬೇಕು. ಸಂವಿಧಾನ ನಮಗೆ ನೀಡಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಹೊಳಲ್ಕೆರೆಯ ಅಪರ ಸಿವಿಲ್ ನ್ಯಾಯಾಧೀಶರಾದ ಹನುಮಂತರಾಯಪ್ಪ ಬಿ.ಆರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
    1
    ಹೊಳಲ್ಕೆರೆ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜನೆ
ಎಲ್ಲರೂ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಹೊಳಲ್ಕೆರೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರ್ಶದ್ ಎ ಅನ್ಸಾರಿ ಸಲಹೆ ನೀಡಿದರು. ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ನೇಹ ಪಬ್ಲಿಕ್ ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಬದ್ದರಾಗಬೇಕು. ಸಂವಿಧಾನ ನಮಗೆ ನೀಡಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಹೊಳಲ್ಕೆರೆಯ ಅಪರ ಸಿವಿಲ್ ನ್ಯಾಯಾಧೀಶರಾದ ಹನುಮಂತರಾಯಪ್ಪ ಬಿ.ಆರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ಕನಕದಾಸರ ಜೀವನ ಚರಿತ್ರೆ" ಪ್ರಬಂಧ ಸ್ಪರ್ಧೆಯಲ್ಲಿ ಕು. ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ. ಶಿಗ್ಗಾವಿ : "ಕನಕದಾಸರ ಜೀವನ ಚರಿತ್ರೆ" ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ ಪಡೆದರೆ, ವಿವಿಧ ಶಾಲೆಗಳ ಪೂಜಾ ಬಡ್ನಿ ದ್ವಿತೀಯ ಸ್ಥಾನ, ಪೂನಂ ದರಣೆಪ್ಪನವರ ತೃತೀಯ ಸ್ಥಾನ ಗಳಿಸಿದ್ದು ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತದಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    4
    ಕನಕದಾಸರ ಜೀವನ ಚರಿತ್ರೆ" ಪ್ರಬಂಧ ಸ್ಪರ್ಧೆಯಲ್ಲಿ ಕು. ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ.
ಶಿಗ್ಗಾವಿ : "ಕನಕದಾಸರ ಜೀವನ ಚರಿತ್ರೆ" ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ ಪಡೆದರೆ, ವಿವಿಧ ಶಾಲೆಗಳ ಪೂಜಾ ಬಡ್ನಿ ದ್ವಿತೀಯ ಸ್ಥಾನ, ಪೂನಂ ದರಣೆಪ್ಪನವರ ತೃತೀಯ ಸ್ಥಾನ ಗಳಿಸಿದ್ದು ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತದಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    13 hrs ago
  • ಹಾವೇರಿ : ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖಂಡರು ಕಿಡಿಕಾರಿದ್ದಾರೆ
    1
    ಹಾವೇರಿ : ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖಂಡರು ಕಿಡಿಕಾರಿದ್ದಾರೆ
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    16 hrs ago
  • ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. *ಶೀರ್ಷಿಕೆ:* *ಅಗಡಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ* *ಹಾವೇರಿ, ನ.26:* ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಕನಕದಾಸರ ಜೀವನ, ಅವರ ಕೀರ್ತನೆಗಳು, ಸಮಾಜ ಸುಧಾರಣಾ ಚಿಂತನೆಗಳು ಹಾಗೂ ಸಮ ಸಮಾಜ ನಿರ್ಮಾಣದ ಕುರಿತು ಗಣ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    2
    ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
*ಶೀರ್ಷಿಕೆ:*
*ಅಗಡಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ*
*ಹಾವೇರಿ, ನ.26:*
ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಕನಕದಾಸರ ಜೀವನ, ಅವರ ಕೀರ್ತನೆಗಳು, ಸಮಾಜ ಸುಧಾರಣಾ ಚಿಂತನೆಗಳು ಹಾಗೂ ಸಮ ಸಮಾಜ ನಿರ್ಮಾಣದ ಕುರಿತು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    user_Santosh B Guddappanavar
    Santosh B Guddappanavar
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    21 hrs ago
  • ಕೊಟ್ಟ ಸಾಲ‌‌ ವಾಪಸ್ ಕೇಳಿದಕ್ಕೆ.‌ಮಹಿಳೆ‌ಮೇಲೆ ಹಲ್ಲೆ ಆರೋಪ. ಆಸ್ಪತ್ರೆ ಗೆ ದಾಖಲು ಕೊಟ್ಟ ಸಾಲ‌‌ ಕೇಳಿದಕ್ಕೆ.‌ಮಹಿಳೆ‌ಮೇಲೆ ಹಲ್ಲೆ ಆರೋಪ. ಆಸ್ಪತ್ರೆ ಗೆ ದಾಖಲು ಚಳ್ಳಕೆರೆ ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ ಮಂಜುನಾಥ ಮತ್ತು ತಿಪ್ಪಮ್ನ ಎಂಬುವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಬೋರಮ್ಮ ‌ಆರೋಪಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಚಿಕ್ಕಉಳ್ಳಾರ್ತಿ ಗ್ರಾಮದ ಬೋರಮ್ಮ ಕೂಲಿ ಮಾಡಿದ ಎಪ್ಪತ್ತು ಸಾವಿರ ಹಣವನ್ನು ಇದೇ ಗ್ರಾಮದ ಮಂಜುನಾಥ ಅವರಿಗೆ ಸಾಲವಾಗಿ ಕೊಟ್ಟಿದ್ದಾರೆ. ವಾಪಸು ಕೇಳಿದ್ದಕ್ಕೆ ಹಣ ಕೊಡುವುದಾಗಿ ಗುರುವಾರ ಸಂಜೆ ಬೈಕ್ ನಲ್ಲಿ ಹತ್ತಿಸಿಕೊಂಡು ಸೋಮಗುದ್ದು ಸಮೀಪದ ಪಪ್ಪಾಯಿ ತೋಟದ ಬಳಿ ಕರೆದೊಯ್ಯುದು ಮಂಜುನಾಥ, ತಿಪ್ಪಮ್ಮ ಸೇರಿ ಹಲ್ಲೆ ಮಾಡಿದ್ದಾರೆ. ಅಸ್ವಸ್ಥಳಾಗಿ ಕೆಳಗೆ ಬಿದ್ದ ಬೋರಮ್ಮನನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಯರೋ ಸಹಾಯ ಪಡೆದು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ ಬೋರಮ್ಮ ನಡೆದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಗಳನ್ನು ಸಾಯಿಸಲು ಮುಂದಾಗಿದ್ದ ಮಂಜುನಾಥ, ತಿಪ್ಪಮ್ಮ ಅವರಿಗೆ ಶಿಕ್ಷೆ ಆಗಬೇಕು ಎಂದು ಹಲ್ಲೆಗೊಳಗಾದ ಬೋರಮ್ಮ ಜತೆ ಆಸ್ಪತ್ರೆಯಲ್ಲಿರುವ ಅವರ ತಂದೆ ನಿಂಗಯ್ಯ ಅಳಲು ತೊಡಿಕೊಂಡಿದ್ದಾರೆ.
    1
    ಕೊಟ್ಟ ಸಾಲ‌‌ ವಾಪಸ್  ಕೇಳಿದಕ್ಕೆ.‌ಮಹಿಳೆ‌ಮೇಲೆ ಹಲ್ಲೆ ಆರೋಪ.
ಆಸ್ಪತ್ರೆ ಗೆ ದಾಖಲು
ಕೊಟ್ಟ ಸಾಲ‌‌ ಕೇಳಿದಕ್ಕೆ.‌ಮಹಿಳೆ‌ಮೇಲೆ ಹಲ್ಲೆ ಆರೋಪ.
ಆಸ್ಪತ್ರೆ ಗೆ ದಾಖಲು 
ಚಳ್ಳಕೆರೆ
ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ   ಮಂಜುನಾಥ ಮತ್ತು ತಿಪ್ಪಮ್ನ ಎಂಬುವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿರುವ ಬೋರಮ್ಮ ‌ಆರೋಪಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಚಿಕ್ಕಉಳ್ಳಾರ್ತಿ ಗ್ರಾಮದ ಬೋರಮ್ಮ ಕೂಲಿ ಮಾಡಿದ ಎಪ್ಪತ್ತು ಸಾವಿರ ಹಣವನ್ನು ಇದೇ ಗ್ರಾಮದ ಮಂಜುನಾಥ ಅವರಿಗೆ ಸಾಲವಾಗಿ ಕೊಟ್ಟಿದ್ದಾರೆ. ವಾಪಸು ಕೇಳಿದ್ದಕ್ಕೆ ಹಣ ಕೊಡುವುದಾಗಿ ಗುರುವಾರ ಸಂಜೆ ಬೈಕ್ ನಲ್ಲಿ ಹತ್ತಿಸಿಕೊಂಡು ಸೋಮಗುದ್ದು ಸಮೀಪದ ಪಪ್ಪಾಯಿ ತೋಟದ ಬಳಿ ಕರೆದೊಯ್ಯುದು ಮಂಜುನಾಥ, ತಿಪ್ಪಮ್ಮ ಸೇರಿ ಹಲ್ಲೆ ಮಾಡಿದ್ದಾರೆ. ಅಸ್ವಸ್ಥಳಾಗಿ ಕೆಳಗೆ ಬಿದ್ದ ಬೋರಮ್ಮನನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಯರೋ ಸಹಾಯ ಪಡೆದು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ ಬೋರಮ್ಮ ನಡೆದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಗಳನ್ನು ಸಾಯಿಸಲು ಮುಂದಾಗಿದ್ದ ಮಂಜುನಾಥ, ತಿಪ್ಪಮ್ಮ ಅವರಿಗೆ ಶಿಕ್ಷೆ ಆಗಬೇಕು ಎಂದು ಹಲ್ಲೆಗೊಳಗಾದ ಬೋರಮ್ಮ ಜತೆ ಆಸ್ಪತ್ರೆಯಲ್ಲಿರುವ ಅವರ ತಂದೆ ನಿಂಗಯ್ಯ ಅಳಲು ತೊಡಿಕೊಂಡಿದ್ದಾರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.