ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited
ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited
- ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited1
- ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದು: ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮಸ್ಥರ ಆಕ್ರೋಶ ಸಚಿವರ ಕಾರ್ಯಕ್ರಮಕ್ಕಾಗಿ ಅದ್ದೂರಿ ಸಿದ್ಧತೆ, ವೇದಿಕೆ–ಶಾಮಿಯಾನ ನಿರ್ಮಾಣ; ಮುಂಚಿತ ಮಾಹಿತಿ ಇಲ್ಲದೆ ರದ್ದುಗೊಳಿಸಿದ್ದಕ್ಕೆ ಅಸಮಾಧಾನ ಚನ್ನಗಿರಿ, ನ.27: ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಗೆ ಒಳಪಡುವ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗುಡ್ಡದ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನವೆಂಬರ್ 28ರಂದು ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಏಕಾಏಕಿ ರದ್ದಾಗಿದೆ ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಕೆ.ಎಸ್. ಬಸವಂತಪ್ಪ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಹಲವು ದಿನಗಳಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಿಸಿ, ಶಾಮಿಯಾನ ಹಾಕಲಾಗಿತ್ತು. ಹೂವಿನ ಅಲಂಕಾರ, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸ್ವಾಗತಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಕೊನೆಯ ಕ್ಷಣದಲ್ಲಿ ತಿಳಿದುಬಂದಿರುವುದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನಡೆಸಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ರದ್ದತಿಯ ಮಾಹಿತಿ ಬಂದಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆಗಳಿಗೆ ವೇದಿಕೆಯಾಗಬೇಕಿದ್ದ ಕಾರ್ಯಕ್ರಮ ಪ್ರಜಾ ಸೇವಾ ಆಂದೋಲನವು ಕೇವಲ ರಾಜಕೀಯ ಕಾರ್ಯಕ್ರಮವಾಗಿರದೆ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರುವ ವೇದಿಕೆಯಾಗಬೇಕಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗುಡ್ಡದ ಕೊಮ್ಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಸಮಸ್ಯೆಗಳು, ಕುಡಿಯುವ ನೀರಿನ ಕೊರತೆ, ರಸ್ತೆ ಅಭಿವೃದ್ಧಿ, ಯುವಕರಿಗೆ ಉದ್ಯೋಗಾವಕಾಶ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಬೇಡಿಕೆಗಳನ್ನು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ನಿರೀಕ್ಷಿಸಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ಆಶಯದಿಂದ ಕಾರ್ಯಕ್ರಮದ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಅವಕಾಶ ಕೈತಪ್ಪಿದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ದುಂದು ವೆಚ್ಚದ ಬಗ್ಗೆಯೂ ಪ್ರಶ್ನೆ ಕಾರ್ಯಕ್ರಮಕ್ಕಾಗಿ ವೇದಿಕೆ, ಶಾಮಿಯಾನ, ಹೂವಿನ ಅಲಂಕಾರ, ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಸಿದ್ಧತೆಗಳಿಗೆ ಮಾಡಿರುವ ವೆಚ್ಚದ ಬಗ್ಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ಸಾರ್ವಜನಿಕರ ನಿರೀಕ್ಷೆ ಮತ್ತು ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸೂಕ್ತ ಮಾಹಿತಿ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಕಾರ್ಯಕ್ರಮ ರದ್ದತಿಗೆ ನಿಖರವಾದ ಕಾರಣವೇನು ಎಂಬುದರ ಕುರಿತು ಅಧಿಕೃತ ಸ್ಪಷ್ಟನೆ ದೊರೆತಿದೆಯೇ ಎಂಬುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಕುರಿತು ಸಂಬಂಧಪಟ್ಟವರು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮತ್ತೊಂದು ದಿನಾಂಕ ನಿಗದಿಪಡಿಸಲು ಆಗ್ರಹ “ಸಚಿವರ ಮೇಲೆ ನಮಗೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ. ನಮ್ಮ ಭಾಗದ ಜನರು ಬಹಳ ನಿರೀಕ್ಷೆಯಿಂದ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಗ್ರಾಮಸ್ಥರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಸಿದ್ಧತೆ ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾದ ಮಾಹಿತಿ ಬಂದಿರುವುದು ನಿರಾಸೆ ಮೂಡಿಸಿದೆ. ಆದ್ದರಿಂದ ಸಚಿವರು ಮತ್ತೊಂದು ದಿನಾಂಕ ನಿಗದಿಪಡಿಸಿ, ಇದೇ ಗ್ರಾಮದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಸಿಕೊಡಬೇಕು” ಎಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಸಚಿವರು ಕೆ.ಎಸ್. ಬಸವಂತಪ್ಪ ಅವರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳೂ ಗ್ರಾಮಕ್ಕೆ ಆಗಮಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕಾರ್ಯಕ್ರಮವನ್ನು ಕೇವಲ ಔಪಚಾರಿಕವಾಗಿ ನಡೆಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್, ಕಾಂಗ್ರೆಸ್ ಮುಖಂಡ ರಮೇಶಣ್ಣ ಮಲ್ಗೆನಳ್ಳಿ, ಹಾಲೇಶ್, ತಿಪ್ಪೇಶ್, ಪ್ರಭಾಕರ್, ಪ್ರಕಾಶ್ ಬಿ., ಮಂಜಪ್ಪ ಗಿಡ್ಡಜ್ಜಿ, ಹಾಲೇಶಪುರ ವಿಶ್ವನಾಥ್, ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಒಟ್ಟಾರೆ, ಗುಡ್ಡದ ಕೊಮ್ಮಾರನಹಳ್ಳಿಯಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ರದ್ದಾಗಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಭಾಗದ ಜನರ ನಿರೀಕ್ಷೆಗಳಿಗೆ ಸ್ಪಂದಿಸಿ, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಬೇಕೆಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.4
- ಕನಕದಾಸರ ಜೀವನ ಚರಿತ್ರೆ" ಪ್ರಬಂಧ ಸ್ಪರ್ಧೆಯಲ್ಲಿ ಕು. ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ. ಶಿಗ್ಗಾವಿ : "ಕನಕದಾಸರ ಜೀವನ ಚರಿತ್ರೆ" ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ ಪಡೆದರೆ, ವಿವಿಧ ಶಾಲೆಗಳ ಪೂಜಾ ಬಡ್ನಿ ದ್ವಿತೀಯ ಸ್ಥಾನ, ಪೂನಂ ದರಣೆಪ್ಪನವರ ತೃತೀಯ ಸ್ಥಾನ ಗಳಿಸಿದ್ದು ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತದಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.4
- ಹಾವೇರಿ : ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖಂಡರು ಕಿಡಿಕಾರಿದ್ದಾರೆ1
- ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. *ಶೀರ್ಷಿಕೆ:* *ಅಗಡಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ* *ಹಾವೇರಿ, ನ.26:* ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಕನಕದಾಸರ ಜೀವನ, ಅವರ ಕೀರ್ತನೆಗಳು, ಸಮಾಜ ಸುಧಾರಣಾ ಚಿಂತನೆಗಳು ಹಾಗೂ ಸಮ ಸಮಾಜ ನಿರ್ಮಾಣದ ಕುರಿತು ಗಣ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.2
- ನಾಡಕಚೇರಿಯಲ್ಲಿ ಕನಕ ಜಯಂತಿ ಆಚರಣೆಗೆ ನಿರ್ಲಕ್ಷ್ಯದ ಆರೋಪ: ಗ್ರಾಮಸ್ಥರ ಆಕ್ಷೇಪ ಶಿವಮೊಗ್ಗ: ರಾಜ್ಯಾದ್ಯಂತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕಿದ್ದ ದಿನದಂದು ಶಿಕಾರಿಪುರ ತಾಲ್ಲೂಕಿನ ತಾಳಗುಂದ ನಾಡಕಚೇರಿಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಜಯಂತಿ ಆಚರಿಸಿದ್ದು, ಉಳಿದ ಸಿಬ್ಬಂದಿ ಗೈರಾಗಿರುವು ದಕ್ಕೆ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಆಕ್ಷೇಪ ವ್ಯಕ್ತಪಡಿಸಿದೆ. ಇಂದು ಕನಕದಾಸರ ಜಯಂತಿ ಆಚರಣೆಗೆ ಸರ್ಕಾರದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಶಿಕಾರಿಪುರ ತಾಲೂಕು ತಾಳಗುಂದ ಹೋಬಳಿಯ ನಾಡಕಚೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಭಾಗವಹಿಸಿ ಜಯಂತಿ ಆಚರಿಸದಿ ರುವುದು ಖಂಡನೀಯ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡಕಚೇರಿಯಲ್ಲಿ 14 ಗ್ರಾಮ ಲೆಕ್ಕಾಧಿಕಾರಿ ಗಳು, 20 ಡಿ-ಗ್ರೂಪ್ ನೌಕರರು ಸೇರಿದಂತೆ ಸಿಬ್ಬಂದಿ ಇದ್ದರೂ, ಜಯಂತಿ ಆಚರಣೆಯಲ್ಲಿ ಕೆಲವೇ ಮಂದಿ ಭಾಗವಹಿಸಿದ್ದಾರೆ ಎಂದು ದೂರಲಾಗಿದೆ. ಗ್ರಾಮಸ್ಥರು ನಾಡಕಚೇರಿಗೆ ಭೇಟಿ ನೀಡಿದಾಗ, ತಾಳಗುಂದದ ಗ್ರಾಮ ಲೆಕ್ಕಾಧಿಕಾರಿ ಕರಿಬಸವರಾಜು ಹಾಗೂ ಗ್ರಾಮ ಸಹಾಯಕ ಬಸವರಾಜು ಅವರು ಮಾತ್ರ ಕನಕದಾಸರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿರುವುದು ಕಂಡುಬಂದಿದೆ. ಉಳಿದ ಸಿಬ್ಬಂದಿ ಗೈರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ಆಚರಿಸು ವಲ್ಲಿ ನಾಡಕಚೇರಿಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿರುವುದು ಇದೇ ಮೊದಲಲ್ಲ. ವಿವಿಧ ಸರ್ಕಾರಿ ಕಾರ್ಯಕ್ರಮಗಳ ಸಂದರ್ಭ ದಲ್ಲಿಯೂ ಕೆಲವರು ಮಾತ್ರ ಭಾಗವಹಿಸು ತ್ತಿದ್ದು, ಉಳಿದವರು ಗೈರಾಗುತ್ತಿರುವುದು ನಿರಂತರವಾಗಿ ಕಂಡುಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಳಗುಂದ ಗ್ರಾಮದಲ್ಲಿ ಕನಕದಾಸರ ಜಯಂತಿಯಂತಹ ಸರ್ಕಾರಿ ಕಾರ್ಯಕ್ರಮ ವನ್ನು ನಿರ್ಲಕ್ಷಿಸಿರುವುದು ಊರಿಗೆ ಕಪ್ಪುಚುಕ್ಕೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾತನಾಡಿದ ಡಿಎಸ್ಎಸ್ ಸಂಘಟನಾ ಸಂಚಾಲಕ ಶಶಿಕುಮಾರ್, ಸರ್ಕಾರಿ ಕಾರ್ಯಕ್ರಮಗಳನ್ನು ಗೌರವದಿಂದ ಆಚರಿಸುವುದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ. ಆದರೆ ತಾಳಗುಂದ ನಾಡಕಚೇರಿಯಲ್ಲಿ ಕೆಲವೇ ಸಿಬ್ಬಂದಿ ಜಯಂತಿ ಆಚರಿಸಿರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರು ಹಾಗೂ ಡಿಎಸ್ಎಸ್ ಮುಖಂಡರು ಈ ಘಟನೆಗೆ ಸಂಬಂಧಿಸಿ ದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮ ಗಳ ಆಚರಣೆಯಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.1
- *ಮೈಸೂರು : ವೈದ್ಯಕೀಯ ಸಮಾಜ ಸೇವೆ ಕುರಿತು ಅನುಭವ ಹಂಚಿಕೊಂಡು ಸೇವೆ ನೀಡಿದ ಕೂಡ್ಲಿಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ *ಮೈಸೂರು : ವೈದ್ಯಕೀಯ ಸೇವೆ ಹಾಗೂ ಸಮಾಜ ಸೇವೆ ಕುರಿತು ಅನುಭ ಹಂಚಿಕೊಂಡು ಸೇವೆ ನೀಡಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *- ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ತಮ್ಮ ವೈದ್ಯಕೀಯ ಹಾಗೂ ಸಮಾಜ ಸೇವೆಯನ್ನು. ಕ್ಷೇತ್ರಕ್ಕೆ ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಗಳಲ್ಲಿ ಮಾತ್ರವಲ್ಲ , ದೇಶ ವಿದೇಶಗಳಲ್ಲಿಯೂ ನೀಡುತಲಿದ್ದಾರೆ. ನಿದರ್ಶನವೆಂಬಂತೆ ಅವರು ಇತ್ತೀಚೆಗೆ , ಮೈಸೂರಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ. ಅವರು ಅತಿಥಿಗಳಾಗಿ ಭಾಗವಹಿಸಿ , ತಮ್ಮ ವೈಧ್ಯಕೀಯ ಸೇವೆ ನೀಡಿದ್ದಾರೆ , ಹಾಗೂ ಶಾಸಕರಾಗಿ ಕಾರ್ಯನಿರ್ವಹಿಸಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ನಾಡಿನಲ್ಲೆಲ್ಲಾ , ವೈದ್ಯರಾಗಿ ದೃಷ್ಟಿಯ ಬೆಳಕು ಜನಪ್ರತಿನಿಧಿಯಾಗಿ ಜನಸೇವೆಯ ಬೆಳಕು ಪಸರಿಸುತ್ತಿದ್ದಾರೆ. ಅವರು ಕೂಡ್ಲಿಗಿ ಕ್ಷೇತ್ರದ ಜನರ ಆರೋಗ್ಯ , ಮತ್ತು ಕಲ್ಯಾಣಕ್ಕಾಗಿ ವೈದ್ಯಕೀಯ ಸಮುದಾಯದ ಸಹಕಾರದೊಂದಿಗೆ ಸೇವೆಯ ಬೆಳಕು ಹರಿಸುತ್ತಿದ್ದಾರೆ. ಅವರು ಇತ್ತೀಚೆಗೆ ಮೈಸೂರಲ್ಲಿ ಕರ್ನಾಟಕ ನೇತ್ರ ಸಂಘದ ವತಿಯಿಂದ , ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ. ಕರ್ನಾಟಕ ನೇತ್ರಶಾಸ್ತ್ರಜ್ಞರ 45ನೇ ವಾರ್ಷಿಕ ಸಮ್ಮೇಳನ , ಹಾಗೂ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ವೈದ್ಯಕೀಯ ಅನುಭವ , ಹಾಗೂ ಜನಸೇವೆಯ ದೃಷ್ಟಿಕೋನದ ಕುರಿತು ಮಾತನಾಡಿ ಅನುಭಗಳನ್ನು ಹಂಚಿಕೊಂಡರು. “ಸಮುದಾಯ ನೇತ್ರಶಾಸ್ತ್ರ – ಸಾರ್ವಜನಿಕ ಸೇವೆಯಲ್ಲಿ ದೃಷ್ಟಿಕೋನ” ವಿಷಯದ ಕುರಿತು ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಕಣ್ಣಿನ ಆರೋಗ್ಯ ಸೇವೆ ತಲುಪಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ , ಸಹೋದ್ಯೋಗಿ ವೈದ್ಯರು ಮಾತನಾಡಿದರು. “ನೇತ್ರ ತಜ್ಞರಾಗಿ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿ, ನಂತರ ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಸೇವಾ ಕಾರ್ಯಕುರಿತು , ಶ್ಲಾಘಸಿ ಅವರ ಕುರಿತು ಮಾತನಾಡಿದರು. ವಿಶೇಷವಾಗಿ ವೈದ್ಯಕೀಯ ಸಮುದಾಯದ ಪ್ರತಿನಿಧಿಯಾಗಿ , ಅವರು ಮಾಡುತ್ತಿರುವ ಜನಪರ ಕಾರ್ಯಗಳು ಮೆಚ್ಚುವಂತಿವೆ ಎಂದು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ನಡೆಯುವ , ಆರೋಗ್ಯ ಶಿಬಿರಗಳಲ್ಲಿ ತಾವೂ ಕೂಡ ಭಾಗವಹಿಸುವ ಮೂಲಕ. ವೈದ್ಯಕೀಯ ಸೇವೆ ನೀಡುವುದಾಗಿ ತಿಳಿಸಿದರು , ಶ್ರೀನಿವಾಸ್ ರವರು ಅತ್ಯನ್ನತ ಸ್ಥಾನಗಳನ್ನು ಪಡೆಯುವಂತಾಗಲಿ , ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ಅವರು ಹಾರೈಸಿದರು. ಈ ಸಂದರ್ಭದಲ್ಲಿ ಸಹ ಅಧ್ಯಕ್ಷರುಗಳಾದ ಡಾ ॥ ಕೃಷ್ಣಪ್ರಸಾದ್ ಕೂಡ್ಲು , ಡಾ ॥ಸುಜಾತಾ ರಾಥೋಡ್ ಡಾ ॥ ವಿವೇಕ್ ದೊರೈ , ಹಾಗೂ ಡಾ ॥ ಮೊಹಮ್ಮದ್ ಸಲೀಂ ಕಿತ್ತೂರು, ಡಾ ॥ ದಿನೇಶ್ ಕುಮಾರ್, ಡಾ॥ ಹರಿಪ್ರಸಾದ್ ಹೆಚ್.ಟಿ., ಡಾ॥ ರಾಜಶೇಖರ್ ಪಿ. ದ್ಯಾಬೇರಿ ಹಾಗೂ ಡಾ॥ ಪರಸಪ್ಪ ಬಂದ್ರಕಳ್ಳಿ ಸೇರಿದಂತೆ ಹಲವು ವೈದ್ಯಕೀಯ ಗಣ್ಯರು ವೇದಿಕೆಯಲ್ಲಿದ್ದರು. ಜೆಎಸ್ಎಸ್ವ ವೈದ್ಯಕೀಯ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿಯವರು, ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- Post by ಸುನೀಲ್ ಲ್ ಬೆಟಗೇರಿ1